ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಬರೋಬ್ಬರಿ 35 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದಾರೆ. ಮುಂದೆ ಇನ್ನೂ ತೂಕ ಕಡಿಮೆ ಮಡಿಕೊಳ್ಳಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಬುಲೆಟ್ ಪ್ರಕಾಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಾ ಇರುತ್ತಾರೆ. ಅಂತೆಯೇ ಈ ಬಾರಿ ತೂಕ ಕಡಿಮೆ ಮಾಡಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಎಲ್ಲರಿಗೂ ನಮಸ್ಕಾರ.. ನಾನು ಸುಮಾರು 35 ಕೆಜಿ ತೂಕ ಕಡಿಮೆ ಮಾಡಿದ್ದೀನಿ, ಇನ್ನೂ ಕಡಿಮೆ ಮಾಡುತ್ತೀನಿ, ನಿಮಗೆ ನನ್ನಲ್ಲಿ ಬದಲಾವಣೆ ಕಾಣುತ್ತಿದೆಯಾ ಎಂಬುವುದಾಗಿ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಖಾಸಗಿ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಸಿಕ್ಸ್ ಪ್ಯಾಕ್ ಮಾಡುವುದಾಗಿ ಬುಲೆಟ್ ಪ್ರಕಾಶ್ ಹೇಳಿಕೊಂಡಿದ್ದರು.
ಎಲ್ಲರಿಗೂ ನಮಸ್ಕಾರ ನಾನು ಸುಮಾರು 35 ಕೆಜಿ ತೂಕ ಕಡಿಮೆ ಮಾಡಿದ್ದಿನಿ,ಇನ್ನೂ ಕಡಿಮೆ ಮಾಡುತ್ತಿನಿ, ನಿಮಗೆ ನನ್ನಲ್ಲಿ ಬದಲಾವಣೆ ಕಾಣುತ್ತಿದೆಯ. pic.twitter.com/CSpS0qLUIs
ದಾವಣಗೆರೆ: ಇತ್ತೀಚಿಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ದೊಡ್ಡ ನಟನ ಸಣ್ಣತನ ಬಯಲು ಮಾಡ್ತೀನಿ ಎಂದು ತಣ್ಣಗಾಗಿದ್ದರು. ಇಂದು ದಾವಣಗೆರೆಯಲ್ಲಿ ನಟ ಶ್ರೀನಗರ ಕಿಟ್ಟಿ ಹಾಸ್ಯ ನಟ ಬುಲೆಟ್ ಪ್ರಕಾಶ್‍ಗೆ ಟಾಂಗ್ ನೀಡಿದ್ದಾರೆ.
ಇಂದು ನಗರದಲ್ಲಿ ತಮ್ಮ ಸಿನಿಮಾ `ಸಿಲಿಕಾನ್ ಸಿಟಿ’ ಪ್ರಚಾರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪ್ರಾಬಲ್ಯ ತೋರಿಸೋಕೆ ಹೋದ್ರೆ ನಿರ್ಮಾಪಕ ಹಾಳಾಗ್ತಾನೆ. ಅವರವರ ಬೇಳೆ ಬೇಯಿಸಿಕೊಳ್ಳಲು ಈ ತರಹದ ಆಟಗಳನ್ನಾಡುತ್ತಾರೆ. ಮೊದಲು ಈ ತರಹದ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ. ಕನ್ನಡ ಚಿತ್ರರಂಗವನ್ನು ಬೆಳಸುವ ಕೆಲಸ ಮಾಡಿದ್ರೆ ಒಳ್ಳೆಯದು ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಜನರಿಗೆ ಮನಸ್ಸಿಗೆ ಹತ್ತಿರವಾಗುವಂತೆ ಸಿನಿಮಾ ಮಾಡಿ. ಆಗ ಕನ್ನಡ ಚಿತ್ರರಂಗಕ್ಕೆ ಒಂದು ಬೆಲೆ ಇರುತ್ತೆ, ನಿರ್ಮಾಪಕರು ಉಳಿಯುತ್ತಾರೆ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.
ಈ ಕಮೆಂಟ್‍ಗಳಿಂದ ದೂರ ಇರುವುದೇ ಒಳ್ಳೆಯದು. ಪ್ರತಿಕ್ರಿಯೆ ನೀಡಿದರೆ ನಾವು ಅದರಲ್ಲಿ ಸೇರಿ ಹೋಗುತ್ತೇವೆ. ಹಿಂದೆ ಪೇಪರ್ ಮಾತ್ರ ಇತ್ತು. ನೀವು ಬರೆದದ್ದೆ ಸತ್ಯವಾಗಿತ್ತು. ಆದರೆ ಈಗ ಬದಲಾಗಿದೆ. ಹೀಗಾಗಿ ಸುಳ್ಳು ಸತ್ಯವಾಗುತ್ತದೆ. ಸತ್ಯ ಸುಳ್ಳಾಗುತ್ತದೆ. ದುರಂಹಕಾರ ತೋರಿಸದೇ ಒಳ್ಳೆಯ ಸಿನಿಮಾ ಮಾಡಬೇಕು. ಆಗ ಸಿನಿಮಾ ಇಂಡಸ್ಟ್ರಿ ಬೆಳೆಯುತ್ತದೆ ಎಂದು ತಿಳಿಸಿದರು.
ದಯವಿಟ್ಟು ಅನಾವಶ್ಯಕ ಹೇಳಿಕೆಯನ್ನು ಕೊಡೋದು ಬಿಟ್ಟು, ಜನ ನೋಡುವಂತಹ ಸಿನಿಮಾ ಮಾಡಿ, ಜನರ ಮನಸ್ಸಿಗೆ ಹತ್ರ ಆಗಿ, ನಿರ್ಮಾಪಕರ ಜೇಬು ತುಂಬಿಸಿದ್ರೆ ಸಾಕು. ಇನ್ನೊಂದು ಆರು ತಿಂಗಳು ಅಥವಾ ಒಂದು ವರ್ಷವಾದ್ರೆ ಯಾರು ಹೇಗಿರಬೇಕು ಎಲ್ಲಿರಬೇಕು ಎಂದು ಅರ್ಥವಾಗುತ್ತದೆ. ಇಂತಹಗಳು ಬಗ್ಗೆ ಕಮೆಂಟ್ ಮಾಡ್ತಾ ಕೂತರೆ ಅದರಲ್ಲೇ ನಾವು ಮುಳುಗಿ ಹೋಗ್ತಿ ಅಂದ್ರು.
ಸಿಲಿಕಾನ್ ಸಿಟಿ ಇದೇ ತಿಂಗಳು 16ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಸಿಲಿಕಾನ್ ಸಿಟಿ ತಮಿಳಿನ ಮೆಟ್ರೋ ಸಿನಿಮಾ ರಿಮೇಕ್ ಆಗಿದ್ದು, ನಿರ್ದೇಶಕ ಮುರುಳಿ ಗುರುಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ಕಾವ್ಯ ಶೆಟ್ಟಿ ಜೊತೆಯಾಗಿದ್ದಾರೆ. ಸೂರಜ್ ಗೌಡ, ಚಿಕ್ಕಣ್ಣ ಸೇರಿದಂತೆ ಸಿನಿಮಾ ದೊಡ್ಡ ತಾರಾಗಣವನ್ನು ಹೊಂದಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದೆ.
ಬೆಂಗಳೂರು: ದೊಡ್ಡ ನಟನ ಸಣ್ಣತನ ಬಯಲು ಮಾಡ್ತೀನಿ ಎಂದಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಇದೀಗ ಆ ವ್ಯಕ್ತಿಯ ಹೆಸರು ಹೇಳಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತನಾಡಿದ ಬುಲೆಟ್ ಪ್ರಕಾಶ್, ಫಸ್ಟ್ ನನ್ನನ್ನು ನಾನು ಎಮೋಶನಲ್ ಆಗುವುದನ್ನು ನಿಲ್ಲಿಸಬೇಕು. ಹಾಗಾದ್ರೆ ಮಾತ್ರ ಇಂತಹ ಯಾವುದೇ ಘಟನೆ ನಡೆಯಲ್ಲ. ನನ್ನ ನೋವುಗಳನ್ನು ಎಲ್ಲರ ಮುಂದೆ ತೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಆ ರೀತಿಯ ಸಾಲುಗಳನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದೆ ಎಂದು ಹೇಳಿದ್ದಾರೆ.
ಆದರೆ ಚಿತ್ರರಂಗದ ಹಿರಿಯರ ಮಾತಿನಂತೆ ನಾನು ಯಾವುದೇ ವಿಷಯವನ್ನು ಬಹಿರಂಗ ಮಾಡಲ್ಲ. ಹಾಗಾಗಿ ನನ್ನ ಹೇಳಿಕೆಯಿಂದ ಹಿಂದೆ ಸರೀತಿಲ್ಲ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿಯೇ ಇರ್ತೀವಿ. ನನ್ನ ಕಡೆಯಿಂದ ದಯವಿಟ್ಟು ಕ್ಷಮೆಯಿರಲಿ. ಯಾರಿಗಾದ್ರೂ ನನ್ನ ಹೇಳಿಕೆಯಿಂದ ನೋವಾಗಿದ್ರೆ ನನ್ನಿಂದ ದೊಡ್ಡ ಕ್ಷಮೆಯಿರಲಿ ಎಂದು ಕೇಳಿಕೊಂಡರು.
ಎಲ್ಲ ಇಂಡಸ್ಟ್ರಿಗಳಲ್ಲಿ ಸಣ್ಣ ಪುಟ್ಟ ತೊಂದರೆಗಳಿರುತ್ತವೆ. ನಾವು ಹೆತ್ತ ಮಕ್ಕಳೇ ನಮ್ಮ ಮಾತು ಕೇಳಲ್ಲ. ಮನೆಯಲ್ಲಿ ನಾವು ಸಾಕಿರುವ ನಾಯಿಯೇ ಕೆಲವೊಂದು ಸಾರಿ ನಮ್ಮ ಮಾತನ್ನ ಕೇಳಲ್ಲ. ಅಂತಹ ವಿಚಾರಗಳೆಲ್ಲ ಹೇಳಕ್ಕಾಗಲ್ಲ. ಕೆಲವೊಬ್ಬರಿಗೆ ನಾವ್ಯಾಕೆ ಬೇರೆಯವರ ಮಾತು ಕೇಳಬೇಕು ಎಂಬ ಈಗೋ ಇರುತ್ತದೆ. ಈ ರೀತಿಯ ಈಗೋಗಳೆಲ್ಲ ಬಿಟ್ಟು ಕೆಲಸ ಮಾಡಿದ್ರೆ ಇಂಡಸ್ಟ್ರಿಯೂ ಚೆನ್ನಾಗಿ ಬೆಳೆಯುತ್ತದೆ ಹಾಗು ನಾವು ಬೆಳೀತೀವಿ ಅಂದ್ರು.
ನನ್ನ ಬಗ್ಗೆ ಅಪ್ರಚಾರ ಮಾಡುತ್ತಿರುವರಿಗೆ ಖುಷಿ ಸಿಗುವ ಹಾಗೆ ಕಾಣುತ್ತಿದೆ. ಅವರಿಗೆಲ್ಲಾ ದೇವರು ಒಳ್ಳೇದು ಮಾಡ್ಲಿ. ಜನಗಳ ಪ್ರೀತಿಯಿಂದಾಗಿ ನಾನು ಇಲ್ಲಿಯವರೆಗೂ ಬಂದಿದ್ದೀನಿ. ಯಾವಾಗ ಹಿರಿಯರು ನನ್ನ ಕರೀತಾರೆ ಆ ವೇಳೆ ನಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ತಿವಿ ಅಂತ ಬುಲೆಟ್ ಪ್ರಕಾಶ್ ಹೇಳಿದ್ರು.
ನಿನ್ನೆಯ ಟ್ವೀಟ್ ನಿಂದ ಕೆಲವರಿಗೆ ಬೇಸರವಾಗಿದೆ. ಹಿರಿಯರ ಜೊತೆ ಬಗೆಹರಿಸಿಕೊಳ್ಳುತ್ತಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಬೇರೆ ರೂಪ ಬೇಡ.
ಬೆಂಗಳೂರು: ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ ಅಂತಾ ಬಾಂಬ್ ಸಿಡಿಸಿದ್ದ ನಟ ಬುಲೆಟ್ ಪ್ರಕಾಶ್ ಇದೀಗ ಆ ವ್ಯಕ್ತಿಯ ಹೆಸರು ಹೇಳಲ್ಲ ಎಂದಿದ್ದಾರೆ.
ಯಾರಿಗೂ ಹೆದರೋ ಅವಶ್ಯಕತೆಯಿಲ್ಲ. ಆದರೆ ಆ ವ್ಯಕ್ತಿಯ ಹೆಸರು ಹೇಳಲ್ಲ. ಮಂಗಳವಾರ ಸಂಜೆಯಿಂದ ಚಿತ್ರರಂಗದ ಹಿರಿಯರಿಂದ ಬಹಳಷ್ಟು ಫೋನ್‍ಗಳು ಬರ್ತಿವೆ. ಚಿತ್ರರಂಗದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಆ ವ್ಯಕ್ತಿಯ ಹೆಸರು ಮತ್ತು ಆ ವಿಚಾರವಾಗಿ ಯಾವುದನ್ನೂ ಹೇಳಲಾರೆ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ನನಗೆ ಅಭಿಮಾನಿ ಬಳಗ ಜಾಸ್ತಿ ಇದೆ. ಹೀಗಾಗಿ ಆವಾಗವಾಗ ನನ್ನ ಬಗ್ಗೆ ಅಪಪ್ರಚಾರ ಮಾಡ್ತಾರೆ. ನನಗೆ ನೋವಾಗಿದೆ ಅದಕ್ಕೆ ಟ್ವೀಟ್ ಮಾಡಿದ್ದೆ. ನಿನ್ನೆ ರಾತ್ರಿಯಿಂದಲೂ ಹಲವು ಫೋನ್ ಕರೆಗಳು ಬರ್ತಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಅಂತಾ ಹಿರಿಯರು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯ ಹೆಸರು ಹೇಳಲ್ಲ. ಹಿರಿಯರು ಏನೂ ಹೇಳಬೇಡ ಎಂದಿದ್ದಾರೆ. ಅದಕ್ಕೆ ಏನೂ ಹೇಳೋದಿಲ್ಲ. ನಾವೆಲ್ಲಾ ಒಂದೇ. ನಾವ್ ನಾವೇ ಸರಿ ಮಾಡಿಕೊಳ್ಳುತ್ತೇವೆ ಅಂತ ಬುಲೆಟ್ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆಯ ಟ್ವೀಟ್ ನಿಂದ ಕೆಲವರಿಗೆ ಬೇಸರವಾಗಿದೆ. ಹಿರಿಯರ ಜೊತೆ ಬಗೆಹರಿಸಿಕೊಳ್ಳುತ್ತಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಬೇರೆ ರೂಪ ಬೇಡ.
ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಭಿನ್ನಮತ, ಗುಂಪುಗಾರಿಕೆಗೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ ಅಂತಾ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಅವರು, ಡಾ.ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ಸಂಪೂರ್ಣವಾಗಿ ತಿಳಿಸುತ್ತೇನೆ ಅಂದಿದ್ರು. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸುವುದಾಗಿ ಬುಲೆಟ್ ಪ್ರಕಾಶ್ ಹೇಳಿದ್ರು.
ಚಿತ್ರರಂಗದಲ್ಲಿನ ಮನಸ್ತಾಪ,ಗುಂಪುಗಾರಿಕೆ ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ @publictvnews@ETVNews_Kannada @suvarnanewstv
ಬೆಂಗಳೂರು:ಕನ್ನಡ ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಯಾರು ಕಾರಣ ಎನ್ನುವುದನ್ನು ನಾನು ಬುಧವಾರ ತಿಳಿಸುತ್ತೇನೆ ಎಂದು ನಟ ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಡಾ ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ನಾನು ಬೆಳಗ್ಗೆ ಸಂಪೂರ್ಣವಾಗಿ ತಿಳಿಸುತ್ತೇನೆ ಎಂದರು.
ಆ ವ್ಯಕ್ತಿ ಯಾರು, ತಿಳಿಸಿ ಎಂದು ಕೇಳಿದ್ದಕ್ಕೆ, ನಾನು ಸತ್ಯವನ್ನೇ ಹೇಳುತ್ತೇನೆ. ಎಲ್ಲರೂ ಮೆಚ್ಚಿಕೊಳ್ಳುವಂತಹ ನಟನ ಬಗ್ಗೆ ನಾನು ನಾಳೆ ಹೇಳುತ್ತೇನೆ. ಆ ವ್ಯಕ್ತಿ ದರ್ಶನ್ ಅವರನ್ನು ಹಾಳು ಮಾಡಿದ್ದಾನೆ. ಚೆನ್ನಾಗಿ ಇದ್ದ ಚಿತ್ರರಂಗದಲ್ಲಿ ಸುಂಟರಗಾಳಿ ಏಳಲು ಆ ವ್ಯಕ್ತಿಯೇ ಕಾರಣವಾಗಿದ್ದು, ಆ ವ್ಯಕ್ತಿಯಿಂದಲೇ ಗುಂಪುಗಾರಿಕೆ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಈ ಸಂಬಂಧ ಟ್ವಿಟ್ಟರ್‍ನಲ್ಲಿ ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ. ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.
ಚಿತ್ರರಂಗದಲ್ಲಿನ ಮನಸ್ತಾಪ,ಗುಂಪುಗಾರಿಕೆ ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ @publictvnews@ETVNews_Kannada @suvarnanewstv
ಬೆಂಗಳೂರು: ಕನ್ನಡದ ಫೇಮಸ್ ನಟರಾದ ದರ್ಶನ್ ಮತ್ತು ಸುದೀಪ್ ನಡುವಿನ ಗೆಳತನದ ಬಗ್ಗೆ ಟ್ವಿಟ್ಟರ್‍ನಲ್ಲಿ ಬ್ರೇಕ್ ಆಗಿದ್ದು, ಇದರ ಹಿಂದೆ ದೊಡ್ಡ ಕಥೆಯಿದೆ. ಅದನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ನಟ ಬುಲೆಟ್ ಪ್ರಕಾಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ದರ್ಶನ್ ಮತ್ತು ಸುದೀಪ್ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದು, ಇವರ ನಡುವೆ ಈಗಲೂ ಸ್ನೇಹವಿದೆ. ಇಂಡಸ್ಟ್ರಿಯಲ್ಲಿ ಎಲ್ಲರೂ ಸ್ನೇಹಿತರಂತಿರಬೇಕು. ನನ್ನ ಮತ್ತು ದರ್ಶನ್‍ಗೂ ಜಗಳ ಆಗುವಂತೆ ಮಾಡಿದ್ದು ಸಹ ಮೂರನೇ ವ್ಯಕ್ತಿ. ಇವರಿಬ್ಬರ ಸ್ನೇಹದ ಮಧ್ಯೆ ಮೂರನೇ ವ್ಯಕ್ತಿಯೊಬ್ಬರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನನಗೆ ಗೊತ್ತಿರುವ ಹಾಗೆ ದರ್ಶನ್ ಅವರು ಹೆಚ್ಚಾಗಿ ಮೊಬೈಲ್ ಆಪರೇಟ್ ಮಾಡುವುದಿಲ್ಲ. ದರ್ಶನ್ ಅವರು ನನಗೆ ಕೆಲಸ ಕೊಡಲಿ ಎಂದು ನಾನಿದನ್ನು ಹೇಳುತ್ತಿಲ್ಲ. ನಾನು ತುಂಬಾ ಹತ್ತಿರದಿಂದ ಅವರನ್ನು ನೋಡಿದ್ದೇನೆ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ದರ್ಶನ್ ಮತ್ತು ಸುದೀಪ್ ನಡುವೆ ವೈಮನಸ್ಸು ಮೂಡಿದ್ದು ಹೇಗೆ? ಅದರ ಹಿಂದಿನ ರಹಸ್ಯವೇನು? ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಅಪ್ ಲೋಡ್ ಮಾಡಿದ್ದು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಬುಲೆಟ್ ಪ್ರಕಾಶ್ ಇಂದು ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.