Tag: Buffalo

  • ಕೇಂದ್ರದ ಜೊತೆ ರಾಜ್ಯ ಸರ್ಕಾರಕ್ಕೂ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್

    ಕೇಂದ್ರದ ಜೊತೆ ರಾಜ್ಯ ಸರ್ಕಾರಕ್ಕೂ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್

    ಬೆಂಗಳೂರು: ಭಾರತ್ ಬಂದ್ ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೇ ರಾಜ್ಯ ಸರ್ಕಾರಕ್ಕೂ ಅನ್ವಯಿಸುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

    ತೈಲ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿರುವ ಭಾರತ್ ಬಂದ್ ವೇಳೆ ಎಮ್ಮೆ ಮೇಲೆ ಬಂದು ವಿನೂತನವಾಗಿ ವಾಟಾಳ್ ನಾಗರಾಜ್ ಪ್ರತಿಭಟಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಭಾರತ್ ಬಂದ್ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ, ಇದು ರಾಜ್ಯ ಸರ್ಕಾರಕ್ಕೂ ಅನ್ವಯಿಸುತ್ತದೆ. ಮೊದಲು ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ಸೆಸ್ ದರವನ್ನು ಕಡಿಮೆ ಮಾಡಬೇಕು. ಒಂದು ವೇಳೆ ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡಿದ್ದೇ ಆದರೆ, ನಿಮ್ಮ ವಿರುದ್ಧವು ಪ್ರತಿಭಟಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ತೈಲ ದರ ಹಾಗೂ ಅಡುಗೆ ಅನಿಲಗಳ ದರಗಳನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಬಂದ್ ಮಾಡಲು ನಿರ್ಧಾರ ಮಾಡಿದ್ದೆವು. ಆದರೆ ಅಷ್ಟೋತ್ತಿಗೆ ಕಾಂಗ್ರೆಸ್ ಭಾರತ್ ಬಂದ್‍ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 2 ಸಾವಿರ ಕನ್ನಡಪರ ಸಂಘಟನೆಗಳು ಕಾಂಗ್ರೆಸ್ ಕರೆ ನೀಡಿದ್ದ ಬಂದ್‍ಗೆ ಬೆಂಬಲ ನೀಡಿವೆ ಎಂದು ಹೇಳಿದರು.

    ಇಂದು ಎಮ್ಮೆ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ತೈಲ ಏರಿಕೆ ನೀತಿಯನ್ನು ವಿರೋಧಿಸಿದ್ದೇವೆ. ಕೇಂದ್ರ ಪೆಟ್ರೋಲ್, ಡಿಸೇಲ್ ಹಾಗೂ ಅನಿಲ ದರಗಳಿಗೆ ವೈಜ್ಞಾನಿಕ ರೀತಿಯ ಬೆಲೆ ನಿಗದಿಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕುಸಿದು ಬಿದ್ದಿದೆ. ಅವರದ್ದು ಪೈಸಾ ಸರ್ಕಾರ, ಇದೇ ರೀತಿ ಮುಂದುವರಿದರೆ ದೇಶದಲ್ಲಿ ದಂಗೆ ಏಳುತ್ತದೆ ಎಂದು ಎಚ್ಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಮ್ಮೆಯ ಹುಚ್ಚಾಟಕ್ಕೆ ಓರ್ವ ಸಾವು, ನಾಲ್ವರು ಗಂಭೀರ!

    ಎಮ್ಮೆಯ ಹುಚ್ಚಾಟಕ್ಕೆ ಓರ್ವ ಸಾವು, ನಾಲ್ವರು ಗಂಭೀರ!

    ಹಾಸನ: ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿದ್ದರ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಚೆನ್ನಾಪುರದಲ್ಲಿ ನಡೆದಿದೆ.

    ಚೆನ್ನಾಪುರ ಗ್ರಾಮದ ರುದ್ರೇಗೌಡ (57) ಎಮ್ಮೆ ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿ. ಮಂಗಳವಾರ ಗ್ರಾಮದಲ್ಲಿ ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿ ತಿವಿದು ಹಲವು ಜನರಿಗೆ ಗಾಯಗೊಳಿಸಿದೆ. ಈ ವೇಳೆ ಎಮ್ಮೆ ದಾಳಿಗೆ ತೀವ್ರವಾಗಿ ತುತ್ತಾದ ರುದ್ರೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಶುಸಂಗೋಪನ ಇಲಾಖೆಯ ಸಿಬ್ಬಂದಿ ಎಮ್ಮೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆ ದಾಳಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮೃತ ವ್ಯಕ್ತಿಯ ಕುಟುಂಬ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

  • ಕಲಬುರಗಿಯಲ್ಲಿ ಬಿಳಿ ಎಮ್ಮೆ ಜನನ- ಗ್ರಾಮಸ್ಥರ ಅಚ್ಚರಿ

    ಕಲಬುರಗಿಯಲ್ಲಿ ಬಿಳಿ ಎಮ್ಮೆ ಜನನ- ಗ್ರಾಮಸ್ಥರ ಅಚ್ಚರಿ

    ಕಲಬುರಗಿ: ಎಮ್ಮೆಗಳು ಸಾಮಾನ್ಯವಾಗಿ ಕಪ್ಪು ಬಣ್ಣ ಹೊಂದಿರುತ್ತವೆ. ಆದರೆ ಕಲಬುರಗಿಯ ಅಫಜಲಪುರ ತಾಲೂಕಿನ ಸಿರಸಗಿ ಗ್ರಾಮದಲ್ಲಿ ಬಿಳಿ ಎಮ್ಮೆಯೊಂದು ಜನಿಸಿದೆ.

     

    ಎಮ್ಮೆಯ ಮಾಲೀಕರಾದ ಅಣ್ಣಾರಾವ್ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಬಿಳಿ ಎಮ್ಮೆ ಜನಿಸಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಳಿ ಎಮ್ಮೆ ನೋಡಲು ಇದೀಗ ಸುತ್ತಮುತ್ತಲಿನ ಗ್ರಾಮದ ಜನ ಅಣ್ಣಾರಾವ್ ಪಾಟೀಲ್ ಅವರ ಮನೆಯತ್ತ ಬರುತ್ತಿದ್ದಾರೆ.

    ಎರಡು ದಿನಗಳ ಹಿಂದೆ ಅಣ್ಣಾರಾವ್ ಅವರ ಎಮ್ಮೆ ಬಿಳಿ ಎಮ್ಮೆಗೆ ಜನ್ಮ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

  • ಬಿಜೆಪಿ ಶಾಸಕರ ಎಮ್ಮೆಗಳಿಗಾಗಿ ಪೊಲೀಸರ ಶೋಧ

    ಬಿಜೆಪಿ ಶಾಸಕರ ಎಮ್ಮೆಗಳಿಗಾಗಿ ಪೊಲೀಸರ ಶೋಧ

    ಲಕ್ನೋ: ಕೇಳೋಕೆ ವಿಚಿತ್ರವಾದ್ರೂ ಇದು ಸತ್ಯ. ಕಳೆದ ವಾರ ಕಿಡಿಗೇಡಿಗಳು ಇಲ್ಲಿನ ಬಿಜೆಪಿ ಶಾಸಕರೊಬ್ಬರ ತೋಟದ ಮನೆಯಿಂದ ಕಳ್ಳತನ ಮಾಡಿರೋ ಎಮ್ಮೆಗಳಿಗಾಗಿ ಉತ್ತರಪ್ರದೇಶದ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಬಿಜೆಪಿ ಶಾಸಕ ಸುರೇಶ್ ರಾಹಿ ಅವರ ತೋಟದ ಮನೆಯಿಂದ ಒಂದು ಎಮ್ಮೆ ಹಾಗೂ ಅದರ ಆಕಳು ಕಾಣೆಯಾಗಿದೆ. ರಾಹಿ ಅವರು ಈ ಬಗ್ಗೆ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಮ್ಮೆಗಳ ಪತ್ತೆಗಾಗಿ ತಂಡವನ್ನ ರಚಿಸಲಾಗಿದೆ. ಶಾಸಕರ ಪ್ರಕಾರ ಎರಡೂ ಎಮ್ಮೆಗಳು 1 ಲಕ್ಷ ರೂ. ಮೌಲ್ಯದ್ದಾಗಿದ್ದು, ಹೀಗಾಗಿ ದೂರು ದಾಖಲಿಸಿದ್ದಾಗಿ ಹೇಳಿದ್ದಾರೆ.

    2014ರಲ್ಲೂ ಕೂಡ ಸಮಾಜವಾದಿ ಪಕ್ಷದ ಮುಖಂಡ ಅಜಾಮ್ ಖಾನ್ ತಮ್ಮ ಎಮ್ಮೆಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಗ ಪೊಳಿಸರು ಹುಡಕಾಟ ನಡೆಸಿದ್ದರು. ಈ ವೇಳೆ ವಿರೋಧ ಪಕ್ಷದವರಿಂದ ಪೊಲೀಸರು ಟೀಕೆ ಎದುರಿಸುವಂತಾಗಿತ್ತು.

    ಇದನ್ನೂ ಓದಿ: ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‍ಬುಕ್‍ನಿಂದ ಪತ್ತೆಯಾದ್ವು!

  • ರಾಯಚೂರಿನ್ಲಲಿ ಮೈನವಿರೇಳಿಸೋ ಎಮ್ಮೆಗಳ ಓಟದ ಸ್ಪರ್ಧೆ

    ರಾಯಚೂರಿನ್ಲಲಿ ಮೈನವಿರೇಳಿಸೋ ಎಮ್ಮೆಗಳ ಓಟದ ಸ್ಪರ್ಧೆ

    ರಾಯಚೂರು: ದೀಪಾವಳಿ ಹಿನ್ನಲೆಯಲ್ಲಿ ರಾಯಚೂರಿನ ಬಂಗೀಕುಂಟದಲ್ಲಿ ಗೌಳಿ ಸಮಾಜದವರು ಏರ್ಪಡಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ಮೈ ಝುಮ್ಮೆನಿಸುವಂತಿತ್ತು.

    ಉದ್ದನೆಯ ಕೋಡುಗಳ ಬಲಿಷ್ಠ ಎಮ್ಮೆಗಳ ಓಟದ ಸ್ಪರ್ಧೆ ನೋಡುಗರನ್ನ ರೋಮಾಂಚನಗೊಳಿಸಿತು. ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಎಮ್ಮೆಗಳು ಭಾಗವಹಿಸಿದ್ದವು. ಕಿರಿದಾದ ರಸ್ತೆಯಲ್ಲಿ ಒಂದೇ ಬಾರಿಗೆ ಎಲ್ಲಾ ಎಮ್ಮೆಗಳನ್ನ ಓಡಿಸಿ, ಆಯಾ ಎಮ್ಮೆ ಗಳ ಮಾಲೀಕರು ಸಹ ಓಡಿ ಸಂಭ್ರಮಿಸುತ್ತಾರೆ.

    ಎಮ್ಮೆಗಳನ್ನ ಸುಂದರವಾಗಿ ಅಲಂಕಾರ ಮಾಡಿ, ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ. ಪ್ರತೀವರ್ಷ ಇಲ್ಲಿನ ಬಂಗೀಕುಂಟ ಹಾಗೂ ಕಿಲ್ಲೆ ಬೃಹನ್ ಮಠದ ಬಳಿ ಓಟದ ಸ್ಪರ್ಧೆಗಳು ನಡೆಯುತ್ತವೆ. ನೋಡಲು ತುಂಬಾ ಅಪಾಯಕಾರಿಯಾಗಿ ಕಂಡರೂ ಸ್ಪರ್ಧೆಯಲ್ಲಿ ಇದೂವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.