Tag: Building Collapses

  • ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    – ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

    ನವದೆಹಲಿ: ಈಶಾನ್ಯ ದೆಹಲಿಯ ಸೀಲಾಮ್‌ಪುರದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು (Building Collapses) ಬಿದ್ದ ಅವಘಡ ಸಂಭವಿಸಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ (Delhi’s Welcome area) ಜನತಾ ಮಜ್ದೂರ್ ಕಾಲೋನಿಯಲ್ಲಿ ಶನಿವಾರ‌ ಜುಲೈ 12 ರಂದ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಗಾಗಲೇ 14 ತಿಂಗಳ ಮಗು ಸೇರಿ 8 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 6ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 7 ಅಗ್ನಿಶಾಮಕ ದಳದವರಿಂದ (Fire Tenders) ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಬೆಳಗ್ಗೆ 7 ಗಂಟೆಗೆ ಕಟ್ಟಡ ಕುಸಿದ ಬಗ್ಗೆ ನಮಗೆ ಕರೆ ಬಂದಿದೆ. ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಏಳು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಿಲುಕಿರುವವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

    ದೆಹಲಿಯಲ್ಲಿ ಶುಕ್ರವಾರವೂ ಕಟ್ಟಡ ಕುಸಿದಿತ್ತು. ವಾರದಲ್ಲಿ 2 ಭೂಕಂಪ ಸಂಭವಿಸಿತ್ತು. ಇದೀಗ ಶನಿವಾರವೂ ಕಟ್ಟಡ ಕುಸಿತ ಆಗಿದ್ದು, ಸಾಲು ಸಾಲು ಅನಾಹುತಗಳು ರಾಷ್ಟ್ರರಾಜಧಾನಿಯಲ್ಲಿ ಸಂಭವಿಸುತ್ತಿದ್ದು, ಜನರ ನಿದ್ದೆಗೆಡುವಂತೆ ಮಾಡಿದೆ. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

  • ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ

    ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ

    ಹೈದರಾಬಾದ್‌: ತೆಲಂಗಾಣದ ಭದ್ರಾದ್ರಿ ಕೊಥಗುಡೆಂ (Bhadrachalam of Bhadradri) ಜಿಲ್ಲೆಯ ಭದ್ರಾಚಲಂನಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದಿದ್ದು (Building Collapses), ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಭದ್ರಾಚಲಂ ಎಎಸ್‌ಪಿ ವಿಕ್ರಾಂತ್ ಕುಮಾರ್ ಸಿಂಗ್, ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ

    ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿದಿದ್ದು, ಇಬ್ಬರು ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆಯಿದೆ. ನಮಗೆ ಮಾಹಿತಿ ಬಂದ ತಕ್ಷಣ ನಾವು ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ಕೂಡಲೇ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ತಂಡಗಳನ್ನು ಸಂಪರ್ಕಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

    ಕಾರ್ಯಾಚರಣೆ ಸಂರ್ಭದಲ್ಲಿ ಇಬ್ಬರು ಸಿಕ್ಕಿದ್ದಾರೆ. ಮತ್ತೊಬ್ಬರು ಹೆಣ್ಣಿನ ಧ್ವನಿ ಕೇಳುತ್ತಿದೆ. ಶೀಘ್ರದಲ್ಲೇ ಆಕೆಯನ್ನೂ ರಕ್ಷಿಸುತ್ತೇವೆ. ಅಲ್ಲಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ ಎಂದು ಎಎಸ್ಪಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ

  • 3 ಅಂತಸ್ಥಿನ ಕಟ್ಟಡ ಕುಸಿದು 10 ಮಂದಿ ಸಾವು – ಸಿಎಂ ಯೋಗಿ ಸಂತಾಪ

    3 ಅಂತಸ್ಥಿನ ಕಟ್ಟಡ ಕುಸಿದು 10 ಮಂದಿ ಸಾವು – ಸಿಎಂ ಯೋಗಿ ಸಂತಾಪ

    ಲಕ್ನೋ: ಭಾರೀ ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡ ಕುಸಿದು (Meerut Building Collapses) ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್‌ನ ಜಾಕಿರ್ ಕಾಲೋನಿಯಲ್ಲಿ ನಡೆದಿದೆ.

    ಇದುವರೆಗೆ ಅಧಿಕಾರಿಗಳು ಒಟ್ಟು ಐವರನ್ನು ಅವಶೇಷಗಳಿಂದ ರಕ್ಷಿಸಿದ್ದಾರೆ. ಬಲಿಯಾದ 10 ಮಂದಿಯಲ್ಲಿ 1 ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

    ಮಳೆಯಿಂದಾಗಿ ಬಿಲ್ಡಿಂಗ್‌ ಕುಸಿದಿದೆ ಎಂದು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ತಿಳಿಸಿದ್ದಾರೆ. ಭಾರೀ ಮಳೆಯ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ, ಪ್ರೀ ಪ್ಲ್ಯಾನ್ಡ್‌ ದರೋಡೆ – ಬೆಚ್ಚಿಬಿದ್ದ ರಾಯಚೂರು ಜನ

    ಸುಮಾರು 35 ವರ್ಷಗಳಷ್ಟು ಹಳೆಯದಾದ ಕಟ್ಟಡವೂ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಘಟನೆಯ ದೃಶ್ಯಗಳನ್ನು ಗಮನಿಸಿದ್ದು, ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಇದೇ ಸೆಪ್ಟೆಂಬರ್ 7 ರಂದು, ಲಕ್ನೋದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡದ ಗೋಡೌನ್‌ಗಳು ಮತ್ತು ಮೋಟಾರ್ ವರ್ಕ್‌ಶಾಪ್ ಕುಸಿದು 8 ಜನ ಸಾವನ್ನಪ್ಪಿದರು. 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: Kolkata Horror | ಸಾಕ್ಷಿ ನಾಶ, FIR ದಾಖಲಿಸಲು ವಿಳಂಬ; ಸಂದೀಪ್‌ ಘೋಷ್‌ ಸೇರಿ ಸಿಬಿಐನಿಂದ ಇಬ್ಬರ ಬಂಧನ

  • ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೊಬ್ಬನ ರಕ್ಷಣೆ

    ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೊಬ್ಬನ ರಕ್ಷಣೆ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚಾಗ್ತಿವೆ. ಇಂದು (ಸೋಮವಾರ) ಸಹ ನಗರದ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕನೊಬ್ಬ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.

    ನಗರದ ಬಿಟಿಎಂ ಲೇಔಟ್‌ನ ಸುದ್ದಗುಂಟೆಪಾಳ್ಯ ಪೋಲಿಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡದ ಪಾಯ ತೆಗೆಯುವ ವೇಳೆ ಪಕ್ಕದ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಗೋಡೆ ಕುಸಿದಿದೆ. ಪರಿಣಾಮವಾಗಿ ಇಬ್ಬರು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು.

    ಇಬ್ಬರಲ್ಲಿ ಬಿಹಾರ ಮೂಲದ 20 ವರ್ಷದ ರಂಜನ್ ಎಂಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಘಡಕ್ಕೆ ಪ್ರಮುಖ ಕಾರಣವೆಂದರೇ ಸೆಲ್ಲರ್ ತೆಗೆಯಲು ಆಳ ಗುಂಡಿ ತೆಗೆಯುತ್ತಿದ್ದಾಗ ಪಕ್ಕದಲ್ಲಿರೋ ಅಪಾರ್ಟ್ಮೆಂಟ್‌ನ ಕಾಂಪೌಡ್‌ಗೆ ಜೆಸಿಬಿಯಿಂದ ಟಚ್ ಆಗಿದ್ದು, ಗೋಡೆ ಕುಸಿದಿದೆ. ಈ ಕಾಂಪೌಂಡ್ ಗೋಡೆಯ ಮಣ್ಣು ಕಾರ್ಮಿಕರ ಮೇಲೆ ಬಿದ್ದಿದೆ. ಮಣ್ಣಿನಲ್ಲಿ ಬಿದ್ದಿದ್ದ ಓರ್ವನನ್ನು ರಕ್ಷಿಸಿದ್ದು, ಮತ್ತೊಬ್ಬ ಮೃತಪಟ್ಟಿದ್ದಾನೆ‌.

    ಈ ಬಗ್ಗೆ ಎಸ್‌ಜಿ ಪಾಳ್ಯ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೊಸ ಕಟ್ಟಡ ಕಟ್ಟಲು ಪಾಯ ತೆಗೆಯುತ್ತಿದ್ದ ಗುತ್ತಿಗೆದಾರನ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಕದ ಅಪಾರ್ಟ್‌ಮೆಂಟ್ ಕೂಡ ಸೇಫ್‌ಯಿಲ್ಲ ಎನಿಸುತ್ತೆ ಎಂದು ಡಿಸಿಪಿ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.