Tag: bull

  • ಸುಳ್ಯದಲ್ಲಿ ಹೋರಿಗೆ ತಲವಾರಿನಿಂದ ಕಡಿದು ವಿಕೃತಿ ಮೆರೆದ ದುಷ್ಕರ್ಮಿಗಳು!

    ಸುಳ್ಯದಲ್ಲಿ ಹೋರಿಗೆ ತಲವಾರಿನಿಂದ ಕಡಿದು ವಿಕೃತಿ ಮೆರೆದ ದುಷ್ಕರ್ಮಿಗಳು!

    ಮಂಗಳೂರು: ಮೂಕ ಪ್ರಾಣಿಯೊಂದರ ಕಾಲು ಕಡಿದು ವಿಕೃತಿ ಮೆರೆದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

    ಸುಳ್ಯ ಪೇಟೆಯಾದ್ಯಂತ ತಿರುಗಾಡುತ್ತಾ ಸಿಕ್ಕಿದ ಆಹಾರವನ್ನು ತಿಂದು ಬದುಕುತ್ತಿದ್ದ ಹೋರಿಯನ್ನು ದುಷ್ಕರ್ಮಿಗಳು ಶನಿವಾರ ತಡ ರಾತ್ರಿ ಹಿಡಿದು ಒಯ್ಯಲು ಯತ್ನಿಸಿದ್ದರು. ಆದರೆ ಬಲಿಷ್ಠ ಹೋರಿ ಹೊರಳಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅದರ ಕಾಲು ಮತ್ತು ಬೆನ್ನಿಗೆ ತಲವಾರಿನಲ್ಲಿ ಕಡಿದಿದ್ದಾರೆ. ಬಳಿಕ ಹೋರಿ ಅವರ ಕೈಯಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾಗುತ್ತಿದೆ.

    ಸದ್ಯ ಸುಳ್ಯದ ಹಿಂದು ಸಂಘಟನೆ ಕಾರ್ಯಕರ್ತರು ಹೋರಿಯನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ.

  • ರಾಯಚೂರಿನಲ್ಲಿ ಅದ್ಧೂರಿ ಮುಂಗಾರು ಹಬ್ಬ – ಆನೆ ಭಾರದ ಕಲ್ಲು ಎಳೆದು ಎತ್ತುಗಳ ಓಟ

    ರಾಯಚೂರಿನಲ್ಲಿ ಅದ್ಧೂರಿ ಮುಂಗಾರು ಹಬ್ಬ – ಆನೆ ಭಾರದ ಕಲ್ಲು ಎಳೆದು ಎತ್ತುಗಳ ಓಟ

    ರಾಯಚೂರು: ರಾಜ್ಯಕ್ಕೆ ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಯಚೂರು ರೈತರು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಕಾರಹುಣ್ಣಿಮೆಯನ್ನ ಮುಂಗಾರು ಸಾಂಸ್ಕೃತಿಕ ಹಬ್ಬವಾಗಿ ರೈತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.

    ವರುಣದೇವ ರೈತರ ಮೇಲೆ ಕರುಣೆ ತೋರಲಿ ಅನ್ನೋದು ಈ ಹಬ್ಬದ ಉದ್ದೇಶ. ಮೂರು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದಲ್ಲಿ ಮೊದಲ ದಿನವಾದ ಗುರುವಾರ ಎತ್ತುಗಳು ಭಾರದ ಕಲ್ಲನ್ನ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಈ ಬಾರಿ ಒಟ್ಟು 67 ಜೋಡಿ ಎತ್ತುಗಳು ಭಾಗವಹಿಸಿದ್ವು. ವಿಜೇತ ಎತ್ತುಗಳ ಜೋಡಿಗೆ 7.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತೆ.

    ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಜೋಡಿ ಎತ್ತುಗಳು ಭಾಗಿಯಾಗುತ್ತವೆ.