Tag: burkha

  • ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

    ಹೈದರಾಬಾದ್:‌ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆದು ವೋಟರ್‌ ಐಡಿ ತೋರಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ವಿರುದ್ಧ ಪ್ರಕರಣ ದಾಖಲಾಗಿದೆ.

    ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ (Loksabha Elections 2024) ಸ್ಪರ್ಧಿಸುತ್ತಿರುವ ಮಾಧವಿ ಲತಾ ಅವರು ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರ ಬಳಿ ಹೋಗಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು.

    ವೈರಲ್ ಆದ ವೀಡಿಯೊದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಪರಿಶೀಲನೆಗಾಗಿ ತಮ್ಮ ಬುರ್ಖಾ ತೆಗೆಯುವಂತೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ನೀವು ಎಷ್ಟು ವರ್ಷಗಳ ಹಿಂದೆ ಇದನ್ನು (Voter ID) ಮಾಡಿದ್ದೀರಿ ಎಂದು ಇದೇ ವೇಳೆ ಮುಸ್ಲಿಂ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಹೆಚ್ಚಿನ ಪರಿಶೀಲನೆಗಾಗಿ ಆಧಾರ್‌ ಕಾರ್ಡ್‌ (Adhar Card) ಕೂಡ ಕೊಡುವಂತೆ ಮನವಿ ಮಾಡಿದ್ದಾರೆ.

    ಈ ದೃಶ್ಯ ವೈರಲ್‌ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಾಧವಿ ಲತಾ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಒಬ್ಬಳು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ಮುಸ್ಲಿಂ ಮಹಿಳೆಯರ ಬಳಿ ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನು ಪರುಷ ಅಲ್ಲ, ತಾನೂ ಮಹಿಳೆಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

    ದಯವಿಟ್ಟು ನಾನು ಐಡಿ ಕಾರ್ಡ್‌ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ ಎಂದು ತುಂಬಾ ವಿನಮ್ರತೆಯಿಂದ ಅವರಲ್ಲಿ ವಿನಂತಿಸಿದ್ದೇನೆ. ಆದರೆ ಯಾರಿಗಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಬೇಕು ಎಂದು ಬಯಸಿದರೆ, ಅವರಿಗೆ ಭಯವಿದೆ ಎಂದು ಅರ್ಥ ಅಂತಾ ಮಾಧವಿ ಲತಾ ತಿಳಿಸಿದ್ದಾರೆ. ಇತ್ತ ವೀಡಿಯೋ ವೈರಲ್‌ ಆಗುತ್ತಾ ವಿವಾದವಾಗುತ್ತಿದ್ದಂತೆಯೇ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಈ ಹಿಂದೆ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯತ್ತ ಬಾಣ ಬಿಡುವ ಕ್ರಿಯೆಯನ್ನು ಅನುಕರಿಸುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಮಾಧವಿ ಲತಾ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ಮಾಧವಿ ಲತಾ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳನ್ನು ತಿಳಿಸುವ 295A ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

    ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದಾರೆ.

  • ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ: ತೆಲಂಗಾಣ ಗೃಹ ಸಚಿವ

    ಹೈದರಾಬಾದ್: ತೆಲಂಗಾಣದ ಗೃಹ ಸಚಿವ ಮಹಮೂದ್ ಅಲಿ (Mahmood Ali) ಯವರು ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾರೆ.

    ಹೈದರಾಬಾದ್‍ (Hyderabad) ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿ (Women’s Degree College in Santosh Nagar) ನಲ್ಲಿ ವಿದ್ಯಾರ್ಥಿನಿಯರನ್ನು ಬುರ್ಕಾ ತೆಗೆದಿರಿಸಿ ಪರೀಕ್ಷೆ ಬರೆಯಲಾಗಿತ್ತು. ಈ ವಿಚಾರ ಅಲ್ಲಿ ಭಾರೀ ಚರ್ಚೆಗೀಡಾಗಿತ್ತು. ಈ ಸಂಬಂಧ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಗೃಹ ಸಚಿವರು ಕೂಡ ಪ್ರತಿಕ್ರಿಯಿಸಿ, ಮಹಿಳೆಯರು ಸಾಧ್ಯವಾದಷ್ಟು ದೇಹವನ್ನು ಮುಚ್ಚಿಕೊಂಡು ಬರಬೇಕು. ಮಹಿಳೆಯರು ಧರಿಸುವ (Women Dress) ಸಣ್ಣ ಸಣ್ಣ ಉಡುಪುಗಳಿಂದ ಮಾತ್ರ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ನಮ್ಮದು ಸಂಪೂರ್ಣ ಜಾತ್ಯಾತೀತ ನೀತಿಯಾಗಿದೆ. ಪ್ರತಿಯೊಬ್ಬರಿಗೂ ಯಾವ ಬಟ್ಟೆ ಬೇಕಾದರೂ ಧರಿಸುವ ಹಕ್ಕಿದೆ. ಆದರೆ ಹಿಂದೂ ಅಥವಾ ಇಸ್ಲಾಮಿಕ್ ಪದ್ಧತಿಗಳ ಪ್ರಕಾರವೇ ಬಟ್ಟೆ ತೊಡಬೇಕು. ಯುರೋಪಿಯನ್ ಸಂಸ್ಕೃತಿಯನ್ನು ಅನುಸರಿಸಬಾರದು. ನಾವು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳೆಯರು ಸಣ್ಣ ಉಡುಪುಗಳನ್ನು ಧರಿಸಬಾರದು ಮತ್ತು ಅವರು ಸಾಧ್ಯವಾದಷ್ಟು ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಿದರು.

    ಕಾಲೇಜಿನಲ್ಲಿ ನಡೆದಿದ್ದೇನು..?: ರಂಗಾ ರೆಡ್ಡಿ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಬುರ್ಕಾ ತೆಗೆದು ಪರೀಕ್ಷಾ ಕೊಠಡಿ ತೆರಳುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಮಾತ್ರ ಬುರ್ಕಾ ಹಾಕಿಕೊಂಡೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದರು. ಈ ಹಿನ್ನೆಲಯ್ಲಲಿ ಸುಮಾರು ಅರ್ಧ ಗಂಟೆ ಕಾಲ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಲಾಗಿತ್ತು. ಕೊನೆಗೆ ಬುರ್ಕಾ (Burqa) ತೆಗೆದೇ ಪರೀಕ್ಷೆ ಬರೆದಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಬುರ್ಕಾ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ನಮ್ಮ ಪೋಷಕರು ಗೃಹ ಸಚಿವ ಮಹಮೂದ್ ಅಲಿ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • ಕರ್ನಾಟಕ ಚುನಾವಣೆ: ‘ದಿ ಕೇರಳ ಸ್ಟೋರಿ’ ಸಿನಿಮಾ ಪಕ್ಷವೊಂದಕ್ಕೆ ಅಸ್ತ್ರವಾಗತ್ತಾ?

    ಕರ್ನಾಟಕ ಚುನಾವಣೆ: ‘ದಿ ಕೇರಳ ಸ್ಟೋರಿ’ ಸಿನಿಮಾ ಪಕ್ಷವೊಂದಕ್ಕೆ ಅಸ್ತ್ರವಾಗತ್ತಾ?

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಒಂದಷ್ಟು ಲಾಭ ಪಡೆದಿದ್ದ ಬಿಜೆಪಿ (BJP) ಇದೀಗ ಮತ್ತೊಂದು ಸಿನಿಮಾವನ್ನು ವಿರೋಧಿಗಳಿಗೆ ಅಸ್ತ್ರವಾಗಿ ಬಳಸುತ್ತಿದೆ ಎನ್ನುವ ಮಾತು ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Elections) ಹೊಸ್ತಿಲಲ್ಲೇ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ರಿಲೀಸ್ ಆಗುತ್ತಿದ್ದು, ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎನ್ನುವ ಚರ್ಚೆ ಶುರುವಾಗಿದೆ.

    ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರ ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

    ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

    ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

  • ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರ ಆಗಲ್ಲ: ವಿವಾದಕ್ಕೀಡಾದ ಮಲಯಾಳಂ ಸಿನಿಮಾ

    ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರ ಆಗಲ್ಲ: ವಿವಾದಕ್ಕೀಡಾದ ಮಲಯಾಳಂ ಸಿನಿಮಾ

    ದಿ ಕಾಶ್ಮೀರ್ ಫೈಲ್ಸ್ ನಂತರ ಮಲಯಾಳಂನ ‘ದಿ ಕೇರಳ ಸ್ಟೋರಿ’ (The Kerala Story) ಹೆಚ್ಚು ಸದ್ದು ಮಾಡುತ್ತಿದೆ. ಹಿಂದೂ (Hindu) ಹುಡುಗಿಯೊಬ್ಬಳು ಮುಸ್ಲಿಂ (Muslim) ಧರ್ಮಕ್ಕೆ ಮತಾಂತರಗೊಂಡು ಆಕೆ ಉಗ್ರ ಸಂಘಟನೆಯನ್ನು ಸೇರುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದ್ದು, ನಿನ್ನೆಯಷ್ಟೇ ಬಿಡುಗಡೆಯಾಗಿರುವ ಟ್ರೈಲರ್ ವಿವಾದಕ್ಕೀಡಾಗಿದೆ (Controversy). ಅದರಲ್ಲೂ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗಿಯ ಜೊತೆ ಆಡುವ ಮಾತು ಅನೇಕರ ಕೋಪಕ್ಕೆ ಕಾರಣವಾಗಿದೆ.

    ಆಕೆ ಶಾಲಿನಿ ಉನ್ನೀಕೃಷ್ಣ. ಕೇರಳದ ಹಿಂದೂ ಹುಡುಗಿ. ಅಪಾರ ಶಿವನ ಭಕ್ತೆ. ಶಿಕ್ಷಣಕ್ಕಾಗಿ ಹಾಸ್ಟೇಲ್ ಸೇರಿಒಕೊಳ್ಳುತ್ತಾಳೆ. ಅಲ್ಲಿ ಮುಸ್ಲಿಂ ಹುಡುಗಿಯೊಬ್ಬಳ ಪರಿಚಯ. ನಂತರ ಶಾಲಿನಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಹುಡುಗಿಯು ‘ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರವಾಗಲ್ಲ, ಯಾಕೆಂದರೆ ಅಲ್ಲಾಹ್ ನಮ್ಮನ್ನು ಕಾಯುತ್ತಿರುತ್ತಾನೆ’ ಎಂದು ಡೈಲಾಗ್ ಹೇಳಿಸಿದ್ದಾರೆ. ಈ ಮಾತೇ ಹಿಂದೂ ಹುಡುಗಿಯ ಮೇಲೆ ಪರಿಣಾಮ ಬೀರಿ, ಮತಾಂತರವಾಗುತ್ತಾಳೆ. ಇಷ್ಟೇ ಅಲ್ಲದೇ, ಮತಾಂತರಗೊಂಡ ಆ ಹುಡುಗಿ ಉಗ್ರ ಸಂಘಟನೆ ಸೇರುತ್ತಾಳೆ.

    ಇಂತಹ ದೃಶ್ಯಗಳನ್ನು ಹೊಂದಿರುವ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಈ ಟ್ರೈಲರ್ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಕೇಳಿ ಬರುತ್ತಿವೆ. ನಿನ್ನೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ‘ದಿ ಕೇರಳ ಸ್ಟೋರಿ’ ಟ್ರೆಂಡಿಂಗ್ ನಲ್ಲಿದ್ದು, ಈ ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಇದನ್ನೂ ಓದಿ:ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

    ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

  • ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್

    ರಿಯಾದ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಧಾರ್ಮಿಕ ಉಡುಗೆ ಅಬಯಾವನ್ನು (Abaya) ಸೌದಿ ಅರೇಬಿಯಾದ (Saudi Arabia) ಪರೀಕ್ಷಾ ಕೇಂದ್ರಗಳಲ್ಲಿ (Exam Halls) ನಿಷೇಧಿಸಲಾಗಿದೆ.

    ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ (ETEC) ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಬಯಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ.

    ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ. ಆದರೆ ಇಲ್ಲಿ ಹಿಜಬ್ (Hijab) ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಕೇವಲ ಅಬಯಾವನ್ನು (Abaya) ಮಾತ್ರವೇ ನಿಷೇಧಿಸಲಾಗಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

    ಅಬಯಾ ಎಂಬುದು ಕತ್ತಿನಿಂದ ಕಾಲಿನ ವರೆಗೆ ದೇಹವನ್ನು ಮುಚ್ಚುವ ವಸ್ತ್ರವಾಗಿದೆ. ಇದು ಬುರ್ಖಾವನ್ನೇ ಹೋಲುತ್ತದೆ ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಹಿಜಬ್ ಎಂಬುವುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ. ಸಾಂಪ್ರದಾಯಿಕವಾಗಿ ಅಬಯಾಗಳು ಕಪ್ಪು ಬಣ್ಣದ್ದಾಗಿದ್ದು, ತಿಳಿ ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿಯೂ ಹೆಚ್ಚಿನ ಮಹಿಳೆಯರು ಗಲ್ಫ್ನಾದ್ಯಂತ ಧರಿಸುತ್ತಾರೆ.

    2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು ಇನ್ನು ಮುಂದೆ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಘೋಷಿಸಲಾಗಿತ್ತು. ಆದರೂ ಹೆಚ್ಚಿನ ಮಹಿಳೆಯರು ಅಬಯಾ ಧರಿಸುವುದನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

     

    Live Tv
    [brid partner=56869869 player=32851 video=960834 autoplay=true]

  • ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು

    ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು

    ಮಂಗಳೂರು: ಬುರ್ಕಾ (Burkha) ಧರಿಸಿ ಹಿಂದಿ ಐಟಂ ಸಾಂಗ್‌ಗೆ (Item Song) ಸ್ಟೆಪ್ ಹಾಕಿದ ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ಮಂಗಳೂರಿನ ವಾಮಂಜೂರು ಸೇಂಟ್‌ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

    ಮುಸ್ಲಿಂ ವಿದ್ಯಾರ್ಥಿಗಳು (Muslim Students) ಕಾಲೇಜಿನ ವಿದ್ಯಾರ್ಥಿ ಘಟಕ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡಿದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ

    ಸಾಮಾಜಿಕ ಜಾಲತಾಣದಲ್ಲಿ (Social Media) ಮುಸ್ಲಿಂ ವಿದ್ಯಾರ್ಥಿಗಳ ನೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಾಂಶುಪಾಲ ಡಾ.ಸುಧೀರ್ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌- ಬಿಜೆಪಿ ನಡುವಿನ ಮತದ ಅಂತರ ಕೇವಲ ಶೇ.0.9 – ಇಲ್ಲಿದೆ ಹಿಮಾಚಲದ ವೋಟ್‌ ಲೆಕ್ಕ

    ಕೆಲ ದಿನಗಳ ಹಿಂದೆಯಷ್ಟೇ ಹಿಜಬ್ (Hijab) ಹೋರಾಟ ವ್ಯಾಪಿಸಿದ ಬಳಿಕ ಶಾಲಾ ಕಾಲೇಜುಗಳಲ್ಲಿ ಹಿಜಬ್ ಹಾಗೂ ಬುರ್ಕಾ ಧರಿಸುವುದನ್ನು ನಿಷೇಧಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಕಾಬೂಲ್: ವಿದ್ಯಾರ್ಥಿನಿಯರು (Students) ಬುರ್ಖಾ (Burkha) ಧರಿಸಿಲ್ಲ ಅಂತ ಅಫ್ಘಾನಿಸ್ತಾನದ (Afghanistan) ವಿಶ್ವವಿದ್ಯಾಲಯಕ್ಕೆ (University) ಪ್ರವೇಶ ನೀಡದ ತಾಲಿಬಾನ್ (Taliban) ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ವೇಳೆ ತಾಲಿಬಾನ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯರಿಗೆ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವರದಿಗಳ ಪ್ರಕಾರ ಈ ಘಟನೆ ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್ ಹೊರಗಡೆ ಭಾನುವಾರ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಹಲವು ವಿದ್ಯಾರ್ಥಿನಿಯರು ವಿವಿ ಪ್ರವೇಶಕ್ಕಾಗಿ ಗೇಟ್ ಹೊರಗಡೆ ಕಾದು ನಿಂತಿದ್ದಾರೆ. ಈ ವೇಳೆ ತಾಲಿಬಾನ್‌ನ ಸರ್ಕಾರಿ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಲು ಚಾಟಿ ಬೀಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ!

    ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಚಲನೆ, ವಾಕ್, ಅಭಿವ್ಯಕ್ತಿ, ಕೆಲಸದ ಅವಕಾಶಗಳು ಹಾಗೂ ಉಡುಪಿನ ಸ್ವಾತಂತ್ರ‍್ಯದ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ. 6ನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಹಿಡಿಯಲಾಗಿದೆ. ಇದನ್ನೂ ಓದಿ: ವೈಫೈ ಪಾಸ್‍ವರ್ಡ್ ಹಂಚಿಕೊಳ್ಳದ್ದಕ್ಕೆ ನಡೆಯಿತು ಯುವಕನ ಭೀಕರ ಕೊಲೆ

    ತಾಲಿಬಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ಸರಿಯಾದ ಉಡುಪುಗಳನ್ನು ಧರಿಸಲು ಸೂಚಿಸಿದೆ. ನಿಖಾಬ್ (ಕಣ್ಣು ಹೊರತುಪಡಿಸಿ, ತಲೆ ಮತ್ತು ಮುಖವನ್ನು ಮುಚ್ಚುವ ಮುಸುಕು) ಅಥವಾ ಬುರ್ಖಾವನ್ನು ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಧರಿಸಬೇಕಿದೆ. ಆದರೆ ಈ ಆದೇಶದ ವಿರುದ್ಧ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ

    ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ

    ಹುಬ್ಬಳ್ಳಿ: ಹಿಜಬ್ ವಿವಾದದ ಹೊತ್ತಲ್ಲೇ ಮಾಜಿ ಸಚಿವ ಜಮೀರ್ ಅಹ್ಮದ್ ವ್ಯಾಖ್ಯಾನ ರಾಷ್ಟ್ರಮಟ್ಟದಲ್ಲಿ ವಿವಾದ ಆಗ್ತಿದೆ.

    ಹುಬ್ಬಳ್ಳಿಯಲ್ಲಿ ಮಾತನಾಡಿ, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಬುರ್ಖಾ ಹಾಗೂ ಹಿಜಬ್ ಹಾಕಲೇಬೇಕೆಂದು ಒತ್ತಾಯವಿಲ್ಲ. ಇಷ್ಟ ಇದ್ದವರು ಹಾಕಬಹುದು, ಇಷ್ಟ ಇಲ್ಲದವರು ಬಿಡಬಹುದು. ಇದು ಒಂದು ವಿವಾದವೇ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದ ಹುನ್ನಾರ. ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ ಅಂತ ಜಮೀರ್ ಟೀಕಿಸಿದ್ದಾರೆ. ಕೇರಳ ರಾಜ್ಯಪಾಲರು ಇಸ್ಲಾಂನಲ್ಲಿ ಹಿಜಬ್ ಕಡ್ಡಾಯ ಇಲ್ಲ ಎಂಬ ಹೇಳಿಕೆಗೆ ಜಮೀರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

  • ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

    ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಆತಂಕದಲ್ಲಿರುವ ಜನರು ದೇಶ ತೊರೆದು ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ. ತಾಲಿಬಾನಿಗಳ ಪ್ರವೇಶದಿಂದ ಕಾಬೂಲ್ ನಲ್ಲಿ ಶಾಲಾ, ಕಾಲೇಜು ಸೇರಿದಂತೆ ವ್ಯವಹಾರ ಚಟುವಟಿಕೆಗಳು ಬಂದ್ ಆಗಿವೆ. ಆದ್ರೆ ಬುರ್ಖಾ ಅಂಗಡಿಗಳು ತೆರೆದಿದ್ದು, ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಅದರಲ್ಲಿಯೂ ದಪ್ಪ ಬಟ್ಟೆಯ ಬುರ್ಖಾಗಳಿಗೆ ಹೆಚ್ಚು ಬೇಡಿಕೆಯುಂಟಾಗಿದೆ.

    2018ರಲ್ಲಿ ಯುನೈಟೆಡ್ ನೇಷನ್ ನಲ್ಲಿ ಅಫ್ಘಾನಿಸ್ತಾನ ಪ್ರತಿನಿಧಿಸಿದ್ದ ಯುವತಿ ಆಯೇಶಾ ಖುರ್ರಮ್ ಈ ಕುರಿತು ಬರೆದುಕೊಂಡಿದ್ದಾರೆ. ತಾಲಿಬಾನಿಗಳ ಎಂಟ್ರಿಯಿಂದಾಗಿ ಬುರ್ಖಾ ವಹಿವಾಟು ಜೋರಾಗಿದ್ದು, ದೇಶದ ವಿವಿಧ ಪ್ರಾಂತ್ಯಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಾಲಿಬಾನಿಗಳ ದೃಷ್ಟಿ ತಮ್ಮ ಮೇಲೆ ಬೀಳದಿರಲಿ ಎಂದು ಮಹಿಳೆಯರು ದಪ್ಪ ಬಟ್ಟೆ ಮತ್ತು ನೀಲಿ ಬಣ್ಣದ ಬುರ್ಖಾ ಖರೀದಿಗೆ ಮುಂದಾಗುತ್ತಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಬುರ್ಖಾ ಬೆಲೆ ಸಹ ಏರಿಕೆ ಕಂಡಿದೆ. ಈ ಹಿಂದೆ ತಾಲಿಬಾನಿಗಳ ನಲುಗಿದ ಮಹಿಳೆಯರು ಎಲ್ಲ ಯುವತಿಯರಿಗೆ ಬುರ್ಖಾ ಧರಿಸುವಿಕೆಯ ಸಲಹೆ ನೀಡುತ್ತಿದ್ದಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    22 ವರ್ಷದ ಆಯೇಶಾ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವ್ಯವಹಾರಿಕ ಸಂಬಂಧಗಳ ಕುರಿತ ವಿಷಯದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಂತಿಮ ವರ್ಷದ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ತಾಲಿಬಾನಿಗಳ ಪ್ರವೇಶವಾಗಿದೆ. ನಾನು ಪದವಿ ಪಡೆಯುವ ಕನಸು ಕನಸಾಗಿಯೇ ಉಳಿಯಲಿದೆ ಎಂದು ಆಯೇಶಾ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ಇನ್ನೂ ಕೆಲ ದಿಟ್ಟ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ತಾಲಿಬಾನಿಗಳಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ. ಕಾಬೂಲ್ ವಿಶ್ವವಿದ್ಯಾಲಯದ ಅಧ್ಯಾಪಕಿ ಮುಸ್ಕಾ ದಸ್ತಗೀರ್ ಸೋಶಿಯಲ್ ಮೀಡಿಯಾದಲ್ಲಿ ತಾಲಿಬಾನಿಗಳನ್ನು ಉದ್ದೇಶಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಜನರನ್ನ ಬೇಟೆಯಂತೆ ಕಂಡು ಕೊಲ್ಲಲಾಗುತ್ತಿದೆ. ಆದ್ರೆ ಈ ದೇಶದ ಮಹಿಳೆಯರು ಮನೆಯಲ್ಲಿ ಅವಿತುಕೊಳ್ಳಲ್ಲ ಮತ್ತು ನಾವುಗಳು ಹೆದರಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

  • ಬುರ್ಖಾ ಧರಿಸಿ ಕಳ್ಳತನಕ್ಕಿಳಿದಿದ್ದ ಖತರ್ನಾಕ್ ಕಳ್ಳಿಯರ ಬಂಧನ

    ಬುರ್ಖಾ ಧರಿಸಿ ಕಳ್ಳತನಕ್ಕಿಳಿದಿದ್ದ ಖತರ್ನಾಕ್ ಕಳ್ಳಿಯರ ಬಂಧನ

    ಹಾಸನ: ಬುರ್ಖಾ ಧರಿಸಿ ಚಲಿಸುತ್ತಿದ್ದ ಬಸ್ ನಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಚಾಲಕಿ ಮಹಿಳೆಯರನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಹಾಸನ ನಗರದ ದಾಸರಕೊಪ್ಪಲು ಬಳಿ ನಡೆದಿದೆ.

    ಬುರ್ಖಾ ಧರಿಸಿ ನಗರ ಸಾರಿಗೆ ಬಸ್ ಬತ್ತಿದ ಮೂವರು ಖತರ್ನಾಕ್ ಕಳ್ಳಿಯರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ ಹಾಗೂ ಚೈನ್ ಎಗರಿಸಿದ್ದಾರೆ. ಇದನ್ನು ಕಂಡ ಮತ್ತೋರ್ವ ಮಹಿಳೆ ಕೂಗಿಕೊಂಡಿದ್ದು, ತಕ್ಷಣದ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಂದ ಇಳಿದ ಮೂವರು ಕಳ್ಳಿಯರು ಬುರ್ಖಾ ಎಸೆದು ಓಡಲಾರಂಭಿಸಿದ್ದಾರೆ.

    ಬಸ್ ಚಾಲಕ ಹಾಗೂ ಸಾರ್ವಜನಿಕರು ಕಳ್ಳಿಯರನ್ನು ಹಿಂಬಾಲಿಸಿ ಸರಸ್ವತಿಪುರಂ ಬಳಿ ಹಿಡಿದು ನಗರಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.