Tag: bul bul film

  • ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್

    ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್

    ‘ಬುಲ್ ಬುಲ್’ ಬೆಡಗಿ ರಚಿತಾ ರಾಮ್ (Rachita Ram) ಅವರು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟು 12 ವರ್ಷಗಳು ಕಳೆದಿವೆ. ಹಲವಾರು ಪಾತ್ರಗಳಿಂದ ರಂಜಿಸಿ ಮನಗೆದ್ದಿರೋ ನಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

    ಪ್ರಸ್ತುತ ರಚಿತಾ ರಾಮ್ ಅವರು ಜೀ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ ಜಡ್ಜ್ ಆಗಿದ್ದಾರೆ. ಶೋನಲ್ಲಿ ರವಿಚಂದ್ರನ್ ಜೊತೆ ರಚಿತಾ ಕೂಡ ಮುಂದಾಳತ್ವ ವಹಿಸಿದ್ದಾರೆ. ಈ ವೇದಿಕೆಯಲ್ಲಿ ರಚಿತಾ ಸಿನಿಮಾ ಜರ್ನಿಯ ಕೊಡುಗೆ ಬಗ್ಗೆ ರವಿಚಂದ್ರನ್ ಕೊಂಡಾಡಿದ್ದಾರೆ. ಈ ವೇಳೆ, ರಚಿತಾಗೆ ದರ್ಶನ್ ಕಳುಹಿಸಿರುವ ಸಂದೇಶ ವೇದಿಕೆಯಲ್ಲಿ ಪ್ಲೇ ಮಾಡಿದ್ದಾರೆ. ನಮ್ಮ ‘ಬುಲ್ ಬುಲ್’ ಎಲ್ಲರನ್ನು ಹೀಗೆ ರಂಜಿಸಲಿ ಎಂದು ಮನಸಾರೆ ಹಾರೈಸಿದ್ದಾರೆ. ಆಗ ದರ್ಶನ್ ವಾಯ್ಸ್ ಕೇಳ್ತಿದ್ದಂತೆ ರಚಿತಾ ರಾಮ್ ಭಾವುಕರಾಗಿದ್ದಾರೆ.

     

    View this post on Instagram

     

    A post shared by Zee Kannada (@zeekannada)

    ದರ್ಶನ್‌ಗೆ ಜೋಡಿಯಾಗಿ ಸಿನಿಮಾ ರಂಗಕ್ಕೆ ‘ಬುಲ್ ಬುಲ್’ (Bul Bul) ಮೂಲಕ ಎಂಟ್ರಿ ಕೊಟ್ಟರು. ಹೀಗಾಗಿ ದರ್ಶನ್ ಮೇಲೆ ರಚಿತಾಗೆ ಅಪಾರ ಅಭಿಮಾನ ಮತ್ತು ಗೌರವವಿದೆ.  ʼಭರ್ಜರಿ ಬ್ಯಾಚುಲರ್ಸ್’ ತಂಡದ ಸರ್ಪ್ರೈಸ್ ಮತ್ತು ದರ್ಶನ್ ಹಾರೈಕೆ ನಟಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?

    ಚಿತ್ರರಂಗಕ್ಕೆ ಬಂದು 12 ವರ್ಷವಾದ್ರೂ ಇಂದಿಗೂ ಚಾರ್ಮ್ ಉಳಿಸಿಕೊಂಡಿರುವ ರಚಿತಾಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ. ಹೀಗೆ ಮತ್ತಷ್ಟು ಸಿನಿಮಾಗಳ ಮೂಲಕ ರಂಜಿಸಲಿ ಎಂಬುದು ಅಭಿಮಾನಿಗಳ ಆಶಯ.

  • ಸಾಯೋವರೆಗೂ ದರ್ಶನ್‌ಗೆ ಚಿರಋಣಿ: ರಚಿತಾ ರಾಮ್

    ಸಾಯೋವರೆಗೂ ದರ್ಶನ್‌ಗೆ ಚಿರಋಣಿ: ರಚಿತಾ ರಾಮ್

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ದರ್ಶನ್‌ರನ್ನು (Darshan) ನೆನಪಿಸಿಕೊಂಡಿದ್ದಾರೆ. ‘ಬುಲ್ ಬುಲ್’ ಅಂತ ತಮಗೆ ಟೈಟಲ್ ಕೊಟ್ಟಿದ್ದಕ್ಕೆ ದರ್ಶನ್‌ಗೆ ಯಾವಾಗಲೂ ಋಣಿ ಆಗಿರುತ್ತೇನೆ ಎಂದಿರುವ ರಚಿತಾ, ಜೀವ ಇರೋತನಕ ನಾನು ‘ಬುಲ್ ಬುಲ್’ (Bul Bul) ಆಗಿಯೇ ಇರುತ್ತೇನೆ ಎಂದಿದ್ದಾರೆ. ಜೊತೆಗೆ ದರ್ಶನ್ ಅಭಿಮಾನಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

    ‘ಭರ್ಜರಿ ಬ್ಯಾಚುಲರ್ ಸೀಸನ್ 2’ನಲ್ಲಿ ರಕ್ಷಕ್ ಬುಲೆಟ್ ಅವರು ದರ್ಶನ್ ‘ಬುಲ್ ಬುಲ್’ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ರಕ್ಷಕ್ ಬುಲೆಟ್‌ಗೆ ರಮೋಲಾ ಸಾಥ್ ನೀಡಿದ್ದರು. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ನೋಡಿದಂಗೆ ಆಯ್ತು ಎನ್ನುತ್ತಲೇ ಸಿನಿಮಾ ಮಾಡಿದ್ದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಮಾ.14ಕ್ಕೆ ರನ್ಯಾ ಬೇಲ್ ಭವಿಷ್ಯ

    ದರ್ಶನ್ ಸೇರಿದಂತೆ ‘ಬುಲ್ ಬುಲ್’ ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಚಿತಾ ರಾಮ್, ದರ್ಶನ್ ಎಲ್ಲ ಸಿನಿಮಾಗಳೂ ಹೀರೋ ಬೇಸ್ ಹೆಸರುಗಳಿರುತ್ತವೆ. ಆದರೆ ಫಸ್ಟ್ ಟೈಮ್ ಹೀರೋಯಿನ್ ಬೇಸ್ ಟೈಟಲನ್ನು ‘ಬುಲ್ ಬುಲ್’ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ಹೇಳಿಕೊಂಡಿದ್ದಾರೆ. ‘ಬುಲ್ ಬುಲ್’ ಹೆಸರಿನಿಂದಲೇ ನಾನು ಗುರುತಿಸಿಕೊಂಡಿದ್ದೇನೆ. ನನ್ನನ್ನು ಸಿನಿಮಾ ಬಂದ ಕೆಲ ವರ್ಷ ಮಾತ್ರವಲ್ಲ ಈಗಲೂ ‘ಬುಲ್ ಬುಲ್’ ಅಂತಾನೆ ಜನ ಕರೆಯುತ್ತಾರೆ. ನಾನು ಇರೋವರೆಗೂ, ನನ್ನ ಉಸಿರಿರುವವರೆಗೂ ನನ್ನನ್ನು ‘ಬುಲ್ ಬುಲ್’ ಅಂತ ಕರೆದರೆ ನನಗೆ ಖುಷಿ ಎಂದು ರಚಿತಾ ಹೇಳಿದ್ದಾರೆ. ಈ ವೇಳೆ, ದರ್ಶನ್ ಅಭಿಮಾನಿಗಳಿಗೆ ನಮಸ್ಕಾರ ಮಾಡಿ ತಮ್ಮ ಧನ್ಯವಾದ ತಿಳಿಸಿದ್ದಾರೆ. ಆಗ ರಚಿತಾ ಭಾವುಕರಾಗಿದ್ದನ್ನು ನೋಡಬಹುದು.

    ಅಂದಹಾಗೆ, 2013ರಲ್ಲಿ ‘ಬುಲ್ ಬುಲ್’ ಸಿನಿಮಾ ಮೂಲಕ ದರ್ಶನ್‌ಗೆ ನಾಯಕಿಯಾಗಿ ರಚಿತಾ ರಾಮ್ ನಟನೆಗೆ ಪಾದಾರ್ಪಣೆ ಮಾಡಿದರು. ಸಿನಿಮಾ ರಿಲೀಸ್ ಆಗಿ ಹಲವು ವರ್ಷಗಳು ಕಳೆದರೂ ರಚಿತಾ ಮೇಲಿನ ಅಭಿಮಾನಿಗಳ ಕ್ರೇಜ್ ಕಮ್ಮಿಯಾಗಿಲ್ಲ. ಬೇಡಿಕೆಯ ನಟಿಯಾಗಿ ಸದ್ದು ಮಾಡುತ್ತಿದ್ದಾರೆ.

  • ಮಳೆ ಜೊತೆ ರಚಿತಾ ರಾಮ್ ತುಂಟಾಟ

    ಮಳೆ ಜೊತೆ ರಚಿತಾ ರಾಮ್ ತುಂಟಾಟ

    ಸ್ಯಾಂಡಲ್ವುಡ್ (Sandalwood) ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸದ್ಯ ಮಳೆಗಾಲವನ್ನ ಎಂಜಾಯ್ ಮಾಡ್ತಿದ್ದಾರೆ. ಮಳೆ ಅಂದರೆ ತನಗೆ ಇಷ್ಟ ಎಂದು ರಚಿತಾ, ಮಳೆ ಜೊತೆಗಿನ ತುಂಟಾದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ರಾ ಹನಿ ರೋಸ್?‌ ನಟಿ ಸ್ಪಷ್ಟನೆ

    ‘ಬುಲ್ ಬುಲ್’ (Bul Bul Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಬಗೆ ಬಗೆಯ ಪಾತ್ರಗಳ ಮೂಲಕ ರಚ್ಚು ರಂಜಿಸಿದ್ದಾರೆ. ‘ವೀರಂ’ (Veeram)  ಸಿನಿಮಾ ನಂತರ 5ಕ್ಕೂ ಹೆಚ್ಚು ಸಿನಿಮಾಗಳು ರಚಿತಾ ರಾಮ್ (Rachitha Ram) ಬ್ಯುಸಿಯಾಗಿದ್ದಾರೆ. ರಚಿತಾ ಕನ್ನಡದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದ ಜೊತೆ ತೆಲುಗಿನಲ್ಲೂ ಡಿಂಪಲ್‌ ಕ್ವೀನ್‌ ರಚ್ಚು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಓ ಮೈ ಗಾಡ್ 2’ ಚಿತ್ರಕ್ಕೆ 20 ಕಡೆ ಕತ್ತರಿಯ ಜೊತೆಗೆ ‘ಎ’ ಸರ್ಟಿಫಿಕೇಟ್

    ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ವರುಣನ ರೌದ್ರ ಅವತಾರ ತಾಳಿದ್ದಾನೆ. ಸಹಜವಾಗಿ ಮಳೆ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಯುವತಿಯರಿಗೆ ಮಳೆ ಜೊತೆ ಆಟವಾಡೋದಂದ್ರೆ ಭಾರೀ ಇಷ್ಟ. ಇದೀಗ ನಟಿ ರಚಿತಾ ರಾಮ್ ಕೂಡ ಮಳೆ ಜೊತೆ ಆಟವಾಡಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಮಳೆ ಅಂದರೆ ಇಷ್ಟ ಎಂದು ನಟಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಳೆ ತಲೆಯ ಮೇಲೆ ಬೀಳುವಾಗ ಓಡಿದ್ದಾರೆ. ಅದಕ್ಕೆ ಅಭಿಮಾನಿಯೊಬ್ಬ, ಮಳೆ ಅಂದರೆ ಇಷ್ಟ ಅಂತಾ ಹೇಳೋದ್ಯಾಕೆ, ಮಳೆ ಬಂದರೆ ಓಡೋದ್ಯಾಕೆ ಎಂದು ಕಾಲೆಳೆದಿದ್ದಾರೆ.

    ವೀರಂ ಸಿನಿಮಾ ಬಳಿಕ ಮ್ಯಾಟ್ನಿ(Matnee), ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಔರ್ ಹೇಟ್ ಮಿ, ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿದೆ. ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ. ಸಂಜು ವೆಡ್ಸ್ ಗೀತಾ 2ನಲ್ಲಿ ರಚಿತಾ ರಾಮ್ ಪಾತ್ರ ಭಿನ್ನವಾಗಿದೆ ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ರಚಿತಾ ರಾಮ್ ಭೇಟಿ

    ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ರಚಿತಾ ರಾಮ್ ಭೇಟಿ

    ಸ್ಯಾಂಡಲ್‌ವುಡ್ (Sandalwood) ನಟಿ ರಚಿತಾ ರಾಮ್ (Rachitha Ram) ಅವರು ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೈವ ಕೊರಗಜ್ಜಗೆ ಪೂಜೆ ಸಲ್ಲಿಸಿ ರಚಿತಾ ರಾಮ್ ಪ್ರಾರ್ಥನೆ ಮಾಡಿದ್ದಾರೆ.

    ‘ಬುಲ್ ಬುಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್, ಕನ್ನಡದ ಟಾಪ್ ನಟರ ಜೊತೆ ನಟಿಸಿದ್ದಾರೆ. ತೆಲುಗಿನ ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ‘ಮ್ಯಾಟ್ನಿ’, ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ನಟಿ ರಚಿತಾ ಕೊರಗಜ್ಜ ಕ್ಷೇತ್ರಕ್ಕೆ (Koragajja) ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಲ್ಲ – ನಟ ಡಾಲಿ

    ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜ ಕ್ಷೇತ್ರ ಕ್ಷೇತ್ರದಲ್ಲಿ ಮುಂಬರುವ ಚಿತ್ರಗಳಾದ ಮ್ಯಾಟ್ನಿ,ಬ್ಯಾಡ್ ಮ್ಯಾನರ್ಸ್ ಯಶಸ್ಸಿಗೆ ಪ್ರಾರ್ಥಸಿ, ರಚಿತಾ ರಾಮ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಚಿತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಕೊರಗಜ್ಜ ದೈವದಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಅನ್ನಿಸಿತು. ಈ ಕ್ಷೇತ್ರ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡು ತುಂಬಾ ಚೆನ್ನಾಗಿದೆ. ನನ್ನ ಮುಂಬರುವ ಚಿತ್ರಗಳ ಬಗ್ಗೆ ಪ್ರಾರ್ಥಿಸಿದ್ದೇನೆ.