Tag: bull

  • ಗೆಳೆಯನ ಅಂತ್ಯಕ್ರಿಯೆಗೆ ಬಂದು ಕಣ್ಣೀರಿಟ್ಟ ಬಸವ- ಮೂಕಪ್ರಾಣಿಯ ಪ್ರೀತಿಗೆ ಮಮ್ಮಲ ಮರುಗಿದ ಜನ

    ಗೆಳೆಯನ ಅಂತ್ಯಕ್ರಿಯೆಗೆ ಬಂದು ಕಣ್ಣೀರಿಟ್ಟ ಬಸವ- ಮೂಕಪ್ರಾಣಿಯ ಪ್ರೀತಿಗೆ ಮಮ್ಮಲ ಮರುಗಿದ ಜನ

    ಮಂಡ್ಯ: ಅನಾರೋಗ್ಯದಿಂದ ಸಾವನ್ನಪ್ಪಿದ ಬಸವನ ಅಂತ್ಯಕ್ರಿಯೆಗೆ ಬಂದ ಮತ್ತೊಂದು ಬಸವ ತನ್ನ ಗೆಳೆಯನನ್ನು ಬಿಟ್ಟು ಹೋಗಲಾಗದೆ ಮೂಕವೇದನೆ ಅನುಭವಿಸಿದ ದೃಶ್ಯ ಕಂಡು ಸಾವಿರಾರು ಜನರು ಕಣ್ಣೀರಿಟ್ಟ ಮನಕಲಕುವ ಘಟನೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ.

    ಗುತ್ತಲು ಬಡಾವಣೆಯ ಮಾರುತಿ ನಗರದ ಮುತ್ತುರಾಯ ದೇವಸ್ಥಾನದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಬುಧವಾರ ಮೃತಪಟ್ಟಿದೆ. ತಮ್ಮ ಪ್ರೀತಿಯ ಬಸವ ಸಾವನ್ನಪ್ಪಿದ್ದರಿಂದ ಬಸವನನ್ನು ಮೆರವಣಿಗೆಯ ಮೂಲಕ ತಂದು ಗುತ್ತಲು ಯುವಕರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಮೃತ ಬಸವನನ್ನು ಹಿಂಬಾಲಿಸುತ್ತ ಮತ್ತೊಂದು ಬಸವ ಬಂದಿದೆ. ಬಳಿಕ ಅಂತ್ಯ ಸಂಸ್ಕಾರದ ಜಾಗದಲ್ಲಿ ಬಸವನ ಬಳಿ ನಿಂತು ಮೂಕವೇದನೆ ಅನುಭವಿಸಿದೆ.

    ಇದನ್ನು ಕಂಡ ಜನ ಕಣ್ಣೀರಿಡುತ್ತಿದ್ದ ಬಸವನನ್ನು ಸ್ಥಳದಿಂದ ಓಡಿಸಲು ಯತ್ನಿಸಿದ್ದಾರೆ. ಆದರೆ ತನ್ನ ಗೆಳೆಯನನ್ನು ಬಿಟ್ಟು ಹೋಗಲು ಒಪ್ಪದ ಬಸವ, ಮೃತ ಬಸವನ ಸುತ್ತ ಮೂಕರೋದನೆಯಿಂದ ಸುತ್ತಾಡಿದೆ. ಇದನ್ನು ನೋಡಿದ ಸಾವಿರಾರು ಜನ ಮೂಕ ಪ್ರಾಣಿಯ ಪ್ರೀತಿಗೆ ಕಣ್ಣೀರಿಟ್ಟಿದ್ದಾರೆ.

    ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರಿಸಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಪ್ರಾಣಿಗಳ ಮೂಕ ಪ್ರೀತಿಗೆ ಜನ ಮಮ್ಮಲ ಮರುಗಿದ್ದಾರೆ. ದೃಶ್ಯವನ್ನು ನೋಡಿದ ಜನ ಮನುಷ್ಯರು ಪ್ರಾಣಿಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಕಮೆಂಟ್ ಮಾಡುತ್ತಾ ಸಂತಾಪ ಸೂಚಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಲ್ಲಿಕಟ್ಟು ಓಟದ ವೇಳೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ

    ಜಲ್ಲಿಕಟ್ಟು ಓಟದ ವೇಳೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ

    ಕೋಲಾರ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ರಾಸುಗಳ ಓಟದಲ್ಲಿ ಹೋರಿಗಳು ಮಖಾಮುಖಿ ಡಿಕ್ಕಿಯಾದ ಪರಿಣಾಮ ಹೋರಿಯೊಂದು ನರಳಾಡಿ ಪ್ರಾಣ ಬಿಟ್ಟಿರುವ ಘಟನೆ ಕೋಲಾರ ಗಡಿ ಜಿಲ್ಲೆಯಾದ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

    ಹಬ್ಬದ ಕಾರಣ ಹೋರಿಗಳಿಗೆ ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು. ಒಂದರ ನಂತರ ಒಂದರಂತೆ ಹೋರಿಗಳನ್ನು ಬಿಟ್ಟು ಬೆದರಿಸುವ ವೇಳೆ ಹೋರಿ ವೇಗವಾಗಿ ಓಡಿ ಮತ್ತೊಂದು ಹೋರಿಗೆ ಡಿಕ್ಕಿಯಾಗಿತ್ತು. ಹೋರಿಗೆ ಹೆಚ್ಚಿನ ಅಲಂಕಾರ ಮಾಡಿದ್ದರಿಂದ ಕಣ್ಣು ಕಾಣದೇ ಜನರ ಭಯಕ್ಕೆ ದಿಕ್ಕಾಪಲಾಗಿ ಓಡಿದ ಪರಿಣಾಮ ಘಟನೆ ನಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.

    ಹೋರಿ ಕೆಳಗೆ ಬಿದ್ದು ನರಳಾಡಿ ಸಾವನ್ನಪ್ಪುತ್ತಿರುವ ಮನಕಲಕುವ ಸಾಮಾಜಿಕ ಜಾಲತಾಣ ಸೇರಿದಂತೆ ವಿಡಿಯೋ ವಾಟ್ಸಪ್ ನಲ್ಲೂ ವೈರಲ್ ಆಗಿದೆ. ಈ ದೃಶ್ಯ ಮನಕಲಕುವಂತಿದ್ದು, ಹಲವರು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=uDdcnrlJx50

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವಕನ ಚಡ್ಡಿಯನ್ನೇ ಬಿಚ್ಚಿದ ಗೂಳಿ- ಸದ್ದು ಮಾಡಿದ ವಿಡಿಯೋ

    ಯುವಕನ ಚಡ್ಡಿಯನ್ನೇ ಬಿಚ್ಚಿದ ಗೂಳಿ- ಸದ್ದು ಮಾಡಿದ ವಿಡಿಯೋ

    ಮಧುರೈ: ಗೂಳಿ ಬೆದರಿಸುವ ಸ್ಪರ್ಧೆಯೆಂದರೆ ಒಂದು ರೀತಿಯಲ್ಲಿ 20-20 ಕ್ರಿಕೆಟ್ ಮ್ಯಾಚ್ ಇದ್ದಂತೆ. ಸ್ವಲ್ಪ ಸಮಯ ಹೆಚ್ಚು ಮನರಂಜನೆ ಜೊತೆಗೆ ಮರೆಯಲಾದ ನೆನಪುಗಳನ್ನು ಎರಡರಲ್ಲಿಯೂ ಕಾಣಬಹುದಾಗಿದೆ.

    ಸಂಕ್ರಾಂತಿ ನಿಮಿತ್ತ ತಮಿಳುನಾಡಿನ ಅಲಂಗನಲ್ಲೂರ್ ನಲ್ಲಿ ಗುರುವಾರ ನಡೆದ ಜಲ್ಲಿಕಟ್ಟು (ಹೋರಿ ಬೆದರಿಸುವ ಸ್ಪರ್ಧೆ) ಅವಿಸ್ಮರಣಿಯ, ರೋಚಕ ಹಾಗೂ ತಮಾಷೆಗೆ ಸಾಕ್ಷಿಯಾಗಿದೆ. ಹೋರಿಯೊಂದು ಯುವಕನ ಚಡ್ಡಿ ಕಳೆದು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡ ಓಡಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಲಂಗನಲ್ಲೂರ್ ನ ಟಿ.ರಾಜೇಶ್ ಎಂಬವರ ಮಾಲೀಕತ್ವದ ಹೋರಿಯು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆದ ಜಲ್ಲಿಕಟ್ಟು ಸ್ಪರ್ಧೆಯ ನಾಲ್ಕನೇ ರೌಂಡ್‍ಗೆ ಕಣಕ್ಕೆ ಇಳಿದಿತ್ತು. ಈ ವೇಳೆ ಹಳಿದಿ ಬಟ್ಟೆ ಹಾಕಿಕೊಂಡು ನಿಂತಿದ್ದ ಯುವಕರು ಗೂಳಿಯನ್ನು ಹಿಡಿಯಲು ಭಾರೀ ಕಾತುರರಲ್ಲಿ ಕಾಯುತ್ತಿದ್ದರು.

    ಗೂಳಿ ಹೊರಗೆ ಬರುತ್ತಿದ್ದಂತೆ ಯುವಕರು ಸ್ಪಲ್ಪ ದಾರಿ ಬಿಟ್ಟು ಹಿಡಿಯಲು ಪ್ಲಾನ್ ಮಾಡಿದ್ದರು. ಆದರೆ ಎಲ್ಲರನ್ನೂ ಹೆದರಿಸುತ್ತ ಬಂದ ಗೂಳಿ ತನ್ನ ಬಲಕ್ಕೆ ನಿಂತಿದ್ದ ಯುವಕರ ಗುಂಪಿನತ್ತ ನುಗ್ಗಿ ಯುವನ ಮೇಲೆ ಭಯ ಹುಟ್ಟಿಸಿ ಚಡ್ಡಿಯನ್ನು ಬಿಚ್ಚಿ ಗೆಲುವಿನ ಓಟವನ್ನು ಬೀರಿದೆ.

    ಚಡ್ಡಿ ಹಾಗೂ ಒಳ ಉಡುಪು ಬಿಚ್ಚಿದ್ದರಿಂದ ಯುವಕ ಸಾರ್ವಜನಿಕರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಕಣದಿಂದ ಓಡಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

    ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು, ಪೆಟ್ಟಾ ಸಿನಿಮಾದಲ್ಲಿ ರಜನಿಕಾಂತ್ ಬಾಬಿ ಸಿಂಹಗೆ ಎಚ್ಚರಿಕೆ ಕೊಟ್ಟಂತೆ ಗೂಳಿ ಯುವಕನ ಚಡ್ಡಿ ಬಿಚ್ಚಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ವಿಡಿಯೋ ಅಪ್‍ಲೋಡ್ ಮಾಡಿದ್ದಕ್ಕೆ ಖಾರವಾಗಿ ಕಮೆಂಟ್ ಮಾಡಿ, ಯುವತಿಯೊಬ್ಬಳಿಗೆ ಈ ರೀತಿ ಆಗಿದ್ದರೆ ವೀಡಿಯೋ ಅಪ್‍ಲೋಡ್ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 10 ಲಕ್ಷಕ್ಕೆ ಮಾರಾಟವಾಯ್ತು ಹೋರಿ

    ಬರೋಬ್ಬರಿ 10 ಲಕ್ಷಕ್ಕೆ ಮಾರಾಟವಾಯ್ತು ಹೋರಿ

    ಹಾವೇರಿ: ಸಾಮಾನ್ಯವಾಗಿ ಹೋರಿಗಳನ್ನ ಒಂದು ಲಕ್ಷ ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡೋದನ್ನ ನೋಡಿದ್ದೇವೆ. ಆದರೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಖುರ್ದಕೋಡಿಹಳ್ಳಿಯ ಕೊಬ್ಬರಿ ಹೋರಿ ಬರೋಬ್ಬರಿ 10 ಲಕ್ಷ ಒಂದು ಸಾವಿರಕ್ಕೆ ಮಾರಾಟವಾಗಿದೆ. ಗ್ರಾಮದ ರೇವಣಸಿದ್ದಪ್ಪ ಮಾತನವರ್ ಎಂಬವರಿಗೆ ಸೇರಿದ ಹೋರಿ ಇದಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು.

    ಹೋರಿಯ ವಿಶೇಷತೆ:
    ಅಮರಾವತಿ ತಳಿಯ ಹೋರಿಯಾಗಿದ್ದು ದಷ್ಟ-ಪುಷ್ಟವಾಗಿರುತ್ತದೆ. ಹೋರಿ ಓಡುವ ಸ್ವರ್ಧೆಯಲ್ಲಿ ಧೈರ್ಯದಿಂದ ಓಡುವ ಹೋರಿ ಇದಾಗಿದೆ. ಅಖಾಡದಲ್ಲಿ 8 ರಿಂದ 10 ಸೆಕೆಂಡ್ ಗಳಲ್ಲಿ 250 ಮೀಟರ್ ಓಡುತ್ತದೆ. ಯಾರ ಕೈಯಿಂದ ಮೈಮುಟ್ಟಿಸಿಕೊಳ್ಳುವುದಿಲ್ಲ.

    ತಮಿಳುನಾಡಿನ ವೆಲ್ಲಂಪಾಡಿಯ ರೈತ ಸೆಲ್ವಂ ಬರೋಬ್ಬರಿ 10 ಲಕ್ಷ ಒಂದು ಸಾವಿರ ರುಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಜಲ್ಲಿಕಟ್ಟು ಮಾದರಿ ಸ್ಪರ್ಧೆಗೆ ಹೇಳಿ ಮಾಡಿಸಿದ ಹೋರಿ ಇದಾಗಿದೆ. ರಾಜ್ಯ ಸೇರಿದಂತೆ ನಾನಾಭಾಗದಲ್ಲಿ ಸ್ಪರ್ಧೆ ಮಾಡಿದ ಈ ಹೋರಿ ಹಲವು ಬಹುಮಾನಗಳು ತನ್ನದಾಗಿಸಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿಯೇ ಹೋರಿಗಳ ಮಧ್ಯೆ ಜಟಾಪಟಿ- ವಿಡಿಯೋ ನೋಡಿ

    ನಡುರಸ್ತೆಯಲ್ಲಿಯೇ ಹೋರಿಗಳ ಮಧ್ಯೆ ಜಟಾಪಟಿ- ವಿಡಿಯೋ ನೋಡಿ

    ಕೊಪ್ಪಳ: ಜಿಲ್ಲೆಯ ಮುಚಗೇರ ಓಣಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಬೀದಿ ಹೋರಿಗಳು ಪರಸ್ಪರ ಗುದ್ದಾಡಿಕೊಂಡಿದ್ದು, ಅವುಗಳ ಜಗಳ ಬಿಡಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

    ಹೋರಿಗಳ ಜಗಳದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಹೋರಿಗಳ ಮೇಲೆ ನೀರು ಎರಚಿದ್ರೂ ಅವುಗಳು ತಮ್ಮ ಗುದ್ದಾಟವನ್ನು ನಿಲ್ಲಿಸಿಲ್ಲ. ಇದರಿಂದ ಗಾಬರಿಗೊಂಡ ಸ್ಥಳೀಯರು ಕೋಲಿನಿಂದ ಬಡಿದಿದ್ದಾರೆ.

    ನಡು ರಸ್ತೆಯಲ್ಲಿ ಅರ್ಧ ಗಂಟೆಗಳ ಹೋರಿಗಳು ಗುದ್ದಾಟ ನಡೆಸುತ್ತಿದ್ದವು. ಗುದ್ದಾಟದಿಂದ ಅವುಗಳಿಗೆ ಪ್ರಾಣಾಪಾಯ ಆಗಬಾರದು ಅನ್ನೋ ಉದ್ದೇಶದಿಂದ ಕೋಲಿನಿಂದ ಹೊಡೆದು ಸ್ಥಳೀಯರು ಅವುಗಳ ಜಗಳ ಬಿಡಿಸಿದ್ದಾರೆ. ಟಗರು ಕಾಳಗದಂತೆ ಎರಡು ಬೀದಿ ಹೋರಿಗಳು ಗುದ್ದಾಟ ಮಾಡ್ತಿರೋದು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

    ನಡು ರಸ್ತೆಯಲ್ಲಿ ನಡೆಯುತ್ತಿದ್ದ ಹೋರಿಗಳ ಫೈಟ್ ಕೆಲ ಕಾಲ ಸ್ಥಳೀಯರಿಗೆ ಮನರಂಜನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=rdTjzzK6Uqs

  • ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂದಿನಿಂದ ಗುದ್ದಿದ ಗೂಳಿ- 10 ಅಡಿ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದ ಮಹಿಳೆ

    ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂದಿನಿಂದ ಗುದ್ದಿದ ಗೂಳಿ- 10 ಅಡಿ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದ ಮಹಿಳೆ

    ಅಹಮದಾಬಾದ್: ರಸ್ತೆಯಲ್ಲಿ ಹೋಗ್ತಿದ್ದ ಅಪರಿಚಿತ ಮಹಿಳೆಗೆ ಹಿಂದಿನಿಂದ ಗೂಳಿ ಗುದ್ದಿದ ಪರಿಣಾಮ ಅವರು 10 ಅಡಿ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಗುಜರಾತ್‍ನ ಭರೂಚ್‍ನಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. ನೋಡನೋಡ್ತಿದ್ದಂತೆ ಬೀಡಾಡಿ ಗೂಳಿ ತನ್ನ ಕೊಂಬಿನಿಂದ ಮಹಿಳೆಗೆ ಗುದ್ದಿದ ಪರಿಣಾಮ ಅವರು ಮೇಲೆ ಹಾರಿ ಕೆಲವು ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾರೆ.

    ವಿಡಿಯೋದಲ್ಲಿ ಮೊದಲಿಗೆ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರೋದನ್ನ ಕಾಣಬಹುದು. ಅವರ ಹಿಂದೆ ಕಪ್ಪು ಬಣ್ಣದ ಗೂಳಿ ಬಂದಿದ್ದು, ಸ್ಕೂಟರ್ ಮೇಲೆ ಕುಳಿತಿದ್ದ ವ್ಯಕ್ತಿಗೆ ಗುದ್ದಿದೆ. ಬಳಿಕ ಅಲ್ಲೇ ಸ್ವಲ್ಪ ಮುಂದೆ ಹೋಗುತ್ತಿದ್ದ ಮಹಿಳೆಯ ಕಡೆಗೆ ಧಾವಿಸಿ ಏಕಾಏಕಿ ದಾಳಿ ಮಾಡಿದೆ. ಗೂಳಿಯ ದಾಳಿಯಿಂದ ಮಹಿಳೆ ದೂರಕ್ಕೆ ಹಾರಿದ್ದನ್ನು ನೋಡಿ ಸ್ಥಳದಲ್ಲಿದ್ದವರು ಒಂದು ಕ್ಷಣ ಭಯಗೊಂಡಿದ್ದರು.

    ನಂತರ ಗೂಳಿ ತನ್ನ ಪಾಡಿಗೆ ಹೋಗಿದ್ದು, ಸಾರ್ವಜನಿಕರು ಮಹಿಳೆಯ ಬಳಿ ದೌಡಾಯಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಹತ್ತಿರದ ಅಂಗಡಿಯ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವರದಿಯಾಗಿದೆ.

    https://www.youtube.com/watch?v=8Tke3X-DtKk

  • ಹೋರಿ ಬೆದರಿಸುವ ಸ್ಪರ್ಧೆ – ಎತ್ತು ತಿವಿದು ಯುವಕ ಸಾವು

    ಹೋರಿ ಬೆದರಿಸುವ ಸ್ಪರ್ಧೆ – ಎತ್ತು ತಿವಿದು ಯುವಕ ಸಾವು

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸೋ ಸ್ಪರ್ಧೆ ವೇಳೆ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

    ಹಾವೇರಿ ನಗರದ ನಾಗೇಂದ್ರನಮಟ್ಟಿ ನಿವಾಸಿ ಯಲ್ಲಪ್ಪ ದೊಡ್ಡತಳವಾರ(20) ಮೃತ ಯುವಕ. ಸ್ಪರ್ಧೆ ವೀಕ್ಷಿಸುತ್ತಿದ್ದಾಗ ಹೋರಿ ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

    ಸೋಮವಾರ ಹಾನಗಲ್  ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ವೇಳೆ ಯಲ್ಲಪ್ಪನ ತೊಡೆಯ ಭಾಗಕ್ಕೆ ಹೋರಿ ಕೊಂಬಿನಿಂದ ತಿವಿದಿತ್ತು. ನಂತರ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದನು. ತಕ್ಷಣ ಯಲ್ಲಪ್ಪ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾನೆ.

    ಈ ಘಟನೆ ಸಮಬಂಧ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನು ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ – ಹೋರಿ ತಿವಿದು ಓರ್ವ ಸಾವು

  • ಬಿಡಾಡಿ ಗೂಳಿ ದಾಳಿಗೆ ಕಂಗೆಟ್ಟ ತುಮಕೂರು ಜನ – ಮೂರ್ನಾಲ್ಕು ಜನರಿಗೆ ತಿವಿದ ಗೂಳಿ

    ಬಿಡಾಡಿ ಗೂಳಿ ದಾಳಿಗೆ ಕಂಗೆಟ್ಟ ತುಮಕೂರು ಜನ – ಮೂರ್ನಾಲ್ಕು ಜನರಿಗೆ ತಿವಿದ ಗೂಳಿ

    ತುಮಕೂರು: ಬಿಡಾಡಿ ಗೂಳಿಯೊಂದು ತುಮಕೂರು ನಾಗರೀಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

    ನಗರದ ಹನುಮಂತಪುರದಲ್ಲಿರುವ ಗೂಳಿ, ಕಂಡ ಕಂಡವರ ಮೇಲೆ ಮನಸೋ ಇಚ್ಛೆ ದಾಳಿ ನಡೆಸುತ್ತಿದೆ. ಈಗಾಗ್ಲೇ ಮೂರ್ನಾಲ್ಕು ಜನರನ್ನು ಗುದ್ದಿ ಗಾಯಗೊಳಿಸಿರುವ ಗೂಳಿ, ಹನುಂತಪುರದ ರೌಡಿ ಎಂದೇ ಖ್ಯಾತಿ ಗಳಿಸಿದೆ. ಗೂಳಿಯ ಹಾವಳಿ ತಪ್ಪಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಕೆಲಸಕ್ಕೆಂದು ಹೋಗುತ್ತಿದ್ದಾಗ ಎದುರಿಗೆ ಗೂಳಿ ಬಂದರೆ ರಸ್ತೆ ಬದಲಿಸಿ ಪ್ರಯಣಿಸಬೇಕಾಗಿದೆ. ಅಷ್ಟರ ಮಟ್ಟಿಗೆ ಈ ಗೂಳಿ ಹನುಮಂತಪುರ ನಾಗರೀಕರಿಗೆ ಉಪಟಳ ನೀಡಿದೆ.

    ಇನ್ನು ಈ ಗೂಳಿಯ ಕಾಟದಿಂದ ಮಕ್ಕಳು ಸಂಜೆ, ಮುಂಜಾನೆ ವೇಳೆ ಆಟವಾಡುವುದನ್ನೇ ತೊರೆದಿದ್ದಾರೆ. ಶಾಲಾ ಮಕ್ಕಳ ವಾಹನವನ್ನು ಎತ್ತಿ ಬಿಸಾಡಲು ಪ್ರಯತ್ನಿಸಿತ್ತು ಈ ಗೂಳಿ. ಅಲ್ಲದೆ ಗೂಳಿಯ ತಿವಿತಕ್ಕೊಳಗಾದ ಶ್ರೀರಂಗ ಹಾಗೂ ನಾಗರಾಜ ದೀಕ್ಷಿತ ಎನ್ನುವವರು ಎರಡು ತಿಂಗಳ ಕಾಲ ಆಸ್ಪತ್ರೆಯಲಿದ್ದು ಚಿಕಿತ್ಸೆ ಪಡೆದಿದ್ದಾರೆ.

    ಅಪ್ಪಿತಪ್ಪಿ ಯಾರಾದ್ರೂ ಗೂಳಿ ಹತ್ತಿರ ಹೊದ್ರೆ ಅವರ ಕಥೆ ಮುಗಿದಂತೆ. ಇಂತಹ ಪುಂಡ ಗೂಳಿಯನ್ನು ಪಾಲಿಕೆಯವರು ಹಿಡಿದರೆ ಹನುಮಂತಪುರ ನಾಗರೀಕರು ನೆಮ್ಮದಿಯಾಗಿ ಜೀವಿಸಬಹುದು ಗೂಳಿಯಿಂದ ಹಲ್ಲೆಗೊಳಗಾದವರು ವಿನಂತಿ ಮಾಡಿದ್ದಾರೆ.

  • ಚಲಿಸುತ್ತಿದ್ದ ಬೈಕ್ ಮೇಲೆ ಯಮನಂತೆ ಎರಗಿದ ಗೂಳಿ- ಭಯಾನಕ ವಿಡಿಯೋ ನೋಡಿ

    ಚಲಿಸುತ್ತಿದ್ದ ಬೈಕ್ ಮೇಲೆ ಯಮನಂತೆ ಎರಗಿದ ಗೂಳಿ- ಭಯಾನಕ ವಿಡಿಯೋ ನೋಡಿ

    ಜೈಪುರ: ರಸ್ತೆಯಲ್ಲಿ ಹೋಗ್ಬೇಕಾದ್ರೆ ಅಕ್ಕಪಕ್ಕ ಎಲ್ಲಾದ್ರೂ ಬೀಡಾಡಿ ದನಗಳು, ಗೂಳಿ ಇದ್ಯಾ ಅಂತಾ ನೋಡ್ಕೊಳ್ಳಿ. ಯಾಕಂದ್ರೆ ಅವುಗಳ ಮೂಡು ಹೇಗಿರುತ್ತೋ ಗೊತ್ತಿಲ್ಲ. ಹೀಗೆ ಒಂದು ಗೂಳಿ ಬೈಕ್ ಸವಾರನ ಮೇಲೆ ಯಮನಂತೆ ಎರಗಿ ಗಾಯಗೊಳಿಸಿರೋ ವಿಡಿಯೋವೊಂದು ಯೂಟ್ಯೂಬ್‍ನಲ್ಲಿ ಹರಿದಾಡ್ತಿದೆ.

    ತನ್ನ ಪಾಡಿಗೆ ಬೈಕ್‍ನಲ್ಲಿ ಹೋಗ್ತಿದ್ದ ವ್ಯಕ್ತಿಗೆ ರಸ್ತೆ ಬದಿಯಲ್ಲಿದ್ದ ಗೂಳಿಯೊಂದು ಓಡಿ ಬಂದು ಡಿಕ್ಕಿ ಹೊಡೆದಿದೆ. ಎರಡು ಗೂಳಿಗಳು ರಸ್ತೆ ಬದಿ ನಿಂತಿದ್ದು ಅದೇ ರಸ್ತೆಯಲ್ಲಿ ವಾಹನಗಳು ಹಾದು ಹೋಗುತ್ತವೆ. ಮೊದಲಿಗೆ ಒಂದು ಬೈಕ್ ಹೋಗಿದ್ದು, ಆಗ ಗೂಳಿ ಸುಮ್ಮನೆ ಇತ್ತು. ಆದ್ರೆ ಅದರ ಹಿಂದೆಯೇ ಮತ್ತೊಂದು ಬೈಕ್ ಬಂದಿದ್ದು ಗೂಳಿ ವೇಗವಾಗಿ ಓಡಿ ಬಂದು ಬೈಕ್ ಸವಾರನಿಗೆ ಗುದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದಾಗಲೇ ಎದುರಿನಿಂದ ಗೂಳಿ ಬಂದೆರಗಿದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಈ ಎಲ್ಲಾ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬೈಕ್ ಸವಾರ ರಸ್ತೆ ಡಿವೈಡರ್ ಬಳಿ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಸವಾರ ಒಮ್ಮೆ ಮೇಲೆದ್ದು ಮತ್ತೆ ಕೆಳಗೆ ಕುಸಿದು ಬೀಳೋದನ್ನ ಕಾಣಬಹುದು. ಅವರು ಹೆಲ್ಮೆಟ್ ಕೂಡ ಧರಿಸಿಲ್ಲವಾದ್ದರಿಂದ ತಲೆಗೂ ಭಾರೀ ಪೆಟ್ಟಾಗೋದನ್ನ ವಿಡಿಯೋದಲ್ಲಿ ಗಮನಿಸಬಹುದು.

    ಈ ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ರಾಜಸ್ಥಾನದ ಹುನಮಾಗಢ್‍ನಲ್ಲಿ ಈ ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸತೀಶ್ ಅವರನ್ನ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    https://www.youtube.com/watch?v=t9uJFgMI6J8&feature=youtu.be

     

  • 35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

    35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

    ಬಳ್ಳಾರಿ: ಹೂವಿನಹಡಗಲಿ ತಾಲೂಕಿನಲ್ಲಿ 35 ಗೂಳಿಗಳ ಮಾರಣಹೋಮ ಮಾಡಲಾಗಿದೆ. ಮೆಕ್ಕೆಜೋಳದ ಬೆಳೆಗೆ ಔಷಧ ಸಿಂಪಡಿಸುವ ನೆಪದಲ್ಲಿ ಬೆಳೆಗಳ ಮೇಲೆ ವಿಷ ಹಾಕಿ 35 ಗೂಳಿಗಳನ್ನು ಕೊಲ್ಲಲಾಗಿದೆ.

    ಹಿರೇಹಡಗಲಿ ಬಳಿಯ ಕಟ್ಟಿ ಮಸಾರಿ ಬಳಿಯ ಜಮೀನುಗಳಲ್ಲಿ 28 ಗೂಳಿ ಮತ್ತು ಹಿರೇ ಮಲ್ಲನಕೇರಿ ಬಳಿ 7 ಗೂಳಿ ಸೇರಿದಂತೆ ಒಟ್ಟು 35 ಗೂಳಿಗಳಿಗೆ ಪ್ರೀಡಾನ್ ಅನ್ನೋ ವಿಷ ಹಾಕಿ ಕೊಲ್ಲಲಾಗಿದೆ. ದೇವರಿಗೆ ಬಿಟ್ಟ ಈ ಹಿಂದೆ ಗೂಳಿಗಳನ್ನು ಹಿಡಿದು ಬೇರೆಡೆ ಸಾಗಿಸಲು ತಾಲೂಕು ಆಡಳಿತ  ಪ್ರಯತ್ನ  ಮಾಡಿದ್ರೂ ಗೂಳಿಗಳನ್ನು ಸೆರೆ ಹಿಡಿಯಲು ಆಗಿರಲಿಲ್ಲ. ಹೀಗಾಗಿ ಗೂಳಿಗಳಿಗೆ ಈಗ  ವಿಷವಿಟ್ಟು ಕೊಲ್ಲಲಾಗಿದೆ.

     

    ಗೂಳಿಗಳ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ರೈತರು ನೂರಾರು ಸಂಖ್ಯೆಯಲ್ಲಿ ಗೂಳಿಗಳನ್ನು ನೋಡಲು ಆಗಮಿಸುತ್ತಿದ್ದಾರೆ. ಸಾಮೂಹಿಕವಾಗಿ ಕೊಲೆಯಾಗಿರುವ ಗೂಳಿಗಳ ದೃಶ್ಯ ಮನಕಲಕುವಂತಿದೆ. ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರನ್ನು ಹಿಡಿದು ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.