Tag: burevi cyclone

  • ಬುರೇವಿ ಚಂಡಮಾರುತ ಎಫೆಕ್ಟ್- ನಾಳೆ, ನಾಡಿದ್ದು ಬೆಂಗ್ಳೂರಲ್ಲಿ ಮಳೆ

    ಬುರೇವಿ ಚಂಡಮಾರುತ ಎಫೆಕ್ಟ್- ನಾಳೆ, ನಾಡಿದ್ದು ಬೆಂಗ್ಳೂರಲ್ಲಿ ಮಳೆ

    – ಡಿ. 6 ರಂದು ರಾಜ್ಯದ ಹಲವೆಡೆ ಬೀಳಲಿದೆ ಮಳೆ

    ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಬುರೇವಿ ಅಬ್ಬರದಿಂದ ಇಂದಿನಿಂದ ಡಿ.5 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುರೇವಿ ಚಂಡಮಾರುತ ಎದ್ದಿದೆ. ಪ್ರತಿ ಗಂಟೆಗೆ 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸ್ತಿದೆ. ಡಿಸೆಂಬರ್ 3ರ ರಾತ್ರಿ ಅಥವಾ ಡಿಸೆಂಬರ್ 4ರ ಬೆಳಗ್ಗೆ ತಮಿಳುನಾಡು ಮತ್ತು ಕನ್ಯಾಕುಮಾರಿಗೆ ಸೈಕ್ಲೋನ್, ಎಫೆಕ್ಟ್ ಆಗಲಿದೆ. ಇದರ ಪರಿಣಾಮ ಇಂದಿನಿಂದ ಡಿ.5 ರವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಇಂದು, ನಾಳೆ ಮತ್ತು ನಾಡಿದ್ದು ಮಳೆಯಾಗಲಿದೆ. ಮೂರು ದಿನವೂ ಜಿಟಿ ಜಿಟಿ ಹಾಗೂ ತುಂತುರು ಮಳೆಯಾಗಲಿದೆ. ಡಿ.6 ಮತ್ತು 7ರಂದು ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಇಂದಿನಿಂದ 6ರವರೆಗೆ ಮಳೆಯಾಗಲಿದೆ.

  • ಬುರೆವಿ ಸೈಕ್ಲೋನ್ ಎಫೆಕ್ಟ್ – ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಚಳಿ ಜೊತೆ ತುಂತುರು ಮಳೆ

    ಬುರೆವಿ ಸೈಕ್ಲೋನ್ ಎಫೆಕ್ಟ್ – ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಚಳಿ ಜೊತೆ ತುಂತುರು ಮಳೆ

    ಬೆಂಗಳೂರು: ನಿವಾರ್ ಚಂಡಮಾರುತದ ಬೆನ್ನಲ್ಲೇ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುರೆವಿ ಚಂಡಮಾರುತ ಎಂಟ್ರಿ ಕೊಟ್ಟಿದೆ. ಶೀತಗಾಳಿ ಜೊತೆಗೆ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುತ್ತಿದೆ.

    ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸಾಧ್ಯತೆ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬುರೆವಿ ಸೈಕ್ಲೋನ್ ಪರಿಣಾಮ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗೋ ನಿರೀಕ್ಷೆ ಇದೆ. ಬೆಂಗಳೂರಲ್ಲಿ ತುಂತುರು ಮಳೆ ಆರಂಭವಾಗಿದ್ದು, ಚಳಿಯ ಜೊತೆ ಮಳೆಯ ಸಿಂಚನವಾಗುತ್ತಿದೆ. ಇದರಿಂದ ಆಫೀಸ್ ಗೆ ಹೋಗುವವರಿಗೆ ವರುಣದೇವ ಅಡ್ಡಿಯಾಗುತ್ತಿದ್ದಾನೆ.

    ಕೇರಳದ 9 ಜಿಲ್ಲೆಗಳಲ್ಲಿ ಬುರೆವಿ ಅಬ್ಬರ ಜೋರಾಗಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶ್ರೀಲಂಕದಾ ನಾರ್ಥನ್ ಕೋಸ್ಟ್ ಲ್ ನಲ್ಲಿ ಬುರೆವಿ ಸೈಕ್ಲೋನ್ ಉಗಮವಾಗಿದೆ. ಮನ್ನಾರ್ ಕೊಲ್ಲಿ ದಾಟಿ ಕೇರಳ ಮತ್ತು ತಮಿಳುನಾಡಿನಲ್ಲಿಯೂ ಅಬ್ಬರ ಆರಂಭವಾಗಿದೆ. ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 75 ರಿಂದ 95 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.