Tag: Burj Khalifa

  • ದುಬೈ ಬುರ್ಜ್ ಖಲೀಫಾದಲ್ಲಿ ‘ಜವಾನ್’ ಚಿತ್ರದ ಟ್ರೈಲರ್

    ದುಬೈ ಬುರ್ಜ್ ಖಲೀಫಾದಲ್ಲಿ ‘ಜವಾನ್’ ಚಿತ್ರದ ಟ್ರೈಲರ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ತಮ್ಮ ಜವಾನ್ ಸಿನಿಮಾದ ಪ್ರಚಾರವನ್ನು ದುಬೈನಲ್ಲೂ (Dubai) ಪ್ರಾರಂಭಿಸಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ (Burj Khalifa) ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಅಭಿಮಾನಿಗಳಿಗೆ ತೋರಿಸಿದ್ದಾರೆ. ನಿನ್ನೆ ರಾತ್ರಿ ಬುರ್ಜ್ ಖಲೀಫಾದ ಮೇಲೆ ಜವಾನ್ ಟ್ರೈಲರ್ ಪ್ರದರ್ಶನವಾಗಿ ಸಾವಿರಾರು ಅಭಿಮಾನಿಗಳನ್ನು ರಂಜಿಸಿದೆ.

    ಟೆಂಪನ್ ರನ್

    ‘ಪಠಾಣ್'(Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಜವಾನ್ (Jawan) ಚಿತ್ರ ಕೂಡ ಗೆಲ್ಲಲೇಬೇಕು ಎಂದು ನಟ ಶಾರುಖ್ ಖಾನ್ (Sharukh Khan) ಪಣ ತೊಟ್ಟಿದ್ದಾರೆ. ಜವಾನ್ ಸಿನಿಮಾ ಸೆ.7ಕ್ಕೆ ತೆರೆಗೆ ಬರುವ ಮುನ್ನ ವೈಷ್ಣೋದೇವಿ ದೇವಾಲಯಕ್ಕೆ(Vaishnodevi Temple) ಶಾರುಖ್ ಮಧ್ಯರಾತ್ರಿ ಭೇಟಿ ನೀಡಿದ್ದಾರೆ.

    ಜವಾನ್ (Jawan) ರಿಲೀಸ್‌ಗೆ ಒಂದು ವಾರ ಬಾಕಿಯಿದೆ. ಇದೇ ಸೆ.7ಕ್ಕೆ ಪಠಾಣ್ ಸ್ಟಾರ್ ಶಾರುಖ್ ನಟನೆಗೆ ಜವಾನ್ ತೆರೆಗೆ ಬರಲು ಸಜ್ಜಾಗಿದೆ.ಶಾರುಖ್ ಖಾನ್ ಅವರು ಜಮ್ಮ ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಗೆ ಭೇಟಿ ನೀಡಿದ್ದಾರೆ. ಅದೂ ಮಧ್ಯರಾತ್ರಿ ಸಂದರ್ಭದಲ್ಲಿ ಅನ್ನೋದು ವಿಶೇಷ. ಈ ವಿಡಿಯೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

    ಶಾರುಖ್ ಖಾನ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಆದಾಗ್ಯೂ ಅವರ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಅಪಾರ ಭಕ್ತಿ ಇದೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂಗಳ ಪ್ರಮುಖ ದೇವಾಲಯವಾದ ವೈಷ್ಣೋ ದೇವಿಗೆ ಶಾರುಖ್ ಖಾನ್ ಭೇಟಿ ನೀಡಿದ್ದಾರೆ. ತಮ್ಮ ಗುರುತು ಸಿಗದಂತೆ ನಟ ಎಂಟ್ರಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದರು.

     

    ಶಾರುಖ್ ಖಾನ್ ಅವರು ವೈಷ್ಣೋ ದೇವಿ ಟೆಂಪಲ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರತಿ ಸಿನಿಮಾದ ರಿಲೀಸ್‌ಗೂ ಮುನ್ನ ಶಾರುಖ್ ಇಲ್ಲಿ ಭೇಟಿ ನೀಡುತ್ತಾರೆ. ಶಾರುಖ್ ಖಾನ್ ಅವರು ಹಿಂದೂ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವುದನ್ನು ಅನೇಕರು ಶ್ಲಾಘಿಸಿದ್ದಾರೆ. ಶಾರುಖ್ ಖಾನ್ ಭಕ್ತಿ ನಿಜಕ್ಕೂ ಮೆಚ್ಚುವಂಥದ್ದು ಎಂದಿದ್ದಾರೆ. ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ದುಬೈ: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನ್ ರೊನಾಲ್ಡೊ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಲೇಸರ್ ಶೋ ಏರ್ಪಡಿಸುವ ಮೂಲಕ ಪತ್ನಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಜಾರ್ಜಿನಾ ರೊಡ್ರಿಗಸ್ ಅವರ 28ನೇ ಹುಟ್ಟುಹಬ್ಬವನ್ನು ಆಚರಿಸಲು ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ರೊನಾಲ್ಡೊ ಪತ್ನಿಯ ಭಾವಚಿತ್ರವಿರುವ ಲೇಸರ್ ಶೋ ಏರ್ಪಡಿಸಿದ್ದಾರೆ. ಇದರಲ್ಲಿ ಜಾರ್ಜಿಯಾವ ಅವರ ಫೋಟೋ ವೀಡಿಯೊವು ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗೋಚರಿಸಿದೆ.

     

    View this post on Instagram

     

    A post shared by Georgina Rodríguez (@georginagio)

    ಐದು ಬ್ಯಾಲನ್ ಡಿ ಓರ್ ಪ್ರಶಸ್ತಿಗಳ ವಿಜೇತ ರೊನಾಲ್ಡೊ, ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತನ್ನ ಪತ್ನಿಯ ಜನ್ಮದಿನದ ಶುಭಾಶಯ ಕೋರಲು ಬರೋಬ್ಬರಿ 50,000 ಪೌಂಡ್‍ಗಳನ್ನು ಖರ್ಚು ಮಾಡಿದ್ದಾರೆ.

    ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿರುವ ರೊನಾಲ್ಡೊ ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

     

    View this post on Instagram

     

    A post shared by Cristiano Ronaldo (@cristiano)

    ವೀಡಿಯೋದಲ್ಲಿ ಏನಿದೆ?: ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಲೈಟ್ ಮತ್ತು ಲೇಸರ್ ಶೋನಲ್ಲಿ ರೊನಾಲ್ಡೊ ಹಾಗೂ ಅವರ ಪತ್ನಿ ಹೆಸರು ಬುರ್ಜ್ ಖಲಿಫಾದ ಮೇಲೆ ಪ್ರದರ್ಶನಗೊಂಡಿತು. ನಂತರ ಹ್ಯಾಪಿ ಬರ್ತ್‍ಡೇ ಜಿಯೋ ಸಂದೇಶದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ

  • ಬುರ್ಜ್‌ ಖಲೀಫಾ ಮೇಲೆ ಶಾರೂಖ್‌ ಖಾನ್‌ಗೆ ವರ್ಣರಂಜಿತ ಬರ್ತ್‌ ಡೇ ವಿಶ್‌

    ಬುರ್ಜ್‌ ಖಲೀಫಾ ಮೇಲೆ ಶಾರೂಖ್‌ ಖಾನ್‌ಗೆ ವರ್ಣರಂಜಿತ ಬರ್ತ್‌ ಡೇ ವಿಶ್‌

    ದುಬೈ: ಜೀವನದಲ್ಲಿ 56ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಖ್ಯಾತ ನಟ ಶಾರೂಖ್‌ ಖಾನ್‌ ಅವರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾ ಮೇಲೆ ಮಂಗಳವಾರ ರಾತ್ರಿ ವರ್ಣರಂಜಿತ ದೀಪಾಲಂಕಾರದೊಂದಿಗೆ ಶುಭಾಶಯ ತಿಳಿಸಲಾಯಿತು.

    ಶಾರೂಖ್ ಖಾನ್‌ ಅಭಿನಯದ ಸಿನಿಮಾದ ಹಾಡು, ಅವರ ಫೋಟೊ ಹಾಗೂ “ಜನ್ಮದಿನದ ಶುಭಾಶಯಗಳು ಶಾರೂಖ್ ಖಾನ್‌.. ವಿ ಲವ್‌ ಯು” ಎಂಬ ಸಾಲುಗಳು ಬುರ್ಜ್‌ ಖಲೀಫಾ ಕಟ್ಟಡ ಮೇಲೆ ವರ್ಣ ರಂಜಿತವಾಗಿ ರಾರಾಜಿಸಿದವು. ಈ ವಿಡಿಯೊವನ್ನು ಎಮರ್‌ ಪ್ರಾಪರ್ಟೀಸ್‌ ಸ್ಥಾಪಕ ಮೊಹಮದ್‌ ಅಲ್ಬರ್‌ ಅವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ

    ಕಳೆದ ವರ್ಷವೂ ಬುರ್ಜ್‌ ಖಲೀಫಾ ಶಾರೂಖ್ ಖಾನ್‌ ಅವರ ಹುಟ್ಟುಹಬ್ಬದಂದು ವರ್ಣ ರಂಜಿತವಾಗಿ ಶುಭಾಶಯ ತಿಳಿಸಿತ್ತು. ಆಗ ವಿಡಿಯೊ ಹಂಚಿಕೊಂಡು ಶಾರೂಖ್, “ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಪರದೆಯ ಮೇಲೆ ನನ್ನನ್ನು ನೋಡಲು ಸಂತೋಷವಾಗಿದೆ. ಸ್ನೇಹಿತ ಮೊಹಮದ್‌ ಅಲಬ್ಬರ್‌ ನನ್ನ ಮುಂದಿನ ಚಿತ್ರಕ್ಕೂ ಮುಂಚೆಯೇ ನನ್ನನ್ನು ದೊಡ್ಡ ಪರದೆಯ ಮೇಲೆ ಬಿಂಬಿಸಿದ್ದಾರೆ. ನಿಮ್ಮೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು. ನನ್ನ ಮಕ್ಕಳು ಇದರಿಂದ ಪುಳಕಿತರಾಗಿದ್ದಾರೆ. ನಾನು ಇದನ್ನು ಪ್ರೀತಿಸುತ್ತೇನೆ” ಎಂದು ಖುಷಿ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ʼಪುನೀತ ನೆನಪು’ ದುಬೈ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪುಗೆ ನುಡಿನಮನ

    ನಟ ಶಾರೂಖ್‌ ಖಾನ್‌ ಅವರು ನ.2ರಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ವಿಶಿಷ್ಟವಾಗಿ ತಮ್ಮ ನೆಚ್ಚಿನ ನಟನ ಜನ್ಮದಿನ ಆಚರಿಸಿದ್ದಾರೆ.

  • ಬುರ್ಜ್ ಖಲೀಫಾ ಮೇಲೆ ನಿಂತ ಗಗನಸಖಿ – ವೀಡಿಯೋ ವೈರಲ್

    ಬುರ್ಜ್ ಖಲೀಫಾ ಮೇಲೆ ನಿಂತ ಗಗನಸಖಿ – ವೀಡಿಯೋ ವೈರಲ್

    ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ದುಬೈ ಬುರ್ಜ್ ಖಲೀಫಾದ ಮೇಲೆ ಗಗನಸಖಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    30 ಸೆಕೆಂಡ್ ಇರುವ ಎಮಿರೇಟ್ಸ್ ಕಂಪನಿಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದೃಶ್ಯ ನೋಡಿ ನೆಟ್ಟಿಗರು ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವೃತ್ತಿಪರ ಸ್ಕೈ ಡ್ರೈವಿಂಗ್ ಬೋಧಕರಾಗಿರುವ ನಿಕೋಲ್ ಸ್ಮಿತ್-ಲುಡ್ವಿಕ್ ಜಾಹೀರಾತಿನಲ್ಲಿ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿ ಸದಸ್ಯರಾಗಿ ಕಾಣಿಸಿಕೊಂಡಿದ್ದಾರೆ.

    ವೀಡಿಯೋದಲ್ಲಿ ಎಮಿರೇಟ್ಸ್ ಸಮವಸ್ತ್ರದಲ್ಲಿರುವ ನಿಕೋಲ್ ನಮಗೆ ಪ್ರಪಂಚದಲ್ಲಿ ಅಗ್ರಸ್ಥಾನ ಸಿಕ್ಕಿದೆ, ಫ್ಲೈ ಎಮಿರೇಟ್ಸ್, ಫ್ಲೈ ಬೆಟರ್ ಎಂದು ಬರೆದಿರುವ ಬೋರ್ಡ್ ಗಳನ್ನು ಹಿಡಿದುಕೊಂಡು ಒಂದೊಂದಾಗಿಯೇ ತೋರಿಸುತ್ತಾ ಹೋಗುವುದನ್ನು ಕಾಣಬಹುದಾಗಿದೆ.

    ಬುರ್ಜ್ ಖಲೀಫಾದ ತುದಿಯಲ್ಲಿ ನಿಂತುಕೊಂಡರೆ ಇಡೀ ದುಬೈನನ್ನು ಕಾಣಬಹುದಾಗಿದೆ. ನೆಲದಿಂದ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ವಿಶ್ವದ ಅತೀ ಎತ್ತರದ ಕಟ್ಟಡವಾಗಿದೆ.

    ನಿಕೋಲ್ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನುಮಾನವಿಲ್ಲದೇ ನಾನು ಮಾಡಿದ ಅದ್ಭುತ ಹಾಗೂ ಅತ್ಯಾಕರ್ಷಕ ಸಾಹಸಗಳಲ್ಲಿ ಒಂದಾಗಿದೆ. ಸೃಜನಶೀಲ ಮಾರ್ಕೆಂಟಿಂಗ್ ಕಲ್ಪನೆಗಾಗಿ ಎಮಿರೇಟ್ಸ್ ಏರ್‍ಲೈನ್‍ನ ಈ ತಂಡದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

  • ಬುರ್ಜ್ ಖಲೀಫಾ ಮೇಲೆ ಕಿಚ್ಚನ ಕಟೌಟ್- ಖರ್ಚಾಗಿದ್ದೆಷ್ಟು? ಮುಂದೆ ಯಾರದ್ದು ಬರಲಿದೆ?

    ಬುರ್ಜ್ ಖಲೀಫಾ ಮೇಲೆ ಕಿಚ್ಚನ ಕಟೌಟ್- ಖರ್ಚಾಗಿದ್ದೆಷ್ಟು? ಮುಂದೆ ಯಾರದ್ದು ಬರಲಿದೆ?

    ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸ್ಯಾಂಡಲ್‍ವುಡ್ ನಟರೊಬ್ಬರ ಕಟೌಟ್ ಕಾಣಿಸುವ ಮೂಲಕ ದಾಖಲೆ ನಿರ್ಮಿಸಲಾಗಿದ್ದು, ಅದೂ ಸಹ ಕಿಚ್ಚ ಸುದೀಪ್ ಅವರದ್ದು ಎನ್ನುವುದು ಇನ್ನೂ ವಿಶೇಷ. ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ವಿಕ್ರಾಂತ್ ರೋಣ ಚಿತ್ರತಂಡ ಬೆಳ್ಳಿ ಹಬ್ಬ ಆಚರಣೆ ಮಾಡುವ ಮೂಲಕ ಅವರಿಗೆ ಗಿಫ್ಟ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ಈ ಪ್ರಚಾರಕ್ಕೆ ಎಷ್ಟು ಖರ್ಚು ಆಗಿರಬಹದು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ.

    ಹೌದು ಕನ್ನಡ ಬಾವುಟದ ಬಣ್ಣ ಹಾಗೂ ಕಿಚ್ಚ ಕಾಣಿಸುತ್ತಿದ್ದಂತೆ ಕೇವಲ ಅವರ ಅಭಿಮಾನಿಗಳು ಮಾತ್ರವಲ್ಲ, ಇಡೀ ರಾಜ್ಯದ ಜನರೇ ಸಂತಸಗೊಂಡಿದ್ದರು. ರಾಜ್ಯದ ಹೆಮ್ಮೆ ಎಂದು ಸಹ ಕೊಂಡಾಡುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಹೇಗಾಯಿತು? ಬುರ್ಜ್ ಖಲೀಫಾ ಮೇಲೆ ಕಟೌಟ್ ಹಾಕಲು ಖರ್ಚಾಗಿದ್ದೆಷ್ಟು ಎಂಬ ಚರ್ಚೆ ಸಹ ಎದ್ದಿತ್ತು.

    ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲಿನ ಈ ಲೇಸರ್ ಪರದೆ ಮೇಲೆ ಮಿಂಚಲು ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕು. ಹೀಗಾಗಿ ಚಿತ್ರ ತಂಡ ದುಬಾರಿ ಪ್ರಚಾರ ಮಾಡಿದೆ ಎಂದು ಇದೀಗ ತಿಳಿದು ಬಂದಿದೆ. ಕಿಚ್ಚನ ದುಬೈ ಸಂಭ್ರಮಕ್ಕೆ ಬರೋಬ್ಬರಿ 3 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಲೇಸರ್ ಪರದೆ ಮೇಲೆ ವಿಡಿಯೋ ಪ್ರಸಾರ ಮಾಡಲು ನಿಮಿಷಕ್ಕೆ ಲಕ್ಷಗಟ್ಟಲೇ ಹಣ ವ್ಯಯಿಸಬೇಕು.

    ಬುರ್ಜ್ ಖಲೀಫಾದ ಲೇಸರ್ ಸ್ಕ್ರೀನ್ ಮೇಲೆ ಪ್ರಸಾರವಾಗುವ 3 ನಿಮಿಷ ಅಂದರೆ 180 ಸೆಕೆಂಡ್‍ಗಳ ವಿಡಿಯೋಗೆ 50 ಲಕ್ಷ ರೂ. ನೀಡಬೇಕು. ಇದು ಕನಿಷ್ಟ ದರವಾಗಿದ್ದು, ವೀಕೆಂಡ್‍ಗಳಲ್ಲಿ ಇದರ ದರ 70-80 ಲಕ್ಷ ರೂ. ದಾಟುತ್ತದೆ ಎಂಬ ಮಾಹಿತಿ ಇದೆ. ಲೇಸರ್ ಶೋಗೆ ನಾಲ್ಕು ವಾರ ಮೊದಲೇ ಅರ್ಜಿ ಸಲ್ಲಿಸಬೇಕು. ಜಾಹೀರಾತು ಏಜೆನ್ಸಿ ಮೂಲಕ ಮೊದಲೇ ಪೂರ್ತಿ ಹಣವನ್ನು ಕಟ್ಟಬೇಕು. ಬಳಿಕ ಆಡಳಿತ ಮಂಡಳಿ ನೀಡಿದ ದಿನಾಂಕದಂದು ರಾತ್ರಿ 8ರ ಬಳಿಕ ವಿಡಿಯೋ ಲೇಸರ್ ಪರದೆ ಮೇಲೆ ಪ್ರಸಾರವಾಗುತ್ತದೆ.

     

    View this post on Instagram

     

    A post shared by KicchaSudeepa (@kichchasudeepa)

    ಈ ಮೊದಲು ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟುಹಬ್ಬಕ್ಕೂ ಇದೇ ರೀತಿ ಶುಭ ಕೋರಲಾಗಿತ್ತು. ಜಗತ್ತಿನ ಎತ್ತರದ ಕಟ್ಟಡದಲ್ಲಿ ಗೌರವ ಪಡೆದ ಭಾರತದ ಮೊದಲ ನಟ ಎಂದು ಸಹ ಹೇಳಲಾಗಿತ್ತು. ಬಳಿಕ ಶಾರುಖ್ ಖಾನ್ ಅಭಿಮಾನಿಯೊಬ್ಬ ಹಣ ನೀಡಿ ಈ ವಿಡಿಯೋ ಹಾಕಿಸಿದ್ದ ಎಂಬುದು ತಿಳಿದಿತ್ತು. ಹಣ ನೀಡಿದರೆ ಬುರ್ಜ್ ಖಲೀಫಾ ಮೇಲೆ ಯಾರ ಬಗ್ಗೆ ಬೇಕಾದರೂ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ ಎಲ್ಲ ಸಿನಿಮಾಗಳನ್ನು ಪ್ರಚಾರ ಮಾಡಲಾಗುತ್ತದೆ. ಆದರೆ ಈ ಹಿಂದೆ ಮಹಾತ್ಮಾ ಗಾಂಧಿಯವರ 151ನೇ ಜನ್ಮ ದಿನದಂದು ಭಾರತೀಯ ರಾಯಭಾರಿ ಕಚೇರಿಯ ಪ್ರಯತ್ನದ ಫಲವಾಗಿ ಗಾಂಧೀಜಿ ಸಂದೇಶದೊಂದಿಗೆ ತ್ರಿವರ್ಣ ಧ್ವಜವನ್ನು ಬುರ್ಜ್ ಖಲೀಫಾ ಉಚಿತವಾಗಿ ಪ್ರದರ್ಶನ ಮಾಡಿತ್ತು. ಇದನ್ನು ಹೊರತುಪಡಿಸಿದರೆ ಭಾರತದ ಇನ್ನಾವುದೇ ವಿಡಿಯೋಗಳು ಉಚಿತವಾಗಿ ಪ್ರಸಾರವಾಗಿಲ್ಲ ಎಂದು ಹೇಳಲಾಗುತ್ತದೆ. ಇದೀಗ ಕಿಚ್ಚ ಸುದೀಪ್ ಹಾಗೂ ವಿಕ್ರಾಂತ್ ರೋಣ ಸಿನಿಮಾದ ವಿಡಿಯೋವನ್ನು ಸಹ ಹಣ ನೀಡಿ ಹಾಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಮುಂದೆ ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರಕ್ಕೂ ಈ ರೀತಿ ಪ್ರಚಾರ ನೀಡಲಾಗುತ್ತದೆ ಎಂದು ವರದಿಯಾಗಿದೆ.

  • ಬುರ್ಜ್‌ ಖಲೀಫಾದಲ್ಲಿ ರಾರಾಜಿಸಿದ ವಿಕ್ರಾಂತ್‌ ರೋಣ

    ಬುರ್ಜ್‌ ಖಲೀಫಾದಲ್ಲಿ ರಾರಾಜಿಸಿದ ವಿಕ್ರಾಂತ್‌ ರೋಣ

    ದುಬೈ: ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ದ ಟೈಟಲ್ ಲೋಗೋ ಲಾಂಚ್ ಆಗಿದೆ.

     

    ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಆಗಿದೆ. ಇದರ ಜೊತೆಗೆ 2 ಸಾವಿರ ಅಡಿ ಎತ್ತರದ ವರ್ಚೂವಲ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಇದೇ ವೇಳೆ ಕಿಚ್ಚನ 25 ವರ್ಷಗಳ ಸಿನಿ ಪಯಣ ಕುರಿತ 3 ನಿಮಿಷದ ವೀಡಿಯೋ ಪ್ರಸಾರವಾಗಿದೆ.

     

    ಬುರ್ಜ್‌ ಖಲೀಫಾ ಕಟ್ಟಡದಲ್ಲಿ 3 ನಿಮಿಷಗಳ ಕಾಲ ಇದ್ದ ಕಟೌಟ್‌ ನೋಡಿ ಸುದೀಪ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಈ ಸುಂದರ ಸಂಭ್ರಮವನ್ನು 6 ಕ್ಯಾಮೆರಾದಲ್ಲಿ ಕಿಚ್ಚನ ತಂಡ ಸೆರೆ ಹಿಡಿದಿದೆ.


    ಚಿತ್ರರಂಗದಲ್ಲಿ 25 ವರ್ಷಗಳು ಪೂರೈಸಿರುವ ಕಿಚ್ಚ ಸುದೀಪ್‍ಗೆ ಸಿನಿರಂಗದ ಹಲವು ಗಣ್ಯರು ಶುಭಹಾರೈಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಮೋಹನ್‍ಲಾಲ್, ರಮ್ಯಕೃಷ್ಣ, ಪ್ರಿಯಾಮಣಿ ಸೇರಿದಂತೆ ಹಲವು ಕಲಾವಿದರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೋಟೆಲಲ್ಲಿ ‘ಕಿಂಗ್ ಕಿಚ್ಚ’ ಅಂತ ದೊಡ್ಡ ನಾನ್ ಕೊಟ್ಟು ಸರ್ಪ್ರೈಸ್ ನೀಡಿದ್ರು: ಕಿಚ್ಚ

    ಹೋಟೆಲಲ್ಲಿ ‘ಕಿಂಗ್ ಕಿಚ್ಚ’ ಅಂತ ದೊಡ್ಡ ನಾನ್ ಕೊಟ್ಟು ಸರ್ಪ್ರೈಸ್ ನೀಡಿದ್ರು: ಕಿಚ್ಚ

    – ಜೀವನದ ಬ್ಯೂಟಿಯನ್ನು ವರ್ಣಿಸಿದ ಸುದೀಪ್
    – ದುಬೈನಿಂದ ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ವಿಕ್ರಾಂತ್ ರೋಣ ಉತ್ತರ

    ಬೆಂಗಳೂರು/ ಸೌದಿ ಅರೇಬಿಯಾ: ಇವತ್ತಿನ ಯುವಜನತೆ ನಮಗೆ ಪ್ರೇರಣೆ. ಎಂಜಿನಿಯರಿಂಗ್ ಮಾಡಿ ದುಡ್ಡು ಕೊಟ್ಟು ಕಲಿತ ವಿದ್ಯೆ, ನಾಲೆಡ್ಜ್ ತಲೇಲಿ ಕೂರಲಿಲ್ಲ. ಆವಾಗ ಏನಾದ್ರೂ ಮಾಡಲೇಬೇಕು ಅಂದ್ಕೊಂಡೆ. ಆಗ ಪ್ರಿಯಾನ ಇನ್ನೂ ಮದುವೆಯಾಗಿರಲಿಲ್ಲ. ಆಗ ಅವಳು ಗರ್ಲ್ ಫ್ರೆಂಡ್. ಬಾ ನನ್ನ ಪಿಕ್ಚರ್ ನೋಡೋಣ ಅಂತ ಕರ್ಕೊಂಡು ಹೋದೆ. ಥಿಯೇಟರಲ್ಲಿ ಐದೇ ಜನ ಇದ್ದರು. ಆಗ ಒಂದು ಹೌಸ್ ಫುಲ್ ಬೇಕಾಗಿತ್ತು. ಅದಾದ ಮೇಲೆ ಒಳ್ಳೊಳ್ಳೆಯ ಸಿನೆಮಾ ಬಂತು. ಒಳ್ಳೆಯ ನಿರ್ದೇಶಕರು ಸಿಕ್ಕಿದ್ರು. ಫ್ಲೋ ಜೊತೆ ನಾನು ಹೋದೆ ಎಂದು ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ 25 ವರ್ಷದ ಸಿನಿ ಜರ್ನಿಯ ಬಗ್ಗೆ ಮೆಲುಕು ಹಾಕಿಕೊಂಡರು.

    ಸಿನಿಮಾ ಸಂಬಂಧ ಈಗಾಗಲೇ ದುಬೈ ತಲುಪಿರುವ ಕಿಚ್ಚ ಇಂದು ಅಲ್ಲಿಂದಲೇ ಕರ್ನಾಟಕದ ಪತ್ರಕರ್ತರ ಜೊತೆ ಸಂಭಾಷಣೆ ನಡೆಸಿದ್ದಾರೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಕಿಚ್ಚ ನೇರಪ್ರಸಾರದಲ್ಲಿ ಮಾತನಾಡಿದ್ದು, ಈ ವೇಳೆ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಯಾವುದೇ ಅಜೆಂಡಾ ಹಾಕಿ ಕೂರಲಿಲ್ಲ. ಅದರಿಂದ ನನಗೆ ತೃಪ್ತಿ ಸಿಕ್ಕಿತು. 25 ವರ್ಷ ಆದ ಮೇಲೆಯೂ ಜನ ಬರ್ತಾರಂದ್ರೆ ಸಿನೆಮಾ ನಮ್ಮ ಕೈಹಿಡಿದಿರುತ್ತೆ. ಅದೇ ನಮಗೆ ಮುಖ್ಯ, ಅದೇ ನಮಗೆ ಗೌರವ. ಎಷ್ಟೋ ಹೀರೋಗಳಿದ್ದಾರೆ. ಅವರ ನಡುವೆಯೂ ಜನ ಬರ್ತಿರೋದು ನೋಡಿ ನನಗೆ ಖುಷಿಯಿದೆ ಎಂದು ಸಂತಸ ಹಂಚಿಕೊಂಡರು.

     2012ರಲ್ಲಿ ದುಬೈಗೆ ಬಂದಿದ್ದೆ. ಆಗ ನಾನೇ ಕ್ಯಾಬ್ ಬುಕ್ ಮಾಡಿದ್ದೆ. ಹೋಟೆಲಿಂದ ಬಂದು ಪಿಕ್ ಅಪ್ ಮಾಡಿದ್ರು. ಆಗ ಮಗಳು ಇನ್ನೂ ಚಿಕ್ಕವಳಿದ್ಳು. ಮೊನ್ನೆ ಬಂದಾಗ ನಿರ್ಮಾಪಕರು ಕಾರು ಮಾಡಿರ್ತಾರೆ ಅಂದ್ಕೊಂಡಿದ್ದೆ. ಲೆಗ್ ಸ್ಪೇಸ್ ಜಾಸ್ತಿ ಇರೋ ಕಾರು ಬೇಕು ಅಂತ ಕೇಳಿದ್ದೆ. ಚಿಕ್ಕ ಕಾರು ಹಾಕ್ಬಿಟ್ಟೀಯಾ ಅಂತ ಹೇಳಿದ್ದೆ. ಇಲ್ಲಿ ಬಂದಾಗ ಸಿಕ್ಕಿದ ಸ್ವಾಗತ ನೋಡಿ ಆಶ್ಚರ್ಯ ಆಯ್ತು ಎಂದರು.

    ನಿನ್ನೆ ತುಂಬಾ ಹೊಟ್ಟೆ ಹಸೀತಾ ಇತ್ತು. ಫ್ಯಾಮಿಲಿ ಜೊತೆ ಹೋಟೆಲ್ ಗೆ ಹೋಗಿದ್ವಿ. ಸಿಝಾನ್ ಬುರಾಕ್ ಹೋಟೆಲ್ ಗೆ ಹೋಗಿದ್ವಿ. ಅಲ್ಲಿ ಹೋದಾಗ ದೊಡ್ಡ ನಾನ್ ಮಾಡ್ಕೊಂಡು ಬಂದ್ರು. ಅದ್ರಲ್ಲಿ ಕಿಂಗ್ ಕಿಚ್ಚ ಅಂತ ಬರೆದಿದ್ರು. ಇದೆಲ್ಲವೂ ನನಗೆ ಹೊಸದು, ನಾನು ಕೇಳಿರಲಿಲ್ಲ. ನನಗೆ ಸ್ಪೆಷಲ್ ಫೀಲ್ ಮಾಡಿದ್ರು. ನನ್ನ ಪರಿಚಯ ಇವರಿಗೆ ಯಾವಾಗ ಆಯ್ತು ಅಂದ್ಕೊಂಡೆ. ಇವರು ಯಾವಾಗ ನನ್ನ ನೋಡಿದ್ರು. ಇದೆಲ್ಲವೂ ನನಗೆ ಸರ್ ಪ್ರೈಸ್. ಪಾಕಿಸ್ತಾನಿಗಳು ಬಂದು ಫೋಟೋ ತೆಗೆಸಿಕೊಂಡ್ರು. ಅದೇ ಜೀವನದ ಬ್ಯೂಟಿ ಎಂದು ಕಿಚ್ಚ ಬಣ್ಣಿಸಿದರು.

    ಯಾವುದರಿಂದ ಬೆಳೆದ್ವಿ, ಯಾರಿಂದ ಬೆಳೆದ್ವಿ ಅನ್ನೋದಕ್ಕಿಂತ ಬೆಳೆದ್ವಿ, ಕೈಹಿಡ್ಕೊಂಡು ಕರ್ಕೊಂಡು ಹೋಯಿತು. ಬುರ್ಜ್ ಖಲೀಫಾ ಮುಂದೆ ನಿಂತ್ಕೊಂಡು ಹೇಗೆ ಬರಬಹುದು, ಹೇಗೆ ಕಾಣಬಹುದು ಟೈಟಲ್ ಅಂತ ಯೋಚನೆ ಮಾಡ್ತೀವಿ. ಈ ಸಿನೆಮಾದಲ್ಲಿರೋರು ಎಲ್ಲರೂ ಹೊಸಬರು. ಅವರೆಲ್ಲ ನನಗಿಂತ ಜಾಸ್ತಿ ಎಕ್ಸೈಟ್ ಆಗಿದ್ದಾರೆ. ನನ್ನ ಪಿಚ್ಚರ್ ರಿಲೀಸ್ ಆದಾಗ ಐದು ಜನ ಇರಲಿಲ್ಲ. ನಿಮಗೆ ಒಂದು, ಎರಡು ಪಿಕ್ಚರ್ ಗೇ ಈ ಪುಣ್ಯ ಸಿಗ್ತಾ ಇದೆ ಅಂತ ಹೇಳ್ತಿರ್ತೀನಿ. ಇವೆಲ್ಲವೂ ನೈಸ್ ಫೀಲಿಂಗ್ ಎಂದು ಹೇಳಿದರು.

  • ಬುರ್ಜ್ ಖಲೀಫ ಮೇಲೆ ವಿಜೃಂಭಿಸಲಿದ್ದಾನೆ ವಿಕ್ರಾಂತ್ ರೋಣ..!

    ಬುರ್ಜ್ ಖಲೀಫ ಮೇಲೆ ವಿಜೃಂಭಿಸಲಿದ್ದಾನೆ ವಿಕ್ರಾಂತ್ ರೋಣ..!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಫ್ಯಾಂಟಮ್’ ಹೆಸರು ಬದಲಾಗಿದ್ದು, ಇದೀಗ ವಿಕ್ರಾಂತ್ ರೋಣನಾಗಿ ಜನವರಿ 31ರಂದು ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ.

    ಹೌದು. ಈ ಸಂಬಂಧ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಜನವರಿ 31 ರಂದು ಟೈಟಲ್ ಲೋಗೋ ಹಾಗೂ 3 ನಿಮಿಷದ ವೀಡಿಯೋವನ್ನು ಬುರ್ಜ್ ಖಲೀಫ ಮೇಲೆ ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ.

    ಈ ಹಿಂದೆ ಫ್ಯಾಂಟಮ್ ಲೋಕದ ಸೃಷ್ಟಿಕರ್ತ ಅನೂಪ್ ಭಂಡಾರಿ ಟ್ವೀಟ್ ಮಾಡಿ, ಇದೇ ಜನವರಿ 21ಕ್ಕೆ ಚಿತ್ರತಂಡದಿಂದ ದೊಡ್ಡ ಘೋಷಣೆಯೊಂದು ಹೊರ ಬೀಳಲಿದೆ ಎಂದು ತಿಳಿಸಿದ್ದರು. ಈ ಅನೌನ್ಸ್ ಜೊತೆ ಹೆಗಲ ಮೇಲೆ ಗನ್ ಹಿಡಿದು, ಬೆರಳಲ್ಲಿ ಟಿಗರ್ ಹಿಡಿದು ಮಾಸ್ಕ್ ತೊಟ್ಟ ವಿಕ್ರಾಂತ್ ರೋಣನ ಲುಕ್ ಸಹ ಔಟ್ ಆಗಿತ್ತು. ಇದು ದೊಡ್ಡ ಅನೌನ್ಸ್‍ಮೆಂಟ್ ಮುಂಚೆನೇ ಕಿಚ್ಚನ ಬಳಗಕ್ಕೆ ಊಟಕ್ಕೆ ಮೊದಲೇ ಜಿಲೇಬಿ ಸಿಕ್ಕಂತಾಗಿತ್ತು. ಪಕ್ಕಾ 90ರ ದಶಕದ ಹೀರೋಗಳ ಸ್ಟೈಲಿನಲ್ಲಿ ಕ್ಯಾಪ್, ಜಾಕೆಟ್ ಕಾಣಿಸಿಕೊಂಡಿರುವ ಸುದೀಪ್ ಕಣ್ಣುಗಳು ನೋಡುಗರನ್ನ ಸೆಳೆಯುತ್ತಿವೆ.

    ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ವಿಶ್ವದ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ನಿರ್ಮಿಸಿದ್ದ ಕಂಪನಿ ದಿವಾಳಿ

    ವಿಶ್ವದ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ನಿರ್ಮಿಸಿದ್ದ ಕಂಪನಿ ದಿವಾಳಿ

    ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ನಿರ್ಮಿಸಿದ್ದ ರಿಯಲ್‌ ಎಸ್ಟೇಟ್‌ ಅರಬ್‌ಟೆಕ್‌ ಹೋಲ್ಡಿಂಗ್ಸ್ ಕಂಪನಿ ದಿವಾಳಿಯಾಗಿದೆ.

    ಕೋವಿಡ್‌ 19 ಬಿಕ್ಕಟ್ಟಿನಿಂದ ಕಂಪನಿ ದಿವಾಳಿಯಾಗಿದ್ದು ಲಿಕ್ವಿಡೇಷನ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಕಂಪನಿಯ ಈ ನಿರ್ಧಾರಕ್ಕೆ ಪಾಲುದಾರರ ಒಪ್ಪಿಗೆಯೂ ದೊರೆತಿದೆ.

    ಕೊರೊನಾ ಕಾರಣದಿಂದ ಕೆಲಸ ನಡೆಯದ ಕಾರಣ ಸೌದಿ ಅರೇಬಿಯಾದ ಬಹುತೇಕ ರಿಯಲ್ ಎಸ್ಟೇಟ್ ಕಂಪನಿಗಳು ಈ ಸ್ಥಿತಿಯನ್ನು ಎದುರಿಸುತ್ತಿವೆ. ಕಂಪನಿಯ ನಿರ್ಧಾರದಿಂದ 40 ಸಾವಿರ ನೌಕರರ ಭವಿಷ್ಯ ಡೋಲಾಯಮಾನವಾಗಿದೆ.

    2020ರ ಮೊದಲ ಅರ್ಧ ವರ್ಷದಲ್ಲಿ 216 ದಶಲಕ್ಷ ಡಾಲರ್‌ ನಷ್ಟ ಅನುಭವಿಸಿದೆ ಎಂದು ಅರಬ್‌ಟೆಕ್‌ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬುರ್ಜ್‌ ಖಲೀಫಾ ಅಲ್ಲದೇ ಲೌವ್ರೆ ಮ್ಯೂಸಿಯಂ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯನ್ನು ಅರಬ್ ಟೆಕ್ ಕಂಪನಿ ಪಡೆದುಕೊಂಡಿತ್ತು.

    ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಸರ್ಕಾರ ಮತ್ತು ಸಂಸ್ಥೆಗಳು ಕಟ್ಟಡ ನಿರ್ಮಾಣದ ಕೆಲಸವನ್ನು ಕೋವಿಡ್‌ 19ನಿಂದ ಸ್ಥಗಿತಗೊಳಿಸಿದೆ ಮತ್ತು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ನಿರ್ಧಾರದ ಹಲವು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಭಾರೀ ಹೊಡೆತ ನೀಡಿದೆ.

  • ಬೆಂಗಳೂರು 69 ಚಿತ್ರಕ್ಕಾಗಿ ಯೂರೋಪ್ ಬೆಲ್ಲಿ ಡ್ಯಾನ್ಸರ್.!

    ಬೆಂಗಳೂರು 69 ಚಿತ್ರಕ್ಕಾಗಿ ಯೂರೋಪ್ ಬೆಲ್ಲಿ ಡ್ಯಾನ್ಸರ್.!

    ಇದುವರೆಗೂ ಯಾರೂ ಮಾಡಲಾಗದ ಸ್ಥಳಗಳಲ್ಲಿ ಬೆಂಗಳೂರು 69 ಚಿತ್ರೀಕರಣ.!

    ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟಿಸುತ್ತಿರುವ ‘ಬೆಂಗಳೂರು 69’ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದ್ದು ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

    ಕನ್ನಡದ ಆರ್ ಜಿವಿ (RGV) ಎಂದೇ ಹೆಸರಾಗುತ್ತಿರುವ ನಿರ್ಮಾಪಕ ಝೀಕೆ (ZK) ಮತ್ತೆ ಸುದ್ದಿಯಾಗುತ್ತಿದ್ದಾರೆ. ಬೆಂಗಳೂರು 69 ಚಿತ್ರಕ್ಕಾಗಿ ಇತ್ತೀಚೆಗೆ ಕಬಿನಿ ರೆಸಾರ್ಟನಲ್ಲಿ ಬಹಳ ವಿಭಿನ್ನವಾಗಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ಝಾಕೀರ್ ಹುಸೇನ್ ಕರೀಂಖಾನ್ ಇದೀಗ ಮತ್ತೊಂದು ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಚಿತ್ರೀಕರಿಸಿದ್ದು ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರತಂಡ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾ ಬಳಿಯ ರೆಡ್‍ಝೋನ್ ಹಾಗೂ ಶಾರ್ಜಾ ಮರುಭೂಮಿ ಬಳಿ ಚಿತ್ರೀಕರಣ ನಡೆಸಿದೆ. ಈ ಶೂಟಿಂಗ್‍ನಲ್ಲಿ ಯೂರೋಪ್‍ನ ಖ್ಯಾತ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ಭಾಗವಹಿಸಿದ್ದರು.

    ಇದೇ ಮೊದಲ ಬಾರಿಗೆ ಗ್ರೆಸಿಲ್ಲಾ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಎಷ್ಟೋ ಬಾಲಿವುಡ್ ನಿರ್ಮಾಪಕರು ಗ್ರೆಸಿಲ್ಲಾ ಡೇಟ್ಸ್ ಕೇಳಿದರೂ ಆಕೆ ಒಪ್ಪಿರಲಿಲ್ಲ. ಆದರೆ ಬೆಂಗಳೂರು 69 ಚಿತ್ರದ ಕಥೆ ಕೇಳಿ ಖುಷಿಯಿಂದ ಒಪ್ಪಿ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಮೆರಿಕದ ಕಾಸ್ಟ್ಯೂಮ್ ಡಿಸೈನರ್, ಗ್ರೆಸಿಲ್ಲಾ ಡ್ಯಾನ್ಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಒಂದು ವಿಶೇಷ ಡ್ಯಾನ್ಸ್ ಗೆ ಇನ್ನೂ ಹೆಚ್ಚಿನ ಮೆರುಗು ತರಲು ನಿರ್ಮಾಪಕ ಝಾಕೀರ್ ಹುಸೇನ್ ಕರೀಂಖಾನ್ ಅವರು ಲ್ಯಾಟಿನ್ ಅಮೆರಿಕದ ಕೊರಿಯೋಗ್ರಾಫರ್ ಹಾಗೂ ರಷ್ಯಾ, ಸೌತ್ ಆಫ್ರಿಕಾ ತಂತ್ರಜ್ಞರನ್ನು ಚಿತ್ರಕ್ಕಾಗಿ ಕರೆತಂದಿದ್ದಾರೆ.

    ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂಖಾನ್ ಅವರ ಪತ್ನಿ ಗುಲ್ಜಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪರಮೇಶ್ ಛಾಯಾಗ್ರಹಣವಿದ್ದು, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.