Tag: Burn Straw

  • ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ನವದೆಹಲಿ: ದೆಹಲಿ ( Delhi) ಮತ್ತು ಎನ್‌ಸಿಆರ್ ಭಾಗದಲ್ಲಿ ಉದ್ಭವಿಸುವ ವಾಯು ಮಾಲಿನ್ಯ (Air Pollution ಸಮಸ್ಯೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ (Hariyana) ಮತ್ತು ಪಂಜಾಬ್ (Punjab) ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಮುಂದಿನ ವಿಚಾರಣೆಗೆ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಾಗಿ ಕೋರ್ಟ್ ಆದೇಶ ಪಾಲನೆ ಮಾಡದಿರಲು ಕಾರಣಗಳೇನು ಎಂದು ವಿವರಿಸುವಂತೆ ತಾಕೀತು ಮಾಡಿದೆ.

    ಎರಡೂ ರಾಜ್ಯಗಳಲ್ಲಿ ಹುಲ್ಲು ಸುಡುವ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಇದರ ವಿರುದ್ಧ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಹರಿಯಾಣ ಸರ್ಕಾರ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಸುಳ್ಳು ಮಾಹಿತಿಗಳಿವೆ. ಹುಲ್ಲು ಸುಡುವ ಪ್ರಕರಣ ವರದಿಯಾಗಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸ್ಯಾಟಲೈಟ್ ಚಿತ್ರಗಳಲ್ಲಿ ಬೆಂಕಿ ಹೊತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ನಾಚಿಕೆಯೇ ಎಂದು ಕೋರ್ಟ್ ಪ್ರಶ್ನಿಸಿತು. ಇದನ್ನೂ ಓದಿ: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ

    ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯ ದಾಖಲಾಗಿರುವ ದೂರುಗಳ ವಿರುದ್ಧ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕೋರ್ಟ್ ಆದೇಶ ಪಾಲನೆ ಮಾಡದಿದ್ದರೆ ಅವರ ವಿರುದ್ಧ ನ್ಯಾಯಂಗ ನಿಂದನೆ ದಾಖಲು ಮಾಡಬೇಕಾಗುತ್ತದೆ. ವಾಯು ಮಾಲಿನ್ಯ ರಾಜಕೀಯ ವಿಷಯವಲ್ಲ, ಇಂತಹ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರುವವರಿಗೂ ನಾವು ಸಮನ್ಸ್ ಮಾಡಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿತು.  ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಪಂಜಾಬ್ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕೆ ಸಮರ್ಪಕ ಕೆಲಸ ಮಾಡಿಲ್ಲ. ಹೀಗಾಗಿ ಮುಂದಿನ ವಿಚಾರಣೆ ವೇಳೆ ಹರಿಯಾಣ ಮತ್ತು ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಾಗಬೇಕು. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ವಹಿಸಿಲ್ಲ ಎಂಬುದನ್ನು ವಿವರಿಸಬೇಕು ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ

    ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ವಾಯು ಗುಣಮಟ್ಟ ನಿರ್ವಹಣಾ ಆಯೋಗವು ವಿಶೇಷವಾಗಿ ಹುಲ್ಲು ಸುಡುವಿಕೆಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶಗಳನ್ನು ಪಾಲಿಸದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ – ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

  • ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ನವದೆಹಲಿ: ಪ್ರತಿ ವರ್ಷವೂ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ಹೆಚ್ಚುತ್ತಿದೆ, ತೀವ್ರ ವಾಯು ಮಾಲಿನ್ಯ ಎದುರಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವೇನು? ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನೆ ಮಾಡಿದೆ.

    ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಕ್ಕೆ (Rajasthan Government)  ಚಾಟೀ ಬೀಸಿದೆ.

    ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆಯನ್ನು ರಾಜಕೀಯ ಚರ್ಚೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಮಕ್ಕಳು ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ (Health Problem) ಎದುರಿಸುತ್ತಿದ್ದಾರೆ, ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಬೇಕು ಮತ್ತು ಶುಕ್ರವಾರದೊಳಗೆ ಪರಿಸ್ಥಿತಿ ಸುಧಾರಣೆಗೆ ಕ್ರಮವಹಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

    ಕೃಷಿ ತಾಜ್ಯ ಅಥವಾ ಹುಲ್ಲು ಸುಡುವಿಕೆ 20-50 ದಿನಗಳವರೆಗೆ ಮಾತ್ರ ಸಂಭವಿಸುತ್ತದೆ ಎಂದು ಪಂಜಾಬ್ ಎ‌ಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಬಗ್ಗೆ ನಮಗೆ ಬೇಕಾಗಿಲ್ಲ, ಹುಲ್ಲು ಸುಡುವುದು ಕೂಡಲೇ ನಿಲ್ಲಬೇಕು, ಎಲ್ಲ ರಾಜ್ಯಗಳು ಬೆಂಕಿಯನ್ನು ನಿಲ್ಲಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ. ನಿಮ್ಮ ಸ್ಥಳೀಯ ಠಾಣೆಯ ಎಸ್‌ಎಚ್‌ಒ ಸಹ ಇದಕ್ಕೆ ಜವಾಬ್ದಾರಿಯಾಗಿರಬೇಕು. ಇಂದಿನಿಂದ ಅವರು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ತಾಕೀತು ಮಾಡಿತು.

    ವಿಚಾರಣೆಯ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ವಾದಿಸಿ, ದೆಹಲಿಯಲ್ಲಿ ಸ್ಥಾಪಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹಿಂದಿನ ನಿರ್ದೇಶನಗಳ ನಂತರ ಅಳವಡಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಾವು ಟವರ್‌ಗಳು ಕಾರ್ಯನಿರ್ವವಂತೆ ಮಾಡಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿತು. ಇದನ್ನೂ ಓದಿ: ಇಸ್ರೇಲ್‌ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ

    ಇನ್ನೂ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಪೀಠ, ದೆಹಲಿ ಸರ್ಕಾರದ ಮಾಲಿನ್ಯ ನಿಯಂತ್ರಣ ಕ್ರಮಗಳು, ಅದರಲ್ಲೂ ವಿಶೇಷವಾಗಿ ಬೆಸ-ಸಮ ಯೋಜನೆಗೆ ಎಂದಾದರೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆಯೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತು. ದೀಪಾವಳಿಯ ನಂತರ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ಈ ಯೋಜನೆ ಎಂದಾದರೂ ಯಶಸ್ವಿಯಾಗಿದಿಯೇ? ಎಂದು ಪ್ರಶ್ನಿಸಿತು. ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿದೆ: ಆರೋಪಿ ಟ್ರೋಲ್‌ ಮಿನಿಸ್ಟರ್‌ ಖರ್ಗೆ ಆಪ್ತ ಎಂದ ಬಿಜೆಪಿ

    ದೆಹಲಿ ಸರ್ಕಾರ ಪರ ವಾದ ಮಂಡಿಸಿದ ವಕೀಲರು, ಮೂರು‌ ಹಂತಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಮತ್ತು 4ನೇ ಹಂತದಲ್ಲಿ‌ ಕೈಗೊಳ್ಳಲಿರುವ ಪ್ರಯತ್ನಗಳೇನು? ಎಂದು ಮನವರಿಕೆ ಮಾಡಿದರು‌. ವರ್ಕ್‌ಫ್ರಮ್‌ ಹೋಮ್‌ ವಾಹನಗಳ ನಿರ್ಬಂಧ ಮತ್ತು ಮರಗಳಿಗೆ ನೀರಿನ ಸಿಂಪಡಿಕೆ‌ ಬಗ್ಗೆ ವಿವರಿಸಿದರು. ಶುಕ್ರವಾರ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಸಿಎಂಗೆ ಮನವಿ: ಪರಮೇಶ್ವರ್