Tag: bus protest

  • ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ

    ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ

    ಬೀದರ್: ಸರಿಯಾದ ಸಮಯಕ್ಕೆ ಬಸ್ ಬರದ ಕಾರಣ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ (Humnabad) ಬಳಿ ನಡೆದಿದೆ.ಇದನ್ನೂ ಓದಿ: ಕೋಲಾರ ನಗರದ 7ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸರಣಿ ಕಳ್ಳತನ – ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ

    ಕಟಕಚಿಂಚೊಳ್ಳಿ, ಸಿಕಿಂದ್ರಾಬಾದ್, ಸುಲ್ತಾನಬಾದ್ ಗ್ರಾಮಕ್ಕೆ ಬಸ್ ಬಾರದಿದ್ದಕ್ಕೆ ಭಾಲ್ಕಿ ಟೂ ಹುಮ್ನಾಬಾದ್ ಮುಖ್ಯರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಾರಿಗೆ ಅಧಿಕಾರಿಯನ್ನೇ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಹುತೇಕ ಸಲ ಬಸ್ ಬಾರದ ಕಾರಣಕ್ಕೆ ನಡೆದುಕೊಂಡು ಶಾಲೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಗೆ ಎಬಿವಿಪಿ ಕಾರ್ಯಕರ್ತರು ಸಾಥ್ ನೀಡಿದರು.ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಗಲಾಟೆ – ಕೇಂದ್ರಕ್ಕೆ ಸ್ಥಳೀಯರಿಂದಲೇ ಬೀಗ

  • ಬಸ್ ಮುಷ್ಕರದಲ್ಲಿ ನೌಕರರ ವಜಾ ಮಾಡಿದ ವಿಚಾರ ರಾಜಕೀಯವಾಗಿ ಬಳಕೆ: ಶ್ರೀರಾಮುಲು

    ಬಸ್ ಮುಷ್ಕರದಲ್ಲಿ ನೌಕರರ ವಜಾ ಮಾಡಿದ ವಿಚಾರ ರಾಜಕೀಯವಾಗಿ ಬಳಕೆ: ಶ್ರೀರಾಮುಲು

    ಬೆಂಗಳೂರು: ಬಸ್ ಮುಷ್ಕರದಲ್ಲಿ 4 ನಿಗಮದಿಂದ 1610 ಮಂದಿಯನ್ನು ವಜಾ ಮಾಡಲಾಗಿತ್ತು. ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ತಾರೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಷ್ಕರ ಆಗಬಾರದಿತ್ತು. ಮುಷ್ಕರ ಮಾಡೋರು ಅರ್ಥ ಮಾಡಿಕೊಂಡ ಮಾಡಬೇಕು. ಸರ್ಕಾರದ ಆಸ್ತಿ ನಾಶ ಆಗುತ್ತದೆ. ಏನೇ ಬೇಡಿಕೆ ಇದ್ದರೂ ಮಂತ್ರಿ, ಸಚಿವರು, ಯುನಿಯನ್ ಲೀಡರ್ ಜೊತೆ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು. ನಮ್ಮ ಮನೆ, ನಮ್ಮ ಸರ್ಕಾರ ಅನ್ನೋ ನಂಬಿಕೆ ಇರಬೇಕು. ಈಗಾಗಲೇ 1500 ಜನರ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. ನಿಮ್ಮನ್ನು ಕಳೆದುಕೊಳ್ಳಲು ನಮಗೆ ಇಷ್ಟ ಇಲ್ಲ. ಒಂದು ಬಾರಿ ವಜಾ ಆದ ಮೇಲೆ ಮತ್ತೆ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.

    ಮುಷ್ಕರಕ್ಕೆ ಮುಂದೆ ನಿಂತವರು ಇವತ್ತು ಓಡಿ ಹೋಗಿದ್ದಾರೆ. ಇವತ್ತು ನಿಮ್ಮ ಜೊತೆ ಸರ್ಕಾರ ಮಾತ್ರ ಇರೋದು. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಮತ್ತೆ ಈ ತಪ್ಪು ಮಾಡಬೇಡಿ. ಯಾರನ್ನು ನಂಬಬೇಡಿ. ಸರ್ಕಾರವನ್ನು ಮಾತ್ರ ನಂಬಿ. ಮೊದಲ ಹಂತದಲ್ಲಿ 100 ಜನರಿಗೆ ಮರು ನೇಮಕ ಮಾಡಲಾಗಿದೆ. ಮುಂದೆ ಹಂತ ಹಂತದಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

    700 ಜನರಿಗೆ ಮರು ಆದೇಶ: ನಿಮಗೆ ಸಂಬಳ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇವೆ. ಶೀಘ್ರವೇ ಸರಿಯಾದ ಸಮಯಕ್ಕೆ ಸಂಬಳ ಬರುವ ರೀತಿ ನೋಡಿಕೊಳ್ಳುತ್ತೇನೆ. ಈ ತಿಂಗಳಲ್ಲಿ 700 ಜನರಿಗೆ ಮರು ಆದೇಶ ಕೊಡುತ್ತೇನೆ ಎಂದ ಅವರು, ಲೋಕಾ ಅದಾಲತ್ ಕೋರ್ಟ್ ಮೂಲಕ ಪ್ರಕರಣ ಇತ್ಯರ್ಥ ಮಾಡಿ ನೇಮಕಾತಿ ಮಾಡಲಾಗಿದೆ. 1,350 ಮಂದಿಗೆ ಒಟ್ಟಾರೆ ಮರು ನೇಮಕ ಮಾಡಿಕೊಡಲಾಗುತ್ತದೆ. ಮತ್ತೆ ಇಂತಹ ಪ್ರತಿಭಟನೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ

    ಎಲೆಕ್ಟ್ರಿಕ್ ಬಸ್ ಬಂದರು ನಮ್ಮ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡುವುದಿಲ್ಲ. ಕೇಂದ್ರದಿಂದ ಸಬ್ಸಿಡಿ ಮಿಸ್ ಆಗುತ್ತಿದೆ. ಹೀಗಾಗಿ ಕೇಂದ್ರದ ನಿಯಮದ ಪ್ರಕಾರ ಖಾಸಗಿ ಚಾಲಕರ ಬಳಕೆ ಮಾಡಲಾಗುತ್ತಿದೆ. ನಮ್ಮ ಚಾಲಕರನ್ನು ಯಾವುದೇ ಕಾರಣಕ್ಕೂ ತೆಗೆಯೊಲ್ಲ ಎಂದರು. ಇದನ್ನೂ ಓದಿ:  ಖಾಲಿ ಇದ್ದ ಧ್ವಜ ಸ್ತಂಭದಲ್ಲಿ ಓಂಕಾರ ಧ್ವಜ ಹಾರಿಸಲಾಗಿದೆ: ಕಟೀಲ್

    ಬಸ್ ಟಿಕೆಟ್ ದರ ಏರಿಕೆಯಾಗಲ್ಲ: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಸೇವೆ ಮಾಡುವ ಇಲಾಖೆಯಾಗಿದೆ. ಸದ್ಯಕ್ಕೆ ಟಿಕೆಟ್ ಹೆಚ್ಚಳ ಮಾಡೋ ಬಗ್ಗೆ ಚರ್ಚೆ ಮಾಡಿಲ್ಲ. ಜನರು ಆತಂಕ ಪಡೆದೇ ಬಸ್‍ಗೆ ಬಂದರೆ ಸಾಕು. ಸದ್ಯಕ್ಕೆ ಟಿಕೆಟ್ ದರ ಹೆಚ್ಚಳ ಇಲ್ಲ ಎಂದು ತಿಳಿಸಿದರು.

  • ಸಾರಿಗೆ ನೌಕರರ ಸಮಸ್ಯೆಗಳನ್ನು ವೈರಿಗಳಂತಲ್ಲ, ತಾಯಿ ಹೃದಯದಿಂದ ನೋಡ್ಬೇಕು: ಖಾದರ್

    ಸಾರಿಗೆ ನೌಕರರ ಸಮಸ್ಯೆಗಳನ್ನು ವೈರಿಗಳಂತಲ್ಲ, ತಾಯಿ ಹೃದಯದಿಂದ ನೋಡ್ಬೇಕು: ಖಾದರ್

    ಬಳ್ಳಾರಿ: ಸಾರಿಗೆ ನೌಕರರ ಸಮಸ್ಯೆಗಳನ್ನು ತಾಯಿ ಹೃದಯದಿಂದ ನೋಡಬೇಕೆ ಹೊರತು ವೈರಗಳಿಂತಲ್ಲ ಎಂದು ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಎಸ್ ಆರ್‍ಟಿಸಿ ಅವರು ಸ್ಟ್ರೈಕ್ ಮಾಡ್ತಿರೋದು ಬೇಸರ. ಇವರ ಸಮಸ್ಯೆಯನ್ನ ತಾಯಿ ಹೃದಯದಿಂದ ನೋಡಬೇಕು. ಅವರನ್ನ ವೈರಿಗಳಂತೆ ನೋಡಬಾರದು. ನಾವು ಬಡವರ ಪರ ಅಂತೀರ, ಆದರೆ 12 ಸಾವಿರದಲ್ಲಿ ಹೇಗೆ ಅವರು ಜೀವನ ನಡೆಸಬೇಕು?, ಆರನೇ ವೇತನ ಆಯೋಗ ಮಾಡಲಿಕ್ಕೆ ಇವರಿಗೆ ಕಷ್ಟ ಏನು?, ಸರ್ಕಾರ ಬಡ ನೌಕರರ ಮೆಲೆ ದಬ್ಬಾಳಿಕೆಯನ್ನ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

    ಹೃದಯವಿಲ್ಲದ ಮಾನವೀಯತೆ ಇಲ್ಲದ ಸರ್ಕಾರ ಇದೆ. ಅದಕ್ಕೆ ಜನ ಮತ್ತೆ ಪಾಲಿಕೆ ಚುನಾವಣೆ ಅವಕಾಶ ಕೊಡಬಾರದು ಎಂದು ಖಾದರ್ ಕರೆ ನೀಡಿದರು.

    ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ವಿವಿಧ ಟೀಂಗಳನ್ನ ಮಾಡಿ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರ ಇದ್ದಾಗ ಪಾಲಿಕೆಗಳಿಗೆ ಬಜೆಟ್ ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿದ್ದೇವೆ. ಜನರ ಹಿತಾಸಕ್ತಿ ಇಲ್ಲದ ಬಿಜೆಪಿಗೆ ಅಧಿಕಾರ ಕೊಡಬಾರದು ಎಂದರು.