Tag: Buddha

  • ಜಾಗತಿಕ ಸಮಸ್ಯೆಗಳಿಗೆ ಬುದ್ಧನೇ ಪರಿಹಾರ: ಮೋದಿ

    ಜಾಗತಿಕ ಸಮಸ್ಯೆಗಳಿಗೆ ಬುದ್ಧನೇ ಪರಿಹಾರ: ಮೋದಿ

    ನವದೆಹಲಿ: ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳಿಗೆ ಭಗವಾನ್ ಬುದ್ಧನ (Buddha) ಆಲೋಚನೆಗಳು ಪರಿಹಾರವನ್ನು ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಹೇಳಿದ್ದಾರೆ.

    ದೆಹಲಿಯಲ್ಲಿ (Delhi) ನಡೆದ ಜಾಗತಿಕ ಬೌದ್ಧ ಶೃಂಗಸಭೆಯ (Global Buddhist Summit) ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕೆಲವು ದೇಶಗಳು ಮುಂಬರುವ ಪೀಳಿಗೆಯ ಬಗ್ಗೆ ಯೋಚಿಸದ ಕಾರಣ ಜಗತ್ತು ಈಗ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ನಾನೇ ಎಂಬ ಅಭಿಮಾನಿಗಳ ಮಾತು ಕೇಳಿ ಖುಷಿಯೂ ಆಗುತ್ತೆ, ನೋವು ಆಗುತ್ತೆ: ಸೋಮಣ್ಣ

    ಶ್ರೀಮಂತ ರಾಷ್ಟ್ರಗಳು ದಶಕಗಳ ಕಾಲ ಅವರು ಪ್ರಕೃತಿಯೊಂದಿಗೆ ಮಧ್ಯ ಪ್ರವೇಶಿಸಿ ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯೋಚಿಸುತ್ತಿದ್ದರು. ಆದರೆ ಈಗ ಅವರು ಅದನ್ನು ಇತರರ ಮೇಲೆ ಹಾಕುತ್ತಿದ್ದಾರೆ. ಭಗವಾನ್ ಬುದ್ಧ ತೋರಿಸಿದ ಮಾರ್ಗವು ಭವಿಷ್ಯ ಮತ್ತು ಸುಸ್ಥಿರತೆಯ ಹಾದಿ ಎಂದು ಒತ್ತಿ ಹೇಳಿದ ಅವರು, ಜಗತ್ತು ಅವರ ಬೋಧನೆಗಳನ್ನು ಅನುಸರಿಸಿದ್ದರೆ, ಅದು ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿರಲಿಲ್ಲ ಎಂದಿದ್ದಾರೆ.

    ಭಗವಾನ್ ಬುದ್ಧನ ಬೋಧನೆಗಳನ್ನು ಅರಿತು ಬುದ್ಧನ ತತ್ತ್ವಶಾಸ್ತ್ರದಿಂದ ಸ್ಫೂರ್ತಿ ಪಡೆಯುವ ಮೂಲಕ ತಮ್ಮದೇ ಆದ ಜಾಗತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಈ ಸಮಯದ ಅಗತ್ಯವಾಗಿದೆ. ಇದೊಂದೆ ಸಂತೋಷ ಮತ್ತು ಸ್ಥಿರ ಜಗತ್ತಿಗೆ ದಾರಿಯಾಗಿದೆ. ಅಲ್ಲದೆ ಬಡವರು ಮತ್ತು ಸಂಪನ್ಮೂಲಗಳ ಕೊರತೆಯಿರುವ ದೇಶಗಳ ಬಗ್ಗೆ ಜಗತ್ತು ಯೋಚಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

    ಭಗವಾನ್ ಬುದ್ಧನ ಬೋಧನೆಗಳಿಂದ ಪ್ರೇರಿತವಾಗಿರುವ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ. ಟರ್ಕಿ (Turkey) ಭೂಕಂಪ ಸೇರಿದಂತೆ ಇತರೆ ದೇಶಗಳಿಗೆ ಸಹಾಯವನ್ನು ನೀಡುತ್ತಿರುವ ವಿಚಾರವನ್ನು ಉಲ್ಲೇಖಿಸಿ ಭಾರತವು ಎಲ್ಲರ ನೋವನ್ನು ತನ್ನದೇ ಎಂದು ಪರಿಗಣಿಸಿದೆ ಎಂದು ಹೇಳಿದ್ದಾರೆ.

    ಎರಡು ದೇಶಗಳು ಯುದ್ಧದಲ್ಲಿವೆ. ಪ್ರಪಂಚವು ಆರ್ಥಿಕ ಅಸ್ಥಿರತೆಯ ಮೂಲಕ ಸಾಗುತ್ತಿದೆ. ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದವು ಮಾನವೀಯತೆಯ ಆತ್ಮದ ಮೇಲೆ ಆಕ್ರಮಣ ಮಾಡುತ್ತಿದೆ. ಹವಾಮಾನ ಬದಲಾವಣೆಯ ಕ್ರೂರತೆ ಜಗತ್ತಿನ ಮೇಲೆ ಸುಳಿದಾಡುತ್ತಿದೆ. ಹಿಮನದಿಗಳು ಕರಗುತ್ತಿವೆ, ಪರಿಸರ ನಾಶವಾಗುತ್ತಿದೆ. ಇದಕ್ಕೆಲ್ಲ ಬುದ್ಧನ ಆಲೋಚನೆಗಳು ಪರಿಹಾರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಭಾಷಣದಲ್ಲಿ ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನೆನಪಿಸಿಕೊಂಡ ಅವರು, ಭಾರತವು ಜಗತ್ತಿಗೆ ಯುದ್ಧವನ್ನು ನೀಡಲಿಲ್ಲ. ಅದು ಬುದ್ಧನನ್ನು ನೀಡಿದೆ ಎನ್ನುವುದನ್ನು ಪುನರ್ ಉಚ್ಚರಿಸಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಅವಧಿ ಅಂತ್ಯ – ಕಣದಲ್ಲಿ 4 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು

  • ‘ಬುದ್ದ’ನಾಗಿ ಬಂದ ಕನ್ನಡದ ಮಹೇಶ್ ಬಾಬು

    ‘ಬುದ್ದ’ನಾಗಿ ಬಂದ ಕನ್ನಡದ ಮಹೇಶ್ ಬಾಬು

    ತ೯ನ್ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ, ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ವಿದ್ಯಾರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಬುದ್ದ” ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ  ಫಸ್ಟ್ ಲುಕ್ ಕನ್ನಡ ಜನತೆಯ ಮೆಚ್ಚುಗೆಯನ್ನು ಗಳಿಸಿದೆ. ಎಂಜಿನಿಯರಿಂಗ್ ವ್ಯಾಸಂಗ ಮಾಡಿ, ಅಭಿನಯದ ಬಗ್ಗೆ ತರಭೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

    ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆಯಿದೆ. “ಬುದ್ದ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಎಲ್ಲಾ ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೆ ಕಳೆದು ಹೋಗುತ್ತಾನೆ. ಮುಂದೇನು? ಎಂಬುದೆ ಕುತೂಹಲ. ಎಂದು ಚಿತ್ರದ ಕಥೆಯ ತಿರುಳನ್ನು ಹೇಳಿರುವ ನಾಯಕ ಮಹೇಶ್ ಬಾಬು, ಇದೊಂದು ಕೌಟುಂಬಿಕ ಚಿತ್ರ ಎನ್ನುತ್ತಾರೆ. ಇದನ್ನೂ ಓದಿ: ಪ್ರೇಮಿಗಳ ದಿನದಂದು ಪತ್ನಿಗೆ ರೊಮ್ಯಾಂಟಿಕ್ ಆಗಿ ನಿರ್ಮಾಪಕ ರವೀಂದ್ರ ವಿಶ್

    ಚಿತದಲ್ಲಿ ಐದು ಹಾಡುಗಳಿದೆ. ಒಂದು ಹಾಡನ್ನು ಡಾ||ವಿ.ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ಬಾಬು, ವಿದ್ಯಾರಾಜ್, ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದಲ್ಲಿ ನಟಿಸುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ ವಿನಯ್ ಗುರೂಜಿ

    ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ ವಿನಯ್ ಗುರೂಜಿ

    – ಆ ಸಿದ್ಧಾರ್ಥ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಕೆಲಸ, ಬದುಕು ಕೊಟ್ಟ

    ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಅವಧೂತ ವಿನಯ್ ಗುರೂಜಿ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.

    ದಿವಂಗತ ಸಿದ್ಧಾರ್ಥ್ ಹೆಗ್ಡೆಯವರ ಸ್ವಗ್ರಾಮವಾದ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟಿಗೆ ಭೇಟಿ ನೀಡಿದ್ದ ವಿನಯ್ ಗುರೂಜಿ, ಅವರ ಸಮಾಧಿ ಬಳಿ ಬುದ್ಧನ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಇದೇ ವೇಳೆ ಮಾತನಾಡಿ, ಆ ಸಿದ್ಧಾರ್ಥ ಜಗತ್ತಿಗೆ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಲಕ್ಷಾಂತರ ಜನರಿಗೆ ಜೀವನ ಹಾಗೂ ಬದುಕನ್ನ ಕೊಟ್ಟ ಎಂದು ಸಿದ್ಧಾರ್ಥ್ ಹೆಗ್ಡೆಯವರ ಸರಳ ವ್ಯಕ್ತಿತ್ವವನ್ನ ಸ್ಮರಿಸಿದ್ದಾರೆ.

    ಆಶ್ರಮದಲ್ಲಿ ಪೂಜಿಸುತ್ತಿದ್ದ ಬುದ್ಧನ ಮೂರ್ತಿಯನ್ನ ಸಿದ್ಧಾರ್ಥ್ ಹೆಗ್ಡೆಯವರ ಮನೆ ಪಕ್ಕದಲ್ಲಿನ ಅವರ ಸಮಾಧಿ ಬಳಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಹೆಗ್ಡೆ ಅವರ ತಾಯಿ ವಾಸಂತಿ ಹೆಗ್ಡೆ ಹಾಗೂ ಕುಟುಂಬದ ಆಪ್ತರು ಭಾಗಿಯಾಗಿದ್ದರು. ಚೇತನಹಳ್ಳಿಗೆ ಭೇಟಿ ನೀಡುವ ಮುನ್ನ ವಿನಯ್ ಗುರೂಜಿ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಧರ್ಮಕರ್ತರಾದ ಭೀಮೇಶ್ವರ ಜೋಷಿಯವರು ವಿನಯ್ ಗುರೂಜಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

     

  • ಬೆಂಗ್ಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಪ್ರತಿಮೆ ಸಮರ!

    ಬೆಂಗ್ಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಪ್ರತಿಮೆ ಸಮರ!

    ಬೆಂಗಳೂರು: ನಗರದ ಜ್ಞಾನಭಾರತಿ ಅವರಣದಲ್ಲಿ ಸರಸ್ವತಿ ಪ್ರತಿಮೆ ತೆಗೆದು ಬುದ್ಧನ ಪ್ರತಿಮೆ ಇಡಲಾಗಿದ್ದ ಪ್ರಕರಣ ಸಂಬಂಧ ತಡರಾತ್ರಿವರೆಗೂ ಬೆಂಗಳೂರು ವಿವಿ ಕುಲಪತಿ ಕುಲಸಚಿವರು ಸೇರಿದಂತೆ ಆಡಳಿತ ಮಂಡಳಿ ಸಭೆ ನಡೆಸಿದೆ.

    ಸೋಮವಾರ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಹಳೆಯದಾಗಿತ್ತು ಎನ್ನಲಾದ ಸರಸ್ವತಿ ಪ್ರತಿಮೆಯನ್ನು ತೆರವುಗೊಳಿಸಿ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದನ್ನು ಕೆಲ ವಿದ್ಯಾರ್ಥಿಗಳು ವಿರೋಧಿಸಿ ಪ್ರತಿಭಟನೆ ನಡೆಸಿದ ತಕ್ಷಣ ಅಡಳಿತ ಮಂಡಳಿ, ಬುದ್ಧನ ಪ್ರತಿಮೆಯನ್ನು ತೆರವುಗೊಳಿಸಿದ್ದರು.

    ಇದರಿಂದ ಕೋಪಗೊಂಡ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು, ಪ್ರತಿಭಟನೆ ನಡೆಸಿದರು. ಇದೇ ವಿಚಾರವಾಗಿ ಸೆಂಟ್ರಲ್ ಕಾಲೇಜ್‍ನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ, ವಿವಿಯ ಕುಲ ಸಚಿವರು, ಕುಲಪತಿಗಳು, ಆಡಳಿತ ಮಂಡಳಿಯವರು, ಸಭೆ ಸೇರಿದ್ದು ಯಾವ ಪ್ರತಿಮೆ ಇಡಬೇಕು ಮತ್ತು ಯಾರ ಗಮನಕ್ಕೂ ತರದೇ ಬುದ್ಧನ ಪ್ರತಿಮೆ ಇಟ್ಟ ವಿದ್ಯಾರ್ಥಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ವಿಭಿನ್ನವಾಗಿ ಮದ್ವೆಯಾದ ಪ್ರೇಮಿಗಳು

    ವಿಭಿನ್ನವಾಗಿ ಮದ್ವೆಯಾದ ಪ್ರೇಮಿಗಳು

    ಮೈಸೂರು: ಜಾತಿ ಮೀರಿ ಜಿಲ್ಲೆಯಲ್ಲಿ ಜೋಡಿಯೊಂದು ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.

    ಶಿಲ್ಪಾ ಮತ್ತು ಸಾಗರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿ. ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಈ ಸರಳ ವಿವಾಹ ನಡೆದಿದ್ದು, ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಅಂತರ್ಜಾತಿಯ ಮದುವೆ ನಡೆದಿದೆ. ಒಡನಾಡಿಯಲ್ಲಿ ಸಂಸ್ಥೆಯಲ್ಲಿ ನೆರವೇರಿದ 88ನೇ ಸರಳ ವಿವಾಹ ಇದಾಗಿದೆ.

    ಮೈಸೂರಿನ ಅರವಿಂದನಗರದ ಸಿದ್ದರಾಜು ಮತ್ತು ಭಾಗ್ಯಲಕ್ಷ್ಮೀ ಪುತ್ರಿ ಶಿಲ್ಪಾ ಮತ್ತು ಮೈಸೂರಿನ ವಿಜಯನಗರ ನಿವಾಸಿಗಳಾದ ಕುಮಾರಸ್ವಾಮಿ ಮತ್ತು ಕಲಾವತಿ ಪುತ್ರ ಸಾಗರ್ ಸರಳ ವಿವಾಹವಾಗಿದ್ದಾರೆ. ಶಿಲ್ಪಾ ಮತ್ತು ಸಾಗರ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಬಂಧು ಮಿತ್ರರ ಸಮ್ಮುಖದಲ್ಲಿ ಇಂದು ನಡೆದ ವಿವಾಹದಲ್ಲಿ ನವಜೋಡಿಗಳಿಬ್ಬರು ಬುದ್ಧನ ತತ್ವಗಳನ್ನು ಹೇಳಿದರು. ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದ ಹಲವರು ದಂಪತಿಗೆ ಆಶೀರ್ವದಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12ನೇ ಶತಮಾನದ ಬುದ್ಧನ ಪ್ರತಿಮೆ ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಮರಳಿತು!

    12ನೇ ಶತಮಾನದ ಬುದ್ಧನ ಪ್ರತಿಮೆ ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಮರಳಿತು!

    ಲಂಡನ್: 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಪ್ರಾಚೀನ ಕಾಲದ ಕಂಚಿನ ಬುದ್ಧನ ಪ್ರತಿಮೆಯೊಂದು ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತಕ್ಕೆ ಮರಳಿದೆ.

    ಲಂಡನ್‍ನಲ್ಲಿ ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಈ ಪ್ರತಿಮೆಯನ್ನು ಜಾತ್ರೆಯೊಂದರಲ್ಲಿ ವ್ಯಕ್ತಿಯೊಬ್ಬ ಗ್ರಾಹಕನಿಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಈ ಪ್ರತಿಮೆಯನ್ನು ವಶಕ್ಕೆ ಪಡೆದಿದ್ದರು.

    ಮಾರಾಟಗಾರರಿಗೆ ಈ ಪ್ರತಿಮೆಯ ಇತಿಹಾಸ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಇದನ್ನು ಭಾರತಕ್ಕೆ ಹಿಂದಿರುಗಿಸಲು ಒಪ್ಪಿಕೊಂಡರು. ಹೀಗಾಗಿ ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಂಡನ್ ನಲ್ಲಿರುವ ಭಾರತದ ಹೈ ಕಮೀಷನರ್ ವೈ.ಕೆ.ಸಿಂಹಾ ಅವರಿಗೆ ಲಂಡನ್ ಪೊಲೀಸ್ ಹಸ್ತಾಂತರಿಸಿದೆ.

    12ನೇ ಶತಮಾನದಲ್ಲಿ ತಯಾರಿಸಲಾಗಿದ್ದ ಒಟ್ಟು 14 ಕಂಚಿನ ಬುದ್ಧನ ಮೂರ್ತಿಗಳಲ್ಲಿ ಪೈಕಿ ಇದು ಒಂದಾಗಿದೆ. 1961ರಲ್ಲಿ ನಳಂದಾ ಪುರಾತತ್ವ ಮ್ಯುಸಿಯಂನಿಂದ ಕಳ್ಳತನ ಮಾಡಲಾಗಿತ್ತು. ಪತ್ತೆಗಾಗಿ ಅಧಿಕಾರಿಗಳು ಶ್ರಮಿಸಿದ್ದರೂ ಎಲ್ಲೂ ಸಿಕ್ಕಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆಚ್ಚುಗೆ ಕೆಲಸದ ಬದಲು, ಸಮಾಜಕ್ಕೆ ಕೊಡುಗೆ ನೀಡಿ: ರಮೇಶ್ ಕುಮಾರ್

    ಮೆಚ್ಚುಗೆ ಕೆಲಸದ ಬದಲು, ಸಮಾಜಕ್ಕೆ ಕೊಡುಗೆ ನೀಡಿ: ರಮೇಶ್ ಕುಮಾರ್

    ಬೆಂಗಳೂರು: ಸಮಾಜವನ್ನು ಮೆಚ್ಚಿಸುವ ಕೆಲಸ ಮಾಡುವುದಕ್ಕಿಂತ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಇಂದಿನ ಅವಶ್ಯವಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ರೇವಾ ವಿಶ್ವವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುವೆಂಪು ಸಭಾಂಗಣ ಲೋಕಾರ್ಪಣೆ ಮಾಡಿ ಬಳಿ ಮಾತನಾಡಿದ ಅವರು, ಬುದ್ಧ, ಅಶೋಕ,  ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ಬೋಸ್ ಮುಂತಾದವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ, ಇವರೆಲ್ಲರೂ ವಿಶ್ವಚೇತನರು. ಇವರು ಸಮಾಜಕ್ಕಾಗಿ ದುಡಿದವರು ಎಂದು ತಿಳಿಸಿದರು.

    ಇಂದಿನ ಯುವಕರು ಸಿನಿಮಾ ನಟರ ಬಗ್ಗೆ ತಿಳಿದುಕೊಂಡಷ್ಟು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.