Tag: Buenos Aires

  • ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

    ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

    ಬ್ಯೂನಸ್ ಐರಿಸ್: ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಬಳಿಕ ಇಂದು ಅರ್ಜೆಂಟೀನಾ ತಲುಪಿದ ಪ್ರಧಾನಿ ಮೋದಿಯವರನ್ನು ಬ್ಯೂನಸ್ ಐರಿಸ್‌ನಲ್ಲಿ ಭಾರತೀಯ ಸಮಯದಾಯವೊಂದು ಸ್ವಾಗತಿಸಿತು.

    ಐದು ದೇಶಗಳ ಪ್ರವಾಸದಲ್ಲಿರುವ ಎರಡು ದಿನಗಳ ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಪ್ರವಾಸದ ಬಳಿಕ ಇಂದು ಅರ್ಜೆಂಟೀನಾದ ದೇಶದ ಬ್ಯೂನಸ್ ಐರಿಸ್‌ಗೆ ಬಂದಿಳಿದರು. ಈ ವೇಳೆ ಅರ್ಜೆಂಟೀನಾದಲ್ಲಿರುವ ಭಾರತೀಯರು ಮೋದಿಯವರನ್ನು ಸ್ವಾಗತ ಮಾಡಿದರು. ಇದೇ ಸಂದರ್ಭದಲ್ಲಿ ಅರ್ಜೆಂಟೀನಾದಲ್ಲಿರುವ ಭಾರತೀಯ ಮೂಲದ ವಿಜಯ್ ಕುಮಾರ್ ಗುಪ್ತಾ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು 400 ಕಿ.ಮೀ ಪ್ರಯಾಣಿಸಿ ಬ್ಯೂನಸ್ ಐರಿಸ್‌ಗೆ ಬಂದಿದ್ದರು.ಇದನ್ನೂ ಓದಿ: ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ

    ಈ ಕುರಿತು ವಿಜಯ್ ಕುಮಾರ್ ಗುಪ್ತಾ ಮಾತನಾಡಿ, ತಮ್ಮ ದೀರ್ಘ ಕಾಲದ ಪ್ರಯಾಣದ ಅನುಭವವನ್ನು ಹಂಚಿಕೊAಡಿದ್ದಾರೆ. ನಾನು ಪ್ರಧಾನಿಯನ್ನು ಭೇಟಿಯಾಗಲು 400ಕಿ.ಮೀ ದೂರದಿಂದ ಬಂದಿದ್ದೇನೆ. ಜೊತೆಗೆ ಮೋದಿಯವರ ಕೈಕುಲುಕಿ ಮಾತನಾಡಿಸುವ ಅವಕಾಶವೂ ನನಗೆ ಸಿಕ್ಕಿದೆ ಎಂದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇನ್ನೂ ಅರ್ಜೆಂಟೀನಾ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಐದು ರಾಷ್ಟçಗಳ ಪೈಕಿ ಮೋದಿ ಘಾನಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದು, ಅರ್ಜೆಂಟೀನಾ ಬಳಿಕ ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ.ಇದನ್ನೂ ಓದಿ: ಫಾರಂ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್

  • ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    – ಸೆಕ್ಸ್ ವಿಡಿಯೋ ಸ್ನೇಹಿತರಿಗೆ ತೋರಿಸಿದಕ್ಕೆ ಕತ್ತರಿಸಿದ್ಳು
    – ಕೋರ್ಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪ್ರೇಯಸಿ
    – ಕೊಲೆ ಮಾಡಿಲ್ಲ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆ

    ಬ್ಯೂನಸ್‍ಐರಿಸ್: ತಮ್ಮಿಬ್ಬರ ಸೆಕ್ಸ್ ವಿಡಿಯೋವನ್ನು ಪ್ರೇಮಿ ತನ್ನ ಸ್ನೇಹಿತರಿಗೆ ತೋರಿಸಿದ ಎಂಬ ಸಿಟ್ಟಿಗೆ ಪ್ರೇಯಸಿ ಆತನ ಮರ್ಮಾಂಗವನ್ನೇ ಕತ್ತರಿಸಿದ್ದು, ಆಕೆಗೆ ನ್ಯಾಯಾಲಯ 13 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಅರ್ಜೆಂಟಿನಾದಲ್ಲಿ 2017ರಲ್ಲಿ ಕೃತ್ಯ ಎಸಗಿದಕ್ಕೆ ದೋಷಿಯಾಗಿರುವ ಬ್ರೆಂಡಾಗೆ(28) ಅರ್ಜೆಂಟಿನಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ:ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಆರ್ಕಿಟೆಕ್ಟ್ ಆಗಿರುವ ಬ್ರೆಂಡಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅಬರಿಬ್ಬರ ನಡುವೆ ಲೈಂಗಿಕ ಸಂಪರ್ಕ ಕೂಡ ಇತ್ತು. ಆದರೆ ಅವರಿಬ್ಬರು ಸೆಕ್ಸ್ ಮಾಡಿರುವ ವಿಡಿಯೋವನ್ನು ಯುವಕ ಬ್ರೆಂಡಾಗೆ ತಿಳಿಯದಂತೆ ಸೆರೆಹಿಡಿದಿದ್ದನು. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದನು. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಈ ಬಗ್ಗೆ ಬ್ರೆಂಡಾಗೆ ತಿಳಿದು ಆಕೆ ಯುವಕನ ವಿರುದ್ಧ ಕೋಪಗೊಂಡಿದ್ದಳು. ಆದ್ದರಿಂದ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಬ್ರೆಂಡಾ ಒಂದು ದಿನ ಪ್ರಿಯಕರನನ್ನು ತನ್ನ ಮನೆಗೆ ಕರೆಸಿ ಈ ಕೃತ್ಯವೆಸೆಗಿದ್ದಳು. ನನ್ನನ್ನು ಮನೆಗೆ ಕರೆಸಿ, ಸರ್ಪ್ರೈಸ್​ ಕೊಡುವುದಾಗಿ ಹೇಳಿ ನನ್ನ ಕಣ್ಣಿಗೆ ಬಟ್ಟೆ ಕಟ್ಟಿದಳು. ಬಳಿಕ ನನ್ನ ಮರ್ಮಾಂಗ ಕತ್ತರಿಸಿದಳು ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದನು.

    ಯುವಕನ ದೂರಿನ ಆಧಾರದ ಮೇಲೆ ಪೊಲೀಸರು ಬ್ರೆಂಡಾಳನ್ನು ಬಂಧಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬ್ರೆಂಡಾ ತಪ್ಪನ್ನು ಒಪ್ಪಿಕೊಂಡಿದ್ದು, ನಾನು ಆತನನ್ನು ಸಾಯಿಸಲು ಆ ರೀತಿ ಮಾಡಿಲ್ಲ. ಆತನ ಮೇಲೆ ನನಗೆ ಪ್ರೀತಿಯಿದೆ. ಆದರೆ ಅವನು ತಪ್ಪು ಮಾಡಿದ್ದಾನೆ, ಅದಕ್ಕೆ ಬುದ್ಧಿ ಕಲಿಸಲು ಹೀಗೆ ಮಾಡಿದೆ. ಅಲ್ಲದೆ ಕೃತ್ಯವೆಸೆಗಿದ ಬಳಿಕ ಆತ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ನಾನೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪುರುಷರ ಮರ್ಮಾಂಗಕ್ಕೆ ಯುವತಿ ಬಾಯಿಟ್ಟು ಎಡಿಟ್ – ಸೈಕೋ ಸ್ಟೂಡೆಂಟ್ ವಿರುದ್ಧ ದೂರು

    ಈ ಸಂಬಂಧ ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣ ನಡೆದ ಬಳಿಕ ಬ್ರೆಂಡಾಳನ್ನು ಅರ್ಜೆಂಟಿನಾ ಮಂದಿ ಈ ಹಿಂದೆ ಇದೇ ರೀತಿ ಪ್ರಿಯಕರ ಮರ್ಮಾಂಗ ಕತ್ತರಿಸಿದ ಆರೋಪಿ ಲೊರೆನಾಳಿಗೆ ಹೋಲಿಸುತ್ತಿದ್ದಾರೆ. ಇದನ್ನೂ ಓದಿ:ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    1993ರಲ್ಲಿ ಲೊರೆನಾ ಮಲಗಿದ್ದ ತನ್ನ ಪತಿಯ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿದ್ದಳು. ಪತಿ ಪ್ರತಿದಿನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು, ಚಿತ್ರಹಿಂಸೆ ನೀಡುತ್ತಿದ್ದನು. ಆತನ ಹಿಂಸೆಗೆ ಬೇಸತ್ತು ಆತ ಮಲಗಿದ್ದಾಗ ಆತನ ಮರ್ಮಾಂಗ ಕತ್ತರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಳು. ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಅಲ್ಲದೆ ಪ್ರಕರಣ ಬೆಳಕಿಗೆ ಬಂದಾಗ ಇಡೀ ಅರ್ಜೆಂಟಿನಾವನ್ನು ಬೆಚ್ಚಿಬೀಳಿಸಿತ್ತು.

  • ಮಗು ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ- ಸ್ತನ್ಯಪಾನ ಮಾಡಿ ಮಾನವಿಯತೆ ಮೆರೆದ ಪೊಲೀಸ್ ಅಧಿಕಾರಿ

    ಮಗು ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ- ಸ್ತನ್ಯಪಾನ ಮಾಡಿ ಮಾನವಿಯತೆ ಮೆರೆದ ಪೊಲೀಸ್ ಅಧಿಕಾರಿ

    ಬ್ಯೂನಸ್ ಐರಿಸ್: ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವನ್ನು ಅರ್ಜೆಂಟಿನಾದ ಪೊಲೀಸ್ ಅಧಿಕಾರಿಯೊಬ್ಬರು ಸ್ತನ್ಯಪಾನ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸೆಲೆಸ್ಟ್ ಅಯಲಾ ಮಗುವಿಗೆ ಸ್ತನ್ಯಪಾನ ಮಾಡಿಸಿದ ಪೊಲೀಸ್ ಅಧಿಕಾರಿ. ಸೆಲೆಸ್ಟ್, ಸೋರ್ ಮರಿಯಾ ಲುಡೋವಿಕಾ ಮಕ್ಕಳ ಆಸ್ಪತ್ರೆಯಲ್ಲಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ವೇಳೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಗು ನಿರಂತವಾಗಿ ಅಳಲು ಶುರು ಮಾಡಿತ್ತು.

    ಆ ಮಗು ಹಸುವಿನಿಂದ ಅಳುತ್ತಿದ್ದು, ಸೆಲೆಸ್ಟ್ ಆ ಮಗುವಿನ ಅಳಲು ಕೇಳಲಾಗದೇ ಮಗುವಿಗೆ ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅನುಮತಿ ನೀಡಿದ ಕೂಡಲೇ ಸೆಲೆಸ್ಟ್ ಸ್ತನ್ಯಪಾನ ಮಾಡಿಸಲು ಶುರು ಮಾಡಿದ ತಕ್ಷಣ ಮಗು ಶಾಂತವಾಗಿದೆ.

    ಮಗುವಿಗೆ ಸ್ತನ್ಯಪಾನ ಮಾಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಲೆಸ್ಟ್, “ನಾನು ಆ ಮಗುವನ್ನು ಗಮನಿಸಿದೆ. ಅದು ಹಸಿವಿನಿಂದ ಅಳುತ್ತಿತ್ತು. ಅಲ್ಲದೇ ಮಗು ತನ್ನ ಕೈಯನ್ನು ಬಾಯಿಯೊಳಗೆ ಇಡುತ್ತಿತ್ತು. ನಾನು ಮಗುವನ್ನು ಅಪ್ಪಿಕೊಂಡು ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆ ಸಿಬ್ಬಂದಿಗೆ ಕೇಳಿಕೊಂಡೆ ಎಂದು ತಿಳಿಸಿದರು.

    ಇದು ತುಂಬಾ ದುಃಖದ ಕ್ಷಣವಾಗಿತ್ತು. ಆ ಮಗುವನ್ನು ಆ ಸ್ಥಿತಿಯಲ್ಲಿ ನೋಡಿ ನನ್ನ ಹೃದಯ ಮಿಡಿಯುತಿತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಸಮಾಜ ಸ್ವಲ್ಪ ಸೂಕ್ಷ್ಮವಾಗಿರಬೇಕು. ಆದರೆ ಇದು ಇಲ್ಲಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸದ್ಯ ಸೆಲೆಸ್ಟ್ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋವನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ನಿಮಗೆ ಗೊತ್ತಿಲ್ಲದ ಮಗುವಿಗೆ ತಾಯಿಯ ರೀತಿಯಲ್ಲಿ ನೀವು ಪ್ರೀತಿ ತೋರಿಸಿ ಸ್ತನ್ಯಪಾನ ಮಾಡಿದ ಕ್ಷಣವನ್ನು ನಾವು ಎಲ್ಲರಿಗೂ ತೋರಿಸಲು ಇಷ್ಟಪಡುತ್ತೇನೆ. ಆ ಮಗು ಅಪೌಷ್ಠಿಕತೆಯಿಂದ ಕೂಡಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರೂ ನೀವು ತಲೆ ಕೆಡಿಸಿಕೊಂಡಿಲ್ಲ. ಒಳ್ಳೆಯ ಕೆಲಸ ಮಾಡಿದ್ದೀರಿ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

    ಈ ಮಗು ತನ್ನ ತಾಯಿಯ ಆರನೇ ಮಗುವಾಗಿದ್ದು, ಸದ್ಯ ಈ ಮಗುವನ್ನು ನೋಡಿಕೊಳ್ಳಲು ತಾಯಿ ಕಷ್ಟಪಡುತ್ತಿದ್ದಾರೆ ಹಾಗೂ ಹತಾಶರಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv