Tag: bull Race

  • ಹೋರಿ ತಿವಿದು ಯುವಕ ಸಾವು

    ಹೋರಿ ತಿವಿದು ಯುವಕ ಸಾವು

    ಶಿವಮೊಗ್ಗ: ಹೋರಿ ತಿವಿದು ಯುವಕ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಯುವಕ ಪುನೀತ್ ಆಚಾರ್ (19) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.  ಇದನ್ನೂ ಓದಿ: ನಿಖಿಲ್ ಮಂಡ್ಯ ಕಣದಿಂದ ಹಿಂದೆ ಸರಿದಿದ್ದೇಕೆ?

    ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್‌ ಆಚಾರ್‌ ಶಿಕಾರಿಪುರ ಪಟ್ಟಣದ ಹಾಸ್ಟೆಲ್‌ನಲ್ಲಿದ್ದುಕೊಂಡು ಐಟಿಐ ಓದುತ್ತಿದ್ದ.ಹೋರಿ ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಪುನೀತ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಪುನೀತ್‌ ಸಾವನ್ನಪ್ಪಿದ್ದಾನೆ.

    ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಇಳಿದ ಎಸ್‌ಟಿ ಸೋಮಶೇಖರ್‌

     

  • ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು

    ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು

    ಹಾವೇರಿ: ಜನರ ಕೇಕೆ, ಸಿಳ್ಳೆಗಳ ಸುರಿಮಳೆಯ ನಡುವೆ ಅಲಂಕಾರಗೊಂಡಿದ್ದ ಒಂದೊಂದೇ ಹೋರಿಗಳು ಗೆಲುವು ನನ್ನದೇ ಅಂತಾ ಮಿಂಚಿನ ಓಟ ಪ್ರದರ್ಶಿಸುತ್ತಿದ್ದ ದೃಶ್ಯಗಳು ಹಾವೇರಿ ತಾಲೂಕು ದೇವಿಹೊಸೂರು ಗ್ರಾಮದಲ್ಲಿ ಕಂಡುಬಂದಿತು.

    ಕೊಬ್ಬರಿ ಹಾರ, ಪೀಪಿ, ಬಲೂನ್ ಸರಗಳನ್ನು ಹಾಕಿಕೊಂಡು ಶರವೇಗದಲ್ಲಿ ಓಡುತ್ತಿದ್ದ ಹೋರಿ ಓಟ ನೋಡುವುದೇ ನೆರೆದಿದ್ದ ಜನರಿಗೆ ಕಣ್ಣಿಗೆ ಹಬ್ಬವಾಗಿತ್ತು. ದೇವಿಹೊಸೂರು ಗ್ರಾಮದ ಗೆಳೆಯ ಬಳಗದವರು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಸುಮಾರು ಹತ್ತು ವರ್ಷಗಳಿಂದ ಇಂತಹ ಸ್ಪರ್ಧೆ ನಡೆಸಲಾಗುತ್ತಿದೆ.

    ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ 400ಕ್ಕೂ ಅಧಿಕ ಹೋರಿಗಳು ಸ್ಪರ್ಧೆಗೆ ಬಂದಿದ್ದವು. ಹಿಂಗಾರು ಬಿತ್ತನೆ ನಂತರ ರೈತರಿಗೆ ಸ್ವಲ್ಪ ಬಿಡುವು ಇರುವುದರಿಂದ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಗೆ ಶಿವಮೊಗ್ಗ, ಶಿಕಾರಿಪುರ, ಹಾವೇರಿ, ಬ್ಯಾಡಗಿ ಸೇರಿದಂತೆ ವಿವಿಧ ಭಾಗಗಳಿಂದ ಹೋರಿ ಹಿಡಿಯುವುದಕ್ಕೆ ಯುವಕರ ದಂಡೆ ಆಗಮಿಸಿತ್ತು.

    ಹೇಗಿತ್ತು ಹೋರಿಗಳ ಗತ್ತು?:
    ಮೈಕಟ್ಟು ತುಂಬಿಕೊಂಡಿದ್ದ ಹೋರಿಗಳು ಅಲಂಕಾರಗೊಂಡು ಕಣಕ್ಕೆ ಇಳಿದಿದ್ದವು. ನನ್ನ ತಂಟೆಗೆ ಬರಬೇಡ ಬಿಟ್ಟುಬಿಡು ಅಂತಾ ಗುರಾಯಿಸಿ ಯಾರ ಕೈಗೂ ಸಿಗದಂತೆ ಓದುತ್ತಿದ್ದವು. ಶರ ವೇಗದಲ್ಲಿ ಓಡುವ ಹೋರಿಗಳ ಹಿಂದೆ ಯುವಕರ ದಂಡು ಹಾಜರ ಇರುತ್ತಿತ್ತು. ಬಿದ್ದು, ಎದ್ದು ಸಾಹಸದ ಮೂಲಕ ಹೋರಿ ಹಿಡಿಯುವ ಯುವಕರು ಹರಸಾಹಸ ಪಡುತ್ತಿದ್ದರು. ಆದರೂ ಯಾರ ಕೈಗೂ ಹೋರಿಗಳು ಕಾಲುಕಿಳೂತ್ತಿದ್ದವು.

    ಈ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಬಹುಮಾನ ಇಲ್ಲದಿದ್ದರೂ ಹೋರಿಗಳು ಭರ್ಜರಿಯಾಗಿ ಓಡಿಸಲಾಗುತ್ತದೆ. ಹೋರಿ ಹಿಡಿಯಲು ಯುವಕರ ಹರಸಾಹಸ, ಕೈಗೆ ಸಿಗದೇ ಓಡುವ ಹೋರಿಗಳ ದೃಶ್ಯಗಳು ನೆರೆದಿದ್ದ ಜನರಿಗೆ ಸಖತ್ ಮನರಂಜನೆ ನೀಡುತ್ತದೆ. ಜನರೂ ಸಹ ಕೇಕೆ, ಸಿಳ್ಳೆಗಳ ಮೂಲಕ ಹೋರಿಗಳನ್ನ ಮತ್ತಷ್ಟು ಹುರಿದುಂಬಿಸುತ್ತಾರೆ.

    ಹೋರಿ ತಯಾರಿ ಹೇಗಿರುತ್ತೆ?:
    ಸ್ಪರ್ಧೆಗೆ ಅಂತಲೇ ಮಾಲೀಕರು ತಮ್ಮ ಹೋರಿಗಳಿಗೆ ಗೋಧಿ ನುಚ್ಚು, ಜೋಳ, ಹಿಂಡಿ ಸೇರಿದಂತೆ ವಿವಿಧ ಆಹಾರ ನೀಡುತ್ತಾರೆ. ಹೋರಿಗಳನ್ನು ಕಟ್ಟು ಮಸ್ತಾಗಿ ತಯಾರು ಮಾಡುತ್ತಾರೆ. ಬಲೂನ್, ಪೀಪಿ, ಕೊಬ್ಬರಿ ಹಾರ, ಜೂಲಾ ಸೇರಿದಂತೆ ವಿವಿಧ ವಸ್ತುಗಳಿಂದ ಹೋರಿಯನ್ನು ಅಲಂಕರಿಸಿ ಸ್ಪರ್ಧೆಗೆ ಅಣಿ ಮಾಡಿರುತ್ತಾರೆ. ಸಂಘಟಕರು ಹೋರಿ ಹೆಸರುಗಳನ್ನು ಕೂಗುತ್ತಿದ್ದಂತೆ ಹೋರಿಗಳನ್ನು ಅಖಾಡಕ್ಕೆ ಮಾಲೀಕರು ಬಿಡುತ್ತಾರೆ.

    ಅಖಾಡದಲ್ಲಿ ಬಿಡುತ್ತಿದ್ದಂತೆ ಹೋರಿಗಳು ಧೂಳೆಬ್ಬಿಸಿಕೊಂಡು ಒಂದಕ್ಕಿಂತ ಒಂದು ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಭರ್ಜರಿಯಾಗಿ ಓಡಿದವು. ಯುವಕರು ಹೋರಿ ಹಿಡಿಯುದಕ್ಕೆ ಪ್ರಯತ್ನಿಸಿದರೂ ಯಾರ ಕೈಗೂ ಸಿಗದಂತೆ ಗೆಲುವಿನ ದಡ ಮುಟ್ಟಿದವು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಓಡುವ ಹೋರಿಗಳು ಯಾರ ಕೈಗೂ ಸಿಗದಂತೆ ಒಂದು ನಿಮಿಷದಲ್ಲಿ ಗೆಲುವಿನ ದಡ ಮುಟ್ಟಬೇಕು. ಒಂದು ವೇಳೆ ಹೋರಿಯನ್ನು ಯಾರಾದರೂ ಹಿಡಿದರೆ ಅಂತಹ ಹೋರಿಯನ್ನ ಸ್ಪರ್ಧೆಯಿಂದ ಔಟ್ ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv