Tag: BTech

  • ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’

    ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’

    ಪಾಟ್ನಾ: ಸ್ವಂತ ಉದ್ಯಮದ (Startup) ಕನಸು ಕಾಣ್ತಿದ್ದ ಬಿಟೆಕ್ ವಿದ್ಯಾರ್ಥಿನಿ (B Tech Student) ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಬಿಹಾರದ (Bihar) ಬಿ-ಟೆಕ್ ವಿದ್ಯಾರ್ಥಿನಿ ವರ್ತಿಕಾ ಸಿಂಗ್ ಫರಿದಾಬಾದ್‌ನಲ್ಲಿ `ಟೀ ಸ್ಟಾಲ್’ (Tea Stall) ಮಳಿಗೆ ಸ್ಥಾಪಿಸುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ತನ್ನ ಪದವಿ ಇನ್ನೂ 4 ವರ್ಷ ಇತ್ತು. ಅಷ್ಟು ಸಮಯ ಕಾಯದೇ `ಬಿ-ಟೆಕ್ ಚಾಯ್‌ವಾಲಿ’ ಎಂಬ ಹೆಸರಿನೊಂದಿಗೆ ಚಹಾ ಅಂಗಡಿ ತೆರೆದಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ (Social Media) ಭಾರಿ ಸದ್ದು ಮಾಡ್ತಿದೆ. ಇದನ್ನೂ ಓದಿ: `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    ಪ್ರತಿದಿನ ಬೆಳಿಗ್ಗೆ 5:30 ರಿಂದ ರಾತ್ರಿ 9:30ರ ವರೆಗೆ ಚಹಾ ಅಂಗಡಿ ತೆರೆದಿರಲಿದೆ. ಮಸಾಲಾ ಮತ್ತು ಲೆಮೆನ್ ಚಾಯ್‌ಗೆ ತಲಾ 20 ರೂ., ಸಾಮಾನ್ಯ ಚಾಯ್‌ಗೆ 10 ರೂ. ಇರಲಿದೆ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತುಳು ಭಾಷೆಯಲ್ಲೂ ಬರಲಿದೆ ‘ಕಾಂತಾರ’: ಶೆಟ್ರೇ ಉಡಲ್ ಗೆಂದಿಯರ್

    ಮುಂದುವರಿದು, ಈ ಹಿಂದೆ ಅರ್ಥಶಾಸ್ತ್ರ ಪದವೀಧರೆ ಪ್ರಿಯಾಂಕ ಗುಪ್ತಾ 2 ವರ್ಷಗಳಿಂದ ಕೆಲಸ ಸಿಗದೇ ಬಿಹಾರದ ರಾಜಧಾನಿಯಲ್ಲಿ ಮಹಿಳಾ ಕಾಲೇಜು ಬಳಿಯೇ ಟೀ ಸ್ಟಾಲ್ ಹಾಕಿದ್ದರು. 2019ರಲ್ಲಿ ತನ್ನ ಪದವಿ ಪೂರ್ಣಗೊಳಿಸಿದ್ದ ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ `ಎಂಬಿಎ ಚಾಯ್‌ವಾಲಾ’ ಎಂದೇ ಪ್ರಸಿದ್ಧಿಯಾದರು ಅವರ ಕಥೆ ನನಗೆ ಟೀ ಸ್ಟಾಲ್ ತೆರೆಯಲು ಸ್ಫೂರ್ತಿಯಾಯಿತು ಎಂದು ನೆನೆದಿದ್ದಾರೆ.

    ಈ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು 56 ಸಾವಿರಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ನೊಂದೇ ವರ್ಷದಲ್ಲಿ ನೀವು ಬ್ರ‍್ಯಾಂಡ್ ಆಗುತ್ತೀರಿ ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮನ ಜೊತೆ ಕ್ಷುಲ್ಲಕ ಜಗಳ: ಮನನೊಂದು ನೇಣಿಗೆ ಶರಣಾದ ಬಿಟೆಕ್ ವಿದ್ಯಾರ್ಥಿನಿ

    ತಮ್ಮನ ಜೊತೆ ಕ್ಷುಲ್ಲಕ ಜಗಳ: ಮನನೊಂದು ನೇಣಿಗೆ ಶರಣಾದ ಬಿಟೆಕ್ ವಿದ್ಯಾರ್ಥಿನಿ

    ಹೈದರಾಬಾದ್: ಮನೆಯಲ್ಲಿ ತಮ್ಮನೊಂದಿಗೆ ನಡೆದ ಕ್ಷುಲ್ಲಕ ಜಗಳಕ್ಕೆ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯಗೆ ಶರಣಾಗಿರುವ ಘಟನೆ ಸುರಾರಂ ಬಳಿ ನಡೆದಿದೆ.

    ಚಂದ್ರಂ ಮತ್ತು ರೇಣುಕಾ ದಂಪತಿಯ ಮಗಳು ಮೌನಿಕಾ(21) ಆತ್ಮಹತ್ಯಗೆ ಶರಣಾದ ಯುವತಿ. ಮೌನಿಕಾ ಮಲ್ಲಾರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಫೈನಲ್ ಇಯರ್ ಓದುತ್ತಿದ್ದಳು.

    ಬುಧವಾರ ಮಧ್ಯಾಹ್ನ 3 ಗಂಟೆಗೆ ತಮ್ಮನ ಜೊತೆ ಜಗಳವಾಡಿದ ನಂತರ ಈಕೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬದವರು ರಾತ್ರಿ 9 ಗಂಟೆಗೆ ಪೊಲೀಸರಿಗೆ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ಬುಧವಾರ ಮೌನಿಕಾ ತಮ್ಮ ತಮ್ಮನೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಳಂತೆ. ಇದಕ್ಕೆ ಸಂಬಂಧಿಸಿದಂತೆ ತಾಯಿ ರೇಣುಕಾ ಮೌನಿಕಾಳನ್ನು ಗದರಿಸಿದ್ದರು. ಈ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.

    ಮೌನಿಕಾ ತನ್ನ ವಾಟ್ಸಪ್‍ನಲ್ಲಿ ತನ್ನ ಜೀವನವೇ ದುರ್ಭರವಾಗಿದೆ ಸಾಯುತ್ತೇನೆ ಎಂದು ವಿವರಿಸುವ ಸ್ಟೇಟಸ್ ಹಾಕಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

    ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೌನಿಕಾಳನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಕೊನೆ ಉಸಿರೆಳೆದಿದ್ದಾಳೆ. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಗಾಂಧಿ ಆಸ್ಪತ್ರೆಗೆ ಕಳುಸಿದ್ದಾರೆ.