Tag: Bus Fire

  • ಬೆಂಗಳೂರಿಂದ ಹೊರಟಿದ್ದ ಖಾಸಗಿ ಬಸ್‌ ಏಕಾಏಕಿ ಬೆಂಕಿಗಾಹುತಿ – 36 ಮಂದಿ ಪ್ರಯಾಣಿಕರು ಸೇಫ್

    ಬೆಂಗಳೂರಿಂದ ಹೊರಟಿದ್ದ ಖಾಸಗಿ ಬಸ್‌ ಏಕಾಏಕಿ ಬೆಂಕಿಗಾಹುತಿ – 36 ಮಂದಿ ಪ್ರಯಾಣಿಕರು ಸೇಫ್

    – ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಉಳಿಯಿತು 36 ಜೀವ

    ಬೆಂಗಳೂರು: ನಗರದಿಂದ ಹೊರಟಿದ್ದ ಖಾಸಗಿ ಬಸ್‌ವೊಂದು (Private Bus) ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಅನಂತಪುರ ಜಿಲ್ಲೆಗೆ 15 ಕಿಮೀ ದೂರದಲ್ಲಿರುವ ಗರ‍್ಲದಿನ್ನೆಯಲ್ಲಿ ನಡೆದಿದೆ.

    ಬೆಂಗಳೂರಿನಿಂದ ರಾಯಚೂರಿಗೆ (Raichur) ಹೊರಟಿದ್ದ ಬಸ್‌ ಅನಂತಪುರದ ಬಳಿ ಚಲಿಸುತ್ತಿದ್ದಾಗ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಸೇಫ್‌ ಆಗಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ದೇವಸ್ಥಾನಕ್ಕೆ ಬಂದಿದ್ದ ದಂಪತಿ ಭದ್ರಾ ನಾಲೆಯಲ್ಲಿ ಮುಳುಗಿ ಸಾವು, ಆತ್ಮಹತ್ಯೆ ಶಂಕೆ

    ಗ್ರೀನ್ ಲೈನ್ ಟ್ರಾವೆಲ್ಸ್‌ಗೆ ಸೇರಿದ ಈ ಬಸ್‌ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೊರಟಿತ್ತು. ಈ ವೇಳೆ ಟಯರ್‌ ಬ್ಲಾಸ್ಟ್‌ ಆಗಿ ಏಕಾಏಕಿ ಬೆಂಕಿ (Bus Fire) ಹೊತ್ತಿಕೊಂಡಿದೆ. ಬ್ಲಾಸ್ಟ್‌ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನೂ ಬಿಟ್ಟು ಬಸ್‌ನಿಂದ ಜಿಗಿದಿದ್ದಾರೆ. ಹೀಗಾಗಿ ಪ್ರಯಾಣಿರ ಸಂಪೂರ್ಣ ಲಗೇಜ್‌ಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

    ದೀಪಾವಳಿ ಹಬ್ಬಕ್ಕೆ ಹೊರಟಿದ್ದಾಗಲೇ ದುರಂತ
    ಬಸ್‌ನಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಇತರ ಪ್ರಯಾಣಿಕರೂ ಇದ್ದರು. ಸಾಲು ಸಾಲು ರಜೆ ಇದ್ದ ಕಾರಣ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದರು. ಟಯರ್‌ ಬ್ಲಾಸ್ಟ್‌ ಆಗಿ ತಡರಾತ್ರಿ 2:30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಆದ್ರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

    ಮಹಿಳೆಯ ಸಮಯಪ್ರಜ್ಞೆ ಉಳಿಸಿತು 36 ಜೀವ
    ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಇದೇ ವೇಳೆ ನಿದ್ರೆ ಮಂಪರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಎಚ್ಚರವಾಗಿದೆ. ಕೂಡಲೇ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಿರುಚಿದ್ದಾರೆ. ಆದಾಗ್ಯೂ ಡ್ರೈವರ್‌ ಅರ್ಧ ಕಿಮೀ ಬಸ್‌ ನಿಲ್ಲಿಸದೇ ಹೊರಟಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ಪ್ರಯಾಣಿಕರು ಸೇಫ್‌ ಆಗಿದ್ದರೂ, ಅವರ ಬಳಿಯಿದ್ದ ಮಹತ್ವದ ದಾಖಲೆಗಳು, ಹಬ್ಬಕ್ಕೆ ಕೊಂಡೊಯ್ಯುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಹೀಗಾಗಿ ಪ್ರಯಾಣಿಕರು ಗ್ರೀನ್‌ಲೈನ್‌ ಟ್ರಾವೆಲ್ಸ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • 75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

    75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

    – ಬೆಳ್ಳಂಬೆಳಗ್ಗೆಯೇ ಅಗ್ನಿ ಅವಘಡ

    ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ (BMTC Bus Fire) ಕಾಣಿಸಿಕೊಂಡು, ಬಸ್‌ ಸುಟ್ಟು ಕರಕಲಾಗಿರುವ ಘಟನೆ ನಗರದ ಹೆಚ್ಎಎಲ್ (HAL) ಮುಖ್ಯದ್ವಾರದ ಬಳಿ ನಡೆದಿದೆ.

    ಬೆಳಗ್ಗಿನ ಜಾವ 5:10ಕ್ಕೆ ಅಗ್ನಿ ದುರಂತ ಸಂಭವಿಸಿದೆ. ದುರಂತಕ್ಕೀಡಾದ ಬಸ್‌ (ಸಂಖ್ಯೆ KA57 F 4568) ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ ಬಸ್‌ನಲ್ಲಿ ಸುಮಾರು 75 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಬಸ್‌ ಚಲಿಸುತ್ತಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಚಾಲಕ, ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನ ಕೆಳಗಿಳಿಸಿದ್ದಾರೆ. ಕ್ರಮೇಣ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬಸ್‌ ಧಗಧಗಿಸಿದೆ. ಚಾಲಕನ ಸಮಯಪ್ರಜ್ಷೆಯಿಂದ 75 ಪ್ರಯಾಣಿಕರು ಸೇಫ್‌ ಆಗಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

    ಬಳಿಕ ಹೆಚ್ಎಲ್ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆ ಹಚ್ಚಲು ಮುಂದಾಗಿದೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

  • ಸ್ಲೀಪರ್‌ ಬಸ್‌ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ – ಐವರು ಸಜೀವ ದಹನ

    ಸ್ಲೀಪರ್‌ ಬಸ್‌ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ – ಐವರು ಸಜೀವ ದಹನ

    – ಹತ್ತೇ ನಿಮಿಷದಲ್ಲಿ ಬಸ್‌ ಸುಟ್ಟು ಕರಕಲು

    ಲಕ್ನೋ: ಉತ್ತರ ಪ್ರದೇಶದ (Uttarpradesh) ರಾಜಧಾನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಪೀಪರ್‌ ಬಸ್‌ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ.

    ಲಕ್ನೋದ (lucknow) ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ಘಟನೆ ನಡೆದಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 60 ಪ್ರಯಾಣಿಕರ ಪೈಕಿ ಐವರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉಗ್ರರ ವಿರುದ್ಧ ಸಿಡಿದೆದ್ದ ಭಾರತ – ‘ಆಪರೇಷನ್‌ ಸಿಂಧೂರ’ಗೆ ಜೈ ಎಂದ ಬ್ರಿಟಿಷ್‌ ಸಂಸದ

    ಹತ್ತೇ ನಿಮಿಷದಲ್ಲಿ ಬಸ್‌ ಸುಟ್ಟು ಕರಕಲು:
    ಖಾಸಗಿ ಸ್ಲೀಪರ್‌ ಬಸ್‌ (Sleeper Bus) ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿತ್ತು. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ, ಇದು ತಕ್ಷಣಕ್ಕೆ ಪ್ರಯಾಣಿಕರಿಗೆ ಗಮನಕ್ಕೆ ಬಂದಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಹೊಗೆ ತುಂಬಿಕೊಂಡು ಉಸಿರುಗಟ್ಟಿದ ಅನುಭವವಾಗಿದೆ. ಬಳಿಕ ಒಂದಿಬ್ಬರು ಪ್ರಯಾಣಿಕರು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆತಂಕಗೊಂಡ ಪ್ರಯಾಣಿಕರು ಕಿಟಕಿ ಗಾಜು ಹೊಡೆದು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾರೆ.  ಇದನ್ನೂ ಓದಿ: ಮಣಿಪುರದ ಚಾಂದೆಲ್‌ನಲ್ಲಿ ಎನ್‌ಕೌಂಟರ್‌ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

    ಬೆಂಕಿ ಹೊತ್ತಿಕೊಂಡಿರುವುದು ನೋಡ್ತಿದ್ದಂತೆ ಸುತ್ತಮುತ್ತಲಿನ ಜನ ನೆರವಿಗೆ ಧಾವಿಸಿದ್ದಾರೆ, ಜೊತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ತಂಡ ಅಗ್ನಿ ನಂದಿಸಲು ಹರಸಾಹಸಪಟ್ಟಿತು. ಅಷ್ಟೊತ್ತಿಗೆ ಇಡೀ ಬಸ್ ಸುಟ್ಟು ಹೋಗಿತ್ತು. ಈ ಅಪಘಾತದಲ್ಲಿ 5 ಪ್ರಯಾಣಿಕರು ಸಜೀವ ದಹನವಾಗಿದ್ದು, ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಇತರ ಪ್ರಯಾಣಿಕರನ್ನು ಸಕಾಲದಲ್ಲಿ ಬಸ್ಸಿನಿಂದ ಇಳಿಸಲಾಯಿತು ಎಂದು ತಿಳಿದುಬಂದಿದೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಚಾಲಕ ಮೊದಲು ಗಾಜು ಒಡೆದು ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಅಪಘಾತದ ಬಳಿಕ ಕಾಣೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ.  ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್

  • ಮಂಡ್ಯ| ಹೈವೇಯಲ್ಲಿ ಹೊತ್ತಿ ಉರಿದ‌ ಬಸ್ – ಪ್ರಯಾಣಿಕರು ಸೇಫ್

    ಮಂಡ್ಯ| ಹೈವೇಯಲ್ಲಿ ಹೊತ್ತಿ ಉರಿದ‌ ಬಸ್ – ಪ್ರಯಾಣಿಕರು ಸೇಫ್

    ಮಂಡ್ಯ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ‌ ಆಕಸ್ಮಿಕ ಬೆಂಕಿ‌ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ‌ ಬಳಿ ಜರುಗಿದೆ.

    ಇಂದು ಬೆಳಗ್ಗಿನ ಜಾವ 5 ಗಂಟೆ ವೇಳೆಯಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಉಡುಪಿಯಿಂದ‌ ಬೆಂಗಳೂರು ಕಡೆಗೆ ಖಾಸಗಿ ಬಸ್ ಚಲಿಸುತ್ತಿತ್ತು. ಕದಬಹಳ್ಳಿ ಬಳಿ ಇದ್ದಕ್ಕಿದ್ದಂತೆ ಬಸ್‌ನಲ್ಲಿ‌ ಬೆಂಕಿ‌ ಕಾಣಿಸಿದೆ. ಕೂಡಲೇ ಬಸ್ ಚಾಲಕ ಬಸ್‌ನಲ್ಲಿ‌ ಇದ್ದ 25 ಮಂದಿ ಪ್ರಯಾಣಿಕರನ್ನು ತಮ್ಮ ಲೆಗೇಜ್‌ ಸಹಿತ ಕೆಳಗೆ‌ ಇಳಿಯಲು ಹೇಳಿದ್ದಾನೆ. ಬಳಿಕ‌ ಎಲ್ಲಾ ಪ್ರಯಾಣಿಕರು ಬಸ್‌ನಿಂದ ಕೆಳಗೆ ಇಳಿಸಿದಿದ್ದಾರೆ.

    ಬಳಿಕ‌ ಬಸ್‌ನಲ್ಲಿ‌ ಬೆಂಕಿಯ ಪ್ರಮಾಣ ಹೆಚ್ಚಿದ್ದು, ನೋಡ‌ ನೋಡುತ್ತಿದ್ದಂತೆ ಬಸ್ ಧಗಧಗನೇ‌ ಹೊತ್ತಿ‌ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‌ನ ಬೆಂಕಿಯನ್ನು ಹಾರಿಸಿದ್ದಾರೆ. ಸದ್ಯ ಬಸ್‌ನಲ್ಲಿ‌ ಹೇಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿಲ್ಲ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

  • ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

    ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

    ಚಿಕ್ಕಬಳ್ಳಾಪುರ: ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಚಿಂತಾಮಣಿ(Chintamani) ನಗರದ ಬೆಂಗಳೂರು ವೃತ್ತದಲ್ಲಿ ನಡೆದಿದೆ.

    ಬಸ್ಸಿನ ಹಿಂಭಾಗ ದೂರವಾಣಿ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು, ಅಪಘಾತ ಮತ್ತು ಇತರ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲೇ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿದೆ. ಇದನ್ನೂ ಓದಿ: ಹಾವೇರಿ| ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರು

    ರಾತ್ರಿ ಗಸ್ತು ಮಾಡುತ್ತಿದ್ದ ಪೊಲೀಸರು ಬಸ್‌ಗೆ ಬೆಂಕಿ ತಗುಲಿರುವುದನ್ನು ಕಂಡು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ

    ಪ್ರತಿದಿನ ಬೆಳಗ್ಗೆ 7 ಗಂಟೆಗೆ ಚಿಂತಾಮಣಿಯಿಂದ ಹೊಸಕೋಟೆ ಇಂಡಸ್ಟ್ರಿಯಲ್ ಏರಿಯಾಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಅನ್ನಪೂರ್ಣೇಶ್ವರಿ ಖಾಸಗಿ ಬಸ್ ಅನ್ನು ಬೆಂಗಳೂರು ವೃತ್ತದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ನಿಲ್ಲಿಸಲಾಗುತ್ತಿತ್ತು.

  • ಬ್ಯಾಂಕಾಕ್‌ನಲ್ಲಿ ಘೋರ ದುರಂತ – ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ

    ಬ್ಯಾಂಕಾಕ್‌ನಲ್ಲಿ ಘೋರ ದುರಂತ – ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ

    ಬ್ಯಾಂಕಾಕ್‌: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಘೋರ ದುರಂತ ನಡೆದಿದೆ. ಶಾಲಾ ಬಸ್ಸೊಂದರಲ್ಲಿ ಅಗ್ನಿ ಆಕಸ್ಮಿಕ (School Bus fire) ಸಂಭವಿಸಿದೆ. ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವವಾಗಿ ದಹನವಾಗಿದ್ದಾರೆ. 16 ಮಕ್ಕಳು, ಮೂವರು ಶಿಕ್ಷಕರನ್ನು (Teachers) ರಕ್ಷಿಸಲಾಗಿದೆ.

    ಪ್ರವಾಸಕ್ಕೆ ತರಳಿದ್ದ ಶಾಲಾ ಬಸ್‌ ವಾಪಸ್‌ಗೆ ಥೈಲ್ಯಾಂಡ್‌ಗೆ (Thailand) ಮರಳುತ್ತಿದ್ದಾಗ ಮುಂಭಾಗ ಟೈರ್‌ ಸ್ಫೋಟಗೊಂಡ ನಂತರ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿಖರ ಕಾರಣ ಇನ್ನೂ ತಿಳಿದುಬಂದಿದೆ. ಬ್ಯಾಂಕಾಕ್‌ನ ಉತ್ತರಕ್ಕೆ 100 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಥಾಯ್ಲೆಂಡ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಅಂತಿಮ ಹಂತದ ಚುನಾವಣೆ ಸಂಪನ್ನ – ಶೇ.65ಕ್ಕೂ ಹೆಚ್ಚು ಮತದಾನ

    ಘಟನೆ ಬಳಿಕ ಬಾನೆತ್ತರಕ್ಕೆ ಬಿಂಕಿಯ ಕಿಡಿ ಹಾಗೂ ದಟ್ಟ ಹೊಗೆ ಆವರಿಸಿದೆ. ಈ ಕುರಿತ ವೀಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿಯೂ ಸದ್ದು ಮಾಡುತ್ತಿವೆ. ಘಟನೆಯಲ್ಲಿ ಬದುಕುಳಿದ 16 ಮಕ್ಕಳು, ಮೂವರು ಶಿಕ್ಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಈವರೆಗೆ ಹೊರತೆಗೆಯಲಾಗಿರುವ 23 ಶವಗಳಲ್ಲಿ 11 ಗಂಡು, 7 ಗಂಡು, 7 ಮಹಿಳೆಯರ ಶವಗಳಿವೆ. ಐವರ ಗುರುತು ಪತ್ತೆಯಾಗದಷ್ಟು ಬೆಂದು ಸುಟ್ಟು ಕರಕಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಲೋಕಾರ್ಪಣೆಗೆ ಸಕಲ ಸಿದ್ಧತೆ

  • ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇನಲ್ಲಿ (Kundali Manesar Palwal Expressway) ನಡೆದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಭಕ್ತರು ಸಜೀವ ದಹನವಾಗಿರುವ ಘಟನೆ ಶನಿವಾರ (ಇಂದು) ನಸುಕಿನ ಜಾವದಲ್ಲಿ ನಡೆದಿದೆ.

    9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ (Pilgrimage) ಕೈಗೊಂಡು ಹಿಂದಿರುಗುತ್ತಿದ್ದಾಗ ನುಹ್‌ ಪ್ರದೇಶದ ಬಳಿ ಬಸ್‌ನಲ್ಲಿ ಬೆಂಕಿ (Bus Fire) ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಪಂಜಾಬ್‌ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ನಾವು 10 ದಿನಗಳ ಕಾಲ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದು, ಅದಕ್ಕಾಗಿ ಬಾಡಿಗೆ ಬಸ್‌ ಪಡೆದಿದ್ದವು. ಶನಿವಾರ ನಸುಕಿನ ಜಾವ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

    ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ವೇಳೆ ಬಸ್ ಸಂಪೂರ್ಣ ಸುಟ್ಟು ಕರಕಲಾದ 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

  • ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್ – 10ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್ – 10ಕ್ಕೂ ಹೆಚ್ಚು ಮಂದಿ ಸಜೀವ ದಹನ

    – ಮದುವೆಗೆ ತೆರಳುತ್ತಿದ್ದ ಅತಿಥಿಗಳು ಮಸಣಕ್ಕೆ
    – ಮೇಲ್ವಿಚಾರಣೆ ನಡೆಸುವಂತೆ ಉನ್ನತಾಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ

    ಲಕ್ನೋ: ಮದುವೆಗೆ ತೆರಳುತ್ತಿದ್ದ ಬಸ್‌ ಮೇಲೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ ಬಿದ್ದು ಬಸ್‌ ಸ್ಥಳದಲ್ಲೇ ಸುಟ್ಟು ಕರಕಲಾಗಿರುವ (Ghazipur Bus Fire) ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಪುರದಲ್ಲಿ ನಡೆದಿದೆ.

    ಇಲ್ಲಿನ ಮರ್ದಾಹ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ. ಒಟ್ಟು 36 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

    36 ಜನ ಅತಿಥಿಗಳು ಮದುವೆಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ (11,000 Volt Electricity Wire) ಬಸ್‌ ಮೇಲೆ ಬಿದ್ದು, ಕೂಡಲೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಭಾರೀ ಪ್ರಮಾಣದ ವಿದ್ಯುತ್‌ ಪ್ರವಹಿಸುತ್ತಿದ್ದರಿಂದ 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

    ಘಟನಾ ದೃಶ್ಯಾವಳಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.


    ತನಿಖೆಗೆ ಸಿಎಂ ಸೂಚನೆ: ಈ ಘಟನೆ ತಿಳಿಯುತ್ತಿದ್ದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    – ಡ್ರೈವರ್, ಕಂಡಕ್ಟರ್ ಸೇರಿ 46 ಪ್ರಯಾಣಿಕರು ಬಚಾವ್

    ಬೀದರ್: ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ (Maharastra) ಹೋರಾಟ ತೀವ್ರಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್‍ಗೆ (KSRTC Bus) ಬೆಂಕಿಹಚ್ಚಿ ಮರಾಠಾ ಪುಂಡರು ಪುಂಡಾಟ ಮೆರೆದಿದ್ದಾರೆ.

    ಮಹಾರಾಷ್ಟ್ರದ ಉಮ್ಮರ್ಗಾದ ತುರುರಿ ಬಳಿ ಬಸ್ ಹೊತ್ತಿ ಉರಿದಿದೆ. ಇದಕ್ಕೂ ಮುನ್ನ ಬಸ್‍ನ ಗ್ಲಾಸ್ ಹಾಗೂ ಕಿಟಕಿಗಳ ಗಾಜು ಪುಡಿಪುಡಿ ಮಾಡಿದ್ದಾರೆ. ಘಟನೆಯಲ್ಲಿ ಡ್ರೈವರ್, ಕಂಡಕ್ಟರ್ ಸೇರಿ ಬಸ್‍ನಲ್ಲಿದ್ದ 46 ಮಂದಿ ಪ್ರಯಾಣಿಕರು ಬಚಾವ್ ಆಗಿದ್ದಾರೆ.

    ಈ ಬಸ್ ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕಿನ ಡಿಪೋಗೆ ಸೇರಿದ್ದಾಗಿದೆ. ಭಾಲ್ಕಿಯಿಂದ ಪುಣೆಗೆ (Pune) ಹೊರಟಿತ್ತು. ಈ ವೇಳೆ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ. ಇದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು!

    ಸದ್ಯ ಮುಂಜಾಗ್ರತಾ ಕ್ರಮವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಮಹಾರಾಷ್ಟ್ರಕ್ಕೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಹೊರಡುವ ಬಸ್ ಸಂಚಾರಗಳೆಲ್ಲವನ್ನು ಬಂದ್ ಮಾಡಲಾಗಿದೆ. ಅಲ್ಲದೇ ಈಗಾಗಲೇ ಮಹಾರಾಷ್ಟ್ರ ವ್ಯಾಪ್ತಿಯೊಳಗಿರುವ ಬಸ್‍ಗಳು ಸಮೀಪದ ಡಿಪೋ ಇಲ್ಲವೇ ಪೊಲೀಸ್ ಠಾಣೆಯೊಳಗೆ ನಿಲ್ಲಿಸಲು ಕೆಕೆಆರ್ ಟಿಸಿ ಎಂಡಿ ರಾಚಪ್ಪ ಅವರು ತಮ್ಮ ನಿಗಮದ ಬಸ್ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸ್‌ನಲ್ಲಿ ಬೆಂಕಿ ದುರಂತ – ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ನಾಲ್ವರು ಸಾವು

    ಬಸ್‌ನಲ್ಲಿ ಬೆಂಕಿ ದುರಂತ – ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ನಾಲ್ವರು ಸಾವು

    ಶ್ರೀನಗರ: ಇಲ್ಲಿನ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟಿರುವ ಘಟನೆ ಜಮ್ಮುವಿನ ಕತ್ರಾಬಳಿ ನಡೆದಿದೆ. ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಕತ್ರಾದಿಂದ ಜಮ್ಮುವಿಗೆ ತೆರಳುತ್ತಿದ್ದ ಬಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು 4 ಮಂದಿ ಮೃತಪಟ್ಟಿದ್ದಾರೆ. ಕತ್ರಾದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದ ಬಳಿ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ; ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    BUS FIRING

    ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಕತ್ರಾ ಮೂಲ ಶಿಬಿರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    ಸಾವುಗಳನ್ನು ಖಚಿತಪಡಿಸಿದ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಮುಖೇಶ್ ಸಿಂಗ್, ಯಾವುದೇ ಸ್ಫೋಟಕ ಬಳಸಿರುವುದು ಆರಂಭಿಕ ತನಿಖೆಯಲ್ಲಿ ಕಂಡುಬಂದಿಲ್ಲ. ಅದಕ್ಕಾಗಿ ವಿಧಿವಿಜ್ಞಾನ ತಂಡ ಬೆಂಕಿ ಹೊತ್ತಿಕೊಂಡಿರುವ ನಿಖರ ಕಾರಣ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತರ ಕುಟುಂಬಗಳಿಗೆ ಸಂತಾಂಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದೂ ಸೂಚಿಸಿದ್ದಾರೆ.

    ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ಬಸ್‌ಗಳಲ್ಲಿ ಈಗಾಗಲೇ ಇದು 2ನೇ ದುರಂತವಾಗಿದೆ. ಜನವರಿ 1ರಂದು ಕಾಲ್ತುಳಿತಕ್ಕೆ ಸಿಕ್ಕಿ 12 ಯಾತ್ರಿಕರು ಸಾವನ್ನಪ್ಪಿದರು. 20 ಮಂದಿ ಗಾಯಗೊಂಡಿದ್ದರು.