Tag: bullets

  • ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್

    ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್

    ನವದೆಹಲಿ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಭಾನುವಾರ ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆದರೆ ಹತ್ಯೆಯಾದ ಒಂದು ದಿನದ ಬಳಿಕ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.

    ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೂಸೆವಾಲಾ ಹತ್ಯೆಗೆ 3 ಎಎನ್-94 ರಷ್ಯಾದ ಸೈನ್ಯದಲ್ಲಿ ಬಳಸುವ ಮಾರಣಾಂತಿಕ ರೈಫಲ್ ಅನ್ನು ಬಳಸಲಾಗಿದೆ. ಕೇವಲ 2 ಸುತ್ತಿನಲ್ಲಿ 30 ಗುಂಡುಗಳನ್ನು ಹಾರಿಸಲಾಗಿದೆ. ಮುಖ್ಯವಾಗಿ ಪಂಜಾಬ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಇದೇ ಮೊದಲ ಬಾರಿಗೆ ಎಎನ್-94 ಭಯಾನಕ ರೈಫಲ್ ಬಳಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ಹಂತಕರು ಮೂಸೆ ವಾಲಾ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಆಗ ಅವರ ಭದ್ರತೆಯಲ್ಲಿ ನಿಯೋಜಿಸಲಾದ ಎಕೆ-47 ರೈಫಲ್‌ಗಳೊಂದಿಗೆ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ಕಂಡು ಹಿಂದಿರುಗಿದ್ದರು. ನಂತರ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್‌ನಿಂದ ಎಎನ್-94 ರೈಫಲ್ ಅನ್ನು ತಂದಿದ್ದಾರೆ. ಅದರಿಂದಲೇ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

    AK-47 ಗಿಂತಲೂ ಭಯಾನಕ ರೈಫಲ್: AN-94 ರಷ್ಯಾದ ಆಕ್ರಮಣಕಾರಿ ರೈಫಲ್ ಆಗಿದೆ. ಎಎನ್ ಎಂಬ ಸಂಕ್ಷಿಪ್ತ ರೂಪವು `ಅವ್ಟೊಮತ್ ನಿಕೊನೊವಾ’ ಮಾಡೆಲ್ 1994 ಅನ್ನು ಸೂಚಿಸುತ್ತದೆ. ಎಎನ್-94 ಅನ್ನು ಅದರ ಮುಖ್ಯ ವಿನ್ಯಾಸಕ ಗೆನ್ನಡಿ ನಿಕೊನೊವ್ ಹೆಸರಿಡಲಾಗಿದೆ. ಅವರು ಈ ಹಿಂದೆ ನಿಕೊನೊವ್ ಮೆಷಿನ್ ಗನ್ ಅನ್ನು ವಿನ್ಯಾಸಗೊಳಿಸಿದ್ದರು. 1980 ರಲ್ಲಿ ಎಎನ್-94 ತಯಾರಿಸುವ ಕಾರ್ಯ ಪ್ರಾರಂಭವಾಗಿ 1994 ರಲ್ಲಿ ಪೂರ್ಣಗೊಂಡಿತು. ನಂತರ 1997ರಲ್ಲಿ ರಷ್ಯಾ ಸೈನ್ಯಕ್ಕೆ ಎಎನ್-47 ರೈಫಲ್ ಅನ್ನು ಸೇರಿಸಲಾಯಿತು. ಈಗಲೂ ರಷ್ಯಾ ಸೈನ್ಯ ಇದನ್ನು ಬಳಸುತ್ತಿದೆ. ಕೆಲವು ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

    ಎಎನ್-94 ರೈಫಲ್‌ನ ವಿಶೇಷತೆಗಳೇನು?

    • ಎಎನ್-94 ಒಂದು ಸುತ್ತಿನ ಮೋಡ್‌ನಲ್ಲಿ ನಿಮಿಷಕ್ಕೆ 600 ಗುಂಡುಗಳು ಪೂರ್ಣ ಮೋಡ್‌ನಲ್ಲಿದ್ದರೆ 1,800 ಬುಲೆಟ್‌ಗಳನ್ನು ಹಾರಿಸಬಲ್ಲದು.
    • ಎಕೆ-47 ರೈಫಲ್ 715 ಮೀಟರ್ ವೇಗದಲ್ಲಿ ಗುಂಡು ಹಾರಿದರೆ ಎಎನ್-94 900 ಮೀಟರ್ ವೇಗದಲ್ಲಿ ಅಂದರೆ ಪ್ರತಿ ಸೆಕೆಂಡಿಗೆ 3 ಸಾವಿರ ಅಡಿ ವೇಗದಲ್ಲಿ ಬುಲೆಟ್ ಹಾರುತ್ತದೆ.
    • ಮಾರಣಾಂತಿಕ ರೈಫಲ್ ಆಗಿರುವ ಎಎನ್-94 30 ರಿಂದ 45 ಕಾರ್ಟ್ರಿಡ್ಜ್ ಮ್ಯಾಗಜೀನ್ ಸಾಮರ್ಥ್ಯ ಹೊಂದಿದೆ.
    • ಎಎನ್-94 ಅಸಾಲ್ಟ್ ರೈಫಲ್ 3.85 ಕೆಜಿ ತೂಕವಿದ್ದು, 37.1 ಇಂಚಿನಷ್ಟು ಸ್ಟಾಕ್‌ಬಟ್ ಹಾಗೂ 28.7 ಇಂಚಿನಷ್ಟು ಅಗಲವಿರಲಿದೆ, 15.9 ಇಂಚು ಉದ್ದವಿದೆ.

  • ಜೀವಂತ ಗುಂಡುಗಳ ಜೊತೆ ಏರ್​ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮಾಜಿ ಶಾಸಕ

    ಜೀವಂತ ಗುಂಡುಗಳ ಜೊತೆ ಏರ್​ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮಾಜಿ ಶಾಸಕ

    ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸಗೂರಿನ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ 16 ಜೀವಂತ ಗುಂಡುಗಳ ಜೊತೆ ಸಿಕ್ಕಿಬಿದ್ದಿದ್ದಾರೆ.

    ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎ1 568 ವಿಮಾನದಲ್ಲಿ ಮಾನಪ್ಪ ವಜ್ಜಲ್ ಹೈದಾರಾಬಾದ್‍ಗೆ ಹೊರಟಿದ್ದರು. ಪರಿಶೀಲನೆ ವೇಳೆ ಸಿಐಎಸ್‍ಎಫ್ ಸಿಬ್ಬಂದಿಗೆ .32 ಎಂಎಂ ಕ್ಯಾಲಿಬರ್ ಪಿಸ್ತೂಲ್ ಗೆ ಬಳಸುವ ಬುಲೆಟ್ ಗಳು ಪತ್ತೆಯಾಗಿವೆ.

    ಸಿಐಎಸ್‍ಎಫ್ ಸಿಬ್ಬಂದಿ ಮಾನಪ್ಪ ವಜ್ಜಲ್ ಮತ್ತು ಜೀವಂತ ಗುಂಡುಗಳನ್ನ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಾನಪ್ಪ ವಜ್ಜಲ್ ಬಳಿಯಲ್ಲಿರುವ ಗನ್ ಗೆ ಲೈಸನ್ಸ್ ಪಡೆದಿರೋದನ್ನ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಜೀವಂತ ಗುಂಡುಗಳನ್ನ ಹೈದರಾಬಾದ್ ಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ

    ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ

    ಮೈಸೂರು: ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆಯಾಗಿವೆ.

    ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಗುಂಡುಗಳು ನಾಪತ್ತೆಯಾಗಿದ್ದವು. 303 ಮಾದರಿ ಬಂದೂಕಿನ ಗುಂಡುಗಳು ನಾಪತ್ತೆಯಾಗಿದ್ದವು. ಗುಂಡುಗಳು ಹೇಗೆ ನಾಪತ್ತೆಯಾಗಿವೆ ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಎಸ್‍ಪಿ ಸಿ.ಬಿ.ರಿಷ್ಯಂತ್ ಇಬ್ಬರನ್ನು ಅಮಾನತುಗೊಳಿಸಿದ್ದರು. ಇದೀಗ ಕಪಿಲಾ ನದಿಯಲ್ಲಿ ಗುಂಡುಗಳು ಪತ್ತೆಯಾಗಿದೆ.

    ಮಾಹಿತಿ ಆಧಾರದ ಮೇರೆಗೆ ಕಪಿಲಾ ನದಿಯಲ್ಲಿ ಎಎಸ್‍ಪಿ ಸ್ನೇಹ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಸತತ 2 ಗಂಟೆಗಳ ಶೋಧದ ನಂತರ 20 ಗುಂಡುಗಳು ಪತ್ತೆಯಾಗಿದೆ. ಸದ್ಯಕ್ಕೆ ಉಳಿದ 30 ಗುಂಡುಗಳ ಪತ್ತೆಗಾಗಿ ತನಿಖೆ ಮುಂದುವರಿದೆ.

    ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ಚಂಡೀಗಢ: ನ್ಯಾಯಾಧೀಶರ ಹೆಂಡತಿ ಮತ್ತು ಮಗನನ್ನು ಕುಟುಂಬದ ಭದ್ರತಾ ಸಿಬ್ಬಂದಿಯೇ ಸಾರ್ವಜನಿಕ ಪ್ರದೇಶದಲ್ಲಿ ಗುಂಡಿಕ್ಕಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ನಡೆದ ಬಳಿಕ ಆರೋಪಿ ನ್ಯಾಯಾಧೀಶರಿಗೆ ಫೋನ್ ಮಾಡಿ ನಿಮ್ಮ ಪತ್ನಿ ಹಾಗೂ ಮಗನ ಮೇಲೆ ಗುಂಡು ಹಾರಿಸಿದ್ದೇನೆ ಹೋಗಿ ನೋಡಿ ಎಂದು ಹೇಳಿದ್ದಾನೆ.

    ಶನಿವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಅವರು ಆರ್ಕಾಡಿಯಾ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಸಂಜೆ 3.30ಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ಜಡ್ಜ್ ಪತ್ನಿ ರಿತು ಮತ್ತು ಮಗ ಧ್ರುವ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ಈಸ್ಟ್ ಸುಲೋಚನ ಗಜರಾಜ್ ತಿಳಿಸಿದ್ದಾರೆ.

    ಕಳೆದ ಒಂದೂವರೆ ವರ್ಷಗಳಿಂದಲೂ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹೇಂದ್ರಗಢ ನ್ಯಾಯಾಧೀಶರ ಕುಟುಂಬದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು.

    ಆರೋಪಿ ಮೊದಲು ಜಡ್ಜ್ ಪತ್ನಿ ರಿತು ಅವರಿಗೆ ಗುಂಡು ಹಾರಿಸಿ ಅನಂತರ ಮಗನಿಗೆ ಎಲ್ಲರ ಎದುರು ಶೂಟ್ ಮಾಡಿದ್ದಾನೆ. ಬಳಿಕ ಮಗ ಧ್ರುವ್ ಅವರ ದೇಹವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಪ್ರಯತ್ನ ವಿಫಲವಾದಾಗ ರಸ್ತೆಯಲ್ಲೇ ಬಿಟ್ಟು ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಪತ್ನಿ ರಿತು ಅವರಿಗೆ ಎದೆಯ ಭಾಗಕ್ಕೆ ಗುಂಡು ತಗಲಿದ್ದರೆ ಧ್ರುವ್ ತಲೆಯ ಭಾಗಕ್ಕೆ ಹೊಡೆಯಲಾಗಿದೆ. ಅವರನ್ನು ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಮಹೇಂದ್ರ ಸಿಂಗ್‍ನನ್ನು ಫರೀದಾಬಾದ್‍ನಲ್ಲಿ ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂಬುದು ತಿಳಿದು ಬಂದಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮೇಶ್ವರದಲ್ಲಿ 5 ಸಾವಿರ ಗುಂಡುಗಳು, ಸ್ಫೋಟಕ ವಸ್ತುಗಳು ಪೊಲೀಸ್ ವಶಕ್ಕೆ

    ರಾಮೇಶ್ವರದಲ್ಲಿ 5 ಸಾವಿರ ಗುಂಡುಗಳು, ಸ್ಫೋಟಕ ವಸ್ತುಗಳು ಪೊಲೀಸ್ ವಶಕ್ಕೆ

    ಚೆನ್ನೈ: ತಮಿಳುನಾಡಿನ ಪೊಲೀಸರು ರಾಮೇಶ್ವರಂ ದ್ವೀಪದಲ್ಲಿನ ಕರಾವಳಿ ಹಳ್ಳಿಗಳಲ್ಲಿ ಸೋಮವಾರ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

    ರಾಮೇಶ್ವರಂ ದ್ವೀಪದ ಆಂಥೋನಿಯರ್ಪುರಾಮ್ ನಿವಾಸಿಯೊಬ್ಬರು ಮನೆಯ ಹಿಂಭಾಗದ ಸೆಪ್ಟಿಕ್ ತೊಟ್ಟಿಗಳನ್ನು ನಿರ್ಮಿಸುತ್ತಿರುವಾಗ ಗಂಡುಗಳು ಪತ್ತೆಯಾಗಿದ್ದವು ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಡು ಮತ್ತು ಸ್ಫೋಟಕ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

    ಸದ್ಯ ಪತ್ತೆಯಾಗಿರುವ ಸ್ಫೋಟಕಗಳು 1980 ರಲ್ಲಿ ಎಲ್‍ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಂ) ಉಗ್ರಗಾಮಿ ಸಂಘಟನೆ ಸಂಗ್ರಹಿಸಿದ್ದ ವಸ್ತುಗಳು ಎಂದು ಶಂಕಿಸಲಾಗಿದೆ. ಎಲ್‍ಟಿಟಿಇ ಉಗ್ರಗಾಮಿಗಳು ಶ್ರೀಲಂಕಾದಲ್ಲಿ ತಮಿಳು ಸಮುದಾಯಕ್ಕೆ ಪ್ರತ್ಯೇಕ ಪ್ರದೇಶ ರೂಪಿಸಲು ಹೋರಾಟ ನಡೆಸಿದ್ದರು. ಇವುಗಳಿಗೆ ತಮಿಳುನಾಡಿನಿಂದ ಕೆಲವರು ಬೆಂಬಲ ವ್ಯಕ್ತಿಪಡಿಸಿ ಸಹಾಯ ಮಾಡುತ್ತಿದ್ದರು. ಅದ್ದರಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸಹಾಯ ಮಾಡಲು ಇವುಗಳನ್ನು ಸಂಗ್ರಹಿಸುವ ಸಾಧ್ಯತೆ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಸ್ಫೋಟಗಳು ಪತ್ತೆಯಾಗಿರುವ ಸ್ಥಳದ ಸುತ್ತಲಿನ ಪ್ರದೇಶವನ್ನು ಯಂತ್ರಗಳಿಂದ ಆಗೆದಿರುವ ಪೊಲೀಸರು 50ಕ್ಕೂ ಹೆಚ್ಚು ಮದ್ದು ಗಂಡುಗಳ ಪೆಟ್ಟಿಗೆಯನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ 22 ಪೆಟ್ಟಿಗೆಗಳ ಮೆಷನ್ ಗನ್ ಬುಲೆಟ್ (ಪ್ರತಿ ಪೆಟ್ಟಿಗೆಯಲ್ಲಿ 7.60 ಮಿಮಿ 250 ಗಂಡುಗಳು), ಮಧ್ಯಮ ಮೆಷಿನ್ ಗನ್ ಗುಂಡುಗಳ ನಾಲ್ಕು ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಯಲ್ಲಿ 100 ಗುಂಡುಗಳು) ಮತ್ತು 25 ಪೆಟ್ಟಿಗೆಯಲ್ಲಿ ಸಣ್ಣ ಮೆಷಿನ್ ಗನ್ ಬುಲೆಟ್ (12.7 ಎಂ.ಎಂ ಗಾತ್ರದ 250 ಬುಲೆಟ್) ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ಮಾಹಿತಿ ನೀಡಿರುವ ರಾಮನಾಥಪುರಂ ಡಿಎಸ್ಪಿ ಓ ಪ್ರಕಾಶ್ ಮೀನಾ, ತಮ್ಮ ತಂಡವು ಯಂತ್ರಗಳ ಸಹಾಯದಿಂದ ಸದ್ಯ ಸ್ಫೋಟಕಗಳು ಪತ್ತೆಯಾಗಿರುವ ಸುತ್ತಲಿನ ಮತ್ತಷ್ಟು ಸ್ಥಳವನ್ನು ಅಗೆದು ಅಪಾರ ಪ್ರಮಾಣದ ಸ್ಫೋಟಗಳೊಂದಿಗೆ, ಸ್ವಯಂ ಲೋಡ್ ರೈಪಲ್ ಬುಲೆಟ್ ಗಳು ಪತ್ತೆ ಮಾಡಿದೆ. ಪ್ರಸ್ತುತ ನಾವು ಬುಲೆಟ್ ಗಳ ಸಂಖ್ಯೆಯನ್ನು ಮತ್ತು ಅವುಗಳ ಮೂಲವನ್ನು ಪರಿಶೀಲಿಸುತ್ತಿದ್ದೇವೆ. ಪತ್ತೆಯಾದ ಗುಂಡುಗಳು 25 ವರ್ಷಗಳ ಹಳೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.

  • ಬರೋಬ್ಬರಿ 9 ಗುಂಡುಗಳು ಹೊಕ್ಕಿ ಕೋಮಾಗೆ ಜಾರಿದ್ದ ಯೋಧ ಮತ್ತೆ ಕೆಲಸಕ್ಕೆ ಹಾಜರ್!

    ಬರೋಬ್ಬರಿ 9 ಗುಂಡುಗಳು ಹೊಕ್ಕಿ ಕೋಮಾಗೆ ಜಾರಿದ್ದ ಯೋಧ ಮತ್ತೆ ಕೆಲಸಕ್ಕೆ ಹಾಜರ್!

    ನವದೆಹಲಿ: ಜಮ್ಮು-ಕಾಶ್ಮೀರದ ಬಂಡಿಪೋರ್ ಎನ್‍ಕೌಂಟರ್ ವೇಳೆ ಒಂಭತ್ತು ಗುಂಡುಗಳು ತಾಗಿ ಕೋಮಾ ಸ್ಥಿತಿಗೆ ಜಾರಿದ್ದ ಸಿಆರ್‍ಪಿಎಫ್ ಕಮಾಂಡರ್ ಚೇತನ್ ಕುಮಾರ್ ಚೀತಾ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

    ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಬಂಡಿಪೋರಾನಲ್ಲಿ ಉಗ್ರದ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ 45 ವರ್ಷದ ಚೇತನ್ ಎದೆಗೆ 9 ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ ದಿನದಂದು ಚೇತನ್ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದರು. ಸುಮಾರು 2 ತಿಂಗಳ ಬಳಿಕ ಅವರು ಕೋಮಾದಿಂದ ಹೊರಬಂದಿದ್ದರು.

    ದೆಹಲಿಯ ಏಮ್ಸ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಅವರನ್ನು ಕಳೆದ ವರ್ಷ ಏಪ್ರಿಲ್ 5 ರಂದು ಡಿಸ್ಚಾರ್ಜ್ ಮಾಡಲಾಗಿತ್ತು.

    ಸುದೀರ್ಘ ಚಿಕಿತ್ಸೆ ಬಳಿಕ ಇದೀಗ ಆರೋಗ್ಯ ಸುಧಾರಿಸಿಕೊಂಡಿದ್ದ ಚೇತನ್ ಕುಮಾರ್ ಅವರು ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ. ಚೇತನ್ ಕುಮಾರ್ ಅವರ ಪತ್ನಿ ಮಾತನಾಡಿದ್ದು, ನನ್ನ ಗಂಡ ಮರಳಿ ಕೆಲಸಕ್ಕೆ ಹಾಜರಾಗುತ್ತಿರುವುದು ತುಂಬಾ ಖುಷಿ ನೀಡಿದೆ ಎಂದಿದ್ದಾರೆ.

    ಚೇತನ್ 45ನೇ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. 2017ರ ಫೆಬ್ರವರಿ 14ರಂದು ಅವರಿಗೆ 9 ಗುಂಡೇಟು ತಗುಲಿತ್ತು. ಮೆದುಳು, ಹೊಟ್ಟೆ, ಕೈ, ಬಲಗಣ್ಣು ಹಾಗೂ ತೊಡೆಯಲ್ಲಿ ಗುಂಡು ಹೊಕ್ಕಿತ್ತು. ಸುಮಾರು ಒಂದೂವರೆ ತಿಂಗಳು ಚೇತನ್ ಕುಮಾರ್ ಕೋಮಾದಲ್ಲಿದ್ದರು. ಏಪ್ರಿಲ್ ನಲ್ಲಿ ಅವರಿಗೆ ಪ್ರಜ್ಞೆ ಮರಳಿತ್ತು. ಚೇತನ್ ಪೂರ್ತಿಯಾಗಿ ಚೇತರಿಸಿಕೊಳ್ಳಲು 2 ವರ್ಷಗಳು ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರು ಕಚೇರಿ ಕೆಲಸ ನೋಡಿಕೊಳ್ಳಲಿದ್ದಾರೆ. ಸಂಪೂರ್ಣ ಗುಣಮುಖರಾದ ಮೇಲೆ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಸ್ವತಂತ್ರ್ಯಾ ದಿನಚಾರಣೆ ದಿನದಂದು ಚೇತನ್ ಕುಮಾರ್ ಚೇತಾ ಅವರಿಗೆ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿತ್ತು.

    ಉಗ್ರರಿಂದ ಗುಂಡೇಟು ತಿಂದು ಶ್ರೀನಗರದಿಂದ ದೆಹಲಿಗೆ ಬಂದಾಗ ಚೇತನ್ ಕುಮಾರ್ ಆರೋಗ್ಯ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಕೇಂದ್ರ ಗೃಹ ಖಾತೆ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಏಮ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟು ಚೇತನ್ ಕುಮಾರ್ ಅವರ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಏಮ್ಸ್ ನಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕೋಬ್ರಾ ಬೆಟಾಲಿಯನ್ ಸೇರುವ ಇಂಗಿತವನ್ನು ಚೇತನ್ ವ್ಯಕ್ತಪಡಿಸಿದ್ದರು. ಇದು ಇತರ ಯೋಧರಿಗೆ ನೈತಿಕ ಧೈರ್ಯ ತುಂಬಿದೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದರು.

  • ಸೆಲ್ಫಿ ಎಡವಟ್, ಪಿಸ್ತೂಲಿನಿಂದ ಶಿಕ್ಷಕನನ್ನು ಕೊಂದೇಬಿಟ್ಟ 11ರ ಬಾಲಕ!

    ಸೆಲ್ಫಿ ಎಡವಟ್, ಪಿಸ್ತೂಲಿನಿಂದ ಶಿಕ್ಷಕನನ್ನು ಕೊಂದೇಬಿಟ್ಟ 11ರ ಬಾಲಕ!

    ನವದೆಹಲಿ: ಪಿಸ್ತೂಲ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಂಬಂಧಿ ಶಿಕ್ಷಕರೊಬ್ಬರನ್ನು ಬಾಲಕನೊಬ್ಬನ ಗುಂಡೇಟಿಗೆ ಬಲಿಯಾಗಿರುವ ಘಟನೆ ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಪ್ರಶಾಂತ್ ಚೌಹಾಣ್(23) ಮೃತ ದುರ್ದೈವಿ. ಮೂಲತಃ ಉತ್ತರ ಪ್ರದೇಶದ ಪಾಲಿ ಗ್ರಾಮದ ನಿವಾಸಿಯಾಗಿದ್ದು, ಈತ ಶಹದಾರಾದಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸರಿತಾ ವಿಹಾರ್‍ದಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ಹೋಗಿದ್ದಾಗ ಗುರುವಾರ ಈ ಘಟನೆ ಸಂಭವಿಸಿದೆ.

    ಚೌಹಾನ್ ತನ್ನ ಸಂಬಂಧಿ 11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನು ಭೇಟಿಯಾಗಲು ಚಿಕ್ಕಪ್ಪನ ಮನೆಗೆ ಹೋಗಿದ್ದಾರೆ. ಈ ವೇಳೆ ಬಾಲಕ ಲೈಸೆನ್ಸ್ ಇದ್ದ ಪಿಸ್ತೂಲ್ ತೆಗೆದುಕೊಂಡು ಪ್ರಶಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ನಂತರ ಇಬ್ಬರೂ ಒಂದು ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಬಾಲಕನ ಕೈಯಲ್ಲಿದ್ದ ಗನ್‍ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಅದು ಪ್ರಶಾಂತ್ ಚೌಹಾಣ್ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

    ದೇಹಕ್ಕೆ ಗುಂಡು ಬಿದ್ದು, ಗಾಯಗೊಂಡಿದ್ದ ಚೌಹಾಣ್ ನನ್ನು ಕುಟುಂಬದವರು ಸಮೀಪದ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ಮಾಡಿ ಚೌಹಾಣ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಆರೋಪಿ ಇನ್ನೂ ಅಪ್ರಾಪ್ತನಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಾಪರಾಧ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಚಂಢೀಘಢ: ಮದುವೆ ಮನೆಯಲ್ಲಿ ಸಂಭ್ರಮಾಚರಣೆ ನಡೆಸುವಾಗ ಗಾಳಿಯಲ್ಲಿ ಹಾರಿಸಿದ ಗುಂಡು ಅಚಾನಕ್ ಆಗಿ ಮಧುಮಗನಿಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವರ ಸಾವನ್ನಪ್ಪಿದ್ದ ಘಟನೆ ಶನಿವಾರ ಹರಿಯಾಣಾದ ಕೈತಲ್ ನಲ್ಲಿ ನಡೆದಿದೆ.

    ವಿಕ್ರಮ್ ವೋಹರಾ (36) ಸಾವನ್ನಪ್ಪಿದ್ದ ವರ. ವಿಕ್ರಮ್ 12 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ವಿಕ್ರಮ್ ಸಂಗೀತ್ ಕಾರ್ಯಕ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ಕುಣಿಯುತ್ತಿದ್ದರು. ಆಗ ಆತನ ಕುಟುಂಬದವರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ವರನಿಗೆ ತಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಿಕ್ರಮ್ ಸಾವನ್ನಪ್ಪಿದ್ದಾರೆ.

    ವರನ ಸಂಬಂಧಿ ನವತೇಜ್ ಸಿಂಗ್ ಗೆ ಕೂಡ ಗಾಯವಾಗಿದ್ದು ಅವರನ್ನು ಚಂಢೀಘಢ್‍ನ ಪಿಜಿಐಗೆ ರವಾನಿಸಲಾಗಿದೆ.

    ಘಟನೆ ಬಗ್ಗೆ ಮಾತನಾಡಿದ ಕೈತಲ್ ನ ಎಸ್‍ಪಿ ಅಸ್ತಾ ಮೋದಿ, ನಾವು ಈ ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದೇವೆ ಹಾಗೂ ಗುಂಡು ಹಾರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರ್ಯಕ್ರಮದ ವಿಡಿಯೋಗಳನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 304 ಹಾಗೂ ಸೆಕ್ಷನ್ 308 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ವರನ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ

    ಭಾನುವಾರದಂದು ವಿಕ್ರಮ್ ಮದುವೆ ನಡೆಯಬೇಕಿತ್ತು.

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬಳಿ 22 ನಂಬರ್‍ನ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದು, ಆರೋಪಿಯನ್ನು ಏರ್‍ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

    ಬಾದೆ ದಾನೇಶ್ವರ್ ಎಂಬಾತ ಬಂಧಿತ ಆರೋಪಿ. ಈತ ನವೆಂಬರ್ 2 ರಂದು ಕೆಐಎಎಲ್‍ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‍ಜಿ 424ನಲ್ಲಿ ಪ್ರಯಾಣ ಮಾಡಲು ಯತ್ನಿಸಿದ್ದನು. ಈ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಹ್ಯಾಂಡ್ ಬ್ಯಾಗ್ ಮುಖಾಂತರ ಗುಂಡುಗಳನ್ನು ಕೊಂಡೊಯ್ಯುತ್ತಿದ್ದನು. ತಪಾಸಣೆ ಮಾಡುವ ವೇಳೆ ಅಕ್ರಮ ಗುಂಡುಗಳು ಹಾಗೂ ಕಾಟ್ರಿಡ್ಜ್ ಪತ್ತೆಯಾಗಿವೆ.

    ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಬಳಿ 22 ನಂಬರ್‍ನ ಎರಡು ಖಾಲಿ ಕಾಟ್ರಿಡ್ಜ್ ಹಾಗೂ 5.56 ನಂಬರ್‍ನ ಒಂದು ಹೆಡ್ ಪಾರ್ಟ್ ಪತ್ತೆಯಾಗಿವೆ. ಆದರೆ ವಿಚಾರಣೆಯ ವೇಳೆ ಬೇರೆ ಯಾವುದೇ ರೀತಿಯ ದಾಖಲಾತಿಗಳು ದೊರಕಲಿಲ್ಲ.

    ಈ ಘಟನೆ ಸಂಬಂಧ ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

  • ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದ ಪಿಸ್ತೂಲ್ ಹಾಗೂ 14 ಬುಲೆಟ್‍ಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಇಲ್ಲಿನ ಅಲಿಪಿರಿ ಚೆಕ್‍ಪೋಸ್ಟ್ ಬಳಿ ತಪಾಸಣೆ ವೇಳೆ ಪುಣೆ ಮೂಲದ ವ್ಯಕ್ತಿ ಕಾರಿನಲ್ಲಿ ಪಿಸ್ತೂಲ್ ಹಾಗೂ ಬುಲೆಟ್ ಅಡಗಿಸಿಟ್ಟಿದ್ದು ಪತ್ತೆಯಾಗಿದೆ. ಚೆಕ್‍ಪೋಸ್ಟ್ ನ ಸೆಕ್ಯೂರಿಟಿ ಗಾರ್ಡ್‍ಗಳು ಪಿಸ್ತೂಲ್ ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ತಿರುಪತಿ ವೆಂಕಟೇಶ್ವರ ಸನ್ನಿಧಿಯ ಪ್ರವೇಶ ದ್ವಾರದ ಬಳಿ ಈ ಚೆಕ್‍ಪೋಸ್ಟ್ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

    ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.