Tag: BSY

  • 3 ಗಂಟೆ ಸಭೆಗೆ ಶಾಸಕರು ಮಿಸ್ ಆಗ್ಬೇಡಿ, ಗುಡ್ ನ್ಯೂಸ್ ಇದೆ- ಬಿಎಸ್‍ವೈ ತುರ್ತು ಬುಲಾವ್

    3 ಗಂಟೆ ಸಭೆಗೆ ಶಾಸಕರು ಮಿಸ್ ಆಗ್ಬೇಡಿ, ಗುಡ್ ನ್ಯೂಸ್ ಇದೆ- ಬಿಎಸ್‍ವೈ ತುರ್ತು ಬುಲಾವ್

    ಬೆಂಗಳೂರು: ಒಂದು ಕಡೆ ದೆಹಲಿಯಲ್ಲಿ ಕಾಂಗ್ರೆಸ್ ಮೀಟಿಂಗ್ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬಿಜೆಪಿ ಸಭೆ ನಡೆಸುತ್ತಿದೆ. ಇಂದು 3 ಗಂಟೆಗೆ ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಬೇಕು. ಯಾಕಂದ್ರೆ ಒಂದು ಗುಡ್ ನ್ಯೂಸ್ ಹೇಳುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತುರ್ತು ಬುಲಾವ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅರಮನೆ ಮೈದಾನದ ಸಿತಾರಾ ಹಾಲ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಿಎಸ್‍ವೈ ಅವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ರಾಜಕೀಯದ್ದು ಒಂದು ಇಂಪಾರ್ಟೆಂಟ್ ವಿಷಯ ಇದೆ. ಆ ವಿಷಯವನ್ನು ನಿಮಗೆ ಇಂದು ಹೇಳುತ್ತೇನೆ. 3 ಗಂಟೆಯ ಸಭೆಗೆ ಶಾಸಕರು ಮಿಸ್ ಆಗಬೇಡಿ ಅಂತ ಹೇಳುವ ಮೂಲಕ ಬಿಜೆಪಿಯ 104 ಶಾಸಕರೂ ಮಧ್ಯಾಹ್ನದ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತಾಕೀತು ಮಾಡಿದ್ದಾರೆ. ಈ ಮೂಲಕ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಒಡಕು ಉಂಟಾಗಿದೆ. 37 ಸ್ಥಾನ ಇರುವ ಜೆಡಿಎಸ್, 79 ಸ್ಥಾನ ಇರುವ ಕಾಂಗ್ರೆಸ್ ಪಕ್ಷಗಳು ಅಧಿಕಾರ ನಡೆಸುತ್ತಿವೆ. 104 ಸ್ಥಾನದಲ್ಲಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡ್ತಿದೆ. ಜನ ಹಿತವನ್ನು ಮರೆತು, ಅಭಿವೃದ್ಧಿ ಮರೆತು ಸರ್ಕಾರ ನಡೆಯುತ್ತಿದೆ. ಇದು ಕಮಿಷನ್ ಏಜೆಂಟ್ ಸರ್ಕಾರವಾಗಿದೆ ಅಂತ ಕಿಡಿಕಾರಿದ್ದಾರೆ.

    ಕಾಂಗ್ರೆಸ್ – ಜೆಡಿಎಸ್ ಒಳಜಗಳದಿಂದ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರದಲ್ಲಿ ಕಮೀಷನ್ ಕೊಡದಿದ್ದರೆ ಯಾವುದೇ ಬಿಲ್ ಪಾಸ್ ಆಗಲ್ಲ. ಕರ್ನಾಟಕದಲ್ಲಿ 13 ಜಿಲ್ಲೆಗಳು ಬರ ಪೀಡಿತ ಅಂತ ಘೋಷಣೆ ಮಾಡಿದೆ. ರೈತರು ತಾವು ಬೆಳೆದ ಬೆಳೆಗಳು ಕೈ ಸೇರುವಾಗ ಮಳೆ ಕೈ ಕೊಟ್ಟಿದೆ. ಕೊಡಗಿನ ಅತಿವೃಷ್ಠಿ ಹಿನ್ನೆಲೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಮಂಗಳವಾರ ರಾಜ್ ನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದಾಗ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಕೇಂದ್ರದ ನಿಯೋಗ ರಾಜ್ಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದೇನೆ ಅಂದ್ರು.

    ಡಿಕೆಶಿ ಚೆಸ್ ಗೇಮ್ ಬಗ್ಗೆ ಮಾತನಾಡಿದ್ದಾರೆ. ಹೇಗೆ ಪಾನ್ ಮೂವ್ ಮಾಡಬೇಕು ಅಂತಾ ಗೊತ್ತಿದೆ ಅಂತಾ ಡಿಕೆಶಿ ಹೇಳಿದ್ದಾರೆ. ಎದುರಾಳಿಗಳೇ ಇಲ್ಲದೆ ಹೇಗೆ ಚೆಸ್ ನಲ್ಲಿ ಪಾನ್ ಮೂವ್ ಮಾಡ್ತೀರಾ..? ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡೋದನ್ನ ಬಿಡಿ ಅಂತ ಸಚಿವ ಡಿಕೆಶಿಗೆ ಬಿಎಸ್‍ವೈ ಟಾಂಗ್ ನೀಡಿದರು.

    ಕುಮಾರಸ್ವಾಮಿ ಆಪರೇಷನ್ ಕಮಲದ ಬಗ್ಗೆ ಮಾತನಾಡ್ತಾರೆ. ಬಿಜೆಪಿ ಶಾಸಕರನ್ನ ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಸಚಿವ ಸ್ಥಾನ ಕೊಡ್ತೀನಿ ಬನ್ನಿ ಅಂತಾ ಕರೆದಿದ್ದಾರೆ. ಹೀಗೆ ಹಲವು ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನ ಜತೆ 10 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಅಂತಾ ಎಚ್‍ಡಿಕೆ ಹೇಳಿದ್ದಾರೆ. ಆದ್ರೆ ಒಬ್ಬ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತನಾಡೋದು ಶೋಭೆ ತರುವುದಿಲ್ಲ. ಇದೆಲ್ಲವನ್ನು ನೋಡ್ತಿದ್ರೆ ಸಮ್ಮಿಶ್ರ ಸರ್ಕಾರ ಎಷ್ಟು ಅಸ್ಥಿರವಾಗಿದೆ ಅನ್ನೋದು ಗೊತ್ತಾಗ್ತಿದೆ ಅಂತ ಅವರು ಹೇಳಿದ್ರು.

    ಕುಮಾರಸ್ವಾಮಿ ಕಿಂಗ್ ಪಿನ್ ಬಗ್ಗೆ ಮಾತಾಡ್ತಾರೆ. ಆದರೆ ಕುಮಾರಸ್ವಾಮಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡ್ತಾರೆ. ಈ ಸರ್ಕಾರ ಹೆಚ್ಚು ದಿನ ಬಾಳುತ್ತೆ ಎಂದು ನನಗೆ ಅನಿಸೋದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷದಲ್ಲಿ ನಮಗೆ ಉಸಿರುಗಟ್ಟಿಸುವ ಪರಿಸ್ಥಿತಿ ಇದೆ ಎನ್ನುತ್ತಾರೆ. ಸರ್ಕಾರ ಬಿದ್ದ ಬಳಿಕ ನಾವೇನು ಮಾಡಬೇಕು ಎಂದು ಪ್ರಮುಖರೆಲ್ಲ ಕುಳಿತು ಚರ್ಚೆ ಮಾಡ್ತೇವೆ. ನಮಗಾರಿಗೂ ಈ ಸರ್ಕಾರ ಹೆಚ್ಚು ದಿನ ಬಾಳತ್ತೆ ಎಂದು ಅನಿಸೋದಿಲ್ಲ ಅಂತ ತಿಳಿಸಿದ್ರು.

    ಕಾಂಗ್ರೆಸ್ – ಜೆಡಿಎಸ್ ಏನಾದ್ರೂ ಮಾಡಿಕೊಳ್ಳಲಿ. ನಾವು ಲೋಕಸಭೆಯಲ್ಲಿ 24 ಸ್ಥಾನವನ್ನು ಗೆಲ್ಲಬೇಕು. ನಮ್ಮ ಸಂಘಟನೆ ಬಲಗೊಳ್ಳಬೇಕು. ಲೋಕಸಭೆಗೆ ತಯಾರಿ ನಡೆಸಬೇಕು. 15 ದಿನಗಳ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡ್ತೇವೆ ಅಂತ ಅವರು ಎಚ್ಚರಿಕೆ ನೀಡಿದ್ರು.

    ರಾಜ್ಯಮಟ್ಟದ ಬಿಜೆಪಿ ವಿಶೇಷ ಸಭೆಯಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಕೆ.ಎಸ್.ಈಶ್ವರಪ್ಪ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ರವಿಕುಮಾರ್, ಶ್ರೀರಾಮುಲು ಉಪಸ್ಥಿತಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಡಿಯೂರಪ್ಪರಿಗೆ ಅಮಿತ್ ಶಾ ಖಡಕ್ ಸೂಚನೆ

    ಯಡಿಯೂರಪ್ಪರಿಗೆ ಅಮಿತ್ ಶಾ ಖಡಕ್ ಸೂಚನೆ

    ನವದೆಹಲಿ: ಎಚ್ ಡಿ ಕುಮಾರಸ್ವಾಮಿ ಸರ್ಕಾರ’ ಬೀಳಿಸಲು ಬಿಜೆಪಿಯಿಂದ ಮತ್ತೊಂದು ಪ್ಲಾನ್ ಮಾಡ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

    ಬಿಎಸ್‍ವೈ ಅವರಿಗೆ ದೂರವಾಣಿ ಕರೆಮಾಡಿರುವ ಶಾ, ಆಪರೇಷನ್ ಕಮಲದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಶಾಸಕರನ್ನು ಸೆಳೆಯೋ ಬಗ್ಗೆ ನಾಲ್ಕೂವರೆ ನಿಮಿಷ ಚರ್ಚೆ ಮಾಡಿದ್ದಾರೆ. `ಆಪರೇಷನ್ ಕಮಲ’ ಬಗ್ಗೆ ಯಾವ ಬಿಜೆಪಿ ಮುಖಂಡರೂ ಬಹಿರಂಗ ಹೇಳಿಕೆ ಕೊಡಬಾರದು. ಏನೇ ತಂತ್ರಗಾರಿಕೆ ಇದ್ದರೂ ಎಲ್ಲವೂ ಒಳಗೊಳಗೇ ನಡೆಯಬೇಕು ಅಂತ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ಕು ಹಂತಗಳಲ್ಲಿ ನಡೆಯಲಿದೆ ಆಪರೇಷನ್ ಕಮಲ..?

    `ಆಪರೇಷನ್ ಕಮಲ’ವನ್ನು ನಾನು, ರಾಮುಲು ಇಬ್ಬರೂ ಸೇರಿ ಆಪರೇಟ್ ಮಾಡುತ್ತಿದ್ದೇವೆ. ಆದ್ರೆ ಆಪರೇಷನ್ ಕಮಲ ಮಾಡ್ತಿಲ್ಲ ಅಂತ ಬಹಿರಂಗವಾಗಿ ಬಿಂಬಿಸಿಕೊಳ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಬರಲಿ. ಪ್ರವಾಸದಿಂದ ಸಿದ್ದರಾಮಯ್ಯ ವಾಪಸ್ ಆದ ಬಳಿಕ ಸೋಮವಾರದಷ್ಟೊತ್ತಿಗೆ ಎಲ್ಲವೂ ಸ್ಪಷ್ಟ ಆಗುತ್ತದೆ. `ಆಪರೇಷನ್ ಕಮಲ’ದ ಪ್ರತಿ ಮಾಹಿತಿಯನ್ನು ನಾವು ನಿಮಗೆ ಕೊಡ್ತಾ ಇರುತ್ತೇವೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾಗೆ ಮಾಜಿ ಸಿಎಂ ಯಡಿಯೂರಪ್ಪ ಉತ್ತರಿಸಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ಆಪರೇಷನ್ ಕಮಲಕ್ಕೆ ಗಣಿ ಧನಿ ರೆಡ್ಡಿಯಿಂದ 300 ಕೋಟಿ ಬಂಡವಾಳ-ಹೈಕಮಾಂಡ್ ಮುಂದಿಟ್ರು ಒಂದು ಷರತ್ತು!!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್‍ನವರಿಗೆ ಆತಂಕ ಯಾಕೋ ಭಗವಂತನಿಗೇ ಗೊತ್ತು- ಬಿಎಸ್‍ವೈ

    ಕಾಂಗ್ರೆಸ್‍ನವರಿಗೆ ಆತಂಕ ಯಾಕೋ ಭಗವಂತನಿಗೇ ಗೊತ್ತು- ಬಿಎಸ್‍ವೈ

    – ದೆಹಲಿಗೆ ಹೋಗಲ್ಲ ಅಂದ್ರು ಮಾಜಿ ಸಿಎಂ

    ಬೆಂಗಳೂರು: ಬಿಜೆಪಿಯಿಂದ ನಮ್ಮ ಸರ್ಕಾರ ಕೆಡವಲು ಬಿಜೆಪಿ ಯತ್ನ ಎಂಬ ಕಾಂಗ್ರೆಸ್ ಆರೋಪ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರ ಬೀಳಿಸೋ ಯತ್ನ ಮಾಡಿಲ್ಲ. ಕಾಂಗ್ರೆಸ್ ನವರಿಗೆ ಆತಂಕ ಯಾಕಿದೆಯೋ ಭಗವಂತನಿಗೆ ಗೊತ್ತು. ಬೇರೆ ಬೇರೆಯವರು ಪಕ್ಷಕ್ಕೆ ಸೇರಲು ಸಜ್ಜಾಗ್ತಿದ್ದಾರೆ ಅಂದ್ರು.

    ನಾನು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಹೋಗೋದಿಲ್ಲ. ಲೋಕಸಭಾ ಚುನಾವಣೆಗೆ ಸಜ್ಜಾಗ್ತಿದ್ದೀವಿ, ಪ್ರವಾಸ ಶುರು ಮಾಡಬೇಕು. ಕಳೆದ ಬಾರಿ ಎಲ್ಲೆಲ್ಲಿ ವೀಕ್ ಇದ್ದ ಕಡೆ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕೋದಕ್ಕೆ ಪ್ಲಾನ್ ಮಾಡ್ತಿದ್ದೀವಿ ಅಂತ ಅವರು ಹೇಳಿದ್ರು.

    ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನ ಮಂತ್ರಿಗಳ ಭೇಟಿ ಮಾಡಲಿದ್ದು, ಈ ವೇಳೆ ಸಂಸದರು, ಸಚಿವರು, ವಿರೋಧ ಪಕ್ಷದ ನಾಯಕರು ಕೂಡ ಸಾಥ್ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 11.15 ಕ್ಕೆ ಪ್ರಧಾನ ಮಂತ್ರಿಗಳ ಭೇಟಿ ನಿಗಧಿಯಾಗಿದೆ. ಅತಿವೃಷ್ಟಿ ಸಂಬಂಧ ಪರಿಹಾರ ಕೋರಿ ನಿಯೋಗ ಮನವಿ ಸಲ್ಲಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ಬ್ಯಾಂಕ್ ಬ್ಯಾಟಲ್- ಬಿಜೆಪಿ ನಾಯಕರಿಗೆ ಬಿಎಸ್‍ವೈ ಖಡಕ್ ಸೂಚನೆ

    ಬೆಳಗಾವಿ ಬ್ಯಾಂಕ್ ಬ್ಯಾಟಲ್- ಬಿಜೆಪಿ ನಾಯಕರಿಗೆ ಬಿಎಸ್‍ವೈ ಖಡಕ್ ಸೂಚನೆ

    ಬೆಂಗಳೂರು: ಬೆಳಗಾವಿ ಬ್ಯಾಂಕ್ ಬ್ಯಾಟಲ್ ನಲ್ಲಿ ಬಿಜೆಪಿ ಸೈಲೆಂಟ್ ಆಗಿದ್ದು, ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.

    ನಮ್ಮ ಪಕ್ಷದ ಯಾರೂ ಜಾರಕಿಹೊಳಿ ಬ್ರದರ್ಸ್, ಲಕ್ಷ್ಮೀ ಹೆಬ್ಬಾಳ್ಕರ್ ಪರ ವಿರೋಧ ನಿಲ್ಲಬಾರದು. ಅದು ಅವರ ಪಕ್ಷದ ಒಳ ಬೇಗುದಿ. ಎಲ್ಲಿಗೆ ಹೋಗಿ ತಲುಪುತ್ತೆ ನೋಡೋಣ. ಅವರ ಮೇಲಾಟ ಮುಗಿದ ಮೇಲೆ ನಮ್ಮ ಆಟ ಏನು ಅನ್ನೋದನ್ನ ನೋಡೋಣ ಅಂತ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಸದ್ಯಕ್ಕೆ ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ಬಿಎಸ್ ವೈ ಖಡಕ್ ಸೂಚನೆ ನೀಡಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ನವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಎಂಬುದಕ್ಕೆ ಬೆಳಗಾವಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯೇ ಸಾಕ್ಷಿ. ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಇಂತಹ ಹೀನಾಯ ಸ್ಥಿತಿ ಬರಬಾರದು. ಆದ್ರೆ ಅವರ ಬಡಿದಾಟ ಅವರಿಗೆ ಮಾತ್ರ ಸಂಬಂಧಪಟ್ಟಿದ್ದಾಗಿದೆ. ಹೀಗಾಗಿ ನಾವು ಇದ್ರಲ್ಲಿ ತಲೆತೂರಿಸುವುದಿಲ್ಲ ಅಂತ ಹೇಳಿದ್ದಾರೆ.

    ಒಬ್ಬ ಮಂತ್ರಿ, ಇನ್ನೊಬ್ಬ ಮಹಿಳೆ ಹಾಗೂ ಚುನಾಯಿತ ಪ್ರತಿನಿಧಿ. ಜಾರಕಿಹೊಳಿ ಈ ಶಾಸಕಿಯನ್ನು ಕಾಲಕಸಕ್ಕಿಂತ ಸಮ. ಇದು ಮಹಿಳಾ ಕುಲಕ್ಕೆ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನ. ಹಾದಿ ರಂಪ, ಬೀದಿ ರಂಪ ಮಾಡಿಕೊಂಡು ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿ ಇದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಪರೇಷನ್ ಕಮಲ ಮಾಡ್ತಾನೂ ಇಲ್ಲ, ಅದರ ಅಗತ್ಯನೂ ನಮಗಿಲ್ಲ: ಬಿಎಸ್‍ವೈ

    ಆಪರೇಷನ್ ಕಮಲ ಮಾಡ್ತಾನೂ ಇಲ್ಲ, ಅದರ ಅಗತ್ಯನೂ ನಮಗಿಲ್ಲ: ಬಿಎಸ್‍ವೈ

    ಬೆಂಗಳೂರು: ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಹಾಗೂ ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

    ನಗರದ ಡಾಲರ್ ಕಾಲೋನಿಯಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದ ಆಪರೇಷನ್ ಕಮಲದ ಕುರಿತು ಪ್ರತಿಕ್ರಿಯಿಸಿ ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ, ಡಿಕೆಶಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಿಡಿಕಾರಿದರು.

    ಮಂಗಳವಾರ ತುರ್ತು ಸಭೆಯ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳಸಿದ್ದೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿಗೆ ಮಂಗಳವಾರ ಸಮಯ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರನ್ನು ಭೇಟಿಯಾಗಿ, ಪ್ರಸಕ್ತ ರಾಜ್ಯ ರಾಜಕಾರಣ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾವು ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತು ಆಡಳಿತ ಪಕ್ಷದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

    ನಮ್ಮ ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಕೇಂದ್ರ ಸಚಿವರ ಬಳಿ ಮಾತಾಡಿದ್ದೇನೆ. ಮುಂದೆ ಇಡಬೇಕಾದ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಗುರವಾರದಿಂದ ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭಿಸುತ್ತಿದ್ದೇನೆ. ಅಲ್ಲದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಪ್ರವಾಸದ ವೇಳೆ ಇದೆಲ್ಲವನ್ನೂ ಅವಲೋಕಿಸುತ್ತೇವೆ ಎಂದರು.

    ಈ ವೇಳೆ ಕರುಣಾನಿಧಿಯವರಿಗೆ ಸಂತಾಪ ಸೂಚಿಸಿ, ಕರುಣಾನಿಧಿಯವರು ಮುಖ್ಯಮಂತ್ರಿ ಆಗಿದ್ದಾಗ ನನ್ನ ವಿಶೇಷ ಪ್ರಯತ್ನದಿಂದ ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಆಯಿತು. ಇದಕ್ಕೆ ಅವರು ವಿಶೇಷ ಸಹಕಾರವನ್ನು ಸಹ ನೀಡಿದ್ದರು. ತಿರುವಳ್ಳುವರ್ ಪ್ರತಿಮೆಯನ್ನು ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದರು. ಇಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಲಾಯಿತು. ಆದರೆ ಕೆಲವು ಕಾರಣಗಳಿಂದಾಗಿ ಕಳೆದ ಒಂಬತ್ತು ವರ್ಷದಿಂದ ಈ ಯೋಜನೆ ಹಾಗೆ ನೆನೆಗುದಿಗೆ ಬಿದ್ದಿದೆ ಎಂದರು.

    ಕರುಣಾನಿಧಿಯವರು ನನ್ನೊಂದಿಗೆ ಮಾತನಾಡಿದ ರೀತಿ ಯಾವುದನ್ನೂ ಮರೆಯುವಂತಿಲ್ಲ, 5 ಬಾರಿ ಮುಖ್ಯಮಂತ್ರಿ ಆಗಿದ್ದವರು ಕರುಣಾನಿಧಿಯವರು ಈಗ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರ ಹೇಳಿಕೆಗಳನ್ನು ಗಮನಿಸಿದರೆ ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ.

    ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕಕ್ಕೆ ಹಿರಿಯರು ರಕ್ತ ಹರಿಸಿದ್ದಾರೆ. ಉತ್ತರ ಕರ್ನಾಟಕದ ಜನತೆಯನ್ನ ಸವತಿ ಮಕ್ಕಳಂತೆ ಸಿಎಂ ಕಾಣುತ್ತಿದ್ದಾರೆ. ನಿಮ್ಮ ಸಾಲಮನ್ನಾ ಮಾಡಲು ನೀವೇನು ನಮಗೆ ವೋಟ್ ಹಾಕಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದು, ಸಿಎಂ ಅವರ ದುರಂಹಕಾರದ ಮಾತಾಗಿದೆ. ಸಿಎಂರವರ ಹೇಳಿಕೆಗಳನ್ನು ಗಮನಿಸಿದರೆ, ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ

    ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಹರಿಹಾಯ್ದ ಅವರು, ಈ ಹಿಂದೆ ವೀರಶೈವ – ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಿಳಿಸಿದರು.

    ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ. ಹೀಗಾಗಿ ಹೋರಾಟಗಾರರ ಮನವೊಲಿಸಲು ನಾನು ಬೆಳಗಾವಿಗೆ ತೆರಳುತ್ತೇನೆ. ರಾಜ್ಯವನ್ನು ವಿಭಜಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

  • ವಿಧಾನಸಭೆಯಲ್ಲಿ ಬಿಎಸ್‍ವೈಗೆ ಎಚ್‍ಡಿಕೆ ತಿರುಗೇಟು- ಇತ್ತ ಬಿಜೆಪಿಯಿಂದ ಸಾಲಮನ್ನಾ, ಬಜೆಟ್ ತಾರತಮ್ಯ ಅಸ್ತ್ರ

    ವಿಧಾನಸಭೆಯಲ್ಲಿ ಬಿಎಸ್‍ವೈಗೆ ಎಚ್‍ಡಿಕೆ ತಿರುಗೇಟು- ಇತ್ತ ಬಿಜೆಪಿಯಿಂದ ಸಾಲಮನ್ನಾ, ಬಜೆಟ್ ತಾರತಮ್ಯ ಅಸ್ತ್ರ

    ಬೆಂಗಳೂರು: ರೈತರ ಸಾಲ ಮನ್ನಾದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಮಾತಾಡ್ತಾರೆ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ಕೊಡಲಿರುವ ಅವರು, ವಿಪಕ್ಷ ನಾಯಕ ಯಡಿಯೂರಪ್ಪ ಮಾಡಿದ್ದ ಟೀಕೆಗೆ ತಿರುಗೇಟು ಕೊಡಲಿದ್ದಾರೆ.

    ಬಜೆಟ್‍ನಲ್ಲಿ ಜೆಡಿಎಸ್ ಗೆದ್ದಿರುವ ಜಿಲ್ಲೆಗಳಿಗಷ್ಟೇ ಮಣೆ ಹಾಕಿರೋ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಬಗ್ಗೆ ತಾರತಮ್ಯ ಮಾಡಿದ್ದಾರೆ ಅನ್ನೋ ಟೀಕೆಗೂ ಸ್ಪಷ್ಟನೆ ನೀಡೋ ಸಾಧ್ಯತೆ ಇದೆ. ಕುಮಾರಸ್ವಾಮಿ ಭಾಷಣಕ್ಕೂ ಮೊದಲು ಉಪ ಸಭಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

    ಇನ್ನು ವಿಧಾನಪರಿಷತ್‍ನಲ್ಲಿ ಇವತ್ತು ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದ್ದು, ರೈತರ ಸಂಪೂರ್ಣ ಸಾಲ ಮನ್ನಾದ ಮಾತು ತಪ್ಪಿರುವ ಕುಮಾರಸ್ವಾಮಿಯನ್ನು ಬಿಜೆಪಿ ಟಾರ್ಗೆಟ್ ಮಾಡೋದು ನಿಶ್ಚಿತ.

    ರಾಮನಗರ, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಜೆಡಿಎಸ್ ಭದ್ರಕೋಟೆಗಷ್ಟೇ ಅನುದಾನ ನೀಡಿ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಕರ್ನಾಟಕವನ್ನು ಕಡೆಗಣಿಸಿರೋದನ್ನೂ ಖಂಡಿಸಿ ಬಿಜೆಪಿ ಸದನದೊಳಗೆ ಹೋರಾಟ ನಡೆಸಲಿದೆ.

  • ತೃತೀಯ ರಂಗದ ಒಗ್ಗಟ್ಟು ಮಳೆಗಾಲದ ಅಣಬೆಗಳು ಇದ್ದಂತೆ: ಶ್ರೀರಾಮುಲು

    ತೃತೀಯ ರಂಗದ ಒಗ್ಗಟ್ಟು ಮಳೆಗಾಲದ ಅಣಬೆಗಳು ಇದ್ದಂತೆ: ಶ್ರೀರಾಮುಲು

    ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೋದಿಯವರನ್ನು ಸೋಲಿಸಲು ತೃತೀಯ ರಂಗ ಒಂದಾಗಿದೆ ಎಂದು ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭದಲ್ಲಿ ಬಹಳಷ್ಟು ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ತೃತೀಯ ರಂಗದ ನಾಯಕರು ಕಾರ್ಯಕ್ರದಲ್ಲಿ ಭಾಗಿಯಾಗಿದ್ದಾರೆ. ತೃತೀಯ ರಂಗದ ಒಗ್ಗಟ್ಟು ಕಾಂಗ್ರೆಸ್ ಪತನದ ಮೊದಲು ಮೆಟ್ಟಿಲಾಗಿದೆ. ಈ ತೃತೀಯ ರಂಗದ ಒಗ್ಗಟ್ಟೂ ಮಳೆಗಾಲದ ಅಣಬೆಗಳು ಇದ್ದಂತೆ ಲೇವಡಿ ಮಾಡಿದರು.

    ಮೋದಿಯವರನ್ನು ಸೋಲಿಸಲು ತೃತೀಯ ರಂಗ ಒಂದಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ತೃತೀಯ ರಂಗ ಅಣಬೆ ತರಹ ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಚುನಾವಣೆ ಮುಗಿದ ನಂತರ ಅವು ಯಾವುದು ಇರಲ್ಲ. ಯಾವುದೇ ಇತಿಹಾಸವನ್ನು ತೆಗೆದು ನೋಡಿದರೂ ತೃತಿಯ ರಂಗ ಉಳಿದಿರುವುದಿಲ್ಲ ಅದನ್ನು ನಾವು ನೋಡಬಹುದು. ಚುನಾವಣೆ ಮುಗಿದ ನಂತರ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿರುತ್ತಾರೆ. ಈ ತೃತಿಯ ರಂಗಕ್ಕೆ ಆಯಸ್ಸು ಇರಲ್ಲ ಎಂದು ಅಭಿಪ್ರಾಯಪಟ್ಟರು.

    ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಯೂ ಟರ್ನ್ ಹೊಡೆಯುತ್ತಿದ್ದಾರೆ. ರೈತರ ಸಾಲ ಮಾಡಲೇಬೇಕು ಆದರೆ ಸಾಲ ಮನ್ನಾ ಮಾಡೋದಿಲ್ಲ ಅಂತಾ ಹೇಳುತ್ತಿದ್ದಾರೆ. ಬಹುಮತ ಸಾಬೀತು ಪಡಿಸುವ ದಿನದಂದು ಭಾಗಿಯಾಗುವ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದಂತೆ ಕೇಳುತ್ತೇವೆ ಎಂದರು.

  • ರಾಷ್ಟ್ರದಲ್ಲಿರೋದು ನಕಲಿ ಕಾಂಗ್ರೆಸ್: ಶೋಭಾ ಕರಂದ್ಲಾಜೆ

    ರಾಷ್ಟ್ರದಲ್ಲಿರೋದು ನಕಲಿ ಕಾಂಗ್ರೆಸ್: ಶೋಭಾ ಕರಂದ್ಲಾಜೆ

    ಮೈಸೂರು: ರಾಷ್ಟ್ರದಲ್ಲಿರುವುದು ನಕಲಿ ಕಾಂಗ್ರೆಸ್. ಉಗ್ರಪ್ಪ ಬಿಡುಗಡೆ ಮಾಡಿರುವ ಆಡಿಯೋ ಸಿಡಿ ನಕಲಿ. ಇದು ಫೇಕ್ ಕಾಂಗ್ರೆಸ್, ಫೇಕ್ ಸಿಡಿ ಎಲ್ಲದು ಫೇಕ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ವತಃ ಪಕ್ಷದ ನೈಜ ಬಣ್ಣ ಬಯಲು ಮಾಡಿದ್ದಾರೆ. ತಮ್ಮ ಪತ್ನಿಗೆ ಯಾವುದೇ ಆಮಿಷ ಬಂದಿಲ್ಲ ಎಂದು ಅವರೇ ಹೇಳಿದ್ದಾರೆ. ಉಗ್ರಪ್ಪ ಅವರು ರಾಹುಲ್‍ಗಾಂಧಿ ಸೂಚನೆ ಮೇರೆಗೆ ಈ ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದೇ ವೇಳೆ ವಿಜಯಪುರದಲ್ಲಿ ವಿವಿ ಪ್ಯಾಟ್ ಸಿಕ್ಕಿರುವುದು ಸಹ ಸಾಕಷ್ಟು ಅನುಮಾನ ಮೂಡಿಸಿದೆ. ಈ ಬಗ್ಗೆ ತಾವು ಯಾವುದೇ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ. ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು.

    ಹಾಸನದ ಶಾಸಕ ಪ್ರೀತಮ್ ಗೌಡರಂತ ನಾಯಕರನ್ನು ಹುಡುಕಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ. ಬಿಎಸ್‍ವೈ ಎಂದು ಒಬ್ಬರೇ ಆಗುವುದಿಲ್ಲ. ಇಂದಿನಿಂದಲೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈ ಸರ್ಕಾರ ಜಾಸ್ತಿ ದಿನ ಇರುವುದಿಲ್ಲ. ಅವರ ಪಾಪಕ್ಕೆ ಅವರೇ ಬೆಲೆ ಕಟ್ಟುತ್ತಾರೆ. ಮುಖ್ಯಮಂತ್ರಿ ಆಗಿದ್ದವರು ಅವರ ತವರು ಕ್ಷೇತ್ರದಲ್ಲಿ 36 ಸಾವಿರ ಮತದಿಂದ ಸೋಲುತ್ತಾರೆ ಅಂದರೆ ಕಾಂಗ್ರೆಸ್ ಸ್ಥಿತಿ ಏನಾಗುತ್ತಿದೆ. ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡಿದೆ. ಇಬ್ಬರನ್ನು ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು.

  • ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ

    ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ

    ನವದೆಹಲಿ: ಕರ್ನಾಟಕ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

    ಛತ್ತೀಸ್‍ಗಢದ ರಾಯಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಾಸಕರು ಒಂದೆಡೆ ನಿಂತಿದ್ದರೆ, ರಾಜ್ಯಪಾಲರೇ ಒಂದೆಡೆ ನಿಂತಿದ್ದಾರೆ. ಈಗಾಗಲೇ ತನ್ನ ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗುತ್ತಿದೆ ಎಂದು ಜೆಡಿಎಸ್ ಹೇಳಿದೆ. ಈ ಮೂಲಕ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗಿದೆ ಹೇಳಿದರು.

    ಇದೇ ವೇಳೆ ಆರ್ ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ರಾಷ್ಟ್ರದಲ್ಲಿರುವ ಎಲ್ಲಾ ಉನ್ನತ ಸಂಸ್ಥೆಗಳಿಗೆ ಆರ್ ಎಸ್‍ಎಸ್ ಎಂಟ್ರಿ ಕೊಡುತ್ತಿದೆ. ಪಾಕಿಸ್ತಾನದ ಹಾಗೇ ಇಲ್ಲಿಯೂ ಸರ್ವಾಧಿಕಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಸಹ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಮುಂದಾಗಿದೆ. ಇದು ವಿವೇಚನಾ ರಹಿತ ಕಾರ್ಯವಾಗಿದ್ದು, ಈ ನಡೆ ಸಂವಿಧಾನದಕ್ಕೆ ಅಪಾಯಕಾರಿ. ಇಂದು ಬೆಳಗ್ಗೆ ಬಿಜೆಪಿ ಪಕ್ಷ ತನ್ನ ಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಭಾರತ ಮಾತ್ರ ಪ್ರಜಾಪ್ರಭುತ್ವದ ಸೋಲಿನಿಂದ ದುಃಖಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದೇ ಇದ್ದರೂ ಸಹ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದನ್ನು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಬಿಜೆಪಿ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ತನ್ನ ಶಾಸಕರ ಸಂಖ್ಯೆಯನ್ನು 104ಕ್ಕಿಂತ ಹೆಚ್ಚಿದೆ ಎಂದು ನಮೂದಿಸಿಲ್ಲ. ಆಲ್ಲದೇ ಗೌವರ್ನರ್ ಅವರ ಆಮಂತ್ರಣ ಪತ್ರದಲ್ಲೂ ಯಾವುದೇ ಸಂಖ್ಯೆ ನಮೂದಿಸಿಲ್ಲ ಎಂದು ಬರೆದು ಕೊಂಡಿದ್ದು, ಬಿಎಸ್‍ವೈ ಅವರಿಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ನಮೂದಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.