Tag: Bundelkhand

  • ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ

    ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ

    ಲಕ್ನೋ: ದೇಶದಲ್ಲಿ ಉಚಿತ ರೇವಡಿ(ಒಂದು ಬಗೆಯ ಸಿಹಿ ತಿಂಡಿ) ಹಂಚಿ, ಮತ ಗಳಿಸುವ ಸಂಸ್ಕೃತಿಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಉಚಿತ ಕೊಡುಗೆಗಳನ್ನು ನೀಡುವ ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅತ್ಯಂತ ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡುವ ಮೂಲಕ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

    ಶನಿವಾರ 296 ಕಿ.ಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡು ನೀತಿಗಳನ್ನು ತಂದರೆ, ಅದರ ಹಿಂದೆ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಉತ್ತೇಜನ ನೀಡುವ ಗುರಿಯೇ ಇರುತ್ತದೆ ಎಂದು ಹೇಳಿದರು.

    ರೇವಡಿ ಸಂಸ್ಕೃತಿಯನ್ನು ಹೊಂದಿರುವವರು ಜನತೆಗಾಗಿ ಹೊಸ ಎಕ್ಸ್‌ಪ್ರೆಸ್‌ವೇ, ಹೊಸ ವಿಮಾನ ನಿಲ್ದಾಣ, ರಕ್ಷಣಾ ಕಾರಿಡಾರ್‌ಗಳಂತಹ ಅತ್ಯಗತ್ಯ ಅನುಕೂಲಗಳನ್ನು ಎಂದಿಗೂ ನಿರ್ಮಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಈ ಸಂಸ್ಕೃತಿಯನ್ನು ಸೋಲಿಸಬೇಕು. ರೇವಡಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂದು ಮೋದಿ ಹೇಳಿದರು. ಇದನ್ನೂ ಓದಿ: ಔರಂಗಾಬಾದ್, ಒಸ್ಮಾನಾಬಾದ್‌ಗೆ ಮರುನಾಮಕರಣ – ಮಹಾರಾಷ್ಟ್ರ ಸಂಪುಟ ಅನುಮೋದನೆ

    ಮೋದಿ ಹೇಳಿಕೆಗೆ ಟೀಕೆ:
    ಪ್ರಧಾನಿ ನರೇಂದ್ರ ಮೋದಿಯವರ ರೇವಡಿ ಸಂಸ್ಕೃತಿ ಹೇಳಿಕೆ ಬಗ್ಗೆ ಟೀಕಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರೇವಡಿ ಪದ ಅಸಂಸದೀಯ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಆಡಳಿತ ಪಕ್ಷದಲ್ಲಿರುವವರು ಯುವಕರಿಗೆ ಉದ್ಯೋಗ ನೀಡುವ ಮೂಲಕ ರೇವಡಿ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ ಹಾಗೂ ಧನ್ಯವಾದ ಅಭಿಯಾನವನ್ನು ನಡೆಸಿದ್ದಾರೆ. ಆದರೆ ಅದೇ ರೇವಡಿ ಸಂಸ್ಕೃತಿಯನ್ನು ದೂಷಿಸುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೋದಿಯವರ ರೇವಡಿ ಸಂಸ್ಕೃತಿ ಹೇಳಿಕೆಗೆ ಸಿಡಿದೆದ್ದು, ನಾವು ಉಚಿತ, ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದೇವೆ. ರೇವಡಿ ಹಂಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ

    ನನ್ನ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಇದರಲ್ಲಿ ನನ್ನ ತಪ್ಪೇನು ಎಂದು ಕೇಳಲು ಬಯಸುತ್ತೇನೆ. ದೆಹಲಿ ಸರ್ಕಾರಿ ಶಾಲೆಗಳಲ್ಲಿ 18 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಾವು ಅವರಿಗೆ ಉಚಿತವಾಗಿ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಅಪರಾಧವೇನಿದೆ ಎಂದು ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಲಕ್ನೋ: 25 ವರ್ಷದ ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ವರನನ್ನೇ ಕಿಡ್ನಾಪ್ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್‍ಖಂಡ್‍ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಚರರೊಡನೆ ಎಸ್‍ಯುವಿ ಕಾರಿನಲ್ಲಿ ಮದುವೆ ಮಂಟಪಕ್ಕೆ ಬಂದ ಯುವತಿ ವರನ ಹಣೆಗೆ ರಿವಾಲ್ವರ್ ಇಟ್ಟು, ಈತ ನನ್ನನ್ನು ಪ್ರೀತಿಸುತ್ತಾನೆ. ಆದ್ರೆ ಬೇರೆಯವರೊಂದಿಗೆ ಮದುವೆ ಆಗುವ ಮೂಲಕ ನನಗೆ ಮೋಸ ಮಾಡ್ತಿದ್ದಾನೆ. ಇದು ನಡೆಯೋಕೆ ನಾನು ಬಿಡೋದಿಲ್ಲ ಎಂದು ಹೇಳಿ ವರನನ್ನ ಕಿಡ್ನಾಪ್ ಮಾಡಿದ್ದಾಳೆ.

    ಮಹಿಂದ್ರಾ ಸ್ಕಾರ್ಪಿಯೋ ವಾಹನ ಹೊರಡುತ್ತಿದ್ದಂತೆ ಮದುವೆಗೆ ಸಿದ್ಧಗೊಂಡಿದ್ದ ವಧು ಭಾರತಿ ಯಾದವ್, ದುಃಖದಿಂದ ತನ್ನ ಹಣೆಬರಹ ಚೆನ್ನಾಗಿಲ್ಲ. ನನ್ನ ಶತ್ರುಗೂ ಈ ರೀತಿ ಶಿಕ್ಷೆಯಾಗಬಾರದು ಎಂದು ಹೇಳಿದ್ದಾರೆ.

    ವರ ಅಶೋಕ್ ಯಾದವ್ ಈವರೆಗೆ ಪತ್ತೆ ಆಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಕೆಲವು ತಿಂಗಳ ಹಿಂದೆ ಅಶೋಕ್‍ಗೆ ಕೆಲಸದ ಸ್ಥಳದಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಕೆಲವರು ಈ ಜೋಡಿ ಮದುವೆಯೂ ಆಗಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಮನೆಯವರ ಒತ್ತಾಯದಿಂದ ಅವರು ನೋಡಿದ ಹುಡುಗಿಯನ್ನ ಮದುವೆಯಾಗಲು ಅಶೋಕ್ ಒಪ್ಪಿದ್ದರು ಎಂದು ವರದಿಯಾಗಿದೆ.

    ಘಟನೆಯಿಂದ ಮದುವೆಗೆ ಬಂದಿದ್ದ ಅತಿಥಿಗಳು ಶಾಕ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ವರನ ತಂದೆ ರಮ್ಹತ್ ಯಾದವ್, ನನ್ನ ಮಗನ ಬಗ್ಗೆ ಹಿಂದಿನಿಂದಲೂ ಅನುಮಾನವಿತ್ತು. ಆತ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ನಾನು ಭೇಟಿ ಮಾಡುವಾಗ, ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗ್ತಿರ್ಲಿಲ್ಲ. ದೇವಸ್ಥಾನದಲ್ಲಿ ಭೇಟಿ ಮಾಡ್ತಿದ್ದ. ಅಲ್ಲೇ ಹೋಟೆಲ್‍ನಲ್ಲಿ ಊಟ ಮಾಡಿಸಿ ಮನೆಗೆ ಕಳಿಸ್ತಿದ್ದ ಎಂದಿದ್ದಾರೆ.

    ವಧುವಿನ ಕಡೆಯವರು ವರನ ಅಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅದರಲ್ಲೂ ಕೆಲವು ಪೊಲೀಸರು ವರನನ್ನೇ ಅಪಹರಿಸಿದ ರಿವಾಲ್ವರ್ ರಾಣಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋಸ ಮಾಡಿದ್ರೆ ಅದಕ್ಕೆ ಶಿಕ್ಷೆ ಆಗುತ್ತೆ ಅನ್ನೋದನ್ನ ಕೆಲ ಮಹಿಳೆಯರು ಹುಡುಗರಿಗೆ ಕಲಿಸುತ್ತಾರೆ ಅನ್ನೋದನ್ನ ಈ ಯುವತಿ ತೋರಿಸಿಕೊಟ್ಟಿದ್ದಾಳೆ ಎಂದಿದ್ದಾರೆ.