Tag: bus service

  • ಬೆಂಗಳೂರಿನಿಂದ  ವಯನಾಡಿಗೆ ಬಸ್ಸು ಸಂಚಾರ ಆರಂಭ

    ಬೆಂಗಳೂರಿನಿಂದ ವಯನಾಡಿಗೆ ಬಸ್ಸು ಸಂಚಾರ ಆರಂಭ

    ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಿಂದ (Satellite Bus Stand) ಪ್ರವಾಹ ಪೀಡಿತ ವಯನಾಡಿಗೆ (Wayanad LandSlide) ಬಸ್ ಸಂಚಾರ (Bus Service) ಗುರುವಾರ ರಾತ್ರಿಯಿಂದ ಆರಂಭವಾಗಿದೆ.

    ಕೇರಳ ರಾಜ್ಯ ರಸ್ತೆ ಸಾರಿಗೆಯ 5 ಬಸ್ಸುಗಳ ಸಂಚಾರ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಪ್ರತಿ ಗಂಟೆಗೆ ಒಂದು ಬಸ್ಸು ಹೊರಡುತ್ತಿದೆ. ಒಟ್ಟು 23 ಬಸ್ಸುಗಳು ಕಾರ್ಯಾಚರಣೆ ಮಾಡಲಿದೆ.  ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

     

    ಮೈಸೂರು-ಸುಲ್ತಾನ್ ಬತ್ತೇರಿ ಮಾರ್ಗ ಮತ್ತು ಮೈಸೂರು – ಮಾನಂದವಾಡಿ ಮಾರ್ಗದ ಮೂಲಕ ಬಸ್ಸುಗಳು ವಯನಾಡಿಗೆ ತೆರಳುತ್ತಿವೆ. ಇಂದು ಮತ್ತು ನಾಳೆ ಕಾರ್ಯಾಚರಣೆ ಮಾಡಲಿರುವ ಬಸ್ಸುಗಳ ಎಲ್ಲಾ ಸೀಟ್‌ಗಳು ಬುಕ್‌ ಆಗಿವೆ. ಇದನ್ನೂ ಓದಿ: 206 ಮಂದಿ ನಾಪತ್ತೆ – ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಶೋಧ ಕಾರ್ಯ

  • ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭ

    ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭ

    ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ನಾಗಾರಾಧನೆಯ ಕೇಂದ್ರ ಘಾಟಿ ಸುಬ್ರಮಣ್ಯ. ಇಲ್ಲಿ ಸುಬ್ರಮಣ್ಯನನ್ನು ನಾಗದೇವರ ರೂಪದಲ್ಲಿ ಪೂಜಿಸಲಾಗುತ್ತಿದೆ. ದೇಶ ವಿದೇಶಗಳ ಲಕ್ಷಾಂತರ ಭಕ್ತರು ಇಲ್ಲಿ ದರ್ಶನ ಪಡೆಯುತ್ತಾರೆ. ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.

    ದಿನ ನಿತ್ಯ ಘಾಟಿ ಸುಬ್ರಮಣ್ಯಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರದಿಂದ ಘಾಟಿಗೆ ಬಿಎಂಟಿಸಿ ಬಸ್ ಸಂಚಾರ ಸೇವೆಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಬೆಂಗಳೂರು ಗ್ರಾಮೀಣ ಡಿಸಿ ಪಿ.ಎನ್.ರವೀಂದ್ರ ಸೇರಿದಂತೆ ಬಿಎಂಟಿಸಿ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಎರಡು ಮಾರ್ಗಗಳಲ್ಲಿ ಬಸ್ ಸಂಚಾರ ಮಾಡಲಿದ್ದು, ಯಾವ ಯಾವ ಸಮಯಕ್ಕೆ ಬಸ್ ಸಂಚಾರ ಲಭ್ಯ ಎಂಬ ಮಾಹಿತಿ ಇಲ್ಲಿದೆ. ದೊಡ್ಡಬಳ್ಳಾಪುರ ದಿಂದ ಘಾಟಿಗೆ ಬೆಳಗ್ಗೆ 8:15, ಮಧ್ಯಾಹ್ನ 1:50 ಹಾಗೂ 3:40ಕ್ಕೆ ಬಸ್ ಸೇವೆ ಲಭ್ಯವಿದೆ. ಘಾಟಿಯಿಂದ ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 9:35, ಮಧ್ಯಾಹ್ನ 2:45 ಹಾಗೂ 5:00 ಗಂಟೆಗೆ ಪ್ರಯಾಣಿಕರಿಗೆ ಬಸ್ ಸೇವೆ ಲಭ್ಯವಿದೆ.

  • ಈ ಬಾರಿ ಯುಗಾದಿಗೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಇಲ್ಲ!

    ಈ ಬಾರಿ ಯುಗಾದಿಗೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಇಲ್ಲ!

    – ಯುಗಾದಿಗೆ ಡಲ್ ಆಯ್ತು ಕೆಎಸ್‍ಆರ್‍ಟಿಸಿ ಬಿಸಿನೆಸ್

    ಬೆಂಗಳೂರು: ಹಬ್ಬಗಳು ಬಂತು ಅಂದ್ರೆ ಕೆಎಸ್‍ಆರ್‍ಟಿಸಿಯ ಎಲ್ಲ ಬಸ್‍ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿದ್ದವು. ಹಬ್ಬದ ಸಮಯದಲ್ಲಿ ಹೆಚ್ಚು ಬಸ್‍ಗಳನ್ನು ರೋಡಿಗಿಳಿಸಿ ಬಂಪರ್ ಕಲೆಕ್ಷನ್ ಮಾಡ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಯುಗಾದಿ ಸ್ವಲ್ಪ ಕಹಿಯಾಗಿದೆ.

    ಹಬ್ಬಗಳು, ಸಾಲು ಸಾಲು ಸರ್ಕಾರಿ ರಜೆಗಳು ಬಂದ್ರೆ ಕೋಟಿ ಜನಸಂಖ್ಯೆಯ ಸಿಲಿಕಾನ್ ಸಿಟಿ ಬಿಕೋ ಅನ್ನುತ್ತೆ. ಅದ್ರಲ್ಲೂ ಮಕ್ಕಳಿಗೆ ಬೇಸಿಗೆ ರಜೆ ಇರೋ ಸಮಯದಲ್ಲಿ ಬರುವ ಯುಗಾದಿ ಹಬ್ಬ ಅಂದ್ರೆ ಮಿಸ್ ಮಾಡೋದೇ ಇಲ್ಲ. ಜನ ತಮ್ಮ ತಮ್ಮ ಊರುಗಳಿಗೆ ಹಬ್ಬದ ಆಚರಣೆಗೆ ತೆರಳುತ್ತಾರೆ. ಈ ಕಾರಣಕ್ಕಾಗಿ ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲ ಖಾಸಗಿ ಬಸ್‍ಗಳು ಪ್ರಯಾಣಿಕರಿಂದ ತುಂಬಿ ಹೋಗುತಿತ್ತು. ಈ ಸಮಯದಲ್ಲಿ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ಮೂಲಕ ಕೆಎಸ್‍ಆರ್‍ಟಿಸಿ ಭರ್ಜರಿ ಲಾಭ ಮಾಡಿಕೊಳ್ಳುತಿತ್ತು.

    ಆದರೆ ಈ ಬಾರಿ ಇದಕ್ಕೆ ತದ್ವಿರುದ್ಧ ಎನ್ನುವಂತೆ ಯುಗಾದಿಗೆ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್‍ಗಳನ್ನು ರೋಡಿಗಿಳಿಸುತ್ತಿಲ್ಲ. ಮಾಮೂಲಿಯಾಗಿ ಓಡಾಡುವ ಬಸ್‍ಗಳೇ ಇನ್ನೂ ಸಂಪೂರ್ಣ ಬುಕ್ ಆಗದೇ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‍ಗಳನ್ನು ಓಡಿಸದೇ ಇರುವ ನಿರ್ಧಾರಕ್ಕೆ ಕೆಎಸ್‍ಆರ್‍ಟಿಸಿ ಬಂದಿದೆ.

    ಹೆಚ್ಚುವರಿ ಬಸ್ ಯಾಕಿಲ್ಲ?
    ಈ ಬಾರಿಯ ಯುಗಾದಿ ವಾರದ ಮಧ್ಯೆ ಬಂದ ಕಾರಣ ಬೆಂಗಳೂರಿನಲ್ಲಿ ವಾಸವಾಗಿರುವ ಜನ ತಮ್ಮ ಊರುಗಳಿಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ತಮ್ಮ ಮಕ್ಕಳನ್ನು ಆರ್‍ಟಿಇ ಅಡಿ ದಾಖಲಿಸಲು ಅರ್ಜಿ ಸಲ್ಲಿಸಲು ಮಾರ್ಚ್ 31 ಕಡೆಯ ದಿನಾಂಕವಾದ ಹಿನ್ನೆಲೆಯಲ್ಲಿ ಕೆಲವರು ಊರಿಗೆ ಹೋಗದೇ ಇರುವ ನಿರ್ಧಾರ ಮಾಡಿದ್ದಾರೆ.

    ಎಲ್ಲದಕ್ಕಿಂತ ಪ್ರಮುಖವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು 30ನೇ ತಾರೀಕಿನಿಂದ ಶುರುವಾಗುತ್ತಿದೆ. ಹೀಗಾಗಿ ಹಬ್ಬದ ಬಗ್ಗೆ ಗಮನ ಹರಿಸುವುದಕ್ಕಿಂತ ಮಕ್ಕಳ ಪರೀಕ್ಷೆ ಕಡೆಗೆ ಪೋಷಕರು ಹೆಚ್ಚು ಗಮನ ಹರಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಾರದಿಂದ ಬೆಂಗಳೂರು ಟು ಹಾಸನ ಹೊಸ ರೈಲು ಸಂಚಾರ ಆರಂಭವಾಗಿದೆ. ಇನ್ನು ವಾರದಲ್ಲಿ ಮೂರು ದಿನ ಬೆಂಗಳೂರು ಟು ಶಿವಮೊಗ್ಗ ಹೊಸ ರೈಲು ಸಂಚರಿಸುವ ಕಾರಣ ಜನ ಮುಂಗಡ ಟಿಕೆಟ್ ಖರೀದಿ ಮಾಡಿಲ್ಲ.

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೌರಮಾನ ಯುಗಾದಿ(ವಿಷು) ಪ್ರಸಿದ್ಧ. ಏಪ್ರಿಲ್ ಎರಡನೇ ವಾರದಲ್ಲಿ ಈ ಯುಗಾದಿ ಬರುವ ಕಾರಣ ಈ ಪ್ರದೇಶಗಳ ಜನತೆ ಆ ವಾರ ಊರಿಗೆ ಹೋಗಲಿದ್ದಾರೆ.

    ಒಟ್ಟಿನಲ್ಲಿ ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುತ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಬಾರಿ ವರ್ಷದ ದೊಡ್ಡ ಹಬ್ಬ ಕಹಿಯಾಗಿದೆ.

    ಇದನ್ನೂ ಓದಿ: KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!