Tag: Bucharest

  • ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪೋಲೆಂಡ್‍ನಿಂದ ವಿಶೇಷ ವಿಮಾನದ ಮೂಲಕ ಹಿಂದಿರುಗಿದ ಉಕ್ರೇನ್‍ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಬುಕಾರೆಸ್ಟ್‌ನಿಂದ ಬಂದ 218 ನಾಗರಿಕರನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ಮಾತನಾಡುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ.

    ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ. ನಿಮ್ಮನ್ನು ಸುರಕ್ಷಿತವಾಗಿ ಇಲ್ಲಿಗೆ ಕರೆ ತಂದಿರುವ ವಿಮಾನ ಸಿಬ್ಬಂದಿಗೆ ಧನ್ಯವಾದ ಹೇಳೋಣ ಎಂದು ಅವರು ವಿಶೇಷ ಇಂಡಿಗೋ ವಿಮಾನದ ಸಾರ್ವಜನಿಕ ವಿಳಾಸ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ನಮ್ಮ ನಾಗರಿಕರನ್ನು ಮರಳಿ ಮನೆಗೆ ಕರೆತರುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಗಳಿಗೆ ಅವರ ಸೇವೆ ಮತ್ತು ಬೆಂಬಲಕ್ಕಾಗಿ ನಮ್ಮ ವಿಮಾನಯಾನ ಸಿಬ್ಬಂದಿ ಮತ್ತು ಪೈಲಟ್‍ಗಳಿಗೆ ನಾನು ಕೃತಜ್ಞಳಾಗಿದ್ದೇನೆ ಎಂದರು. ಇದರ ಮಧ್ಯೆ ಉಕ್ರೇನ್‍ನಲ್ಲಿ ಸಿಲುಕಿರುವ 183 ಭಾರತೀಯರನ್ನು ಹೊತ್ತ ಬುಕಾರೆಸ್ಟ್‌ನಿಂದ ಮತ್ತೊಂದು ವಿಮಾನ ಗುರುವಾರ ಬೆಳಗ್ಗೆ ಮುಂಬೈಗೆ ಬಂದಿಳಿದಿದೆ. ಬುಕಾರೆಸ್ಟ್‌ನಿಂದ ಮುಂಬೈಗೆ ಮೂರನೇ ಸ್ಥಳಾಂತರಿಸುವ ವಿಮಾನದ ಪ್ರಯಾಣಿಕರನ್ನು ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಸ್ವಾಗತಿಸಿದರು. ಇದನ್ನೂ ಓದಿ: ನಿಮ್ಮ ಒಂದು ಮತದಿಂದ ಯುಪಿ ದೇಶದ ನಂ.1 ಆರ್ಥಿಕತೆ ರಾಜ್ಯವಾಗುತ್ತೆ: ಯೋಗಿ ಆದಿತ್ಯನಾಥ್‌

    ಇಲ್ಲಿಯವರೆಗೆ ಸುಮಾರು ನಾಲ್ಕರಿಂದ ಐದು ಸಾವಿರ ಭಾರತೀಯರನ್ನು ಮನೆಗೆ ಕರೆತರಲಾಗಿದೆ. ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆಯು ಉಕ್ರೇನ್ ಮತ್ತು ನೆರೆಯ ದೇಶಗಳಲ್ಲಿ ಇನ್ನೂ ಸಿಲುಕಿರುವವರನ್ನು ಮರಳಿ ಕರೆತರುವುದನ್ನು ಮುಂದುವರಿಸುತ್ತದೆ.