Tag: Burger King

  • ಯುವಕನನ್ನು ರೆಸ್ಟೋರೆಂಟ್‍ಗೆ ಕರೆಸಿ ಹತ್ಯೆ – ಮಹಿಳೆಯಿಂದ ಹನಿಟ್ರ್ಯಾಪ್ ಶಂಕೆ

    ಯುವಕನನ್ನು ರೆಸ್ಟೋರೆಂಟ್‍ಗೆ ಕರೆಸಿ ಹತ್ಯೆ – ಮಹಿಳೆಯಿಂದ ಹನಿಟ್ರ್ಯಾಪ್ ಶಂಕೆ

    – ಶೂಟೌಟ್ ವಿಡಿಯೋ ಫುಲ್ ವೈರಲ್

    ನವದೆಹಲಿ: ದೆಹಲಿಯ ರಾಜೌರಿ ಗಾರ್ಡನ್‍ನ ಬರ್ಗರ್ ಕಿಂಗ್‍ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಹನಿಟ್ರ್ಯಾಪ್ ಮೂಲಕ ಕರೆಸಿ ವ್ಯಕ್ತಿಯನ್ನು ಹತ್ಯೆಗೈದ ಶಂಕೆ ವ್ಯಕ್ತವಾಗಿದೆ.

    ಜೂ.18 ರಂದು ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‍ನಲ್ಲಿರುವ ಬರ್ಗರ್ ಕಿಂಗ್ ಔಟ್‍ಲೆಟ್‍ನೊಳಗೆ ಅಮನ್ (26) ಎಂಬಾತನನ್ನು ಹತ್ಯೆಗೈಯಲಾಗಿತ್ತು. ಈ ವೇಳೆ ಆತನೊಂದಿಗೆ ಕುಳಿತಿದ್ದ ಮಹಿಳೆ ತನ್ನ ಫೋನ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರವನ್ನು ತೋರಿಸಿದ್ದಾಳೆ. ಈ ವೇಳೆ ಮೊದಲ ಗುಂಡು ಹಾರಿಸಲಾಯಿತು. ಬಳಿಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಪಿಸ್ತೂಲುಗಳಿಂದ ಆತನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಅಮನ್ ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿಹೋಗಿದ್ದಾನೆ. ಆತನನ್ನು ಹಿಂಬಾಲಿಸಿ ಪಾಯಿಂಟ್-ಬ್ಲಾಂಕ್ ರೇಂಜ್‍ನಿಂದ ಅನೇಕ ಬಾರಿ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ರಾಜ್ಯ 7ನೇ ವೇತನ ಆಯೋಗ ಜಾರಿ ವಿಚಾರ- ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!

    ಶೂಟೌಟ್ ನಡೆಯುವಾಗ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ. ಆದರೆ ಅಮನ್ ಜೊತೆ ಕುಳಿತಿದ್ದ ಮಹಿಳೆ ಘಟನೆಯಿಂದ ವಿಚಲಿತಳಾಗದೆ ಅಲ್ಲೇ ಇದ್ದಳು. ಬಳಿಕ ಅಮನ್‍ನ ಫೋನ್ ಮತ್ತು ವ್ಯಾಲೆಟ್‍ನೊಂದಿಗೆ ಆಕೆ ಪರಾರಿಯಾಗಿದ್ದಾಳೆ. ಈಗ ಕೃತ್ಯದಲ್ಲಿ ಮಹಿಳೆಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಮಹಿಳೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇಬ್ಬರು ಶೂಟರ್‍ಗಳು ಎರಡಕ್ಕಿಂತ ಹೆಚ್ಚು ಗನ್ ಬಳಸಿ 38 ಗುಂಡುಗಳನ್ನು ಹಾರಿಸಿದ್ದಾರೆ. ಕೃತ್ಯಕ್ಕೆ ಬೇರೆ ಬೇರೆ ಮಾದರಿಯ ಗನ್ ಬಳಸಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ.

    ಪ್ರಕರಣಕ್ಕೆ ಪೋರ್ಚುಗಲ್ ಸಂಪರ್ಕ
    ಪರಾರಿಯಾಗಿರುವ ದರೋಡೆಕೋರ ಹಿಮಾಂಶು ಭಾವು, ಈಗ ಪೋರ್ಚುಗಲ್‍ನಲ್ಲಿದ್ದಾನೆ ಎಂದು ಶಂಕಿಸಲಾಗಿದ್ದು, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕೊಲೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾನೆ. ನಮ್ಮ ಸಹೋದರ ಶಕ್ತಿ ದಾದಾನ ಹತ್ಯೆಯಲ್ಲಿ ಅಮನ್ ಭಾಗಿಯಾಗಿದ್ದ. ಅದಕ್ಕಾಗಿ ಇದು ಸೇಡು ಎಂದು ಹಿಮಾಂಶು ಭಾವು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ದೆಹಲಿ ಮತ್ತು ಹರಿಯಾಣದಾದ್ಯಂತ ಹಿಮಾಂಶು ಭಾವು ಸುಲಿಗೆಗೆ ಕುಖ್ಯಾತನಾಗಿದ್ದಾನೆ. ಆತ ಜೈಲಿನಲ್ಲಿರುವ ದರೋಡೆಕೋರ ನೀರಜ್ ಬವಾನಾ ಸಹಚರನಾಗಿದ್ದಾನೆ. ಆತ 2022 ರಲ್ಲಿ ದೇಶದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

  • 27 ವರ್ಷ ರಜೆ ಇಲ್ಲದೇ ಕೆಲಸ ಮಾಡಿದ ವ್ಯಕ್ತಿಗೆ ಸಿಕ್ತು 3.5 ಕೋಟಿ ರೂ. ಗಿಫ್ಟ್‌

    27 ವರ್ಷ ರಜೆ ಇಲ್ಲದೇ ಕೆಲಸ ಮಾಡಿದ ವ್ಯಕ್ತಿಗೆ ಸಿಕ್ತು 3.5 ಕೋಟಿ ರೂ. ಗಿಫ್ಟ್‌

    ವಾಷಿಂಗ್ಟನ್: ಸತತ 27 ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದ ವ್ಯಕ್ತಿಗೆ 3.5 ಕೋಟಿ ರೂ. ಬಹುಮಾನವಾಗಿ ಸಿಕ್ಕಿದೆ.‌

    ಅಮೆರಿಕದ (America) ಬರ್ಗರ್‌ ಕಿಂಗ್‌ (Burger King) ಕಂಪನಿ ಉದ್ಯೋಗಿ ಕೆವಿನ್‌ ಫೋರ್ಡ್‌ 27 ವರ್ಷ ರಜೆ ಇಲ್ಲದೇ ಕೆಲಸ ಮಾಡಿದ್ದರು. ಆದರೆ ನಿವೃತ್ತಿ ಸಂದರ್ಭದಲ್ಲಿ ಕಂಪನಿ ಇವರಿಗೆ ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ ಕೈ ತೊಳೆದುಕೊಂಡಿತು. ತನ್ನ ಅತ್ಯಮೂಲ್ಯ ಸೇವೆಗಾಗಿ ಕಂಪನಿಯಿಂದ ಏನಾದರು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಫೋರ್ಡ್‌ಗೆ ಸಹಜವಾಗಿಯೇ ನಿರಾಸೆಯಾಯಿತು. ಇದನ್ನೂ ಓದಿ: ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ಇದರಿಂದ ಬೇಸರಗೊಂಡ ಫೋರ್ಡ್‌ನ ಮಗಳು ಸೆರಿನಾ ಸಾಮಾಜಿಕ ಜಾಲತಾಣದಲ್ಲಿ ತನ್ನ ತಂದೆಯ ಕರ್ತವ್ಯ ನಿಷ್ಠೆ ಬಗ್ಗೆ ವೀಡಿಯೋವೊಂದನ್ನು ಅಪ್ಲೋಡ್‌ ಮಾಡಿದ್ದರು. ತನ್ನ ತಂದೆ ಸೇವೆಗೆ ಅರ್ಹವಾದ ಮನ್ನಣೆ ಸಿಗಬೇಕು ಎಂದು GoFundMe ಅಭಿಯಾನವನ್ನು ಪ್ರಾರಂಭಿಸಿದರು.

    ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆವಿನ್‌ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವದಾದ್ಯಂತ ಜನರು ದೇಣಿಗೆ ನೀಡಿದರು. ಇದರ ಫಲವಾಗಿ 4,18,000 ಡಾಲರ್‌ ಅಂದರೆ 3.48 ಕೋಟಿಗೂ ಹೆಚ್ಚು ದೇಣಿಗೆ ಹರಿದು ಬಂತು. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು!

    ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು!

    ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು.

    ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ ಸಾಜಿತ್ ಸ್ನೇಹಿತರು ಬರ್ಗರ್ ಪರಿಶೀಲಿಸಿದಾಗ ಅದರಲ್ಲಿ ಗಾಜಿನ ಪೀಸ್ ಇತ್ತು. ತಕ್ಷಣ ಸ್ನೇಹಿತರು ಸಾಜಿತ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಸಾಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆಂದು ಸ್ನೇಹಿತರು 15,000 ರೂ. ನೀಡಿದ್ದರು. ಬಳಿಕ ಮರುದಿನ ಚಿಕಿತ್ಸೆಗೆಂದು ದುಪ್ಪಟ್ಟು ಹಣವನ್ನು ಖರ್ಚು ಮಾಡಿದ್ದಾರೆ. ಈ ಬಗ್ಗೆ ಬರ್ಗರ್ ಕಿಂಗ್ ಮ್ಯಾನೇಜರ್ ಸಿದ್ಧಾರ್ಥ್ ಅವರನ್ನು ಸಂಪರ್ಕಿಸಿದಾಗ, “ಈ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಹಾರಿಕೆ ಉತ್ತರ ನೀಡಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಗ್ರಾಹಕರ ದೂರಿನ ಮೇರೆಗೆ ಮೇ 18ರಂದು ಬರ್ಗರ್ ಕಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಆಸ್ಪತ್ರೆಯಲ್ಲಿ ಮೆಡಿಕಲ್ ರಿಪೋರ್ಟ್ ಬಂದ ನಂತರ ವಿಚಾರಣೆ ಮುಂದುವರಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ದೀಪಕ್ ಲಾಗಡ್ ಹೇಳಿದ್ದಾರೆ.