Tag: Burnt

  • ಮರ್ಯಾದಾ ಹತ್ಯೆ – ಅನ್ಯ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳನ್ನೇ ಸುಟ್ಟು ಕೊಂದ ಕುಟುಂಬಸ್ಥರು

    ಮರ್ಯಾದಾ ಹತ್ಯೆ – ಅನ್ಯ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳನ್ನೇ ಸುಟ್ಟು ಕೊಂದ ಕುಟುಂಬಸ್ಥರು

    ಲಕ್ನೋ: ಅನ್ಯ ಜಾತಿ ಹುಡುಗನನ್ನು ಪ್ರೀತಿ ಮಾಡಿದ್ದ, ಬ್ರಾಹ್ಮಣ ಜಾತಿಯ ಹುಡುಗಿಯನ್ನು ಕುಟುಂಬಸ್ಥರೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ನಡೆದಿದ್ದೇನು?: ಅನ್ಯ ಜಾತಿ ಯುವಕನನ್ನು 20 ವರ್ಷದ ಯುವತಿ ಪ್ರೀತಿಸುತ್ತಿದ್ದಳು. ಬ್ರಾಹ್ಮಣ ಜಾತಿಗೆ ಸೇರಿದ ಯುವತಿ, ಜಾಟ್ ಸಮುದಾಯಕ್ಕೆ ಸೇರಿದ ಸುಗಮ್‌ನೊಂದಿಗೆ  ಓಡಿ ಹೋಗಿದ್ದಳು. ಇದರಿಂದಾಗಿ ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಯುವತಿ ಕುಟುಂಬದ ಸದಸ್ಯರು ಎಫ್‌ಐಆರ್ ಕೂಡಾ ದಾಖಲಿಸಿದ್ದರು. ನಂತರ ಈ ದಂಪತಿ ಗುರುವಾರ ಮನೆಗೆ ವಾಪಸ್ಸಾಗಿದ್ದಾರೆ. ಮಾರನೇ ದಿನ ಯುವತಿ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳುಗಾರರ ಪಕ್ಷ: ಅಖಿಲೇಶ್ ಯಾದವ್

    ಯುವಕನ ಮೃತದೇಹ ಶಾಮ್ಲಿ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ತನ್ನ ಪ್ರೇಯಸಿಯ ಹತ್ಯೆಯಾಗಿರಬಹುದೆಂಬ ಶಂಕೆಯಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದ. ಬೊರಾಕಾಳ ಠಾಣೆ ವ್ಯಾಪ್ತಿಯ ಸಿಸೌಲಿ ಹಳ್ಳಿಯ ನೀರು ತುಂಬಿದ ಹೊಲದಲ್ಲಿ ಅರ್ಧ ಬೆಂದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾದ ನಂತರ ಮಾರ್ಯಾದ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸ್ ನಿತೀನ್ ಕುಮಾರ್ ಹೇಳಿದ್ದಾರೆ.

    POLICE JEEP

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇರೆಗೆ ಯುವತಿ ತಾಯಿ ಮತ್ತು ಚಿಕ್ಕಪ್ಪನ್ನು ಬಂಧಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.

  • ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ- ಇಬ್ಬರು ಸಜೀವ ದಹನ

    ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ- ಇಬ್ಬರು ಸಜೀವ ದಹನ

    ವಿಜಯಪುರ: ಪ್ಲಾಸ್ಟಿಕ್ ಅಂಗಡಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಈ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಬಸವನಬಾಗೇವಾಡಿ ಕ್ರಾಸ್ ಬಳಿ ಘಟನೆ ನಡೆದಿದೆ.

    ಅಶೋಕ ದೇಸ್ನೂಯಿ(25), ಲಿಂಬಾರಾಮ ದೇಸ್ನೂಯಿ(35) ಸಜೀವ ದಹನವಾದ ದುರ್ದೈವಿಗಳಾಗಿದ್ದಾರೆ.  ಈ ಘಟನೆಯಿಂದಾಗಿ ಹೆದ್ದಾರಿ ಪಕ್ಕದಲ್ಲಿದ್ದ ಎರಡು ಪ್ಲಾಸ್ಟಿಕ್ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ತಡರಾತ್ರಿ ಈ ಘಟನೆ ನಡೆದಿದ್ದು, ಹೊತ್ತಿಕೊಂಡ ಬೆಂಕಿ ಕೆನ್ನಾಲಿಗೆಗೆ ಇಬ್ಬರು ಬಲಿಯಾಗಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಪ್ಲಾಸ್ಟಿಕ್ ಅಂಗಡಿ ಸುಟ್ಟು ಭಸ್ಮವಾಗಿದೆ. ರಾತ್ರಿ ಅಂಗಡಿಯಲ್ಲೇ ಮಲಗಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದರಿಂದ ಸಾಲು ಸಾಲಾಗಿದ್ದ ಏಳೆಂಟು ಪ್ಲಾಸ್ಟಿಕ್ ಅಂಗಡಿಗಳ ರಕ್ಷಣೆಯಾಗಿವೆ. ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

  • ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ನವದೆಹಲಿ: ಅಮೆರಿಕಾರದ ಮೆಂಫಿಸ್ ಉಪನಗರದ ಟೆನ್ನೆಸ್ಸಿಯಲ್ಲಿ ನಡೆದ ಬೆಂಕಿ ದುರುಂತದಲ್ಲಿ ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಸೇರಿದಂತೆ ಮತ್ತೋರ್ವ ಮಹಿಳೆ ಸಜೀವ ದಹನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತೆಲಂಗಾಣ ಮೂಲದ ಆರನ್ ನಾಯಕ್ (17), ಶರೋನ್ ನಾಯಕ್ (14) ಹಾಗೂ ಜಾಯ್ ನಾಯಕ್ (15) ಒಡಹುಟ್ಟಿದವರಾಗಿದ್ದಾರೆ. 46 ವರ್ಷದ ಕ್ಯಾರಿ ಕಾಡ್ರಿಟ್ ಸಹ ಬೆಂಕಿ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

    ಭಾನುವಾರ ರಾತ್ರಿ 11 ಸುಮಾರಿಗೆ ಕ್ಯಾರಿ ಕಾಡ್ರಿಟ್ ವಾಸಿಸುತ್ತಿದ್ದ ಮನೆಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಕ್ಯಾರಿ ಕಾಡ್ರೀಟ್ ಸೇರಿದಂತೆ ಮೂವರು ಒಡಹುಟ್ಟಿದವರೂ ಸಹ ಮೃತಪಟ್ಟಿದ್ದರು. ತೆಲಂಗಾಣ ಮೂಲದ ಮೂವರು ಮಕ್ಕಳು ಅಮೆರಿಕಾದ ದಂಪತಿಗಳ ಜೊತೆ ವಾಸವಾಗಿದ್ದರು ಎನ್ನುವ ಮಾಹಿತಿಯನ್ನು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

    ಘಟನೆ ಕುರಿತು ಫ್ರೆಂಚ್ ಕ್ಯಾಂಪ್ ಸಮುದಾಯ ತನ್ನ ಫೇಸ್ಬುಕ್ ಖಾತೆಯಲ್ಲಿ, ಪಾಸ್ಟರ್ ನಾಯ್ಕ್ ಮತ್ತು ಆಕೆಯ ಪತ್ನಿಗಾಗಿ ಪ್ರಾರ್ಥಿಸೋಣ. ದಂಪತಿ ತಮ್ಮ ಮೂರು ಅಮೂಲ್ಯ ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸಿದ್ದರು. ಆದರೆ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಈ ಮೂರು ಮಕ್ಕಳನ್ನು ಇಡೀ ಪಟ್ಟಣವೇ ಪ್ರೀತಿಸುತ್ತಿತ್ತು. ಆದರೆ ಅವರ ಅಕಾಲಿಕ ಮರಣದಿಂದಾಗಿ ಇಡೀ ಪಟ್ಟಣವೇ ದು:ಖದಲ್ಲಿ ಮುಳುಗಿದೆ. ನಮಗೆ ಗೊತ್ತು ಹೆತ್ತವರ ನೋವನ್ನು ಅಳೆಯಲು ಸಾಧ್ಯವಿಲ್ಲವೆಂದು ಬರೆದು ಪೋಸ್ಟ್ ಮಾಡಿದೆ.

    ಮಾಹಿತಿಗಳ ಪ್ರಕಾರ ಮಕ್ಕಳು ಸ್ಥಳೀಯ ಚರ್ಚ್ ಮಿಷನರಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರನ್ನು ಡ್ಯಾನಿಯಲ್ ಕಾಡ್ರಿಟ್ ದಂಪತಿ ನೋಡಿಕೊಳ್ಳುತ್ತಿದ್ದರು. ಆದರೆ ಬೆಂಕಿ ದುರಂತದಲ್ಲಿ ಡ್ಯಾನಿಯಲ್ ಹಾಗೂ ಅವರ 13 ವರ್ಷದ ಕೋಲ್ ಮಾತ್ರ ಬದುಕುಳಿದಿದ್ದಾರೆ. ಸದ್ಯ ಚರ್ಚ್ ಮಕ್ಕಳು ತೆಲಂಗಾಣ ಮೂಲದವರೆಂದು ಮಾತ್ರ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    – ಪಿಎಸ್‍ಐ ಕನಸು ಕಂಡಿದ್ದ ಬಾಲಕಿ ಕನಸಾಗಿಯೇ ಉಳಿಯಿತು

    ಲಕ್ನೋ: ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ತಡೆದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನುಮೀಲ್ ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ನುಮೀಲ್ ಗ್ರಾಮದ ಸಂಜಾಲಿ ಮೃತ ವಿದ್ಯಾರ್ಥಿನಿ. ಸಂಜಾಲಿಯು ಅಶಾರ್ಫಿ ದೇವಿ ಚಿಡ್ಡಾ ಸಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವರದಿಯಾಗಿದೆ.

    ಘಟನೆಯ ವಿವರ:
    ವಿದ್ಯಾರ್ಥಿನಿ ಸಂಜಾಲಿ ಎಂದಿನಂತೆ ಮಂಗಳವಾರ ಶಾಲೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸುಟ್ಟು ಬಿದ್ದಿದ್ದ ಸಂಜಾಲಿಯನ್ನು ನೋಡಿದ ಕೆಲ ಸ್ಥಳೀಯರು ಆಗ್ರಾದ ಎಸ್‍ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ಸಂಜಾಲಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ದಲಿತರಾಗಿರುವ ನಾವು ನೆರೆಹೊರೆಯವರ ಜೊತೆಗೆ ಜಗಳವಾಡಿಕೊಂಡಿಲ್ಲ, ಯಾರೊಬ್ಬರೊಂದಿಗೂ ವೈರತ್ವ ಹೊಂದಿಲ್ಲ. ನಮ್ಮ ಮಗಳನ್ನು ಕೊಲೆಗೈದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

    ಐಪಿಎಸ್ ಅಧಿಕಾರಿಯಾಗಬೇಕು ಅಂತ ಸಂಜಾಲಿ ಕನಸು ಕಂಡಿದ್ದಳು. ಆದರೆ ದುಷ್ಕರ್ಮಿಗಳು ಆಕೆಯನ್ನು ಬಲಿಪಡೆದು ಕನಸನ್ನು ಕೊಂದು ಹಾಕಿದರು ಎಂದು ಪೋಷಕರು ಮೃತ ಮಗಳನ್ನು ನೆನೆದು ಕಣ್ಣಿರು ಇಟ್ಟಿದ್ದಾರೆ.

    ಉತ್ತರ ಪ್ರದೇಶ ಸರ್ಕಾರವು ಮೃತಳ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ನವದೆಹಲಿ: ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಸಜೀವವಾಗಿ ಸುಟ್ಟುಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಅಧಿಕಾರಿ, ಕಾರ್ಖಾನೆಯಲ್ಲಿ ಕಾರ್ಮಿಕರು ಬಟ್ಟೆಗಳನ್ನು ಸ್ಟೀಮ್ ಮಾಡುವ ಮೂಲಕ ಒಣಗಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಬರುತ್ತಿರುವಾಗ ಓರ್ವ ಬಲಶಾಲಿ ವ್ಯಕ್ತಿ ಬಾಗಿಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದಾಗಿ ನಾಲ್ವರು ಹೊರಬರಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆ. ಕಾರ್ಖಾನೆಯಯಲ್ಲಿ ಒಂದೇ ಒಂದು ದ್ವಾರವನ್ನು ಹೊರತುಪಡಿಸಿ, ಬೇರೆ ಯಾವುದೇ ಮಾರ್ಗಗಳು ಇರಲಿಲ್ಲವೆಂದು ತಿಳಿಸಿದ್ದಾರೆ.

    ಮೃತರನ್ನು ಬಗಾನ್ ಪ್ರಸಾದ್(55), ಆರ್.ಎಂ.ನರೇಶ್(40), ಆರತಿ (20) ಹಾಗೂ ಆಶಾ(40) ಎಂದು ಗುರುತಿಸಲಾಗಿದ್ದು, 25 ವರ್ಷದ ಅಜಿತ್ ಎಂಬವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews