Tag: budget session 2022

  • ವಾಣಿಜ್ಯ LPG ಸಿಲಿಂಡರ್‌ ಬೆಲೆ 91.50 ರೂ. ಇಳಿಕೆ

    ವಾಣಿಜ್ಯ LPG ಸಿಲಿಂಡರ್‌ ಬೆಲೆ 91.50 ರೂ. ಇಳಿಕೆ

    ನವದೆಹಲಿ: ಕೇಂದ್ರ ಬಜೆಟ್‌ ಮಂಡನೆಗೂ ಮುನ್ನವೇ ವಾಣಿಜ್ಯ ಎಲ್‌ಪಿಜಿ (LPG) ಅಡುಗೆ ಅನಿಲ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು 91.50 ರೂ. ಇಳಿಕೆ ಮಾಡಲಾಗಿದೆ.

    19.2 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವು 91.50 ರೂ. ಇಳಿಸಲಾಗಿದೆ. ದರ ಇಳಿಕೆಯಿಂದಾಗಿ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 1,907ಕ್ಕೆ ಬಂದಿದೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?

    ಕೆಲ ತಿಂಗಳುಗಳಿಂದ ಎಲ್‌ಪಿಜಿ ದಲ ಏರಿಕೆ ಕಾಣುತ್ತಲೇ ಇತ್ತು. ಇದಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ ಮಾಡಲಾಗಿದೆ.

    ಇದರ ಮಧ್ಯೆ ವಿಮಾನ ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿದೆ. ವಿಮಾನದ ಇಂಧನದ ಬೆಲೆಯಲ್ಲಿ ಶೇ.8.5 ಏರಿಕೆಯಾಗಿದೆ. ವಿಮಾನ ಪ್ರಯಾಣಿಕರಿಗೆ ಪ್ರಯಾಣದ ಬಿಸಿ ತಟ್ಟಿದೆ. ಇದನ್ನೂ ಓದಿ: ದೇಶದ 5 ರಾಜ್ಯಗಳಲ್ಲಿ 16 ವಿಮಾನ ನಿಲ್ದಾಣಗಳ ನಿರ್ಮಾಣ: ಜ್ಯೋತಿರಾದಿತ್ಯ ಸಿಂಧಿಯಾ

  • Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

    Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

    ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಸಂಸತ್‌ನಲ್ಲಿ ಮಂಗಳವಾರ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಇಂದು ಮಂಡಿಸಿದರು.

    ಆರ್ಥಿಕ ಸಮೀಕ್ಷೆಯಲ್ಲೇನಿದೆ?
    * 2022-23ರ ಆರ್ಥಿಕ ವರ್ಷದಲ್ಲಿ ದೇಶವು ಶೇ.8ರಿಂದ ಶೇ.8.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು. ಇದನ್ನೂ ಓದಿ: ಪಣಜಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ದಿಢೀರ್ ಹಿಂಪಡೆದ ಶಿವಸೇನೆ

    * ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ಪ್ರಮಾಣ ಇದಕ್ಕಿಂತ ಕಡಿಮೆಯಾಗಲಿದೆ.

    * ʼಫ್ರೇಜಿಲ್‌ ಫೈವ್‌ʼ ರಾಷ್ಟ್ರಗಳಿಂದ ಭಾರತವು 4ನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಸ್ಥಾನಕ್ಕೆ ಬಂದಿದೆ. ಇದು ತಂತ್ರಗಾರಿಕೆಗೆ ನೀತಿ ಅವಕಾಶವನ್ನು ನೀಡುತ್ತದೆ.

    * 2070ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆ ಗುರಿಯನ್ನು ಸಾಧಿಸಲು ದೇಶಕ್ಕೆ ಹವಾಮಾನ ಹಣಕಾಸು ನಿರ್ಣಯವಾಗಿ ಉಳಿಯುತ್ತದೆ.

    * ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಗಳಲ್ಲಿನ ಬೆಳವಣಿಗೆಗಳಿಂದಾಗಿ ದೇಶದ ಆರ್ಥಿಕತೆಯು ಸದ್ಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಲಾವಣ್ಯ ಆತ್ಮಹತ್ಯೆ ಕೇಸ್ ತನಿಖೆ ಸಿಬಿಐ ಹೆಗಲಿಗೆ: ಹೈಕೋರ್ಟ್ ಆದೇಶ

    * ಸಣ್ಣ ಹಿಡುವಳಿ ಕೃಷಿ ತಂತ್ರಜ್ಞಾನಗಳ ಮೂಲಕ ಸಣ್ಣ, ಅತಿ ಸಣ್ಣ ರೈತರ ಉತ್ಪಾದಕತೆ ಸುಧಾರಿಸಲು ಸಮೀಕ್ಷೆ ಕರೆ ನೀಡಿದೆ.

    * ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ತೋಟಗಾರಿಕೆ ಕಡೆಗೆ ಬೆಳೆ ವೈವಿಧ್ಯೀಕರಣಕ್ಕೆ ಆದ್ಯತೆ.

    * ಆರ್ಥಿಕತೆಯ ಪುನರುಜ್ಜೀವನಕ್ಕೆ ಬೆಂಬಲ ಒದಗಿಸಲು ಹಣಕಾಸು ವ್ಯವಸ್ಥೆಯೊಂದಿಗೆ ಆಯ್ಕೆ ಮಾಡಲು ಖಾಸಗಿ ವಲಯದ ಹೂಡಿಕೆ.