Tag: Bus Conducter

  • ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

    ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

    ಬೀದರ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕ ಮರೆತು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮರಳಿಸಿ ಕಂಡಕ್ಟರ್ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.ಇದನ್ನೂ ಓದಿ: Mangaluru| ಖಾಸಗಿ ಬೀಚ್ ರೆಸಾರ್ಟ್‌ನ  ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ

    ಭಾಲ್ಕಿ (Bhalki) ನಿಲ್ದಾಣದಿಂದ ಮಹಾರಾಷ್ಟ್ರದ (Maharashtra) ನಿಲಂಗಾಕ್ಕೆ ಪ್ರಯಾಣ ಬೆಳೆಸಿದ್ದ ಮಹ್ಮದ್ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಸ್ಸಿನಲ್ಲಿ ಮೆರೆತು ಹೋಗಿದ್ದರು. ಚಿನ್ನಾಭರಣ ಬಸ್ಸಿನಲ್ಲಿ ಬಿಟ್ಟಿದ್ದು, ನೆನಪಾದ ಬಳಿಕ ಗಾಬರಿಗೊಂಡು ಬಸ್ ನಿಲ್ದಾಣಕ್ಕೆ ವಾಪಸಾಗಿದ್ದಾರೆ. ಬಳಿಕ ನಿರ್ವಾಹಕ ಪ್ರಕಾಶ ಹತ್ತಿರ ಚಿನ್ನಾಭರಣ ಸುರಕ್ಷಿತವಾಗಿರುವ ವಿಷಯ ಗೊತ್ತಾಗಿ ನಿಟ್ಟುಸಿರುಬಿಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ಡಿಪೋದ ಬಸ್‌ನಲ್ಲಿ ಚಿನ್ನಾಭರಣ ಮರೆತು ಹೋಗಿದ್ದ ಪ್ರಯಾಣಿಕನಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮರಳಿ ಕೊಟ್ಟು ನಿರ್ವಾಹಕ ಮಾನವೀಯತೆ ಮರೆದಿದ್ದಾರೆ. ಪ್ರಕಾಶ ಪ್ರಮಾಣಿಕತೆಗೆ ಮೆಚ್ಚಿ ಪ್ರಯಾಣಿಕ ಮಹ್ಮದ್ ಅಜರ್ ಹಾಗೂ ಸಾರಿಗೆ ಅಧಿಕಾರಿಗಳು ಚಾಲಕ ಹಾಗೂ ನಿರ್ವಾಹಕನನ್ನು ಸನ್ಮಾಸಿ ಗೌರವಿಸಿದ್ದಾರೆ.ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

  • ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

    – ನಿರ್ವಾಹಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅನಾಹುತ

    ಬೆಂಗಳೂರು: ಬಿಎಂಟಿಸಿ (BMTC) ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಶವಂತಪುರ (Yeshwanthapur)ಬಳಿ ನಡೆದಿದೆ.

    ಮೃತ ಚಾಲಕನನ್ನು ಕಿರಣ್ (29) ಎಂದು ಗುರತಿಸಲಾಗಿದ್ದು, ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದನ್ನೂ ಓದಿ: Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ

    ನೆಲಮಂಗಲದಿಂದ ಯಶವಂತಪುರ ಕಡೆಗೆ ಬರುತ್ತಿದ್ದ ಬಸ್‌ನ್ನು ಕಿರಣ್ ಚಲಾಯಿಸುತ್ತಿದ್ದರು. ಚಲಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿ ನುಗುತ್ತಾ ಎದುರಾಗಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

    ಎದೆ ನೋವಿನಿಂದಾಗಿ ಚಾಲಕ ಕುಸಿದು ಬೀಳುತ್ತಿದ್ದಂತೆ, ಕಂಡಕ್ಟರ್ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದು, ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್‌ ಕಮಾಲ್‌ – ಭಾರತಕ್ಕೆ ಏನು ಲಾಭ?

  • 15 ಸಾವಿರ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ!

    15 ಸಾವಿರ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ!

    ಹುಬ್ಬಳ್ಳಿ: ನಗರದ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 15,820 ರೂ. ಹಣ ಮತ್ತು ದಾಖಲಾತಿಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಬಸ್ ಚಾಲಕ, ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿ ರವರನ್ನು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಾಕರಸಾಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು ಜುಲೈ 2ರಂದು ಗುಳೇದಗುಡ್ಡ ದಿಂದ ಹುಬ್ಬಳ್ಳಿಗೆ ಬರುವಾಗ ಈ ಬಸ್ಸಿನಲ್ಲಿ ನವಲಗುಂದ ದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ಪ್ರಯಾಣಿಕರೊಬ್ಬರು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಪರ್ಸನ್ನು ಬಸ್ಸಿನಲ್ಲಿಯೇ ಬಿಟ್ಟು ತೆರಳಿದ್ದರು. ನಂತರ ನಿರ್ವಾಹಕರು ಪ್ರಯಾಣಿಕರ ಆಸನದಲ್ಲಿ ಪರ್ಸ್ ಇರುವುದನ್ನು ಗಮನಿಸಿದ್ದಾರೆ.

    ಪರ್ಸ್ ಪರಿಶೀಲಿಸಿದ ವೇಳೆ 15 ಸಾವಿರ ಹಣ ಹಾಗೂ ಮೂರು ಎಟಿಎಂ ಕಾರ್ಡ್ ಸೇರಿದಂತೆ ಕೆಲ ಮುಖ್ಯ ದಾಖಲೆಗಳು ಇರುವುದು ಕಂಡುಬಂದಿದೆ. ದಾಖಲೆಗಳಲ್ಲಿ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಲಭ್ಯವಿಲ್ಲದ್ದರಿಂದ ಪರ್ಸ್ ನಲ್ಲಿದ್ದ ಎಟಿಎಂ ಕಾರ್ಡ್ ಮೂಲಕ ಹುನಗುಂದದ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಪ್ರಯಾಣಿಕರನ್ನು ತುಮಕೂರು ಮೂಲದ ಹಾಲಿ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಎಂಬುದಾಗಿ ಪತ್ತೆ ಮಾಡಿ ಅವರಿಗೆ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಿದ್ದರು.

    ಹಣ ಕಳೆದುಕೊಂಡಿದ್ದ ಪ್ರಯಾಣಿಕರನ್ನು ಇಂದು ವಿಭಾಗ ಕಚೇರಿಗೆ ಕರೆಸಿ ನಿರ್ವಾಹಕರ ಮೂಲಕ ಹಿಂದಿರುಗಿಸಲಾಗಿಯಿತು. ಪ್ರಾಮಾಣಿಕತೆ ಮೆರೆದು ಇತರರಿಗೆ ಮಾದರಿಯಾದ ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

  • ಲಾಕ್‍ಡೌನ್ ನಿಯಮದಿಂದ ಬಸ್‍ನಲ್ಲಿ ಕಳೆದುಕೊಂಡಿದ್ದ 10 ಸಾವಿರ ರೂ. ಸಿಕ್ತು

    ಲಾಕ್‍ಡೌನ್ ನಿಯಮದಿಂದ ಬಸ್‍ನಲ್ಲಿ ಕಳೆದುಕೊಂಡಿದ್ದ 10 ಸಾವಿರ ರೂ. ಸಿಕ್ತು

    – ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ

    ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10 ಸಾವಿರ ರೂ.ಗಳನ್ನು ಹಿಂದಿರುಗಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

    ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಕೆಎ-25 ಎಫ್ 2966 ಸಂಖ್ಯೆಯ ಬಸ್ ಇಲಕಲ್ ನಿಂದ ಹುಬ್ಬಳ್ಳಿಗೆ ಬರುವಾಗ ಕುಳಗೇರಿ ಕ್ರಾಸ್ ನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರೊಬ್ಬರು 10 ಸಾವಿರ ರೂ.ಗಳಿರುವ ಪರ್ಸನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಇದನ್ನು ಮರಳಿ ಮಾಲೀಕರಿಗೆ ತಲುಪಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಬಸ್‍ನಲ್ಲಿ ಪ್ರಯಾಣಿಸುವವರು ಹೆಸರು, ದೂರವಾಣಿ ಸಂಖ್ಯೆ ಹಾಗೂ ಪ್ರಯಾಣದ ಸ್ಥಳಗಳನ್ನು ನಮೂದಿಸುವುದು ಕಡ್ಡಾಯವಾಗಿದೆ. ಇದೇ ಮಾಹಿತಿ ಆಧಾರದ ಮೇಲೆ ಬಸ್ ಚಾಲಕ ಆರ್.ಎನ್.ಮಾಳವಾಡ ಮತ್ತು ನಿರ್ವಾಹಕ ಆರ್.ಡಿ.ದೇಗಾಂವಕರ್ ಬಸ್ ನಲ್ಲಿ ಪರ್ಸ್ ಸಿಕ್ಕಿರುವ ಆಸನದಲ್ಲಿ ಕುಳಿತು ಪ್ರಯಾಣಿಸಿದ ಪ್ರಯಾಣಿಕರನ್ನು ಹುಬ್ಬಳ್ಳಿಯ ನಿವಾಸಿ ಸಂತೋಷ್ ಎಂದು ಪತ್ತೆ ಮಾಡಿದ್ದಾರೆ.

    ನಂತರ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಘಟಕಕ್ಕೆ ಕರೆಸಿಕೊಂಡು ಮೇಲಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಖಚಿತಪಡಿಸಿಕೊಂಡು ಹಣವಿದ್ದ ಪರ್ಸ್ ನ್ನು ಹಸ್ತಾಂತರಿಸಿದ್ದಾರೆ. ಹಣ ಮರಳಿ ಪಡೆದ ಪ್ರಯಾಣಿಕ ಸಂತೋಷ್ ಚಾಲಕ, ನಿರ್ವಾಹಕರಿಗೆ ಕೃತಜ್ಞತೆ ತಿಳಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ಅಭಿನಂದಿಸಿದ್ದಾರೆ.

  • ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ಧಾರವಾಡ: ಕೆಎಸ್ಆರ್‌ಟಿಸಿ ನಿರ್ವಾಹಕನೊಬ್ಬ ವೃದ್ಧನ ಮೇಲೆ ಗೂಂಡಾವರ್ತನೆ ತೋರಿದ ಘಟನೆ ಧಾರವಾಡದ ಅಳ್ನಾವರದಲ್ಲಿ ನಡೆದಿದೆ.

    ಹಳಿಯಾಳ-ಚುಂಚವಾಡ ಮಾರ್ಗದ ಬಸ್‍ನಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಬಸ್ ಪಾಸ್ ಸಂಬಂಧ ವೃದ್ಧ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಅಳ್ನಾವರ ಬಸ್ ನಿಲ್ದಾಣಕ್ಕೆ ಬರ್ತಿದ್ದಂತೆಯೇ ಸಿಟ್ಟಿಗೆದ್ದ ಕಂಡಕ್ಟರ್ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

    ವೃದ್ಧ ಓಡಿ ಹೋದರೂ ಬಿಡದೇ ಅಟ್ಟಿಸಿಕೊಂಡು ಬಂದು ಕಂಡಕ್ಟರ್ ಗೂಂಡಾಗಿರಿ ಮೆರೆದಿದ್ದಾನೆ. ಪೊಲೀಸ್ ಠಾಣೆ ಎದುರಿನಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಪೌರುಷ ಸಖತ್ ವೈರಲ್ ಆಗಿದೆ.

  • ನಾನು ಕರವೇ ಅಧ್ಯಕ್ಷ, ಟಿಕೆಟ್ ತೆಗ್ದುಕೊಳ್ಳಲ್ಲ, ಹಣವೂ ಕೊಡಲ್ಲ- ಕಂಡಕ್ಟರ್ ಮೇಲೆ ಜಿಲ್ಲಾಧ್ಯಕ್ಷನಿಂದ ದರ್ಪ

    ನಾನು ಕರವೇ ಅಧ್ಯಕ್ಷ, ಟಿಕೆಟ್ ತೆಗ್ದುಕೊಳ್ಳಲ್ಲ, ಹಣವೂ ಕೊಡಲ್ಲ- ಕಂಡಕ್ಟರ್ ಮೇಲೆ ಜಿಲ್ಲಾಧ್ಯಕ್ಷನಿಂದ ದರ್ಪ

    ಗದಗ: ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಅಮಲಿನಲ್ಲಿ ಕರವೇ ಜಿಲ್ಲಾಧ್ಯಕ್ಷ, ಬಸ್ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಗದಗ ತಾಲೂಕಿನ ಹೊಂಬಳ ಬಳಿ ನಡೆದಿದೆ.

    ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಚೌಡಣ್ಣವರ್, ಕಂಡಕ್ಟರ್ ಪ್ರಕಾಶ್ ಅವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ ದೋಚಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

    ರಾತ್ರಿ ವೇಳೆ ಗದಗದಿಂದ ಹೊಂಬಳ ಮಾರ್ಗವಾಗಿ ನವಲಗುಂದಕ್ಕೆ ಬಸ್ ಹೊರಟಿತ್ತು. ಹೊಂಬಳ ಗ್ರಾಮದ ಮೊದಲನೇ ಸ್ಟಾಪ್ ನಲ್ಲಿ ಕರವೇ ಮುತ್ತಣ, ಬಸ್ ಹತ್ತಿ ಎರಡನೇ ಸ್ಟಾಪ್‍ಗೆ ಇಳಿಯಲು ಮುಂದಾಗಿದ್ದಾನೆ. ಈ ಸ್ಟಾಪ್‍ನಿಂದ ಮುಂದಿನ ಸ್ಟಾಪ್ ಗೆ ಇಳಿಯೋಕೆ ಇದು ಸಿಟಿ ಬಸ್ ಅಲ್ಲ. ಇದಕ್ಕೆ ಟಿಕೆಟ್ ಕೊಡೋಕ್ಕಾಗಲ್ಲ ಅಂತ ಕಂಡಕ್ಟರ್ ಹೇಳಿದ್ದಾರೆ. ಊರು ಬರುವ ಮುಂಚಿತವಾಗಿ ಟಿಕೆಟ್ ಕ್ಲೋಸ್ ಮಾಡಲಾಗಿದೆ. ಮುಂದೆ ಚೆಕ್ ನವರು ಬಂದರೆ ನಮಗೆ ಸಮಸ್ಯೆಯಾಗುತ್ತೆ ಎಂದಿದಕ್ಕೆ, ನಾನು ಕರವೇ ಅಧ್ಯಕ್ಷ, ಯಾರೂ ನನ್ನ ಟಿಕೆಟ್ ಕೇಳಲ್ಲ. ನನ್ನನ್ನೇ ಟಿಕೆಟ್ ಕೇಳ್ತೀಯಾ? ಟಿಕೆಟ್ ತೆಗೆದುಕೊಳ್ಳಲ್ಲ, ಹಣವೂ ಕೊಡಲ್ಲ ಎಂದು ದರ್ಪ ತೋರಿ ಮನಬಂದಂತೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ ಅಂತ ನಿರ್ವಾಹಕನ ಆರೋಪಿಸಿದ್ದಾರೆ.

    ಚಾಲಕ ಸಿದ್ದನಗೌಡ ಹಾಗೂ ಪ್ರಯಾಣಿಕರು ಇವರಿಬ್ಬರ ಜಗಳ ಬಿಡಿಸಿದ್ದಾರೆ. ಈ ಬಗ್ಗೆ ಕಂಪ್ಲೇಂಟ್ ಏನಾದ್ರೂ ಕೊಟ್ರೆ ಹುಷಾರ್ ಎಂದು ಬೆದರಿಕೆ ಕೂಡಾ ಹಾಕಿದ್ದಾನೆ ಎನ್ನಲಾಗಿದೆ. ಗಲಾಟೆ ವೇಳೆ ನಿರ್ವಾಹಕನ ಶರ್ಟ್ ಹರಿದಿದೆ. ಜೇಬ್ ನಲ್ಲಿದ್ದ ಹಣ ಇಲ್ಲದಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ನಿರ್ವಾಹಕ ಪ್ರಕಾಶ್ ಮಾಧ್ಯಮದ ಎದುರು ಕಣ್ಣಿರು ಹಾಕಿದ್ದಾರೆ.

    ಸದ್ಯ ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರವೇ ಸ್ವಾಭಿಮಾನಿ ಅಧ್ಯಕ್ಷ ಮುತ್ತಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv