Tag: bullock cart Library

  • ಎತ್ತಿನ ಗಾಡಿ ಗ್ರಂಥಾಲಯ- ಮನೆ,ಮನೆಗೆ ಹೋಗಿ ಪುಸ್ತಕ ಹಂಚಿದ ಶಿಕ್ಷಕಿ

    ಎತ್ತಿನ ಗಾಡಿ ಗ್ರಂಥಾಲಯ- ಮನೆ,ಮನೆಗೆ ಹೋಗಿ ಪುಸ್ತಕ ಹಂಚಿದ ಶಿಕ್ಷಕಿ

    ಭೋಪಾಲ್: ಎತ್ತಿನ ಗಾಡಿಯನ್ನು ಗ್ರಂಥಾಲಯವನ್ನಾಗಿ ಮಾಡಿಕೊಂಡು ಬುಡಕಟ್ಟು ವಿದ್ಯಾರ್ಥಿಗಳ ಮನೆ- ಮನೆಗೆ ತೆರಳಿ ಪುಸ್ತಕ ಹಂಚುತ್ತಿರುವ ಶಿಕ್ಷಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮಧ್ಯಪ್ರದೇಶದ ಶಿಕ್ಷಕಿಯೊಬ್ಬರು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಶಿಕ್ಷಕಿ ಮಲಾ ದಾವಂಡೆ ಅವರ ಕೆಲಸಕ್ಕೆ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬೇತುಲ್ ಜಿಲ್ಲೆಯ ಭೈನ್ಸ್​​ದೇಹಿಯ  ಬುಡಕಟ್ಟು ಪ್ರದೇಶದ ಹಳ್ಳಿಯೊಂದರ ಶಾಲೆಯ ಶಿಕ್ಷಕಿಯಾದ ಕಮಲಾ ದಾವಂಡೆ ಅವರು, ಸಂಚಾರಿ ಗ್ರಂಥಾಲಯವನ್ನು ಎತ್ತಿನ ಗಾಡಿಯಲ್ಲಿ ಸ್ಥಾಪಿಸಿದ್ದಾರೆ. ಮನೆ ಮನೆಗೆ ಹೋಗಿ ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಈ ಮಕ್ಕಳು ಆನ್‍ಲೈನ್ ತರಗತಿಗಳನ್ನು ಕೇಳಲು ಯಾವುದೇ ಸೌಲಭ್ಯವನ್ನು ಹೊಂದಿಲ್ಲ. ಈ ಮಕ್ಕಳು ರೇಡಿಯೋ ಉಪನ್ಯಾಸಗಳನ್ನೇ ಅವಲಂಬಿಸಿದ್ದಾರೆ. ಮಕ್ಕಳಿಗೆ ಸಹಾಯವಾಗಲೆಂದು ಕಮಲಾ ಟೀಚರ್ ಮಕ್ಕಳ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ನೀಡುವ ಮೂಲಕ ಓದಿಗೆ ಸಹಾಯ ಮಾಡುತ್ತಿದ್ದಾರೆ.  ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    ಕಮಲಾ ದಾವಂಡೆ  ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡಿ, ಈ ಗ್ರಾಮದಲ್ಲಿರುವ ಶಾಲೆಯಲ್ಲಿ 87 ಮಕ್ಕಳು ಮತ್ತು ಮೂವರು ಶಿಕ್ಷಕರಿದ್ದಾರೆ. ಕೋವಿಡ್-19 ಕಾರಣ ರಜೆಯಲ್ಲಿದ್ದಾರೆ. ಹೀಗಾಗಿ, ಸದ್ಯಕ್ಕೆ ನಾನೊಬ್ಬಳೇ ಇಲ್ಲಿ ಇರುವ ಶಿಕ್ಷಕಿಯಾಗಿದ್ದನೆ. ಮಕ್ಕಳಿಗೆ ಪುಸ್ತಕಗಳನ್ನು ಹಂಚುವುದು ಅನಿವಾರ್ಯವಾಗಿತ್ತು. ಎಲ್ಲ ಪುಸ್ತಕಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೊಹಲ್ಲಾ ತರಗತಿಯ ಬ್ಯಾನರ್ ಹಾಕಿಕೊಂಡು ಮನೆ ಮನೆಗೆ ತೆರಳಿ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಇವರ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

  • ಗ್ರಾಮೀಣ ಮಕ್ಕಳ ಅಚ್ಚು ಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ

    ಗ್ರಾಮೀಣ ಮಕ್ಕಳ ಅಚ್ಚು ಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ

    ಪುಣೆ: ಮಹಾರಾಷ್ಟ್ರದ ಸೋಲಾಪುರದ ದರ್ಗನಹಳ್ಳಿ ಗ್ರಾಮದ ವಿಶೇಷ ಗ್ರಂಥಾಲಯ ಈಗ ಸಖತ್ ಸುದ್ದಿಯಲ್ಲಿದೆ. ಎತ್ತಿನಬಂಡಿಯಲ್ಲಿಯೇ ಪುಸ್ತಕಗಳನ್ನು ಇರಿಸಲಾಗಿದ್ದು, ಇದು ಹಳ್ಳಿ ಮಕ್ಕಳ ಅಚ್ಚುಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ ಎಂದೇ ಮೆಚ್ಚುಗೆ ಪಡೆದಿದೆ.

    ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಕಳೆದ 6 ತಿಂಗಳಿಂದ ಎತ್ತಿನಬಂಡಿ ಗ್ರಂಥಾಲಯವನ್ನು ಗ್ರಾಮಕ್ಕೆ ತರುತ್ತಿರುವ ಕಾಶಿನಾಥ್ ಕೋಲಿ ಅವರ ಶ್ರಮ. ಹೌದು. ಸೋಲಾಪುರದ ನಗರ ಗ್ರಂಥಾಲಯದಲ್ಲಿ ಆಫೀಸ್ ಹುಡುಗನಾಗಿ ಕೆಲಸ ಮಾಡುವ ಕಾಶಿನಾಥ್ ಕೋಲಿ ಅವರು ಈ ಅಪರೂಪದ ಎತ್ತಿನಬಂಡಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಈ ಗ್ರಂಥಾಲಯವನ್ನು ಕಾಶಿನಾಥ್ ಅವರು ವಿಶೇಷವಾಗಿ ಹಳ್ಳಿಯ ಮಕ್ಕಳಿಗಾಗಿಯೇ ಮಾಡಿದ್ದಾರೆ.

    ಕಳೆದ ಆರು ತಿಂಗಳಿನಿಂದ ಈ ಗ್ರಂಥಾಲಯ ಕಾರ್ಯನಿರ್ವಸುತ್ತಿದೆ. ಹೀಗಾಗಿ ಹಳ್ಳಿಯ ಮಕ್ಕಳು ಈಗ ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕಾಶಿನಾಥ್ ಅವರು ಸುಮಾರು ಒಂದೂವರೆ ಸಾವಿರ ಪುಸ್ತಕಗಳನ್ನು ತಮ್ಮ ಎತ್ತಿನಬಂಡಿ ಗ್ರಂಥಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

    ತಮ್ಮ ರಜಾ ದಿನಗಳಲ್ಲಿ ಅವರು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಹೊತ್ತು ದರ್ಗನಹಳ್ಳಿ ಗ್ರಾಮಕ್ಕೆ ಹೋಗುತ್ತಾರೆ. ಅವರ ಎತ್ತಿನ ಬಂಡಿಯಲ್ಲಿ ಚಲಿಸುತ್ತಿರುವ ಮೊಬೈಲ್ ಲೈಬ್ರರಿ ಈಗ ದರ್ಗನಹಳ್ಳಿ ಗ್ರಾಮದ ಗುರುತಾಗಿದೆ. ಮೊಬೈಲ್, ಟಿವಿಯಲ್ಲಿ ಮಕ್ಕಳು ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಪುಸ್ತಕಗಳನ್ನು ಓದುವ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ಈ ಬಗ್ಗೆ ಮಾತನಾಡಿದ ಕಾಶಿನಾಥ್, ಮೊಬೈಲ್ ವ್ಯಾನ್ ಲೈಬ್ರರಿಯ ಬದಲು ನಾನು ಬುಲಕ್ ಕಾರ್ಟ್ ಲೈಬ್ರರಿಯನ್ನು ಆರಿಸಿದ್ದೇನೆ. ಗ್ರಾಮೀಣ ಪ್ರದೇಶವಾದ ಕಾರಣಕ್ಕೆ ಎತ್ತಿನಬಂಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಎತ್ತಿನಬಂಡಿ ಗ್ರಂಥಾಲಯದಿಂದ ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಿದೆ ಎಂದು ಖುಷಿಯನ್ನು ಹಂಚಿಕೊಂಡರು.