Tag: bulls

  • ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ

    ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ

    ಬಾಗಲಕೋಟೆ: ಜಿಲ್ಲೆಯಲ್ಲಿ ಬಿಡಾಡಿ ಗೂಳಿಗಳ (Bulls) ಕಾಟ ಹೆಚ್ಚಾಗಿದ್ದು, ರಸ್ತೆ ಮಧ್ಯೆ ಮದಗಜಗಳಂತೆ ಗೂಳಿಗಳ ಕಾದಾಟ ನಡೆಸುವುದು ಈಗ ಸಾಮಾನ್ಯವಾಗಿದೆ.

    ನವನಗರದಲ್ಲಿ ಎರಡು ಬೀದಿ ಗೂಳಿಗಳ ಕಾದಾಟಕ್ಕೆ ವಾಹನಗಳು ಜಖಂಗೊಂಡಿವೆ. ಕಾದಾಡುತ್ತಾ ಬೈಕ್ ಮೇಲೆ ಗೂಳಿಗಳು ಎಗರಿದ್ದರಿಂದ ಬೈಕ್‌ಗಳು ಕೆಳಗೆ ಬಿದ್ದಿದೆ.  ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

    ಬಿಡಾಡಿ ದನಗಳ ನಿಯಂತ್ರಣಕ್ಕೆ ಬಾಗಲಕೋಟೆ (Bagalkote) ನಗರಸಭೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಡಾಡಿ ಗೂಳಿಗಳ ಹಾವಳಿ ತಪ್ಪಿಸಿ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

  • ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಧಾರವಾಡ: ಉಳವಿ ಜಾತ್ರೆಯಿಂದ ಧಾರವಾಡಕ್ಕೆ ಎತ್ತಿನ ಚಕ್ಕಡಿ ಕೇವಲ 13 ಗಂಟೆಯಲ್ಲಿ 135 ಕಿಲೋ ಮೀಟರ್ ಬಂದಿದ್ದು, ಅವುಗಳಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಎತ್ತಿನ ಚಕ್ಕಡಿಗಳನ್ನ ತೆಗೆದುಕೊಂಡು ಜಾತ್ರೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಗ್ರಾಮೀಣ ಪ್ರದೇಶಗಳಲ್ಲಿ ಚಕ್ಕಡಿಗೆ ಕೊಲ್ಲಾರಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಪದ್ಧತಿ ಇನ್ನೂ ಜೀವಂತವಾಗಿದೆ. ಜಾತ್ರೆಗೆ ಅನೇಕರು ಟ್ರ್ಯಾಕ್ಟರ್, ಬೈಕ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಧಾರವಾಡದ ಎರಡು ಎತ್ತುಗಳು ಉತ್ತರ ಕನ್ನಡ ಜಿಲ್ಲೆಯ ಉಳವಿ ಜಾತ್ರೆಯಿಂದ ಧಾರವಾಡಕ್ಕೆ 13 ಗಂಟೆಯಲ್ಲಿ ಬಂದು ಸೈ ಎನಿಸಿಕೊಂಡಿವೆ. ಇದನ್ನೂ ಓದಿ: 2019ರಲ್ಲಿ ಕಾಣೆಯಾದ ಬಾಲಕಿ, ಮೆಟ್ಟಿಲುಗಳ ರಹಸ್ಯ ಕೋಣೆಯಲ್ಲಿ ಪತ್ತೆ!

    ಏನಿದರ ವಿಶೇಷತೆ?
    ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಮುತ್ತು ಬ್ಯಾಳಿ ರೈತರಿಗೆ ಸೇರಿದ ಜೋಡೆತ್ತುಗಳು. ಇವು 135 ಕಿಲೋ ಮೀಟರ್ ದೂರದ ಉಳವಿಯಿಂದ ಕೇವಲ 13 ಗಂಟೆಗಳಲ್ಲಿ ಧಾರವಾಡದ ಮಂಗಳಗಟ್ಟಿ ಗ್ರಾಮಕ್ಕೆ ಬಂದು ತಲುಪಿವೆ. ಈ ಚಕ್ಕಡಿ ಅಲ್ಲಿಂದ ಖಾಲಿ ಬಂದಿಲ್ಲ.

    ಜಾತ್ರೆ ಮುಗಿಸಿಕೊಂಡು ಕಡಿಮೆ ಅವಧಿಯಲ್ಲಿ 135 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಊರಿಗೆ ಬಂದ ಎತ್ತುಗಳನ್ನು ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು. ಹೆಂಗಳೆಯರು ಜೋಡೆತ್ತುಗಳಿಗೆ ಆರತಿ ಬೆಳಗಿದರು. ಅಲ್ಲದೆ ಎತ್ತನ್ನು ಡಿಜೆ ಹಾಕಿ ಮೆರವಣಿಗೆ ಮಾಡಿದ್ದು, ಯುವಕರು ಆ ಸಾಂಗ್ ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

  • 14.55 ಟನ್ ಕಬ್ಬು ಹೊತ್ತ ಗಾಡಿಯನ್ನು ಎಳೆದ ಜೋಡೆತ್ತುಗಳು

    14.55 ಟನ್ ಕಬ್ಬು ಹೊತ್ತ ಗಾಡಿಯನ್ನು ಎಳೆದ ಜೋಡೆತ್ತುಗಳು

    – ಜೋಡೆತ್ತುಗಳ ಬಲಕ್ಕೆ ನೆಟ್ಟಿಗರು ಫಿದಾ

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಕಬ್ಬಿಗೆ ಪ್ರಸಿದ್ಧ. ಆದರೆ ಎತ್ತಿನಗಾಡಿಯಲ್ಲಿ 5 ರಿಂದ 8 ಟನ್ ಕಬ್ಬನ್ನು ಮಾತ್ರ ಸಾಗಿಸುತ್ತಾರೆ. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯ ಬಳಗದ ಯುವಕರು ಎತ್ತಿನಗಾಡಿಗೆ 14.55 ಟನ್ ಕಬ್ಬು ತುಂಬಿದ್ದಾರೆ. ಮಾತ್ರವಲ್ಲ ಈ ಕಬ್ಬಿನ ಗಾಡಿಯನ್ನು ಜೋಡೆತ್ತುಗಳು ನಿರಾಯಾಸವಾಗಿ ಎಳೆದು ನೋಡುಗರನ್ನು ನಿಬ್ಬೆರಗು ಮಾಡಿವೆ.

    ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದು ಗಾಡಿಗೆ 12 ಟನ್ ತುಂಬುಲಾಗಿತ್ತು. ಆದರೆ ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಅವರ ಜೋಡೆತ್ತುಗಳು ಮೂರು ಕಿಲೋಮೀಟರ್ ಎಳೆದು ಸೈ ಎನಿಸಿಕೊಂಡಿವೆ. ಈ ಜೋಡೆತ್ತುಗಳನ್ನು ಶರತ್ ಅವರು ಕಳೆದ ತಿಂಗಳಷ್ಟೇ 2.90 ಲಕ್ಷ ರೂ.ಗೆ ಖರೀದಿ ಮಾಡಿದ್ದಾರು.

    ಶನಿವಾರ 14.55 ಟನ್ ಕಬ್ಬಿನ ಗಾಡಿಯನ್ನು ಈ ಜೋಡೆತ್ತುಗಳು ಎಳೆಯುವಾಗ ಜನರು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಇಷ್ಟು ಬಲಶಾಲಿ ಎತ್ತುಗಳು ಇವೆಯಾ ಎಂದು ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಈ ಜೋಡೆತ್ತುಗಳು ಎತ್ತಿನಗಾಡಿ ಎಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  • ಜಲ್ಲಿಕಟ್ಟು ಹಬ್ಬದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪ್ರಾಣಬಿಟ್ಟ ಹೋರಿಗಳು!

    ಜಲ್ಲಿಕಟ್ಟು ಹಬ್ಬದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪ್ರಾಣಬಿಟ್ಟ ಹೋರಿಗಳು!

    ಬೆಂಗಳೂರು: ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆ ಜಲ್ಲಿಕಟ್ಟುವಿನಲ್ಲಿ ಭಾಗವಹಿಸಿದ್ದ 2 ಹೋರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಬಳಿ ನಡೆದಿದೆ.

    ಹೊಸೂರು ಸಮೀಪದ ಉದ್ದಾನಪಲ್ಲಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ಈ ವೇಳೆ ಸರ್ಧೆಯಲ್ಲಿ ಓಡುತ್ತಿದ್ದ ಹೊರಿಯನ್ನು ಹಿಡಿಯಲು ಜನರು ಮುಗಿಬಿದ್ದಿದ್ದು, ಓರ್ವ ಯುವಕನನ್ನು ಹೋರಿಯೊಂದು ಗುದ್ದಿ ಬೀಳಿಸಿದೆ. ಬಳಿಕ ವಿರುದ್ಧ ದಿಕ್ಕಿನಲ್ಲಿ ಓಡಿ ಬಂದ ಮತ್ತೊಂದು ಹೋರಿಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ಹೋರಿಗಳು ಸ್ಥಳದಲ್ಲೇ ಸಾವನಪ್ಪಿದೆ.

    ಸಂಕ್ರಾಂತಿ ಹಬ್ಬದಿಂದ ತಮಿಳುನಾಡಿನಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದುಕಡೆ ಜಲ್ಲಿಕಟ್ಟು ಆಯೋಜಿಸಲಾಗುತ್ತದೆ. ಬರೋಬ್ಬರಿ ಮೂರು ತಿಂಗಳ ಕಾಲ ನಡೆಯುವ ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿ ಸಾಕಿದವರು ತಮ್ಮ ಹೋರಿಗಳನ್ನು ಸಿಂಗರಿಸಿ ಓಟದಲ್ಲಿ ಬಿಡುತ್ತಾರೆ. ಆದ್ರೆ ಈ ಭಾರಿ ಹೊಸೂರು ಸುತ್ತಮುತ್ತ ನಡೆದ ಜಲ್ಲಿಕಟ್ಟುವಿನಲ್ಲಿ ಸುಮಾರು 5 ಹೋರಿಗಳು ಪರಸ್ಪರ ಡಿಕ್ಕಿಹೊಡೆದುಕೊಂಡು ಸಾವನಪ್ಪಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv