Tag: Burger

  • ಆರ್ಡರ್ ಮಾಡಿದ ಬರ್ಗರ್​ನಲ್ಲಿ  ಸಿಕ್ತು ಕೈ ಬೆರಳು

    ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಕೈ ಬೆರಳು

    ವಾಷಿಂಗ್ಟನ್: ಯುವತಿ ಆರ್ಡರ್ ಮಾಡಿದ ಬರ್ಗರ್​ನಲ್ಲಿ ಮನುಷ್ಯನ ಬೆರಳು ಸಿಕ್ಕು ಬೆಚ್ಚಿಬೀಳಿಸಿದ ಘಟನೆ ಬೊಲಿವಿಯಾದಲ್ಲಿ ನಡೆದಿದೆ.

    ಮಹಿಳೆಯೊಬ್ಬರು ರೆಸ್ಟೋರೆಂಟ್‍ನಿಂದ ಆರ್ಡರ್ ಮಾಡಿ ತರಿಸಿಕೊಂಡ ಬರ್ಗರ್​ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ. ಆ ಚಿತ್ರಗಳನ್ನು ಸೆರೆ ಹಿಡಿದ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಜತೆಗೆ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವರು ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜನ ಅಸಮಾನ್ಯ, ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ

    ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವ ಜಾರ್ಜ್ ಸಿಲ್ವಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿ, ಕೆಲಸದಲ್ಲಿ ವ್ಯಕ್ತಿ ಅಚಾನಕ್‍ಗಿ ಯಂತ್ರದಿಂದ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಈ ವಿಷಯ ಇದೀಗ ತಿಳಿದು ಬಂದಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಆನ್‍ಲೈನ್ ಬೆಟ್ಟಿಂಗ್ ನಿಷೇಧ: ಅರಗ ಜ್ಞಾನೇಂದ್ರ

    ಕಳೆದ ಶುಕ್ರವಾರ ಕೆಲಸಗಾರ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಆತನ ಎರಡು ಬೆರಳು ತುಂಡಾಗಿವೆ. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಮಾಂಸವನ್ನು ರುಬ್ಬುವ ಯಂತ್ರವನ್ನು ನಿರ್ವಹಿಸುತ್ತಿದ್ದ ಕೆಲಸಗಾರ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ. ಕೆಲಸಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಇನ್ನೂ ಗುಣಮುಖನಾಗಿಲ್ಲ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಬಿಗ್‍ಬಾಸ್‍ನಿಂದ ಹೊರಬಂದ ಬಳಿಕ ದಾಖಲೆ ಬರೆದ ವೈಷ್ಣವಿ

    ಮಾಂಸ ರುಬ್ಬುವ ಕಾರ್ಖಾನೆ ಸುಮಾರು 20 ರೆಸ್ಟೋರೆಂಟ್‍ಗಳಿಗೆ ಬರ್ಗರ್‍ಅನ್ನು ಪೂರೈಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ದುರಾದೃಷ್ಟವಶಾತ್ ಮನುಷ್ಯನ ಬೆರಳು ಮಹಿಳೆ ಆರ್ಡರ್ ಮಾಡಿದ ಬರ್ಗರ್‍ನಲ್ಲಿ ಸಿಕ್ಕಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ. ಈ ಕೃತ್ಯದ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಸಿಲ್ವಾ ಸ್ಪಷ್ಟಪಡಿಸಿದ್ದಾರೆ.

  • ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು!

    ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು!

    ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು.

    ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ ಸಾಜಿತ್ ಸ್ನೇಹಿತರು ಬರ್ಗರ್ ಪರಿಶೀಲಿಸಿದಾಗ ಅದರಲ್ಲಿ ಗಾಜಿನ ಪೀಸ್ ಇತ್ತು. ತಕ್ಷಣ ಸ್ನೇಹಿತರು ಸಾಜಿತ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಸಾಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆಂದು ಸ್ನೇಹಿತರು 15,000 ರೂ. ನೀಡಿದ್ದರು. ಬಳಿಕ ಮರುದಿನ ಚಿಕಿತ್ಸೆಗೆಂದು ದುಪ್ಪಟ್ಟು ಹಣವನ್ನು ಖರ್ಚು ಮಾಡಿದ್ದಾರೆ. ಈ ಬಗ್ಗೆ ಬರ್ಗರ್ ಕಿಂಗ್ ಮ್ಯಾನೇಜರ್ ಸಿದ್ಧಾರ್ಥ್ ಅವರನ್ನು ಸಂಪರ್ಕಿಸಿದಾಗ, “ಈ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಹಾರಿಕೆ ಉತ್ತರ ನೀಡಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಗ್ರಾಹಕರ ದೂರಿನ ಮೇರೆಗೆ ಮೇ 18ರಂದು ಬರ್ಗರ್ ಕಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಆಸ್ಪತ್ರೆಯಲ್ಲಿ ಮೆಡಿಕಲ್ ರಿಪೋರ್ಟ್ ಬಂದ ನಂತರ ವಿಚಾರಣೆ ಮುಂದುವರಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ದೀಪಕ್ ಲಾಗಡ್ ಹೇಳಿದ್ದಾರೆ.