Tag: Bulldozer

  • ಉದಯಗಿರಿ ಗಲಭೆ ಕೇಸ್‌ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್‌ ಕ್ರಮ ಆಗುತ್ತಾ? – ಪರಮೇಶ್ವರ್‌ ಹೇಳಿದ್ದೇನು?

    ಉದಯಗಿರಿ ಗಲಭೆ ಕೇಸ್‌ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್‌ ಕ್ರಮ ಆಗುತ್ತಾ? – ಪರಮೇಶ್ವರ್‌ ಹೇಳಿದ್ದೇನು?

    ಮೈಸೂರು: ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ದಾಂಧಲೆಗೆ ಬುಲ್ಡೋಜರ್‌ ಕ್ರಮ ಈದೆ. ಕರ್ನಾಟಕದಲ್ಲೂ ಆ ಪರಿ ಸ್ಥಿತಿ ಬಂದರೆ ನೋಡೋಣ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ (G Parameshwar) ಎಚ್ಚರಿಕೆ ಕೊಟ್ಟಿದ್ದಾರೆ.

    ಮೈಸೂರಿನ‌ ಉದಯಗಿರಿ ಪೊಲೀಸ್ ಠಾಣಾ (Udayagiri Police Station) ವ್ಯಾಪ್ತಿಯಲ್ಲಿ ಗಲಭೆ ನಡೆದು 4 ದಿನಗಳ ಬಳಿಕ ಉದಯಗಿರಿ ಪೊಲೀಸ್ ಠಾಣೆಗೆ ಗೃಹ ಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿದ್ದಾರೆ. ಬಳಿಕ ಪೊಲೀಸರೊಂದಿಗೆ ಸಭೆ ನಡೆಸಿದ ಸಚಿವರು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ಸೇರಿದಂತೆ ಇನ್ಸ್‌ಪೆಕ್ಟರ್‌ಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಘಟನೆ ಯಾಕಾಯ್ತು? ಯಾರಿಂದ ಆಯ್ತು ಎಂಬ ಮಾಹಿತಿ ಪಡೆದಿದ್ದೇನೆ. ಘಟನೆ ಸಂಬಂಧ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇವೆ. ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳನ್ನ ಬಂಧನ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ. ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ವ್ಯಕ್ತಿ ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಇದ್ದಾರೆ. ಬೇರೆ ಯಾರಿಗೂ ಅದಕ್ಕೆ ಅವಕಾಶ ಕೊಡಲ್ಲ. ಪೊಲೀಸ್ ಇಲಾಖೆಗೆ ಪಕ್ಷ ಮುಖ್ಯ ಅಲ್ಲ. ಕಾನೂನು ಕಾಪಾಡುವುದು ಅಷ್ಟೆ ಮುಖ್ಯ. ಇಂತಹ ಘಟನೆ ವೇಳೆ ಕೇಳಿ ಬರುವ ಹೇಳಿಕೆ ನಿಲ್ಲಿಸಲು ಸಾಧ್ಯ ವಿಲ್ಲ. ಏಕೆಂದರೆ ಎಲ್ಲರಿಗೂ ವಾಕ್ ಸ್ವಾತಂತ್ರ‍್ಯವಿದೆ. ರಾಜಕೀಯ ಹೇಳಿಕೆಗಳಿಂದ ಪೊಲೀಸರ ನೈತಿಕತೆ ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯಾರ ಕೈಯಲ್ಲೂ ಆಗಲ್ಲ. ಇಂತಹ ದಾಂಧಲೆಗೆ ಯುಪಿ, ಮಧ್ಯ ಪ್ರದೇಶದಲ್ಲಿ ಬುಲ್ಡೋಜರ್ ಹತ್ತಿಸುವ ಕ್ರಮ ಇದೆ. ಕರ್ನಾಟಕದಲ್ಲೂ ಆ ಪರಿ ಸ್ಥಿತಿ ಬಂದರೆ ನೋಡೋಣ… ಈಗ ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.

    ಎನ್.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೊಂದು ಠಾಣೆಗೆ ಪ್ರಸ್ತಾವನೆ ಇದೆ, ಇದರ ಬಗ್ಗೆ ಕ್ರಮ ಕೈಗೊಳ್ತಿವಿ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಘಟನೆ ದಿನ ಪೊಲೀಸರು ಪರಿಸ್ಥಿತಿಯನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಪೊಲೀಸರ ಬಗ್ಗೆ ವಿವಿಧ ರೀತಿಯ ಹೇಳಿಕೆ ಕೊಡುವವರಿಗೆ ಸಮಯ ಬಂದಾಗ ತಿಳುವಳಿಕೆ ಹೇಳ್ತಿನಿ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

  • ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    ನವದೆಹಲಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆ ಸೇರಿದಂತೆ ಇತರೆ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗೆ ಬ್ರೇಕ್‌ ಬಿದ್ದಿದೆ. ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.

    ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಕೆಲವು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಕಟ್ಟಡಗಳ ತೆರವಿಗೆ ಮಾರ್ಗಸೂಚಿ ಪ್ರಕಟಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಬುಲ್ಡೋಜರ್ ಕಾರ್ಯಚರಣೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತು. ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ, ಆರೋಪಿಯನ್ನು ಅಪರಾಧಿಯನ್ನು ಎಂದು ನಿರ್ಧರಿಸಲು ಅಧಿಕಾರಿಗಳು ನ್ಯಾಯಾಧೀಶರಲ್ಲ. ಆರೋಪಿಯ ತಪ್ಪನ್ನು ಪೂರ್ವಾಗ್ರಹಕ್ಕೆ ಒಳಪಡಿಸಬಾರದು. ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಅಸಾಂವಿಧಾನಿಕ ಎಂದು ನ್ಯಾ. ಬಿ.ಆರ್ ಗವಾಯಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಹಲವು ಮಾರ್ಗಸೂಚಿ ಪ್ರಕಟಿಸಿದರು.  ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಮನೆ ಎನ್ನುವುದು ಅದೊಂದು ಕಟ್ಟಡವಲ್ಲ, ಅದೊಂದು ಸರಕ್ಷತೆ, ಭವಿಷ್ಯದ ನಿರೀಕ್ಷೆ. ಒಬ್ಬ ವ್ಯಕ್ತಿ ಮಾತ್ರ ಅಪರಾಧದ ಆರೋಪಿಯಾಗಿದ್ದರೆ ಇಡೀ ಕುಟುಂಬ ಸದಸ್ಯರ ಆಶ್ರಯವನ್ನು ಕಿತ್ತುಕೊಳ್ಳುವುದು ಅಸಾಂವಿಧಾನಿಕ. ಇಂತಹ ಅಧಿಕಾರವನ್ನು ಅಧಿಕಾರಿಗಳಿಗೆ ಹೇಗೆ ನೀಡಲು ಸಾಧ್ಯ. ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಧಿಕಾರಿಗಳನ್ನು ಉಳಿಸಲಾಗುವುದಿಲ್ಲ, ಅದರ ಹೊಣೆಗಾರಿಕೆ ಕ್ರಮಗಳನ್ನು ಎದರುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆಯನ್ನು ನೀಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    * ನ್ಯಾಯಯುತವಾದ ವಿಚಾರಣೆಯಿಲ್ಲದೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
    * ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅನಿಯಂತ್ರಿತ ರೀತಿಯಲ್ಲಿ ವರ್ತಿಸಬಾರದು.
    * ಕಟ್ಟಡ ತೆರವಿಗೆ ಮುನ್ನ ಅಂಚೆ ಮೂಲಕ ನೋಟಿಸ್ ನೀಡಬೇಕು. ನೋಟಿಸ್‌ನಲ್ಲಿ ಕಟ್ಟಡ ಹೇಗೆ ಅಕ್ರಮವಾಗಿದೆ? ಯಾವ ನಿಯಮಗಳ ಉಲ್ಲಂಘನೆಯಾಗಿದೆ ಸ್ಪಷ್ಟಪಡಿಸಬೇಕು.
    * ಮಾಲೀಕರ ಸ್ಪಷ್ಟನೆ ನೀಡಲು ಅವಕಾಶವನ್ನು ಕಲ್ಪಿಸಬೇಕು.
    * ನೋಟಿಸ್‌ಗಳನ್ನು ಟ್ರ್ಯಾಕ್ ಮಾಡಲು ಮೂರು ತಿಂಗಳೊಳಗೆ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು.
    * ನೋಟಿಸ್ ಬಳಿಕ ಕಟ್ಟಡವನ್ನು ಪೂರ್ಣ ಅಥವಾ ಭಾಗಶಃ ತೆರವು ಮಾಡಬೇಕಾದರೆ ಕಾರಣ ಏನು ಎನ್ನುವ ಬಗ್ಗೆ ಆದೇಶಿಸಬೇಕು.
    * ವಿವರವಾದ ಸ್ಪಾಟ್ ವರದಿಯನ್ನು ಸಿದ್ಧಪಡಿಸಬೇಕು, ಕಟ್ಟಡ ತೆರವು ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಹಾಜರಿದ್ದ ಅಧಿಕಾರಿಗಳ ಮತ್ತು ತೆರವಿನ ವಿವರವಾದ ವಿಡಿಯೋವನ್ನು ಚಿತ್ರೀಕರಿಸಬೇಕು. ಸ್ಪಾಟ್ ವರದಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರದರ್ಶಿಸಬೇಕು.
    * ಈ ನಿರ್ದೇಶನಗಳ ಉಲ್ಲಂಘನೆಯು ನ್ಯಾಯಾಂಗ ನಿಂದನೆ ಅಥವಾ ಇತರ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
    * ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ನಷ್ಟವಾದ ಆಸ್ತಿ ಮರುಪಾವತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ.
    * ಸರ್ಕಾರದ ಆಸ್ತಿ, ರಸ್ತೆ, ಕೆರೆ, ರೈಲು ಮಾರ್ಗಗಳ ಒತ್ತುವರಿಯಾಗಿದ್ದರೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ.

     

  • ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿತ – ಅಕ್ರಮವಾಗಿ ನಿರ್ಮಿಸಿದ್ದ ಆರೋಪಿ ಮನೆ ಧ್ವಂಸ

    ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿತ – ಅಕ್ರಮವಾಗಿ ನಿರ್ಮಿಸಿದ್ದ ಆರೋಪಿ ಮನೆ ಧ್ವಂಸ

    ಜೈಪುರ: ಉದಯ್‌ಪುರದಲ್ಲಿ (Udaipur) ಸಹಪಾಠಿಗೆ ಚಾಕು ಇರಿದ ಪ್ರಕರಣದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಆರೋಪಿಯ ಮನೆಯನ್ನು ಅಧಿಕಾರಿಗಳು ಶನಿವಾರ ಬುಲ್ಡೋಜರ್ ನಿಂದ ಧ್ವಂಸ ಮಾಡಿದ್ದಾರೆ.

    ಆರೋಪಿ ಹಾಗೂ ಆತನ ತಂದೆ ನೆಲೆಸಿದ್ದ ಮನೆ ಅಕ್ರಮವಾಗಿತ್ತು ಎಂದು ಉದಯ್‌ಪುರ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮನೆ ಕೆಡವುವ ಮೊದಲು ಆ ಮನೆಯಲ್ಲಿದ್ದ ಸರಕು ಸಾಮಾನುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಆರೋಪಿ ಹಾಗೂ ಕುಟುಂಬಸ್ಥರಿಗೆ ಅವಕಾಶ ನೀಡಿದ್ದರು. ಇದನ್ನೂ ಓದಿ: ನಾನು ಶುದ್ಧಹಸ್ತ ಎಂದು ಪದೇಪದೆ ಹೇಳುವ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ನಿಖಿಲ್ ಆಗ್ರಹ

    ಕಟ್ಟಡ ಧ್ವಂಸಗೊಳಿಸುವ ವೇಳೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಈ ನಡುವೆ ಸ್ಥಳೀಯರಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: TB Dam | ಮೂರನೇ ಸ್ಟಾಪ್‌ ಗೇಟ್‌ ಅಳವಡಿಕೆ ಯಶಸ್ವಿ – ಎಲ್ಲಾ ಗೇಟ್‌ ಬಂದ್‌

    ಘಟನೆ ಏನು?
    ಉದಯಪುರ ಜಿಲ್ಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿ ತನ್ನ ಸಹಪಾಠಿಗೆ ಚಾಕು ಇರಿದಿದ್ದು, ಮಧುಬನ್ ಪ್ರದೇಶದಲ್ಲಿ ಕೋಮುಗಲಭೆಗೆ ಕಾರಣವಾಯಿತು. ಸದ್ಯ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರಿಸುತ್ತಿದ್ದಾರೆ. ಇದನ್ನೂ ಓದಿ:  ಬೆಳಗ್ಗೆ ಎದ್ದರೆ ನೈತಿಕತೆ ಬಗ್ಗೆ ಮಾತನಾಡೋ ಸಿಎಂ ರಾಜೀನಾಮೆ ನೀಡಲಿ: ಜನಾರ್ದನ ರೆಡ್ಡಿ

    ಈ ಘಟನೆ ಸಂಭವಿಸಿದ ನಂತರ ಮಧುಬನ್ (Madhuban) ಪ್ರದೇಶದ ಹಲವಾರು ಹಿಂದೂ ಸಂಘಟನಾ ಸದಸ್ಯರು ಸೇರಿ ಪಕ್ಕದ ಗ್ಯಾರೇಜಿನಲ್ಲಿದ್ದ ಮೂರಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ್ದಾರೆ. ಇದನ್ನೂ ಓದಿ: ಸ್ವಲ್ಪವಾದರೂ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಿ: ಸಿಎಂಗೆ ಡಾ.ಅಶ್ವತ್ಥ್ ನಾರಾಯಣ್ ಸವಾಲ್

    ಕೋಮುಗಲಭೆ ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ನಗರದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆಸದಂತೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಚುನಾಯಿತ ಸರ್ಕಾರ ಉರುಳಿಸಲು ಯತ್ನ: ರಮೇಶ್ ಬಂಡಿಸಿದ್ದೇಗೌಡ

  • ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryan) ತತ್ತರಿಸಿದೆ. ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿದ್ದು, ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಶನಿವಾರವೂ ಅಲ್ಲಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಸತತ 3ನೇ ದಿನ ಹರಿಯಾಣದಲ್ಲಿ ಬುಲ್ಡೋಜರ್‌ (Bulldozer) ಕಾರ್ಯಾಚರಣೆ ನಡೆದಿದೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ ಶಾಕ್ ನೀಡಿದೆ. ಸತತ 3ನೇ ದಿನವೂ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ 24 ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ 50-60 ಮಳಿಗೆಗಳನ್ನ ಧ್ವಂಸಗೊಳಿಸಲಾಗಿದೆ. ಶುಕ್ರವಾರ ಸುಮಾರು ಒಂದು ಎಕರೆ ಜಮೀನಿನಲ್ಲಿ ಅಕ್ರಮ ವಲಸಿಗರು ನಿರ್ಮಿಸಿಕೊಂಡಿದ್ದ 250ಕ್ಕೂ ಅಧಿಕ ಗುಡಿಸಲುಗಳನ್ನ ಕೆಡವಲಾಗಿತ್ತು. ಇದನ್ನೂ ಓದಿ: ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 102 ಕೇಸ್‌ಗಳು ದಾಖಲಾಗಿದ್ದು, 202 ಮಂದಿಯನ್ನ ಬಂಧಿಸಲಾಗಿದೆ. 80 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಹಿಂದೆ ಯಾವುದೇ ಮಾಸ್ಟರ್ ಮೈಂಡಗ್ ಪತ್ತೆಯಾಗಿಲ್ಲ ಎಂದು ನುಹ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryana) ತತ್ತರಿಸಿದೆ. ನಿನ್ನೆಯಿಂದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳನ್ನೂ ಹಾನಿ ಮಾಡಿದ್ದಾರೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮುಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ (Bulldozer) ಶಾಕ್ ನೀಡಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ (Haryana Government) ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ – ಶನಿವಾರ `ಕೈ’ನಾಯಕರ ಹೈವೋಲ್ಟೇಜ್ ಮೀಟಿಂಗ್

    ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಆದೇಶದಂತೆ ಗಲಭೆಕೋರರು ವಾಸವಿರುವ ಮನೆಗಳನ್ನ ತೆರವುಗೊಳಿಸಲಾಗಿದೆ. ಬಾಂಗ್ಲಾದೇಶದಿಂದ ಬಂದ ಅಕ್ರಮವಾಗಿ ಮೊದಲು ಅಸ್ಸಾಂನಲ್ಲಿ ವಾಸವಿದ್ದರು. ಅವರೀಗ ನೂಹ್ ಜಿಲ್ಲೆಯ ತೌರು ಪಟ್ಟಣದ ಮಹಮ್ಮದಪುರ ರಸ್ತೆಯ ವಾರ್ಡ್ ನಂ.1 ಹರಿಯಾಣ ನಗರ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

    ಸುಮಾರು ಒಂದು ಎಕರೆ ಜಮೀನಿನಲ್ಲಿ 250ಕ್ಕೂ ಅಧಿಕ ಗುಡಿಸಲುಗಳನ್ನ ನಿರ್ಮಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರು ಇದೇ ಜಾಗದಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಗುಡಿಸಲುಗಳನ್ನ ನೆಲಸಮಗೊಳಿಸಲಾಗಿದೆ.

    ಇನ್ನೂ ಗುರುಗ್ರಾಮದಲ್ಲಿ ಇವತ್ತೂ ಕೂಡ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ರಾತ್ರಿ ನಡೆದ ಘರ್ಷಣೆಯಲ್ಲಿ ಐವರು ಬಲಿ ಆಗಿದ್ದಾರೆ. ನಿನ್ನೆ ಮೆವಾತ್‌ನಲ್ಲಿ ವಿಹೆಚ್‌ಪಿ- ಬಜರಂಗದಳದ ಶೋಭಾಯಾತ್ರೆ ವೇಳೆ ನಡೆದ ಮತ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್ಗಳು ಸಾವನ್ನಪ್ಪಿದ್ರು. ರಾತ್ರಿ ಮತ್ತೆ ನಡೆದ ಘರ್ಷಣೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ.

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 41 ಕೇಸ್‌ಗಳು ದಾಖಲಾಗಿದ್ದು, 176 ಮಂದಿಯನ್ನ ಬಂಧಿಸಲಾಗಿದೆ. 90 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್

    ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್

    ಲಕ್ನೋ: ಹಿಂದೂ ಎಂದು ಪರಿಚಯಿಸಿಕೊಂಡು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಮನೆಯ ಮೇಲೆ ಉತ್ತರ ಪ್ರದೇಶದ (Uttar Pradesh) ಅಧಿಕಾರಿಗಳು ಬುಲ್ಡೋಜರ್ (Bulldozer) ಅಸ್ತ್ರ ಪ್ರಯೋಗಿಸಿದ್ದಾರೆ.

    ಆರೋಪಿ ಸೋನು ಅಲಿಯಾಸ್ ಸಿಕಂದರ್ ಲವ್ ಜಿಹಾದ್ (Love Jihad) ಆರೋಪ ಎದುರಿಸುತ್ತಿದ್ದಾನೆ. ಉತ್ತರ ಪ್ರದೇಶದ ಫತೇಪುರ್‌ನಲ್ಲಿ 19 ವರ್ಷದ ಯುವತಿಯನ್ನು ಆರೋಪಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ಮನೆ ಕೆಡವುವ ಮುನ್ನ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಎಸ್‍ಡಿಎಂ, ತಹಶೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

    ಆರೋಪಿ ಮತ್ತು ಯುವತಿ ಜು.22 ರಂದು ಮದುವೆಯೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಆರೋಪಿ ತಾನು ಹಿಂದೂ ವ್ಯಕ್ತಿ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ಬಳಿಕ ಒಬ್ಬಂಟಿಯಾಗಿ ಭೇಟಿಯಾಗುವಂತೆ ಯುವತಿಗೆ ಹೇಳಿದ್ದ. ನಂತರ ಯುವತಿ ಆತನನ್ನು ಭೇಟಿಯಾದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿ, ಸಿಮೆಂಟ್ ಬ್ಲಾಕ್‍ಗಳಿಂದ ಹಲ್ಲೆ ನಡೆಸಿದ್ದ. ಯುವತಿ ತೀವ್ರ ಗಾಯಗೊಂಡು ಅಸ್ವಸ್ಥಳಾದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಯುವತಿಯ ಕುಟುಂಬಸ್ಥರು ಆಕೆಯನ್ನು ಹುಡುಕಿ ಕಾನ್ಪುರ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಳು.

    ಆರೋಪಿಯ ತಂದೆ ಮತ್ತು ಆತನ ಸಹೋದರನ ವಿರುದ್ಧವೂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಸೋನು ಅಲಿಯಾಸ್ ಸಿಕಂದರ್, ಆತನ ತಂದೆ ಮತ್ತು ಆತನ ಸಹೋದರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಸಂಬಂಧ ಫತೇಪುರನ ಸದರ್ ಕೊಟ್ವಾಲಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿತ್ಯ ಯೋಗ, ವ್ಯಾಯಾಮದಿಂದ ಮಾರಕ ರೋಗಗಳಿಂದ ಮುಕ್ತಿ ಸಾಧ್ಯ: ರಾಜ್ಯಪಾಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ

    ನಾಯಿ ರೀತಿ ಬೊಗಳು: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ

    ಭೋಪಾಲ್: ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ನಾಯಿ ರೀತಿ ಬೊಗಳುವಂತೆ ಒತ್ತಾಯಿಸಿದ್ದಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ಅವಹೇಳನ ಮಾಡಿರುವ ಆರೋಪದ ಮೇಲೆ ಮೂವರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಮಾತ್ರವಲ್ಲದೇ ಆರೋಪಿಗಳ ಮನೆಗಳನ್ನು ಬುಲ್ಡೋಜರ್ (Bulldozer) ಹತ್ತಿಸಿ ಧ್ವಂಸಗೊಳಿಸಲಾಗಿದೆ.

    ಭೋಪಾಲ್‌ನ ವ್ಯಕ್ತಿಯನ್ನು ನಾಯಿಯಂತೆ ಬೊಗಳಲು ಆದೇಶಿಸಿದ ಮೂವರನ್ನು ಸೋಮವಾರ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಲಾಗಿದೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೂವರು ಆರೋಪಿಗಳ ಮನೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

    ಘಟನೆಯೇನು?
    ವಿಜಯ್ ರಾಮ್‌ಚಂದಾನಿ ಎಂಬ ಯುವಕನ ಕುತ್ತಿಗೆಗೆ ನಾಯಿಯ ಬೆಲ್ಟ್ ಹಾಕಿ, ಮೂವರು ಆರೋಪಿಗಳು ನಾಯಿಯಂತೆ ಬೊಗಳಲು ಆದೇಶಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 48 ಸೆಕೆಂಡುಗಳ ವೀಡಿಯೋದಲ್ಲಿ ಆರೋಪಿಗಳು ವ್ಯಕ್ತಿಗೆ ನಾಯಿಯಂತೆ ವರ್ತಿಸಲು ಒತ್ತಾಯಿಸಿರುವುದು ಕಂಡುಬಂದಿದೆ. ಮಾತ್ರವಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ಶತಮಾನ ಪೂರೈಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ – ಸಾವರ್ಕರ್, ಗೋಡ್ಸೆಗೆ ನೀಡಿದಂತೆ ಎಂದು ಕಾಂಗ್ರೆಸ್ ಕಿಡಿ

    ವರದಿಗಳ ಪ್ರಕಾರ ಆರೋಪಿಗಳಾದ ಸಾಹಿಲ್ ಹಾಗೂ ಆತನ ಗ್ಯಾಂಗ್‌ನ ಸದಸ್ಯರು ವಿಜಯ್‌ಗೆ ಡ್ರಗ್ಸ್, ಮಾಂಸಾಹಾರ ಸೇವನೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿರುವುದಾಗಿ ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಸಂತ್ರಸ್ತನಿಗೆ ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಲು ಬಲವಂತಪಡಿಸಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ದೂರು ದಾಖಲಿಸಿರಲಿಲ್ಲ ಎನ್ನಲಾಗಿದೆ.

    ಇದೀಗ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಲೇ ಆರೋಪಿಗಳ ಅಮಾನುಷ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಬಂಧನದ ಬಳಿಕ ಅವರ ಮನೆಯನ್ನು ಧ್ವಂಸಗೊಳಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದು, ಬುಲ್ಡೋಜರ್ ಕಾರ್ಯಚರಣೆ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

  • 36 ಮಂದಿ ಸಾವಿಗೆ ಕಾರಣವಾಗಿದ್ದ ಇಂದೋರ್‌ ದೇವಸ್ಥಾನ ನೆಲಸಮ

    36 ಮಂದಿ ಸಾವಿಗೆ ಕಾರಣವಾಗಿದ್ದ ಇಂದೋರ್‌ ದೇವಸ್ಥಾನ ನೆಲಸಮ

    ಭೋಪಾಲ್: ಕೆಲ ದಿನಗಳ ಹಿಂದೆಯಷ್ಟೇ ಮೆಟ್ಟಿಲುಬಾವಿ ಕುಸಿದು 36 ಜನರ ಸಾವಿಗೆ ಕಾರಣವಾಗಿದ್ದ ಬಲೇಶ್ವರ್‌ ಮಹಾದೇವ್‌ ದೇವಸ್ಥಾನ (Beleshwar Mahadev Temple) ನೆಲಸಮಕ್ಕೆ ಬುಲ್ಡೋಜರ್‌ (Bulldozer) ಮುಂದಾಗಿವೆ.

    ಅಕ್ರಮ ಕಟ್ಟಡ ಕಾಮಗಾರಿ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ (Madhya Pradesh) ದೇವಸ್ಥಾನವನ್ನು 5 ಬುಲ್ಡೋಜರ್‌ಗಳು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸುತ್ತಿವೆ. ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ದೊಡ್ಡ ದಂಡು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ:‌ ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

    ಯಾವುದೇ ಸಂಭಾವ್ಯ ಪ್ರತಿರೋಧವನ್ನು ತಡೆಗಟ್ಟಲು ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳದಲ್ಲಿ ಉಪ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ.

    ಕುಸಿದ ದೇವಾಲಯದ ಪ್ರದೇಶವು ಅಕ್ರಮ ರಚನೆಯಾಗಿದ್ದು, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷ ನೆಲಸಮ ಮಾಡಲು ಮೆಟ್ಟಿಲುಬಾವಿಯ ಹೊದಿಕೆಯನ್ನು ಗುರುತಿಸಿತ್ತು. ಆದರೆ ದೇವಾಲಯದ ಟ್ರಸ್ಟ್, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದ ನಂತರ ನೆಲಸಮ ಕಾರ್ಯದಿಂದ ಹಿಂದೆ ಸರಿದರು. ಇದನ್ನೂ ಓದಿ: ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – 13 ಮಂದಿ ಸಾವು

    ರಾಮನವಮಿಯಂದು ಜನಸಂದಣಿಯ ಭಾರದಿಂದ ಮೆಟ್ಟಿಲುಬಾವಿಯ ಮೇಲ್ಛಾವಣಿ ಒಡೆದು ಹೋಗಿತ್ತು. ಖಾಸಗಿ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುವ ಈ ದೇವಾಲಯವು ಇಂದೋರ್‌ನ ಅತ್ಯಂತ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾದ ಸ್ನೇಹ್ ನಗರದಲ್ಲಿದೆ.

    ದೇವಸ್ಥಾನದ ಟ್ರಸ್ಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಅಕ್ರಮ ಕಟ್ಟಡ ತೆರವು ಕಾರ್ಯ ಮಾಡದೇ ಇದ್ದಿದ್ದ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದರು.

  • ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

    ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಮತ್ತೆ ಬುಲ್ಡೋಜರ್ (Bulldozer) ಸದ್ದು ಮಾಡಿದ್ದು, ಕೊಲೆ ಆರೋಪಿಗಳಿಗೆ ಸೇರಿದ್ದ ಬೆಳೆದ ಬೆಳೆಗಳನ್ನು ನೆಲಸಮ ಮಾಡಲಾಗಿದೆ.

    ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್ 2 ವಾರಗಳ ಹಿಂದೆ ನಡೆದ ಕೊಲೆಯಲ್ಲಿ ಮುಖ್ಯ ಆರೋಪಿಗಳಾಗಿದ್ದರು. ಈ ಆರೋಪಿಗಳು (Accused) ದಾಮೋಹ್ ಜಿಲ್ಲೆಯಲ್ಲಿ ಇಬ್ಬರು ವೃದ್ಧರಾದ ಬದ್ರಿ ಶುಕ್ಲಾ (68) ಹಾಗೂ ಆತನ ಸಹೋದರ ರಾಮ್‍ಸೇವಕ್ ಶುಕ್ಲಾ (65) ಅವರನ್ನು ಭೂವಿವಾದಕ್ಕೆ ಸಂಬಂಧಿಸಿ ಗುಂಡಿಕ್ಕಿ ಕೊಲೆ ಮಾಡಿದ್ದರು.

    2021ರಲ್ಲಿ ಬದ್ರಿ ಶುಕ್ಲಾ ಹಾಗೂ ರಾಮ್‍ಸೇವಕ್ 3 ಎಕರೆ ಜಮೀನನ್ನು (Land) ಖರೀದಿಸಿದ್ದರು. ಅಂದಿನಿಂದ ಜಹರ್ ಸಿಂಗ್, ಉಮೈದ್ ಸಿಂಗ್, ಮಖನ್ ಸಿಂಗ್, ಅರ್ಜುನ್ ಸಿಂಗ್‍ನೊಂದಿಗೆ ವಿವಾದ ನಡೆಯುತ್ತಿತ್ತು. ಫೆ. 28ರಂದು ಶುಕ್ಲಾರನ್ನು ಸಿಂಗ್‌ನ ಗುಂಪು ಮನೆಗೆ ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ: ದಳಪತಿ ವಿರುದ್ಧ ಗುಡುಗಿದ ಶಿವಲಿಂಗೇಗೌಡ

    ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಬುಲ್ಡೋಜರ್ ಅನ್ನು ತಂದು ಸಿಂಗ್‌ಗೆ ಜಮೀನಿನಲ್ಲಿದ್ದ ಬೆಳೆಗಳನ್ನು ನೆಲಸಮ ಮಾಡಿದ್ದಾರೆ. ಜೊತೆಗೆ ಸಿಂಗ್ ಕುಟುಂಬಸ್ಥರು ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅತ್ಯಾಚಾರಗೈದು ಬಾಲಕಿಯ ಕೊಲೆ- ಕಾಮುಕನಿಗೆ ಗಲ್ಲುಶಿಕ್ಷೆ

  • ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ ನುಗ್ಗಿಸಿದ ಲೇಡಿ ಪೊಲೀಸ್‌

    ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ ನುಗ್ಗಿಸಿದ ಲೇಡಿ ಪೊಲೀಸ್‌

    ಭೋಪಾಲ್‌: ಮಹಿಳಾ ಪೊಲೀಸ್‌ ಸಿಬ್ಬಂದಿ ಮಧ್ಯಪ್ರದೇಶದಲ್ಲಿ (Madhya Pradesh) ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ (Operation Bulldozer) ನುಗ್ಗಿಸಿ ನೆಲಸಮಗೊಳಿಸಿರುವ ಘಟನೆ ನಡೆದಿದೆ. ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

    ತಂಡದ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರು, ಅತ್ಯಾಚಾರ ಘೋರ ಅಪರಾಧ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅತ್ಯಾಚಾರದಂತಹ ಅಪರಾಧಗಳು ಇಂತಹ ಶಿಕ್ಷೆಗೆ ಅರ್ಹವಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 20ನೇ ಮಹಡಿಯಿಂದ ಬಿದ್ದು OYO Rooms ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು!

    ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್‌ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. 4ನೇ ಆರೋಪಿ ಕೌಶಲ್ ಕಿಶೋರ್ ಚೌಬೆ ಎಂಬಾತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿ ಜಮೀನೊಂದರಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಕೌಶಲ್ ಕಿಶೋರ್ ಚೌಬೆ ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದ. ಮಹಿಳಾ ಅಧಿಕಾರಿಗಳ ತಂಡ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ, ಆ ಮನೆಯನ್ನು ಕೆಡವಿದೆ. ಮಹಿಳಾ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಕ್ರಮಗಳು ಮುಂದುವರಿಯಬೇಕು ಎಂದು ಠಾಣಾಧಿಕಾರಿ ಪ್ರಶಿತಾ ಕುರ್ಮಿ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ