Tag: bufget

  • ಮಹಿಳೆಯರ ಅನುಕೂಲಕ್ಕಾಗಿ ಬೆಂಗ್ಳೂರಿನಲ್ಲಿ 250 ಸುಸಜ್ಜಿತ ‘She Toilet’ ನಿರ್ಮಾಣ

    ಮಹಿಳೆಯರ ಅನುಕೂಲಕ್ಕಾಗಿ ಬೆಂಗ್ಳೂರಿನಲ್ಲಿ 250 ಸುಸಜ್ಜಿತ ‘She Toilet’ ನಿರ್ಮಾಣ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ 20203-24ನೇ ಸಾಲಿನ ಬಜೆಟ್ (Karnataka Budget 2023) ಮಂಡನೆ ಮಾಡುತ್ತಿದ್ದು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂ. ಗಳ ಅನುದಾನ ಘೋಷಿಸಿದರು.

    ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘ She Toilet’ ಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಹೇಳಿದರು.

    ಈ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು ಎಸ್‍ಓಎಸ್ ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ, ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಿಸಲಾಗುವುದು. ಇದನ್ನೂ ಓದಿ: ಬಜೆಟ್: ಸಮಸ್ತ ಕರ್ನಾಟಕ ಜನತೆ ಹೆಸರಲ್ಲಿ ಅರ್ಚನೆ ಮಾಡಿಸಿದ ಸಿಎಂ

    ಒಟ್ಟಿನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 20203-24ನೇ ಸಾಲಿಗೆ 9,698 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    – ಬಜೆಟ್ ನಿರೀಕ್ಷೆಗಳೇನು..?

    ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇಡೀ ದೇಶದ ಜನರು ಆಸೆಗಣ್ಣುಗಳಲ್ಲಿ ಬಜೆಟ್ ನಲ್ಲಿ ಏನಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

    ಒಂದು ಕಡೆ ಐತಿಹಾಸಿಕ ಉದ್ಯೋಗ ನಷ್ಟವಾಗಿದೆ, ಕೃಷಿ ವಲಯ ಪಾತಾಳಕ್ಕೆ ಸಿಲುಕಿದೆ. ಬೆಳೆ ಹಾನಿ, ಬೆಂಬಲ ಬೆಲೆ ಇಲ್ಲದೆ ರೈತ ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಆರ್ಥಿಕ ಹಿನ್ನಡೆ ಆಗಿದೆ. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಇಂದು ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.

    ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೊಯೇಲ್ ಬಜೆಟ್ ಮಂಡಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಆಗದೆ ಕೇವಲ ಲೇಖಾನುದಾನ ಪಡೆಯಲಾಗಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ವಾಪಸ್ ಬಂದಿದ್ದ ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ.

    ಚುನಾವಣಾ ಪೂರ್ವ ಬಜೆಟ್ ನಲ್ಲಿ ರೈತರನ್ನು ಟಾರ್ಗೆಟ್ ಮಾಡಲಾಗಿತ್ತು. ರೈತರ ಖಾತೆಗೆ 6 ಸಾವಿರ ಹಣ ಸೇರಿದಂತೆ ನೌಕರರ ವರ್ಗಕ್ಕೆ 5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಳ ಮಾಡುವ ಘೋಷಣೆ ಮಾಡಲಾಗಿತ್ತು. ಚುನಾವಣೆಯ ಹೊಸ್ತಿಲಲ್ಲಿ ಈ ಮೂಲಕ ಜನಪ್ರೀಯತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈಗ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದು ರಾಷ್ಟ್ರೀಯತೆ ಸೇನೆ ಭದ್ರತೆ, ಯುವಕರು ಮಹಿಳೆಯರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿತ್ತು. ಹಾಗಾಗಿ ಈ ಬಜೆಟ್ ನಲ್ಲಿ ಏನಿರಬಹುದು ಅನ್ನೊ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಇದನ್ನೂ ಓದಿ: ಕನ್ನಡಿಗರ ಬೇಡಿಕೆಗಳೇನು?

    ಇಂದಿನ ಬಜೆಟ್‍ನಲ್ಲಿ ಏನಿರಬಹುದು..?
    ರಕ್ಷಣೆ
    * ರಕ್ಷಣಾ ಇಲಾಖೆ ಸಚಿವರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಸೇನಾ ವಲಯದಲ್ಲಿ ಮಹತ್ವದ ಯೋಜನೆಗಳಿಗೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಬಹುದು
    * ಮತ್ತಷ್ಟು ಯುದ್ಧ ವಿಮಾನಗಳು, ಸೇನಾ ಸಾಮಾಗ್ರಿಗಳ ಖರೀದಿಗೆ ಹಣ ಮೀಸಲಿಡಬಹುದು

    ಕಾರ್ಪೊರೇಟ್
    * ಆರ್ಥಿಕ ಕ್ರಾಂತಿ ಭರವಸೆ ನೀಡಿರುವ ಮೋದಿ ಸರ್ಕಾರ ಈ ಬಾರಿ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬಹುದು
    * ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ. 25 ಇಳಿಸುವ ಮೂಲಕ ಹೆಚ್ಚು ಕೈಗಾರಿಕೆಗೆ ಪ್ರೋತ್ಸಾಹ ನೀಡುವುದು ಈ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದು
    * ಪರ್ಯಾಯ ತೆರಿಗೆಯನ್ನು ಕನಿಷ್ಠ ಶೇ.18.5 ರಿಂದ ಶೇ.15 ಕ್ಕೆ ಕಡಿತಗೊಳಿಸುವುದು
    * ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಿ, ವ್ಯಕ್ತಿಗಳಿಗೆ ವಿನಾಯಿತಿ ನೀಡುವುದು

    ಕೃಷಿ
    * ಕೃಷಿ ವಲಯದಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸಲು ಸಾಲವನ್ನು ಖಾತರಿಪಡಿಸಲು ನಿಧಿಯನ್ನು ಸ್ಥಾಪಿಸುವುದು
    * ಬರಗಾಲ ಸೂಕ್ಷ್ಮತೆ ಅರಿತು ಅಣೆಕಟ್ಟುಗಳು ಮತ್ತು ಕಾಲುವೆಗಳು, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವುದು
    * ನದಿ ಜೋಡಣೆ ಯೋಜನೆ ಪ್ರಸ್ತಾಪ ಆಗಬಹುದು
    * ಬೆಳೆಗಳ ಹಾನಿ ತಪ್ಪಿಸಲು ಶೀತಲ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ
    * ಕಿಸಾಮ್ ಸಮ್ಮಾನ್ ಯೋಜನೆ ವಿಸ್ತರಣೆ
    * ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತುರ್ತು ಸಾಲದ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು
    * ರಸ ಗೊಬ್ಬರ ಹಂಚಿಕೆ ವ್ಯವಸ್ಥೆಯಲ್ಲಿ ಡಿಜಿಟಲೀಕರಣ
    * 60 ವರ್ಷ ಮೆಲ್ಪಟ್ಟ ರೈತರು, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ವ್ಯವಸ್ಥೆ
    * ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಯೋಜನೆ

    ಮೂಲಭೂತ ಸೌಕರ್ಯ ವಲಯ
    * ಬಜೆಟ್ ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಶೇ.10 ರಿಂದ ಶೇ. 15ರಷ್ಟು ಬಂಡವಾಳ ಹೆಚ್ಚಳ
    * ಪಶ್ಚಿಮ ಮತ್ತು ಪೂರ್ವ ಭಾರತವನ್ನು ಸಂಪರ್ಕಿಸುವ ಭಾರತ್ಮಾಲಾ ಯೋಜನೆ ಸೇರಿದಂತೆ ಪ್ರಮುಖ ರಸ್ತೆ ಯೋಜನೆಗಳಿಗೆ ಹೆಚ್ಚಿನ ಅನುದಾನ
    * ಬಜೆಟ್ ನಲ್ಲಿ ಶೇ.10 ರಷ್ಟು ರೈಲ್ವೇ ಹೂಡಿಕೆಗಳನ್ನು ಹೆಚ್ಚಳ

    ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ
    * ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸುವುದು
    * ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬೆಂಬಲಿಸಿ ಮೊಬೈಲ್ ಫೋನ್, ಎಕ್ಸೈಸ್ ಡ್ಯುಟಿ, ಟ್ಯಾಬ್ಲೆಟ್, ಕಂಪ್ಯೂಟರ್ ಗಳ ಸುಂಕ ಕಡಿಮೆಗೊಳಿಸುವುದು
    * ಟೆಲಿಕಾಂ ಸೇವೆಗಳ ಈಗಿರುವ ಶೇ.18 ಜಿಎಸ್‍ಟಿ ದರವನ್ನು ಶೇ.12ಕ್ಕೆ ಕಡಿತಗೊಳಿಸುವುದು

    ರಿಯಲ್ ಎಸ್ಟೇಟ್
    * ವಸತಿ ಸೇರಿದಂತೆ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ವಿಳಂಬವನ್ನು ತಪ್ಪಿಸಲು ಏಕಮುಖ ಕ್ಲಿಯರೆನ್ಸ್ ಒದಗಿಸುವುದು
    * ಹಣಕಾಸು, ಯೋಜನಾ ವೆಚ್ಚವನ್ನು ತಗ್ಗಿಸಲು ರಿಯಲ್ ಎಸ್ಟೇಟ್ ಗೆ ಮೂಲ ಸೌಕರ್ಯ ನೀಡಿ, ಕಡಿಮೆ ವೆಚ್ಚಕ್ಕೆ ಮನೆಗಳು ದೊರೆಯುವಂತೆ ಮಾಡುವುದು
    * ಪ್ರಸ್ತುತ 12 ಪ್ರತಿ ಶತದಿಂದ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಜಿಎಸ್ ಟಿ ದರವನ್ನು ಕಡಿಮೆ ಮಾಡುವುದು
    * ಮನೆ ಖರೀದಿಗೆ ಶೇ.12 ಜಿಎಸ್ಟಿಗೆ ದರವನ್ನು ಕಡಿಮೆ ಮಾಡಿ; ಸ್ಟಾಂಪ್ ಡ್ಯುಟಿ ಕಡಿತಗೊಳಿಸುವುದು

    ವೈದ್ಯಕೀಯ
    * 75 ನೂತನ ಏಮ್ಸ್ ಆಸ್ಪತ್ರೆಗಳ ನಿರ್ಮಾಣ
    * ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ

  • ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಾಜ್ಯ ಬಜೆಟ್ ಗುರುವಾರ ಮಂಡನೆಯಾಗಿದ್ದು, ಎಚ್‍ಡಿಕೆ ಬಜೆಟ್‍ನಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ ಕರಾವಳಿಗೆ ಬಿಡಿಗಾಸು ನೀಡದಿದ್ದರಿಂದ ಕರಾವಳಿ ಭಾಗದ ಬಿಜೆಪಿ ಶಾಸಕರು ಸಿಡಿದೆದ್ದಿದ್ದಾರೆ.

    ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು ಕಪ್ಪುಪಟ್ಟಿ ಧರಿಸಿ ದೋಸ್ತಿ ಸರ್ಕಾರದ ಬಜೆಟ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

    ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ತಾಯಿ ಸ್ಥಾನದಲ್ಲಿ ಇರುವಂತೆ ಸರ್ಕಾರ ಇದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಕರಾವಳಿ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರು. ಮೀನುಗಾರರ ರಕ್ಷಣೆಗೆ ಸರ್ಕಾರ ಅನುದಾನ ನೀಡಿಲ್ಲ. ವರಹಾ ಯೋಜನೆಗೆ ಹಣ ನೀಡಿಲ್ಲ. ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ನೀಡಿಲ್ಲ. ವಿದ್ಯುತ್, ಪೆಟ್ರೋಲ್ ದರ ಏರಿಸಿದ್ರು. ಸಿಎಂ ಕುಮಾರಸ್ವಾಮಿ ಕೇವಲ 37 ಶಾಸಕರಿಗೆ ಮಾತ್ರ ಬಜೆಟ್ ನೀಡಿದ್ದಾರೆ ಅಂತ ಕೋಟಾ ಗರಂ ಆದ್ರು.

    ಬಜೆಟ್ ಉತ್ತರ ವೇಳೆ ಕರಾವಳಿ ಕರ್ನಾಟಕ ಭಾಗಕ್ಕೆ ಅನುದಾನ ನೀಡಲೇಬೇಕು. ಇಲ್ಲದಿದ್ದಲ್ಲಿ ಸದನದ ಒಳಗೆ- ಹೊರಗೆ ಹಾಗೂ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಅಂತ ಅವರು ತಮ್ಮ ಆಕ್ರೋಶ ಹೊರಹಾಕಿ ಎಚ್ಚರಿಸಿದ್ದಾರೆ.

    ಇದೇ ವೇಳೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಿಎಂ ನಿನ್ನೆ ನೀಡಿದ ಬಜೆಟ್ ಕೇವಲ ರಾಮನಗರ, ಹಾಸನದ ಜಿಲ್ಲಾ ಪಂಚಾಯ್ತಿ ಬಜೆಟ್. ಉಡುಪಿ, ದಕ್ಷಿಣ ಕನ್ನಡದ ಜನತೆಯ ಹಿತವನ್ನು ಸರ್ಕಾರ ಕಾಯಲಿಲ್ಲ. ನಮ್ಮ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಮೆಡಿಕಲ್ ಕಾಲೇಜ್ ನೀಡುವಂತೆ ಮನವಿ ಮಾಡಿದ್ವಿ. ಆದ್ರೆ ಕರಾವಳಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಮತ ನೀಡಿಲ್ಲ ಅಂತ ಬಜೆಟ್ ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಬಿಡೋದಿಲ್ಲ. ಈ ಬಜೆಟ್ ನಾವು ಒಪ್ಪಲು ರೆಡಿ ಇಲ್ಲ ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ನಮ್ಮ ದೇವಸ್ಥಾನ ಕೇವಲ ಅಡ್ಡ ಬೀಳಲು ಇರೋದಲ್ಲ. ನಿಮಗೆ ನಮಸ್ಯೆ ಆದಾಗ ದೇವರ ದರ್ಶನಕ್ಕೆ ನಮ್ಮ ಜಿಲ್ಲೆಗೆ ಬರ್ತಿರಾ. ಆದ್ರೆ ಅಭಿವೃದ್ಧಿಗೆ ಅನುದಾನ ನೀಡಲು ಯಾಕೆ ಹಿಂದೇಟು ಹಾಕಿದ್ದೀರಾ. ಸರ್ಕಾರ ಬಜೆಟ್ ಉತ್ತರದಲ್ಲಿ ಕರಾವಳಿ ಭಾಗಕ್ಕೆ ಒತ್ತು ನೀಡಬೇಕು. ನಮ್ಮ ಬೇಡಿಕೆ ಈಡೇರಿಸದೇ ಇದ್ರೆ ಕರಾವಳಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.