Tag: Bull Competition

  • ರಾಜ್ಯಮಟ್ಟದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು – 10 ಕ್ಕೂ ಹೆಚ್ಚು ಜನರಿಗೆ ಗಾಯ

    ರಾಜ್ಯಮಟ್ಟದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು – 10 ಕ್ಕೂ ಹೆಚ್ಚು ಜನರಿಗೆ ಗಾಯ

    ಹಾವೇರಿ: ರಾಜ್ಯಮಟ್ಟದ ಹೋರಿ ಸ್ಪರ್ಧೆ (Bull Competition) ನಡೆಯುತ್ತಿದ್ದ ವೇಳೆ ಕೊಬ್ಬರಿ ಹೋರಿ (Bull) ತಿವಿದು ಯುವಕನೊಬ್ಬ ಸಾವನ್ನಪ್ಪಿದ್ದು, 10 ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಮಂಜುನಾಥ್ ಚಳ್ಳಕ್ಕನವರ (27) ಎಂದು ಗುರುತಿಸಲಾಗಿದೆ. ಮಂಜುನಾಥ್ ಸಂಗೂರು ಗ್ರಾಮದ ನಿವಾಸಿಯಾಗಿದ್ದು, ರಾಜ್ಯಮಟ್ಟದ ಹೋರಿ ಹಬ್ಬವನ್ನು ವೀಕ್ಷಿಸಲು ತೆರಳಿದ್ದ. ಹೋರಿ ಹಬ್ಬವನ್ನು ನೋಡುತ್ತಿದ್ದ ವೇಳೆ ಹೋರಿ ತಿವಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪ್ರೇಯಸಿಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಾಕಿದ ಪ್ರಿಯಕರ – 15 ದಿನದ ಬಳಿಕ ಪ್ರಕರಣ ಬೆಳಕಿಗೆ

    ಮಂಜುನಾಥ್‌ನ ಹೊಟ್ಟೆಯ ಎಡಭಾಗಕ್ಕೆ ಹೋರಿ ತಿವಿದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಯುವಕನ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತನ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಕಾಗಿನೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    Live Tv
    [brid partner=56869869 player=32851 video=960834 autoplay=true]

  • ಹೋರಿ ತಿವಿದು ನಾಲ್ಕೈದು ಮಂದಿಗೆ ಗಾಯ- ಇಬ್ಬರು ಗಂಭೀರ

    ಹೋರಿ ತಿವಿದು ನಾಲ್ಕೈದು ಮಂದಿಗೆ ಗಾಯ- ಇಬ್ಬರು ಗಂಭೀರ

    ಹಾವೇರಿ: ಹೋರಿ ತಿವಿದು ನಾಲ್ಕೈದು ಜನರಿಗೆ ಗಾಯವಾಗಿದ್ದು, ಇನ್ನಿಬ್ಬರು ಗಂಭೀರವಾಗಿರುವ ಘಟನೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ನಿನ್ನೆ ಕೊಬ್ಬರಿ ಹೋರಿ ಬೆದರಿಸೋ ಸ್ಪರ್ಧೆ ನಡೆದಿದೆ. ಈ ವೇಳೆ ಮೈಲಾರಪ್ಪ ಗಜ್ಜಿ 58 ವರ್ಷ ಎಂಬಾತ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಜೆಡಿಎಸ್‍ಗೆ MLC ಸಿ.ಆರ್ ಮನೋಹರ್ ಗುಡ್‍ಬೈ – ಡಿ. 2ಕ್ಕೆ ಕಾಂಗ್ರೆಸ್ ಸೇರಲು ನಿರ್ಧಾರ

    ಹೋರಿ ಹಬ್ಬ ನೋಡಲು ನಿಂತಿದ್ದ ಮೈಲಾರಪ್ಪ ಹಾಗೂ ಹೋರಿ ಮುಂದೆ ಬಂದವನ ಮೇಲೆ ಅಟ್ಯಾಕ್ ಮಾಡಿ ಕೊಂಬಿನಿಂದ ತಿವಿದು, ಮೇಲಕ್ಕೆತ್ತಿ ಹಾಕಿವೆ. ಹಬ್ಬ ನೋಡಲು ಬಂದಿದ್ದವರಿಗೂ ಹೋರಿ ತಿವಿದು ಗಾಯಗೊಳಿಸಿವೆ. ಹೋರಿ ಬೆದರಿಸುವ ಹಬ್ಬದಲ್ಲಿ ಎರಡು ಹೋರಿಗಳು ಗಾಯಗೊಂಡಿವೆ. ಅಖಾಡಕ್ಕೆ ಬಿಟ್ಟ ನಂತರ ಮರಳಿ ಜನರ ಮೇಲೆ ಜಿಗಿದು ಅಖಾಡದಿಂದ ಹೊರಗೋಡಿದ್ದರಿಂದ ಈ ದುರ್ಘಟನೆ ನಡೆದಿದೆ.

    ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಾರ್ಯಕ್ರಮ ವೀಕ್ಷಣೆಗೆ ಬಂದವನಿಗೆ ತಿವಿದ ಹೋರಿ

    – ಸಾವು ಮುಚ್ಚಿ ಹಾಕಲು ಯತ್ನಿಸಿದ ಜನ

    ಹಾವೇರಿ: ಉತ್ತರ ಕರ್ನಾಟಕದಲ್ಲಿ ಜಾನಪದ ಕ್ರೀಡೆ ಅಂದ್ರೆ ಅದು ಹೋರಿ ಓಡಿಸುವ ಸ್ಪರ್ದೆ. ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯನ್ನ ಮೀರಿಸುವಂತೆ ನಮ್ಮ ರಾಜ್ಯದಲ್ಲಿ ಹೋರಿ ಬೆದರಿಸವು ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯನ್ನ ನೋಡಲು ಬಂದ ಯುವಕನಿಗೆ ಹೋರಿ ತಿವಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ.

    ಮೃತ ಯುವಕನನ್ನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದ ನಿವಾಸಿ 19 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಬಿ.ಎಸ್ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಮಾಸಣಗಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನ ವೀಕ್ಷಣೆ ಮಾಡಲು ಬಂದಿದ್ದ. ಅರುಣ್ ಅಖಾಡದಲ್ಲಿ ನಿಂತಿದ್ದ. ಆ ವೇಳೆಯಲ್ಲಿ ಹೋರಿ ಅಡ್ಡಾ-ದಿಡ್ಡಿಯಾಗಿ ಓಡಿ ಬಂದು ಯುವಕನಿಗೆ ಕೊಂಬಿನಿಂದ ಬಲವಾಗಿ ತಿವಿದಿದೆ. ಬಲವಾಗಿ ತಿವಿದ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.

    ಕೊಬ್ಬರಿ ಹೋರಿಗಳನ್ನ ಸ್ಪರ್ಧೆಗಾಗಿ ಭರ್ಜರಿ ತಯಾರಿ ಮಾಡಿರುತ್ತಾರೆ. ಎತ್ತಿನ ಮಾಲೀಕ ಸ್ಪರ್ದೆಯಲ್ಲಿ ಭಾಗವಹಿಸೋ ಎತ್ತುಗಳನ್ನ ಕಟ್ಟು ಮಸ್ತಾಗಿ ಜನರ ಕೈಗೆ ಸಿಗದಂತೆ ಓಡುವ ಬಗ್ಗೆ ತರಬೇತಿ ನೀಡಿರುತ್ತಾರೆ. ಎತ್ತುಗಳನ್ನ ಹಿಡಿಯಲು ಪ್ರಯತ್ನಿಸೋ ವೇಳೆ ಎತ್ತು ಯಾರ ಕೈಗೂ ಸಿಗದಂತೆ ಓಡುವಾಗ ಕೆಲ ಸಣ್ಣಪುಟ್ಟ ಅವಾಂತರಗಳು ಸಂಭವಿಸುತ್ತವೆ. ಮಾಸಣಗಿ ಗ್ರಾಮದಲ್ಲಿ ಪ್ರಾರಂಭವಾದ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ಸಂಜೆ ವೇಳೆ ವೇಳೆ ಹೋರಿ ಬೆದರಿಸುವ ಸ್ಪರ್ಧೆ ರಂಗು ಪಡೆದಿತ್ತು. ಅಖಾಡದಲ್ಲಿ ಓಡಿ ಬಂದ ಹೋರಿ ಕೊಂಬಿನಿಂದ ತಿವಿದ್ದರಿಂದ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.

    ಇಂತಹ ಘಟನೆಗಳು ನಡೆಯಬಾರದು ಅನ್ನೋ ಉದ್ದೇಶಕ್ಕಾಗಿ ಜಿಲ್ಲಾಡಳಿತ ಈ ಸ್ಪರ್ಧೆಗಳಿಗೆ ಅನುಮತಿ ನೀಡಿರುವುದಿಲ್ಲ. ಜಾನಪದ ಕ್ರೀಡೆಯ ಅಭಿಮಾನಕ್ಕಾಗಿ ಗ್ರಾಮಸ್ಥರು ಹಾಗೂ ಯುವಕರು ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು. ಯುವಕ ಅರುಣ್ ಮೃತಪಟ್ಟ ವಿಷಯ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಅನುಮತಿ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ ಸಾವು-ನೋವುಗಳನ್ನ ತಪ್ಪಿಸಬಹುದಾಗಿದೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ತಿವಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

    ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದ ನಿವಾಸಿಯಾದ 45 ವರ್ಷದ ರೇವಣಗೌಡ ಪಾಟೀಲ ಮೃತ ವ್ಯಕ್ತಿ. ಸವಣೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಎಪಿಎಂಸಿ ಆವರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಪಟ್ಟಣದ ವೀರಭದ್ರೇಶ್ವರ ಭಕ್ತ ಮಂಡಳಿ ಈ ಹೋರಿ ಸ್ಪಧೆಯನ್ನು ಏರ್ಪಡಿಸಿತ್ತು. ರೇವಣಗೌಡ ಅವರು ಸವಣೂರು ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದರು.

    ಸ್ಪರ್ಧೆಯನ್ನು ನೋಡುವಾಗ ಹೋರಿಯೊಂದು ನೇರವಾಗಿ ರೇವಣಗೌಡರ ಹೊಟ್ಟೆಗೆ ತಿವಿದಿದೆ. ತೀವ್ರವಾಗಿ ಗಾಯಗೊಂಡ ರೇವಣಗೌಡರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ರೇವಣಗೌಡರು ಸಾವನ್ನಪ್ಪಿದ್ದಾರೆ.

    ಕಾರ್ಯಕ್ರಮ ಆಯೋಜಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಆರೋಪದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.