Tag: bucha genocide

  • ಬುಚಾ ನರಮೇಧವನ್ನು ತೀವ್ರವಾಗಿ ಖಂಡಿಸಿದ ಭಾರತ

    ಬುಚಾ ನರಮೇಧವನ್ನು ತೀವ್ರವಾಗಿ ಖಂಡಿಸಿದ ಭಾರತ

    ಕೀವ್: ರಷ್ಯಾ-ಉಕ್ರೇನ್ ನಡ್ವೆ ಯುದ್ಧ ಮುಂದುವರೆದಿದೆ. ಉಕ್ರೇನ್‍ನ ಬುಚಾ ಪಟ್ಟಣದಲ್ಲಿ ನಡೆದ ನಾಗರಿಕರ ನರಮೇಧವನ್ನು ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಅತ್ಯುಗ್ರವಾಗಿ ಖಂಡಿಸಿದೆ.

    ಭದ್ರತಾಮಂಡಳಿಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ತಿರುಮೂರ್ತಿ, ಉಕ್ರೇನ್‍ನಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಬುಚಾ ನರಮೇಧದ ದೃಶ್ಯಗಳು ಕಳವಳ ಮೂಡಿಸುತ್ತಿವೆ. ಈ ಹತ್ಯಾಕಾಂಡವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಬಗ್ಗೆ ಸ್ವಾತಂತ್ರ್ಯ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    ಸಂಸತ್‍ನಲ್ಲಿ ಮಾತಾಡಿದ ವಿದೇಶಾಂಗ ಮಂತ್ರಿ ಜೈಶಂಕರ್ ಕೂಡ, ಬುಚಾ ನರಮೇಧ ದಾರುಣ ಎಂದಿದ್ದಾರೆ. ಭಾರತ ಶಾಂತಿ ಬಯಸುತ್ತದೆ ಎಂದು ಜಗತ್ತಿಗೆ ಸ್ಪಷ್ಟಪಡಿಸಿದ್ದಾರೆ. ಬುಚಾ ನರಮೇಧ ಖಂಡಿಸಿರುವ ಅಮೆರಿಕಾ, ರಷ್ಯಾದಲ್ಲಿ ಹೊಸ ಹೂಡಿಕೆಗಳ ಮೇಲೆ, ರಷ್ಯಾದ ಆರ್ಥಿಕ ಸಂಸ್ಥೆಗಳ ಮೇಲೆ, ಪುಟಿನ್‍ರ ಇಬ್ಬರು ಪುತ್ರಿಯರ ಮೇಲೆ, ಕ್ರೆಮ್ಲಿನ್ ಉನ್ನತಾಧಿಕಾರಿಗಳ ಮೇಲೆ, ಅವರ ಕುಟುಂಬಸ್ಥರ ಮೇಲೆ ಹೆಚ್ಚುವರಿ ದಿಗ್ಬಂಧನ ವಿಧಿಸಿದೆ. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಟಿನ್, ಇದೆಲ್ಲಾ ಸ್ವಾತಂತ್ರ್ಯಕ್ಕಾಗಿ ರಷ್ಯಾ ತೆರುತ್ತಿರುವ ಬೆಲೆ ಎಂದಿದ್ದಾರೆ. ಪೋಪ್ ಫ್ರಾನ್ಸೀಸ್ ಕೂಡ ಬುಚಾ ನರಮೇಧವನ್ನು ಖಂಡಿಸಿದ್ದಾರೆ. ತಾವು ಮುತ್ತಿಕ್ಕಿದ ಉಕ್ರೇನ್ ಧ್ವಜವನ್ನು ಬುಚಾ ನಗರಕ್ಕೆ ಕಳಿಸಿಕೊಟ್ಟಿದ್ದಾರೆ.