Tag: BSY

  • ಜನವರಿ 30 ರಾಜ್ಯದಲ್ಲಿ ರೈಲು ಬಂದ್ -ವಾಟಾಳ್ ನಾಗರಾಜ್

    ಜನವರಿ 30 ರಾಜ್ಯದಲ್ಲಿ ರೈಲು ಬಂದ್ -ವಾಟಾಳ್ ನಾಗರಾಜ್

    -ಬೆಳಗಾವಿಯ ರಾಜಕಾರಣಿಗಳು ಕೋಮಾದಲ್ಲಿದ್ದಾರೆ
    -ಕನ್ನಡಪರ ಸಂಘಟನೆಗಳಿಂದ ಕನ್ನಡ ಉಳಿದಿದೆ
    – ಬಿಜೆಪಿ ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ

    ಚಿಕ್ಕಬಳ್ಳಾಪುರ : ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಹಾಗೂ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಜನವರಿ 30 ರಂದು ರಾಜ್ಯದಲ್ಲಿ ರೈಲು ಬಂದ್ ಮಾಡಿ ಹೋರಾಟ ಮಾಡುವುದಾಗಿ ಕನ್ನಡಪರ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

     

    ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಮಾತನಾಡಿದ ಅವರು, ಬೆಳಗಾವಿ ನಮ್ಮದು-ಕಾರವಾರ ನಮ್ಮದು. ಆದರೆ ಮಹಾರಾಷ್ಟ್ರದ ಶಿವಸೇನೆಯ ಸರ್ಕಾರ ಸಿಎಂ ಉದ್ದವ್ ಠಾಕ್ರೆ ಬೆಳಗಾವಿಯನ್ನೇ ಪಡೆದೇ ಪಡೆಯಬೇಕು ಎಂಬ ಹಠದಲ್ಲಿ ದಾಂಧಲೆ ಮಾಡುತ್ತಿದ್ದಾರೆ. ಅವರಿಗೆ ಎಂಇಎಸ್ ನವರು ಬೆಂಬಲ ಕೊಡುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ನಿಷ್ಕ್ರಿಯವಾಗಿದೆ. ಬೆಳಗಾವಿಯ ರಾಜಕಾರಣಿಗಳು ಕೋಮಾದಲ್ಲಿದ್ದಾರೆ. ಅವರಿಗೆ ಯಾರು ಬೇಕಾಗಿಲ್ಲ ಮಂತ್ರಿಯಾಗಬೇಕು ಅಷ್ಟೇ. ಬೆಳಗಾವಿ ರಾಜಕಾರಣಿಗಳು ಮಹಾರಾಷ್ಟ್ರ ಹಾಗೂ ಎಂಇಎಸ್ ಎಜೆಂಟ್ ಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕನ್ನಡ ಉಳಿದಿದ್ದರೇ ಕನ್ನಡಪರ ಸಂಘಟನೆಗಳಿಂದಾಗಿದೆ. ಯಡಿಯೂರಪ್ಪ ಸರ್ಕಾರ ತೀರ ಇತ್ತೀಚೆಗೆ ಬಂದಿರುವ ಎಲ್ಲಾ ಸರ್ಕಾರಗಳಿಗಿಂತಲೂ ಹೀನಾಯ ಸರ್ಕಾರ. ಕನ್ನಡ ವಿರೋಧಿ ಸರ್ಕಾರ. ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ. ಬಿಜೆಪಿ ಆರ್ ಎಸ್ ಎಸ್ ಸರ್ಕಾರ. ಇವರಿಗೆ ಹಿಂದಿ ಬಗ್ಗೆ ಅಭಿಮಾನವೇ ಹೊರತು ಕನ್ನಡದ ಬಗ್ಗೆ ಅಲ್ಲ. ಯಡಿಯೂರಪ್ಪನವರು ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಬೇಕು. ಎಂಎಎಸ್ ಸಂಘಟನೆ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಸೇಫರ್ ಝೋನ್‍ಗಳಲ್ಲಿ ಅನುಮತಿ ಪಡೆದು ಗಣಿಗಾರಿಕೆ ಮಾಡೋದು ತಪ್ಪಲ್ಲ: ವಿಶ್ವನಾಥ್

    ಸೇಫರ್ ಝೋನ್‍ಗಳಲ್ಲಿ ಅನುಮತಿ ಪಡೆದು ಗಣಿಗಾರಿಕೆ ಮಾಡೋದು ತಪ್ಪಲ್ಲ: ವಿಶ್ವನಾಥ್

    – ಬಿಸ್‍ವೈ ಹೇಳಿಕೆ ಸಮರ್ಥನೆ

    ಬೆಂಗಳೂರು: ಕೆಲವೊಂದು ಸೇಫರ್ ಝೋನ್ ಗಳಿವೆ ಅಲ್ಲಿ ಅನುಮತಿ ಪಡೆದು ಸುರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮಾಡೋದು ತಪ್ಪಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ.

    ಗಣಿಗಾರಿಕೆಯನ್ನು ಸಕ್ರಮ ಮಾಡುವ ಕುರಿತಾಗಿ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಕೆಲವೊಂದು ಸೇಫರ್ ಝೋನ್ ಗಳಿವೆ ಅಲ್ಲಿ ಅನುಮತಿ ಪಡೆದು ಸುರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮಾಡೋದು ತಪ್ಪಲ್ಲ. ಆದರೆ ಕೆಲವರು ಅನುಮತಿ ಪಡೆಯದೇ ಸೇಫರ್ ಝೋನ್ ಇಲ್ಲದೆ ಹೊರಗಡೆ ಗಣಿಗಾರಿಕೆ ಮಾಡ್ತಾರೆ. ಇದು ಅಕ್ರಮ, ಇಂಥವನ್ನು ನಿಲ್ಲಿಸಬೇಕು ಎಂದು ಬಿಸ್‍ವೈ ಹೇಳಿಕೆಯನ್ನು ಸಮರ್ಥಸಿಕೊಂಡಿದ್ದಾರೆ.

    ಸೇಫರ್ ಝೋನ್‍ಗಳಲ್ಲೂ ಕೆಲವರು ಅನುಮತಿ ಪಡೆದಿರಲ್ಲ. ಲೈಸೆನ್ಸ್ ಅವಧಿ ಮುಗಿದರು ಕೆಲವರು ಗಣಿಗಾರಿಕೆ ಮಾಡ್ತಾರೆ. ಕೆಲವು ಅಧಿಕಾರಿಗಳು ಇದು ಗೊತ್ತಿದ್ದರು ಕಣ್ಮುಚ್ಚಿ ಕೂತಿರ್ತಾರೆ. ಸಿಎಂ ಹೇಳಿದ್ದು ಎಲ್ಲ ಅನುನತಿ ತಗೊಂಡು ಮಾಡಿ ಎಂದಿದ್ದಾರೆ. ಕ್ರಮಬದ್ಧವಾಗಿ ಗಣಿಗಾರಿಕೆ ಮಾಡುವ ಕಡೆ ಲೈಸೆನ್ಸ್ ತಗೊಂಡು ಮಾಡಿ ಅಂತ ಸಿಎಂ ಹೇಳಿರೋದು. ಬೆಂಗಳೂರಿನಲ್ಲೂ ಕೆಲವು ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಅಕ್ರಮ ಗಣಿಗಾರಿಕೆ ಇದ್ದರೆ ಸಕ್ರಮ ಮಾಡಿಕೊಳ್ಳಿ – ಉಲ್ಟಾ ಹೊಡೆದ ಬಿಎಸ್‍ವೈ

    ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿ ಸೂಕ್ತ ಕ್ರಮ ಕೈಗೊಂಡು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇಂದು ಮಾತನಾಡಿದ ಸಿಎಂ, ಅಕ್ರಮ ಇದ್ದರೆ ಸಕ್ರಮ ಮಾಡಿಕೊಳ್ಳಿ. ಲೈಸೆನ್ಸ್ ಪಡೆದು ಗಣಿಗಾರಿಕೆ ಮಾಡಿ ಅಕ್ರಮವಾದ ಗಣಿಗಾರಿಕೆಯನ್ನು ತಡೆಯುತ್ತೇವೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದರೆ.

  • ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ

    – ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ
    – ಮುಖ್ಯಮಂತ್ರಿ ಜೊತೆ ನಿಲ್ಲಬೇಕು

    ಹಾಸನ: ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ, ಖಾತೆ ಬದಲಾವಣೆ ಅಥವಾ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಟ್ಟದಾಲೂರು ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರು ಅಸಮಾಧಾನಗೊಂಡಿಲ್ಲ, ಎಲ್ಲವನ್ನೂ ಮುಖ್ಯಮಂತ್ರಿ ಅವರು ಸರಿಪಡಿಸುತ್ತಾರೆ. ಖಾತೆ ಹಂಚಿಕೆ ಕುರಿತಾಗಿ ನಾನು ಯಾರ ಜೊತೆಯಲ್ಲೂ ಚರ್ಚಿಸಿಲ್ಲ, ಅಸಮಾಧಾನವಿದ್ದರೆ ಮಿತ್ರ ಮಂಡಳಿ ಹಾಗೂ ಬಿಜೆಪಿ ಶಾಸಕರನ್ನು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

    ಕೋವಿಡ್ ನಿಂದ ಸಂಕಷ್ಟ ಅನುಭವಿಸದ್ದೇವೆ, ಇಂತಹ ಸಂದರ್ಭದಲ್ಲಿ ಎಲ್ಲರು ಮುಖ್ಯಮಂತ್ರಿ ಕೈ ಬಲಪಡಿಸಬೇಕು. ಮುಂದಿನ ಎರಡು ವರ್ಷ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಚಿವರೆದುರೇ ರೈತರೊಬ್ಬರು ಎತ್ತಿನಹೊಳೆ ಪರಿಹಾರ ನೀಡದೇ ಇರುವ ಬಗ್ಗೆ ಆಕ್ರೋಶ ಹೊರಹಾಕಿದರು.ಅಷ್ಟೇ ಅಲ್ಲದೇ ಸಮರ್ಪಕ ಪರಿಹಾರ ನೀಡದೇ ಕಾಮಗಾರಿ ನಡೆಯಲು ಅವಕಾಶ ನೀಡಲ್ಲ ಎಂದು ಎಚ್ಚರಿಸಿದ್ದಾರೆ. ಆದರೆ ಸಚಿವರು ಮಾತ್ರ ಕೇಳಿಯೂ ಕೇಳದಂತೆ ಸ್ಥಳದಿಂದ ತೆರಳಿದರು.

  • ಬಿಎಸ್‍ವೈ ಶಿವಮೊಗ್ಗಕ್ಕೆ ತಕ್ಷಣ ಭೇಟಿ ಕೊಡಬೇಕು: ಡಿ.ಕೆ ಶಿವಕುಮಾರ್

    ಬಿಎಸ್‍ವೈ ಶಿವಮೊಗ್ಗಕ್ಕೆ ತಕ್ಷಣ ಭೇಟಿ ಕೊಡಬೇಕು: ಡಿ.ಕೆ ಶಿವಕುಮಾರ್

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ದುರಂತ ಹಿನ್ನೆಲೆ ತಕ್ಷಣ ಸಿಎಂ ಅವಘಡ ಸಂಭವಿಸಿರುವ ಸ್ಥಳಕ್ಕೆ ಭೇಟಿ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಆಗಿರುವ ದುರಂತ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತವರು ಕ್ಷೇತ್ರದಲ್ಲಿ ನಡೆದ ದುರಂತ ಸ್ಥಳಕ್ಕೆ ಸಿಎಂ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೂತನ ಸಚಿವ ನಿರಾಣಿ ಕೂಡ ಅಲ್ಲಿ ಭೇಟಿ ನೀಡಬೇಕು. ಅಲ್ಲಿ ನಡೆದಿರುವ ಅವಘಡ ಮತ್ತು ಸಾವು ನೋವಿನ ಕುರಿತಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ನಾನು ಗ್ರಾನೈಟ್ ಹಿನ್ನೆಲೆಯಿಂದ ಬಂದವನು. ಅಷ್ಟು ದೊಡ್ಡ ಪ್ರಮಾಣದ ಗ್ರಾನೈಟ್ ಹೇಗೆ ಸಂಗ್ರಹಿಸಿಟಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವಾಗ ಬೇಕಾದಂತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತನಿಖೆ ಎಂದರೆ ಈಗ ನಡೀತಾ ಇರೋ ಲೀಗಲ್ ಆಗಿರೋದನ್ನು ಬಂದ್ ಮಾಡಬೇಕು ಅಂತ ಅಲ್ಲ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ದುರಂತದಿಂದಾಗಿ ಮೂರು ನಾಲ್ಕು ಜಿಲ್ಲೆಗೆ ಹಾನಿ ಆಗಿದೆ. ಇದಕ್ಕೆಲ್ಲ ಯಾರು ಹೊಣೆಯಾಗಿದ್ದಾರೆ. ಯಾರು ಜವಾಬ್ದಾರಿ ತಗೋತಾರೆ ಎಂದು ಪ್ರಶ್ನಿಸಿದ್ದಾರೆ.

    ಇನ್ನು ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿರುವ ಸಿಎಂ, ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅಕ್ರಮ ಗಣಿಗಾರಿಕೆಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

  • ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    ಶಿವಮೊಗ್ಗ ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ: ಬಿಎಸ್‍ವೈ

    – ಹೆಚ್‍ಡಿಕೆ, ಪ್ರಹ್ಲಾದ್ ಜೋಷಿ ಸಂತಾಪ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಿಎಂ ಬಿಎಸ್‍ವೈ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಡೈನಾಮೈಟ್ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಕುಟಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

  • ಹೆವಿ ಪಾಲಿಟಿಕ್ಸ್ ಮಧ್ಯೆ ಸಿಎಂ ಟೆಂಪಲ್ ರನ್

    ಹೆವಿ ಪಾಲಿಟಿಕ್ಸ್ ಮಧ್ಯೆ ಸಿಎಂ ಟೆಂಪಲ್ ರನ್

    ಉಡುಪಿ: ನಾಯಕತ್ವ ಗೊಂದಲ, ಸಂಪುಟ ಕಿತ್ತಾಟ, ಅತೃಪ್ತರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

    ನಿನ್ನೆಯಿಂದ ಕರಾವಳಿ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು ಉಡುಪಿಯ ಕುಂಭಾಶಿಯ ಆನೆಗುಡ್ಡ ಗಣಪತಿಗೆ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ಆನೇಗುಡ್ಡ ಗಣಪತಿ ದೇಗುಲದಲ್ಲಿ 1,008 ತೆಂಗಿನಕಾಯಿ ಗಣಹೋಮ ಮಾಡಿಸಲಿದ್ದಾರೆ. ಸಿಎಂ ಒಳಿತಿಗಾಗಿ ಅವರ ಸ್ನೇಹಿತರು ಹಮ್ಮಿಕೊಂಡಿರುವ ಗಣಹೋಮದಲ್ಲಿ ಭಾಗಿಯಾಗಿ ಆಗಲಿದ್ದಾರೆ. ನೆಮ್ಮದಿ, ಸಮಾಧಾನ, ತೃಪ್ತಿಗಾಗಿ ಸಿಎಂ ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ.

    ರಾಜ್ಯ ರಾಜಕಾರಣದ ಜಂಜಾಟದ ನಡುವೆಯೇ ಇಂದಿನಿಂದ 2 ದಿನಗಳ ಕಾಲ ಯಡಿಯೂರಪ್ಪ ಟೆಂಪಲ್ ರನ್‍ಗೆ ಮುಂದಾಗಿದ್ದಾರೆ. ಸಿಎಂ ಬಿಎಸ್‍ವೈ ಒಳಿತಿಗಾಗಿ ಕುಂದಾಪುರದ ರಾಘವೇಂದ್ರ ರಾವ್ ಎಂಬವರ ಕುಟುಂಬ ನಡೆಸುವ ಹೋಮದಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆಯಲಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜಕೀಯ ಜಂಟಾಟದ ನಡುವೆ ಕರಾವಳಿಗೆ ಬಂದಿದ್ದೇನೆ, ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಗಣಪತಿ ಕೈಬಿಡುವುದಿಲ್ಲ ಎಂದಿದ್ದಾರೆ.

  • ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೋ ಹೊರತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ ಎಂದು ಘೋಷಿಸಿಲ್ಲ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಜೊತೆ ಬಹಳ ಆಪ್ತರಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮ್ಮದ್ ಖಾನ್ ಎಲ್ಲರೂ ಬಹಳ ಆಪ್ತರು. ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೆ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅಂತಹ ಕಡೆಗಳಲ್ಲಿ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

    ಇದೇ ವೇಳೆ ಸಿಡಿ ವಿಚಾರವಾಗಿ ನಾನು ಏನು ಹೇಳಿಲ್ಲ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಹೊರತು ಅಂತಹ ಸಿಡಿಗಳನ್ನು ನೋಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸದ್ಯ ಈಗ ಮೋದಿಯವರ ಗಾಳಿ ಇರುವುದರಿಂದ ವಲಸಿಗ ಶಾಸಕರು ಮೋದಿಯವರಿಗೆ ಜೈ ಅಂತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈಕಾರ ಹಾಕುತ್ತಾರೆ. ದೇವೇಗೌಡ ಅಪ್ಪಾಜಿ ಎಂದು ಕೂಡ ಕರೆಯುತ್ತಾರೆ. ವಲಸಿಗ ಶಾಸಕರು ಈಗ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಲ್ಲ, ಅವರು ಉಪಾದ್ಯಾಪಿ ಠಾಕ್ರಿ. ಚುನಾವಣಾ ಸ್ಟಂಟ್ ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

  • ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ – ರೇಣುಕಾಚಾರ್ಯ

    ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ – ರೇಣುಕಾಚಾರ್ಯ

    – ಬಿಎಸ್‍ವೈ ನನ್ನ ತಂದೆಯಂತೆ
    – ಸರ್ಕಾರ ರಚನೆಗೆ ಹಣ ಖರ್ಚು ಮಾಡಿಲ್ಲ
    – ನಮ್ಮ ರಾಜಕೀಯ ನಾಯಕರು ಬಿಎಸ್‍ವೈ

    ದಾವಣಗೆರೆ: ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ದೆಹಲಿಯಲ್ಲಿ ಅವರ ವಿರುದ್ಧ ದೂರು ನೀಡಿಲ್ಲ, ಅವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಯಡಿಯೂರಪ್ಪನವರ ವಿರುದ್ಧ ನಾನು ದೂರು ನೀಡಿಲ್ಲ. ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ಅವರ ವಿರುದ್ದ ಯಾವತ್ತು ನಾನು ನಡೆದುಕೊಂಡಿಲ್ಲ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ. ಯಡಿಯೂರಪ್ಪ ಯಾವಾಗಲೂ ನಮ್ಮ ರಾಜಕೀಯ ನಾಯಕರು. ಪಕ್ಷದ ಉಸ್ತುವಾರಿಗಳಿಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತಂದಿದ್ದೇನೆ ಹೊರತು ನಾನು ಅವರ ಕುರಿತಾಗಿ ದೂರು ನೀಡಿಲ್ಲ ಎಂದು ತಿಳಿಸಿದರು.

    ಪಕ್ಷದ ಶಿಸ್ತಿನ ಸಿಪಾಯಿ ನಾನು, ನಾನು ಬಂಡಾಯ ಅಲ್ಲ, ಅಸಮಾಧಾನ ಇಲ್ಲ. ಯಡಿಯೂರಪ್ಪ ನನ್ನ ತಂದೆಯ ಸಮಾನ. ದೆಹಲಿ ನಾಳೆ ಹೋಗ್ತಾ ಇದ್ದೇನೆ, ಹೋಗುವ ಮುನ್ನ ಶಾಸಕರ ಸಭೆ ಮಾಡುತ್ತೇನೆ. ಎಲ್ಲಾ ಶಾಸಕರು ನನಗೆ ಕಾಲ್ ಮಾಡ್ತಾ ಇದ್ದಾರೆ. ಎಲ್ಲರೂ ಸೇರಿ ಸಭೆ ನಡೆಸುತ್ತೇವೆ, ಇದು ಸಿಎಂ ವಿರುದ್ದ ಅಲ್ಲ. ಬದಲಾಗಿ ಈಗಾಗಿರುವ ಅವ್ಯವಸ್ಥೆ, ಲೋಪಗಳನ್ನು ಸರಿಪಡಿಸಲು ಸಭೆ ನಡೆಸುತ್ತೇವೆ. ಅಸಮಾಧಾನ ಇರುವ ಶಾಸಕರ ಸಭೆ ಬೆಂಗಳೂರಿನಲ್ಲಿ ನಡಿಯುತ್ತೆದೆ. ಅವ್ಯವಸ್ಥೆ ಸರಿಪಡಿಸಲು ಒತ್ತಾಯ ಮಾಡುತ್ತೇನೆ. ಪ್ರಾದೇಶಿಕವಾಗಿ ಸರಿ ಮಾಡಬೇಕು ಎಂದು ಹೇಳಿದ್ದಾರೆ.

    ರಮೇಶ್ ಜಾರಕಿಹೊಳಿ ಒಬ್ಬರನ್ನು ವೈಭವೀಕರಿಸುತ್ತಿದ್ದಾರೆ. ಸರ್ಕಾರ ಬರಲು ನಯಾಪೈಸೆಯನ್ನು ಖರ್ಚು ಮಾಡಿಲ್ಲ. ಇದೆಲ್ಲ ಶುದ್ದ ಸುಳ್ಳು. ಎಂಟಿಬಿ ನಾಗರಾಜ್ ಯಾವುದೇ ಸಾಲ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಯಾವ ಆಧಾರದಲ್ಲಿ ಯೋಗೇಶ್ವರ್ ಪರವಾಗಿ ಮಾತಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದವರು ಅದನ್ನ ಸಾಬೀತು ಮಾಡಲಿ. ಸಚಿವ ಯೋಗೇಶ್ವರ್ ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜೊತೆ ಒಳ ಒಪ್ಪಂದ ಮಾಡಿಕೊಂಡವರು. ಈಗ ಪಕ್ಷ ನನ್ನಿಂದಲೇ ಬಂತು ಅಂತ ಬೀಗುತ್ತಿದ್ದಾರೆ ಎಂದು ಸಿಪಿ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

  • ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ

    ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ

    – ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ
    – ಹಣದ ಕುರಿತು ತನಿಖೆಗೆ ಮಾಜಿ ಸಿಎಂ ಆಗ್ರಹ

    ಬೆಂಗಳೂರು: ಯಡಿಯೂರಪ್ಪ ಅವರು ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಆಗಿಲ್ಲ. ಆಪೆರೇಷನ್ ಕಮಲ, ಹಣದ ಪ್ರಭಾವದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಆಪರೇಷನ್ ಕಮಲದ ಜನಕರಾಗಿದ್ದಾರೆ. ಬಿಎಸ್‍ವೈ ಸುಳ್ಳು ಹೇಳಿ, ಎಂಎಲ್‍ಎಗಳನ್ನು ಕೊಂಡುಕೊಂಡು, 9 ಕೋಟಿ ಹಣವನ್ನು ಖರ್ಚು ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಸ್ವತಃ ಅವರ ಪಕ್ಷದವರೇ ಹಣ ಖರ್ಚು ಮಾಡಿರುವ ಕುರಿತು ಹೇಳಿದ್ದಾರೆ. ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

    ಬಿಜೆಪಿಯವರು ಸಜ್ಜನರಂತೆ ಹಣ ಖರ್ಚು ಮಾಡಿಲ್ಲ ಅಂತ ಹೇಳಿದ್ದರು. ಆದರೆ ಆಪರೇಷನ್ ಕಮಲಕ್ಕೆ ಯೋಗೇಶ್ವರ್ ಹಣ ಖರ್ಚು ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲ ಮಾಡುವುದು ಎಂದರೆ ದುಡ್ಡುಕೊಟ್ಟು ಎಂಎಲ್‍ಎಗಳನ್ನು ಕೊಂಡುಕೊಳ್ಳುವುದು ಎಂದು ಆಗುತ್ತದೆ. ಇದನ್ನು ಅವರೇ ಈಗ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ ಎಂದು ಈ ಮೂಲಕವಾಗಿ ತಿಳಿಯುತ್ತದೆ. ಆದರೆ ಬಿಜೆಪಿಯವರು ನಾವು ಹಣ ಕೊಟ್ಟಿಲ್ಲ ಯಾರನ್ನೂ ಕೊಂಡುಕೊಂಡಿಲ್ಲ, 17 ಎಂಎಲ್‍ಎಗಳು ಅವರಾಗಿಯೇ ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆದರೆ ಯೋಗೇಶ್ವರ್ 9 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಈ ಕುರಿತಾಗಿ ಸ್ಪಷ್ಟ ಮತ್ತು ನಿಖರವಾದ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ.

    ರಾಜಕೀಯ ಎಂದರೆ ವಿರೋಧ ಪಕ್ಷದವರು ಆರೋಪ ಮಾಡಿದರೆ, ಅವರು ಮಾಡುತ್ತಾರೆ ಎಂದು ಆಗುತ್ತಿತ್ತು. ಆದರೆ ಆರೋಪ ಮಾಡಿರುವವರು ಅವರ ಪಕ್ಷದವರಾಗಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ಬಿಜೆಪಿಯವರು ಏನು ಎಂದು ಗೊತ್ತಾಗಬೇಕು. ಸಿಡಿ ಕುರಿತಾಗಿ ತನಿಖೆ ಆಗಬೇಕು. ಬಿಜೆಪಿ ಒಬ್ಬ ಸೀನಿಯರ್ ಬಿಜೆಪಿ ಲೀಡರ್ ಆಗಿರುವ ಯತ್ನಾಳ್ ಅವರೇ ಬಾಯಿ ಬಿಟ್ಟು ಹೆಳ್ತಾ ಇದ್ದಾರೆ, ಯಡಿಯೂರಪ್ಪ ಅಲ್ಲಿ ಕೊಳಕು ದೃಶ್ಯಗಳಿವೆ ಎಂದು ಹೇಳುತ್ತಾರೆ. ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • ಬಿಎಸ್‍ವೈಯಂತ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಇಲ್ಲ: ಸಿದ್ದರಾಮಯ್ಯ

    ಬಿಎಸ್‍ವೈಯಂತ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಇಲ್ಲ: ಸಿದ್ದರಾಮಯ್ಯ

    – ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ

    ದಾವಣಗೆರೆ: ಬಿಎಸ್‍ವೈ ರೀತಿಯ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತಾ ಬಿಎಸ್‍ವೈ ವಿರುದ್ಧ ಚಾಟಿ ಬಿಸಿದ್ದಾರೆ. ಯಡಿಯೂರಪ್ಪ ನೀನು ಚೆಕ್ ಮುಖಾಂತರ ಭ್ರಷ್ಟಾಚಾರ ಮಾಡಿದರೆ ನಿಮ್ ಮಗ ಆರ್ ಟಿಜಿಎಸ್ ಮೂಲಕ ಮಾಡ್ತಾನಲ್ಲಯ್ಯಾ ನಾಚಿಕೆಯಾಗಲ್ವಾ, ಇದು ಜನ ಪರ ಸರ್ಕಾರವಾಗಿದೆ. ಬಿಎಸ್‍ವೈ ಅವರಂತ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಆರ್ ಟಿಜಿಎಸ್ ಗಿರಾಕಿ ಈ ವಿಜಯೇಂದ್ರ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

    ನಾನು ಬಿಸಿಎಂಎ ಗೆ ಮೀಸಲಾತಿ ತಂದುಕೊಟ್ಟಿದ್ದು. ಮೀಸಲಾತಿ ಇರಲಿಲ್ಲ ಎಂದರೆ ಇಲ್ಲಿ ಇರೋರಲ್ಲಿ ಯಾರೂ ಗೆಲ್ಲುತ್ತಿರಲಿಲ್ಲ. ಅಪರೇಷನ್ ಕಮಲ ಹುಟ್ಟಿದ್ದೇ ಯಡಿಯೂರಪ್ಪನ ಕಾಲದಲ್ಲಿ. ಆಪರೇಷನ್ ಜನಕ ಮಿಸ್ಟರಿ ಯಡಿಯೂರಪ್ಪನವರಾಗಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

    ಬಿಎಸ್ ವೈ ಸರ್ಕಾರ ಪಾಪ ಸರ್ಕಾರ, ನೈತಿಕತೆಯಿಂದ ಬಂದಿಲ್ಲ ಅಕ್ರಮವಾಗಿ ಸರ್ಕಾರ ರಚನೆಯಾಗಿದೆ. ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು ಈಗ ಒಂದೊಂದಾಗಿ ಹೊರ ಬರುತ್ತಿದೆ. ಸಿ.ಡಿ ಬಗ್ಗೆ ತನಿಖೆ ಆಗಬೇಕು. ಸಿ.ಡಿಯಲ್ಲಿ ಏನಿದೆ ಎಂದು ತನಿಖೆಯಿಂದ ಹೊರಬರಲಿ. ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡಿ ಇವರ ಸರ್ಕಾರ ಬಂದಿದೆ ಎಂದರು.

    ಕುರುಬರಿಗೆ ಎಸ್ ಟಿ ಮೀಸಲಾತಿಗಾಗಿ ಕನಕಗುರುಪೀಠದ ಸ್ವಾಮೀಜಿ ಇಂದು ಪಾದಯಾತ್ರೆ ಆರಂಭಿಸಿದ್ದಾರೆ. ಆದರೆ ನಾನು ಎಸ್ ಟಿ ವಿರೋಧಿಯಲ್ಲ. ಎಸ್ ಟಿ ಹೋರಾಟದ ಬಗ್ಗೆ ನನಗೆ ಪಾಠ ಮಾಡಲು ಈಶ್ವರಪ್ಪ ಬರುತ್ತಾರೆ. ಗೊಂಡ, ರಾಜಗೊಂಡ, ಗೊಲ್ಲ ಸಮುದಾಯವನ್ನು ಎಸ್ ಟಿಗೆ ಶಿಫಾರಸ್ಸು ಮಾಡಿದ್ದು ನಾನು ಈಶ್ವರಪ್ಪ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಎಸ್‍ಟಿ ಮೀಸಲಾತಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈಶ್ವರಪ್ಪ ಧಮ್ ಇದ್ದರೆ ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ ನೋಡೋಣ ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಮೀಸಲಾತಿ ಪಡೆಯಬಹುದಲ್ಲ. ದೆಹಲಿಯಲ್ಲಿ ಕೂತು ಎಸ್‍ಟಿ ಮೀಸಲಾತಿ ಮಾಡಿಸೋದು ಬಿಟ್ಟು, ಪಾದಯಾತ್ರೆ ಮಾಡ್ತಾರಂತೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಾಟಕ ಆಡ್ತೀರೇನ್ರೀ.. ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ ಎಂದು ಹೇಳಿದ್ದಾರೆ.