Tag: Bungalow

  • ಕಾಂಗ್ರೆಸ್‌ ಶಾಸಕನ ಬಂಗಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    ಕಾಂಗ್ರೆಸ್‌ ಶಾಸಕನ ಬಂಗಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    ಭೋಪಾಲ್‌: ಕಾಂಗ್ರೆಸ್‌ (Congress) ಶಾಸಕರ (MLA) ಅಧಿಕೃತ ಬಂಗಲೆಯಲ್ಲಿ (Bungalow) ಕಾಲೇಜು ವಿದ್ಯಾರ್ಥಿಯೊಬ್ಬ (Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭೋಪಾಲ್‌ನಲ್ಲಿ (Bhopal) ನಡೆದಿದೆ.

    ತಿರತ್‌ ಸಿಂಗ್‌ ಮೃತ ವಿದ್ಯಾರ್ಥಿ. ಈತ ಕಳೆದ 4 ವರ್ಷಗಳಿಂದ ಶಾಸಕ ಓಂಕಾರ್‌ ಸಿಂಗ್‌ ಬಂಗಲೆಯಲ್ಲಿ ವಾಸವಿದ್ದ. ಆದರೆ ತಿರತ್‌ ಸಿಂಗ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ತಿರತ್‌ ಸಿಂಗ್‌ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಘಟನೆಗೆ ಸಂಬಂಧಿಸಿ ತಿರತ್‌ ಸಿಂಗ್‌ ಡೆತ್‌ ನೋಟ್‌ ಬರೆದಿಟ್ಟಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಈ ಡೆತ್‌ನೋಟ್‌ನ್ನು ಕೈಬರಹ ತಜ್ಞರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮಾತನಾಡಿ, ಪ್ರೊಫೆಸರ್ ಕಾಲೋನಿಯಲ್ಲಿರುವ ದಿಡೋರಿ ಶಾಸಕ ಓಂಕಾರ್ ಸಿಂಗ್ ಮರ್ಕಮ್ ಅವರ ಅಧಿಕೃತ ನಿವಾಸದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅಲ್ಲಿಯೇ ಡೆತ್‌ ನೋಟ್‌ ಪತ್ತೆಯಾಗಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವಾಗಬಹುದಾದ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಸಾಕಿದ್ದ ಊಟ ತಿಂದು 10 ಕುರಿ ಸಾವು – 70 ಕುರಿಗಳು ಅಸ್ವಸ್ಥ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಿರತ್ ಜತೆ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದ ವ್ಯಕ್ತಿಯೊಂದಿಗೆ ಮಾತನಾಡಿದ್ದೇವೆ. ಮೃತ ವಿದ್ಯಾರ್ಥಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಭೋಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಿರತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಡೆತ್‌ ನೋಟ್‌ ಹಾಗೂ ಕುಟುಂಬದವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಲ ವಂಚನೆ ಪ್ರಕರಣ – ವೀಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

    Live Tv
    [brid partner=56869869 player=32851 video=960834 autoplay=true]

  • ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಖರೀದಿಸಿದ 100 ಕೋಟಿ ಬೆಲೆಬಾಳುವ ಬಂಗಲೆಗಳು

    ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಖರೀದಿಸಿದ 100 ಕೋಟಿ ಬೆಲೆಬಾಳುವ ಬಂಗಲೆಗಳು

    ಬಾಲಿವುಡ್ ನಟಿ, ದಿವಂಗತ ಶ್ರೀದೇವಿ (Sridevi) ಪುತ್ರಿ ಜಾಹ್ನವಿ ಕಪೂರ್ ಇದೀಗ ಬಂಗಲೆ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದಾರೆ. ಜಾಹ್ನವಿ ಈಗೀಗ ಬಾಲಿವುಡ್ ಗೆ ಕಾಲಿಟ್ಟ ನಟಿ. ಮಾಡಿದ್ದು ಕೇವಲ ನಾಲ್ಕೇ ನಾಲ್ಕು ಸಿನಿಮಾ. ಆದರೂ, ನೂರು ಕೋಟಿಗೆ ಬೆಲೆಬಾಳುವ ಬಂಗಲೆ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಈಕೆ ಪಡೆಯುತ್ತಿರುವ ಸಂಭಾವನೆಯನ್ನು ಲೆಕ್ಕ ಹಾಕಿದರೆ, ದುಬಾರಿ ಕಾರು ಖರೀದಿಸುವುದು ಕಷ್ಟ. ಆದರೆ, ನೂರು ಕೋಟಿಯ ಐಷಾರಾಮಿ ಬಂಗಲೆ ಹೇಗೆ ಖರೀದಿಸಿದರು ಎನ್ನುವ ಕುರಿತು ಬಿಟೌನ್ ನಲ್ಲಿ ಸದ್ದು ಮಾಡುತ್ತಿದೆ.

    ಜಾಹ್ನವಿ (Jahnavi Kapoor) ಖರೀದಿಸಿರುವ ಮನೆ ಮುಂಬೈನ ಬಾದ್ರಾ ಪ್ರದೇಶದಲ್ಲಿದೆ. ಪಾಲಿ ಹಿಲ್ ನಲ್ಲಿರುವ ಕುಬೆಲೆಸ್ಕ್ ಬಿಲ್ಡಿಂಗನ್ ನ ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ಫ್ಲಾಟ್ ಅನ್ನು ಜಾಹ್ನವಿ ಖರೀದಿಸಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಅದೇ ಪ್ರದೇಶದಲ್ಲೇ ಜಾಹ್ನವಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆರು ತಿಂಗಳ ಹಿಂದೆಯಷ್ಟೇ 40 ಕೋಟಿ ಕೊಟ್ಟು ಮನೆಯೊಂದನ್ನು ಖರೀದಿಸಿದ್ದರು. ಇದೀಗ ಬಂದ್ರಾದಲ್ಲಿ 65 ಕೋಟಿ ರೂಪಾಯಿ ಕೊಟ್ಟು ಮತ್ತೊಂದು ಬಂಗಲೆ ಖರೀದಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ನಟಿ ಜಾಹ್ನವಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವವರಿಗೆ ತಂದೆಯತ್ತ ಬೊಟ್ಟು ಮಾಡಿ ತೋರಿಸುತ್ತಾರೆ ನಟಿ. ತಂದೆ ಬೋನಿ ಕಪೂರ್ (Boney Kapoor) ಇಂಡಸ್ಟ್ರಿ ನಡೆಸುತ್ತಾರೆ. ಅದರಿಂದ ಭಾರಿ ಲಾಭ ಕೂಡ ಬರುತ್ತದೆ. ಜಾಹ್ನವಿ ಹಲವು ಉತ್ಪನ್ನಗಳ ರಾಯಭಾರಿ ಕೂಡ. ಈ ಎಲ್ಲದರಿಂದ ಬರುವ ಹಣದಿಂದ ಅವರು ಮನೆಯನ್ನು ಖರೀದಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • 60 ಕೋಟಿ ವೆಚ್ಚದ ದುಬಾರಿ ಬಂಗಲೆ ಖರೀದಿಸಿದ ಅಜಯ್ ದೇವಗನ್

    60 ಕೋಟಿ ವೆಚ್ಚದ ದುಬಾರಿ ಬಂಗಲೆ ಖರೀದಿಸಿದ ಅಜಯ್ ದೇವಗನ್

    ಮುಂಬೈ: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್, ಅರ್ಜುನ್ ಕಪೂರ್ ಮತ್ತು ಜಾನ್ವಿ ಕಪೂರ್ ನಂತರ ಇದೀಗ ನಟ ಅಜಯ್ ದೇವಗನ್ ದುಬಾರಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ನಟ ಅಜಯ್ ದೇವಗನ್‍ರವರು ಜುಹುವಿನಲ್ಲಿ 590 ಚದರ ಅಗಲದ 60 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಖರೀದಿಸಿದ್ದು, ಈ ಬಂಗಲೆ ಪ್ರಸ್ತುತ ಅಜಯ್ ದೇವಗನ್‍ರವರ ಬಂಗಲೆ ಸಮೀಪದಲ್ಲಿದೆ. ಜುಹಿವಿನಲ್ಲಿರುವ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಳಿ ಈ ಬಂಗಲೆಯಿದ್ದು ಈ ಪ್ರದೇಶದಲ್ಲಿ ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಧರ್ಮೇಂದ್ರ ಮತ್ತು ಅಕ್ಷಯ್ ಕುಮಾರ್ ನಂತಹ ದೊಡ್ಡ ದೊಡ್ಡ ಸ್ಟಾರ್ ನಟರು ವಾಸವಾಗಿದ್ದಾರೆ.

    ಕಳೆದ ಒಂದು ವರ್ಷದಿಂದ ನಟ ಅಜಯ್ ದೇವಗನ್‍ರವರು ಹೊಸ ಬಂಗಲೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಡಿಸೆಂಬರ್‍ನಲ್ಲಿ ಡೀಲ್ ಮಾಡಿಕೊಂಡು ಇದೀಗ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಮೂಲಗಳು ತಿಳಿಸಿದೆ. ಇನ್ನೂ ಈ ಬಂಗಲೆ ಅಜಯ್‍ದೇವಗನ್ ಹಾಗೂ ತಾಯಿ ವೀಣಾ ಅವರ ಹೆಸರಿನಲ್ಲಿದ್ದು, ಸುಮಾರು 60-70 ಕೋಟಿ ರೂ. ಬೆಲೆ ಬಾಳುವ ಬಂಗಲೆಯಾಗಿದೆ. ಇದನ್ನು ಓದಿ: ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ಇತ್ತೀಚೆಗಷ್ಟೇ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸ್ವಾಂಕಿಯಲ್ಲಿ 31 ಕೋಟಿಯ ಅಪಾರ್ಟ್‍ಮೆಂಟ್ ಮತ್ತು ನಟ ಅರ್ಜುನ್ ಕಪೂರ್ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರಾ ಅವರ ಮನೆಯ ಬಳಿ 20 ಕೋಟಿ ವೆಚ್ಚದ 4 ಬೆಡ್ ರೂಮ್ ಇರುವ ಅಪಾರ್ಟ್‍ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಅಂದು ಬಾಡಿಗೆ ಮನೆಯಲ್ಲಿ, ಇಂದು ಭವ್ಯವಾದ ಬಂಗಲೆ ಒಡತಿಯಾದ ಗಾಯಕಿ ನೇಹಾ

    ಹೈದರಾಬಾದ್: ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಉತ್ತರಾಖಂಡದ ರಿಷಿಕೇಶದಲ್ಲಿ ಒಂದು ವಿಸ್ತಾರವಾದ ಬಂಗಲೆಯನ್ನು ಖರೀದಿಸಿದ್ದಾರೆ. ಜೊತೆಗೆ ಕಠಿಣ ಶ್ರಮದಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.

    ನೇಹಾ ಕಕ್ಕರ್ ಅವರು ತಾವು ಹುಟ್ಟಿ, ಬೆಳೆದ ಹಳೆಯ ಮನೆಯ ಫೋಟೋದೊಂದಿಗೆ ತಮ್ಮ ಹೊಸ ಬಂಗಲೆ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ನೇಹಾ ಅವರು ತಮ್ಮ ಇಡೀ ಕುಟುಂಬವು ಬಾಡಿಗೆ ಮನೆಯಲ್ಲಿ ಹೇಗೆ ವಾಸಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಕಠಿಣ ಪರಿಶ್ರಮದಿಂದ ಅಂದಿನ ಬಾಡಿಗೆ ಮನೆಯಲ್ಲಿ ಬೆಳೆದು ಇಂದು ಅದೇ ನಗರದಲ್ಲಿ ಬಂಗಲೆಯ ಮಾಲೀಕರಾಗಿರುವುದರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇನ್ಸ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
    “ಈ ಬಂಗಲೆಯನ್ನು ನಾವು ಈಗ ರಿಷಿಕೇಶದಲ್ಲಿ ಖರೀದಿಸಿದ್ದೇವೆ. ಜೊತೆಗೆ ನಮ್ಮ ಹಳೆಯ ಮನೆಯ ಫೋಟೋ ನೋಡಲು ಬಲಕ್ಕೆ ಸ್ವೈಪ್ ಮಾಡಿ. ಅದೇ ಮನೆಯಲ್ಲಿ ನಾನು ಹುಟ್ಟಿದ್ದು, ಒಂದು ರೂಮಿನಲ್ಲಿ ನಾವು ವಾಸಿಸುತ್ತಿದ್ದೆವು. ಆ ಸಣ್ಣ ಕೋಣೆಯಲ್ಲಿ ನಮ್ಮ ತಾಯಿ ಒಂದು ಟೇಬಲ್ ಇಟ್ಟಿದ್ದರು. ಅದೇ ನಮ್ಮ ಅಡುಗೆ ಮನೆಯಾಗಿತ್ತು. ಆ ರೂಮ್ ಕೂಡ ನಮ್ಮದಲ್ಲ, ಅದಕ್ಕೆ ನಾವು ಬಾಡಿಗೆ ಕೊಡುತ್ತಿದ್ದೆವು. ಈಗ ನಾನು ಅದೇ ನಗರದಲ್ಲಿ ನಮ್ಮ ಸ್ವಂತ ಬಂಗಲೆಯನ್ನು ಹೊಂದಿದ್ದೇನೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಮತ್ತು ತಮ್ಮ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ನೇಹಾ ಭಾವನಾತ್ಮಕ ಪೋಸ್ಟ್ ಮಾಡಿದ ನಂತರ ಅದಕ್ಕೆ ಅವರ ಸಹೋದ್ಯೋಗಿಗಳಾದ ಗೀತಾ ಕಪೂರ್, ಆದಿತ್ಯ ನಾರಾಯಣ್, ವಿಶಾಲ್ ದಾದ್ಲಾನಿ ಮತ್ತು ಮನೀಶ್ ಪಾಲ್ ಇತರರು ಕಮೆಂಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನೇಹಾ ಒಂದು ಉದಾಹರಣೆ ಎಂದು ವಿಶಾಲ್ ಹೇಳಿದ್ದಾರೆ. ನೇಹಾ ಅವರು ಬೆಳೆದು ಬಂದ ಹಾದಿ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸದಂತೆ ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಆದಿತ್ಯ ಕಮೆಂಟ್ ಮಾಡಿದ್ದಾರೆ.

    ನೇಹಾ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ನೇಹಾ ಅವರ ಸಹೋದರಿ ಸೋನು ಕಕ್ಕರ್ ಮತ್ತು ಸಹೋದರ ಟೋನಿ ಕಕ್ಕರ್ ಕೂಡ ಗಾಯಕರಾಗಿದ್ದು, ಕೆಲವು ಹಿಟ್ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ.

    https://www.instagram.com/p/B9Y80pXHICf/?utm_source=ig_embed

  • ಉಪಸಮರದ ಗದ್ದಲದ ಮಧ್ಯೆ ಆನಂದ್ ಸಿಂಗ್ ಬೃಹತ್ ಬಂಗಲೆ ಗೃಹಪ್ರವೇಶ

    ಉಪಸಮರದ ಗದ್ದಲದ ಮಧ್ಯೆ ಆನಂದ್ ಸಿಂಗ್ ಬೃಹತ್ ಬಂಗಲೆ ಗೃಹಪ್ರವೇಶ

    ಬಳ್ಳಾರಿ: ವಿಜಯನಗರ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸಖತ್ ಬ್ಯುಸಿ ಆಗಿದ್ದಾರೆ. ಆದರೆ ಈ ಮಧ್ಯೆಯೂ ಅದ್ಧೂರಿಯಾಗಿ ನಿರ್ಮಿಸಿದ ತಮ್ಮ ಬೃಹತ್ ಬಂಗಲೆ ಗೃಹಪ್ರವೇಶ ಕಾರ್ಯಕ್ರಮ ಮಾಡುತ್ತಿದ್ದಾರೆ.

    ನಗರದ ಸ್ಟೇಷನ್ ರಸ್ತೆಯಲ್ಲಿ ಆನಂದ್ ಸಿಂಗ್ ಅವರು ಅರಮನೆ ರೀತಿ ಕಾಣುವ ಬೃಹತ್ ಬಂಗಲೆ ಕಟ್ಟಿಸಿದ್ದಾರೆ. ಅದಕ್ಕೆ ‘ದ್ವಾರಕ ನಿಲಯ’ ಎಂದು ಹೆಸರಿಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಈ ಬೃಹತ್ ಬಂಗಲೆಗೆ ಇಂದು ಸರಳವಾಗಿ ಗೃಹಪ್ರವೇಶ ಮಾಡಲಾಗುತ್ತಿದೆ. ಕುಟುಂಬ ಸದಸ್ಯರಿಗೆ ಮಾತ್ರ ಕಾರ್ಯಕ್ರಮ ಸೀಮಿತವಾಗಿದ್ದು, ಉಪಚುನಾವಣೆ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎನ್ನಲಾಗಿದೆ.

    ಎರಡು ವರ್ಷ ಸಮಯ ಪಡೆದು, ಬರೋಬ್ಬರಿ ಮೂರು ಎಕ್ರೆ ಪ್ರದೇಶದಲ್ಲಿ ಬಂಗಲೆ ನಿರ್ಮಿಸಲಾಗಿದೆ. ಹಾಗೆಯೇ ಕುಟುಂಬಸ್ಥರಿಗೆ ಬಿಟ್ಟರೆ ಒಳಗೆ ಯಾರಿಗೂ ಪ್ರವೇಶವಿಲ್ಲ. ಡಿಸೆಂಬರ್ 1 ರಂದು ಆನಂದ್ ಸಿಂಗ್ ಮಗ ಸಿದ್ದಾರ್ಥ ಸಿಂಗ್ ಮದುವೆ ನಿಶ್ಚಯವಾಗಿದ್ದು, ಮಗನ ಮದುವೆಗೆ ಎಲ್ಲರಿಗೂ ಆನಂದ್ ಸಿಂಗ್ ಆಮಂತ್ರಣ ನೀಡಿದ್ದಾರೆ.

  • ವಾಜಪೇಯಿ ಬಂಗಲೆಗೆ ಚಾಣಕ್ಯ ಶಿಫ್ಟ್ – ನಿವಾಸದ ವಿಶೇಷತೆ ಏನು?

    ವಾಜಪೇಯಿ ಬಂಗಲೆಗೆ ಚಾಣಕ್ಯ ಶಿಫ್ಟ್ – ನಿವಾಸದ ವಿಶೇಷತೆ ಏನು?

    ನವದೆಹಲಿ: ದಿವಂಗತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು 14 ವರ್ಷಗಳ ಕಾಲ ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಬಂಗಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ.

    ವಾಜಪೇಯಿ ಅವರು ಈ ಬಂಗಲೆಯಲ್ಲಿ 2004ರ ವರೆಗೆ ಸುಮಾರು 14 ವರ್ಷ ತನ್ನ ಕುಟುಂಬದ ಜೊತೆ ವಾಸವಿದ್ದರು. 2018 ಆಗಸ್ಟ್ ತಿಂಗಳಿನಲ್ಲಿ ವಾಜಪೇಯಿ ಅವರ ನಿಧನದ ನಂತರ ಅವರ ಕುಟುಂಬ ನವೆಂಬರ್‍ನಲ್ಲಿ ಮನೆಯನ್ನು ಖಾಲಿ ಮಾಡಿತ್ತು.

    ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಇತ್ತೀಚಿಗೆ ಈ ಬಂಗಲೆಗೆ ಭೇಟಿ ನೀಡಿ ಕೆಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಪ್ರಥಮ ಬಾರಿಗೆ ಕೇಂದ್ರ ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಅವರು ಪ್ರಸ್ತುತ 11 ಅಕ್ಬರ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ಬಂಗಲೆಯ ನವೀಕರಣದ ಕಾರ್ಯ ಮುಗಿಯಲಿದ್ದು ನಂತರ ಅಟಲ್ ಬಂಗಲೆಗೆ ಬರಲಿದ್ದಾರೆ.

    2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದ ನಾಯಕರು ಮರಣದ ನಂತರ ಆ ಮನೆಯನ್ನು ಸ್ಮಾರಕ ಮಾಡದೇ ಇರುವ ನಿರ್ಧಾರವನ್ನು ಕೈಗೊಂಡಿತ್ತು. ಈ ಕಾರಣಕ್ಕಾಗಿ ಸರ್ಕಾರ ಸ್ಮøತಿ ಸ್ಥಳದ ಸಮೀಪ ವಾಜಪೇಯೆ ಅವರ ನೆನಪಿಗಾಗಿ ‘ಸದೈವ್ ಅಟಲ್’ ಎಂಬ ಹೆಸರಿನಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದೆ.

    ಅಮಿತ್ ಶಾ ಸದ್ಯ ಇರುವ ಮನೆ 2.3 ಎಕರೆ ವಿಸ್ತೀರ್ಣದಲ್ಲಿದೆ. 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಕೊನೆಯುಸಿರೆಳೆಯುವವರೆಗೂ ಕೃಷ್ಣ ಮೆನನ್ ರಸ್ತೆಯಲ್ಲಿರುವ 3 ಎಕರೆ ವಿಸ್ತೀರ್ಣದಲ್ಲಿದ್ದ ಬಂಗಲೆಯಲ್ಲಿ ವಾಸವಾಗಿದ್ದರು. ಈ ನಿವಾಸದಲ್ಲಿ 7 ಮಲಗುವ ಕೊಠಡಿಗಳಿದ್ದು 2 ಡ್ರಾಯಿಂಗ್ ರೂಂಗಳಿವೆ. ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೆ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯ ನೀಡಬೇಕಾಗಿರುವ ಕಾರಣ ವಾಜಪೇಯಿ ಅವರಿದ್ದ ಮನೆಗೆ ಸ್ಥಳಾಂತರಿಸಲು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

    ವಾಜಪೇಯಿ ಅವರಿಗಿಂತ ಮೊದಲು ಈ ಮನೆಯಲ್ಲಿ ಡಿಎಂಕೆಯ ಮುರಸೋಳಿ ಮಾರನ್ ವಾಸವಾಗಿದ್ದರು. ಆಗ ಇದು 8, ಕೃಷ್ಣ ಮೆನನ್ ಮಾರ್ಗ ಎಂಬ ವಿಳಾಸ ಹೊಂದಿತ್ತು. ಆದರೆ, ವಾಜಪೇಯಿ ಅವರು ಈ ಮನೆಗೆ ಸ್ಥಳಾಂತರಗೊಂಡ ನಂತರದಲ್ಲಿ ಈ ಮನೆಯ ವಿಳಾಸವನ್ನು 6ಎ, ಕೃಷ್ಣ ಮೆನನ್ ಎಂದು ಬದಲಿಸಲಾಗಿತ್ತು.

  • ಸ್ಫೋಟಕ ಬಳಸಿ ನೀರವ್ ಮೋದಿಯ 100 ಕೋಟಿ ಮೌಲ್ಯದ ಬಂಗಲೆ ಧ್ವಂಸ- ವಿಡಿಯೋ ನೋಡಿ

    ಸ್ಫೋಟಕ ಬಳಸಿ ನೀರವ್ ಮೋದಿಯ 100 ಕೋಟಿ ಮೌಲ್ಯದ ಬಂಗಲೆ ಧ್ವಂಸ- ವಿಡಿಯೋ ನೋಡಿ

    ನವದೆಹಲಿ: ಮಹಾರಾಷ್ಟ್ರದ ಅಲಿಬಾಗ್ ಕಡಲ ತೀರಕ್ಕೆ ಮುಖ ಮಾಡಿದಂತೆ ನೀರವ್ ಮೋದಿ ಒಡೆತನದಲ್ಲಿ ನಿರ್ಮಿಸಲಾಗಿದ್ದ ಸುಮಾರು 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದೆ.

    ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಳೆದ 6 ದಿನಗಳಿಂದ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಅಡಿಯಲ್ಲಿ ಸ್ಫೋಟಕಗಳನ್ನು ಇರಿಸಿ ಧ್ವಂಸಗೊಳಿಸಲಾಗಿದೆ. ಯಂತ್ರಗಳನ್ನು ಬಳಸಿ ಬಂಗಲೆಯನ್ನ ಧ್ವಂಸ ಮಾಡಲು ಪ್ರತ್ನಿಸಿದ್ದರೂ, ವಿಫಲವಾದ ಕಾರಣದಿಂದ ಸ್ಫೋಟಕಗಳ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಸುಮಾರು 33,000 ಅಡಿಯಲ್ಲಿ ‘ರೂಪಾನ್ಯ’ ಎಂಬ ಹೆಸರಿನೊಂದಿಗೆ ಮನೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಈ ವೇಳೆ ಕರವಾಳಿ ಪ್ರದೇಶದ ಪರಿಸರದ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿತ್ತು.

    ಈ ಬಗ್ಗೆ ಶಂಬುರಾಜೆ ಯುವ ಕ್ರಾಂತಿ ಎಂಬ ಎನ್‍ಜಿಒ 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪರಿಸರ ವಲಯದ ನಿಯಮಗಳನ್ನು ಮೀರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೂಡಲೇ ಅಂತಹ 58 ಬಂಗಲೆಗಳನ್ನು ತೆರವುಗೊಳಿಸುವಂತೆ ಬಾಂಬೆ ಹೈ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಕೋರ್ಟ್ ಆದೇಶದಂತೆ ನಿಯಮ ಮೀರಿ ನಿರ್ಮಾಣ ಮಾಡಲಾಗಿದ್ದ ಆ ಪ್ರದೇಶದ ಒಟ್ಟು 58 ಮನೆ, ರೆಸಾರ್ಟ್ ಗಳನ್ನು ತೆರವುಗೊಳಿಸುವ ಕಾರ್ಯಮಾಡಲಾಗುತ್ತಿದೆ. ಇದರಲ್ಲಿ ನೀರವ್ ಮೋದಿಯ ಬಂಗಲೆಯೂ ಸೇರಿದೆ.

    ಅಂದಹಾಗೇ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯಲ್ಲಿ ಆಧುನಿಕ ಸೌಲಭ್ಯಗಳನ್ನು ಎಲ್ಲವನ್ನ ಕಲ್ಪಿಸಲಾಗಿತ್ತು. ಅಲ್ಲದೇ ಬಂಗಲೆಯ ಸನಿಹದಲ್ಲೇ ಬೃಹತ್ ಐಶಾರಾಮಿ ಈಜುಕೊಳ ಸೇರಿದಂತೆ, ಮನೆಯ ಸುತ್ತ ಉಕ್ಕಿನ ಕಾಂಪೌಂಡ್ ನಿರ್ಮಾಣ ಮಾಡಿ ಬಹೃತ್ ಗೇಟ್‍ಗಳನ್ನು ಅಳವಡಿಸಲಾಗುತ್ತು.

    https://twitter.com/SanjayBragta/status/1103931152132300800

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆಶಿ ಮನೆ ಪಕ್ಕದಲ್ಲೇ ನಿರ್ಮಾಣವಾಗ್ತಿದೆ 100 ಕೋಟಿಯ ಐಷಾರಾಮಿ ಬಂಗಲೆ!

    ಡಿಕೆಶಿ ಮನೆ ಪಕ್ಕದಲ್ಲೇ ನಿರ್ಮಾಣವಾಗ್ತಿದೆ 100 ಕೋಟಿಯ ಐಷಾರಾಮಿ ಬಂಗಲೆ!

    ಬೆಂಗಳೂರು: ಜಲಸಂನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆಯ ಪಕ್ಕದಲ್ಲಿಯೇ ಬರೋಬ್ಬರಿ ನೂರು ಕೋಟಿ ರೂ. ವೆಚ್ಚದಲ್ಲಿ ಕಿಂಗ್‍ಪಿನ್ ಉದಯ್ ಗೌಡ ಬಂಗಲೆ ಕಟ್ಟಿಸುತ್ತಿದ್ದಾನೆ.

    ಸಮ್ಮಿಶ್ರ ಸರ್ಕಾರ ಬುಡವನ್ನೇ ಅಲ್ಲಾಡಿಸುದಕ್ಕೆ ಯತ್ನ ಮಾಡಿದ ಆರೋಪದಲ್ಲಿ, ದೇಶಬಿಟ್ಟು ತಲೆಮರೆಸಿಕೊಂಡಿರುವ ಕಿಂಗ್‍ಪಿನ್ ಉದಯ್ ಗೌಡ ನನ್ನು ಹುಡುಕಲು ಪೊಲೀಸರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ದೋಸ್ತಿ ಸರ್ಕಾರದ ರೂವಾರಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ಮನೆ ಪಕ್ಕದಲ್ಲೇ, ಕಿಂಗ್‍ಪಿನ್ ಉದಯ್‍ಗೌಡ ಐಷಾರಾಮಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾನೆ. ಈ ಬಂಗಲೆಯ ಒಟ್ಟು ಪ್ಲಾನಿಂಗ್ ಬರೋಬ್ಬರಿ ನೂರು ಕೋಟಿಯಂತೆ. ಈ ಬಂಗಲೆಯ ಮೇಲೆ ಹೆಲಿಪ್ಯಾಡ್ ನಿರ್ಮಾಣದ ಕೆಲಸ ಕೂಡ ಬರದಿಂದ ಸಾಗಿದೆ.

    ಬೆಂಗಳೂರಿನ ಮಲ್ಲೇಶ್ವರಂನ ಲಿಂಕ್ ರಸ್ತೆಯ ಬಳಿ ಗೀರಿಗೌಡ ಅನ್ನೋರ ಬಳಿ ಫೈನಾನ್ಸ್ ಆಫೀಸಿಗೆ ಅಂತ 2015 ರಲ್ಲಿ ಬಾಡಿಗೆ ಪಡೆದಿದ್ದನು. ತಿಂಗಳಿಗೆ 32 ಸಾವಿರ ಬಾಡಿಗೆ ಕೊಡಬೇಕಿದ್ದ ಉದಯ್ ಗೌಡ, ತನ್ನ ಹವಾ ಬೆಳೆದಂತೆಲ್ಲಾ ಬಿಲ್ಡಿಂಗ್ ಓನರ್ ಗಿರಿಗೌಡಗೆ ಬೆದರಿಕೆ ಹಾಕಲು ಶುರುಮಾಡಿದ್ದನು. ಒಂದು ದಿನ ಬಾಡಿಗೆ ಕೇಳುವುದಕ್ಕೆ ಹೋಗಿದ್ದ ಗಿರಿಗೌಡನ ಮೇಲೆಯೇ ತನ್ನ ಪಟಾಲಂನ ಬಿಟ್ಟು ಹಲ್ಲೆ ಮಾಡಿಸಿದ್ದನು.

    ಅಷ್ಟೇ ಅಲ್ಲದೇ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದನು. ಇದರಿಂದ ಬೆದರಿದ ನಾನು ತನ್ನ ಬಿಲ್ಡಿಂಗ್ ನಲ್ಲೇ ನಾನು ಜೀವ ಭಯದಿಂದ ಓಡಾಡುತ್ತಿದ್ದೇನೆ. ಈಗಲೂ ಕೂಡ ಉದಯ್ ಗೌಡನ ಗನ್‍ಮ್ಯಾನ್, ಕಾರ್ ಡ್ರೈವರ್, ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಇದೇ ಬಿಲ್ಡಿಂಗ್‍ನಲ್ಲೇ ವಾಸವಾಗಿದ್ದಾರೆ. 2015 ರಿಂದ ಇಲ್ಲಿವರೆಗೂ 18 ಲಕ್ಷ ಹಣ ಬರಬೇಕಿದೆ, ಈಗ ವಿದೇಶದಲ್ಲಿದ್ದುಕೊಂಡೇ ವಾಟ್ಸಪ್ ನಲ್ಲಿ ಜೀವಬೆದರಿಕೆ ಹಾಕುತ್ತಿದ್ದಾನೆ. ಸದ್ಯಕ್ಕೆ ನಾನು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಕಟ್ಟಡದ ಮಾಲೀಕ ಗಿರಿಗೌಡ ಅವರು ಹೇಳಿದ್ದಾರೆ.

    ಇನ್ನು ತಾನು ವಾಸಿಸುವ ಅಪಾರ್ಟ್ ಮೆಂಟ್‍ ನಲ್ಲೂ ಅಕ್ಕಪಕ್ಕದವರ ಮೇಲೆ ಹಲ್ಲೆ ಮಾಡಿರುವ ಉದಯ್ ಗೌಡ, ಒಂದು ರೀತಿ ನಾನೇ ರಾಜ ನಾನೇ ಮಂತ್ರಿ ಅನ್ನೋ ರೀತಿ ವರ್ತಿಸಿಸುತ್ತನಂತೆ. ಇಷ್ಟೆಲ್ಲಾ ಆದರೂ ಕೂಡ ಯಾರೊಬ್ಬರು ಉದಯ್ ಗೌಡನ ಮೇಲೆ ದೂರು ಕೋಡುವ ಧೈರ್ಯ ಮಾಡಿರಲಿಲ್ಲ. ವಿಪರ್ಯಾಸ ಅಂದರೆ, ನಮ್ಮ ಸರ್ಕಾರವನ್ನು ಯಾರು ಬೀಳಿಸುದಕ್ಕೆ ಆಗಲ್ಲ ಅಂತ ಮಾಧ್ಯಮಗಳಿಗೆ ಹೇಳಿರುವ ಡಿಕೆಶಿ ಮನೆ ಪಕ್ಕದಲ್ಲೇ ಉದಯ್ ಗೌಡ ಈ ರೀತಿ ಐಷಾರಾಮಿ ಮನೆ ಮಾಡಿಕೊಳ್ಳುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರು ಬಂಗಲೆಗಾಗಿ ಬಜೆಟ್‍ನಲ್ಲಿ 5 ಕೋಟಿ ರೂ. ತೆಗೆದಿಟ್ಟ ಬಿಬಿಎಂಪಿ

    ಮೂರು ಬಂಗಲೆಗಾಗಿ ಬಜೆಟ್‍ನಲ್ಲಿ 5 ಕೋಟಿ ರೂ. ತೆಗೆದಿಟ್ಟ ಬಿಬಿಎಂಪಿ

    ಬೆಂಗಳೂರು: ಮೇಯರ್, ಉಪ ಮೇಯರ್, ಕಮೀಷನರ್​ಗೆ ಬಂಗಲೆ ನಿರ್ಮಾಣಕ್ಕಾಗಿ ಬಿಬಿಎಂಪಿ ಬಜೆಟ್‍ನಲ್ಲಿ 5 ಕೋಟಿ ರೂ. ತೆಗೆದಿಡಲಾಗಿದೆ ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಂಗಲೆ ಬೇಡಿಕೆ ಇಟ್ಟಿರುವುದು ಸತ್ಯ. 5 ವರ್ಷದ ಹಿಂದೆಯೇ ಗಾಂಧಿನಗರದಲ್ಲಿ ಮೇಯರ್ ಬಂಗಲೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಹೀಗಾಗಿ ಈ ಬಾರಿಯ ಬಿಬಿಎಂಪಿ ಬಜೆಟ್‍ನಲ್ಲಿ 6 ಕೋಟಿ ರೂ. ತಗೆದಿಟ್ಟು, ನಿರ್ಮಾಣಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು, ಅನುಮತಿ ಸಿಕ್ಕರೆ ಬಂಗಲೆ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ದುಬೈ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಮೇಯರ್​ಗೆ ಬಂಗಲೆ ಇದೆ. ಯಾವುದಾದರು ನಿಯೋಗಗಳು ಭೇಟಿ ನೀಡಿದರೆ ಅಲ್ಲಿ ಚರ್ಚೆ ಮಾಡಲು, ಇನ್ನಿತರ ವಿಚಾರಕ್ಕೆ ಬಂಗಲೆ ನಿರ್ಮಾಣಕ್ಕೆ ಎಲ್ಲಾ ಸದಸ್ಯರು ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೆ ಆಯುಕ್ತರು ಬೇರೆ ಬೇರೆ ಭಾಗದಿಂದ ಬರುತ್ತಾರೆ. ಅವರಿಗೂ ಅನುಕೂಲವಾಗುವ ರೀತಿಯಲ್ಲಿ ಬಂಗಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಇನ್ನು ಎರಡು ಅವಧಿಯ ಮೇಯರ್ ಗಳಿಗೆ ಬಂಗಲೆ ಅವಕಾಶ ಸಿಗುವುದಿಲ್ಲ. ಒಂದೇ ವರ್ಷ ಮೇಯರ್ ಅಧಿಕಾರ ಇದ್ದರೂ ಗೌರವ ಸೂಚಕವಾಗಿ ಬಂಗಲೆ ಇರಬೇಕಾಗುತ್ತದೆ. ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಬಂಗಲೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews