Tag: BSY

  • ಈವರೆಗೆ ಸಿಎಂ ಬದಲಾವಣೆ ಸಂದೇಶ ಬಂದಿಲ್ಲ: ಕಟೀಲ್

    ಈವರೆಗೆ ಸಿಎಂ ಬದಲಾವಣೆ ಸಂದೇಶ ಬಂದಿಲ್ಲ: ಕಟೀಲ್

    ಉಡುಪಿ: ನಾನು ಬಿಜೆಪಿಯ ರಾಜ್ಯಾಧ್ಯಕ್ಷ, ಇವತ್ತಿನವರೆಗೆ ನನಗೆ ಮುಖ್ಯಮಂತ್ರಿ ಬದಲಾವಣೆ ಕುರಿತ ಹೈಕಮಾಂಡ್ ಸಂದೇಶದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಡುಪಿಯಲ್ಲಿ ಹೇಳಿದ್ದಾರೆ.

    ಮಾತನಾಡಿದ ಅವರು, ನಾನು ಕೇವಲ ಮಾಧ್ಯಮಗಳಿಂದ ಈ ವಿಚಾರ ತಿಳಿದುಕೊಂಡಿದ್ದೇನೆ. ಈ ಬಗ್ಗೆ ನನಗೆ ಹೇಳಲು ಏನೂ ಇಲ್ಲ ಎಂದರು. ಕೆಸರುಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ್ದೇನೆ. ರಾಜ್ಯದ ಟ್ರ್ಯಾಕ್ಟರ್ ಈಗ ಯಡಿಯೂರಪ್ಪ ಬಿಡುತ್ತಿದ್ದಾರೆ ಎಂದರು.

    ಸಿದ್ದರಾಮಯ್ಯ ಹಿಂದೆ ಅಹಿಂದ ಹೋರಾಟ ಮಾಡಿದವರು, ಅದರಿಂದಲೇ ಮುಖ್ಯಮಂತ್ರಿಗಳಾದರು. ಮುಖ್ಯಮಂತ್ರಿ ಆದಮೇಲೆ ಅಹಿಂದ ಮರೆತರು. ಈಗ ತಾಕತ್ತಿದ್ದರೆ ದಲಿತ ಸಿಎಂ ಮಾಡಿ ಎನ್ನುವವರು ತಾವು ಸಿಎಂ ಆದಾಗ ಅವರಿಗೆ ಏನು ಮಾಡಿದ್ದಾರೆ ಎಂದು  ಕಟೀಲ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ದೆಹಲಿಗೆ ಹಾರಿದ ಸಚಿವ ನಿರಾಣಿ

    ಸಿದ್ದರಾಮಣ್ಣ ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿಹಾಕಿದರು. ಕಾಂಗ್ರೆಸ್‍ನಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ್ ಮತ್ತು ಖರ್ಗೆಯವರನ್ನು ಸೋಲಿಸಿದ ಇತಿಹಾಸ ಇದೆ. ಈಗ ತಾಕತ್ ಇದ್ದರೆ ದಲಿತ ಸಿಎಂ ಮಾಡಿ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಖಕ್ಕೆ ಟೊಮೆಟೊ ಹಚ್ಚಿ – ಉತ್ತಮ ತ್ವಚೆ ನಿಮ್ಮದಾಗಿಸಿಕೊಳ್ಳಿ

    ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ಅವರು ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಗೋವಿಂದ ಕಾರಜೋಳರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಶೇ. 30ರಷ್ಟು ಎಸ್ಸಿ ಎಸ್ಟಿ ಸಚಿವರಿದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.

    ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್, ಎಲ್ಲಾ ಸಚಿವರು ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಎಲ್ಲರೂ ಆಯಾಯ ಜಿಲ್ಲೆಯಲ್ಲಿದ್ದು, ನೆರೆ ಪರಿಹಾರದ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಂತ್ವನ ಹೇಳುತ್ತಿದ್ದಾರೆ ಎಂದರು.

  • ಸಿಎಂ ಆಗಿ ಎರಡು ವರ್ಷ – ಬಿಎಸ್‍ವೈಗೆ ಸುಧಾಕರ್ ಅಭಿನಂದನೆ

    ಸಿಎಂ ಆಗಿ ಎರಡು ವರ್ಷ – ಬಿಎಸ್‍ವೈಗೆ ಸುಧಾಕರ್ ಅಭಿನಂದನೆ

    – ಅನೇಕ ಅಡೆತಡೆಗಳ ನಡುವೆಯೂ ಉತ್ತಮ ಆಡಳಿತ

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ನಾಳೆಗೆ ಎರಡು ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವ ಕೆ. ಸುಧಾಕರ್ ಅವರು ಬಿಎಸ್‍ವೈಗೆ ಅಭಿನಂದನೆ ಸಲ್ಲಿಸಿದ್ದಾರೆ.

    ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದರಲ್ಲೂ ಮಾನ್ಯ ಮುಖ್ಯಮಂತ್ರಿಗಳಿಗೆ ನಾಳೆಯ ದಿನ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರವನ್ನ ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಎರಡು ವರ್ಷ ಅನೇಕ ಅಡೆತಡೆಗಳ ನಡುವೆಯೂ ಬಿಎಸ್‍ವೈ ಅವರು ಯಶಸ್ವಿ ಉತ್ತಮ ಆಡಳಿತವನ್ನ ಮಾಡಿದ್ದಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಎಲ್ಲ ಹಿರಿಯ ನಾಯಕರ ರಾಜ್ಯದ ಸಚಿವರ, ಶಾಸಕರ ವಿರೋಧ ಪಕ್ಷದವರ ಮತ್ತು ಅಧಿಕಾರಿ ವರ್ಗದವರ ಸಹಕಾರದಿಂದ ಎರಡು ವರ್ಷ ಉತ್ತಮ ಆಡಳಿತವನ್ನ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ನಡ್ಡಾ, ಅಮಿತ್ ಶಾ ಮೇಲೆ ವಿಶ್ವಾಸವಿದೆ: ಬಿಎಸ್‍ವೈ

    ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಮಾತಾನಾಡುವಷ್ಟು ನಾನು ದೊಡ್ಡವನಲ್ಲ. ನಾನು ಇನ್ನೂ ಸಣ್ಣವನು, ಆ ಬಗ್ಗೆ ಹಿರಿಯರು ಮಾತಾನಾಡುತ್ತಾರೆ. ಸಿಎಂ ಸೂಚನೆಯಂತೆ ನಾನು ನನ್ನ ಕೆಲಸ ಮಾಡ್ತಿದ್ದೀನಿ ಅಂತಾ ಹೇಳಿದ ಸಚಿವರು, ಕೋವಿಡ್ ನಿರ್ವಹಣೆಯಾಗಲಿ, ಎರಡು ಬಾರಿ ನೆರೆ ಸಮಯದಲ್ಲಿ ಸಿಎಂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಬಿಎಸ್‍ವೈ ಅವ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಇತ್ತ ಸದ್ಯ ಬೆಳಗಾವಿ ಪ್ರವಾದಲ್ಲಿರುವ ಬಿಎಸ್‍ವೈ ಮಾತನಾಡಿ, ಇಂದು ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯಾವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ. ಇದೇ ವೇಳೆ ಎರಡು ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮಗೆ ತೃಪ್ತಿ ತಂದಿದ್ದರೆ ಸಾಕು ಎಂದು ನಗುತ್ತಾ ಸಿಎಂ ತೆರಳಿದ್ದಾರೆ.

  • ಮೋದಿ, ನಡ್ಡಾ, ಅಮಿತ್ ಶಾ ಮೇಲೆ ವಿಶ್ವಾಸವಿದೆ: ಬಿಎಸ್‍ವೈ

    ಮೋದಿ, ನಡ್ಡಾ, ಅಮಿತ್ ಶಾ ಮೇಲೆ ವಿಶ್ವಾಸವಿದೆ: ಬಿಎಸ್‍ವೈ

    – ಸಂಜೆ ಹೈಕಮಾಂಡ್‍ನಿಂದ ಸಂದೇಶ
    – ನನ್ನ ಕೆಲಸ ನಿಮಗೆ ತೃಪ್ತಿ ತಂದ್ರೆ ಸಾಕು

    ಬೆಳಗಾವಿ: ಹೈಕಮಾಂಡ್‍ನಿಂದ ಸಂಜೆಯ ವೇಳೆಗೆ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಹೆಚ್ಚು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿ, ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ.

    ಎರಡು ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮಗೆ ತೃಪ್ತಿ ತಂದಿದ್ದರೆ ಸಾಕು ಎಂದು ನಗುತ್ತಾ ಸಿಎಂ ಬಿಎಸ್‍ವೈ ತೆರಳಿದ್ದಾರೆ.

    ಶಶಿಕಲಾ ಜೊಲ್ಲೆ ಅವರು ಮೊಟ್ಟೆಟೆಂಡರ್ ವಿಚಾರಕ್ಕೆ ಹಣವನ್ನು ಪಡೆದು ಟೆಂಡರ್ ಕೊಟ್ಟಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಎಸ್‍ವೈ, ನಾನು ಈ ಕುರಿತಾಗಿ ಮಾಧ್ಯಮದಲ್ಲಿ ನೋಡಿದ್ದೇನೆ. ಈ ವಿಚಾರವಾಗಿ ನಾನು ವಾಸ್ತವ ಸ್ಥಿತಿ ಗತಿಗಳನ್ನು ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

    ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗಿದೆ. ಹೀಗಾಗಿ ನದಿಗಳು ತುಂಬಿ ತುಳುಕುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇಂದು ಮಳೆ ಸ್ವಲ್ಪ ಕಡಿಮೆಯಾಗಿದೆ. ಇದೇ ತರಹ ಮಳೆ ಕಡಿಮೆಯಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತೆ ಆಗಲಿ ಎಂದು ನಾನು ದೇವರನ್ನು ಪ್ರಾರ್ಥೀಸುತ್ತೇನೆ ಎಂದು ಹೇಳಿದ್ದಾರೆ.

  • ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

    ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

    – ಬಿಎಸ್‍ವೈ ನಿರ್ಗಮನದ ಬಳಿಕ ಹೊಸ ಮುಖಗಳಿಗೆ ಮಣೆ..!

    ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ತೆರೆಯ ಹಿಂದೆ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸುತ್ತಿದ್ದು, ಬಿಎಸ್‍ವೈ ರಾಜೀನಾಮೆಯ ಬೆನ್ನಲ್ಲೆ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಇದು ಕೆಲವರಿಗೆ ಖುಷಿ, ಹಲವರಿಗೆ ಹೈಕಮಾಂಡ್ ಶಾಕ್ ನೀಡುವ ಸಾಧ್ಯತೆ ಇದೆ.

    ಬಿಎಸ್‍ವೈಗೆ ಮಾತ್ರವಲ್ಲ ಸಚಿವರಿಗೂ ಶಾಕ್ ಕಾದಿದೆ ಎನ್ನಲಾಗಿದೆ. ಹಲವು ಸಚಿವರಿಗೆ ಕಾದಿದೆ ತಲೆತಂಡದ ಭೀತಿ ಎದುರಾಗಿದ್ದು, ‘ಮಿಷನ್ ಕ್ಲೀನ್’ ಲೆಕ್ಕಾಚಾರದಲ್ಲಿ ವರಿಷ್ಠರು ತಯಾರಿ ನಡೆಸಿದ್ದಾರೆ. ಬಿಎಸ್‍ವೈ ಜೊತೆ ಜೊತೆಗೆ ಕೆಲವು ಹಿರಿಯ ನಾಯಕರಿಗೆ ಕೊಕ್ ಸಾಧ್ಯತೆ ಇದ್ದು, ಸರ್ಕಾರದಿಂದ ಸಂಘಟನೆಗೆ ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಸೀಕ್ರೆಟ್ ಟೀಂ ಈಗಾಗಲೇ ಪಟ್ಟಿಯನ್ನೂ ಸಿದ್ಧ ಪಡಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

    ಬಿಜೆಪಿಯಿಂದ ಹೊಸ ಟೀಂ..?
    ವಿಧಾನಸಭೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ‘ಯಂಗ್ ಟೀಂ’ ಕಟ್ಟಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿಕೊಂಡಿದೆ. ಬಿಎಸ್‍ವೈ ನಿರ್ಗಮನದ ಬೆನ್ನಲ್ಲೇ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಹಿರಿಯ ನಾಯಕರಿಗೆ ಸಂಘಟನೆ ಜವಾಬ್ದಾರಿ ನೀಡಿ 2ನೇ ಹಂತದ ನಾಯಕತ್ವಕ್ಕೆ ಸರ್ಕಾರದಲ್ಲಿ ಆದ್ಯತೆ ಸಿಗಲಿದೆ. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?

    ಈಗಾಗಲೇ ಹಲವು ಯುವ ಶಾಸಕರ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಹೈಕಮಾಂಡ್ ತಂಡ ಜಾತಿ ಪ್ರಾದೇಶಿಕತೆವಾರು ಮಾಹಿತಿ ಸಂಗ್ರಹ ಮಾಡಿದೆ. ಯುವ ನಾಯಕರ ರಿಪೋರ್ಟ್ ಕಾರ್ಡ್ ಕುಡ ಈಗಾಗಲೇ ಹೈಕಮಾಂಡ್ ಅಂಗಳ ತಲುಪಿದೆ. ಹೊಸ ಟೀಂನಲ್ಲಿ ಡಜನ್‍ಗೂ ಹೆಚ್ಚು ಯುವ ನಾಯಕರಿಗೆ ಅವಕಾಶ ನೀಡುವ ಮೂಲಕ ಹೊಸ ಟೀಂನೊಂದಿಗೆ ಚುನಾವಣೆ ಎದುರಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

  • ಕೊರೊನಾ ಮೂರನೇ ಅಲೆಯ ಬಗ್ಗೆ ಸಿಎಂ ಆತಂಕ

    ಕೊರೊನಾ ಮೂರನೇ ಅಲೆಯ ಬಗ್ಗೆ ಸಿಎಂ ಆತಂಕ

    ಕಲಬುರಗಿ: ಕೊರೊನಾ ಎರಡನೇ ಅಲೆಗಿಂತ ಮೂರನೇ ಅಲೆ ಕಠಿಣ ಸಂದರ್ಭ ಸೃಷ್ಟಿಮಾಡುವ ಆತಂಕವಿದೆ ಎಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದ ಪಂಡಿತ ರಂಗಮಂದಿರದಲ್ಲಿ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಸದ್ಯ ಕೊರೊನಾ ಎರಡನೇ ಅಲೆಯನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆದರೆ ತಜ್ಞರು ನೀಡಿರುವ ವರದಿ ಪ್ರಕಾರ ಮೂರನೇ ಅಲೆ ಸಹ ಇದೀಗ ಎದುರಾಗುವ ಆತಂಕವಿದೆ. ಈಗಾಗಲೇ ತಜ್ಞರು ಸಹ ಇದರ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ

    ಮೂರನೇ ಅಲೆ ಆತಂಕ ಹಿನ್ನಲೆ ಜನ ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೂ ಕೊರೊನಾ ನಿಯಮಗಳನ್ನು ಮರೆಯಬಾರದು. ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಮಾಸ್ಕ್‌ಗಳನ್ನು ಸಹ ಹಾಕುವುದನ್ನು ಜನ ಮರೆಯಬಾರದು ಅಂತಾ ಸಿಎಂ ಬಿಎಸ್‍ವೈ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಜಮೀನು ವಿವಾದ- ಹಾಡ ಹಗಲೇ ವ್ಯಕ್ತಿಯ ಕೊಲೆ

    ಕೊರೊನಾ ಎರಡನೇ ಅಲೆಯಲ್ಲಿ ಶ್ರಮಿಕ ವರ್ಗದವರಿಗೆ ಪರಿಹಾರದ ಪ್ಯಾಕೇಜ್‍ನ್ನು ನಾವು ಈಗಾಗಲೇ ನೀಡಿದ್ದೆವೆ. ಮೂರನೇ ಅಲೆ ತಡೆಯಲು ಜನರ ಸಹಕಾರ ನಮಗೆ ಮುಖ್ಯವಾಗಿದೆ. ಹೀಗಾಗಿ ಜನ ಸಹ ಎಚ್ಚರಿಕೆಯಿಂದ ಇರಬೇಕು ಅಂತಾ ರಾಜ್ಯದ ಜನರ ಬಳಿ ಸಿಎಂ ಮನವಿ ಮಾಡಿದ್ದಾರೆ.

  • ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

    ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

    ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಆದರೆ ಈ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ವಿಷಯವನ್ನು ತಿಳಿಸಲಿದ್ದಾರೆ.

    ಹೌದು. ಇಂದು ಸಂಜೆ 5 ಗಂಟೆಗೆ ಬಿಎಸ್‍ವೈ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲ ಹುಟ್ಟಿಸಿದೆ. ಯಾಕಂದ್ರೆ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವ ಮೊದಲೇ ಸಿಎಂ ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.

    ಲಾಕ್ ಡೌನ್ ಮುಗಿಯಲು ಇನ್ನೂ 10 ದಿನ ಬಾಕಿ ಇದೆ. ಈ ಮಧ್ಯೆ ಸಚಿವರ ಜೊತೆ ಮೀಟಿಂಗ್ ಕರೆದಿರುವುದು ಕುತೂಹಲ ಹುಟ್ಟಿಸಿದೆ. ಸಭೆಯಲ್ಲಿ ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೆ..?, ಮತ್ತೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ಕೊಡುತ್ತಾರಾ..? ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಆಟೋ ಟ್ಯಾಕ್ಸಿ, ಚಾಲಕರಿಗೆ ವಿಶೇಷ ಪ್ಯಾಕೇಜ್, ಕಟ್ಟಡ ಕಾರ್ಮಿಕರಿಗೆ ನೆರವು ಅಥವಾ ರೈತರಿಗೆ ಹಣಕಾಸು ನೆರವು ಘೋಷಿಸುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ. ಒಟ್ಟಿನಲ್ಲಿ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಸಿಎಂ ಕರೆದಿರುವ ಸುದ್ದಿಗೋಷ್ಠಿ ಕುತೂಹಲ ಹುಟ್ಟಿಸಿದೆ.

  • ಬಿಎಸ್‍ವೈ, ಈಶ್ವರಪ್ಪ ಒಂದೇ: ಕೋಟ ಶ್ರೀನಿವಾಸ ಪೂಜಾರಿ

    ಬಿಎಸ್‍ವೈ, ಈಶ್ವರಪ್ಪ ಒಂದೇ: ಕೋಟ ಶ್ರೀನಿವಾಸ ಪೂಜಾರಿ

    ಮಡಿಕೇರಿ: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರು ಬೇರೆ ಅಂತ ನೀವು ತಿಳಿದುಕೊಂಡಿರಬಹುದು. ಆದರೆ ಅವರಿಬ್ಬರು ಒಂದೇ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಮಡಿಕೇರಿಯ ಬಾಗಮಂಡಲ ಸಮೀಪದ ಕೋರಂಗಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜಿಪಿ ಸರ್ಕಾರದಲ್ಲಿ ಸಾಕಷ್ಟು ಒಳಜಗಳ ಗೊಂದಲಗಳಿದ್ದು, ಅವುಗಳನ್ನು ಪಂಚ ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ಉಸ್ತುವಾರಿ ಸರಿಪಡಿಸಲಿದ್ದಾರೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ ಯಾವುದೇ ಸರ್ಕಾರಗಳಿದ್ದಾಗ ಗೊಂದಲ, ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ ಎಂದಿದ್ದಾರೆ.

    ಆಗಾಗ ಕೆಲವೊಮ್ಮೆ ಗುಡುಗು ಸಿಡಿಲು ಬಂದು ಹೋಗುತ್ತವೆ. ಆದರೆ ಅದೆಲ್ಲವೂ ತಣ್ಣಗಾಗಿ ಸರಿಯಾಗಿ, ಸುಸೂತ್ರವಾಗಿ ನಡೆದುಕೊಂಡು ಹೋಗುತ್ತವೆ. ನಮ್ಮ ಮುಖ್ಯಮಂತ್ರಿಗಳು ಸಮರ್ಥರಿದ್ದು ಉತ್ತಮ ಮತ್ತು ಬಡವರ ಪರವಾದ ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

  • ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಅವರೆಲ್ಲರೂ ನಾಯಕರೇ: ನಿರಾಣಿ

    –  ಹೆಲಿಕಾಪ್ಟರ್‌ನಲ್ಲಿ ಓಡಾಡುವ ಎಸ್‍ಸಿ, ಎಸ್‍ಟಿಗಳು ಇದ್ದಾರೆ

    ಧಾರವಾಡ: ಪಂಚಮಸಾಲಿ ಸಮಾಜದಲ್ಲಿ 80 ಲಕ್ಷ ಜನರಿದ್ದಾರೆ, ಆ ಜನರೆಲ್ಲರೂ ಪಂಚಮಸಾಲಿಯ ನಾಯಕರೇ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕೂಡಲ ಸಂಗಮ ಮತ್ತು ಹರಿಹರ ಪೀಠ ಸ್ವಾಮೀಜಿ 2ಎ ಗಾಗಿ ಅವರದ್ದೇ ಲೆವಲ್‍ನಲ್ಲಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವು ಸಹ ವಿಧಾನಸಭೆ ಒಳಗೆ ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದೆವೆ. ಮೀಸಲಾತಿ ಕೊಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮೀಸಲಾತಿ ಬಂದ ಬಳಿಕ ಕೋರ್ಟ್‍ಗೆ ಹೋದರೆ ಅದು ಹಾಗೆಯೇ ಉಳಿಯುತ್ತದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿಗಳ ತ್ರಿ ಸದಸ್ಯ ಪೀಠದಿಂದ ಈ ಕೆಲಸ ನಡೆದಿದೆ. ಇಷ್ಟೇ ದಿನದಲ್ಲಿ ಮೀಸಲಾತಿ ಆಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಎಲ್ಲ ಸಮಾಜದಲ್ಲಿ ಬಡವರು ಶ್ರೀಮಂತರು ಇದ್ದಾರೆ. ಎಸ್‍ಸಿ ಸಮಾಜದಲ್ಲಿಯೂ ಶ್ರೀಮಂತರಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯಂಥವರು ಹೆಲಿಕಾಪ್ಟರ್‍ನಲ್ಲಿ ಓಡಾಡುವವರು ಎಸ್‍ಸಿ, ಎಸ್‍ಟಿಯಲ್ಲಿ ಇದ್ದಾರೆ. ಬ್ರಾಹ್ಮಣ ಮೇಲ್ವರ್ಗದ ಸಮಾಜದಲ್ಲೂ ಬಡವರಿದ್ದಾರೆ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಇದು ನಕಲಿ ಸಿಡಿ ಎಂದು ಜಾರಕಿಹೊಳಿಯವರೇ ಹೇಳಿದ್ದಾರೆ. ಆದರೂ ಸಹ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಮಾಡುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ನಿರಪರಾಧಿಯಾಗಿ ಹೊರ ಬರುತ್ತಾರೆ. ವರದಿ ಬಂದ ಬಳಿಕ ಅಪಾದನೆಯಿಂದ ಹೊರಗೆ ಬರುತ್ತಾರೆ. ಗೃಹ ಇಲಾಖೆಗೆ ತನ್ನದೆಯಾದ ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆ ಅಡಿಯಲ್ಲಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

  • ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಇಂದು ಬಜೆಟ್ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಿಡಿ ವಿಚಾರವನ್ನಿ ಸಿಎಂ ಪ್ರಸ್ತಾಪ ಮಾಡಿದರು. ವಿಪಕ್ಷದವರು ಯಾವ ತನಿಖೆಗೆ ಹೇಳಿದರೂ ತನಿಖೆ ಮಾಡಿಸಲು ಸಿದ್ಧ ಎಂದು ತಿಳಿಸಿದರು.

    ಸಿಡಿ ಬಗ್ಗೆ ತನಿಖೆ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಆಗ ಅವರು ಏನು ಸಲಹೆ ಕೊಡ್ತಾರೆ ಅದರ ಆಧಾರದ ಮೇಲೆ ತನಿಖೆ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.

    ಮಾಜಿ ಸಚಿವ ರಾಸಲೀಲೆ ಸಿಡಿ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆದರೆ ಈ ಮಧ್ಯೆ ಸಂತ್ರಸ್ತ ಯುವತಿ ಪೊಲೀಸರ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ಪ್ರಕರಣ ಸಂಬಂಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದರು.

    ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ದಿನೇಶ್ ಆರೋಪಿಸಿದ್ದರು. ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ಬರೆದ ಪತ್ರ ಸಹ ಪಬ್ಲಿಕ್ ಟಿವಿಗೆ ಕೂಡ ಲಭ್ಯವಾಗಿತ್ತು. ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರಹಾಕಿದ್ದರು.

  • ಸಿದ್ದರಾಮಯ್ಯ ಸುಳ್ಳಿನ ಕಂತೆ, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ: ಬಿಎಸ್‍ವೈ

    ಸಿದ್ದರಾಮಯ್ಯ ಸುಳ್ಳಿನ ಕಂತೆ, ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ: ಬಿಎಸ್‍ವೈ

    – ಸವಾಲುಗಳನ್ನು ಎದುರಿಸೋಕೆ ನನಗೆ ಎಲ್ಲಿಲ್ಲದ ಉತ್ಸಾಹ

    ಬೆಂಗಳೂರು: ಸಿದ್ದರಾಮಯ್ಯ ಸುಳ್ಳಿನ ಕಂತೆ, ಚುನಾಯಿತ ಸರ್ಕಾರ ಅಂತೆಲ್ಲಾ ಎಂದು ಟೀಕೆ ಮಾಡಿದ್ದಾರೆ. ಅವರಿಂದ ಅಭಿವೃದ್ಧಿ ಕುರಿತಾಗಿ ಮಾತ್ರ ಟೀಕೆ ಬಗ್ಗೆ ನಿರೀಕ್ಷೆ ಮಾಡಿದ್ದೆ. ಆದರೆ ಅವರು ಸರ್ಕಾರದ ಬಗ್ಗೆ ಮಾತಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಕಿಡಿಕಾರಿದ್ದಾರೆ.

    ವಿಧಾನಸಭಾ ಕಲಾಪದ ವೇಳೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ನಡೆಯಿತು ಎಂದು ನಾನು ಹೇಳಬೇಕಿಲ್ಲ. ಆದರೆ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಇದ್ದರೂ ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ಮಾಡಿದ್ರು. ಸಿದ್ದರಾಮಯು ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ನಾನು ಅನಿವಾರ್ಯ ಈ ಬಗ್ಗೆ ಮಾತಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಅನೇಕ ಕಿರುಕುಳದಿಂದ ನಾನು ತೊಂದರೆ ಅನುಭವಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಇದ್ದರು ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ಮಾಡಿದ್ದರು. ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಾಡಿದ್ರು. ಆದರೆ ಕೊನೆಗೆ ಕುಮಾರಸ್ವಾಮಿಯವರಿಗೆ ಅಧಿಕಾರ ಮಾಡಲು ಬಿಡದೆ ಎಷ್ಟು ತೊಂದರೆ ಕೊಟ್ರು ಎಂಬುದನ್ನು ನಾವು ನೋಡಿದ್ದೇವೆ ಎಂದು ಕಿಡಿಕಾರಿದ್ದಾರೆ.

    ರೈತ ಮತ್ತೆ ನೇಕಾರ ನಮ್ಮ ಎರಡು ಕಣ್ಣುಗಳು ಇದ್ದಂತೆ. ನೇಕಾರರ ಸಾಲ ಮನ್ನಾ ಮಾಡಿದ್ದೇವೆ. ನೇಕಾರ್ ಸಮ್ಮಾನ್ ಯೋಜನೆ ಗೆ ಚಾಲನೆಗೆ ಸವಾಲುಗಳನ್ನು ಎದುರಿಸೋಕೆ ನನಗೆ ಎಲ್ಲಿಲ್ಲದ ಉತ್ಸಾಹ ಸವಾಲುಗಳೇ ನನ್ನನ್ನು ಗಟ್ಟಿಗೊಳಿಸ್ತಿದೆ. ಹಲವು ವರ್ಷಗಳಿಂದ ಹಲವು ಸವಾಲು ಎದುರಿಸಿದ್ದೇನೆ. ಪ್ರತಿಯೊಂದು ಸವಾಲು ಸ್ವಯಂ ಶಕ್ತಿಯಿಂದ ಎದುರಿಸಿಕೊಂಡು ಬಂದಿದ್ದೇನೆ. ಅಧಿಕಾರ ಸಿಕ್ಕಾಗ, ಹಳೆಯದ್ದನ್ನೆಲ್ಲಾ ಮರೆತು ದ್ವೇಷದ ರಾಜಕಾರಣ ಮರೆತು, ಒಳ್ಳೆಯದನ್ನು ಮಾಡಬೇಕು ಎಂಬುದು ರಾಜಧರ್ಮ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.

    ಸರ್ಕಾರ ರಚನೆ ವೇಳೆ ನಾನು ಮಂತ್ರಿ ಮಂಡಲ ಮಾಡೋಕೆ ಆಗಿರಲಿಲ್ಲ. ಅವಾಗ ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಉಂಟಾಗಿತ್ತು. ಆದರೂ ನಾನೊಬ್ಬನೇ ಓಡಾಡಿ ಪ್ರವಾಹ ಪರಿಹಾರ ಕಾರ್ಯಗಳನ್ನು ದೇವರು ಮೆಚ್ಚುವ ರೀತಿ ಕೆಲಸ ಮಾಡಿದ್ದೇನೆ. ನಾನು ಧೃತಿಗೆಡಲಿಲ್ಲ, ನೆರೆ ಸಂತ್ರಸ್ತರ ನೆರವಿಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. 1.33 ಲಕ್ಷ ಮನೆಗಳು ಕುಸಿದು ಹೋದವು, ಜನರಿಗೆ ಎಲ್ಲಾ ರೀತಿಯ ರಕ್ಷಣೆ ಕೊಡಲಾಗಿದೆ ಎಂದು ಹೇಳಿದ್ದಾರೆ.