Tag: Builders

  • ಬೆಂಗಳೂರು, ಮೈಸೂರಿನ ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಮೇಲೆ ಇಡಿ ದಾಳಿ – 11 ಸ್ಥಳಗಳಲ್ಲಿ ಶೋಧ

    ಬೆಂಗಳೂರು, ಮೈಸೂರಿನ ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಮೇಲೆ ಇಡಿ ದಾಳಿ – 11 ಸ್ಥಳಗಳಲ್ಲಿ ಶೋಧ

    ಬೆಂಗಳೂರು/ಮೈಸೂರು: ಬೆಂಗಳೂರು (Bengaluru) ಹಾಗೂ ಮೈಸೂರಿನ (Mysuru) ಪ್ರತಿಷ್ಠಿತ ಬಿಲ್ಡರ್‌ಗಳ (Builders) ಮನೆ ಮತ್ತು ಕಚೇರಿಗಳ ಮೇಲೆ ಇ.ಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.

    ಬೆಂಗಳೂರಿನ ಯುಬಿ ಸಿಟಿಯ ಕಿಂಗ್ ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳಲ್ಲಿ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಇದನ್ನೂ ಓದಿ: ರೈತರ ಬೃಹತ್‌ ಪ್ರತಿಭಟನೆ – ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ

    ಸೈಟ್ ಕೊಡಿಸುವುದಾಗಿ ವಂಚನೆ, ಅಕ್ರಮ ವ್ಯವಹಾರ, ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ಸೇರಿದಂತೆ ಹಲವು ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ. ಬಿಲ್ಡರ್‌ಗಳು ಮತ್ತು ಕೆಲ ಕಂಪನಿಗಳ ವಿರುದ್ಧ ಅನೇಕ ಅವ್ಯವಹಾರಗಳು ಕುರಿತು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡಗೆ ಕೋಟಿ ಕೋಟಿ ಹಣ ಕೊಟ್ಟಿದ್ರಾ ಸೌಂದರ್ಯ ಜಗದೀಶ್?

  • ಬೆಂಗಳೂರಿನ 20ಕ್ಕೂ ಹೆಚ್ಚು ಕಡೆ ಐಟಿ ದಾಳಿ

    ಬೆಂಗಳೂರಿನ 20ಕ್ಕೂ ಹೆಚ್ಚು ಕಡೆ ಐಟಿ ದಾಳಿ

    ಬೆಂಗಳೂರು: ಶನಿವಾರ ಬೆಳ್ಳಂಬೆಳಗ್ಗೆ ಐಟಿ (IT Raid) ಅಧಿಕಾರಿಗಳು ಬೇಟೆಗಿಳಿದಿದ್ದು, ಬೆಂಗಳೂರಿನ ಬಿಲ್ಡರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

    ಬಿಲ್ಡರ್‌ಗಳ (Builders) ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಕಡಲ್ಗಳ್ಳರ ದಾಳಿಯಿಂದ 23 ಪಾಕ್‌ ಪ್ರಜೆಗಳ ರಕ್ಷಿಸಿದ ಭಾರತೀಯ ನೌಕಾಪಡೆ

    ಬೆಂಗಳೂರಿನ ಕೆಆರ್ ಪುರಂ, ಕೊಡಿಗೇಹಳ್ಳಿ ಸೇರಿ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ನಂಜುಂಡೇಶ್ವರ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ ಹಲವು ಬಿಲ್ಡರ್ ಕಚೇರಿ, ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಅಪ್ಪನ ಗೆಲುವಿಗೆ ಮಗನ ಪಣ

  • ಬಿಲ್ಡರ್‌ಗಳಿಂದಲೂ ಹಣ ಲೂಟಿ ಆಗ್ತಿದೆ, ಚದರ ಅಡಿಗೆ 100 ರೂ. ಫಿಕ್ಸ್ ಆಗಿದೆ – HDK ಹೊಸ ಬಾಂಬ್

    ಬಿಲ್ಡರ್‌ಗಳಿಂದಲೂ ಹಣ ಲೂಟಿ ಆಗ್ತಿದೆ, ಚದರ ಅಡಿಗೆ 100 ರೂ. ಫಿಕ್ಸ್ ಆಗಿದೆ – HDK ಹೊಸ ಬಾಂಬ್

    ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನಲ್ಲಿ (Bengaluru Development) ಲೂಟಿ ಹೊಡೆಯುತ್ತಿದ್ದಾರೆ. ಬಿಲ್ಡರ್‌ಗಳಿಂದಲೂ (Builders) ಹಣ ಲೂಟಿ ಮಾಡುವ ಕೆಲಸ ಆಗುತ್ತಿದ್ದು, ಚದರ ಅಡಿಗೆ 100 ರೂ. ಕೊಡಬೇಕು ಅಂತ ಫಿಕ್ಸ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮಂತ್ರಿಯೊಬ್ಬರು ಪೆನ್ನು ಪೇಪರ್ ಕೊಡಿ ಅಂತ ಕೇಳಿದ್ದರು. ಪೆನ್ನು ಪೇಪರ್ ಕೊಟ್ಟರೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಲೂಟಿ ಆಗ್ತಿದೆ. ಎರಡೇ ತಿಂಗಳಿಗೆ ಸರ್ಕಾರದ ವಿರೋಧಿ ಅಲೆ ಬಂದಿದೆ. ಈ ನಾಡಿನ ಜನತೆಯ ಬದುಕಿನ ವಿಷಯದಲ್ಲಿ ಜನತೆಯನ್ನ ದಾರಿ ತಪ್ಪಿಸಿದ್ದು ಕಾಂಗ್ರೆಸ್‌ನವರು. ಇವರದ್ದು ಸ್ವಾಭಿಮಾನ ಕಟ್ಟುವ ಗ್ಯಾರಂಟಿ ಯೋಜನೆಗಳಲ್ಲ, ನಾಡಿನ ಜನರನ್ನ ಪುನಃ ಕೈ ಒಡ್ಡಿ ನಿಲ್ಲಿಸೋ ಕೆಲಸ ಈ ಸರ್ಕಾರ ಮಾಡುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಉತ್ತಮ ಆರೋಗ್ಯ, ಶಿಕ್ಷಣ ಕೊಡಬೇಕು. ಇವತ್ತಿನ ದಿನ ರೈತರ ಬದುಕು ಹಾಳಾಗಿದೆ. ಮಳೆ ಆಗಿಲ್ಲ, ಬಿತ್ತನೆ ಮಾಡಿದ್ರೂ ಬೆಳೆ ಬಂದಿಲ್ಲ. ಇದು ನಮ್ಮ ರೈತನ ಸ್ಥಿತಿ. ರೈತರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನ ಕೊಡಬೇಕು. ಆದ್ರೆ ಅನ್ನದಾತನಿಗೆ ಈ ಸರ್ಕಾರ ಏನೂ ಕೊಡುಗೆ ಕೊಟ್ಟಿಲ್ಲ. 150ಕ್ಕೂ ಹೆಚ್ಚು ರೈತ ಕುಟುಂಬದ ಆತ್ಮಹತ್ಯೆ ಆಯ್ತು. ಒಬ್ಬ ಮಂತ್ರಿ ಹಣ ಪಡೆಯೋಕೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ ಕೃಪೆ ತೋರಿದ್ನಾ ವರುಣ? ರಾತ್ರಿ 7ರ ವರೆಗೂ ಮಳೆ ಮುನ್ಸೂಚನೆ ಇಲ್ಲ

    ಒಬ್ಬ ಮಂತ್ರಿ ನನ್ನನ್ನ ಅಣ್ಣ ಅಂತಾರೆ. ನನಗೆ ಇಂತಹ ತಮ್ಮ ಬೇಡ ಅಂದೆ. ಕೊಟ್ಟ ಅಧಿಕಾರ ಉಪಯೋಗ ಮಾಡಿಕೊಳ್ಳಲಿ ಆಗ ತಮ್ಮ ಅಂತ ಒಪ್ಪುತ್ತೇನೆ ಅಂದೆ ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2024ರ ಜಿ20 ಶೃಂಗಸಭೆ ಬ್ರೆಜಿಲ್‌ ದೇಶಕ್ಕೆ ಶಿಫ್ಟ್‌ – ಬ್ರೆಜಿಲ್‌ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ

    ಜನರ ತೀರ್ಮಾನ ಅಚ್ಚರಿಯಾಗಿತ್ತು: ವಿಧಾನಸಭಾ ಚುನಾವಣೆ ಸಮಯದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡಿದೆ. ಸ್ವತಂತ್ರವಾಗಿ ಸರ್ಕಾರ ತರಬೇಕು ಅಂತ ಶ್ರಮ ಹಾಕಿದೆ. ಆದ್ರೆ ನಾಡಿನ ಜನರ ತೀರ್ಮಾನ ಅಚ್ಚರಿ ಫಲಿತಾಂಶ ಕೊಟ್ಟರು. ಈ ಫಲಿತಾಂಶದಿಂದ ಕಾರ್ಯಕರ್ತರು ಸಂಕಷ್ಟಕ್ಕೆ ಒಳಗಾಗಿದ್ದೀರಿ. ನಿಮ್ಮಿಂದ ಇಂದು ಮಹತ್ವದ ತೀರ್ಮಾನ ಆಗಬೇಕು. ನಾಡಿನ ಭವಿಷ್ಯದ ಬದುಕಿಗಾಗಿ ತೀರ್ಮಾನ ಆಗಬೇಕು ಕರೆ ನೀಡಿದ್ದಾರೆ.

    ಇದೇ ವೇಳೆ ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ಮಾಜಿ ಸಿಎಂ, ಕಳೆದ 10 ದಿನಗಳಿಂದ ಆರೋಗ್ಯ ಸಮಸ್ಯೆ ಆಯ್ತು. ಭಗವಂತನ ಪ್ರೇರಣೆಯಿಂದ ನಾನು ಆವತ್ತು ಆಸ್ಪತ್ರೆಗೆ ಸೇರಿದೆ. ನನ್ನ ಜೊತೆ ಇದ್ದ ಸತೀಶ್, ರಘು ನನ್ ನಿತ್ಯ ಕೆಲಸ ನೋಡ್ತಾರೆ. ಸತೀಶ್ ಆವತ್ತು ನನ್ನನ್ನ ಆಸ್ಪತ್ರೆಗೆ ಸೇರಿಸಿದ್ರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ನಿಮ್ಮಮುಂದೆ ಇವತ್ತು ಮಾತಾಡುತ್ತಿದ್ದೇನೆ. ತಂದೆ-ತಾಯಿಯವರ ದೈವರ ಭಕ್ತಿಯಿಂದ ನಾನು ಇವತ್ತು ಉಳಿದಿದ್ದೇನೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಇಬ್ಬರು ಉದ್ಯಮಿಗಳು- ಯಾರ ಆಸ್ತಿ ಎಷ್ಟು?

    ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಇಬ್ಬರು ಉದ್ಯಮಿಗಳು- ಯಾರ ಆಸ್ತಿ ಎಷ್ಟು?

    ಮುಂಬೈ: ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಇಬ್ಬರು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಆದರೆ ಮಾಜಿ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಅವರು ಒಂದು ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

    ಹುರೂನ್ ಸಂಸ್ಥೆಯು ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಮ್ಯಾಕ್ರೋಟೆಕ್ ಡೆವಲಪರ್ಸ್‍ನ ಸಂಸ್ಥಾಪಕ ಮಂಗಲ್ ಪ್ರಭಾತ್ ಲೋಧಾ ದೇಶದ ಅತ್ಯಂತ ಶ್ರೀಮಂತ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದಾರೆ. ಲೋಧಾ ಅವರು 31,930 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಕಳೆದ ವರ್ಷವೂ ಲೋಧಾ ಅವರು ಅಗ್ರಸ್ಥಾನದಲ್ಲಿದ್ದರು.

    ಡಿಎಲ್‍ಎಫ್ ಉಪಾಧ್ಯಕ್ಷ ರಾಜೀವ್ ಸಿಂಗ್ ಅವರು 25,080 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಅವರು ಈ ಬಾರಿ ಒಂದು ಹಂತ ಏರಿಕೆ ಕಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಇದ್ದಾರೆ. ವೀರ್ವಾನಿ ಅವರು 24,750 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

    ಮುಂಬೈ, ದೆಹಲಿ ಮತ್ತು ಬೆಂಗಳೂರಿನ ಉದ್ಯಮಿಗಳು ಈ ಪಟ್ಟಿಯಲ್ಲಿ ಶೇ. 75ರಷ್ಟು ಸ್ಥಾನ ಪಡೆದಿದ್ದಾರೆ. ಮುಂಬೈನ ಹಿರಾನಂದಾನಿ ಸಂಸ್ಥೆಯ ನಿರಂಜನ್ ಹಿರಾನಂದಾನಿ ಟಾಪ್ 10 ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಅವರು 17,030 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಐದು ಹಾಗೂ ಆರನೇ ಸ್ಥಾನದಲ್ಲಿ ಕೇ ರಹೇಜಾ ಸಂಸ್ಥೆಯ ಚಂದ್ರು ರಹೇಜಾ ಹಾಗೂ ಒಬೆರಾಯ್ ರಿಯಾಲಿಟಿ ಸಂಸ್ಥೆಯ ವಿಕಾಸ್ ಒಬೆರಾಯ್ ಸ್ಥಾನ ಪಡೆದಿದ್ದು, ಕ್ರಮವಾಗಿ 15,480 ಕೋಟಿ ರೂ. ಹಾಗೂ 13,910 ಕೋಟಿ ರೂ. ಹೊಂದಿದ್ದಾರೆ.

    ಬೆಂಗಳೂರಿನ ಬಾಗ್ಮನೆ ಡೆವಲಪರ್ಸ್ ಸಂಸ್ಥೆಯ ರಾಜಾ ಬಾಗ್ಮನೆ ಅವರು 9,960 ಆಸ್ತಿ ಹೊಂದಿದ್ದು, 7ನೇ ಸ್ಥಾನದಲ್ಲಿದ್ದಾರೆ. ಹೌಸ್ ಆಫ್ ಹಿರಾನಂದಾನಿ ಸಂಸ್ಥೆಯ ಸುರೇಂದ್ರ ಹಿರಾನಂದಾನಿ 9,720 ಕೋಟಿ ರೂ. (8ನೇ ಸ್ಥಾನ), ರನ್ವಾಲ್ ಡೆವಲಪರ್ಸ್ ಸಂಸ್ಥೆಯ ಸುಭಾಷ್ ರನ್ವಾಲ್ 7,100 ಕೋಟಿ ರೂ. (9ನೇ ಸ್ಥಾನ) ಹಾಗೂ ಪಿರಮಾಲ್ ರಿಯಾಲಿಟಿ ಸಂಸ್ಥೆಯು ಅಜಯ್ ಪಿರಮಾಲ್ 6,560 ಕೋಟಿ ರೂ. (10ನೇ ಸ್ಥಾನ) ಹೊಂದಿದ್ದಾರೆ.

    ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೇಶದ 100 ದೊಡ್ಡ ಉದ್ಯಮಿಗಳ ಒಟ್ಟು ಆಸ್ತಿಯು 2.77 ಲಕ್ಷ ಕೋಟಿ ರೂ. ಆಗಿದೆ. ಈ ವರ್ಷ ಮುಂಬೈ, ದೆಹಲಿ ಮತ್ತು ಬೆಂಗಳೂರಿನ ಮೂರು ನಗರಗಳ ಡೆವಲಪರ್ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯಲ್ಲಿ ಶೇ. 75 ಪಾಲನ್ನು ಹೊಂದಿದ್ದಾರೆ.

    ಮಂಗಲ್ ಪ್ರಭಾತ್ ಲೋಧಾ ಅವರು ಮುಂಬೈ ಘಟಕದ ಬಿಜೆಪಿಯ ಅಧ್ಯಕ್ಷರೂ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಲೋಧಾ ಅವರ ಆಸ್ತಿಯಲ್ಲಿ ಶೇ. 18 ರಷ್ಟು ಏರಿಕೆಯಾಗಿದೆ. ಅವರ ಆಸ್ತಿಯ ಮೌಲ್ಯವು ಉಳಿದ 99 ಜನರ ಒಟ್ಟು ಆಸ್ತಿ ಮೌಲ್ಯದ ಶೇ.12ಕ್ಕೆ ಸಮಾನವಾಗಿದೆ. ಎರಡನೇ ಸ್ಥಾನದಲ್ಲಿರುವ ರಾಜೀವ್ ಸಿಂಗ್ ಅವರ ಆಸ್ತಿಯ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.42 ರಷ್ಟು ಏರಿಕೆ ಕಂಡಿದೆ.

    ಮಹಿಳೆಯರ ಪಟ್ಟಿ:
    ಗೋದ್ರೇಜ್ ಪ್ರಾಪರ್ಟೀಸ್‍ನ ಸ್ಮಿತಾ ವಿ ಕೃಷ್ಣ ಮಹಿಳೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತಾ ವಿ ಕೃಷ್ಣ ಅವರು 3,560 ಕೋಟಿ ರೂ. ಆಸ್ತಿಯನ್ನು ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಡಿಎಲ್‍ಎಫ್ ಸಂಸ್ಥೆಯ ರೇಣುಕಾ ತಲ್ವಾರ್ 2,590 ಕೋಟಿ ರೂ. ಆಸ್ತಿ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಡಿಎಲ್‍ಎಫ್ ಸಂಸ್ಥೆಯ ಪಿಯಾ ಸಿಂಗ್ 2,370 ಕೋಟಿ ರೂ. (4ನೇ ಸ್ಥಾನ), ಎಮಾರ್ ಎಂಜಿಎಫ್ ಸಂಸ್ಥೆಯ ಶಿಲ್ಪಾ ಗುಪ್ತಾ 730 ಕೋಟಿ ರೂ. (5ನೇ ಸ್ಥಾನ), ಸೂಪರ್ ಟೆಕ್ ಸಂಸ್ಥೆಯ ಸಂಗೀತ ಅರೋರಾ 410 ಕೋಟಿ ರೂ. (6ನೇ ಸ್ಥಾನ), ಗೋಪಾಲನ್ ಎಂಟರ್ ಪ್ರೈಸಸ್‍ನ ಎಂ ವಸಂತ್ ಕುಮಾರಿ 310 ಕೋಟಿ ರೂ. (7ನೇ ಸ್ಥಾನ) ಹಾಗೂ ವಾಟಿಕಾ ಸಂಸ್ಥೆಯ ಕಾಂಚನ್ ಭಲ್ಲಾ 300 ಕೋಟಿ ರೂ. (8ನೇ ಸ್ಥಾನ) ಹೊಂದಿದ್ದಾರೆ.