ನವದೆಹಲಿ: ವಾಸದ ಮನೆಗಳನ್ನು ಖಾಸಗಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯಸುವುದಿಲ್ಲ. ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ನೀಡಿದ್ದರೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಬಾಡಿಗೆದಾರರು ವಸುನೆಯ ಮಾಲಿಕರಿಗೆ ಪಾವತಿಸುವ ಹಣಕ್ಕೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ವರದಿಯಾಗಿತ್ತು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮನೆ ಬಾಡಿಗೆಗೆ ಜಿಎಸ್‌ಟಿ ಇಲ್ಲ ಎಂದು ಸರ್ಕಾರ ಖಚಿತ ಪಡಿಸಿದೆ. ಇದರಿಂದಾಗಿ ಬಾಡಿಗೆದಾರರು ನಿಟ್ಟುಸಿರು ಬಿಡುವಂತಾಗಿದೆ.

ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ದರ ಅನ್ವಯಿಸುವುದಿಲ್ಲ. ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಯಾವುದಾದರೂ ಸಂಸ್ಥೆಗೆ ಬಾಡಿಗೆಗೆ ನೀಡಿದ್ದರೇ ಮಾತ್ರ ಅದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದೆ.

ಉದ್ದಿಮೆಯ ಮಾಲೀಕ ಅಥವಾ ಪಾಲುದಾದರು ಖಾಸಗಿ ಬಳಕೆಗಾಗಿ ಬಾಡಿಗೆ ಮನೆಯನ್ನು ಪಡೆದಿದ್ದರೆ, ಅದಕ್ಕೂ ಜಿಎಸ್‌ಟಿ ಇಲ್ಲ ಎಂದು ತಿಳಿಸಿದೆ. ಇದರಿಂದಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಂಡ ಉದ್ಯಮರು ಅಥವಾ ಪಾಲುದಾರರು ಖಾಸಗಿ ಬಳಕೆಗೆ ಮನೆಯನ್ನು ಬಾಡಿಗೆ ಪಡೆದಿದ್ದರೆ, ಅದಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಕೆಲ ತೆರಿಗೆ ಸಲಹೆಗಾರರು ನೀಡುತ್ತಿದ್ದ ಸಲಹೆಯಿಂದಾಗಿ ಉದ್ಭವಿಸಿದ ಗೊಂದಲವೂ ಪರಿಹಾರವಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್‌ಎಸ್‌ಎಸ್





























