Tag: bullet bike

  • ಬಾವಿಯಲ್ಲಿ ಪತ್ತೆಯಾದ ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!

    ಬಾವಿಯಲ್ಲಿ ಪತ್ತೆಯಾದ ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!

    ಚಿಕ್ಕಬಳ್ಳಾಪುರ: ಬಾವಿಯಲ್ಲಿನ ನೀರನ್ನ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಹೋದ ರೈತನಿಗೆ ಶಾಕ್ ಆಗಿದೆ. ಬಾವಿ ನೀರಲ್ಲಿ ಬುಲೆಟ್ ಬೈಕೊಂದು (Bullet Bike) ಪತ್ತೆಯಾಗಿದೆ. ಬುಲೆಟ್ ಬೈಕ್ ಸುತ್ತ ಈಗ ಅನುಮಾನದ ಹುತ್ತ ಬೆಳೆದಿದೆ. ಬಾವಿಗೆ ಬೈಕ್ ಹಾಕಿದ್ದಾದ್ರೂ ಯಾರು? ಯಾಕೆ ಎಂಬ ಹಲವು ಪ್ರಶ್ನೆಗಳು ಕಾಡ್ತಿವೆ.

    ಅಂದಹಾಗೆ ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಹರಿಹರಪುರದ ಬಳಿ. ಚಿಕ್ಕಬಳ್ಳಾಪುರ-ಆವಲಗುರ್ಕಿಯ ಈಶಾ ಮಾರ್ಗದ ಬಳಿಯ ಹರಿಹರಪುರ ಗ್ರಾಮದ ಬಳಿ ರಸ್ತೆ ಬದಿ ರೈತ ಪಾಪಣ್ಣ ಎಂಬುವವರ ಜಮೀನನಲ್ಲಿರೋ ಪಾಳು ಬಾವಿಯಲ್ಲಿ ಈ ಬುಲೆಟ್ ಬೈಕ್ ಪತ್ತೆಯಾಗಿದೆ. ರೈತ ಪಾಪಣ್ಣ ಪಕ್ಕದ ತೋಟದ ರೈತರೊಬ್ಬರು ತಮ್ಮ ಬೆಳೆಗೆ ನೀರು ಹಾಯಿಸೋಕೆ ಅಂತ ಬಾವಿಯ ನೀರನ್ನ ಮೇಲೆತ್ತಲು ಮೋಟಾರು ಬಿಡಲು ಹೋದಾಗ ಬಾವಿಯಲ್ಲಿ ಬೈಕ್ ಕಾಣಿಸಿದೆ. ಅರೇ ಇದೇನಪ್ಪಾ ಅಂತ ಭಯದಿಂದ ನೀರನ್ನೆಲ್ಲಾ ಖಾಲಿ ಮಾಡಿ ಬೈಕ್ ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ.

    ಈ ಬಾವಿಯಲ್ಲಿನ ನೀರನ್ನ ಕೃಷಿಗೆ ಬಳಸುತ್ತಿರಲಿಲ್ಲ. ಬಾವಿಯಿದ್ದ ಜಮೀನಿನಲ್ಲಿ ಯಾವುದೇ ಬೆಳೆ ಸಹ ಬೆಳೆಯುತ್ತರಲಿಲ್ಲ. ಆದ್ರೆ ಪಕ್ಕದ ಜಮೀನಿನವರು ಬೆಳೆಗೆ ನೀರು ಹಾಯಿಸಲು ಟ್ರಾನ್ಸ್‌ಫಾರ್ಮರ್‌ ಕೈ ಕೊಟ್ಟಿದೆ. ಇದ್ರಿಂದ ಕೊಳವೆಬಾವಿಯ ನೀರು ಮೇಲತ್ತಾಲಾಗದೇ ಬಾವಿಯಲ್ಲಿನ ನೀರು ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬುಲೆಟ್ ಬೈಕ್ ಕಾಣಿಸಿದೆ. ಹಾಗಾಗಿ ಬೆಳಗ್ಗೆಯಿಂದಲೂ ಬಾವಿಯಲ್ಲಿನ ನೀರನ್ನ ಹೊರಹಾಕಿ ಬೈಕ್ ಮೇಲೆ ಎತ್ತಲು ಹರಸಾಹಸ ಪಟ್ಟಿದ್ದಾರೆ. ಹಗ್ಗ ಕಟ್ಟಿ ಬುಲೆಟ್ ಬೈಕ್ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಪದೇ ಪದೇ ಹಗ್ಗ ಕಟ್ ಆಗಿ ಬೈಕ್ ನೀರಿಗೆ ಬೀಳುತ್ತಿದೆ. ಘಟನೆಯಿಂದ ಜನ ಸಹ ಆತಂಕಕ್ಕೀಡಾಗಿದ್ದಾರೆ.

    ಇನ್ನೂ ಬೈಕ್ ಮೇಲೆ ತರಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟಿದ್ದು ಪ್ರಯತ್ನಗಳು ವಿಫಲ ಆಗ್ತಿವೆ. ಬೈಕ್ ಮೇಲೆ ಬಂದ ನಂತರ ಅದರ ನಂಬರ್ ಅಥವಾ ಚಾರ್ಸಿ ನಂಬರ್ ಆಧರಿಸಿ ಬೈಕ್ ಯಾರದ್ದು ಯಾಕೆ ಹೇಗೆ ಬಾವಿಗೆ ಬಂತು ಅನ್ನೋದರ ತನಿಖೆ ನಡೆಸಬೇಕಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ತನಿಖೆಯಿಂದಷ್ಟೇ ಬಾವಿಯಲ್ಲಿನ ಬುಲೆಟ್ ನ ಆಸಲಿ ಸತ್ಯಾಂಶ ಹೊರಬರಬೇಕಿದೆ.

  • ಪಿಜಿ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿ ಅರೆಸ್ಟ್

    ಪಿಜಿ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿ ಅರೆಸ್ಟ್

    – ಬೈಕ್‌ಗೆ ಹಚ್ಚಿದ ಬೆಂಕಿಯಿಂದ ಸಿಗರೇಟ್‌ ಹಚ್ಚಿ ಧಮ್‌ ಹೊಡೆದು ಎಸ್ಕೇಪ್

    ಬೆಂಗಳೂರು: ಪಿಜಿ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ (Bullet Bike) ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು (Peenya Police) ಬಂಧಿಸಿದ್ದಾರೆ.

    ಪುಲ್ಕಿತ್ (25) ಬಂಧಿತ ಆರೋಪಿ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ (HMT Layout) ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ. ಸೆ.19ರಂದು ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇಷ್ಟು ಮಾತ್ರವಲ್ಲದೇ ಬೈಕ್‌ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್‌ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಎಸ್ಕೇಪ್ ಆಗಿದ್ದ. ಬುಲೆಟ್ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಬೈಕ್ ಬೆಂಕಿಗಾಹುತಿಯಾದ ಬಳಿಕ ಬುಲೆಟ್ ಬೈಕ್ ಸವಾರ ದೀಪಾಂಶು ಎಂಬವರು ಈ ಬಗ್ಗೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಲ್ಕಿತ್‌ನನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ ಬೇರೆಯವರ ಬುಲೆಟ್ ಬೈಕ್ ಸೌಂಡ್ ಆದರೆ ಕೋಪಗೊಳ್ಳುತ್ತಿದ್ದ. ಬುಲೆಟ್ ಬೈಕ್ ತೆಗೆದುಕೊಳ್ಳುವ ಆಸೆಯಿತ್ತು. ಹಣವಿಲ್ಲದ್ದಕ್ಕೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಕೋಪಬಂದು ಪಿಜಿಗಳ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

  • ಬೆಂಗ್ಳೂರಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗ್ಳೂರಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಕದ್ದು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

    ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಬುಲೆಟ್ ಬೈಕ್‍ಗಳನ್ನು ಕದ್ದು ಆಂಧ್ರಪ್ರದೇಶಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಬುಲೆಟ್ ಬೈಕ್‍ಗಳನ್ನು ಸೀಜ್‌ ಮಾಡಿಕೊಂಡು ಬಂದಿದ್ದಾರೆ.

    ಹೌದು ಮೊನ್ನೆ ಮೊನ್ನೆ ತಾನೇ ಇಬ್ಬರು ಇಂಜಿನಿಯರಿಂಗ್ ಸ್ಟೂಡೆಂಟ್ಸ್‌ಗಳನ್ನು ಅರೆಸ್ಟ್ ಮಾಡಿ ಅವರಿಂದ 12 ಬುಲೆಟ್ ಬೈಕ್‍ಗಳನ್ನು ಸೀಜ್ ಮಾಡಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ಈಗ 06 ಮಂದಿ ಬೈಕ್ ಮೆಕ್ಯಾನಿಕ್‍ಗಳನ್ನು ಅರೆಸ್ಟ್ ಮಾಡಿ ಅವರಿಂದಲೂ 18 ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳು ಸೇರಿದಂತೆ 5 ಡಿಯೋ, 3 ಬಜಾಜ್ ಪಲ್ಸಾರ್, 1 ಕೆಟಿಎಂ ಡ್ಯೂಕ್, 1 ಯಮಹಾ ಆರ್ ಒನ್ ಫೈವ್, 1 ಅಕ್ಸೆಸ್, ಹಾಗೂ 1 ಪ್ಯಾಷನ್ ಪ್ರೋ ಬೈಕ್ ಸೇರಿ ಒಟ್ಟು 30 ಬೈಕ್‍ಗಳನ್ನು ಸೀಜ್‌ ಮಾಡಿದ್ದಾರೆ. ಇದರಲ್ಲಿ ಬಹುತೇಕ ಬೈಕ್‍ಗಳು ಬೆಂಗಳೂರು ನಗರದಲ್ಲೇ ಕದ್ದ ಬೈಕ್‍ಗಳಾಗಿದ್ದು ಕದ್ದ ಬೈಕ್‍ಗಳನ್ನು ಕಳ್ಳರು ಆಂಧ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮಜಾ ಮಾಡ್ತಿದ್ರು ಅಂತ ತಿಳಿದುಬಂದಿದೆ. ಎರಡು ಪ್ರಕರಣಗಳಲ್ಲಿ ಸರಿಸುಮಾರು 1 ಕೋಟಿ ರೂ. ಮೌಲ್ಯದ 46ಕ್ಕೂ ಹೆಚ್ಚು ಬೈಕ್‍ಗಳನ್ನು ಬಾಗೇಪಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ

    ಬಂಧಿತ ಕಳ್ಳರು ಯಾರು?
    ಅಂದಹಾಗೆ ಆಂಧ್ರಪ್ರದೇಶದ ಮೂಲದ ಕಾಳಸಮುದ್ರಂ ಗ್ರಾಮದ ಷೇಕ್‍ಮೌಲಾ, ಇಮ್ರಾನ್ ಪಠಾಣ್, ಖಾದರ್ ಭಾಷಾ, ಷಾಹಿದ್, ಹಾಗೂ ಮಹಮದ್ ಆಲಿ, ವೆಂಗಮುನಿ ಬಂಧಿತರಾಗಿದ್ದು, ಬಂಧಿತರು ಬೈಕ್ ಮೆಕ್ಯಾನಿಕ್‍ಗಳಾಗಿದ್ದಾರೆ. ಬುಲೆಟ್ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ರು. ಅದ್ರಲ್ಲೂ ಬೆಂಗಳೂರಲ್ಲಿ ಕದ್ದು ಆಂಧ್ರದಲ್ಲಿ ಮಾರಾಟ ಮಾಡಿದ್ರೆ ಯಾವ ಪೊಲೀಸರು ಹಿಡಿಯಲ್ಲ ಅಂತ ಅಂದುಕೊಂಡು ಕದ್ದ ಬೈಕ್‍ಗಳನ್ನೆಲ್ಲಾ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಇದೀಗ ಈ ಬೈಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ.

    ಇತ್ತ ತಮ್ಮ ಬೈಕ್ ತಮಗೆ ಸಿಗುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಬೆಂಗಳೂರಲ್ಲಿ ಕಂಪ್ಲೇಂಟ್ ಕೊಟ್ರೂ ಪೊಲೀಸರು ಬೈಕ್ ಕಳ್ಳರನ್ನ ಹಿಡಿಯಲಿಲ್ಲ. ನಮ್ಮ ಅಪ್ಪ ನನಗೆ ಕೊಡಿಸಿದ್ದ ಬೈಕ್ ಕಳೆದು ಹೋಗಿ ಬೇಜಾರಾಗಿತ್ತು ಈಗ ಸಿಕ್ಕಿರೋದು ಖುಷಿ ಆಗ್ತಿದೆ. ಬಾಗೇಪಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ನಮ್ಮ ಬೈಕ್ ನಮಗೆ ಮರಳಿ ಸಿಗುವಂತೆ ಮಾಡಿದ್ದು ಸಂತಸ ತರಿಸಿದೆ ಎಂದು ಬೈಕ್ ಮಾಲೀಕರಾದ ಸಾಯಿಕುಮಾರ್ ಹಾಗೂ ಶಿವಕುಮಾರ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ರಾಯಲ್ ಎನ್‍ಫೀಲ್ಡ್ ಬೈಕ್ ಬಹುತೇಕರ ಪಾಲಿಗೆ ಡ್ರೀಮ್ ಬೈಕ್. ಇಂತಹ ಕನಸಿನ ಬೈಕ್ ಕಳ್ಳರ ಪಾಲಾಗಿ ಇನ್ನೂ ನಮಗೂ ಬುಲೆಟ್ ಬೈಕ್ ಕನಸೇ ಅಂದುಕೊಂಡವರ ಪಾಲಿಗೆ ಬಾಗೇಪಲ್ಲಿ ಪೊಲೀಸರು ಕಳುವಾಗಿದ್ದ ಬೈಕ್‍ಗಳನ್ನು ಮರಳಿ ಕೊಡುವ ಮೂಲಕ ಕನಸು ಮರಳಿ ನನಸಾಗುವಂತೆ ಮಾಡಿರುವುದು ಬಹುತೇಕರಿಗೆ ಸಂತಸ ತರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    – ಮೂರೇ ದಿನ ಬಾಕಿ ಇದ್ದ ಮದ್ವೆ, ಕೈಕಾಲು ಛಿಧ್ರ ಛಿಧ್ರ

    ಚಿಕ್ಕಬಳ್ಳಾಪುರ: ಸಂಬಂಧಿಕರು ಮತ್ತು ಸ್ನೇಹಿತರಿಗೆ ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಮದುಮಗನೊರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಡರಾತ್ರಿ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ, ರಾಷ್ಟ್ರೀಯ ಹೆದ್ದಾರಿ ನಾಗಾರ್ಜುನ ಕಾಲೇಜು ಬಳಿಯ ಸೇತುವೆ ಬಳಿ ಅಪಘಾತ ನಡೆದಿದೆ. ಟಿಪ್ಪರ್ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದೇವನಹಳ್ಳಿ ತಾಲೂಕು ಸೋಮತನಹಳ್ಳಿ ಗ್ರಾಮದ ಹನುಮಂತೇಗೌಡ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಮದುವೆಗೆ ಮೂರೇ ದಿನ ಬಾಕಿ ಇತ್ತು.

    ಹಿಂಬದಿ ಕಿಶೋರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ನಂತರ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ನಂದಿಗಿರಿಧಾಮ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಈಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

  • ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬುಲೆಟ್ ಮೇಲಿತ್ತು 103 ಪ್ರಕರಣಗಳು – ಫೈನ್ ಕಂಡು ಬೆಚ್ಚಿಬಿದ್ದ ಮಾಲೀಕ

    ಬೆಂಗಳೂರು: ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಆಡುಗೊಡಿಯಲ್ಲಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರೋ ರಾಜೇಶ್ ಎಂಬುವವರಿಗೆ ಸೇರಿರುವ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ ಸಂಚಾರಿ ಪೊಲೀಸರು 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದಾರೆ.

    ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಸಂಚಾರ, ಒನ್ ವೇ ಹೀಗೆ ಸುಮಾರು 103 ಬಾರಿ ಬೈಕ್ ಸವಾರ ರಾಜೇಶ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಈ ಕಾರಣದಿಂದ ಸಂಚಾರಿ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು. ಪರಿಣಾಮ ಇಂದು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಗೆ ಬಂದ ರಾಜೇಶ್ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡ ಕಟ್ಟಿದ್ದಾರೆ.

  • ಬುಲೆಟ್ ಕರ್ಕಶ ಶಬ್ದ ಕೇಳಲಾರದೆ ಬೈಕ್ ಸವಾರನಿಗೆ ಗುಂಡು ಹಾರಿಸಿದ ಭೂಪ

    ಬುಲೆಟ್ ಕರ್ಕಶ ಶಬ್ದ ಕೇಳಲಾರದೆ ಬೈಕ್ ಸವಾರನಿಗೆ ಗುಂಡು ಹಾರಿಸಿದ ಭೂಪ

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಸಮೀಪದ ಶಿರನಲ್ಲಿ ಗ್ರಾಮದ ಬಳಿ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದಿದೆ.

    ಇದೇ ಗ್ರಾಮದ ರಾಮಚಂದ್ರ ರಾತ್ರಿ ಬುಲೆಟ್ ಬೈಕಿನಲ್ಲಿ ಸ್ನೇಹಿತನ ಜೊತೆ ಹೋಗುವ ವೇಳೆ ಕನ್ನಡ ಸಂಘಟನೆ ಮುಖಂಡ ಮಂಜುನಾಥ್ ಗೌಡ ನಾಡ ಬಂದೂಕಿನಿಂದ ದಾಳಿ ಮಾಡಿದ್ದಾನೆ. ಕಾಲಿಗೆ ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಗಾಯಗೊಂಡ ರಾಮಚಂದ್ರನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗುಂಡು ಹಾರಿಸಿದ ಮಂಜುನಾಥ್ ಗೌಡ ಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ನಿನ್ನೆ ರಾತ್ರಿ ರಾಮಚಂದ್ರ ಅವರ ಮೇಲೆ ಮಂಜುನಾಥ್ ಗುಂಡಿನ ದಾಳಿ ನಡೆಸಿದ್ದಾನೆ. ಕೇವಲ ಆತನ ಬುಲೆಟ್ ಬೈಕಿನ ಶಬ್ದ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಚಂದ್ರನ ಮೇಲೆ ದಾಳಿ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಸಂಬಂಧ ಮಾಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

  • ಐಷಾರಾಮಿ ಜೀವನಕ್ಕಾಗಿ 7 ಬುಲೆಟ್ ಬೈಕ್, ಕಾರು ಕದ್ದು ಪೊಲೀಸರ ಬಲೆಗೆ ಬಿದ್ದರು

    ಐಷಾರಾಮಿ ಜೀವನಕ್ಕಾಗಿ 7 ಬುಲೆಟ್ ಬೈಕ್, ಕಾರು ಕದ್ದು ಪೊಲೀಸರ ಬಲೆಗೆ ಬಿದ್ದರು

    ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಬುಲೆಟ್ ಬೈಕ್ ಹಾಗೂ ಕಾರುಗಳನ್ನು ಕದಿಯುತ್ತಿದ್ದ 5 ಜನ ಕಳ್ಳರನ್ನು ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

    ನಂದನ್ ಕುಮಾರ್, ಸತೀಶ್ ಕುಮಾರ್, ಅಭಿಷೇಕ್, ಅನಿಲ್ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಇವರ ವಿರುದ್ಧ ಚಿಕ್ಕಮಗಳೂರಿನ ಆಲ್ದೂರು, ಬೆಂಗಳೂರಿನ ರಾಜರಾಜೇಶ್ವರಿ ನಗರ, ಕಾಡುಗೋಡಿ, ಅವಲಹಳ್ಳಿ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

    ಬಂಧಿತರಿಂದ 7 ದುಬಾರಿ ಬೆಲೆಯ ಬುಲೆಟ್ ಬೈಕ್‍ಗಳು, ಒಂದು ಕಾರು ಸೇರಿದಂತೆ 60 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ. ಶಶಿಕುಮಾರ್ ಬಂಧಿತರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಿದರು. ಚಿನ್ನಾಭರಣ ಕಳೆದುಕೊಂಡಿದ್ದ ಲಲಿತಾ ಎಂಬವರು, ಕಳುವಾಗಿದ್ದ ಆಭರಣಗಳು ಸಿಗುತ್ತವೆ ಎನ್ನುವ ನಂಬಿಕೆ ನನಗೆ ಇರಲಿಲ್ಲ. ಕಳ್ಳರನ್ನು ಹಿಡಿದು ಆಭರಣವನ್ನು ಮತ್ತೆ ದೊರಕಿಸಿಕೊಟ್ಟ ಪೊಲೀಸರಿಗೆ ಧನ್ಯವಾದ ಎಂದರು.

  • ಲಾಕ್ ಮುರಿದು ಹತ್ತಿಕೊಳ್ಳುವಾಗ ಬುಲೆಟ್ ಪಲ್ಟಿ- ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು!

    ಲಾಕ್ ಮುರಿದು ಹತ್ತಿಕೊಳ್ಳುವಾಗ ಬುಲೆಟ್ ಪಲ್ಟಿ- ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು!

    ಬೆಂಗಳೂರು: ಕಳ್ಳರಿಬ್ಬರು ಕುಡಿದ ಮತ್ತಿನಲ್ಲಿ ಬುಲೆಟ್ ಬೈಕ್ ಕದಿಯಲು ಹೋಗಿ ತಾವಾಗಿಯೇ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.

    ಕುಡುಕರ ಕಷ್ಟಗಳು ಒಂದಲ್ಲ ಎರಡಲ್ಲ, ಕುಡಿದ ಮತ್ತಿನಲ್ಲಿ ಏನೇನೂ ಮಾಡುತ್ತಾರೆ ಎಂಬುದು ಸ್ವತಃ ಅವರಿಗೆ ತಿಳಿದಿರುವುದಿಲ್ಲ. ಅಂತೆಯೇ ಇಲ್ಲಿ ಇಬ್ಬರು ಕುಡುಕ ಮಹಾಶಯರು ಕೈಯಲ್ಲಿ ಕಾಸಿಲ್ಲ ಅಂತ ಕಳ್ಳತನಕ್ಕೆ ಹೋಗಿ ರೆಡ್ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ.

    ಮಂಗಳವಾರ ರಾತ್ರಿ ಚಾಮರಾಜಪೇಟೆಯ ರಾಕೇಶ್ ಎಂಬವರ ಮನೆ ಮುಂದೆ ನಿಂತಿದ್ದ ಬುಲೆಟ್ ಕದಿಯಲು ಕುಡುಕ ಕಳ್ಳರಿಬ್ಬರು ಯತ್ನಿಸಿ, ಬೈಕಿನ ಲಾಕ್ ಕೂಡ ಮುರಿದು ಹತ್ತಿಕೊಳ್ಳುವ ಭರದಲ್ಲಿ ಬೈಕನ್ನು ಬೀಳಿಸಿಕೊಂಡಿದ್ದಾರೆ. ಬೈಕನ್ನು ಎತ್ತಲು ಹರಸಾಹಸ ಪಡುತ್ತಿರುವಾಗ ಗಸ್ತಿನಲ್ಲಿದ್ದ ಪೊಲೀಸರಿಗೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

    ಮೊದಲೇ ಕುಡಿದ ಮತ್ತಿನಲ್ಲಿದ್ದ ಕಳ್ಳರಿಗೆ ಪೊಲೀಸರು ಬಂದ ಅರಿವಿಲ್ಲದೆ ಬೈಕ್ ಎತ್ತಿಕೊಳ್ಳುವ ಭರದಲ್ಲೇ ನಿರತರಾಗಿದ್ದರು. ಈ ವೇಳೆ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರ ಇಡೀ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.