Tag: Bulldozers

  • ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ನ್ಯೂಯಾರ್ಕ್‌: 2024ರ ಟಿ20 ವಿಶ್ವಕಪ್‌ಗಾಗಿ (T20 World Cup) ಕೇವಲ 5 ತಿಂಗಳಲ್ಲಿ ನಿರ್ಮಿಸಲಾಗಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣವನ್ನು (Nassau County Stadium) ಟೂರ್ನಿಯ ಬಳಿಕ ನೆಲಸಮಗೊಳಿಸಲು‌ ಆಯೋಜಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಈ ಕ್ರೀಡಾಂಗಣವನ್ನು 40 ಎಕರೆ ಭೂ ಪ್ರದೇಶದಲ್ಲಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.

    ಭಾರತ – ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ (Ind vs USA) ಪಂದ್ಯ ಇಲ್ಲಿ ನಡೆದ ಕೊನೆಯ ಲೀಗ್‌ ಸುತ್ತಿನ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

    ಶುಕ್ರವಾರ ನೆಲಸಮ?
    ಈಗಾಗಲೇ 8 ಲೀಗ್‌ ಪಂದ್ಯಗಳು ಕೌಂಟಿ ಸ್ಟೇಡಿಯಂನಲ್ಲಿ ನಡೆದಿದ್ದು, ಜೂನ್‌ 14ರಂದೇ ಕ್ರೀಡಾಂಗಣ ಧ್ವಂಸಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ‌ಹತ್ತಾರು‌ ಬುಲ್ಡೋಜರ್‌ಗಳನ್ನು ಕ್ರೀಡಾಂಗಣದ ಹೊರಗೆ ನಿಲ್ಲಿಸಲಾಗಿದೆ. ಈ ಕುರಿತ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕ್ರೀಡಾಂಗಣದ ಮಾಡ್ಯುಲರ್ ಘಟಕಗಳನ್ನು ಕಿತ್ತುಹಾಕಿ ಮರುಬಳಕೆ ಮಾಡಲಾಗುತ್ತದೆ, ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಅಭಿಮಾನಿಗಳು ಉನ್ನತ-ಶ್ರೇಣಿಯ ಟರ್ಫ್ ಮತ್ತು ಮೂಲಸೌಕರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

    ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ನಸ್ಸೌ ಕೌಂಟಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಕೇವಲ 119 ರನ್‌ಗಳಿಗೆ ಭಾರತ ಆಲೌಟ್‌ ಆಗಿತ್ತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಪಾಕ್‌ ಕೇವಲ 113 ರನ್‌ಗಳಿಸಿ ಸೋಲೊಪ್ಪಿಕೊಂಡಿತ್ತು. ಅಲ್ಲದೇ ಬುಧವಾರ ಯುಎಸ್‌ಎ ತಂಡ ನೀಡಿದ್ದ 111 ರನ್‌ಗಳ ತಲುಪುವುದಕ್ಕೂ ಭಾರತ ತಿಣುಕಾಡಿತ್ತು. ಇದನ್ನೂ ಓದಿ:  ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

  • ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ನವದೆಹಲಿ: ಶಿವ ಭಕ್ತರ (ಕನ್ವಾರಿಯಾಗಳಿಗೆ) ಮೇಲೆ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸುತ್ತೀರಿ. ಆದರೆ ಬುಲ್ಡೋಜರ್‌ಗಳ ಮೂಲಕ ಮುಸ್ಲಿಮರ ಮನೆ ಕೆಡವುತ್ತೀರಿ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

    ಸಂಸತ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದೀರಿ. ತುಂಬಾ ಒಳ್ಳೆಯದು. ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಕಾಣಿ ಎಂದು ಹೇಳುತ್ತಿದ್ದೇವೆ. ಅವರ ಮೇಲೆ ಪುಷ್ಪವೃಷ್ಟಿ ಮಾಡುತ್ತೀರಿ. ನಮ್ಮ ಮನೆಗಳನ್ನು ಧ್ವಂಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಿಎಂಎಲ್‌ಎ ಅಡಿ ಬಂಧನ ಮಾಡಬಹುದು – ಇಡಿಗೆ ಸುಪ್ರೀಂನಿಂದ ಸಿಕ್ತು ಪರಮಾಧಿಕಾರ

    ಮೀರತ್‌ನ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶಿವ ಭಕ್ತರ ಮೇಲೆ ಹೂವಿನ ದಳಗಳನ್ನು ಸುರಿಸುವ ದೃಶ್ಯ ಹಾಗೂ ಹಾಪುರ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕನ್ವಾರಿಯಾದ (ಶಿವ ಭಕ್ತರು) ಕಾಲುಗಳಿಗೆ ನೋವು ನಿವಾರಕ ತೈಲ ಹಚ್ಚುತ್ತಿರುವ ವೈರಲ್‌ ದೃಶ್ಯಗಳ ಬಗ್ಗೆ ಈ ವೇಳೆ ಓವೈಸಿ ಮಾತನಾಡಿದರು.

    ನೀವು ಅವರ ಪಾದಗಳಿಗೆ ಮಸಾಜ್ ಮಾಡುತ್ತಿರುವುದು ಒಳ್ಳೆಯದು. ಆದರೆ ನೀವು ಸಹರಾನ್‌ಪುರದಲ್ಲಿ ಮುಸ್ಲಿಂ ಯುವಕನನ್ನು ಕರೆದುಕೊಂಡು ಹೋಗಿ ಹೊಡೆಯುತ್ತೀರಿ. ತಾರತಮ್ಯ ಮಾಡಬೇಡಿ. ಸಂವಿಧಾನ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    Live Tv
    [brid partner=56869869 player=32851 video=960834 autoplay=true]

  • ಯುಪಿ, ಮಧ್ಯಪ್ರದೇಶ ಆಯ್ತು ಈಗ ಗುಜರಾತ್‌ನಲ್ಲೂ ಬುಲ್ಡೋಜರ್‌ ಸದ್ದು

    ಯುಪಿ, ಮಧ್ಯಪ್ರದೇಶ ಆಯ್ತು ಈಗ ಗುಜರಾತ್‌ನಲ್ಲೂ ಬುಲ್ಡೋಜರ್‌ ಸದ್ದು

    ಗಾಂಧಿನಗರ: ಉತ್ತರ ಪ್ರದೇಶ, ಮಧ್ಯಪ್ರದೇಶದ ಬಳಿಕ ಗುಜರಾತ್‍ನಲ್ಲಿಯೂ ಬುಲ್ಡೋಜರ್ ಈಗ ಘರ್ಜನೆ ಮಾಡುತ್ತಿದೆ.

    ರಾಮನವಮಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳ ಹಿಂದೆ ಮಧ್ಯಪ್ರದೇಶದ ಖಾರ್ಗೋನ್‍ನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಕೆಲ ಅಂಗಡಿಗಳು, ಮನೆಗಳನ್ನು ಬುಲ್ಡೋಜರ್ ಮೂಲಕ ಸರ್ಕಾರವೇ ನಾಶಪಡಿಸಿತ್ತು. ಇದೀಗ ಅಂಥಾದ್ದೇ ದೃಶ್ಯ ಗುಜರಾತ್‍ನ ಖಂಬತ್‍ನಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಅಕ್ರಮ ಪೆಟ್ರೋಲ್ ಬಂಕ್ ಧ್ವಂಸ

    ರಾಮನವಮಿ ಯಾತ್ರೆ ವೇಳೆ ಹಿಂಸಾಚಾರ ನಡೆದಿದ್ದ ಪ್ರದೇಶದಲ್ಲಿರುವ ಅಂಗಡಿಗಳನ್ನು ಗುಜರಾತ್ ಸರ್ಕಾರ ಬುಲ್ಡೋಜರ್ ಮೂಲಕ ಧ್ವಂಸ ಮಾಡಿದೆ.

    ದರ್ಗಾ ಮುಂದಿದ್ದ ಅಂಗಡಿಗಳನ್ನು ನಾಶ ಪಡಿಸಲಾಗಿದ್ದು ರಾಮನವಮಿ ಹಿಂಸಾಚಾರ ಸಂಪೂರ್ಣ ಪೂರ್ವನಿಯೋಜಿತ ಎಂದು ಹೇಳಿದೆ.

    ದರ್ಗಾದ ಮೌಲ್ವಿಯೇ ಹಿಂಸಾಚಾರದ ಪ್ರಮುಖ ಸೂತ್ರಧಾರ. ಅಕ್ರಮ ಮತ್ತು ಕ್ರಿಮಿನಲ್ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದವು. ಈಗಾಗಲೇ ಮೌಲ್ವಿ ಸೇರಿ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.