Tag: BSY

  • ಎಫ್‍ಐಆರ್ ರದ್ದು ಕೋರಿ ಬಿಎಸ್‍ವೈ ಹೈಕೋರ್ಟ್ ಮೊರೆ..!

    ಎಫ್‍ಐಆರ್ ರದ್ದು ಕೋರಿ ಬಿಎಸ್‍ವೈ ಹೈಕೋರ್ಟ್ ಮೊರೆ..!

    ಬೆಂಗಳೂರು: ಆಪರೇಷನ್ ಕಮಲ ಮಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ರಾಯಚೂರಿನಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಈ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್  ಗೆ ಅರ್ಜಿ ಸಲ್ಲಿಸಲು ಬಿಎಸ್‍ವೈ ನಿರ್ಧರಿಸಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾದ ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ ಬಿಎಸ್‍ವೈ ಪರ ವಕೀಲರು ಎಫ್‍ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಪ್ರಕರಣ ಸಂಬಂಧ ಸೋಮವಾರದಂದು ಹೈಕೋರ್ಟ್ ಮುಂದೆ ಬಿಎಸ್‍ವೈ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈ ಎ1 ಆರೋಪಿ

    ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಲು ಬಿಎಸ್‍ವೈ ಪರ ವಕೀಲರ ಸಿದ್ಧತೆ ಮಾಡಿಕೊಂಡಿದ್ದು, ಆಡಿಯೋ ಪ್ರಕರಣ ಹಿನ್ನೆಲೆ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ನೀಡಿದ್ದ ದೂರಿನ ಮೇರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಕಲಬುರಗಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ದೇವದುರ್ಗ ಪೊಲೀಸ್ ಠಾಣೆ ಬರುತ್ತದೆ. ಆದ್ದರಿಂದ ಗುರುವಾರ ಪ್ರಕರಣವೊಂದರ ವಾದ ಮಂಡನೆಗೆ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆಗಮಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಬಿಎಸ್‍ವೈ ಪರ ವಕೀಲರಾದ ಸಿ.ವಿ.ನಾಗೇಶ್, ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಕೆಗೆ ಪೂರಕ ತಯಾರಿ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕುರ್ಚಿ ಉಳಿಸಿಕೊಳ್ಳಲು ಸಿಎಂ ಆಡಿಯೋ ತಿರುಚಿದ್ದಾರೆ: ಬಿಎಸ್‍ವೈ ಪುತ್ರ ಆರೋಪ

    ಕುರ್ಚಿ ಉಳಿಸಿಕೊಳ್ಳಲು ಸಿಎಂ ಆಡಿಯೋ ತಿರುಚಿದ್ದಾರೆ: ಬಿಎಸ್‍ವೈ ಪುತ್ರ ಆರೋಪ

    – ಆಡಿಯೋ ಬಗ್ಗೆ ಪ್ರತಿಕ್ರಿಯಿಸಲು ಬಿಎಸ್‍ವೈ ನಕಾರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡ ಅವರು ಮಾತನಾಡಿರುವ ಆಡಿಯೋ ಸದ್ಯ ಸುದ್ದಿಯಲ್ಲಿದ್ದು, ಈ ಆಡಿಯೋವನ್ನು ರಾಜಕೀಯ ಲಾಭಕ್ಕಾಗಿ ಸಿಎಂ ಕುಮಾರಸ್ವಾಮಿಯವರು ತಿರುಚಿದ್ದಾರೆ ಎಂದು ಬಿಎಸ್‍ವೈ ಪುತ್ರ ವಿಜಯೇಂದ್ರ ಆರೋಪಿಸಿದ್ದಾರೆ.

    ಆಪರೇಷನ್ ಕಂಪ್ಲೀಟ್ ಆಡಿಯೋ ಕುರಿತು ಪಬ್ಲಿಕ್ ಟಿವಿ ಜೊತೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನಾನು ಆಪರೇಷನ್ ಕಮಲದಲ್ಲಿ ತೊಡಗಿಲ್ಲ. ಇಡೀ ಆಡಿಯೋವನ್ನು ತಿರುಚಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.

    ಈ ಆಡಿಯೋಗೆ ಸಿಎಂ ಕುಮಾರಸ್ವಾಮಿಯವರೇ ಸೂತ್ರದಾರಿ. ಈ ಪ್ರಕರಣದಲ್ಲಿ ಅವರ ಪಾತ್ರ ಎಷ್ಟಿದೆ ಎಂದು ತನಿಖೆ ನಂತರ ಗೊತ್ತಾಗಲಿದೆ. ಮಾಧ್ಯಮದಲ್ಲಿ ನನ್ನ ಹೆಸರು ಪದೇ ಪದೇ ಪ್ರಸ್ತಾಪ ಆಗುತ್ತಿದೆ. ನಮ್ಮ ತಂದೆ ಯಡಿಯೂರಪ್ಪ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದೆ. ನಾನು ಅವರ ಮಗನಾಗಿರುವುದರಿಂದ ನಾನು ಈ ಪ್ರಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ಎಲ್ಲರು ಮಾತನಾಡೋದು ಸಹಜ. ಆದ್ರೆ ನಾನು ಯಾವುದರಲ್ಲೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಈ ಆಡಿಯೋ ಕೇಳಿದಾಕ್ಷಣ ಕೊಲೆಯಾಗಿದೆ ಎಂದು ತೀರ್ಮಾನ ಮಾಡಲು ಆಗಲ್ಲ. ಸಿಎಂ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಸಿಎಂ ಅವರ ಸ್ಥಾನವನ್ನು ಉಳಿಸಿಕೊಳ್ಳಲು ಆಡಿಯೋವನ್ನು ತಿರುಚಿದ್ದಾರೆ. ಈ ಪ್ರಕರಣ ಎದುರಿಸಲು ನಾವು ರೆಡಿ ಆಗಿದ್ದೇವೆ. ಹೈಕಮಾಂಡ್ ಈ ಬಗ್ಗೆ ಕ್ಲಾಸ್ ತಗೊಂಡಿದ್ದಾರೆ ಎನ್ನುವ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.

    ಆದ್ರೆ ಕಂಪ್ಲೀಟ್ ಆಡಿಯೋ ಕುರಿತು ಬಿಎಸ್‍ವೈ ಮಾತ್ರ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಮಾತನಾಡದೇ ತಮ್ಮ ಕಾರು ಹತ್ತಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಆಡಿಯೋ ಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

    ಬಿಎಸ್‍ವೈ ಆಡಿಯೋ ಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಕೇವಲ ಟ್ರೈಲರ್ ಅಷ್ಟೇ. ಆದ್ರೆ ಅದರ ಕಂಪ್ಲೀಟ್ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಶರಣಗೌಡನ ಡೀಲ್ ವೇಳೆ ಬಿಎಸ್‍ವೈ ಜೊತೆ ಇದ್ದಿದ್ದು ಯಾರು..?, ಶರಣಗೌಡ ಸೆಳೆಯಲು ಯಡಿಯೂರಪ್ಪ ಬಿಟ್ಟ ಒಂದೊಂದು ಡೈಲಾಗ್ ಏನು..?, ಬಿಎಸ್‍ವೈ ಪರವಾಗಿ ಶಿವನಗೌಡ ನಾಯಕ್ ಹೇಳಿದ್ದೇನು..?, ಆಪರೇಷನ್ ಕಮಲದ ವಿಚಾರಕ್ಕೆ ಸಂಬಂಧಿಸಿದಂತೆ ಶರಣಗೌಡ ಹೇಳೋದೇನು ಹೀಗೆ ಒಟ್ಟು 82 ನಿಮಿಷಗಳ ಆಪರೇಷನ್ ಕಮಲದ ಆಡಿಯೋ ಲಭ್ಯವಾಗಿದೆ.


    ಆಡಿಯೋದಲ್ಲೇನಿದೆ..?
    ಯಡಿಯೂರಪ್ಪ: ರಕ್ಷಣೆ ಬೇಕು ರಾಜೀನಾಮೆ ಕೊಡೋಕೆ ಎಂದು ಪೊಲೀಸ್ ರಕ್ಷಣೆಯಲಿ ಬಂದು ಸ್ಪೀಕರ್ ಗೆ ರಾಜೀನಾಮೆ ಕೊಡು. ಸ್ಪೀಕರ್ ತಪ್ಪಿಸಿಕೊಂಡು ಓಡಾಡೋಕೆ ಆಗಲ್ಲ. ಅಧಿವೇಶನ ನಡೆಯುವ ಸಮಯದಲ್ಲಿ ಕೊಟ್ಟುಬಿಟ್ರೆ ಅವನು ಬಿದ್ದಿರ್ತಾನೆ ಅಲ್ಲಿ ತಗೊಳ್ಳೇ ಬೇಕು. ಬೇಡ ತಡವಾಗಬಹುದು. ಮ್ಯಾಕ್ಸಿಮಮ್ ಏನು ರೂಲ್ಸ್ ಇರೋದು ಅಂದ್ರೆ ಖುದ್ದು ಅವರೇ ಬಂದು ಕೊಡಬೇಕು ಅಂತ ಇದ್ರ ಒಂದೇ ಕಂಡಿಷನ್ ಬೇರೆ ಏನು ಇಲ್ಲ.

    ಶಿವನಗೌಡ ನಾಯಕ್: ಹೌದು ಸರ್. 24 ಗಂಟೆಯಲ್ಲಿ ಒಪ್ಪಲೇಬೇಕು. ನಿನ್ನ ಅಪ್ಪನ ಒಪ್ಪಿಸಪ್ಪ ಮುಂದಿನದ್ದನ್ನು ಸಾಹೇಬ್ರಿರಿಗೆ ಬಿಡು ಏನಾದರಾಗ ಸಾಹೇಬರು ಒಳ್ಳೇಯದನ್ನೇ ಮಾಡುತ್ತಾರೆ. ನೀನು ರೆಡಿ ಆಗು ರೆಡಿ ಆಗು. ನಾನು ಉಳಿದದ್ದು ವಿಜಯಣ್ಣ ಜೊತೆ ಮಾತಾಡುತ್ತೇನೆ. ಆಯ್ತು ಸಾಹೇಬರ ಆಶಿರ್ವಾದ ತಗೋ. ಶರಣ್ ಗೌಡ ಇನ್ನೊಂದು ಏನು ಅಂದ್ರೆ ನೀವು ಸಮಾಜದವರು ಸಮಾಜದವರೊಬ್ಬರನ್ನು ಮುಖ್ಯಮಂತ್ರಿ ಮಾಡೋಕೆ ಹೆಮ್ಮೆ ಇರಬೇಕು. ಅವನ್ ಯಾರೀ ಕುಮಾರಸ್ವಾಮಿ ರಾಮನಗರ ಹಾಸನದವರು ಸಂಬಂಧ ಇಲ್ಲದಕ್ಕೆ ಸಾಯ್ತಿ.

    ಯಡಿಯೂರಪ್ಪ: ಬಹುತೇಕ ಎಲ್ಲಾ ನಾನ್ ಲಿಂಗಾಯತ ಬರ್ತಿರಾ.. ಇಲಾ ಮಾಡೋಕೆ ಯಾವುದೇ ಅಡ್ಡಿ , ಆಂತಕ, ತೊಂದ್ರೇನೇ ಇಲ್ಲ. ನಾವು ಇದು ಆಗೊಲ್ಲ ಅಂದ್ರೆ ನಿನ್ನನ್ನು ಯಾಕೆ ಕರೀತೀವಿ. ನಿಂಗ್ಯಾಕೆ ತೊಂದ್ರೆ ಕೊಡುತ್ತೀವಿ. ನಿನ್ನ ಫಾದರ್ ಇಲ್ಲೇ ಬೆಂಗಳೂರಲ್ಲಿ ಇರಲಿ. ನೀನು ಕನ್ವಿನ್ಸ್ ಮಾಡಿ ನಿನ್ನ ಪಾಡಿಗೆ ನೀನು ಬಾಂಬೆಗೆ ಬಾ.. ಎಲ್ಲರೂ 15 ಜನ ಆಗ್ಬಿಟ್ಟು ಎಲ್ಲಾ ಹೊರಟಾಗ ನಿನ್ನ ಫಾದರ್ ಜೊತೆಗೆ ಬಂದು ರಾಜೀನಾಮೆ ಕೊಡುವುದು ಅಷ್ಟೇ ತಾನೇ.. ಬಾಂಬೆಗೂ ನಿಮ್ಮ ಫಾದರ್ ಬೆರಬೇಕು ಅಂತಿಲ್ಲ.

    ಶಿವನಗೌಡ: ನೀನು ಬಂದು ಕಣ್ಣಲ್ಲಿ ನೋಡ್ಕೊಂಡು ಬಾ.. ಉಳಿದಿದ್ದೆಲ್ಲಾ ನಾನು ಅಣ್ಣನ ಜೊತೆ ಮಾತನಾಡುತ್ತೇನೆ. ಅದೆಲ್ಲಾ ಓಕೆ ಮಾಡ್ಕೊಂಡುಮುಂದುವರಿಸು. ನೀನು ಧೈರ್ಯ ಮಾಡ್ಬೇಕು. ನಾವೆಲ್ಲ ಇದ್ದೀವಿ. ಜೀವನದಲ್ಲಿ ಒಂದು ಸಾರಿ ಧೈರ್ಯ ಮಾಡಬೇಕು. ಸಾಹೇಬ್ರು ಅದಾರೆ ನಾವು ಇದ್ದೀವಿ. ಸಾಹೇಬ್ರು ಮಾತು ಕೊಟ್ರೆ ತಪ್ಪೋದಿಲ್ಲ. ಅವರು ಅಂತ ಮಾತಿನ ಮನುಷ್ಯ ಎಂದು ಮನುಷ್ಯ ರಾಜಕಾರಣದಲ್ಲಿ ಸಿಗೋದಿಲ್ಲ.

    ಹೀಗೆ ಮಾತು ಮಂದುವರಿಯುತ್ತದೆ. ಒಟ್ಟಿನಲ್ಲಿ ಆಪರೇಷನ್ ಕಮದ ಸಂಪೂಣ್ ಆಡಿಯೋ ಔಟ್ ಆಗಿದ್ದು, ಇಂದು ಸದನದಲ್ಲಿ ಭಾರೀ ಗದ್ದಲವೇಳುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ತುಮಕೂರು: ಜವರಾಯನ ಜೊತೆಗೆ ಹೋರಾಡುತ್ತಿದ್ದ ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ.

    ಸಿದ್ದಗಂಗಾ ಮಠದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಪರಮ ಪೂಜ್ಯ ಶ್ರೀಗಳು ಶಿವಕ್ಯೆಯಾಗಿರುವುದನ್ನು ವೈದ್ಯರು ಈಗ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

    ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ಶೋಕಾಚರಣೆ ನಡೆಸಬೇಕು ಹಾಗೂ ನಾಳೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

    ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಹಾಗೂ ಸಿದ್ದಗಂಗಾ ಮಠದ ಕಿರಿಯ ಶ್ರೀಗಳ ಜೊತೆಗೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಶಾಸಕ ಸೋಮಣ್ಣ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದಾರೆ. ಅದರಂತೆ ವಿಧಿವಿಧಾನ ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತರಿಗೆ ಇಂದು ಹಾಗೂ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಪವಾಡ ಪುರುಷರಾಗಿರುವ ಶ್ರೀಗಳು ದೈವಿ ಶಕ್ತಿಯಾಗಿ ನಮಗೆ ಮಾರ್ಗದರ್ಶನ ನೀಡಿ, ಧಾರ್ಮಿಕ ಕ್ಷೇತಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶ್ರೀಗಳನ್ನು ಕಳೆದುಕೊಂಡ ನಮಗೆ ನೋವು ತಂದಿದೆ. ಬಡಮಕ್ಕಳಿಗೆ ಶಿಕ್ಷಣ, ಆಶ್ರಯ ನೀಡಿ, ಸ್ವಾಮೀಜಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಎಚ್‍ಡಿಕೆ ಸ್ಮರಿಸಿದರು.

    ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶ್ರೀಗಳ ಅಗಲಿಕೆ ನೋವು ತಂದಿದೆ. ಅವರ ಆತ್ಮದ ಬೆಳಕು ಅನೇಕರ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಈ ಕಾಲದ ಬಸವಣ್ಣನನ್ನು ನಾವು ಕಳೆದುಕೊಂಡಿದ್ದೇವೆ. ಶ್ರೀಗಳು ಸಾಮಾಜಿಕ ಕಳಕಳಿ ಇಟ್ಟುಕೊಂಡಿದ್ದರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವ ಶಿಕ್ಷಣವನ್ನು ಸಿದ್ದಗಂಗಾ ಮಠದಿಂದ ಮೂಲಕ ನೀಡಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ  – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಬೀದರ್: ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ ಯಡಿಯೂರಪ್ಪನವರೇ? ಆ ಸಿಹಿಯನ್ನು ಕರ್ನಾಟಕ ಅಥವಾ ದೆಹಲಿಯಿಂದ ತರುತ್ತೀರೋ ಇಲ್ಲಾ ವಿದೇಶದಿಂದ ಬರಬೇಕೇ ಎಂದು ಪ್ರಶ್ನಿಸಿ ಬಂಡೆಪ್ಪ ಕಾಶೆಂಪೂರ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ರಂಗಮಂದಿರದಲ್ಲಿ ನಡೆದ ಬಡವರ ಬಂಧು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಈಗಾಗಲೇ ಬಿಜೆಪಿಯ ಎಲ್ಲಾ ಬಾಂಬ್‍ಗಳು ಠುಸ್ಸಾಗಿದ್ದು, ಎಲ್ಲಾ ಅತೃಪ್ತ ಶಾಸಕರು ವಾಪಸ್ ಪಕ್ಷಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್‍ನ ಸಿಂಗಲ್ ಎಂಎಲ್‍ಎಗಳು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಈ ಆಟಕ್ಕೆ ರಾಜ್ಯದ ಜನ ಮುಂದೆ ತಕ್ಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

    ಸಿಹಿ ಸುದ್ದಿ ಕೊಡುತ್ತೇವೆ ಎಂದು ಬಾಯಿ ಮಾತಿಗೆ ಹೇಳ್ತಾರೆ. ಯಡಿಯೂರಪ್ಪನವರೇ ಎಲ್ಲಿದೆ ಸಿಹಿ ಸುದ್ದಿ? ಕರ್ನಾಟಕದಲ್ಲಿ ಇದೆಯೇ? ದೆಹಲಿಯಲ್ಲಿ ಇದೆಯೋ? ಇಲ್ಲಾ ವಿದೇಶದಿಂದ ಬರಬೇಕೇ? ಇದೆಲ್ಲ ಬಿಜೆಪಿ ಅವರು ಜನರ ದಿಕ್ಕು ತಪ್ಪಿಸಲು ಮಾಡುತ್ತಿದ್ದಾರೆ. ಅವರ ಆಟ ನಡಿಯುವುದಿಲ್ಲ ಎಂದರು.

    ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಶ್ರೀಗಳ ಆರೋಗ್ಯ ಬೇಗ ಚೇತರಿಕೆಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಾನು ಕೂಡ ಹೋಗಿ ಶ್ರೀಗಳ ದರ್ಶನ ಪಡೆಯುವೆ. ಕರ್ನಾಟಕಕ್ಕೆ ನಡೆದಾಡುವ ದೇವರ ಕೊಡುಗೆ ಅಪಾರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ರಾಜಕೀಯ ಜೀವನ ಕೊನೆಗಾಣಿಸಲು ದೇವೇಗೌಡರ ಮಾಸ್ಟರ್ ಪ್ಲಾನ್!

    ಬಿಎಸ್‍ವೈ ರಾಜಕೀಯ ಜೀವನ ಕೊನೆಗಾಣಿಸಲು ದೇವೇಗೌಡರ ಮಾಸ್ಟರ್ ಪ್ಲಾನ್!

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜಕೀಯ ಜೀವನ ಕೊನೆಗಾಣಿಸಲು ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. `ಮಧ್ಯಾಹ್ನ ಮೂರು ಗಂಟೆ’ ಎಂದು ಹುಸಿ ಬಾಂಬ್ ಹಾಕಿದ್ದ ಯಡಿಯೂರಪ್ಪನವರನ್ನು ಸೋಲಿಸಲು ಪುತ್ರ ಕುಮಾರಸ್ವಾಮಿ ಜೊತೆ ಸೇರಿಕೊಂಡೇ ಬಲೆ ರೆಡಿ ಮಾಡಿದ್ದಾರೆ.

    ಏನಿದು ರಣತಂತ್ರ?
    ಅಕ್ಟೋಬರ್ 30, 31 ಈ ಎರಡೂ ದಿನ ಶಿವಮೊಗ್ಗದಲ್ಲಿ ದೇವೇಗೌಡರು ಅಬ್ಬರದ ಪ್ರಚಾರ ಮಾಡಲಿದ್ದಾರೆ. ಆ ಎರಡೂ ದಿನ ಶಿವಮೊಗ್ಗದಲ್ಲಿ ಕುಮಾರಸ್ವಾಮಿ-ದೇವೇಗೌಡರು ಜಂಟಿ ಪ್ರಚಾರ ಮಾಡಲಿದ್ದು, ಹೇಗಾದ್ರೂ ಮಾಡಿ ಯಡಿಯೂರಪ್ಪ ಮಗ ರಾಘವೇಂದ್ರರನ್ನ ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಪುತ್ರ ರಾಘವೇಂದ್ರ ಸೋತರೇ ಯಡಿಯೂರಪ್ಪ ರಾಜಕೀಯ ಜೀವನ ಕೊನೆಯಾಗಲಿದೆ. ಅಲ್ಲದೇ ಸ್ವಕ್ಷೇತ್ರದಲ್ಲಿ ಪುತ್ರನನ್ನ ಗೆಲ್ಲಿಸಲಾಗದವರು ಎಂಬ ಟೀಕೆಗೆ ಬಿಎಸ್‍ವೈ ತುತ್ತಾಗುತ್ತಾರೆ. ಮೊದಲ ಗಟ್ಟಿ ಏಟು ಬಿದ್ದರೆ ಮುಂದೆ ಈ ವಿಚಾರ ಪಕ್ಷದ ಒಳಗಡೆ ಚರ್ಚೆಯಾಗಿ ಬಿಎಸ್‍ವೈ ರಾಜಕೀಯಕ್ಕೆ ಹೊಡೆತ ಬೀಳಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

    ರಾಮುಲು ಸಿಎಂ ಆಗ್ತಾರಾ?
    ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲೇ ತಂತ್ರಗಳು ಆರಂಭವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಈಗ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಶುರುವಾಗಿದೆ. ದಿಢೀರ್ ಆಗಿ ಸಿಎಂ ಕುರ್ಚಿಗೆ ರಾಮುಲು ಹೆಸರು ತಂದಿದ್ದು ಏಕೆ ಪ್ರಶ್ನೆ ಇದೀಗ ಎದ್ದಿದೆ. ವಿ.ಸೋಮಣ್ಣ ಅವರ ಈ ಹೇಳಿಕೆ ಉದ್ದೇಶಪೂರ್ವಕವೋ? ಮಾತಿನ ಭರದಲ್ಲಿ ಕೊಟ್ಟ ಹೇಳಿಕೆಯೇ ಎನ್ನುವ ಚರ್ಚೆಗಳು ಆರಂಭವಾಗಿದೆ. ಆ ಒಂದು ಹೇಳಿಕೆಯಿಂದ ಬಿಜೆಪಿಯಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ಈ ಮೂಲಕ ಸೋಮಣ್ಣ ಹೇಳಿಕೆ ಹಿಂದೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇದ್ದಾರಾ ಅನ್ನೋ ಅನುಮಾನವೂ ಪ್ರಶ್ನೆಯೂ ಎದ್ದಿದೆ.

    ಬಿಎಸ್‍ವೈ ಪ್ಲಾನ್ ಏನು?
    ಸೋಮಣ್ಣ ವಿರುದ್ಧ ಫುಲ್ ಗರಂ ಆಗಿರುವ ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಎಸ್‍ವೈ ಅವರೂ ತಂತ್ರ ಹೂಡಿದ್ದಾರೆ. ಒಂದು ವೇಳೆ ಶಿವಮೊಗ್ಗದಲ್ಲಿ ರಾಘವೇಂದ್ರ ಸೋತರೇ ರಾಮುಲುಗೆ ಅವಕಾಶ ನೀಡುವುದು. ಹೀಗಾಗಿಯೇ ಸೋಮಣ್ಣರಿಂದ `ರಾಮುಲು ಮುಂದಿನ ಸಿಎಂ’ ಮಂತ್ರ ಎನ್ನಲಾಗುತ್ತಿದೆ. ಆದ್ರೆ, ಉಪ ಚುನಾವಣೆಯ ಫಲಿತಾಂಶವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಎಸ್‍ವೈ ಪ್ಲಾನ್ ಮಾಡಿದ್ದು, ಶಿವಮೊಗ್ಗದ ಜತೆಗೆ ಜಮಖಂಡಿ ವಿಧಾನಸಭೆ ಕ್ಷೇತ್ರ ಗೆಲ್ಲಲು ತಂತ್ರ ಹೂಡಿದ್ದಾರೆ. ಹೀಗಾಗಿ ಜಮಖಂಡಿಯಲ್ಲಿ ಇನ್ನೊಂದು ದಿನ ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ. ಜಮಖಂಡಿಯಲ್ಲಿ ಗೆದ್ದರೆ ಮೈತ್ರಿ ಸರ್ಕಾರವಿದ್ದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ವಿರುದ್ಧ ಜನಾಭಿಪ್ರಾಯ ಇದೆ ಎನ್ನುವ ನಮ್ಮ ಆರೋಪ ಈಗಲೇ ಉತ್ತರ ಸಿಕ್ಕಿದೆ ಎಂದು ಹೇಳಿ ಮತ್ತೆ ಸರ್ಕಾರ ರಚನೆಯ ಉದ್ದೇಶವನ್ನು ಬಿಎಸ್‍ವೈ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯ ಬಿಜೆಪಿಯಲ್ಲಿ ಮತ್ತೆ ಡಿವೈಡ್ ಪಾಲಿಟಿಕ್ಸ್- ಬಿಎಸ್‍ವೈ, ಸಂತೋಷ್ ಟೀಂ ನಡ್ವೆ ಫೈಟ್

    ರಾಜ್ಯ ಬಿಜೆಪಿಯಲ್ಲಿ ಮತ್ತೆ ಡಿವೈಡ್ ಪಾಲಿಟಿಕ್ಸ್- ಬಿಎಸ್‍ವೈ, ಸಂತೋಷ್ ಟೀಂ ನಡ್ವೆ ಫೈಟ್

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಟೀಂ ಡಿವೈಡ್ ಪಾಲಿಟಿಕ್ಸ್ ಆರಂಭವಾಗಿದ್ದು, ಯಡಿಯೂರಪ್ಪ ಟೀಂ ಹಾಗೂ ಬಿ.ಎಲ್. ಸಂತೋಷ್ ಟೀಂ ನಡುವೆ ಫೈಟ್ ಶುರುವಾಗಿದೆ.

    ಆಪರೇಷನ್ ಕಮಲಕ್ಕೆ ಸಂತೋಷ್ ಟೀಂ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಕುರ್ಚಿ, ಮೇಯರ್ ಕುರ್ಚಿ ಏರಲು ರಾಷ್ಟ್ರೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟೀಂ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಬಿಬಿಎಂಪಿ ಮೇಯರ್ ಚುನಾವಣೆ: ಅಶೋಕ್ ವಿರುದ್ಧ ಬಿಎಲ್ ಸಂತೋಷ್ ಅಸಮಾಧಾನ?

    ಹೀಗಾಗಿ ಬಿಎಸ್‍ವೈ ಟೀಂ ವಿರುದ್ಧ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್‍ಗೆ ಸಂತೋಷ್ ಅವರು ಯಡಿಯೂರಪ್ಪ ಹಾಗೂ ಅಶೋಕ್ ಅವರ ವಿರುದ್ಧ ದಾಖಲೆಗಳ ಸಹಿತ ದೂರು ನೀಡಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲೂ ಇಬ್ಬರು ನಾಯಕರ ನಡುವೆ ಗುದ್ದಾಟ- ಬಿಎಸ್‍ವೈ ಗೆ ಸಂಕಟ

    ಆಪರೇಷನ್ ಕಮಲಕ್ಕೆ ಇಬ್ಬರು ನಾಯಕರು ಕೈ ಹಾಕಿ ಫೆಲ್ಯೂರ್ ಆಗಿದ್ದಾರೆ. ಎಲ್ಲದಕ್ಕೂ ಬೆಂಗಳೂರು ಉಸ್ತುವಾರಿ ಅಶೋಕ್ ಅವರೇ ಕಾರಣ. ಅಶೋಕ್ ಬೆನ್ನಿಗೆ ಯಡಿಯೂರಪ್ಪ ಅವರು ನಿಂತಿರೋದೇ ಇದಕ್ಕೆ ಕಾರಣವಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಹೈಕಮಾಂಡ್ ಕ್ರಮ ಕೈಗೊಳ್ಳಬೇಕಿದೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಅಶೋಕ್ ಪರ ಯಡಿಯೂರಪ್ಪ ಅವರು ಇದ್ದರೆ, ಡಿವಿಎಸ್ ಆಂಡ್ ತಮ್ಮ ಟೀಂ ಪರ ನಿಂತ ಸಂತೋಷ್ ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಗೆ ಅದೃಷ್ಟವಂತೆ ಆ ಸ್ಥಳ – ಬಿಎಸ್‍ವೈಗೆ ಲಕ್, ಸರ್ಕಾರಕ್ಕೆ ಸಂಕಷ್ಟನಾ..?

    ಬಿಜೆಪಿಗೆ ಅದೃಷ್ಟವಂತೆ ಆ ಸ್ಥಳ – ಬಿಎಸ್‍ವೈಗೆ ಲಕ್, ಸರ್ಕಾರಕ್ಕೆ ಸಂಕಷ್ಟನಾ..?

    – ಇಲ್ಲಿದೆ ಕಮಲದ ಲಕ್‍ನ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ರಾಜಭವನದಲ್ಲಿರೋ ಒಂದು ಸ್ಥಳ ಬಿಜೆಪಿಯ ಅದೃಷ್ಟದ ಸ್ಥಳವಾಗಿದೆಯಂತೆ. 2006ರಲ್ಲಿ ಹೆಚ್‍ಡಿಕೆ, ಬಿಎಸ್‍ವೈ ದೋಸ್ತಿಗೆ ಇದೇ ಸ್ಥಳದಿಂದಾಗಿ ಗ್ರೀನ್ ಸಿಗ್ನಲ್ ಸಿಕ್ಕಿತ್ತಂತೆ. ಹೀಗೆ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಅದೃಷ್ಟ ಖುಲಾಯಿಸಿದ್ದ ಸ್ಥಳವೇ ಇದೀಗ ಬಿಜೆಪಿಯ ಲಕ್ಕಿ ಸ್ಥಳವಾಗಿದೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

    ಯಾವುದು ಆ ಸ್ಥಳ?:
    ರಾಜಭವನದ ಬ್ಯಾಂಕ್ವೆಟ್ ಹಾಲ್ ಬಿಜೆಪಿ ಪಾಲಿನ ಲಕ್ಕಿ ಸ್ಥಳ ಅಂತೆ. 2006ರಲ್ಲಿ ಇದೇ ಜಾಗದಲ್ಲಿ ರಾಜ್ಯಪಾಲರು ಜೆಡಿಎಸ್, ಬಿಜೆಪಿ ಶಾಸಕರ ತಲೆ ಎಣಿಕೆ ನಡೆಸಿದ್ದರು. ಅಂದು ಹೆಚ್‍ಡಿಕೆ ಜತೆ ಬಂದಿದ್ದ ಜೆಡಿಎಸ್ ಶಾಸಕರು ಕೂಡ ರಾಜಭವನಕ್ಕೆ ಹೋಗಿದ್ದರು. ಆಗ ರಾಜ್ಯಪಾಲರು ಎರಡು ಕಡೆ ತಲೆ ಎಣಿಕೆ ಮಾಡಿ ಸರ್ಕಾರ ರಚನೆಗೆ ಅನುಮತಿ ನೀಡಿದ್ದರು. ಇದನ್ನೂ ಓದಿ: ಎಚ್‍ಡಿಕೆ ವಿರುದ್ಧ ಬಿಜೆಪಿ ಮುಗಿಬೀಳಲು ಕಾರಣವಾಗಿದ್ದು ಆ ಒಂದು ಫೋನ್ ಕಾಲ್!

    ನಿನ್ನೆ (ಶುಕ್ರವಾರ) ರಾಜಭವನದಲ್ಲಿ ದಂಗೆ ವಿರುದ್ಧ ಕೂಡ ಬ್ಯಾಂಕ್ವೆಟ್ ಹಾಲ್‍ನಲ್ಲಿ ದೂರು ಕೊಟ್ಟಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ನಾಯಕರು 2006ರ ತಲೆ ಎಣಿಕೆ ಹಿಸ್ಟರಿ ಮೆಲಕು ಹಾಕಿದ್ದಾರೆ.

    ರಾಜಭವನದ ಭೇಟಿ ಬಳಿಕ ಬಿಎಸ್‍ವೈ ನಿವಾಸಕ್ಕೆ ಬಂದ ಕೆಲವು ನಾಯಕರು, ಅದೃಷ್ಟದ ಸ್ಥಳದಿಂದಲೇ ನಾವು ದೂರು ಕೊಟ್ಟಿದ್ದೇವೆ. ಹೀಗಾಗಿ ಅಲ್ಲಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಶುರುವಾಗುತ್ತದೆ ಅಂತ ಬಿಎಸ್‍ವೈಗೆ ಅದೃಷ್ಟ ಸ್ಥಳವಾಗಿರುವ ಬಗ್ಗೆ ಹೇಳಿಕೊಂಡು ಖುಷಿಪಟ್ಟಿದ್ದಾರೆ.

    ಒಟ್ಟಿನಲ್ಲಿ ಬ್ಯಾಂಕ್ವೆಟ್ ಹಾಲ್‍ನಿಂದಲೇ ಸಮ್ಮಿಶ್ರ ಸರ್ಕಾರದ ವಿರುದ್ಧ ದೂರಿನ ಸಮರ ಆರಂಭವಾಗಿದೆ. ಹಾಗಾದ್ರೆ ರಾಜಭವನದ ಆ ಸ್ಥಳಕ್ಕೂ, ಸರ್ಕಾರ ರಚನೆಯ ಅದೃಷ್ಟಕ್ಕೂ ಸಂಬಂಧವಿದೆಯಾ, ಬಿಜೆಪಿಯ ನಾಯಕರ ಅದೃಷ್ಟದ ಆಸೆ ನಿಜಕ್ಕೂ ಕೂಡ ಈಡೇರುತ್ತಾ ಎಬುದನ್ನು ಕಾದುನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://twitter.com/ShobhaBJP/status/1043042614247743489

  • ಸರ್ಕಾರ ರಚಿಸುವ ಬಿಜೆಪಿ ಕನಸು ಇನ್ನೂ ಜೀವಂತ- ಡಿಕೆಶಿ ಪ್ರಕರಣ ಕಾಯುತ್ತಿರುವ ಬಿಎಸ್‍ವೈ ಟೀಂ

    ಸರ್ಕಾರ ರಚಿಸುವ ಬಿಜೆಪಿ ಕನಸು ಇನ್ನೂ ಜೀವಂತ- ಡಿಕೆಶಿ ಪ್ರಕರಣ ಕಾಯುತ್ತಿರುವ ಬಿಎಸ್‍ವೈ ಟೀಂ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅಸಮಾಧಾನ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಿಂತಿಲ್ಲ. ಸದ್ಯಕ್ಕೆ ಬಿಜೆಪಿಯಲ್ಲಿ ನಡೆಯುತ್ತಿದ್ದ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದ್ದು, ಯಡಿಯೂರಪ್ಪ ಆಂಡ್ ಟೀಂ ಕೂಡ ಸದ್ಯ ಸೈಲೆಂಟ್ ಆಗಿರಲು ನಿರ್ಧರಿಸಿದ್ದಾರೆ.

    ಸದ್ಯ ಸಚಿವ ಡಿಕೆ ಶಿವಕುಮಾರ್ ಅವರ ಮೇಲಿನ ಇಡಿ ಪ್ರಕರಣವನ್ನು ಬಿಜೆಪಿ ಎದುರು ನೋಡುತ್ತಿದೆ. ಇಡಿ ಡಿಕೆಶಿಗೆ ಏನ್ ಮಾಡುತ್ತೆ ಅಂತಾ ಬಿಜೆಪಿ ಕಾದುನೋಡುವ ತಂತ್ರ ಹೂಡಿದೆ.

    ಅಷ್ಟೇ ಅಲ್ಲ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ, ಮೂರು ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಫಲಿತಾಂಶವನ್ನು ಕೂಡ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಒಂದು ವೇಳೆ ಮೈತ್ರಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಭುಗಿಲೆದ್ದರೆ ಅದು ಬಿಜೆಪಿಗೆ ಲಾಭವಾಗಲಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲು ಕಾಯುತ್ತಿದೆ. ಇದನ್ನೂ ಓದಿ: ಸಚಿವ ಸ್ಥಾನದ ಕನಸು ಕಾಣ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್

    ಈ ನಡುವೆ ಬಿಜೆಪಿ ಹೈಕಮಾಂಡ್‍ನಿಂದಲೂ ಎಚ್ಚರಿಗೆ ಹೆಜ್ಜೆ ಇಡಲು ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ಸರ್ಕಾರ ರಚಿಸುವ ಆಸೆಯನ್ನು ಬಿಜೆಪಿ ಜೀವಂತವಾಗಿ ಇಟ್ಟುಕೊಂಡಿದ್ಯಾ? ಬಿಜೆಪಿಯಿಂದ ಆಪರೇಷನ್ ಕಮಲ ನಿಲ್ಲುವುದಿಲ್ಲವಾ ಅನ್ನುವ ಪ್ರಶ್ನೆಗಳು ಇದೀಗ ರಾಜಕೀಯ ವಲಯದಿಂದ ಕೇಳಿಬರುತ್ತಿದೆ. ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಿ, ಗಲ್ಲಿಗೂ ಏರಲು ಸಿದ್ಧ: ಡಿಕೆಶಿ ಗುಡುಗು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv