Tag: Budget 2025

  • ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ಹಾಸನ: ಕೇಂದ್ರ ಬಜೆಟ್‍ನಲ್ಲಿ ಹಾಸನ (Hassan) ಅಲ್ಲ, ಕರ್ನಾಟಕವೇ ಇರಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ (H.D Revanna) ಸಂಸದ ಶ್ರೇಯಸ್ ಪಟೇಲ್ (Shreyas Patel) ಟಾಂಗ್ ಕೊಟ್ಟಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಾನೊಬ್ಬ ಜನಪ್ರತಿನಿಧಿಯಾಗಿದ್ದೇನೆ. ನನಗೆ ಕೇಂದ್ರ ಬಜೆಟ್ ಪುಸ್ತಕ ಕೊಡ್ತಾರೆ. ನನಗಿಂತ ಗೊತ್ತಾ ಅವರಿಗೆ? ಕೆಂದ್ರ ಬಜೆಟ್ ಪುಸ್ತಕದಲ್ಲಿ ಎಷ್ಟೋ ರಾಜ್ಯಗಳ ಹೆಸರಿಲ್ಲ. ಇನ್ನೂ ಹಾಸನದ ಹೆಸರು ಇರುತ್ತಾ? ರಾಜ್ಯ ಬಜೆಟ್‍ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದನ್ನೂ ಓದಿ: ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಇನ್ನೂ ಪೊಲೀಸರು ಕುಡಿದು ಕರ್ತವ್ಯಕ್ಕೆ ಬರುತ್ತಾರೆ ಎಂಬ ರೇವಣ್ಣ ಅವರ ಆರೋಪಕ್ಕೆ, ಗಲಾಟೆಯಾದ ಸಂದರ್ಭದಲ್ಲಿ ಪೊಲೀಸರು ನಿಭಾಯಿಸುತ್ತಾರೆ. ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾರದು. ಎಣ್ಣೆ ಕುಡಿದು ಬಂದು ಡ್ಯೂಟಿ ಮಾಡಿದ್ರೆ ಸಾಕ್ಷಿ, ಪುರಾವೆಗಳಿದ್ದರೆ ಕೊಡಲಿ. ಇವರ ಕಾಲದಲ್ಲಿ ಏನೇನು ಆಗಿದೆ ಎಂದು ಗೊತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ರಾಜ್ಯಕ್ಕೆ ಇವರ ಕಾಲದಲ್ಲಿ ಯಾವ ಗ್ಯಾರೆಂಟಿ ಕೊಟ್ಟಿದ್ದಾರೆ? ನಾವು ಕೆಲಸ ಮಾಡುತ್ತಿದ್ದೇವೆ, ಮುಂದೆ ಸಹ ಮಾಡಿ ತೋರಿಸುತ್ತೇವೆ. ಅವರು ಹಿರಿಯರಿದ್ದಾರೆ ಅಭಿವೃದ್ಧಿಗೆ ಕೈ ಜೋಡಿಸಲಿ, ಸಲಹೆ ನೀಡಲಿ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಹಾಸನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಲಹೆ, ಸಹಕಾರ ನೀಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

    ನಾಲ್ಕೈದು ತಿಂಗಳಿನಲ್ಲಿ ಸರ್ಕಾರ ಬೀಳುತ್ತೆ ಎಂಬ ಎಂಎಲ್‍ಸಿ ಸೂರಜ್ ರೇವಣ್ಣ ಹೇಳಿಕೆ ವಿಚಾರವಾಗಿ, ತಿಳಿದವರಿಗೆ, ಬುದ್ದಿವಂತರಿಗೆ ಏನಾದರೂ ಉತ್ತರ ಕೊಡಬಹುದು. ಅವರು ಯಾವ ಮಾನದಂಡದ ಮೇಲೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರವಾಗಿದೆಯೇ? 140 ಜನ ಶಾಸಕರಿದ್ದಾರೆ. ಇಡೀ ರಾಜ್ಯದ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಸೋಮವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಜೆಟ್ ಪುಸ್ತಕದಲ್ಲಿ ನಮ್ಮ ಜಿಲ್ಲೆಯ ಹೆಸರೇ ಇರಲಿಲ್ಲ, ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: Hassan| ಅತ್ತೆ-ಸೊಸೆ ಜಗಳ; ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ

  • ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಹಾಸನಕ್ಕೆ ಬಜೆಟ್‌ನಲ್ಲಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ: ರೇವಣ್ಣ ವ್ಯಂಗ್ಯ

    ಹಾಸನ: ಬಜೆಟ್ (Budget 2025) ಪುಸ್ತಕದಲ್ಲಿ ನಮ್ಮ ಜಿಲ್ಲೆಯ (Hassan) ಹೆಸರೇ ಇರಲಿಲ್ಲ ಆದರೂ ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ವ್ಯಂಗ್ಯವಾಡಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದ ಮುಖ್ಯಮಂತ್ರಿಗಳು 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಮುಂದುವರಿಸಿದ್ದಾರೆ. ಜಿಲ್ಲೆಗೆ ತೋಟಗಾರಿಕೆ ಕಾಲೇಜು ಮಂಜೂರು ಮಾಡ್ತಾರೆ, ಫ್ಲೈಓವರ್‌ಗೆ ಅನುದಾನ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಬಿಡುಗಡೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂ. ಕೊಡ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಜಿಲ್ಲೆಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ನೀಡಿಲ್ಲ. ಹಾಗಾಗಿ ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

    ದುದ್ದ ಪೊಲೀಸ್ ಠಾಣೆಯಲ್ಲಿ ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕಿಕೊಂಡು ಬಂದು, ಕಂಪ್ಲೆಂಟ್ ಕೊಡಲು ಬಂದವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಜಿಲ್ಲೆಯಲ್ಲಿ ಮಟ್ಕಾ, ಜೂಜು ದಂಧೆ ನಡೆಯುತ್ತಿದೆ. ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮದ್ಯ ಚಟದಿಂದ ಅವರ ಮನೆಯ ಹೆಣ್ಣುಮಕ್ಕಳ ಒಡವೆ ಮಾರಿಕೊಳ್ಳುತ್ತಿದ್ದಾರೆ. ಕೆಳಗಿನ ಅಧಿಕಾರಿಗಳ ಮೇಲೆ ಎಸ್ಪಿಯವರಿಗೆ ನಿಯಂತ್ರಣ ಇಲ್ಲದಂತಾಗಿದೆ. ಯುವಕರು ಎಲ್ಲೆಂದರಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಎಸ್ಪಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಜಿಲ್ಲಾ ಉಸ್ತುವಾರಿ ಬೇಡ ಎಂಬ ಸಚಿವ ಕೆ.ಎನ್.ರಾಜಣ್ಣ (K.N Rajanna) ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅವರೆಲ್ಲ ದೊಡ್ಡವರು ನಾವು ಮಾತನಾಡಲ್ಲ ಎಂದಿದ್ದಾರೆ.

  • ಫೆ.15ರಂದು ಅಶ್ವಿನಿ ವೈಷ್ಣವ್ ರಾಜ್ಯ ಭೇಟಿ – ಕೇಂದ್ರ ಬಜೆಟ್ ಕುರಿತು ಸಂವಾದ

    ಫೆ.15ರಂದು ಅಶ್ವಿನಿ ವೈಷ್ಣವ್ ರಾಜ್ಯ ಭೇಟಿ – ಕೇಂದ್ರ ಬಜೆಟ್ ಕುರಿತು ಸಂವಾದ

    ಬೆಂಗಳೂರು: ಕೇಂದ್ರದ ನೂತನ ಬಜೆಟ್ (Union Budget 2025) ಕುರಿತ ವಿಶ್ಲೇಷಣೆ ಮತ್ತು ಚರ್ಚೆಗಳು ದೇಶಾದ್ಯಂತ ಎಲ್ಲ ಕಡೆ ನಡೆಯುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಎಲ್ಲ ಜಿಲ್ಲೆಗಳಲ್ಲಿ, ವಿಭಾಗ ಕೇಂದ್ರಗಳಲ್ಲಿ ಚರ್ಚೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ (Budget) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 8ನೇ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದವರಿಗೆ ಬಂಪರ್‌ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್‌ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ

    ಈ ಬೆನ್ನಲ್ಲೇ ಇದೇ ಫೆ.15ರಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ರಾಜ್ಯದ ಪಕ್ಷದ ಕಚೇರಿಯಲ್ಲಿ ಬಜೆಟ್ ಕುರಿತು ಒಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಂತರ ಶಾಂಘ್ರಿಲಾ ಹೋಟೆಲ್‍ನಲ್ಲಿ ಸಮಾಜದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ಸ್, ವೈದ್ಯರು, ಉದ್ಯಮಿಗಳು ಸೇರಿ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: Fashion | ನೈಲ್‌ ಆರ್ಟ್‌ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!

    ಕೇಂದ್ರ ಬಜೆಟ್‍ನಲ್ಲಿ ಎಲ್ಲರಿಗೂ ಆದ ಉಪಯೋಗಗಳು, ಸಮಾಜದ ಎಲ್ಲ ವರ್ಗದವರಿಗೆ ತಿಳಿಯಬೇಕೆಂಬ ಉದ್ದೇಶ ಇದರದ್ದು. ನಂತರ ಪಕ್ಷದ ಮುಖಂಡರು, ಸಂಸದರು, ಶಾಸಕರು ಜಿಲ್ಲೆಗಳಲ್ಲಿ ಸಂವಾದ ನಡೆಸಿ ಬಜೆಟ್ ಸದುಪಯೋಗದ ವಿವರ ನೀಡುತ್ತಾರೆ. ನಿಯುಕ್ತರಾದ ಕೇಂದ್ರದ ಸಚಿವರು ವಿವಿಧ ಕಡೆ ಕೇಂದ್ರ ಬಜೆಟ್ ಕುರಿತ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

  • Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ನವದೆಹಲಿ: ಬಜೆಟ್ (Budget 2025) ಡೇ ಸೂಪರ್ ಓವರ್‌ನಲ್ಲಿ ನಿರ್ಮಲಾ ಸೀತಾರಾಮನ್ (Nirmala sitharaman) ʻಸೂಪರ್ ಸಿಕ್ಸ್ʼ ಸಿಡಿಸಿದ ಪರಿಣಾಮ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.

    ಫೆಬ್ರವರಿ ಕೊನೆಯವರೆಗೂ ಆಪ್‌ ಮತ್ತು ಬಿಜೆಪಿ ಮಧ್ಯೆ ನೆಕ್‌ ಟು ನೆಕ್‌ ಪೈಪೋಟಿ ಇತ್ತು. ಈ ಸಂದರ್ಭದಲ್ಲಿ ಕೇಂದ್ರ ಬಜೆಟ್‌ ಬಂದಿತ್ತು. ಮಧ್ಯಮ ವರ್ಗದವರನ್ನು ಗುರಿಯಾಗಿಸಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ ತೆರಿಗೆ ವಿನಾಯಿತಿ ಈ ಚುನಾವಣೆಯಲ್ಲಿ ಬೂಸ್ಟ್‌ ನೀಡಿದ ಪರಿಣಾಮ ಈಗ ದೆಹಲಿಯಲ್ಲಿ (Delhi) 27 ವರ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ ಏರಿದೆ.

    ಇದೇ ತಿಂಗಳು ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ 12 ಲಕ್ಷ ರೂ. ವರೆಗೂ ತೆರಿಗೆ ವಿನಾಯಿತಿ ಘೋಷಿಸಿದರು. ಇದು ರಾಷ್ಟ್ರ ರಾಜಧಾನಿಯಲ್ಲಿರುವ ಮಧ್ಯಮ ವರ್ಗದ 45% ಮತದಾರರ ಮೇಲೆ ಪರಿಣಾಮ ಬೀರಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್

    ದೆಹಲಿ ಚುನಾವಣೆಯ (Delhi Election) ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಜೆಟ್‌ನಲ್ಲಿ ಯಾವುದೇ ದೆಹಲಿ ಸಂಬಂಧ ಯೋಜನೆಗಳನ್ನು ಪ್ರಕಟಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಹೀಗಿದ್ದರೂ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದ ಬಿಜೆಪಿ ಮಧ್ಯಮ ವರ್ಗದ ಜನ ಹೆಚ್ಚಾಗಿರುವ ದೆಹಲಿಯನ್ನ ಕೇಂದ್ರೀಕರಿಸಿ ತೆರಿಗೆಯಲ್ಲಿ ವಿನಾಯತಿ ನೀಡಿತ್ತು. ಇದು ಕೇಸರಿ ಪಡೆಗೆ ದೊಡ್ಡ ಶಕ್ತಿ ತಂದುಕೊಟ್ಟಿತು. 2020ರಲ್ಲಿ ಮಧ್ಯಮ ವರ್ಗದ ಬೆಂಬಲದಿಂದಲೇ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿತ್ತು.

    2024ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಇದೇ ಮಧ್ಯಮ ವರ್ಗ ಸಂಪೂರ್ಣ ಬೆಂಬಲ ನೀಡಿತ್ತು. ಈ ಬಜೆಟ್‌ನಲ್ಲೂ ಪ್ರಧಾನಿ ಮೋದಿ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ ಆದಾಯ ತೆರಿಗೆ ಮಿತಿ ಸಡಿಲಿಕೆ ನೀಡಿದ್ದರಿಂದಲೇ ದೆಹಲಿ ಜನರ ಒಲವು ಬಿಜೆಪಿಯತ್ತ ವಾಲಿತು.

    ಮಧ್ಯಮ ವರ್ಗದವರ ಆಕ್ರೋಶ ತಣ್ಣಗೆ ಮಾಡಲು ನಿರ್ಮಲಾ ಸೀತಾರಾಮನ್‌ 2024 ಜುಲೈನಲ್ಲೇ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಘೋಷಿಸಬಹುದಿತ್ತು. ಆದ್ರೆ ಆ ಸಂದರ್ಭದಲ್ಲಿ ಯಾವುದೇ ಮಹತ್ವದ ತೆರಿಗೆ ವಿನಾಯಿತಿ ಘೋಷಣೆ ಮಾಡದ ಸೀತಾರಾಮನ್‌ ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಚುನಾವಣೆಯ ಹತ್ತಿರ ಇರುವಾಗಲೇ ಈ ಐತಿಹಾಸಿಕ ಘೋಷಣೆ ಪ್ರಕಟವಾದ್ದರಿಂದ ದೆಹಲಿಯ ಮತದಾರರು ಈ ಬಾರಿ ಬಿಜೆಪಿ ಕೈ ಹಿಡಿದಿದ್ದಾರೆ.

    ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಇದನ್ನೂ ಓದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಇನ್ನೂ ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿತ್ತು. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿತ್ತು. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿತ್ತು. ಆದ್ರೆ ಒಂದೂ ಖಾತೆ ತೆರೆಯದೆ ಕಾಂಗ್ರೆಸ್‌ ಮಕಾಡೆ ಮಲಗಿತು.

  • ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ?

    ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ?

    ಬೆಂಗಳೂರು: ಮಾರ್ಚ್ 7 ರಂದು ರಾಜ್ಯ ಬಜೆಟ್ (Budget) ಮಂಡನೆಯಾಗುವ ಸಾಧ್ಯತೆ ಇದೆ.

    ಇದೇ ಗುರುವಾರದಿಂದ (ಫೆ.6) ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತೆ ಆರಂಭಿಸಲಿದ್ದಾರೆ. ಫೆಬ್ರವರಿ 6ರಿಂದ 14ರ ತನಕ ಬಜೆಟ್ ಪೂರ್ವಭಾವಿ ಚರ್ಚೆ ನಿಗದಿಯಾಗಿದ್ದು, ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತ ಬಜೆಟ್ ಸಿದ್ಧತಾ ಸಭೆ ನಡೆಯಲಿದೆ.

    ಮಾರ್ಚ್ ಮೊದಲ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ಸರ್ಕಾರದ ಸಿದ್ಧತೆ ನಡೆಸಿದೆ. ಮಾರ್ಚ್ 3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಸಾಧ್ಯತೆ ಇದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಬಜೆಟ್ ದಿನಾಂಕ, ಜಂಟಿ ಅಧಿವೇಶನ ದಿನಾಂಕ ಅಂತಿಮಗೊಳಿಸಲಿರುವ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

    ಎರಡು ದಿನಗಳ ಹಿಂದಷ್ಟೇ ಮಂಡಿ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಎರಡು ದಿನ ಸಿಎಂ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಸದ್ಯ ಸಿಎಂ ವಿಶ್ರಾಂತಿಯಲ್ಲಿದ್ದಾರೆ.

  • ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್‌ ಕುರಿಯನ್‌

    ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್‌ ಕುರಿಯನ್‌

    ತಿರುವನಂತಪುರಂ: ಕೇರಳಕ್ಕೆ (Kerala) ಹೆಚ್ಚಿನ ಅನುದಾನ ಬೇಕಿದ್ದರೆ ಹಿಂದುಳಿದ ರಾಜ್ಯವೆಂದು ಘೋಷಿಸಲಿ ಎಂದು ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ (George Kurian) ಹೇಳಿದ್ದಾರೆ.

    2022ರ ಬಜೆಟ್‌ನಲ್ಲಿ (Budget 2025) ಕೇಂದ್ರ ಸರ್ಕಾರ ಕೇರಳ ರಾಜ್ಯವನ್ನು ಕಡೆಗಣಿಸಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕುರಿಯನ್‌, ಕೇರಳ ರಾಜ್ಯವು ಕೇಂದ್ರದಿಂದ ಹೆಚ್ಚಿನ ಅನುದಾನ ಬಯಸಿದ್ರೆ, ಹಿಂದುಳಿದ ರಾಜ್ಯ ಎಂದು ಘೋಸಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ `ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್ ಮಾಡಿದ್ದಕ್ಕೆ ಮದ್ವೆ ನಿಲ್ಲಿಸಿದ ವಧುವಿನ ತಂದೆ

    ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಬಿದ್ದ ರಾಜ್ಯಗಳಿಗೆ ಕೇಂದ್ರವು ವಿಶೇಷ ಹಣಕಾಸಿನ ಪ್ಯಾಕೇಜ್‌ಗಳನ್ನ ಹಂಚುತ್ತದೆ. ಹಾಗಾಗಿ ನೀವು ಕೇರಳ ಹಿಂದುಳಿದಿದೆ. ರಸ್ತೆಗಳು ಸರಿಯಿಲ್ಲ, ಉತ್ತಮ ಶಿಕ್ಷಣವಿಲ್ಲ, ಮೌಲ ಸೌಕರ್ಯಗಳಲ್ಲಿ ಹಿಂದುಳಿದಿದೆ ಎಂದು ನೀವು ಘೋಷಿಸಿದ್ರೆ, ಹಣಕಾಸು ಆಯೋಗ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಹೆಚ್ಚಿನ ಅನುದಾನ ಸಿಗಲಿದೆ ಎಂದು ಹೇಳಿದ್ದಾರೆ.

    ಸಚಿವರ ಈ ಹೇಳಿಕೆ ತೀವ್ರ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯು ಕೇರಳ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ರಾಜ್ಯದ ಆಡಳಿತ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆಗೆ ಈಶ್ವರ್ ಖಂಡ್ರೆ ಸೂಚನೆ

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ 8ನೇ ಬಜೆಟ್‌ ಭಾಷಣ ಮಂಡಿಸಿದ ಬಳಿಕ ಕೇರಳ ಸಿಎಂ ಇದು ನಿರಾಶಾದಾಯಕ ಬಜೆಟ್‌. ಕಳೆದ ಜುಲೈನಲ್ಲಿ ಭೂಕುಸಿತ ಸಂಭವಿಸಿದ ವಯನಾಡನ್ನು ಮತ್ತೆ ನಿರ್ಮಿಸಲು ಅನುದಾನಕ್ಕೆ ಮನವಿ ಮಾಡಿದ್ದೆವು. ಆದ್ರೆ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರಹಾಕಿದ್ದರು.

    ವಯನಾಡ್‌ ಭೂಕುಸಿತಕ್ಕೆ ಸಂಬಂಧಿಸಿದಂತೆ ಅನುದಾನ ಹಾಗೂ 24,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ಸಹ ನೀಡುವಂತೆ ಕೋರಿದ್ದೆವು. ವಿಝಿಂಜಂ ಬಂದರಿನ ರಾಷ್ಟ್ರೀಯ ಪ್ರಾಮುಖ್ಯತೆ ಪರಿಗಣಿಸಿ, ಅದಕ್ಕೂ ಬೆಂಬಲವನ್ನು ಕೋರಿದ್ದೆವು. ಇದ್ಯಾವುದನ್ನು ಸರ್ಕಾರ ಪರಿಗಣಿಸಿಲ್ಲ. ಕೇರಳ ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ಮುಂದಿದೆ. ಆದ್ರೆ ಕೆಲವು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಆ ಕ್ಷೇತ್ರಗಳ ಉನ್ನತೀಕರಣಕ್ಕಾಗಿ ಅನುದಾನ ಕೇಳಿದರೂ ಕಡೆಗಣಿಸಲಾಗಿದೆ ಎಂದು ಅಕ್ಷೇಪಿಸಿದ್ದರು.

  • Budget 2025 | ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡುತ್ತಾ ʻಮಿಡಲ್ ಕ್ಲಾಸ್ʼ ಬಜೆಟ್‌

    Budget 2025 | ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡುತ್ತಾ ʻಮಿಡಲ್ ಕ್ಲಾಸ್ʼ ಬಜೆಟ್‌

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ (Delhi Elections) ಹೊತ್ತಲ್ಲೇ ಬಜೆಟ್ ಮೂಲಕ ಮಧ್ಯಮ ವರ್ಗದ ಮತಗಳ ಮೇಲೆ ಬಿಜೆಪಿ (BJP) ಕೇಂದ್ರೀಕರಿಸಿದೆ.

    12 ಲಕ್ಷದವರೆಗೂ ತೆರಿಗೆ ವಿನಾಯತಿ ನೀಡಿದ್ದು ಇದು ರಾಷ್ಟ್ರ ರಾಜಧಾನಿಯಲ್ಲಿರುವ ಮಧ್ಯಮ ವರ್ಗದ 45% ಮತದಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಇದನ್ನೂ ಓದಿ: ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ – 2028ರ ವರೆಗೂ ಜಲಜೀವನ್ ಮಿಷನ್ ವಿಸ್ತರಣೆ

    ದೆಹಲಿ ಕೇಂದ್ರಿತ ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು, ಈ ನಡುವೆ ಆದಾಯ ತೆರಿಗೆಯಲ್ಲಿ ವಿನಾಯತಿ ನೀಡಿರುವುದು ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಶಕ್ತಿ ತುಂಬಿದಂತಾಗಲಿದೆ. 2020ರಲ್ಲಿ, ಮಧ್ಯಮ ವರ್ಗದ ಬೆಂಬಲದಿಂದ ಆಮ್ ಆದ್ಮಿ ಪಕ್ಷ ಗೆಲುವಿನತ್ತ ಸಾಗಿತು.

    2024ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದ್ದು ಇದೇ ಮಧ್ಯಮ ವರ್ಗ, ಈಗ ಬಜೆಟ್ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿದ್ದು ಆದಾಯ ತೆರಿಗೆ ಮಿತಿ ಸಡಿಲಿಕೆಯಿಂದ ಬಿಜೆಪಿಯತ್ತ ದೆಹಲಿಯಲ್ಲಿ ಒಲವು ಹೆಚ್ಚಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: Budget 2025: ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್‌ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ

  • ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ – 2028ರ ವರೆಗೂ ಜಲಜೀವನ್ ಮಿಷನ್ ವಿಸ್ತರಣೆ

    ಕಿಸಾನ್ ಕ್ರೆಡಿಟ್‌ಕಾರ್ಡ್ ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ – 2028ರ ವರೆಗೂ ಜಲಜೀವನ್ ಮಿಷನ್ ವಿಸ್ತರಣೆ

    – ಬಜೆಟ್‌-2025; ಮಿಡ್ಲ್ ಕ್ಲಾಸ್‌ಗೆ ಟಾಪ್ ಕ್ಲಾಸ್

    ನವದೆಹಲಿ: 4.4% ವಿತ್ತೀಯ ಕೊರತೆಯೊಂದಿಗೆ 50.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಕೇತ್ರ ಸೇರಿದಂತೆ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕಿಸಾನ್‌ ಕಾರ್ಡ್‌ ಸಾಲದ ಮಿತಿಯನ್ನು 5 ಲಕ್ಷ ರೂ.ವರೆಗೆ ಏರಿಕೆ ಮಾಡಿದ್ದಾರೆ.

    ಬಜೆಟ್: ಮಿಡ್ಲ್ ಕ್ಲಾಸ್‌ಗೆ ಟಾಪ್ ಕ್ಲಾಸ್ – ಪ್ರಮುಖ ಅಂಶಗಳು
    * ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ 5 ಲಕ್ಷದವರೆಗೂ ಹೆಚ್ಚಳ
    * ಹೈನುಗಾರರು, ಮೀನುಗಾರರಿಗೆ 5 ಲಕ್ಷದವರೆಗೂ ಸಾಲ
    * ಬೀದಿಬದಿ ವರ್ತಕರಿಗೆ 30ಸಾವಿರ ಮಿತಿಯ ಯುಪಿಐ ಕ್ರೆಡಿಟ್ ಕಾರ್ಡ್
    * ದೇಶದ 200 ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಸೆಂಟರ್
    * ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇಕೇರ್ ಸೆಂಟರ್
    * 36 ಪ್ರಮುಖ ಜೀವರಕ್ಷಕ ಔಷಧಿಗಳಿಗೆ ತೆರಿಗೆ ವಿನಾಯ್ತಿ
    * ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್
    * ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್
    * ದೇಶದ 100 ಜಿಲ್ಲೆಗಳಲ್ಲಿ ಪಿಎಂ ʻಧನ್‌ ಧಾನ್ಯʼ ಕೃಷಿ ಯೋಜನೆ
    * ನವೋದ್ಯಮಕ್ಕೆ 20 ಕೋಟಿಯವರೆಗೆ ಕಡಿಮೆ ಬಡ್ಡಿದರಲ್ಲಿ ಸಾಲ
    * ದಲಿತ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು 2 ಕೋಟಿವರೆಗೆ ಸಾಲ
    * ಗಿಗ್ ಕಾರ್ಮಿಕರಿಗೆ ಐಡಿ ಕಾರ್ಡ್, ಇ-ಶ್ರಮ್‌ನಲ್ಲಿ ರಿಜಿಸ್ಟರ್
    * 10,000 ವೈದ್ಯಕೀಯ, 6,500 ಐಐಟಿ ಸೀಟ್ ಹೆಚ್ಚಳ
    * 500 ಕೋಟಿ ವೆಚ್ಚದಲ್ಲಿ 3 ಕಡೆ ಎಐ ಎಕ್ಸಲೆನ್ಸ್ ಸೆಂಟರ್
    * ವಿದೇಶಿ ಮಾರುಕಟ್ಟೆಗಾಗಿ ಆಟಿಕೆಗಳಿಗೆ ರಾಷ್ಟ್ರೀಯ ಯೋಜನೆ
    * ಹೊಸದಾಗಿ ಗ್ರಾಮೀಣ ಅಂಚೆ ಕಚೇರಿ ಸ್ಥಾಪನೆ
    * ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ
    * ಉಡಾನ್ ಯೋಜನೆಯಡಿ ಹೊಸ ಏರ್‌ಪೋರ್ಟ್
    * 2028ವರೆಗೂ ಜಲಜೀವನ್ ಮಿಷನ್ ವಿಸ್ತರಣೆ

    ಇನ್ನೂ ಬಜೆಟ್ಟಲ್ಲಿ ವೃದ್ಧರಿಗೆ ಟಿಡಿಎಸ್ ರಿಲೀಫ್ ಸಿಕ್ಕಿದೆ. ಹಿರಿಯ ನಾಗರಿಕರಿಗೆ ಬಡ್ಡಿ ರೂಪದಲ್ಲಿ ಸಿಗುವ ಆದಾಯದ ಮೇಲೆ ಟಿಡಿಎಸ್ ಮಿತಿಯನ್ನು 50,000ದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಿದ್ದಾರೆ. ಬಾಡಿಗೆ ರೂಪದಲ್ಲಿ ಸಿಗುವ ಆದಾಯದ ಮೇಲೆ ಟಿಡಿಎಸ್ ಅನ್ನು 2.4 ಲಕ್ಷದಿಂದ 6 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ಅಪ್‌ಡೇಟೆಡ್ ಐಟಿ ರಿಟರ್ನ್ ಸಲ್ಲಿಕೆ ಗಡುವನ್ನು 2 ವರ್ಷದಿಂದ 4 ವರ್ಷಕ್ಕೆ ಹೆಚ್ಚಿಸಲಾಗಿದೆ. ಅಂದ ಹಾಗೇ, ಮುಂದಿನ ವಾರ ಹೊಸ ಆದಾಯ ತೆರಿಗೆ ಮೇಲೆ ಮಸೂದೆಯನ್ನು ಕೇಂದ್ರ ತರಲಿದೆ. ಇದನ್ನೂ ಓದಿ: Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

  • ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್‌ ಖರ್ಗೆ

    ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್‌ ಖರ್ಗೆ

    ಕಲಬುರಗಿ: ಕೇಂದ್ರ ಸರ್ಕಾರದ (Union Government) ಇಂತಹ 10 ಬಜೆಟ್ ನೋಡಿದ್ದೇವೆ. ಎಲ್ಲ ಬಜೆಟ್‌ನಲ್ಲಿಯೂ ಘೋಷಣೆಗಳು ಮಾತ್ರವೇ ಇರುತ್ತವೆಯೇ ಹೊರತು, ಅದರಲ್ಲಿ ಜನರಿಗೆ ಗಣನೀಯವಾಗಿ ಅನುಕೂಲ ಆಗುವಂತಹದ್ದು ಇಲ್ಲ. ಕಾರ್ಮಿಕರು, ಮಹಿಳೆಯರು, ಯುವಕರಿಗೆ, ಆದಾಯ ತೆರಿಗೆ ಪಾವತಿದಾರರು, ಎಸ್‌ಎಂಇ, ಎಂಎಸ್‌ಎಂಇ, ನವೋದ್ಯಮಿಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಸ್ಲ್ಯಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಜಿಎಸ್‌ಟಿ (GST) ಬಗ್ಗೆ, ಆದಾಯ ತೆರಿಗೆ ಬಗ್ಗೆಯೂ ಹೀಗೆ ಮಾತನಾಡಿದ್ದರು. ಈವರೆಗೂ ಅವರು ಟ್ಯಾಕ್ಸೇಷನ್ ಪದ್ದತಿಯನ್ನು ಸರಿಯಾಗಿ ಅಳವಡಿಸಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

    ಕೇಂದ್ರದ ಯಾವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ? ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಲ್ಲಿ 9 ವರ್ಷದ ಹಿಂದೆ ನೆರವು ಘೋಷಣೆ ಮಾಡಿದ್ದರು. ಈವರೆಗೂ ಕೊಟ್ಟಿದ್ದು 454 ಕೋಟಿ ರೂ. ಅಷ್ಟೆ. ಅವರು ಅಲಂಕಾರಿಕ ಪದಗಳನ್ನ ಬಳಸಿ ಘೋಷಣೆಗಳನ್ನು ಮಾಡುವುದರಲ್ಲಿ ಮುಂದಿದ್ದಾರೆ. ಆದರೆ ತಳಮಟ್ಟದಿಂದ ಅನುಷ್ಠಾನ ಶೂನ್ಯ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ ಸರ್ಕಾರ: ಆರ್‌.ಅಶೋಕ್

    ಕೇಂದ್ರದ ಬಳಿ ಬಳಿ ದುಡ್ಡಿಲ್ಲ. ಕರ್ನಾಟಕದಲ್ಲಿ ಜಲಜೀವನ್ ಮಿಷನ್‌ಗೆ 3,500 ಕೋಟಿ ರೂ. ಕೊಡಬೇಕು. ಆದ್ರೆ ಕೊಟ್ಟಿರೋದು 500 ಕೋಟಿ ರೂ. ಮಾತ್ರ. ನಾವು ಕೇಳಿದಾಗ, ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಕೆಲಸ ನಿಲ್ಲಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಉಳಿದ 3,000 ಕೋಟಿ ಮೊತ್ತವನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗೆ ಸೀಮಿತವಾಗಿದೆ. ಆದರೆ ಅವುಗಳ ಪರಿಪೂರ್ಣ ಅನುಷ್ಠಾನ ಎಂದಿಗೂ ನಡೆದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

  • ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

    ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

    ನವದೆಹಲಿ: ಬಜೆಟ್‌ ಮಂಡನೆ (Budget 2025) ವೇಳೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ತೆಲುಗು ಕವಿ ಮತ್ತು ನಾಟಕಕಾರ ಗುರಜದ ವೆಂಕಟ ಅಪ್ಪರಾವ್ (Gurajada Venkata Apparao) ಅವರನ್ನು ಸ್ಮರಿಸಿದ್ದಾರೆ.

    ಅಪ್ಪರಾವ್‌ ಅವರ ʻದೇಶವೆಂದರೆ ಅದರ ಮಣ್ಣು ಮಾತ್ರವಲ್ಲ, ದೇಶವೆಂದರೆ ಅದರ ಜನರುʼ (ದೇಶಮಂತೆ ಮತ್ತಿ ಕಾಡೋಯಿ, ದೇಶಮಂತೆ ಮನುಷ್ಯೋಯಿ) ಸಾಲನ್ನು ಬಳಸಿ ಮಾತಾಡಿದ್ದಾರೆ. ಈ ಮಾತಿನಂತೆ ನಮ್ಮದು ಜನರ ಬಜೆಟ್‌ ಆಗಿದೆ. ವಿಕ್ಷಿತ್ ಭಾರತವೂ ಶೂನ್ಯ ಬಡತನ, ಉತ್ತಮ ಶಾಲಾ ಶಿಕ್ಷಣ, ಉತ್ತಮ ಸಮಗ್ರ ಆರೋಗ್ಯ ಸೇವೆ, 100% ಕೌಶಲ್ಯಪೂರ್ಣ ಕಾರ್ಮಿಕರು, ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ 70% ಮಹಿಳೆಯರು ಮತ್ತು ರೈತರನ್ನು ಒಳಗೊಂಡಿದೆ. ಅವರೆಲ್ಲ ನಮ್ಮ ದೇಶವನ್ನು ವಿಶ್ವದ ಆಹಾರದ ಬುಟ್ಟಿಯನ್ನಾಗಿ ಮಾಡುತ್ತಿದ್ದಾರೆ.

    ಗುರಜದ ಅಪ್ಪರಾವ್ (1861-1915) ಅವರು ತೆಲುಗು ಭಾಷೆಯಲ್ಲಿ ತಮ್ಮ ನಾಟಕಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ನಾಟಕಗಳಲ್ಲಿ ವಿಶೇಷವಾಗಿ ಕನ್ಯಾಸುಲ್ಕಂ ಮತ್ತು ದೇಸಮುನು ಪ್ರೇಮಿಂಚುಮನ್ನಾ ಬಹಳ ಪ್ರಮುಖವಾಗಿವೆ.

    ಆಂಧ್ರಪ್ರದೇಶದ (Andhra Prades) ಇಂದಿನ ಎಲಮಂಚಿಲಿಯಲ್ಲಿ ಜನಿಸಿದ ಅಪ್ಪರಾವ್ ವಿಜಯನಗರದ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಬಳಿಕ ಅದೇ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

    ನಾಟಕಗಳು, ಸಣ್ಣ ಕಥೆಗಳು ಮತ್ತು ಕಾವ್ಯಗಳನ್ನು ಅವರು ಬರೆದಿದ್ದಾರೆ. ತೆಲುಗು ಭಾಷಿಕರ ಮತ್ತು ಕಳಿಂಗ (ಒಡಿಶಾ) ಭೂಮಿಯ ಇತಿಹಾಸವನ್ನು ಸಂಶೋಧಿಸಿ ಅದರ ಇತಿಹಾಸವನ್ನು ಬರೆಯಲು ಅವರು ಯೋಜಿಸಿದ್ದರು. ಅವರು 1915 ರಲ್ಲಿ ನಿಧನರಾದರು.

    ನಿರ್ಮಲಾ ಅವರ 8ನೇ ಬಜೆಟ್‌ನಲ್ಲಿ MSME ವಲಯ, ಮಹಿಳೆಯರು, ರೈತರು, ಶಿಕ್ಷಣ ವಲಯ ಮತ್ತು ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಯಾಯಿತಿಗಳನ್ನು ಘೋಷಿಸಲಾಗಿದೆ.