Tag: Buffalo

  • ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

    ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

    ʻಕೆಡಿʼ ಚಿತ್ರದ ನಿರ್ದೇಶಕ, ನಟ ಪ್ರೇಮ್‌ಗೆ (Prem) ಎಮ್ಮೆ ಕೊಡಿಸೋದಾಗಿ ಹೇಳಿ ಗುಜರಾತ್‌ ಮೂಲದ ವ್ಯಕ್ತಿಯೊಬ್ಬ ಲಕ್ಷ ಲಕ್ಷ ಹಣ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.

    ಕೆಡಿ ಸಿನಿಮಾ ನಿರ್ದೇಶಕ ಪ್ರೇಮ್ ಹೈನುಗಾರಿಕೆಗಾಗಿ ಗುಜರಾತ್ ಮೂಲದ ಎರಡು ಎಮ್ಮೆಗಳನ್ನ ಖರೀದಿಸಲು ಮುಂಗಡವಾಗಿ 25,000 ಹಣ ನೀಡಿದ್ದರು. ಬಳಿಕ ಗುಜರಾತ್ ಮೂಲದ ವನರಾಜ್ ಭಾಯ್ ಎಮ್ಮೆ ವಿಡಿಯೋ ಹಾಗೂ ಫೋಟೋಗಳನ್ನ ವಾಟ್ಸಪ್ ಮೂಲಕ ಕಳಿಸಿದ್ದರು. ತದನಂತರ 3,75,000 ರೂ.ಗಳನ್ನ ಪ್ರೇಮ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ಇದಾದ 1 ವಾರದೊಳಗೆ ಎಮ್ಮೆ ಕಳುಹಿಸುವುದಾಗಿ ಹೇಳಿದ್ದ ವ್ಯಕ್ತಿ ಮತ್ತೆ 50,000 ಹಣ ವರ್ಗಾವಣೆ ಮಾಡುವಂತೆ ಹೇಳಿದ್ದು, ಒಟ್ಟು 4.5ಲಕ್ಷ ಹಣವನ್ನ ನಿರ್ದೇಶಕ ಪ್ರೇಮ್ ವನರಾಜ್ ಎಂಬಾತನಿಗೆ ವರ್ಗಾಯಿಸಿದ್ದರು. ಆದ್ರೆ ಹಣ ಪಡೆದ ಬಳಿಕ ಎಮ್ಮ ಕೊಡಿಸ್ತೀನಿ ಅಂದವನು ನಾಪತ್ತೆಯಾಗಿದ್ದಾನೆ.

    ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ವನರಾಜ್ ಭಾಯ್ ವಿಳಾಸಕ್ಕೆ ನಿರ್ದೇಶಕ ಪ್ರೇಮ್ ತಮ್ಮ ಹುಡುಗರನ್ನ ಕಳುಹಿಸಿ ಹುಡುಕಾಡಿಸಿದ್ದರು. ಆದ್ರೆ ಹಣ ಪಡೆದ ವನರಾಜ್ ಕೈಗೆ ಸಿಕ್ಕಿಲ್ಲ ಎಂದು ದೂರು ನೀಡಿದ್ದರು. ಹಣ ಪಡೆದ ವನರಾಜ್ ಭಾಯ್ ಎಮ್ಮೆಯನ್ನೂ ನೀಡದೇ ಹಣವನ್ನ ಮರಳಿ ಕೊಡದೇ ವಂಚಿಸಿದ್ದಾರೆಂದು ಆರೋಪ ಮಾಡಲಾಗಿತ್ತು. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಅವರು ಮ್ಯಾನೇಜರ್ ದಶಾವರ ಚಂದ್ರು ಮುಖಾಂತರ ದೂರು ದಾಖಲಿಸಿದ್ದರು.

    ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಜುಲೈ 22ರಿಂದ ಜುಲೈ 24ರ ಮಧ್ಯೆ ಹಣ ಕಳುಹಿಸಿದ್ದ ನಿರ್ದೇಶಕ ಪ್ರೇಮ್‌ಗೆ ಕಳೆದೊಂದು ವಾರದ ಹಿಂದೆ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮ್ಯಾನೇಜರ್ ದಶಾವರ ಚಂದ್ರು ಕೂಡಾ ಸ್ಪಷ್ಟನೆ ನೀಡಿದ್ದು, ವನರಾಜ್ ಎಂಬುವವರ ಫೋನ್ ಸ್ವಿಚ್ ಆಫ್ ಆಗಿತ್ತು, ತದನಂತರ ಎಮ್ಮೆ ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನು ಪ್ರೇಮ್ ಆಪ್ತ ಮೂಲಗಳ ಮಾಹಿತಿ ಪ್ರಕಾರ ಹಣ ವಾಪಾಸ್ ಕೊಡೋದಾಗಿ ಗುಜರಾತ್ ಮೂಲದ ವನರಾಜ್ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

    ನಿರ್ದೇಶಕ ಪ್ರೇಮ್ ಚಿತ್ರರಂಗದಲ್ಲಿ ಬ್ಯುಸಿ ಶೆಡ್ಯೂಲ್ ನಡುವೆಯೂ ತೋಟಗಾರಿಕೆ, ಹೈನುಗಾರಿಕೆ, ಹಳ್ಳಿಯ ಆಚರಣೆಗಳನ್ನ ಮಾತ್ರ ಸಿನಿಮಾದ ಜೊತೆ ಜೊತೆಗೆ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ತಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆಗಾಗಿ ಗುಜರಾತ್‌ನ ಗಿರ್ ತಳಿಯ ಎರಡು ಎಮ್ಮೆಯನ್ನ ಕೊಂಡುಕೊಳ್ಳಲು ಮುಂದಾಗಿದ್ದಾಗ ವಂಚನೆ ಆರೋಪ ಕೇಳಿ ಬಂದಿತ್ತು. ಸದ್ಯಕ್ಕೆ ಸ್ವತಃ ನಿರ್ದೇಶಕ ಪ್ರೇಮ್ ಹಾಗೂ ಅವರ ಮ್ಯಾನೇಜರ್ ಚಂದ್ರು ಸ್ಪಷ್ಟಪಡಿಸಿದ ಹಾಗೆ ಎಲ್ಲವೂ ಬಗೆಹರಿದಿದೆ ಎಂದಿದ್ದಾರೆ. ಸದ್ಯ ಕೆಡಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ನಿರ್ದೇಶಕ ಪ್ರೇಮ್.

  • ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

    ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

    ಚಿಕ್ಕೋಡಿ : ಮೇಕೆ, ಎಮ್ಮೆ, ಹಸು ದುಬಾರಿ ಹಣಕ್ಕೆ ಮಾರಾಟವಾಗಿರುವುದನ್ನು ಕೇಳಿರಬಹುದು. ಆದರೆ ಜಿಲ್ಲೆಯಲ್ಲಿ ಕೋಣವೊಂದು (Buffalo) 1.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಸುದ್ದಿ ಮಾಡಿದೆ.

    ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಎರಡು ವರ್ಷದ ಕೋಣ ಬರೋಬ್ಬರಿ 1.15 ಲಕ್ಷ ರೂ.ಗಳಿಗೆ ಮಾರಾಟವಾಗಿದೆ.  ಇದನ್ನೂ ಓದಿ: 20 ಸಾವಿರಕ್ಕೆ ಮಾರಾಟ ಮತ್ತೆ 50 ಸಾವಿರಕ್ಕೆ ಖರೀದಿ – ಈಗ 1.48 ಲಕ್ಷಕ್ಕೆ 8 ತಿಂಗಳ ಟಗರು ಸೇಲ್‌!

    ಅಂದಾಜು 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ ಸಂತಾನೋತ್ಪತ್ತಿಗೆ ಹೆಸರು ಮಾಡಿದೆ. ಕೋಣಕ್ಕೆ ದಿನನಿತ್ಯ 400 ರಿಂದ 500 ರೂ ವ್ಯಯಿಸುತ್ತಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ಇವರಿಗೆ ಕೋಣದ ಮೇಲೆ ಬಹಳ ಪ್ರೀತಿ ಇತ್ತು ಮತ್ತು ಮಾರಲು ಇಷ್ಟವಿರಲಿಲ್ಲ. ಆದರೆ ಮೇವಿನ ಕೊರತೆಯಿಂದ ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರಗಳ ವ್ಯಾಪರಸ್ಥರಿಗೆ ಮಾರಾಟ ಮಾಡಿದ್ದಾರೆ.

  • ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ಹಾವೇರಿ: ದುರ್ಗಾದೇವಿ (Durga Devi) ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ (Buffalo) ಕಾಣೆಯಾಗಿದ್ದು, ಕೋಣವನ್ನು ಹುಡುಕಿಕೊಡುವಂತೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಕೆಲವು ವರ್ಷಗಳಿಂದ ಗ್ರಾಮದ ದೇವಿಗೆ ಹಬ್ಬದ ಕೋಣವನ್ನು ಬಿಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಕೋಣವನ್ನು ಹುಡುಕಾಡಿ ಸಿಗದೇ ಇದ್ದಾಗ ಕಾಣೆಯಾಗಿರುವ ದೇವರ ಕೋಣವನ್ನು ಹುಡುಕಿ ಕೊಡುವಂತೆ ರಟ್ಟೀಹಳ್ಳಿ ಠಾಣೆಗೆ ದೌಡಾಯಿಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ಹುಡುಕುವ ಕೆಲಸ ಮಾಡಿದ್ದಾರೆ. ಅದರೂ ಕೋಣ ಪತ್ತೆಯಾಗಿಲ್ಲ. ಗ್ರಾಮದ ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಹಲವು ಗ್ರಾಮಕ್ಕೆ ಹೋಗಿ ಹುಡುಕಾಟ ಮಾಡಿದ್ದಾರೆ. ಆದರೂ ದೇವರ ಕೋಣ ಪತ್ತೆಯಾಗಿಲ್ಲ. ಹೀಗಾಗಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

  • ದೇವರಕೋಣಕ್ಕಾಗಿ ಎರಡು ಗ್ರಾಮಸ್ಥರ ನಡುವೆ ಫೈಟ್ – ಡಿಎನ್‍ಎ ಟೆಸ್ಟ್ ನಡೆಸುವಂತೆ ಆಗ್ರಹ

    ದೇವರಕೋಣಕ್ಕಾಗಿ ಎರಡು ಗ್ರಾಮಸ್ಥರ ನಡುವೆ ಫೈಟ್ – ಡಿಎನ್‍ಎ ಟೆಸ್ಟ್ ನಡೆಸುವಂತೆ ಆಗ್ರಹ

    ದಾವಣಗೆರೆ: ದೇವರಕೋಣ (Buffalo) ತಮಗೆ ಸೇರಿದ್ದು ಎಂದು ಹೇಳಿಕೊಂಡು ಆರಂಭಗೊಂಡ ಎರಡು ಗ್ರಾಮಸ್ಥರ ನಡುವಿನ ಫೈಟ್ ಡಿಎನ್‍ಎ ಟೆಸ್ಟ್ ಹಂತಕ್ಕೆ ಬಂದು ತಲುಪಿದೆ.

    ದೇವರಕೋಣವನ್ನು ದಾವಣಗೆರೆ (Davanagere) ಜಿಲ್ಲೆಯ ಕುಣಿಬೆಳಕೆರೆ ಹಾಗೂ ಕುಳಗಟ್ಟೆ ಗ್ರಾಮದ ಜನರು ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಸಂಬಂಧ ದಾವಣಗೆರೆ ಎಸ್ಪಿ ನೇತೃತ್ವದಲ್ಲಿ ಶನಿವಾರ ಎರಡು ಗ್ರಾಮಸ್ಥರ ಪಂಚಾಯ್ತಿ ನಡೆದಿದೆ. ಈ ವೇಳೆ ಕುಣಿಬೆಳಕೆರೆ ಗ್ರಾಮಸ್ಥರು, ದೇವರಬೆಳಕೆರೆಗೆ ಕೋಣ ಹೋಗಿದೆ ಅಲ್ಲಿಂದ ಅದನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ವಾದಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕೋಣವನ್ನು ನಾವು ಬಿಟ್ಟುಕೊಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

    ಕೋಣ ಯಾವ ಗ್ರಾಮಕ್ಕೆ ಸೇರಿದ್ದು ಎಂಬ ಬಗ್ಗೆ ಡಿಎನ್‍ಎ ಟೆಸ್ಟ್ ಆಗಲಿ ಎಂದು ಕುಳಗಟ್ಟಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕೋಣನ ಮರಿಗಳು ನಮ್ಮ ಬಳಿ ಇವೆ ಅವುಗಳ ಡಿಎನ್‍ಎ ಪರೀಕ್ಷಿಸಿದರೆ ಕೋಣ ಯಾರಿಗೆ ಸೇರಿದ್ದು ಎಂಬುದು ತಿಳಿಯಲಿದೆ ಎಂದು ಗ್ರಾಮಸ್ಥರು ಮಲೇಬೆನ್ನೂರು (Malebennu) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇನ್ನೂ ಶಿವಮೊಗ್ಗ (Shivamogga) ಪಶುವೈದ್ಯಾಧಿಕಾರಿಗಳು ಕೋಣವನ್ನು ಪರೀಕ್ಷಿಸಿ ಅದು ಆರು ವರ್ಷ ವಯಸ್ಸಿನ ಕೋಣ ಎಂದು ವರದಿ ನೀಡಿದ್ದಾರೆ. ವಿವಾದದ ಹಿನ್ನೆಲೆ ಕೋಣವನ್ನು ಶಿವಮೊಗ್ಗದ ಗೋಶಾಲೆಯಲ್ಲಿ ಇರಿಸಲಾಗಿದೆ.

    ಮುಂದಿನ ವರ್ಷ ಗ್ರಾಮದಲ್ಲಿ ಕರಿಯಮ್ಮನ ಜಾತ್ರೆ ನಡೆಯಲಿದ್ದು ಅದಕ್ಕಾಗಿ ದೇವರ ಕೋಣ ಬೇಕಾಗಿದೆ. ಈಗಾಗಲೇ ಎರಡೂ ಗ್ರಾಮಸ್ಥರನ್ನು ಸೇರಿಸಿ ನಡೆಸಿದ ಸಭೆಗಳು ವಿಫಲವಾಗಿವೆ. ಎರಡೂ ಹಳ್ಳಿಗಳ ಗ್ರಾಮಸ್ಥರು ನಮ್ಮದೇ ಕೋಣವೆಂದು ಪಟ್ಟು ಹಿಡಿದಿರುವ ಹಿನ್ನೆಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಮಾರ್ಪಟ್ಟಿದೆ.

  • ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ನವದೆಹಲಿ: ದೇವಸ್ಥಾನದ (Temple) ಹೊರಗಿನ ರಸ್ತೆಯಲ್ಲಿ ಎಮ್ಮೆಯೊಂದರ (Buffalo) ತಲೆ ಕತ್ತರಿಸಿ ಇರಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಈಶಾನ್ಯ ದೆಹಲಿಯ (Delhi) ವೆಲ್‌ಕಮ್ (Welcome) ಪ್ರದೇಶದಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ದೆಹಲಿಯ ಬಾಬ್‌ಪುರ ನಿವಾಸಿಗಳಾದ ಅಜೀಂ (27) ಮತ್ತು ಇನ್ನೋರ್ವ 16 ವರ್ಷದ ಬಾಲಕ ಎಂದು ಗುರುತಿಸಲಾಗಿದೆ. ವೆಲ್‌ಕಮ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಬದಿಯಲ್ಲಿ ಎಮ್ಮೆಯೊಂದರ ತಲೆ ಕತ್ತರಿಸಿ ಇಡಲಾಗಿದೆ ಎಂಬ ಮಾಹಿತಿಯ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರದೇಶದಲ್ಲಿ ಶಾಂತಿ ಕಾಪಾಡಲು ಪೊಲೀಸರಿಗೆ ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಯಾವುದೇ ರೀತಿಯ ವದಂತಿಗಳನ್ನು ಹರಡಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Maharashtra Bus Accident – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ

    ಶುಕ್ರವಾರ 5:30ರ ಸುಮಾರಿಗೆ ಪಶ್ಚಿಮ ಗೋರಖ್‌ಪಾರ್ಕ್‌ನ ನಾಲಾ ರಸ್ತೆಯಲ್ಲಿರುವ ದೇವಸ್ಥಾನದ ಹೊರಭಾಗದ ರಸ್ತೆಯಲ್ಲಿ ಕತ್ತರಿಸಿದ ಎಮ್ಮೆಯ ತಲೆಯೊಂದು ಪತ್ತೆಯಾಗಿದೆ ಎಂದು ವೆಲ್‌ಕಮ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಸ್ಕೂಟರ್‌ನಲ್ಲಿ ಬಂದ ಇಬ್ಬರು ಕತ್ತರಿಸಿದ ಎಮ್ಮೆಯ ತಲೆಯನ್ನು ದೇವಸ್ಥಾನದ ಹೊರಭಾಗದ ರಸ್ತೆಯಲ್ಲಿ ಎಸೆದಿದ್ದು, ಕತ್ತರಿಸಿದ ತಲೆಯನ್ನು ತಕ್ಷಣ ವಶಕ್ಕೆ ಪಡೆದು ಸ್ಥಳದಿಂದ ತೆಗೆಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕೃತ್ಯಗಳು), 429 (ಪ್ರಾಣಿಗಳನ್ನು ಕೊಲ್ಲುವುದು), 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ

    ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ

    ದಾವಣಗೆರೆ: ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಎಮ್ಮೆ ಮಾಲೀಕನನ್ನು ಕೋಣವೊಂದು (Buffalo) ಇರಿದು ಕೊಂದಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಎನ್ ಬಸವನಹಳ್ಳಿ (N basavanahalli) ಗ್ರಾಮದಲ್ಲಿ ನಡೆದಿದೆ.

    ಎನ್ ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಕೋಣದ ದ್ವೇಷಕ್ಕೆ ಬಲಿಯಾದ ಎಮ್ಮೆ ಮಾಲೀಕ. ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟ ಕೋಣ ಪಕ್ಕದ ಎನ್ ಬಸವನಹಳ್ಳಿಯ ಎಮ್ಮೆಗಳ ಜೊತೆ ಸೇರಿ ದಾಂಧಲೆ ಮಾಡುತ್ತಿತ್ತು. ಅಡಿಕೆ ತೋಟಗಳನ್ನು ಕೂಡ ಹಾಳು ಮಾಡಿತ್ತು. ಈ ವೇಳೆ ತನ್ನ ಎಮ್ಮೆಗಳ ಜೊತೆ ಸೇರಲು ಬಂದರೆ ಜಯಣ್ಣ ದೊಣ್ಣೆಯಿಂದ ಹೊಡೆದು ಪುಂಡ ಕೋಣವನ್ನು ಓಡಿಸುತ್ತಿದ್ದರು. ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸಿತ್ತು. ಆತನ ಮೇಲೆ 3-4 ಬಾರಿ ದಾಳಿಯೂ ಮಾಡಿತ್ತು. ಜಯಣ್ಣ ಹಿಂದೆ ದಾಳಿಯಿಂದ ಪಾರಾಗಿದ್ದರು.

    ದುರಂತ ಎಂದರೆ ಕಳೆದ ದಿನ ಸಂಜೆ ಯಾರು ಇಲ್ಲದ್ದನ್ನು ನೋಡಿ ಕೋಣ ಜಯಣ್ಣನ ಮೇಲೆ ಮನಸೋ ಇಚ್ಚೆ ದಾಳಿ ಮಾಡಿ ಕೊಂದಿದೆ. ಜಯಣ್ಣನನ್ನು ಸಾಯಿಸಿದ ಕೋಣವನ್ನು ಎನ್ ಬಸವನಹಳ್ಳಿ ಗ್ರಾಮಸ್ಥರು ಕಟ್ಟಿ ಹಾಕಿ ಜಯಣ್ಣ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಮೃತ ಜಯಣ್ಣನವರ ಪುತ್ರ ದೂರು ನೀಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೋಲಿಸರು ಕೋಣವನ್ನು ವಶಕ್ಕೆ ಪಡೆದು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಲಿಂಗದಹಳ್ಳಿ ಗ್ರಾಮದ ಉಡುಸಲಾಂಭ ದೇವಿಗೆ ಬಿಟ್ಟಿರುವ ಕೋಣ ಎನ್ ಬಸವನಹಳ್ಳಿಯಲ್ಲಿ ಹಲವು ದಿನಗಳಿಂದ ತಿರುಗಾಡುತ್ತಿತ್ತು. ಈಗಾಗಲೇ 7-8 ಜನರ ಮೇಲೆ ದಾಳಿ ಮಾಡಿರುವ ಕೋಣದ ಬಗ್ಗೆ ಲಿಂಗದಹಳ್ಳಿ ದೇವಸ್ಥಾನದ ಕಮಿಟಿಯ ಗಮನಕ್ಕೆ ತರಲಾಗಿತ್ತು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ಎನ್ ಬಸವನಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ನಿರ್ಲಕ್ಷ್ಯವೇ ಜಯಣ್ಣನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಿಂದ ಹಾರಿದ ಸ್ವದೇಶಿ ತಪಸ್ ಯುಎವಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್

  • ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಬೆಂಗಳೂರು: ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ಹಸು, ಎಮ್ಮೆಗಳದ್ದೇ ದೊಡ್ಡ ಟೆನ್ಶನ್ ಆಗಿದೆ. ಕಚೇರಿಗೆ ಹೋಗಬೇಕು ಅಂತ ಕಾರು, ಬೈಕ್ ಹತ್ತಿದ್ರೆ, ರಸ್ತೆಯಲ್ಲಿ ಅವುಗಳನ್ನ ಓಡಿಸೋದೆ ನಿತ್ಯ ಕಾಯಕವಾಗ್ತಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಹಸು, ಎಮ್ಮೆಗಳನ್ನ ಮುಕ್ತಿ ಕೊಡಿಸಿ ಸರ್ ಅಂತ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಗೆ ಟೆಕ್ಕಿಗಳು ರಿಕ್ವೆಸ್ಟ್ ಮಾಡ್ತಿದ್ದಾರೆ.

    ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆ (Buffalo), ಹಸುಗಳು ವಾಹನಗಳಿಗೆ ಅಡ್ಡ ಬರುತ್ತಿವೆ. ಇದರಿಂದ ಆಫೀಸ್‍ಗೆ ಹೋಗಲು ನಿತ್ಯ 40 ರಿಂದ 50 ನಿಮಿಷ ಲೇಟಾಗ್ತಿದೆ. ಸರಿಯಾದ ಸಮಯಕ್ಕೆ ಆಫೀಸ್‍ಗೆ ಹೊಗಲು ಆಗ್ತಿಲ್ಲ ಅಂತ ಎಮ್ಮೆ, ಹಸುಗಳ ಮೇಲೆ ಟೆಕ್ಕಿಗಳು ದೂರು ನೀಡಿದ್ದಾರೆ.‌ ಇದನ್ನೂ ಓದಿ: ಹೆಚ್‌ಡಿಕೆ ಮೇಲೆ ಡಿಕೆಗೆ, ರೇವಣ್ಣ ಮೇಲೆ‌ ಸಿದ್ರಾಮಣ್ಣಗೆ ಸಾಫ್ಟ್ ಕಾರ್ನರಾ?

    ಪ್ರತಿದಿನ ಬೆಳಗ್ಗೆ ಆಫೀಸ್‍ (Office) ಗೆ ಹೋಗೋ ಹೊತ್ತಲ್ಲೇ, ಮಾರ್ಚ್ ಫಾಸ್ಟ್ ಮಾಡೋ ರೀತಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆ, ಹಸುಗಳು ಹೋಗ್ತಿರುತ್ತೆ. ಸರ್ಜಾಪುರ ರಸ್ತೆಯಲ್ಲಿ ಹಲವು ಐಟಿ ಕಂಪನಿಗಳಿದ್ದು, ವಿಪ್ರೋ, ರೇನೋ ಬೋ ಮೂಲಕ ಸರ್ಜಾಪುರ ಮುಖ್ಯ ರಸ್ತೆಯ 2 ಕಿಲೋ ಮೀಟರ್ ವರೆಗೂ ಗುಂಪು ಗುಂಪಾಗಿ ಎಮ್ಮೆ, ಹಸುಗಳು ರಸ್ತೆಗಿಳಿಯುತ್ತಿವೆ. ಇವುಗಳಿಗೆ ಎಷ್ಟೇ ಹಾರ್ನ್ ಮಾಡಿದ್ರೂ ಪಕ್ಕಕ್ಕೇ ಸರಿಯೋದೆ ಇಲ್ಲ. ಕಳೆದ ಆರು ತಿಂಗಳಿನಿಂದ ಈ ರಗಳೆ ಇದ್ದು, ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಕಮಿಷನರ್ (BBMP Commissioner), ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಗೆ ಟ್ಯಾಗ್ ಮಾಡಿ ಎಂಎನ್‍ಸಿ ಟೆಕ್ಕಿಗಳು ಸಾಲು ಸಾಲು ದೂರು ನೀಡಿದ್ದಾರೆ.

    ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಎಮ್ಮೆ, ಹಸುಗಳಿಂದ ಟ್ರಾಫಿಕ್ ಆದಾಗ ಅಲ್ಲಿರುವ ಟ್ರಾಫಿಕ್ ಪೊಲೀಸರೇ ಅವುಗಳನ್ನ ಓಡಿಸ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೆಕ್ಕಿಗಳು ದೂರಿನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಧಾರವಾಡ: ಮನರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ, ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡುವುದು ಹಳ್ಳಿಗಳಲ್ಲಿ ಸಹಜ. ಇದೀಗ ಧಾರವಾಡದಲ್ಲಿ (Dharwada) ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದೆ.

    ಧಾರವಾಡ ಎಮ್ಮೆ (Buffalo) ಬಹಳ ಫೇಮಸ್. ಧಾರವಾಡ ಗೌಳಿಗಲ್ಲಿಯಲ್ಲಿ ಎಮ್ಮೆ ಸಾಕುವವರು ದೀಪಾವಳಿ ಹಬ್ಬದ ನಂತರ ಎಮ್ಮೆ ಓಟದ (Running Race) ಸ್ಪರ್ಧೆ ಆಯೋಜನೆ ಮಾಡ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅವರು ಧಾರವಾಡ ಹೊರವಲಯದ ಹನುಮಂತನಗರದ ಹತ್ತಿರ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಎಮ್ಮೆಗಳ ಮಾಲೀಕರು ಬೈಕ್ ತೆಗೆದುಕೊಂಡು ಮುಂದೆ ಹೋಗಿ ತಮ್ಮ ಎಮ್ಮೆ ಬೆನ್ನಟ್ಟಿಸಿಕೊಂಡು ಬರುವ ಮೂಲಕ ಸ್ಪರ್ಧೆಯ ಕಾವು ಹೆಚ್ಚಿತು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ

    ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 20 ಸಾವಿರ, ದ್ವಿತೀಯ ಸ್ಥಾನ 15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 12,500 ರೂಪಾಯಿ ಬಹುಮಾನ ನೀಡಲಾಯಿತು. ಅಲ್ಲದೇ ಸಮಾಧನಾಕರ ಬಹುಮಾನವಾಗಿ ಸ್ಟೀಲ್ ಪಾತ್ರೆ, ಬಕೆಟ್ ಸೇರಿ ಹಲವು ವಸ್ತುಗಳನ್ನು ನೀಡಲಾಯಿತು. ಇದರಲ್ಲಿ ಧಾರವಾಡದ ಎಮ್ಮೆ ಅಷ್ಟೇ ಅಲ್ಲ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎಮ್ಮೆ ಕೂಡಾ ಭಾಗವಹಿಸಿದ್ದವು. ಮುಂದೆ ಬೈಕ್ ಹೋಗುತ್ತಿದ್ದರೆ ಎಮ್ಮೆ ಹಿಂಬದಿಯಿಂದ ಓಡುವ ಮೂಲಕ ಕೇವಲ ಒಂದು ನಿಮಿಷದಲ್ಲಿ ನೂರು ಮೀಟರ್ ಓಡಬೇಕಾಯಿತು. ಅದರಲ್ಲಿ ಯಾವ ಎಮ್ಮೆ ಕಡಿಮೆ ಸಮಯದಲ್ಲಿ ಓಡುತ್ತೆ, ಅದಕ್ಕೆ ಬಹುಮಾನ ಕೊಡಲಾಯಿತು. ಇದನ್ನೂ ಓದಿ: ಹೆರಿಗೆಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ

    Live Tv
    [brid partner=56869869 player=32851 video=960834 autoplay=true]

  • ಎಮ್ಮೆ ಕರುವಿನ ಮೇಲೆ ರೇಪ್ ಮಾಡಿದ್ದ ವ್ಯಕ್ತಿ ಅರೆಸ್ಟ್

    ಎಮ್ಮೆ ಕರುವಿನ ಮೇಲೆ ರೇಪ್ ಮಾಡಿದ್ದ ವ್ಯಕ್ತಿ ಅರೆಸ್ಟ್

    ಮುಂಬೈ: ಎಮ್ಮೆ ಕರುವಿನ (Buffalo Calf) ಮೇಲೆ ಅತ್ಯಾಚಾರ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು (Man) ಬಂಧಿಸಿದ (Arrest) ಘಟನೆ ಮಹಾರಾಷ್ಟ್ರದ (Maharashtra) ಪುಣೆಯ ಡೆಕ್ಕನ್ ಪ್ರದೇಶದಲ್ಲಿ ನಡೆದಿದೆ.

    ನೇಪಾಳ ಮೂಲದ ಆರೋಪಿಯನ್ನು ಸಾಸೂನ್ (38) ಬಂಧಿತ ವ್ಯಕ್ತಿ. ಕೊಟ್ಟಿಗೆಯೊಳಗೆ ಎಮ್ಮೆ ಕರುವಿನ ಮೇಲೆ ಸಾಸೂನ್ ಅತ್ಯಾಚಾರವೆಸಗುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನಿಗೆ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾರೆ. ಅದಾದ ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

    ಸ್ಥಳೀಯರು ಥಳಿಸಿದ್ದರಿಂದ ಆತನಿಗೆ ತೀವ್ರ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಸೂನ್‍ನನ್ನು ಜನರಲ್ ಆಸ್ಪತ್ರೆಗೆ ರವಾನಿಸಿದ್ದರು. ಅದಾದ ಬಳಿಕ ಆತ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ನಂತರ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತೂಗು ಸೇತುವೆ ದುರಂತ- ಸಾವಿನ ಸಂಖ್ಯೆ 132ಕ್ಕೆ ಏರಿಕೆ; ಸ್ಥಳಕ್ಕೆ ಮೋದಿ ಭೇಟಿ ನೀಡುವ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್

    ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್

    ಗಾಂಧಿನಗರ: ಇತ್ತೀಚೆಗಷ್ಟೇ ಆರಂಭವಾಗಿದ್ದ ಗಾಂಧಿನಗರ-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಅ.8 ರಂದು ಎಮ್ಮೆಗಳಿಗೆ (Buffalo) ಡಿಕ್ಕಿ ಹೊಡೆದಿತ್ತು. ಇದೀಗ ಅ.9 ರಂದು ಹಸುವಿಗೆ (Cow) ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.

    ಗುಜರಾತ್‍ನ ಆನಂದ್ ರೈಲ್ವೇ ನಿಲ್ದಾಣದ ಸಮೀಪ ಏಕಾಏಕಿ ಹಸುವಿಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಅ.8 ರಂದು ಗುಜರಾತ್‍ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್‍ನಲ್ಲಿ ಎಮ್ಮೆಗಳಿಗೆ ರೈಲು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ 4 ಎಮ್ಮೆಗಳು ಸಾವನ್ನಪ್ಪಿದ್ದವು. ರೈಲಿನ ಮುಂಭಾಗ ಹೊಡೆದು ಹೋಗಿತ್ತು. ಇದನ್ನೂ ಓದಿ: ‘ಕಬ್ಬಿಣದ ಕಾಲುಗಳ ವ್ಯಕ್ತಿ’ ಭಾರತಕ್ಕೆ ಗರಬಡಿಸಿದ್ದಾನೆ: ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್

    ವಂದೇ ಭಾರತ್ ರೈಲಿಗೆ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‍ನಿಂದ ಮಾಡಿದ ಬಂಪರ್ ಅಳವಡಿಕೆ ಮಾಡಿರುವುದರಿಂದ ಕಾರ್ಯನಿರ್ವಹಣೆಗೆ ಅದೇನು ಅನಿವಾರ್ಯವಲ್ಲ ಹಾಗಾಗಿ ರೈಲು ಕಾರ್ಯಚರಿಸುತ್ತದೆ. ಆ ಬಳಿಕ ಇದನ್ನು ಬದಲಾಯಿಸಬಹುದಾಗಿದೆ. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಜಾನುವಾರುಗಳೊಂದಿಗೆ ಇಂತಹ ಘರ್ಷಣೆಯನ್ನು ತಪ್ಪಿಸಲು ಕಷ್ಟ. ಹಾಗಾಗಿ ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ರೈಲಿನ ಮುಂಭಾಗವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಜಾನುವಾರುಗಳಿಗೆ ಡಿಕ್ಕಿ – ಕಳೆದ ವಾರ ಆರಂಭವಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗ ಜಖಂ

    ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಅವರು ಅದೇ ರೈಲಿನಲ್ಲಿ ಅಹಮದಾಬಾದ್‍ನ ಕಲುಪುರ್ ರೈಲು ನಿಲ್ದಾಣದ ವರೆಗೆ ಪ್ರಯಾಣಿಸಿದ್ದರು. ಈ ರೈಲು ಕೇವಲ ಗಂಟೆಗೆ 160 ಕಿ.ಮೀ ತಲುಪುವ ಸಾಮರ್ಥ್ಯ ಹೊಂದಿದೆ.

    Live Tv
    [brid partner=56869869 player=32851 video=960834 autoplay=true]