Tag: Budget Session 2025

  • ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ – ಸಿದ್ದರಾಮಯ್ಯ ಭರವಸೆ

    ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ – ಸಿದ್ದರಾಮಯ್ಯ ಭರವಸೆ

    – 2026-27ನೇ ಸಾಲಿಗೆ 7 ರೂ. ಹಾಲಿನ ಪ್ರೋತ್ಸಾಹ ಧನ ಕೊಡ್ತೀವಿ ಎಂದ ಸಿಎಂ

    ಬೆಂಗಳೂರು: ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಜನವರಿಯಿಂದ ಕೊಡಬೇಕಾಗಿದ್ದು, ಶೀಘ್ರದಲ್ಲೇ ಅದನ್ನು ಕೊಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.

    ಪರಿಷತ್‌ ಕಲಾಪದಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಶೀಘ್ರದಲ್ಲೇ ಗೃಹಲಕ್ಷ್ಮಿ ಹಣ ನೀಡಲಾಗುವುದು. ಅಲ್ಲದೇ ಪ್ರಣಾಳಿಕೆಯಲ್ಲಿ ಹೇಳಿದಂತೆ 2026-27ನೇ ಸಾಲಿಗೆ 7 ರೂಪಾಯಿ ಹಾಲಿನ ಪ್ರೋತ್ಸಾಹ ಧನ ಸಹ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ಯೋಜನೆ ಘೋಷಣೆ ಮಾಡಿ: ಉಮಾಶ್ರೀ

    ರೈತರ ಆತ್ಮಹತ್ಯೆಗಳು 50% ಕಡಿಮೆ ಆಗಿದೆ:
    ಪ್ರಸಕ್ತ ವರ್ಷದಲ್ಲಿ ಶೇ.50 ರೈತರ ಆತ್ಮಹತ್ಯೆಗಳು ಕಡಿಮೆಯಾಗಿದೆ. ಫೆಬ್ರವರಿ ಅಂತ್ಯಕ್ಕೆ 640 ಮಂದಿ ರೈತರ ಆತ್ಮಹತ್ಯೆಯಾಗಿದ್ದು, ಇದು ಬಿಜೆಪಿ ಆಡಳಿತದ ಅವಧಿಗಿಂತ ಕಡಿಮೆಯಾಗಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    ಮುಂದುವರಿದು.. ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀರಾವರಿಗೆ ಖರ್ಚು ಮಾಡೋದಾಗಿ ಕೂಡಲ ಸಂಗಮದಲ್ಲಿ ಹೇಳಿದ್ವಿ. ಅದರಂತೆ ಕಳೆದ 5 ವರ್ಷಗಳಲ್ಲಿ 56 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈಗಲೂ 5 ವರ್ಷ 1.5 ಲಕ್ಷ ಕೋಟಿ ರೂ. ಅನುದಾನ ನೀರಾವರಿಗೆ ಕೊಡ್ತೀವಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿ ದುಡ್ಡು ಕೊಡ್ತೀವಿ ಅಂತ ಹೇಳಿದ್ದೇವೆ. ಆದ್ರೆ ಬಿಜೆಪಿಯವರು ಅಧಿಕಾರದಲ್ಲಿದ್ದ 4 ವರ್ಷ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಈವರೆಗೆ ಘೋಷಣೆ ಮಾಡಿದ ಹಣವನ್ನೇ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: KPSC ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ – ಸದನದಲ್ಲಿ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ ಪಾಸ್

  • ಕಳೆದ 19 ತಿಂಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ – ರಾಜ್ಯಪಾಲರ ಭಾಷಣದ ಮೂಲಕ ವಿಪಕ್ಷಗಳಿಗೆ ತಿರುಗೇಟು

    ಕಳೆದ 19 ತಿಂಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ – ರಾಜ್ಯಪಾಲರ ಭಾಷಣದ ಮೂಲಕ ವಿಪಕ್ಷಗಳಿಗೆ ತಿರುಗೇಟು

    – ಈವರೆಗೆ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ
    – 334 ಘೋಷಣೆಗಳ ಪೈಕಿ 331 ಘೋಷಣೆ ಸರ್ಕಾರಿ ಆದೇಶ ಆಗಿದೆ
    – ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ರಾಜ್ಯಪಾಲರು

    ಬೆಂಗಳೂರು: ಕರ್ನಾಟಕ ವಿಧಾನಮಂಡಲ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಮತ್ತು ಪರಿಷತ್‌ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಭಾಷಣ ಮಾಡಿದರು.

    ಇದಕ್ಕೂ ಮುನ್ನ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಈ ವೇಳೆ ಸ್ಪೀಕರ್‌ ಯು.ಟಿ ಖಾದರ್‌, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಉಪಸ್ಥಿತರಿದ್ದರು.

    ಅಧಿವೇಶನ ಆರಂಭದಲ್ಲಿ ರಾಜ್ಯಪಾಲರು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನುದ್ದೇಶಿಸಿ ಮಾತನಾಡಿದರು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.

    ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರ್ಷಕ್ಕೆ 90,000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಅಭಿವೃದ್ಧಿ ವೇಗ ಸದೃಢಗೊಳಿಸಿದೆ. ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ವಿವರಿಸಿದರು.

    ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಸಾಮಾಜಿಕ ಪಿಂಚಣಿ ಯೋಜನೆ ಸೇರಿ ನೇರ ನಗದು – ಸಬ್ಸಿಡಿ ಪ್ರೋತ್ಸಾಹದಿಂದ 1.25 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಿದೆ. 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಉನ್ನತ ಶಿಕ್ಷಣದಲ್ಲಿ 1,088 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ. 8,311 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನ ವಿವರಿಸಿದರು.

    5,349 ಶಾಲಾ ಕೊಠಡಿಗಳು ಪೂರ್ಣ
    ವಿವೇಕ ಯೋಜನೆ ಅಡಿ ಮತ್ತು ವಿಶೇಷ ಯೋಜನೆ ಅಡಿ 5,349 ಶಾಲಾ ಕೊಠಡಿಗಳು ಪೂರ್ಣಗೊಂಡಿವೆ. 784 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. 1,953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು.

    ವಿಪಕ್ಷಗಳ ಆರೋಪಕ್ಕೆ ತಿರುಗೇಟು
    ಇದೇ ವೇಳೆ ಪ್ರತಿಪಕ್ಷಗಳ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪಕ್ಕೆ ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ತಿರುಗೇಟು ನೀಡಿತು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿ. ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

    ಹಾಲಿನ ಉತ್ಪಾದನೆಯಲ್ಲಿ ರಾಜ್ಯ ದಾಖಲೆ ಬರೆದಿದೆ. ದಿನಕ್ಕೆ ಕೆಎಂಎಫ್ 1 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದು, ಇದುವರೆಗೆ ಪಶು ಪಾಲಕರಿಗೆ 1,500 ಕೋಟಿ ಪ್ರೋತ್ಸಾಹ ಧನ ನೀಡಿದೆ. ಪ್ರಸಕ್ತ ಸಾಲಿನಲ್ಲಿ 24,934 ರಾಸುಗಳಿಗೆ, 33,373 ಕುರಿ, ಮೇಕೆಗಳಿಗೆ 26.60 ಕೋಟಿ ಪ್ರೋತ್ಸಾಹ ಧನ ನೀಡಿದೆ ಎಂದರಲ್ಲದೇ ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ ಅಂತ ಶ್ಲಾಘಿಸಿದರು.

    ಶಕ್ತಿ ಯೋಜನೆಗೆ 8,215 ಕೋಟಿ ರೂ. ಬಿಡುಗಡೆ
    ಜನವರಿ 17ರ ವರೆಗೆ ಶಕ್ತಿ ಯೋಜನೆ ಅಡಿಯಲ್ಲಿ 376.70 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆಗೆ ಸರ್ಕಾರದಿಂದ ಇದುವರೆಗೆ 8,215 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2024-25ರ ಬಜೆಟ್‌ನಲ್ಲಿ ನಮ್ಮ ಸರ್ಕಾರ ಶೇ.15.01 ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗಾಗಿ ವಿನಿಯೋಗ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ 1,81,908 ಕೋಟಿ ರೂ. ರಾಜಸ್ವ ಸಂಗ್ರಹಮಾಡಿದೆ (ಕಳೆದ ವರ್ಷಕ್ಕಿಂತ 13% ಜಾಸ್ತಿ).

    ರಾಜ್ಯದ ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುವ ಜೇನುತುಪ್ಪಕ್ಕೆ ʻಝೇಂಕಾರ್ʼ ಹೆಸರಿನ ವಿಶೇಷ ಬ್ರ‍್ಯಾಂಡ್ ರೂಪಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ 16,942 ಕೋಟಿ ರೂ. ಬೆಳೆ ಸಾಲ ಮತ್ತು 46,000 ರೈತರಿಗೆ 1,442 ಕೋಟಿ ರೂ. ಮಧ್ಯಮ, ದೀರ್ಘಾವಧಿಯ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಸಹಕಾರ ಸಂಘಗಳಿಗೆ ಬಡ್ಡಿ ಸಹಾಯ ಧನ ನೀಡಲು 1,451 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

  • ಇಂದಿನಿಂದ ಕಲಾಪ – ಸಾಲು ಸಾಲು ಪ್ರತಿಭಟನೆಗೆ ಪ್ಲ್ಯಾನ್‌, ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

    ಇಂದಿನಿಂದ ಕಲಾಪ – ಸಾಲು ಸಾಲು ಪ್ರತಿಭಟನೆಗೆ ಪ್ಲ್ಯಾನ್‌, ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

    ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶ (Budget Session 2025) ನಡೆಯುತ್ತಿರುವ ಹಿನ್ನೆಲೆ ಸಾಲು ಸಾಲು ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.

    ಈ ಹಿನ್ನೆಲೆ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ವಿಧಾನಸೌಧದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಹಕ್ಕಿ ಜ್ವರದ ಆತಂಕ – ಮಟನ್‌, ಫಿಶ್‌ ಮೊರೆಹೋದ ಚಿಕನ್‌ ಪ್ರಿಯರು

    ಜೆಡಿಎಸ್ ಕಾರ್ಯಕರ್ತರು ಗೃಹಲಕ್ಷ್ಮಿ ಹಣ ಬಿಡುಗಡೆಗೆ ದಿನಾಂಕ ನಿಗದಿಪಡಿಸುವಂತೆ ಆಗ್ರಹಿಸಿ ಕ್ಯಾಲೆಂಡರ್ ಹಿಡಿದು ವಿಧಾನಸೌದ ಮುತ್ತಿಗೆ ಹಾಕಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಕ್ಯಾಲೆಂಡರ್ ಹಿಡಿದು ಪ್ರತಿಭಟನೆಗೆ ಅವಕಾಶ ಕೊಡದೇ ಇರೊದಕ್ಕೆ ಖಾಕಿ ಪ್ಲ್ಯಾನ್‌ ಮಾಡಿಕೊಂಡಿದೆ. ಇದನ್ನೂ ಓದಿ: ಇಂದಿನಿಂದ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮೈತ್ರಿ ಸಜ್ಜು

    ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಕಾರಣ ವಿಧಾನಸೌಧದ ಸುತ್ತಮುತ್ತ ಖಾಕಿ ಕಣ್ಗಾವಲು ಇಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಭದ್ರತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸರು ಹಾಗೂ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಷೇರುಪೇಟೆ ವಂಚನೆ: ಸೆಬಿ ಮಾಜಿ ಅಧ್ಯಕ್ಷೆ ಬುಚ್‌ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ 

  • ಇಂದಿನಿಂದ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮೈತ್ರಿ ಸಜ್ಜು

    ಇಂದಿನಿಂದ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮೈತ್ರಿ ಸಜ್ಜು

    ಬೆಂಗಳೂರು: ವಿಧಾನ ಮಂಡಲದ ಅಧಿವೇಶನ (Assembly Session 2025) ಇಂದಿನಿಂದ (ಮಾ.3) ಆರಂಭವಾಗಲಿದೆ. ಆಡಳಿತ ವಿಪಕ್ಷಗಳ ನಡುವೆ ಫೈಟ್ ವೇದಿಕೆ ಸಜ್ಜಾಗಿದೆ. ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ – ಜೆಡಿಎಸ್‌ (BJP-JDS) ಜಂಟಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಿಕೊಂಡಿವೆ.

    ಗ್ಯಾರಂಟಿ ಹಣ ಬಿಡುಗಡೆ ವಿಳಂಬ.. ಕೆಪಿಎಸ್‌ಸಿ (KPSC) ಗೊಂದಲ.. ಪರಿಶಿಷ್ಟರ ಹಣ ಗ್ಯಾರಂಟಿ ಬಳಕೆ.. ಗ್ರೇಟರ್ ಬೆಂಗಳೂರು ಬಿಲ್ ಸೇರಿ ಹಲವು ವಿಚಾರ ಮುಂದಿಟ್ಟುಕೊಂಡು ಮುಗಿಬೀಳಲು ತಯಾರಿ ನಡೆಸಿವೆ. ಅಲ್ಲದೇ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿರುವ ವಿಚಾರ ಮುಂದಿಟ್ಟುಕೊಂಡು ಶಾಸಕರ ಭವನದಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಪ್ರವೇಶಿಸಲು ಬಿಜೆಪಿ‌-ಜೆಡಿಎಸ್‌ ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯತಂತ್ರ ರೂಪಿಸಿದೆ.

    ಸೋಮವಾರ (ಇಂದು) ಬೆಳಗ್ಗೆ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆ, ವಿಧಾನ ಪರಿಷತ್‌ ಪ್ರತ್ಯೇಕ ಸಮಾವೇಶಗೊಂಡು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಅಲ್ಲದೇ ಕಲಾಪವನ್ನು ಸುಗಮವಾಗಿ ನಡೆಸುವ ಹಾಗೂ ಉಭಯ ಸದನಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಮಧ್ಯಾಹ್ನದ ನಂತರ ಜಂಟಿ ಕಲಾಪ ಸಲಹಾ ಸಮಿತಿ ಸಭೆಯೂ ನಡೆಯಲಿದೆ. ಹಾಗಿದ್ದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದಲು ವಿಪಕ್ಷಗಳ ಅಸ್ತ್ರ ಏನಿದೆ? ಇದಕ್ಕೆ ಪ್ರತಿಯಾಗಿ ಕೌಂಟರ್‌ ಕೊಡಲು ಆಡಳಿತದ ಅಸ್ತ್ರಗಳು ಏನಿವೆ ಎಂಬುದನ್ನು ನೋಡೋಣ?

    ಅಧಿವೇಶನದಲ್ಲಿ ದೋಸ್ತಿಗಳ ಅಟ್ಯಾಕ್ ಏನು..?

    >. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿಯಾಗಿ ಬಿಡುಗಡೆ ಆಗದೇ ಇರೋ ವಿಚಾರ ಪ್ರಸ್ತಾಪ ಮಾಡುವುದು.
    >. ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿದ್ದ SCSP – TSP ಹಣ ಬಳಕೆ ವಿರುದ್ಧ ಹೋರಾಟ ಮಾಡುವುದು.
    >. ಕೆಪಿಎಸ್‌ಸಿ ಎಕ್ಸಾಂನಲ್ಲಿ ಆಗಿರೋ ಗೊಂದಲಗಳ ಬಗ್ಗೆ ವಿಷಯ ಪ್ರಸ್ತಾಪ.
    >. ಮೈಸೂರಿನ ಉದಯಪುರದಲ್ಲಿ ನಡೆದ ಗಲಭೆ ವಿಚಾರ ಪ್ರಸ್ತಾಪ.
    >. ಬಿಜೆಪಿ ಅವಧಿಯಲ್ಲಿ ಪ್ರಾರಂಭ ಮಾಡಿದ್ದ 9 ವಿವಿ ಕ್ಲೋಸ್ ಮಾಡಲು ಮುಂದಾಗಿರೋ ಸರ್ಕಾರದ ನಡೆ ವಿರುದ್ಧ ಹೋರಾಟ.
    >. ಗ್ರೇಟರ್ ಬೆಂಗಳೂರು ವಿಧೇಯಕ, ಟನಲ್ ರೋಡ್‌ಗೆ ವಿರೋಧ. ಈ ವಿಷಯ ಅಧಿವೇಶನದಲ್ಲಿ ಪ್ರಸ್ತಾಪ.
    >. ಬ್ರ‍್ಯಾಂಡ್ ಬೆಂಗಳೂರು ಅಂದ್ರು ಬೆಂಗಳೂರು ಅಭಿವೃದ್ಧಿ ಆಗದೇ ಇರೋ ವಿಚಾರ ಪ್ರಸ್ತಾಪ.
    >. ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಇರೋ ಬಗ್ಗೆ ವಿಷಯ ಪ್ರಸ್ತಾಪ ಮಾಡಲು ನಿರ್ಧಾರ.

    ಸರ್ಕಾರದ ಕೌಂಟರ್ ಅಸ್ತ್ರ?

    . ಗ್ಯಾರಂಟಿ ಯೋಜನೆಯಿಂದಾಗಿರೋ ಅನುಕೂಲಗಳ ಬಗ್ಗೆ ಪ್ರಸ್ತಾಪ.
    >. ಗ್ಯಾರಂಟಿ ಯೋಜನೆಗೆ ಬಿಡುಗಡೆ ಆಗಿರೋ ಹಣದ ಅಂಕಿ-ಅಂಶಗಳನ್ನ ಇಟ್ಟು ವಿಪಕ್ಷ ಬಾಯಿ ಮುಚ್ಚಿಸೋದು.
    >. ಬಿಜೆಪಿಯ ಆಂತರಿಕ ಕಿತ್ತಾಟ ಪ್ರಸ್ತಾಪ ಮಾಡಿ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸುವುದು.
    >. ಬಿಜೆಪಿ-ಜೆಡಿಎಸ್ ಅವಧಿಯಲ್ಲಿ SCSP – TSP ಹಣ ಬಳಕೆ ಮಾಡಿಕೊಂಡಿರೋ ಬಗ್ಗೆ ವಿಷಯ ಪ್ರಸ್ತಾಪ ಮಾಡುವುದು.
    >. ವಿಪಕ್ಷಗಳ ಕೆಪಿಎಸ್‌ಸಿ ಹೋರಾಟಕ್ಕೆ ಬಿಜೆಪಿ ಅವಧಿಯಲ್ಲಿ ಆಗಿರೋ ಎಕ್ಸಾಂಗಳ ಅಕ್ರಮದ ಬಗ್ಗೆ ಪ್ರಸ್ತಾಪ.
    >. ಉದಯಗಿರಿ ಪ್ರಕರಣ ಪ್ರಸ್ತಾಪಕ್ಕೆ ಬಿಜೆಪಿ ಅವಧಿಯಲ್ಲಿ ಆಗಿರೋ ಘಟನೆಗಳನ್ನ ಪ್ರಸ್ತಾಪಿಸಿ ಕೌಂಟರ್.
    >. ಗ್ಯಾರಂಟಿ ಹೊರತಾಗಿ ಅಭಿವೃದ್ಧಿ ಆಗಿರೋ ಅಂಕಿ-ಅಂಶಗಳನ್ನ ಬಿಡುಗಡೆ ಮಾಡಿ ವಿಪಕ್ಷಗಳಿಗೆ ಕೌಂಟರ್ ಕೊಡೋದು.