Tag: bunk

  • ನೋ ಮಾಸ್ಕ್ ನೋ ಪೆಟ್ರೋಲ್ – ಬಂಕ್‍ಗಳ ಮುಂದೆ ಬೋರ್ಡ್

    ನೋ ಮಾಸ್ಕ್ ನೋ ಪೆಟ್ರೋಲ್ – ಬಂಕ್‍ಗಳ ಮುಂದೆ ಬೋರ್ಡ್

    ಬೆಂಗಳೂರು: ಕೊರೊನಾ ಭೀತಿಯಿಂದ ಎಲ್ಲರೂ ಮಾಸ್ಕ್ ಧರಿಸಿ ಓಡಾಡುವಂತೆ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಿವೆ. ಈಗ ಬಂಕ್‍ಗಳಿಗೆ ಬರುವ ವ್ಯಕ್ತಿಗಳು ಮಾಸ್ಕ್ ಧರಸದಿದ್ದರೆ ಪೆಟ್ರೋಲ್ ನೀಡುವುದಿಲ್ಲ ಎಂದು ಬಂಕ್‍ಗಳೇ ಬೋರ್ಡ್ ಹಾಕಿಕೊಂಡಿವೆ.

    ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರು. ಇದರ ಜೊತೆಗೆ ಏಪ್ರಿಲ್ 20ರವರೆಗೆ ಡಬಲ್ ಲಾಕ್‍ಡೌನ್ ಇರಲಿದ್ದು, ಕಠಿಣ ರೀತಿಯಲ್ಲಿ ಕಾನೂನನ್ನು ಜಾರಿ ಮಡಲಾಗುವುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಮೋದಿ ಅವರ ಮಾತಿನಂತೆ ಮಾಸ್ಕ್ ಹಾಕದೇ ಇರುವ ವಾಹನ ಸವಾರರಿಗೆ ಪೆಟ್ರೋಲ್ ಹಾಕುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದ್ದಾರೆ.

    ಈ ವಿಚಾರವಾಗಿ ನೋ ಮಾಸ್ಕ್ ನೋ ಫ್ಯೂಯೆಲ್ ಎಂಬ ಹೊಸ ನಿಯಮವನ್ನು ಕೆಲ ಬಂಕ್‍ಗಳೇ ಜಾರಿಗೆ ತಂದಿದ್ದು, ಬೆಂಗಳೂರಿನ ಕೆಲ ಪೆಟ್ರೋಲ್ ಬಂಕ್‍ಗಳಲ್ಲಿ ಮಾಸ್ಕ್ ಹಾಕಿದ್ದರೇ ಮಾತ್ರ ಪೆಟ್ರೋಲ್ ಹಾಕುತ್ತೇವೆ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಸಿಕೊಂಡಿದ್ದರೆ ಮಾತ್ರ ಪೆಟ್ರೋಲ್ ಹಾಕುತ್ತೇವೆ ಎಂದು ಬಂಕ್‍ಗಳೇ ಗ್ರಾಹಕರಿಗೆ ತಿಳಿಸುತ್ತಿವೆ.

  • ಹೆಲ್ಮೆಟ್ ಇಲ್ಲ ಅಂದ್ರೆ ಪೆಟ್ರೋಲ್ ಸಿಗಲ್ಲ!

    ಹೆಲ್ಮೆಟ್ ಇಲ್ಲ ಅಂದ್ರೆ ಪೆಟ್ರೋಲ್ ಸಿಗಲ್ಲ!

    ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇನ್ನು ಮುಂದೆ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬಂಕ್ ಹೋದರೆ ಪೆಟ್ರೋಲ್ ಸಿಗುವುದಿಲ್ಲ.

    ಫೆಬ್ರವರಿ 22 ರಿಂದ ಈ ನಿಯಮ ಜಾರಿ ಬರಲಿದ್ದು, ಪೆಟ್ರೋಲ್ ತುಂಬಿಸಿಕೊಳ್ಳಲು ಬರುವ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್ ನಾಗರಾಜ್ ಪೆಟ್ರೋಲ್ ಬಂಕ್ ಮಾಲೀಕರಿಗೆ ಹೆಲ್ಮೆಟ್ ಹಾಕಿಕೊಳ್ಳದೇ ಬರುವರಿಗೆ ಪೆಟ್ರೋಲ್ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪೊಲೀಸ್ ಆಯುಕ್ತರ ಮನವಿ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ಜಾಗೃತಿ ಮೂಡಿಸಲು ಈ ನಿಯಮ ಪಾಲನೆಗೆ ಮುಂದಾಗಿದ್ದಾರೆ. ಆದರೆ ಕೆಲ ಬೈಕ್ ಸವಾರರು ಇದಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಕೂಡಾ ಇದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲ ಗ್ರಾಹಕರು ಬಂಕ್ ಗಳ ಹೊಸ ನಿಯಮ ಸ್ವಾಗತಿಸಿದ್ದು ಮೆಚ್ಚುಗೆ ಸೂಚಿಸಿದ್ದಾರೆ.

     

     

  • ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್- ಮಂಡ್ಯದ ಪೆಟ್ರೋಲ್ ಬಂಕ್ ಬಳಿ ನೂರಾರು ಗ್ರಾಹಕರಿಂದ ತರಾಟೆ

    ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್- ಮಂಡ್ಯದ ಪೆಟ್ರೋಲ್ ಬಂಕ್ ಬಳಿ ನೂರಾರು ಗ್ರಾಹಕರಿಂದ ತರಾಟೆ

    ಮಂಡ್ಯ: ಪೆಟ್ರೋಲ್ ಬಂಕ್ ನಲ್ಲಿ ತಾವು ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್ ಹಾಕುತ್ತಿದ್ದಾರೆಂದು ನೂರಾರು ಸಾರ್ವಜನಿಕರು ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ನಿಶಾಂಶ್ ಪಟೇಲ್ ಎಂಬ ಯುವಕ ಮಂಡ್ಯದ ಸಂಜಯ ವೃತ್ತದ ಬಳಿಯಿರುವ ಎಚ್‍ಪಿ ಪೆಟ್ರೋಲ್ ಬಂಕ್ ನಲ್ಲಿ 200 ರೂಪಾಯಿ ಕೊಟ್ಟು ಪ್ಲಾಸ್ಟಿಕ್ ಕ್ಯಾನ್ ಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಆದರೆ ಕ್ಯಾನ್ ಗೆ ತಾವು ಕೊಟ್ಟ ಹಣಕ್ಕಿಂತ ಸುಮಾರು 200 ಮಿಲಿಲೀಟರ್ ಪೆಟ್ರೋಲ್ ಕಡಿಮೆ ಹಾಕಿದ್ದಾರೆ ಎಂದು ಯುವಕ ಬಂಕ್‍ ನವರನ್ನು ಪ್ರಶ್ನೆ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದ ಗ್ರಾಹಕರು ಕೂಡ ಯುವಕನ ಪರವಾಗಿ ಬಂಕ್ ನವರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಬಂಕ್ ನವರು ಮತ್ತೆ ಪ್ರತ್ಯೇಕವಾಗಿ ಪೆಟ್ರೋಲ್ ಅಳತೆ ಮಾಡಿ ಗ್ರಾಹಕರಿಗೆ ತೋರಿಸಿದ್ದಾರೆ. ಅದರಲ್ಲೂ ಪೆಟ್ರೋಲ್ ಕಡಿಮೆ ಬಂದಿದೆ. ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ನೂರಾರು ಗ್ರಾಹಕರು ಪೆಟ್ರೋಲ್ ಬಂಕ್ ಬಳಿ ಜಮಾಯಿಸಿ ಬಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಬಂಕ್ ನವರು ಮತ್ತು ಗ್ರಾಹಕರ ನಡುವೆ ಜೋರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವ ಭರವೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.

  • ಕ್ಯಾನಿಗೆ ಡೀಸೆಲ್ ಹಾಕಿಸಿದಾಗ ಗೊತ್ತಾಯಿತು ಬಂಕ್‍ನವರ ಮೋಸ!

    ಕ್ಯಾನಿಗೆ ಡೀಸೆಲ್ ಹಾಕಿಸಿದಾಗ ಗೊತ್ತಾಯಿತು ಬಂಕ್‍ನವರ ಮೋಸ!

    ಧಾರವಾಡ: ಡೀಸೆಲ್ ಹಾಕಿಸಲು ಬಂಕ್‍ಗೆ ಹೋದಾಗ ಬಂಕ್‍ನವರು ವಾಹನ ಮಾಲಿಕರಿಗೆ ಹೇಗೆ ಮೋಸ ಮಾಡ್ತಾರೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.

    ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಮುಮ್ಮಿಗಟ್ಟಿ ಗ್ರಾಮದ ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‍ನಲ್ಲಿ ರಾತ್ರಿ ಅಜೀತ ಅಷ್ಟಗಿ ಎಂಬವರು ಡೀಸೆಲ್ ಹಾಕಿಸಲು ಹೋಗಿದ್ದರು. ಅವರು 2000 ಸಾವಿರ ರೂ.ಗಳ ಡೀಸೆಲ್ ಕ್ಯಾನಿನಲ್ಲಿ ಹಾಕಿಸಿದ್ದಾರೆ. ಡಿಸೇಲ್ ಕಡಿಮೆ ಬಂದಿರುವುದಾಗಿ ಅನುಮಾನ ಗೊಂಡು ಮತ್ತೆ ಬಂಕ್ ಸಿಬ್ಬಂದಿ ಇಂದಲೇ ಅಳತೆ ಮಾಡಿಸಿದಾಗ, ಸುಮಾರು 4 ರಿಂದ 5 ಲೀಟರನಷ್ಟು ಡೀಸೆಲ್ ಕಡಿಮೆ ಬಂದಿದ್ದು ಗೊತ್ತಾಗಿ ಮಾಲೀಕರ ವಿರುದ್ಧ ಆಕ್ರೋಶಗೊಂಡು ಬಂಕ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.

    ಈ ಪೆಟ್ರೋಲ್ ಬಂಕ್ ನಿವೃತ್ತ ಡಿವೈಎಸ್‍ಪಿ ಚೌಹಾಣರದ್ದು. ಪ್ರತಿ ದಿನ ಸಾವಿರಾರು ಲಾರಿಗಳು ಹಾಗೂ ವಾಹನಗಳು ಡೀಸೆಲ್ ಹಾಕಿಸಲು ಬರುತ್ತವೆ. ಇಲ್ಲಿ ಎಷ್ಟೊಂದು ಮೋಸ ಆಗುತ್ತೆ ಎಂಬುದು ಕ್ಯಾನಿನಲ್ಲಿ ಡೀಸೆಲ್ ಹಾಕಿದ ಮೇಲೆಯೇ ಗೊತ್ತಾಗಿದ್ದು. ಬೇರೆ ಯಾರಿಗೂ ಈ ರೀತಿ ಮೋಸ ಆಗದೇ ಇರಲಿ ಎಂಬುದು ನಮ್ಮ ಕಾಳಜಿ ಅಂತ ವಾಹನ ಮಾಲಿಕ ಅಜೀತ ಹೇಳಿದ್ದಾರೆ.

    ಈ ಬಗ್ಗೆ ಬಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಡೀಸೆಲ್ ಕಡಿಮೆ ಬಂದಿದ್ದನ್ನು ಒಪ್ಪಿಕೊಂಡಿದ್ದಾರೆ. ಎಷ್ಟು ಜನ ಈ ರೀತಿ ಮೋಸ ಹೋಗ್ತಾರೋ ಗೊತ್ತಿಲ್ಲ. ವಾಹನ ಸವಾರರು ಸ್ವಲ್ಪ ಎಚ್ಚರದಿಂದ ತಮ್ಮ ವಾಹನಗಳಿಗೆ ಡೀಸೆಲ್ ಹಾಗೂ ಪೆಟ್ರೋಲ್ ಹಾಕಿಸಬೇಕು. ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಯ ಬಂಕ್‍ನಲ್ಲೇ ಈ ರೀತಿಯಾದ್ರೆ ಇನ್ನುಳಿದ ಬಂಕ್‍ನವರು ಎಷ್ಟು ಮೋಸ ಮಾಡುತ್ತಾರೋ ಗೊತ್ತಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

  • ಪೆಟ್ರೋಲ್ ಕೇಳಿದ್ರೆ ತುಂಬಿಸಿದ್ದೇ ಬೇರೆ- ಚಿಕ್ಕಬಳ್ಳಾಪುರದಲ್ಲಿ ಬಂಕ್‍ಗೆ ಜನರ ಮುತ್ತಿಗೆ, ಆಕ್ರೋಶ

    ಪೆಟ್ರೋಲ್ ಕೇಳಿದ್ರೆ ತುಂಬಿಸಿದ್ದೇ ಬೇರೆ- ಚಿಕ್ಕಬಳ್ಳಾಪುರದಲ್ಲಿ ಬಂಕ್‍ಗೆ ಜನರ ಮುತ್ತಿಗೆ, ಆಕ್ರೋಶ

    ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ನಲ್ಲಿ ಆಸಲಿ ಪೆಟ್ರೋಲ್ ಬದಲು ನೀರು ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುತ್ತಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಪಾಪಣ್ಣ ಎಂಬವರಿಗೆ ಸೇರಿದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಲಾಗಿದೆ. ನೀರು ಮಿಶ್ರಿತ ಪೆಟ್ರೋಲ್ ಹಾಕಿಸಿಕೊಂಡ ಬೈಕ್ ಎಲ್ಲೆಂದರಲ್ಲಿ ಕೆಟ್ಟು ನಿಂತಿದ್ದು, ಇದ್ರಿಂದ ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್‍ಗೆ ಮುತ್ತಿಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್‍ನಲ್ಲಿ ನೀರು ಮಿಶ್ರಿತವಾಗಿರುವುದು ಬೆಳಕಿಗೆ ಬಂದಿದೆ. ಇದ್ರಿಂದ ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೆಟ್ರೋಲ್ ಬಂಕ್ ತೆರೆಯದಂತೆ ಮಾಲೀಕನಿಗೆ ಪೊಲೀಸರು ತಾಕೀತು ಮಾಡಿದ್ದಾರೆ.