Tag: burqa

  • Bihar Election 2025 | ಬುರ್ಖಾಧಾರಿ ಮಹಿಳೆಯರ ಗುರುತು ಪರಿಶೀಲನೆಗೆ ಅಂಗನವಾಡಿ ಕಾರ್ಯಕರ್ತರ ನಿಯೋಜನೆ

    Bihar Election 2025 | ಬುರ್ಖಾಧಾರಿ ಮಹಿಳೆಯರ ಗುರುತು ಪರಿಶೀಲನೆಗೆ ಅಂಗನವಾಡಿ ಕಾರ್ಯಕರ್ತರ ನಿಯೋಜನೆ

    ನವದೆಹಲಿ: ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ 2 ಹಂತದಲ್ಲಿ ಚುನಾವಣೆ (Bihar Election Dates 2025) ನಡೆಯಲಿದೆ. ನವೆಂಬರ್ 6 ಹಾಗೂ ನವೆಂಬರ್ 11ಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಅಂತ ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಘೋಷಿಸಿದ್ದಾರೆ. ಮೊದಲ ಹಂತದಲ್ಲಿ 121 ಹಾಗೂ 2ನೇ ಹಂತದಲ್ಲಿ 122 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ.

    ಕಾಂಗ್ರೆಸ್‌ ನಾಯಕರಿಂದ ಮತಗಳ್ಳತನ (Vote Theft) ಆರೋಪಗಳು ಹೆಚ್ಚಾಗಿ ಕೇಳಿಬಂದ ಹಿನ್ನೆಲೆ ಈ ಬಾರಿ 100% ವೆಬ್‌ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬುರ್ಖಾಧಾರಿ ಮಹಿಳೆಯರ ಗುರುತು ಪರಿಶೀಲಿಸಲು ಪ್ರತಿ ಬೂತ್‌ನಲ್ಲಿ ಪ್ರತ್ಯೇಕವಾಗಿ ಅಂಗನವಾಡಿ ಕಾರ್ಯಕರ್ತರನ್ನ ನಿಯೋಜಿಸಲಾಗುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರವೇ ಅವರು ಗುರುತು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೂ ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ.17 ಕೊನೆಯ ದಿನವಾಗಿದ್ದು, 2ನೇ ಹಂತದ ಕ್ಷೇತ್ರಗಳಿಗೆ ಅ.21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್‌ 18‌ ಮತ್ತು ಅಕ್ಟೋಬರ್‌ 21 ರಂದು ಕ್ರಮವಾಗಿ ಮೊದಲ ಮತ್ತು 2ನೇ ಹಂತದ ಕ್ಷೇತ್ರಗಳಿಗೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಲಿದೆ. ಅಕ್ಟೋಬರ್‌ 20 ಹಾಗೂ ಅ.23 ಕ್ರಮವಾಗಿ ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ. ನವೆಂಬರ್‌ 6ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂದು ತಿಳಿಯಲಿದೆ.

    ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. 7.43 ಕೋಟಿ ಮತದಾರರಿದ್ದು, 3.92 ಕೋಟಿ ಪುರುಷರು, 3.50 ಕೋಟಿ ಮಹಿಳಾ ಮತದಾರರಿದ್ದಾರೆ. ಬಿಹಾರದಲ್ಲಿ 22 ವರ್ಷಗಳ ಬಳಿಕ ಮತಪಟ್ಟಿಯ ಸಮಗ್ರ ಪರಿಷ್ಕರಣೆ ಬಳಿಕ ಚುನಾವಣೆ ನಡೆಯುತ್ತಿದ್ದು, 14 ಲಕ್ಷ ಪ್ರಥಮ ಬಾರಿಗೆ ಮತಚಲಾಯಿಸುವ ಮತದಾರರಿದ್ದಾರೆ. 68.5 ಲಕ್ಷ ವೋಟ್‌ ಡಿಲೀಟ್ ಆಗಿದ್ದು, 21.5 ಲಕ್ಷ ಮತದಾರರ ಹೊಸ ಸೇರ್ಪಡೆಯಾಗಿದೆ.

    ಎನ್‌ಡಿಎನ ಮೋದಿ-ನಿತೀಶ್-ಚಿರಾಗ್ ಪಾಸ್ವಾನ್ ಹಾಗೂ ಇಂಡಿ ಕೂಟದ ರಾಹುಲ್-ತೇಜಸ್ವಿಯಾದವ್ ಹಾಗೂ ಜನಸುರಾಜ್ ಪಕ್ಷ ಸ್ಥಾಪಿಸಿರುವ ಪ್ರಶಾಂತ್ ಕಿಶೋರ್ ಅಧಿಕಾರದ ಚುಕ್ಕಾಣಿ ಸೆಣಸಲಿದ್ದಾರೆ.

    ಎಲ್ಲೆಲ್ಲಿ ಉಪಚುನಾವಣೆ?
    ಇನ್ನು, ಜಮ್ಮು & ಕಾಶ್ಮೀರ 2 ಹಾಗೂ ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪಂಜಾಬ್, ಮಿಜೋರಾಂ, ಒಡಿಶಾದಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಮಧ್ಯೆ ಬಿಹಾರ ಎಲೆಕ್ಷನ್‌ನಿಂದಾಗಿ ಕರ್ನಾಟಕದ ಕಾಂಗ್ರೆಸ್ & ಬಿಜೆಪಿ ನಾಯಕತ್ವ ಬದಲಾವಣೆ ವಿದ್ಯಮಾನಗಳಿಗೆ ಅಲ್ಪವಿರಾಮ ಬ್ರೇಕ್ ಬಿದ್ದಂತಾಗಿದೆ.

  • Koppal | ಬುರ್ಖಾ ಧರಿಸಿದ ಕಳ್ಳಿಯರಿಂದ ಗೃಹಬಳಕೆಯ ವಸ್ತು ಕಳ್ಳತನ

    Koppal | ಬುರ್ಖಾ ಧರಿಸಿದ ಕಳ್ಳಿಯರಿಂದ ಗೃಹಬಳಕೆಯ ವಸ್ತು ಕಳ್ಳತನ

    – ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಕೊಪ್ಪಳ: ಬುರ್ಖಾ (Burqa) ಹಾಕಿಕೊಂಡು ಬಂದ ಕಳ್ಳಿಯರು ಗೃಹಬಳಕೆಯ ಸಾಮಾಗ್ರಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ (Theft) ಮಾಡಿದ ಘಟನೆ ಕೊಪ್ಪಳ (Koppal) ಜಿಲ್ಲೆಯ ಕಾರಟಗಿ (Karatagi) ಪಟ್ಟಣದಲ್ಲಿ ನಡೆದಿದೆ.

    ವಿಎ ಬಜಾರ್‌ನಲ್ಲಿ ಜೂನ್ 18ರಂದು ಘಟನೆ ನಡೆದಿದ್ದು, ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ತಮ್ಮ ಬಟ್ಟೆಯೊಳಗೆ ಸೇರಿಸಿಕೊಂಡು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

    20 ಸಾವಿರ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಕಂಡು ಅಂಗಡಿ ಮಾಲೀಕರು ಶಾಕ್ ಆಗಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ

     

     

  • ಯುವತಿ ಜೊತೆ ಇರಲು ಬುರ್ಕಾ ಧರಿಸಿ ಸಿಕ್ಕಿಬಿದ್ದ ಯುವಕ – ಸಾರ್ವಜನಿಕರಿಂದ ಧರ್ಮದೇಟು

    ಯುವತಿ ಜೊತೆ ಇರಲು ಬುರ್ಕಾ ಧರಿಸಿ ಸಿಕ್ಕಿಬಿದ್ದ ಯುವಕ – ಸಾರ್ವಜನಿಕರಿಂದ ಧರ್ಮದೇಟು

    ಮಂಗಳೂರು: ಬುರ್ಕಾ ಹಾಕಿಕೊಂಡು ಬಂದ ಯುವಕನೋರ್ವ ಯುವತಿಯರ ಜೊತೆ ಸಿಕ್ಕಿಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.

    ಕಾಲೇಜು ಯುವತಿಯರ ಜೊತೆ ಮುಸ್ಲಿಂ ಯುವತಿಯರಂತೆ ಬುರ್ಕಾ ಧರಿಸಿದ್ದ ಯುವಕನೋರ್ವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಬುರ್ಕಾ ಧರಿಸಿರೋದು ಯುವಕ ಎಂದು ಸಾರ್ವಜನಿಕರಿಗೆ ಗೊತ್ತಾಗಿದ್ದು, ಬಳಿಕ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

    ಆತನನ್ನು ವಿಚಾರಣೆ ನಡೆಸಿದಾಗ ಪಶ್ಚಿಮ ಬಂಗಾಳದ ನಸೀಬುಲ್ ಎಂದು ಗೊತ್ತಾಗಿದ್ದು, ಯುವತಿಯ ಜೊತೆ ಇರಲು ಈ ರೀತಿ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ. ಧರ್ಮದೇಟು ನೀಡಿದ ಬಳಿಕ ಯುವಕನನ್ನು ಸ್ಥಳೀಯರು ಕುಂಬಳೆ ಪೋಲೀಸರಿಗೆ ಒಪ್ಪಿಸಿದ್ದಾರೆ.

  • ಶ್ರೀರಾಮ ಕಾಲೇಜಿನಲ್ಲಿ ಬುರ್ಕಾ ಧರಿಸಿ ವಿದ್ಯಾರ್ಥಿನಿಯರಿಂದ ರ‍್ಯಾಂಪ್‌ ವಾಕ್ – ಮುಸ್ಲಿಂ ಸಂಘಟನೆ ಕಿಡಿ

    ಶ್ರೀರಾಮ ಕಾಲೇಜಿನಲ್ಲಿ ಬುರ್ಕಾ ಧರಿಸಿ ವಿದ್ಯಾರ್ಥಿನಿಯರಿಂದ ರ‍್ಯಾಂಪ್‌ ವಾಕ್ – ಮುಸ್ಲಿಂ ಸಂಘಟನೆ ಕಿಡಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದ ಕಾಲೇಜಿನಲ್ಲಿ ಬುರ್ಕಾ (Burqa) ಧರಿಸಿ ವಿದ್ಯಾರ್ಥಿನಿಯರು ರ‍್ಯಾಂಪ್‌ ವಾಕ್‌ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ವಿರುದ್ಧ ಮುಸ್ಲಿಂ ಸಂಘಟನೆಯೊಂದು ಗರಂ ಆಗಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

    ಕೆಲವು ವಿದ್ಯಾರ್ಥಿನಿಯರು ತಮ್ಮ ಸೃಜನಶೀಲತೆ ಪ್ರದರ್ಶಿಸಲು ಹಾಗೂ ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೃಷ್ಟಿಯಿಂದ ಕಾಲೇಜಿನಲ್ಲಿ ಬುರ್ಕಾ ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದರು. ಆದರೆ ಈ ಬೆಳವಣಿಗೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ಬುರ್ಕಾವು “ಪರ್ದಾ” (ಹೊದಿಕೆ) ಬಟ್ಟೆಯಾಗಿದೆ. ಫ್ಯಾಷನ್ ಶೋಗೆ ಬಳಸುವ ವಸ್ತುವಲ್ಲ ಎಂದು ಜಮಿಯತ್ ಉಲಮಾದ ಪ್ರತಿನಿಧಿ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಪರ ನಿಂತಿದೆ. ದಾರುಲ್ ಉಲೂಮ್‌ನ ಪ್ರತಿನಿಧಿಯಿಂದ ಬೆಂಬಲ ವ್ಯಕ್ತವಾಗಿದೆ. ಫ್ಯಾಷನ್ ಶೋ ಒಂದು ರೀತಿಯ ಪ್ರಾತಿನಿಧ್ಯ ಎಂದು ಕಾಲೇಜು ತಿಳಿಸಿದೆ.

    ಭಾನುವಾರ ಮುಜಾಫರ್‌ನಗರದ ಶ್ರೀರಾಮ ಕಾಲೇಜಿನಲ್ಲಿ ನಡೆದ ಫ್ಯಾಷನ್ ಶೋನ ವಿಡಿಯೋ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಫ್ಯಾಷನ್ ಸ್ಪ್ಲಾಶ್ ಎಂಬ ಮೂರು ದಿನಗಳ ಈವೆಂಟ್‌ನಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಗುಂಪು ಬುರ್ಕಾಗಳನ್ನು ಧರಿಸಿ ರಾಂಪ್‌ನಲ್ಲಿ ನಡೆದರು. ಫ್ಯಾಷನ್ ಡಿಸೈನ್ ಓದುತ್ತಿರುವ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಮಾಜಿ ನಟ ಹಾಗೂ ಕಿರುತೆರೆ ನಟರೊಬ್ಬರು ಉಪಸ್ಥಿತರಿದ್ದರು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ವಿಡಿಯೋ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಜಮೀಯತ್ ಉಲಮಾದ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ, ಕಾಲೇಜು ಧರ್ಮವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಕಾಲೇಜಿನವರು ಕ್ಷಮೆಯಾಚಿಸದಿದ್ದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಎಚ್ಚರಿಸಿದ್ದಾರೆ.

    ಈ ಘಟನೆಯನ್ನು ಖಂಡಿಸುತ್ತೇವೆ. ಬುರ್ಕಾ ಫ್ಯಾಷನ್‌ನ ವಸ್ತುವಲ್ಲ. ಅದನ್ನು ಪರ್ದಾಕ್ಕೆ ಬಳಸಲಾಗುತ್ತದೆ. ಇದು ಮುಸ್ಲಿಂ ಮಹಿಳೆಯರ ಘನತೆ ಮತ್ತು ಗೌರವದ ಸಂಕೇತವಾಗಿದೆ ಎಂದು ಬುರ್ಕಾವನ್ನು ಧರಿಸಲಾಗುತ್ತದೆ. ಇದರಿಂದ ಮಹಿಳೆಯರು ತಪ್ಪು ಉದ್ದೇಶಗಳನ್ನು ಹೊಂದಿರುವ ಪುರುಷರ ನೋಟವನ್ನು ತಪ್ಪಿಸಬಹುದು. ನಿರ್ದಿಷ್ಟ ಧರ್ಮವನ್ನು ಗುರಿಯಾಗಿಟ್ಟುಕೊಂಡು ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಕಾಲೇಜು ಅಧಿಕಾರಿಗಳು ಯೋಗ್ಯವಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ

    ಕಾಲೇಜಿನ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಒಂದು ವೇಳೆ ಕೇಳದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ. ಅವರು ಯಾವುದೇ ಧರ್ಮದ ಅನುಯಾಯಿಗಳಿಗೆ ಮತ್ತೆ ಈ ರೀತಿ ಮಾಡಬಾರದು ಎಂದು ಮೌಲಾನಾ ಹೇಳಿದ್ದಾರೆ.

  • ಬುರ್ಖಾ ಧರಿಸಿದ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಕಾಲೇಜು – ಭುಗಿಲೆದ್ದ ಆಕ್ರೋಶ

    ಬುರ್ಖಾ ಧರಿಸಿದ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಕಾಲೇಜು – ಭುಗಿಲೆದ್ದ ಆಕ್ರೋಶ

    ಮುಂಬೈ: ನಗರದ ಕಾಲೇಜೊಂದರಲ್ಲಿ (College) ವಿದ್ಯಾರ್ಥಿನಿಯರು ಬುರ್ಖಾ (Burqa) ಧರಿಸಿ ಬಂದಿದ್ದಕ್ಕೆ ಅವರನ್ನು ಕ್ಯಾಂಪಸ್‌ಗೆ ಪ್ರವೇಶಿಸಲು ನಿರ್ಬಂಧಿಸಲಾಗಿದ್ದು, ಬಳಿಕ ವಿಚಾರ ತಿಳಿದ ಪೋಷಕರು ವಿದ್ಯಾರ್ಥಿಗಳೊಂದಿಗೆ ಸೇರಿ ಕಾಲೇಜು ಬಳಿ ಭಾರೀ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

    ಘಟನೆ ಚೆಂಬೂರಿನ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ತಡೆದಿದ್ದು, ಬುರ್ಖಾಗಳನ್ನು ತೆಗೆದುಹಾಕಿದರೆ ಮಾತ್ರವೇ ಒಳಗೆ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟಿಸಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ವಿದ್ಯಾರ್ಥಿನಿಯರು ಕಾಲೇಜು ಆವರಣ ಪ್ರವೇಶಿಸಿದ ಬಳಿಕ ತರಗತಿಗೆ ಹಾಜರಾಗುವ ಮೊದಲು ವಿಶ್ರಾಂತಿ ಕೊಠಡಿಯಲ್ಲಿ ಬುರ್ಖಾ ತೆಗೆಯುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ತರಗತಿಯಲ್ಲಿ ಸ್ಕಾರ್ಫ್ ಧರಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ್ದು, ನಂತರ ಉದ್ವಿಗ್ನತೆ ಶಮನವಾಗಿದೆ. ಇದನ್ನೂ ಓದಿ: ಕೇರಳದ ಕೊಚ್ಚಿಯಲ್ಲಿ ಕರ್ನಾಟಕ ಪೊಲೀಸರ ಅರೆಸ್ಟ್‌ – ಲಂಚಕ್ಕೆ ಬೇಡಿಕೆಯಿಟ್ಟು ಲಾಕ್‌ ಆದ ಬೆಂಗಳೂರು ಪೊಲೀಸರು

    ಚೆಂಬೂರಿನ ಎನ್‌ಜಿ ಆಚಾರ್ಯ ಹಾಗೂ ಡಿಕೆ ಮರಾಠಿ ಕಾಲೇಜಿನ ಹೊಸ ಸಮವಸ್ತ್ರ ನಿಯಮದ ಪ್ರಕಾರ ವಿದ್ಯಾರ್ಥಿಗಳು ಬುರ್ಖಾ, ಹಿಜಬ್, ಸ್ಟಿಕ್ಕರ್‌ಗಳನ್ನು ಧರಿಸುವಂತಿಲ್ಲ. ಈ ಹಿನ್ನೆಲೆ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದಕ್ಕೆ ಅವರನ್ನು ಕಾಲೆಜು ಗೇಟ್‌ನಲ್ಲೇ ತಡೆದು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಸಂಜನಾ ಗರ್ಲಾನಿ ಬುರ್ಕಾ ಹಾಕಿದ ವಿಡಿಯೋ ವೈರಲ್

    ನಟಿ ಸಂಜನಾ ಗರ್ಲಾನಿ ಬುರ್ಕಾ ಹಾಕಿದ ವಿಡಿಯೋ ವೈರಲ್

    ನಿನ್ನೆಯಷ್ಟೇ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವೊಂದನ್ನು (Video) ಪೋಸ್ಟ್ ಮಾಡಿದ್ದರು ನಟಿ ಸಂಜನಾ ಗರ್ಲಾನಿ (Sanjana Girlani). ಆ ವಿಡಿಯೋದಲ್ಲಿ ಅವರು ಬುರ್ಕಾ (Burqa) ಹಾಕಿಕೊಂಡಿದ್ದರು. ಬುರ್ಕಾ ಹಾಕಿರುವುದಕ್ಕೂ ಅವರು ಕಾರಣ ನೀಡಿದ್ದರು. ಆದರೂ, ಕೆಲವರು ಸಂಜನಾ ವಿರುದ್ಧ ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ. ಆ ವಿಡಿಯೋವನ್ನು ವೈರಲ್ ಮಾಡುವ ಮೂಲಕ ವಿಕೃತ ಆನಂದ ಮೆರೆಯುತ್ತಿದ್ದಾರೆ.

    ಸಂಜನಾ ಗರ್ಲಾನಿ ಇದೀಗ ಮೆಕ್ಕಾ ಮದೀನಾಗೆ (Mecca Madina) ಹೊರಟು ನಿಂತಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತಾನೂ ಹೇಳಿಕೊಂಡಿದ್ದಾರೆ. ಬುರ್ಕಾ ಧರಿಸಿಯೇ ವಿಡಿಯೋ ಮಾಡಿರುವ ಅವರು, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಕಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜೋಡಿಯಾಗಲಿದ್ದಾರೆ ದೀಪಿಕಾ ಪಡುಕೋಣೆ

    ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧನವಾದಾಗಲೇ ಅವರು ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಮೌಲ್ಯಯುತ ವೇಳೆ ಕಳೆಯುತ್ತಿದ್ದಾರೆ. ಅಭಿಮಾನಿಗಳ ಜೊತೆ ಬೆರೆಯುವುದಕ್ಕಾಗಿಯೇ ಅವರು ಯೂಟ್ಯೂಬ್ ಮೂಲಕ ಆಗಾಗ್ಗೆ ವಿಡಿಯೋಗಳನ್ನು ಹಾಕುತ್ತಾರೆ.

    ಮೆಕ್ಕಾ ಮದೀನಾಗೆ ಹೋಗುತ್ತಿರುವ ಕುರಿತು ವಿಡಿಯೋ ಮಾಡಿರುವ ಸಂಜನಾ, ‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ ಹಾಕ್ಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವಿರಲಿ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಸಂಜನಾ ಈ ಹಿಂದೆಯೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಯಿಸಿಕೊಂಡಿರುವ ಕುರಿತು ದಾಖಲೆಯೊಂದು ಹರಿದಾಡುತ್ತಿತ್ತು. 2018ರಲ್ಲೇ ಸಂಜನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ತಮ್ಮ ಸೋಷಿಯಲ್ ಮೀಡಿಯಾ ಹೆಸರುಗಳನ್ನು ಸಂಜನಾ ಅಂತಾನೇ ಇನ್ನೂ ಇಟ್ಟುಕೊಂಡಿದ್ದಾರೆ.

  • ಬುರ್ಕಾ ಧರಿಸಿ ಮೆಕ್ಕಾ ಮದೀನಾಗೆ ಹೊರಟ ನಟಿ ಸಂಜನಾ ಗರ್ಲಾನಿ

    ಬುರ್ಕಾ ಧರಿಸಿ ಮೆಕ್ಕಾ ಮದೀನಾಗೆ ಹೊರಟ ನಟಿ ಸಂಜನಾ ಗರ್ಲಾನಿ

    ಸ್ಯಾಂಡಲ್ ವುಡ್ ಹೆಸರಾಂತ ನಟಿ ಸಂಜನಾ ಗರ್ಲಾನಿ  (Sanjana Girlani) ಮೆಕ್ಕಾ ಮದೀನಾಗೆ (Medina)ಹೊರಟು ನಿಂತಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತಾನೂ ಹೇಳಿಕೊಂಡಿದ್ದಾರೆ. ಬುರ್ಕಾ ಧರಿಸಿಯೇ ವಿಡಿಯೋ ಮಾಡಿರುವ ಅವರು, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಕಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ.

    ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧನವಾದಾಗಲೇ ಅವರು ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ (Aziz Pasha) ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಮೌಲ್ಯಯುತ ವೇಳೆ ಕಳೆಯುತ್ತಿದ್ದಾರೆ. ಅಭಿಮಾನಿಗಳ ಜೊತೆ ಬೆರೆಯುವುದಕ್ಕಾಗಿಯೇ ಅವರು ಯೂಟ್ಯೂಬ್ ಮೂಲಕ ಆಗಾಗ್ಗೆ ವಿಡಿಯೋಗಳನ್ನು ಹಾಕುತ್ತಾರೆ.

    ಮೆಕ್ಕಾ (Mecca) ಮದೀನಾಗೆ ಹೋಗುತ್ತಿರುವ ಕುರಿತು ವಿಡಿಯೋ ಮಾಡಿರುವ ಸಂಜನಾ, ‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ (Burqa) ಹಾಕ್ಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವಿರಲಿ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಸಂಜನಾ ಈ ಹಿಂದೆಯೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಯಿಸಿಕೊಂಡಿರುವ ಕುರಿತು ದಾಖಲೆಯೊಂದು ಹರಿದಾಡುತ್ತಿತ್ತು. 2018ರಲ್ಲೇ ಸಂಜನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ತಮ್ಮ ಸೋಷಿಯಲ್ ಮೀಡಿಯಾ ಹೆಸರುಗಳನ್ನು ಸಂಜನಾ ಅಂತಾನೇ ಇನ್ನೂ ಇಟ್ಟುಕೊಂಡಿದ್ದಾರೆ.

  • ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ರಿಯಾದ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಧಾರ್ಮಿಕ ಉಡುಗೆ ಅಬಯಾವನ್ನು (Abaya) ಸೌದಿ ಅರೇಬಿಯಾದ (Saudi Arabia) ಪರೀಕ್ಷಾ ಕೇಂದ್ರಗಳಲ್ಲಿ (Exam Halls) ನಿಷೇಧಿಸಲಾಗಿದೆ.

    ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ (ETEC) ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಬಯಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ.

    ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ. ಆದರೆ ಇಲ್ಲಿ ಹಿಜಬ್ (Hijab) ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಕೇವಲ ಅಬಯಾವನ್ನು (Abaya) ಮಾತ್ರವೇ ನಿಷೇಧಿಸಲಾಗಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಅಬಯಾ ಎಂಬುದು ಕತ್ತಿನಿಂದ ಕಾಲಿನ ವರೆಗೆ ದೇಹವನ್ನು ಮುಚ್ಚುವ ವಸ್ತ್ರವಾಗಿದೆ. ಇದು ಬುರ್ಖಾವನ್ನೇ ಹೋಲುತ್ತದೆ ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಹಿಜಬ್ ಎಂಬುವುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ. ಸಾಂಪ್ರದಾಯಿಕವಾಗಿ ಅಬಯಾಗಳು ಕಪ್ಪು ಬಣ್ಣದ್ದಾಗಿದ್ದು, ತಿಳಿ ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿಯೂ ಹೆಚ್ಚಿನ ಮಹಿಳೆಯರು ಗಲ್ಫ್ನಾದ್ಯಂತ ಧರಿಸುತ್ತಾರೆ.

    2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು ಇನ್ನು ಮುಂದೆ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಘೋಷಿಸಲಾಗಿತ್ತು. ಆದರೂ ಹೆಚ್ಚಿನ ಮಹಿಳೆಯರು ಅಬಯಾ ಧರಿಸುವುದನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

     

    Live Tv
    [brid partner=56869869 player=32851 video=960834 autoplay=true]

  • ಸ್ವಿಟ್ಜರ್‌ಲೆಂಡ್ ನಲ್ಲಿ ಬುರ್ಖಾ ಬ್ಯಾನ್‌ಗೆ ಪ್ರಸ್ತಾವನೆ – ನಿಯಮ ಉಲ್ಲಂಘಿಸಿದ್ರೆ 83 ಸಾವಿರ ದಂಡ

    ಸ್ವಿಟ್ಜರ್‌ಲೆಂಡ್ ನಲ್ಲಿ ಬುರ್ಖಾ ಬ್ಯಾನ್‌ಗೆ ಪ್ರಸ್ತಾವನೆ – ನಿಯಮ ಉಲ್ಲಂಘಿಸಿದ್ರೆ 83 ಸಾವಿರ ದಂಡ

    ಬರ್ನ್: ಸ್ವಿಟ್ಜರ್‌ಲೆಂಡ್‌ನಲ್ಲಿ (Switzerland) ಬುರ್ಖಾ (Burqa) ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ 83 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಭಾರತದಲ್ಲಿ ಹಿಜಬ್ (Hijab) ಬೇಕು, ನಮ್ಮ ಆಯ್ಕೆ, ಇಸ್ಲಾಂ (Muslim Community) ಅವಿಭಾಜ್ಯ ಅಂಗ ಎಂದು ಹೋರಾಟ ನಡೆಯುತ್ತಿದೆ. ಆದರೆ ಇರಾನ್‌ನಲ್ಲಿ (Iran) ಹಿಜಬ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಹಲವು ಪ್ರತಿಭಟನಾಕಾರರು ಗುಂಡಿಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಚಂಡಿಯಲ್ಲಿ ಪತ್ತೆ

    ಈ ಹೋರಾಟ, ವಾದ-ವಿವಾದಗಳ ನಡುವೆ ಸ್ವಿಟ್ಜರ್‌ಲೆಂಡ್‌ನಲ್ಲಿ ಬುರ್ಖಾ ಬ್ಯಾನ್ ಹಾಗೂ ಈ ನಿಯಮ ಉಲ್ಲಂಘಿಸಿದರೆ 82,000 ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ತಿಂಗಳ ಅಕ್ಟೋಬರ್ 12 ರಂದು ಸ್ವಿಟ್ಜರ್‌ಲೆಂಡ್ ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲಾಗಿದೆ. ಕಳೆದ ವರ್ಷ ಸ್ವಿಟ್ಜರ್‌ಲೆಂಡ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲು ಮತದಾನ ಮಾಡಲಾಗಿತ್ತು. ಇದೀಗ ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಸ್ತಾವನೆ ಕರಡು ಮಸೂದೆಯನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ

    ಮೂಸೂದೆ ಅಂಗೀಕಾರವಾದರೆ ಈ ನಿಯಮದ ಪ್ರಕಾರ ಹಿಜಬ್ ಧರಿಸಲು ಅವಕಾಶವಿದೆ. ಆದರೆ ಕಣ್ಣು ಮಾತ್ರ ಕಾಣಿಸುವ ಮುಖದ ಇತರ ಭಾಗಗಳು ಮುಚ್ಚುವ ವಸ್ತ್ರಗಳನ್ನು ಧರಿಸುವ ಅವಕಾಶವಿಲ್ಲ. ಕಳೆದ ವರ್ಷ ಈ ಪ್ರಸ್ತಾವನೆಗೆ ಸ್ವಿಟ್ಜರ್‌ಲೆಂಡ್‌ನ ಶೇ.51.2 ಮಂದಿ ಬೆಂಬಲಿಸಿದ್ದರು. ಇದೇ ವೇಳೆ ಇನ್ನುಳಿದ ಕೆಲವರು ಪ್ರಮುಖವಾಗಿ ಮುಸ್ಲಿಮರು ಇದನ್ನು ಟೀಕಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಬುರ್ಖಾ ಧರಿಸದಿದ್ದಕ್ಕಾಗಿ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ

    ಮುಂಬೈ: ಬುರ್ಖಾ (Burqa) ಧರಿಸಿ ಮುಸ್ಲಿಂ ಸಂಪ್ರದಾಯ (Muslim Tradition) ಪಾಲನೆ ಮಾಡದೇ ಇದ್ದುದ್ದಕ್ಕಾಗಿ ಪತ್ನಿಯನ್ನ ಅನೇಕ ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಕ್ಸಿ ಡ್ರೈವರ್‌ (Taxi Driver) ಇಕ್ಬಾಲ್ ಶೇಕ್ (36)ನನ್ನು ಬಂಧಿಸಲಾಗಿದೆ. ತನ್ನ ಪತ್ನಿ ಮುಸ್ಲಿಂ ಸಂಪ್ರದಾಯ ಅನುಸರಿಸಲು ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ‘ಆಸ್ಕರ್’ ಗಾಗಿ ಭಾರತದಿಂದ ಕಳುಹಿಸುವ ಸಿನಿಮಾ ಆಯ್ಕೆ ಸಮಿತಿಯಲ್ಲಿ ನಿರ್ದೇಶಕ ಪವನ್ ಒಡೆಯರ್

    ಹಿಂದೂ ಮಹಿಳೆ (Hindu Women) ರೂಪಾಲಿ 2019ರಲ್ಲಿ ಮುಸ್ಲಿಂ ಸಮುದಾಯದ ಇಕ್ಬಾಲ್ ಶೇಖ್‌ನನ್ನು ವಿವಾಹ (Marriage) ವಾದರು. ತಮ್ಮ ಹೆಸರನ್ನು ಜಾರಾ ಎಂದೂ ಬದಲಾಯಿಸಿಕೊಂಡಿದ್ದರು. ದಂಪತಿಗಳಿಗೆ 2020ರಲ್ಲಿ ಒಂದು ಮಗು ಜನಿಸಿತ್ತು. ಕಳೆದ ಕೆಲವು ತಿಂಗಳಿನಿಂದ ಇಕ್ಬಾಲ್ ಶೇಖ್ ಕುಟುಂಬಸ್ಥರು ಬುರ್ಖಾ ಧರಿಸುವಂತೆ ರೂಪಾಲಿಗೆ ಒತ್ತಡ ಹೇರುತ್ತಿದ್ದರಿಂದ ಆಕೆ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ವಿಲಾಸ್ ರಾಥೋಡ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

    ನಿನ್ನೆ (ಸೆ.26) ವಿಚ್ಛೇದನ ಕೇಳುವುದಕ್ಕಾಗಿ ಇಕ್ಬಾಲ್, ರೂಪಾಲಿಯನ್ನು ಮನೆಗೆ ಕರೆದಿದ್ದನು. ನಂತರ ಮಗು ಪಾಲನೆ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ರಾತ್ರಿ 10 ಗಂಟೆ ಸುಮಾರಿಗೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ ಆಕೆಯನ್ನು ಎಳೆದೊಯ್ದು ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಪತ್ನಿ ಸ್ಥಳದಲ್ಲೇ ಮೃತಪಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ (IPC Section) 302 (ಕೊಲೆ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]