Tag: Building Workers

  • ಸೌಲಭ್ಯಗಳ ಜೊತೆ ಕಟ್ಟಡ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಬೇಕು: ಕೆ.ಮಹಾಂತೇಶ್

    ಸೌಲಭ್ಯಗಳ ಜೊತೆ ಕಟ್ಟಡ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಬೇಕು: ಕೆ.ಮಹಾಂತೇಶ್

    ಬಳ್ಳಾರಿ: ಕಟ್ಟಡ ಕಾರ್ಮಿಕ ಸಂಘಗಳ ಹೋರಾಟ ಮತ್ತು ಕಲ್ಯಾಣ ಮಂಡಳಿ ಅಧಿಕಾರಿಗಳ ನಿರಂತರ ಪ್ರಯತ್ನದ ಫಲವಾಗಿ ಇದೀಗ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ಕಾರ್ಮಿಕರು ಪಡೆದಿದ್ದಾರೆ. ಆದರೆ ಕಾರ್ಮಿಕರು ಕೇವಲ ಸೌಲಭ್ಯಗಳಿಗಾಗಿ ಮಾತ್ರ ಸಂಘಟಿತರಾಗದೇ ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ತಮ್ಮ ಕುಟುಂಬದ ಸಾಮಾಜಿಕ ಭದ್ರತೆಗಾಗಿ ತಮ್ಮ ವಾಸ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರ ಸಂಘಗಳನ್ನು ರಚಿಸಿಕೊಳ್ಳಬೇಕು ಎಂದು CWFI ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಆಗ್ರಹಿಸಿದ್ದಾರೆ.


    ಇಂದು ಹೊಸಪೇಟೆ ತಾಲೂಕಿನ ಕಟ್ಟಡ ಕಾರ್ಮಿಕರ 6 ನೇ ಸಮ್ಮೇಳನ ಅಂಬೇಡ್ಕರ್ ಭವನದ ಗೌತಮ ಬುದ್ಧ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಕೆ.ಮಹಾಂತೇಶ್, ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಕಾರ್ಮಿಕ ಸಂಘ ಜೊತೆ ಕಾರ್ಮಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿಗಳೆನ್ನದೆ ಶ್ರಮಿಸಿದ್ದಾರೆ ಇದರಿಂದಾಗಿ ಸಾವಿರಾರು ಕಾರ್ಮಿಕರು ಹಸಿವಿನ ದವಡೆಯಿಂದ ಪಾರಾಗಿದ್ದಾರೆ. ಇದು ಅಭಿನಂದನಾರ್ಹ ಕೆಲಸ ಆದರೆ ಕೊರೊನಾ ಅಲೆಗಳಲ್ಲಿ ನಿರುದ್ಯೋಗಿಗಳಾಗಿರುವ ಲಕ್ಷಾಂತರ ಕಾರ್ಮಿಕರಿಗೆ ಸರ್ಕಾರ ಉದ್ಯೋಗ ಭದ್ರತೆ ಮತ್ತು ಸೌಲಭ್ಯಗಳ ಅಸಮರ್ಪಕ ಸಿಗದೇ ಇರುವ ಕಾರಣದಿಂದಾಗಿ ಕಾರ್ಮಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಣದ ವಿಚಾರಕ್ಕೆ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್‌!


    ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಅಲ್ತಫಾ ಹಾಗೂ ಮಾರಿಕಾಂಬಾ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಹೊಸಪೇಟೆ ಭಾಗದಲ್ಲಿ ಇಲಾಖೆವತಿಯಿಂದ ಸಾವಿರಾರು ರೇಷನ್‍ಕಿಟ್‍ಗಳನ್ನು ಇತರೆ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಜೊತೆಗೆ ಲಕ್ಷಾಂತರ ರೂಪಾಯಿ ಪರಿಹಾರವನ್ನು ಕೊಡಿಸಲು ಶ್ರಮಿಸಲಾಗಿದೆ ಆದರೆ ತಾಂತ್ರಿಕ ಕಾರಣದಿಂದಾಗಿ ಇನ್ನೂ ನೂರಾರು ಅರ್ಜಿಗಳ ವಿಲೆವಾರಿಯಾಗಿಲ್ಲ ಇದನ್ನು ಇತ್ಯರ್ಥಪಡಿಸಿ ಪರಿಹಾರ ಒದಗಿಸಲಾಗುವುದು ಎನ್ನುವ ಭರವಸೆ ನೀಡಿದರು.

    ಕಾರ್ಮಿಕ ನಿರೀಕ್ಷಕರಾದ ಭೂಪಾಲ್ ಹಾಗೂ ಅಶೋಕ್, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಭಾಸ್ಕರ ರೆಡ್ಡಿ, ತಾಲೂಕು ಅಧ್ಯಕ್ಷರಾದ ನಾಗರತ್ನಮ್ಮ, ಕೂಡ್ಲಿಗಿ ತಾಲೂಕು ಸಿಐಟಿಯು ಮುಖಂಡರು ವಕೀಲರಾದ ವಿರುಪಾಕ್ಷ, ಮತ್ತು ರಾಘವೇಂದ್ರ, ಜಿಲ್ಲಾ ಅಧ್ಯಕ್ಷರಾದ ಯಲ್ಲಾಲಿಂಗ, ತಾಲೂಕು ಅಧ್ಯಕ್ಷರಾದ ಗೋಪಾಲ, ಕಾರ್ಯದರ್ಶಿ ರಾಮಾಂಜಿ ಹಾಗೂ ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ವಿಮಾ ಪ್ರತಿನಿಧಿಗಳ ದಕ್ಷಿಣ ವಲಯ ಅಧ್ಯಕ್ಷ ಎಲ್.ಮಂಜುನಾಥ್, ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮಹಿಳಾ ಮುಖಂಡರಾದ ಭೀಯಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಜನಧನ್ ಖಾತೆಗಳಿಂದ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದೆ: ಎಚ್‍ಡಿಕೆ

  • ಕಟ್ಟಡ ಕಾರ್ಮಿಕರ ಕಾರ್ಡ್ ದುರುಪಯೋಗವಾದರೆ ಕ್ರಮ: ಸಿಎಂ

    ಕಟ್ಟಡ ಕಾರ್ಮಿಕರ ಕಾರ್ಡ್ ದುರುಪಯೋಗವಾದರೆ ಕ್ರಮ: ಸಿಎಂ

    ದಾವಣಗೆರೆ: ಕಟ್ಟಡ ಕಾರ್ಮಿಕರ ಕಾರ್ಡ್ ದುರುಪಯೋಗವಾದರೆ ಕ್ರಮ ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

    ವಿವಿಧ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆಂದು ಹೊನ್ನಾಳಿ ಹೆಲಿಪ್ಯಾಡ್ ಗೆ ಇಂದು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ವರದಿಗಾರರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ನಕಲಿ ಕಾರ್ಡ್ ಗಳು ಸೃಷ್ಟಿಯಾಗಿವೆ ಎಂದು ಸಿಎಂ ಗಮನಕ್ಕೆ ತಂದಾಗ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಇದನ್ನು ತಪ್ಪಿಸಲೆಂದೇ ಈ-ಶ್ರಮ ಎಂಬ ಪೋರ್ಟಲ್ ಪ್ರಾರಂಭಿಸಿ ಆಧಾರ್ ಕಾರ್ಡ್ ಲಿಂಕ್ ಕಲ್ಪಿಸಲಾಗಿದೆ. ದುರುಪಯೋಗವಾಗಿರುವ ಪ್ರಕರಣಗಳಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜನಪರ ಸರ್ಕಾರ: ಬೊಮ್ಮಯ

    ಗಡಿ ಭಾಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಶೇ.1ಕ್ಕಿಂತ ಕಡಿಮೆಯಾಗುತ್ತಿದೆ. ಶೀಘ್ರವಾಗಿ ತಜ್ಞರ ಸಭೆ ನಡೆಯಲಿದ್ದು, ಶಾಲೆಗಳ ಪುನರಾರಂಭ ಸೇರಿದಂತೆ ನಿರ್ಬಂಧಗಳನ್ನು ಸಡಿಲಗೊಳಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

  • ಆಹಾರ ಕಿಟ್ ಅವ್ಯವಹಾರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

    ಆಹಾರ ಕಿಟ್ ಅವ್ಯವಹಾರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

    – ಬೆಂಗಳೂರಿನಲ್ಲಿ ಕಾರ್ಮಿಕರ ಬಂಧನ ತೀವ್ರ ಖಂಡನೆ

    ಬೆಂಗಳೂರು: ಇಂದು ರಾಜ್ಯ ವಿವಿಧ ಕಟ್ಟಡ ಕಾರ್ಮಿಕ ಸಂಘಗಳು ಆಹಾರ ಕಿಟ್ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್ ಎರಡನೇ ಅಲೆ ಪರಿಹಾರ ಹತ್ತು ಸಾವಿರಕ್ಕೆ ಆಗ್ರಹಿಸಿ ಬೆಂಗಳೂರಿನ ಕಲ್ಯಾಣ ಮಂಡಳಿ ಮತ್ತು ರಾಜ್ಯದ ವಿವಿದ ಜಿಲ್ಲೆ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಬೆಳೆಗ್ಗೆಯೇ 40 ಕ್ಕೂ ಅಧಿಕ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಕಾರ್ಮಿಕರು ಮಂಡಳಿ ಎದುರು ಪ್ರತಿಭಟನೆ ನಡೆಸಿದರು.

    ರಾಜ್ಯದ ಬೆಂಗಳೂರು, ತುಮಕೂರು, ಕೋಲಾರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಂಡ್ಯ ಧಾರವಾಡ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರತಿಭಟನೆಗಳು ನಡೆದವು.

    ಬೆಂಗಳೂರಿನಲ್ಲಿ ಬೆಳಗ್ಗೆ ಕಲ್ಯಾಣ ಮಂಡಳಿ ಮುಂದೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ 40 ಕಾರ್ಮಿಕರನ್ನು ಬಂಧಿಸಿದ್ದು, ತೀವ್ರ ಖಂಡನಾರ್ಹ ಬಳಿಕ ಮತ್ತೆ ಕಾರ್ಮಿಕರ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಪೊಲೀಸರು ಬಂಧಿಸಲು ಮುಂದಾದರು.

    ಇಂದು ಬೆಳೆಗ್ಗೆ 40 ಜನ ಕಾರ್ಮಿಕರನ್ನು ಬಂಧಿಸಿದ ಬಳಿಕಾವೂ ಸಮಾವೇಶಗೊಂಡ ನೂರಾರು ಕಾರ್ಮಿಕರು ಪೊಲೀಸರ ಕ್ರಮವನ್ನು ಖಂಡಿಸಿದರು. ಮತ್ತೆ ಸಮಾವೇಶಗೊಂಡ ಕಾರ್ಮಿಕ ನಾಯಕರು ಮತ್ತು ಕಾರ್ಮಿಕರನ್ನು ಬಂಧಿಸಲು ಮುಂದಾದಾಗ ಅದನ್ನು ಪ್ರತಿಭಟಿಸಿ ಕಾರ್ಮಿಕರು ಸಮನ್ವಯ ಸಮಿತಿ ನಾಯಕರ ನೇತೃತ್ವದಲ್ಲಿ ಮಂಡಳಿ ಮುಂದೆ ಪ್ರತಿಭಟನೆ ಯಶಸ್ವಿಯಾಗಿ ಪ್ರತಿಭಟನೆ ನಡೆಸಿದರು. ನಮ್ಮ ಪತ್ರಿಭಟನೆಗೆ ಮಣಿದು ಪೊಲೀಸರು ಅವಕಾಶ ನೀಡಲೇಬೇಕಾಯಿತು. ಮತ್ತು ಮಂಡಳಿ ಸಿಇಓ ಆಗಮಿಸಿ ಮನವಿ ಸ್ವೀಕರಿಸಬೇಕಾಯಿತು. ಬಳಿಕ ಒಂದೂವರೆ ಗಂಟೆ ಸಮನ್ವಯ ಸಮಿತಿ ಮುಖಂಡರ ಜೊತೆ ಮಾತುಕತೆ ನಡೆಸಿದರು.

    ಬಾಕಿ ಇರುವ ಕೋವಿಡ್ ಪರಿಹಾರ, ಆಹಾರ ಕಿಟ್ ಹಂಚಿಕೆಯನ್ನು ಶಾಸಕರಿಗೆ ವಹಿಸಿರುವುದು, ವೈದ್ಯಕೀಯ ಪರಿಹಾರ, ಮನೆಗೆ ಧನಸಹಾಯ ಪಿಂಚಣಿ ಸೇರಿ ಇತ್ಯಾದಿ ಅಂಶಗಳ ಕುರಿತು ತ್ವರಿತಗತಿಯಲ್ಲಿ ಕ್ರಮವಹಿಸಲು ಸಮನ್ವಯ ಸಮಿತಿ ಮುಖಂಡರು ಆಗ್ರಹಿಸಿದರು. ರಾಜ್ಯಾದ್ಯಂತ ಜುಲೈ 12 ರ ಹೋರಾಟವನ್ನು ಯಶಸ್ವಿ ಗೊಳಿಸಿದ ಕಾರ್ಮಿಕರಿಗೆ ಸಮನ್ವಯ ಸಮಿತಿ ಅಭಿನಂದನೆ ಸಲ್ಲಿಸಿದೆ. ಇದನ್ನೂ ಓದಿ: ಹೋರಿಯ ಹುಟ್ಟು ಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

    ಬೆಂಗಳೂರಿನಲ್ಲಿ ಹೋರಾಟದ ನೇತೃತ್ವವನ್ನು ಸಮನ್ವಯ ಸಮಿತಿಯ ಮುಖಂಡರಾದ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ ಎನ್.ಪಿ ಸ್ವಾಮಿ ,ನಾಗನಾಥ್, ಅಪ್ಪಣ್ಣ, ಲಿಂಗರಾಜ್, ಲಕ್ಷ್ಮೀ, ಲಕ್ಮಣ್ ಕುಮಾರ್, ವಿನಯ್ ಶ್ರೀನಿವಾಸ್, ಲೀಲಾವತಿ ಧನಶೇಖರ್, ಹನುಮೇಶ್,ಶ್ರೀಕಾಂತ, ಹರೀಶಕುಮಾರ್ ಹನುಮಂತರಾವ್ ಹವಾಲ್ದಾರ್ ಸೇರಿ ಹಲವರು ವಹಿಸಿದ್ದರು. ಮತ್ತು ಮಂಡಳಿ ಸಿ.ಇ.ಓ ಜೊತೆ ನಡೆದ ಮಾತುಕತೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮಗಳ ಸಾವಿನ ಸುದ್ದಿ ಕೇಳಿ ತಂದೆ ಹೃದಯಾಘಾತದಿಂದ ಸಾವು

  • ಗೂಡ್ಸ್ ವಾಹನದಲ್ಲಿ ಬಂದ ಕಾರ್ಮಿಕರು ಕ್ಯಾರಂಟೈನ್‍ಗೆ ಶಿಫ್ಟ್

    ಗೂಡ್ಸ್ ವಾಹನದಲ್ಲಿ ಬಂದ ಕಾರ್ಮಿಕರು ಕ್ಯಾರಂಟೈನ್‍ಗೆ ಶಿಫ್ಟ್

    ಚಿಕ್ಕಮಗಳೂರು: ಕಳೆದ ಎರಡು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಗದಗ ಜಿಲ್ಲೆಯಿಂದ ಮಡಿಕೇರಿಯ ಕುಶಾಲನಗರಕ್ಕೆ ಬಂದಿದ್ದ ಕಾರ್ಮಿಕರು ಕೆಲಸ ಇಲ್ಲವೆಂದು ಗೂಡ್ಸ್ ವಾಹನದಲ್ಲಿ ಗದಗಕ್ಕೆ ತೆರಳುತ್ತಿದ್ದರು. ಈ ವೇಳೆ ಚಿಕ್ಕಮಗಳೂರು ನಗರ ಪೊಲೀಸರು ರಕ್ಷಿಸಿ ನಗರದ ನರಿಗುಡ್ಡನಹಳ್ಳಿ ಸರ್ಕಲ್‍ನಲ್ಲಿರುವ ಬಿಸಿಎಂ ಹಾಸ್ಟೆಲ್ಲಿನ ಕ್ವಾರಂಟೈನ್‍ಗೆ ದಾಖಲಿಸಿದ್ದಾರೆ.

    ಹಾಸನ ಮಾರ್ಗದಿಂದ ಬಂದ ವಾಹನವನ್ನು ಹಿರೇಮಗಳೂರು ಚೆಕ್‍ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸರು ಚೆಕ್ ಮಾಡಿದ್ದು, ಗಾಡಿಯಲ್ಲಿ ಆರು ಜನ ಇದ್ದರು. ಎಲ್ಲರೂ ಗದಗ ಜಿಲ್ಲೆಯವರಾಗಿದ್ದು, ತಮ್ಮ ಊರಿಗೆ ತೆರಳುತ್ತಿದ್ದರು. ಎಲ್ಲರನ್ನೂ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಗದಗದಿಂದ ಬಂದಿದ್ದ ಇವರು, ಎಲ್ಲಿ ಕೆಲಸ ಸಿಗುತ್ತದೆಯೋ ಅಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದರು. ಕಳೆದ 26 ದಿನಗಳಿಂದ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆ ಎಲ್ಲೂ ಕೆಲಸ ಸಿಗದ್ದಕ್ಕೆ ಊರಿಗೆ ಮರಳುತ್ತಿದ್ದರು.

    ಒಂದು ಕಡೆ ಕೆಲಸವಿಲ್ಲ, ಇನ್ನೊಂದೆಡೆ ದುಡಿದ ಹಣವೆಲ್ಲವೂ ಕರ್ಚಾದ ಹಿನ್ನೆಲೆ ಊರಿಗೆ ಹೊರಟಿದ್ದರು. ಕುಶಾಲನಗರದ ಬಸ್ ನಿಲ್ದಾಣದ ಬಳಿ ಬಂದಾಗ, ಅಲ್ಲಿಗೆ ಬಂದ ಗೂಡ್ಸ್ ವಾಹನದ ಚಾಲಕ ಚಿಕ್ಕಮಗಳೂರಿಗೆ ಹೋಗುತ್ತಿದ್ದೇನೆ, ಅಲ್ಲಿಂದ ಬೇರೆ ಗಾಡಿಯಲ್ಲಿ ನಿಮ್ಮೂರಿಗೆ ಹೋಗುವಿರಂತೆ ಎಂದು ಹೇಳಿ ಒಬ್ಬೊಬ್ಬರಿಂದ ತಲಾ 100 ರೂಪಾಯಿಗೆ ಮಾತನಾಡಿಕೊಂಡು ಕರೆದುಕೊಂಡು ಬಂದಿದ್ದ. ಇದೀಗ ವಾಹನದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದು, ಲಾರಿ ಹಾಗೂ ಚಾಲಕನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.