Tag: Bullet

  • ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

    ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

    – ನಮ್ಮ ರಕ್ತ ಚೆಲ್ಲಲು ಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧ
    – ಭಯೋತ್ಪಾದನೆ ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ; ಪಾಕ್‌ಗೆ ಎಚ್ಚರಿಕೆ

    ಗಾಂಧಿನಗರ (ಭುಜ್‌): ನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿನ್ನಿ ಇಲ್ಲದಿದ್ದರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ. ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ ಅಂತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಾಕಿಸ್ತಾನ ಸರ್ಕಾರ , ಪಾಕ್‌ ಸೇನೆಗೆ (Pakistan’s Govt, Army) ದೊಡ್ಡ ಎಚ್ಚರಿಕೆ ನೀಡಿದರು.

    ರೋಡ್‌ ಶೋ ಬಳಿಕ ಗುಜರಾತ್‌ನ ಭುಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಬ್ಬರದ ಭಾಷಣ ಮಾಡಿದರು. ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ತೀಕ್ಷ್ಣ ಎಚ್ಚರಿಕೆ ನೀಡಿದರು. ʻನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿಂದು ಸುಮ್ಮನಿರಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು (Bullet) ಯಾವಾಗಲೂ ಸಿದ್ಧವಾಗಿರುತ್ತೆ. ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಅಂತ ಪಾಕ್‌ಗೆ ವಾರ್ನಿಂಗ್‌ ಕೊಟ್ಟರು.

    ಭಾಷಣದ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನೀತಿ ಉಲ್ಲೇಖಿಸಿದ ಪ್ರಧಾನಿ, ʻನಮ್ಮ ರಕ್ತ ಚೆಲ್ಲಲು ಪ್ರಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧವಿದೆ. ಭಾರತದ ಮೇಲೆ ಕಣ್ಣುಹಾಕುವವರು ಬೆಲೆ ತೆರಲೇಬೇಕಾಗುತ್ತದೆ ಎಂದರಲ್ಲದೇ, ಭಯೋತ್ಪಾದನೆಯನ್ನ ಬುಡಸಮೇತ ನಿರ್ಮೂಲನೆ ಮಾಡುವುದು ಮತ್ತು ಮಾನವೀಯತೆಯನ್ನ ರಕ್ಷಿಸುವುದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.

    ಮುಂದುವರಿದು.. ಭಯೋತ್ಪಾದನೆಯನ್ನ (Terrorism ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಪಾಕ್‌ ಜನತೆಗೆ ಮೋದಿ ಮನವಿ ಮಾಡಿದರಲ್ಲದೇ ಭಯೋತ್ಪಾದನೆ ಪಾಕಿಸ್ತಾನಕ್ಕೆ ವಿನಾಶಕಾರಿ ಎಂಬುದನ್ನ ಪಾಕ್‌ ನಾಗರಿಕರಿಗೆ ಮತ್ತೊಮ್ಮೆ ಮನವರಿಗೆ ಮಾಡಿಕೊಟ್ಟರು.

    ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ, ಬಹುರಾಷ್ಟ್ರೀಯ ಸ್ನೇಹವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಭಾರಯ ಪ್ರವಾಸೋದ್ಯಮದಲ್ಲಿ ನಂಬಿಕೆಯಿಡುತ್ತದೆ. ಆದ್ರೆ ಪಾಕಿಸ್ತಾನವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮವೆಂದು ಪರಿಗಣಿಸಿದೆ. ಇದು ಇಡೀ ವಿಶ್ವಕ್ಕೆ ಮಾರಕ ಹಾಗೂ ದೊಡ್ಡ ಬೆದರಿಕೆಯಾಗಿದೆ. ಆದ್ರೆ ಆಪರೇಷನ್‌ ಸಿಂಧೂರ ಭಯೋತ್ಪಾದನೆಯನ್ನು ಬುಡಸಮೇತ ಕೊನೆಗೊಳಿಸುವ ಧ್ಯೇಯ ಹೊಂದಿದೆ ಎಂದು ಅಬ್ಬರಿಸಿದರು.

    ಇದೇ ವೇಳೆ ಕಚ್ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಮೋದಿ, ಈ ಹಿಂದೆ ಯಾವುದೇ ಮುಖ್ಯಮಂತ್ರಿ ಅಥವಾ ಕಚ್ ಸಚಿವರ ಭಾಷಣ ಪಾಕಿಸ್ತಾನದಿಂದಲೇ ಆರಂಭವಾಗುತ್ತಿತ್ತು ಮತ್ತು ಕೊನೆಗೊಳ್ಳುತ್ತಿತ್ತು. ಆದರೆ 2001 ರಲ್ಲಿ ಈ ವಿಷಯದ ಬಗ್ಗೆ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ನಿರ್ಧರಿಸಿದೆವು. ಪಾಕಿಸ್ತಾನ ಅಸೂಯೆ ಪಡುವಂತೆ ಕಚ್‌ನ ಸಾಮರ್ಥ್ಯ ಎತ್ತಿ ತೋರಿಸುವುದಾಗಿ ಹೇಳಿದ್ದೆವು. ಅದರಂತೆ ನಾವಿಂದು ಕಚ್‌ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಅಭಿವೃದ್ಧಿ ನೋಡಿ ಶತ್ರುಗಳೂ ಅಸೂಯೆಪಡುತ್ತಿದ್ದಾರೆಂದು ತಿಳಿಸಿದರು.

  • ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಇದೀಗ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ಹಣಾಹಣಿ ನಡೆದಿದೆ. ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ಮನೆಯ ಕ್ಯಾಪ್ಟನ್ (Captain) ಆಗಿ ರಕ್ಷಕ್ ಬುಲೆಟ್ (Bullet Rakshak)  ಆಯ್ಕೆಯಾಗಿದ್ದಾರೆ. ನಡೆದ ಟಾಸ್ಕ್ ನಲ್ಲಿ ಗಟ್ಟಿ ಪೈಪೋಟಿ ನೀಡಿದ್ದಾರೆ.

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಮೊದಲನೇ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿ ಮನೆಯ ಸ್ಪರ್ಧಿಗಳ ಮನಗೆದ್ದರು. ಅದರಂತೆ 2ನೇ ವಾರದ ಕ್ಯಾಪ್ಟನ್ ಆಗಲು ಕೂಡ ರಕ್ಷಕ್ ಬುಲೆಟ್ ಜೊತೆ ಮತ್ತೆ ಸ್ನೇಹಿತ್ ಪೈಪೋಟಿ ನೀಡಿದರು. ಚೆಂಡನ್ನು ಪಿರಾಮಿಡ್ ಆಕಾರದಲ್ಲಿ ಜೋಡಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ರಕ್ಷಕ್ ಗೆದ್ದು ಬೀಗಿದ್ದಾರೆ.

    ರಕ್ಷಕ್ ಗೆಲುವಿಗೆ ಬಿಗ್ ಬಾಸ್ ಅಭಿನಂದನೆ ತಿಳಿಸಿ ಸ್ಪೆಷಲ್ ಉಡುಗೊರೆಯೊಂದನ್ನ ಕಳುಹಿಸಿದ್ದಾರೆ. ರಕ್ಷಕ್ ಅವರು ಮನೆಯವರ ಫೋಟೋ ಕಳುಹಿಸಲು ಕೇಳಿಕೊಂಡಿದ್ದರು. ಅದರಂತೆ ಕ್ಯಾಪ್ಟನ್ ಆದ ಬಳಿಕ ಕುಟುಂಬದ ಫೋಟೋವನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಕ್ ಕೂಡ ನೋಡಿ ಖುಷಿಪಟ್ಟಿದ್ದಾರೆ.

    `ಗುರುಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರಕ್ಷಕ್ ಬುಲೆಟ್ ಎಂಟ್ರಿ ಕೊಟ್ಟರು. ಡಿ ಬಾಸ್ ಅಭಿಮಾನಿ ಆಗಿರುವ ರಕ್ಷಕ್ ಈಗ ದೊಡ್ಮನೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ಸದಾ ಟ್ರೋಲ್ ಮೂಲಕ ಸದ್ದು ಮಾಡಿರುವ ರಕ್ಷಕ್, ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು

    ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು

    ವಾಷಿಂಗ್ಟನ್: ಅಮೆರಿಕದ (America)  35 ವರ್ಷದ ವ್ಯಕ್ತಿಯೊಬ್ಬನಿಗೆ ನೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಅಲ್ಲಿನ ಕೋರ್ಟ್ ತೀರ್ಪು ನೀಡಿದೆ.

    2021ರಲ್ಲಿ ಲುಸಿಯಾನದಲ್ಲಿ (Louisiana) ಭಾರತ ಮೂಲದ 5 ವರ್ಷದ ಬಾಲಕಿಯ ಸಾವಿಗೆ ಕಾರಣನಾಗಿದ್ದ ಜೋಸೆಫ್ ಲೀ ಸ್ಮಿತ್ ಶಿಕ್ಷೆಗೆ ಗುರಿಯಾದ ಅಪರಾಧಿ.

    ಈತ ಮಾಂಕ್‍ಹೌಸ್ ಡ್ರೈವ್‍ನ (Monkhouse Drive) ಹೋಟೆಲ್ (Hotel) ಒಂದರ ಹೊರಗೆ ವ್ಯಕ್ತಿಯೊಂದಿಗೆ ಗಲಾಟೆ ಮಾಡಿಕೊಂಡು ಗುಂಡು (Bullet) ಹಾರಿಸಿದ್ದ. ಈ ವೇಳೆ ಗುರಿ ತಪ್ಪಿ ಹೋಟೆಲ್‍ನ ಕೊಠಡಿಯಲ್ಲಿ ಆಟವಾಡುತ್ತಿದ್ದ ಮಾಯಾ ಪಟೇಲ್ (5) ತಲೆಯನ್ನು ಸೀಳಿತ್ತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು. ಇದನ್ನೂ ಓದಿ: ಬಿಜೆಪಿ ಮುಖಂಡನ ಮಳಿಗೆ ಮೇಲೆ ದಾಳಿ – 3 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

  • ಧರ್ಮ ಕೀರ್ತಿರಾಜ್ ನಟನೆಯ ಹೊಸ ಸಿನಿಮಾ ‘ಬುಲೆಟ್’ ಗೆ ಚಾಲನೆ

    ಧರ್ಮ ಕೀರ್ತಿರಾಜ್ ನಟನೆಯ ಹೊಸ ಸಿನಿಮಾ ‘ಬುಲೆಟ್’ ಗೆ ಚಾಲನೆ

    ರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಬುಲೆಟ್” ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್, ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.

    ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ‌ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.‌ ಈ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿದ್ದಾರೆ. ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಾಯಕಿಯರು. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ.   ಅಜಿತಾ ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಮಾಹಿತಿ ನೀಡಿದರು. ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗಶೌರ್ಯ ಮದುವೆ

    ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವರೆ ಅಭಿನಯಿಸುತ್ತಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ.‌ ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ ಕೀರ್ತಿರಾಜ್.

    ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ನಿರ್ದೇಶಕ , ನಟ ಇಶ್ಯಾಕ್ ಬಾಜಿ, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • ಕ್ಷುಲ್ಲಕ ಕಾರಣಕ್ಕೆ ನಾಯಿಗೆ ಗುಂಡಿಕ್ಕಿ ಕೊಂದ – ಆರೋಪಿ ಅರೆಸ್ಟ್‌

    ಕ್ಷುಲ್ಲಕ ಕಾರಣಕ್ಕೆ ನಾಯಿಗೆ ಗುಂಡಿಕ್ಕಿ ಕೊಂದ – ಆರೋಪಿ ಅರೆಸ್ಟ್‌

    ಬೆಂಗಳೂರು/ಆನೇಕಲ್: ಸಾಮಾನ್ಯವಾಗಿ ಎಷ್ಟೋ ಮಂದಿಗೆ ನಾಯಿ ಎಂದರೆ ಬಹಳ ಇಷ್ಟ. ನಾಯಿಗಿರುವ ನಿಯತ್ತು ಮನುಷ್ಯನಿಗಿಲ್ಲ ಎಂಬ ಮಾತಿದೆ. ಎಷ್ಟೋ ಮಂದಿ ಈ ಮುಗ್ಧ ಪ್ರಾಣಿಗೆ ಮನಸೋತು, ಮನೆಯಲ್ಲಿ ಮಕ್ಕಳಂತೆ ನಾಯಿಯನ್ನು ಬೆಳೆಸಿರುತ್ತಾರೆ. ಆದರೆ  ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವ ಸಾಕಿದ್ದ ನಾಯಿಯನ್ನೇ (Dog) ಗುಂಡಿಕ್ಕಿ ಕೊಲ್ಲುವ ಮೂಲಕ ವಿಕೃತ ಮೆರೆದಿದ್ದಾನೆ.

    ಹೌದು, ತಮಿಳುನಾಡಿನ (Tamilnadu) ಡೆಂಕಣಿಕೋಟೆ ಸಮೀಪದ ಕುತೈಲ್ ಪೈಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಅನಧಿಕೃತವಾಗಿ ಕಂಟ್ರಿ ಬಂದೂಕು ಇಟ್ಟುಕೊಂಡಿದ್ದ 50 ವರ್ಷದ ವೆಂಕಟೇಶ್, ಬಂದೂಕಿನಿಂದ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದನು. ಆದರೆ ಕ್ಷುಲ್ಲಕ ಕಾರಣಕ್ಕೆ ಶಿವಪ್ಪ ಎಂಬುವವರು ಸಾಕಿದ್ದ ನಾಯಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಇದನ್ನೂ ಓದಿ: ಬೆಳಗಾವಿಯ ಬಹುತೇಕ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ, ಎಂದಿನಂತೆ ಪೂಜೆ

    ಈ ಸಂಬಂಧ ಶಿವಪ್ಪ ಅವರು ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ನಾಯಿಯನ್ನು ಕೊಂದಿದ್ದ ಆರೋಪಿ ವೆಂಕಟೇಶ್ ಅನ್ನು ಪೊಲೀಸರು ಬಂಧಿಸಿ, ಆತನ ಬಳಿ ಇದ್ದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಯಗೊಂಡ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಫೋನ್‍ನಲ್ಲಿ ಚಿತ್ರೀಕರಿಸುತ್ತಿದ್ದ ಜನ

    Live Tv
    [brid partner=56869869 player=32851 video=960834 autoplay=true]

  • ತಲೆಗೆ ಗುಂಡು ಹಾರಿಸಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

    ತಲೆಗೆ ಗುಂಡು ಹಾರಿಸಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

    ಮುಂಬೈ: ತಲೆಗೆ ಗುಂಡು ಹಾರಿಸಿಕೊಂಡು ಮಹಾರಾಷ್ಟ್ರದ (Maharashtra) ಬಿಜೆಪಿ ಮುಖಂಡ ಭಗೀರಥ ಬಿಯಾನಿ(50) (Bhagirath Biyani) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಭಗೀರಥ ಬಿಯಾನಿ ಅವರು ಬಿಜೆಪಿಯ ಬೀಡ್ ಜಿಲ್ಲಾ ಘಟಕದ (BJP’s Beed district unit) ಮುಖ್ಯಸ್ಥರಾಗಿದ್ದರು. ಆದರೆ ಇಂದು ಮಧ್ಯಾಹ್ನ ಮೀರಾ ನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಪರವಾನಗಿ ಪಡೆದ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗುಂಡಿನ ಶಬ್ಧ ಕೇಳಿಸಿಕೊಂಡ ಕುಟುಂಬಸ್ಥರು ಭಗೀರಥ ಬಿಯಾನಿ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟೋತ್ತಿಗಾಗಲೇ ಬಿಜೆಪಿ ಮುಖಂಡ ಮೃತಪಟ್ಟಿದ್ದರು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸುತ್ತೇವೆ- ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ

    ಭಗೀರಥ ಬಿಯಾನಿ ಅವರು ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗುತ್ತಿದ್ದು, ಇದೀಗ ಈ ಸಂಬಂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್ – ಸ್ಟಾಲಿನ್ ಉದ್ಘಾಟಿಸಿದ ಕಟ್ಟಡ ಟ್ರೋಲ್

    Live Tv
    [brid partner=56869869 player=32851 video=960834 autoplay=true]

  • ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

    ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

    ಬಾಲಿವುಡ್ ನಟ ಸಲ್ಮಾನ್ ಖಾನ್ ನಿತ್ಯವೂ ಭಯದಿಂದಲೇ ಬದುಕುತ್ತಿದ್ದಾರಂತೆ. ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಟೀಮ್ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಅವರಿಗೆ ಸ್ವತಂತ್ರವಾಗಿ ಓಡಾಡಲು ಕಷ್ಟವಾಗುತ್ತಿದೆಯಂತೆ. ಜೀವ ಬೆದರಿಕೆ ಪತ್ರಗಳು, ಮಸೇಜ್ ಗಳಿಂದ ಕಿರಿಕಿರಿ ಅನುಭವಿಸುತ್ತಿರುವ ಸಲ್ಮಾನ್ ಖಾನ್ ಮೊನ್ನೆಯಷ್ಟೇ ಮುಂಬೈ ಪೊಲೀಸ್ ಕಮಿಷ್ನರ್ ಭೇಟಿ ಮಾಡಿ, ಗನ್ ಇಟ್ಟುಕೊಳ್ಳಲು ಅನುಮತಿ ಕೊಡಿ ಎಂದು ಮನವಿ ಮಾಡಿದ್ದರು.

    ಅಲ್ಲದೇ, ಸಲ್ಮಾನ್ ಖಾನ್ ಮನೆಗೆ ಬಿಗಿಭದ್ರತೆಯನ್ನು ಗೃಹ ಇಲಾಖೆ ಆಯೋಜನೆ ಮಾಡಿದೆ, ಅಲ್ಲದೇ, ಸಲ್ಮಾನ್ ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದಂತೆ ಮತ್ತು ಅತೀ ಹೆಚ್ಚು ಜನಸಂದಣಿ ಇರುವ ಕಡೆ ಓಡಾಡದಿರಲು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಶೂಟಿಂಗ್ ಗೆ ಹೋಗುವುದು ಅನಿವಾರ್ಯ ಆಗಿರುವುದರಿಂದ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರಂತೆ ಸಲ್ಮಾನ್ ಖಾನ್.  ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

    ಪೊಲೀಸರ ಸಲಹೆ ಮೇರೆಗೆ ಮತ್ತು ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತದೆ. ಮನೆಯಿಂದ ಆಚೆ ಬಂದರೆ, ಅದೇ ಕಾರಿನಲ್ಲೇ ಇನ್ಮುಂದೆ ಅವರು ಓಡಾಡಲಿದ್ದಾರೆ. ಸಲ್ಮಾನ್ ಖಾನ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಂಚಾರ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಇಂಥದ್ದೊಂದು ಕಾರು ಖರೀದಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ

    ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ

    ಲಕ್ನೋ: ಬಿಜೆಪಿ ಮುಖಂಡರೊಬ್ಬರ ಮಗ ತನ್ನ ನೆರೆ ಮನೆಯವರ ಜೊತೆ ತಮ್ಮ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಗುಂಡು ತಗುಲಿ 10 ವಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ ಕರಾರಿಯಲ್ಲಿ ನಡೆದಿದೆ.

    ಕಣ್ಣಾಮುಚ್ಚಾಲೆ ಆಟದಲ್ಲಿ ಲೋಡೆಡ್ ಗನ್ ಬಳಸಿದ 11 ವರ್ಷದ ಬಾಲಕ, ಹತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದಿದ್ದು, ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ ಎಂದು ಬಾಲಕನ ಕುಟುಂಬ ಹೇಳುತ್ತಿದೆ. ಶನಿವಾರ ಸಂಜೆ ಕರಾರಿ ಪೊಲೀಸ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಾಲಕ ಸ್ಥಳೀಯ ರಾಜಕಾರಣಿಯೊಬ್ಬರ ಮಗ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಮ್ಮ ಸರ್ಕಾರ ಸಮರ್ಥವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ: ಸಿ.ಪಿ.ಯೋಗೇಶ್ವರ್ 

    ಕೌಶಾಂಬಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಪಿ.ಹೇಮರಾಜ್ ಮೀನಾ ಈ ಕುರಿತು ಮಾಹಿತಿ ಕೊಟ್ಟಿದ್ದು, ಘಟನೆ ನಡೆದ ಮನೆ ರಾಜಕೀಯ ಪಕ್ಷದ ಪದಾಧಿಕಾರಿಗೆ ಸೇರಿದ್ದು, ಆತ ಆರೋಪಿ ಬಾಲಕನ ತಂದೆಯಾಗಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಪಿಸ್ತೂಲ್ ಹೊಂದಿದ್ದ ತಂದೆಯ ಮಗ, ನೆರೆಮನೆಯ 10 ವರ್ಷದ ಬಾಲಕ ಮತ್ತು ಒಂಬತ್ತು ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳು ಇದ್ದರು. ಮೂವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು ಎಂದು ವಿವರಿಸಿದರು.

    ಈ ನಡುವೆ ಗುಂಡಿನ ಸದ್ದು ಕೇಳಿ ಬಂದಿದೆ. ಅದಕ್ಕೆ ಅಕ್ಕಪಕ್ಕದವರು ಒಳಗೆ ಓಡಿ ಬಂದು ನೋಡಿದಾಗ 10 ವರ್ಷದ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಗುಂಡು ಹಾರಿಸಿದ ಬಾಲಕ ಜೋರಾಗಿ ಅಳುತ್ತಿರುವುದು ಕಂಡುಬಂದಿದೆ. ಮೂರನೇ ಮಗು ಹಾಸಿಗೆಯ ಕೆಳಗೆ ಅಡಗಿಕೊಂಡಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ

    ಬಾಲಕ ಕಬೋರ್ಡ್‍ನಿಂದ ಪಿಸ್ತೂಲ್ ತೆಗೆದು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಕೂಡ ಭೇಟಿ ನೀಡಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಘಟನೆ ನಡೆದಾಗ ಆರೋಪಿಗಳ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.

    ಮೂವರೂ ಹುಡುಗರು ಸ್ನೇಹಿತರಾಗಿದ್ದರು. ಯಾವಾಗಲೂ ಒಟ್ಟಿಗೆ ಆಟವಾಡುತ್ತಿದ್ದರು ಎಂದು ನೆರೆಮನೆಯವರು ನಮಗೆ ಮಾಹಿತಿ ಕೊಟ್ಟಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಪ್ರೇಯಸಿ ಮೇಲೆ ಗುಂಡು ಹಾರಿಸಿದ ಭಗ್ನ ಪ್ರೇಮಿ

    ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಪ್ರೇಯಸಿ ಮೇಲೆ ಗುಂಡು ಹಾರಿಸಿದ ಭಗ್ನ ಪ್ರೇಮಿ

    ನವದೆಹಲಿ: 24 ವರ್ಷದ ಯುವಕನೊಬ್ಬ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಪ್ರೇಯಸಿಯನ್ನೇ ಕೊಂದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಉಪ ಪೊಲೀಸ್ ಆಯುಕ್ತ(ವಾಯುವ್ಯ) ಉಷಾ ರಂಗನಾನಿ ಈ ಕುರಿತು ಮಾಹಿತಿ ನೀಡಿದ್ದು, ಶುಕ್ರವಾರ ಪೂರ್ವ ದೆಹಲಿಯ ವಿಶ್ವಾಸ್ ನಗರದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆತ ಯುಪಿಯ ಘಾಜಿಯಾಬಾದ್‍ನ ಲೋನಿಯ ನಿವಾಸಿಯಾಗಿದ್ದು, 21 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಅವಳು ಅವನನ್ನು ಪ್ರೀತಿಸುವುದಿಲ್ಲವೆಂದು ಹೇಳಿ, ಅಂತರವನ್ನು ಕಾaಯ್ದುಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ ಆಕೆ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ ಎಂದು ವಿವರಿಸಿದರು. ಇದನ್ನೂ ಓದಿ: ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ 


    ಸಂತ್ರಸ್ತೆಗೆ ಎರಡು ಗುಂಡು ಹಾರಿದ್ದು, ಹಿಂದೂ ರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಘಟನೆ ನಂತರ ಆಕೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರು ಲೋನಿಯ ರಾಜಪುರಿ ಕಾಲೋನಿ ಬಳಿ ಯುವಕ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಆತ ಬೈಕ್‍ನಲ್ಲಿ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹಿಂಬಾಲಿಸಲು ಆರಂಭಿಸಿದ್ದಾರೆ. ಶಹದ್ರಾ, ಕೃಷ್ಣ ನಗರ, ಭೋಲಾನಾಥ್ ನಗರ ಮತ್ತು ದಿಲ್ಶಾದ್ ಗಾರ್ಡನ್ ಸೇರಿ ಆಗಾಗ್ಗೆ ಹಲವು ಸ್ಥಳಗಳನ್ನು ಬದಲಾಯಿಸುತ್ತಿದ್ದ. ನಂತರ ದೆಹಲಿಯ ವಿಶ್ವಾಸ್ ನಗರದಲ್ಲಿ ಸಿಕ್ಕಿದ್ದಾನೆ ಎಂದು ತಿಳಿಸಿದರು.

    ವಿಚಾರಣೆ ವೇಳೆ, ಆರೋಪಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಈತ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಆಕೆ ಒಪ್ಪಿಕೊಂಡಿರಲಿಲ್ಲ. ಆತ ಕೋಪಗೊಂಡಿದ್ದು, ಆಕೆಯನ್ನು ಹೊಡೆದು ಗುಂಡು ಹಾರಿಸಿದ್ದಾನೆ. ಪ್ರಸ್ತುತ ಕೃತ್ಯಕ್ಕೆ ಬಳಸಿದ್ದ ಆಯುಧಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ಕೊಟ್ಟರು. ಇದನ್ನೂ ಓದಿ: ನಲಪಾಡ್ ಮಾಡಿರೋ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ಅಶೋಕ್ ಪಟ್ಟಣ

    Live Tv
    [brid partner=56869869 player=32851 video=960834 autoplay=true]

  • ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಚಂಡೀಗಢ: ಸಬ್‍ಇನ್ಸ್‌ಪೆಕ್ಟರ್ ಗಸ್ತು ತಿರುಗುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಹರಿಯಾಣದ ಯುಮುನಾನಗರದಲ್ಲಿ ನಡೆದಿದೆ.

    ಯಮುನಾನಗರದ ರಾಡೌರ್ ಪ್ರದೇಶದಲ್ಲಿ ಸಬ್‍ಇನ್ಸ್‌ಪೆಕ್ಟರ್ ಸತೀಶ್ ಕಾಂಬೋಜ್ ತಮ್ಮ ತಂಡದೊಂದಿಗೆ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿ ಸತೀಶ್ ಅವರು ಗಸ್ತು ತಿರುಗುತ್ತಿದ್ದರು. ಈ ವೇಳೆ ಬ್ಯಾಂಕ್‍ನ ಹೊರಗೆ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ನಿಂತಿರುವುದು ಅವರ ಗಮನಕ್ಕೆ ಬಂದಿದೆ. ಆದರೆ ಪೊಲೀಸರ ತಂಡವನ್ನು ಕಂಡ ಇಬ್ಬರು ಯುವಕರು ರದೌರಿ ರಸ್ತೆಯತ್ತ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    police (1)

    ಅನುಮಾನಗೊಂಡ ಪೊಲೀಸ್ ತಂಡವು ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದು, ರಾಡೌರಿ ರಸ್ತೆಯಲ್ಲಿರುವ ಎಫ್‍ಸಿಐ ಗೋಡೌನ್‍ಗಳ ಬಳಿ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಮುಸುಕುಧಾರಿ ಯುವಕರು ಬೈಕ್ ನಿಲ್ಲಿಸುವ ಬದಲು ಎಸ್‍ಐ ಸತೀಶ್ ಕಾಂಬೋಜ್ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

    ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದು, ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ

    ಮತ್ತೊಂದೆಡೆ ದಾಳಿಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದ ಸುರೀಂದರ್ ಪಾಲ್ ಸಿಂಗ್, ಎಸ್ಪಿ ಸ್ವತಃ ಘಟನಾ ಸ್ಥಳವನ್ನು ಪರಿಶೀಲಿಸಿ ಜಿಲ್ಲೆಯಾದ್ಯಂತ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.