ಪಬ್ಲಿಕ್ ಟಿವಿ ನಂ.1 ಶೋ ಬಿಗ್ ಬುಲೆಟಿನ್. ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಬಿಗ್ ಬುಲೆಟಿನ್ ಪ್ರಸಾರವಾಗುತ್ತದೆ. Public TV Big Bulletin Kannada News
Tag: Bulletin
-

ರಾಜ್ಯದಲ್ಲಿ 6,825 ಹೊಸ ಕೊರೊನಾ ಪ್ರಕರಣ – ರಾಜಧಾನಿಯಲ್ಲಿ 1,470 ಮಂದಿಗೆ ಸೋಂಕು
– 4 ಜಿಲ್ಲೆಗಳಲ್ಲಿ ಮರಣ ಪ್ರಮಾಣ ಶೂನ್ಯ
– ರಾಜ್ಯದಲ್ಲಿ ಪಾಸಿಟಿವಿ ರೇಟ್‍ನಲ್ಲಿ ಇಳಿಕೆಬೆಂಗಳೂರು: ರಾಜ್ಯದಲ್ಲಿಂದು 6,835 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ರೇಟ್ ಶೇ.4.56ಕ್ಕೆ ಇಳಿಕೆಯಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ 1,470 ಕೊರೊನಾ ಪ್ರಕರಣಗಳ ಸಂಖ್ಯೆ ದಾಖಲಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ.

ಇಂದು ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಒಟ್ಟು 1,49,742 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಒಟ್ಟು 18,648 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಒಂದು ವಾರ ಸೀಲ್‍ಡೌನ್

ನಾಲ್ಕು ಜಿಲ್ಲೆಗಳಲ್ಲಿ ಮರಣ ಪ್ರಮಾಣ ಶೂನ್ಯ ದಾಖಲಾಗಿದೆ. ಚಾಮರಾಜನಗರ, ಬೀದರ್, ಗದಗ, ರಾಮನಗರದಲ್ಲಿಂದು ಯಾವುದೇ ಮರಣಗಳು ಸಂಭವಿಸಿಲ್ಲ. ಸದ್ಯ ರಾಜ್ಯದಲ್ಲಿ 1,72,141 ಸಕ್ರಿಯ ಪ್ರಕರಣಗಳಿದ್ದು, ಇಂದು 15,409 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ 120 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 33,033 ಕ್ಕೇರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 85,044 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ.1.75ರಷ್ಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 57, ಬಳ್ಳಾರಿ 203, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 168, ಬೆಂಗಳೂರು ನಗರ 1,470, ಬೀದರ್ 14, ಚಾಮರಾಜನಗರ 119, ಚಿಕ್ಕಬಳ್ಳಾಪುರ 160, ಚಿಕ್ಕಮಗಳೂರು 185, ಚಿತ್ರದುರ್ಗ 195, ದಕ್ಷಿಣ ಕನ್ನಡ 648, ದಾವಣಗೆರೆ 200, ಧಾರವಾಡ 103, ಗದಗ 28, ಹಾಸನ 507, ಹಾವೇರಿ 63, ಕಲಬುರಗಿ 31, ಕೊಡಗು 110, ಕೋಲಾರ 115, ಕೊಪ್ಪಳ 95, ಮಂಡ್ಯ 256, ಮೈಸೂರು 670, ರಾಯಚೂರು 33, ರಾಮನಗರ 26, ಶಿವಮೊಗ್ಗ 353, ತುಮಕೂರು 386, ಉಡುಪಿ 122, ಉತ್ತರ ಕನ್ನಡ 204, ವಿಜಯಪುರ 103 ಮತ್ತು ಯಾದಗಿರಿಯಲ್ಲಿ 20 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ: ಸಿಎಂ ಘೋಷಣೆ
-

ರಾಜ್ಯದಲ್ಲಿ 39,998 ಪಾಸಿಟಿವ್, 517 ಸಾವು – 34,752 ಜನ ಡಿಸ್ಚಾರ್ಜ್
ಬೆಂಗಳೂರು: ಮಂಗಳವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದು, 39,998 ಹೊಸ ಪ್ರಕರಣಗಳು ವರದಿಯಾಗಿದೆ.
ಮೈಸೂರಿನಲ್ಲಿ 1 ವರ್ಷ 5 ತಿಂಗಳ ಹೆಣ್ಣು ಮಗು ಸೇರಿದಂತೆ 517 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,368ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ 34,752 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.67 ಮತ್ತು ಮರಣ ಪ್ರಮಾಣ ಶೇ.1.29ರಷ್ಟಿದೆ. ಟೆಸ್ಟಿಂಗ್ ಏರಿಕೆಯಾಗಿದ್ದು, ಇಂದು 1,347,92 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 88,437 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,08,82,080 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,286 ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,60,619 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 610, ಬಳ್ಳಾರಿ 1,823, ಬೆಳಗಾವಿ 856, ಬೆಂಗಳೂರು ಗ್ರಾಮಾಂತರ 1,138, ಬೆಂಗಳೂರು ನಗರ 16,286, ಬೀದರ್ 281, ಚಾಮರಾಜನಗರ 517, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 646, ಚಿತ್ರದುರ್ಗ 192, ದಕ್ಷಿಣ ಕನ್ನಡ 1,077, ದಾವಣಗೆರೆ 362, ಧಾರವಾಡ 904, ಗದಗ 347, ಹಾಸನ 1,572, ಹಾವೇರಿ 189, ಕಲಬುರಗಿ 646, ಕೊಡಗು 678, ಕೋಲಾರ 815, ಕೊಪ್ಪಳ 278, ಮಂಡ್ಯ 1,223, ಮೈಸೂರು 1,773, ರಾಯಚೂರು 289, ರಾಮನಗರ 135, ಶಿವಮೊಗ್ಗ 1,125, ತುಮಕೂರು 2,360, ಉಡುಪಿ 919, ಉತ್ತರ ಕನ್ನಡ 960, ವಿಜಯಪುರ 690 ಮತ್ತು ಯಾದಗಿರಿಯಲ್ಲಿ 753 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
-

39,510 ಪಾಸಿಟಿವ್, 480 ಸಾವು – 22,584 ಡಿಸ್ಚಾರ್ಜ್
ಬೆಂಗಳೂರು: ಸೋಮವಾರ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆಯಾಗಿದ್ದು, 39,510 ಹೊಸ ಪ್ರಕರಣಗಳು ವರದಿಯಾಗಿದೆ.
ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಚಿತ್ರದುರ್ಗದಲ್ಲಿ 4 ವರ್ಷದ ಬಾಲಕ ಸೇರಿದಂತೆ 480 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ ಮೃತಪಟ್ಟವರ ವಿವರಗಳನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ತಡವಾಗಿ ನೀಡುತ್ತಿರುವುದರಿಂದ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ 22,584 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.33.66 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,16,238 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,879 ಹೊಸ ಪ್ರಕರಣಗಳು ವರದಿಯಾಗಿದ್ದು, 259 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,62,696 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108, ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1,084, ವಿಜಯಪುರ 485 ಮತ್ತು ಯಾದಗಿರಿಯಲ್ಲಿ 426 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
