Tag: BSY

  • ಅತೃಪ್ತರ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪ- ಬಿಜೆಪಿ ಕೇಂದ್ರ ಕಚೇರಿಯ ಸಿಬ್ಬಂದಿ ವಜಾ

    ಅತೃಪ್ತರ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪ- ಬಿಜೆಪಿ ಕೇಂದ್ರ ಕಚೇರಿಯ ಸಿಬ್ಬಂದಿ ವಜಾ

    ಬೆಂಗಳೂರು: ನಗರದಲ್ಲಿ ಗರುವಾರದಂದು ನಡೆದ ಅತೃಪ್ತರ ಸಮಾವೇಶದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಿಜೆಪಿ ಕೇಂದ್ರ ಕಚೇರಿಯಲ್ಲಿದ್ದ ಸಿಬ್ಬಂದಿ ವಜಾಕ್ಕೆ ಬಿಎಸ್‍ವೈ ಸೂಚನೆ ನೀಡಿದ್ದಾರೆ.

    ಸಮಾವೇಶದ ಕರಪತ್ರ ಡ್ರಾಫ್ಟ್ ಸಿದ್ದಪಡಿಸಿದ್ದು, ಕೆಲ ನಾಯಕರಿಗೆ ಮೇಲ್ ಹಾಕಿದ ಆರೋಪದ ಮೇಲೆ ಕಂಪ್ಯೂಟರ್ ಅಪರೇಟರ್ ಮಲ್ಲಿಕಾರ್ಜುನ್ ವಜಾಕ್ಕೆ ಬಿಎಸ್‍ವೈ ಗರುವಾರ ಸಂಜೆಯೇ ಸೂಚನೆ ನೀಡಿದ್ದಾರೆ. ಮಲ್ಲಿಕಾರ್ಜುನ, ಬಿಎಲ್ ಸಂತೋಷ್ ಅವರ ಬೆಂಬಲಿಗರಾಇದ್ದು, 10 ವರ್ಷಗಳಿಂದ ಕೆಲಸ ಮಾಡ್ತಿದ್ದರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಎಸ್‍ವೈ, ಬಿಜೆಪಿ ಕಚೇರಿ ಉದ್ಯೋಗಿ ಮಲ್ಲಿಕಾರ್ಜುನ್ ಸಿಐಡಿಯಂತೆ ಕೆಲಸ ಮಾಡ್ತಿದ್ದ. ಅದಕ್ಕೆ ವಜಾ ಮಾಡಿದ್ದೀನಿ. ಈಶ್ವರಪ್ಪ ನಡವಳಿಕೆ ತಿದ್ದುಕೊಳ್ಳಬೇಕು. ಸಂತೋಷ್ ಅವರು ರಾಷ್ಟ್ರೀಯ ಜವಾಬ್ದಾರಿ ನೋಡಿಕೊಳ್ಳಲಿ, ರಾಜ್ಯದ ಬಗ್ಗೆ ಬೇಡ. ಸಂತೋಷ್ ಜೊತೆ ಈಶ್ವರಪ್ಪ ಗಂಟೆಗಟ್ಟಲೆ ಮಾತನಾಡ್ತಿದ್ರೆ ಏನ್ ಅನಿಸುತ್ತೆ ಎಂದು ಪರೋಕ್ಷವಾಗಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಬಿಎಸ್‍ವೈ ಅಸಮಾಧಾನ ವ್ಯಕ್ತಪಡಿಸಿದ್ರು.

    ವಿಪಕ್ಷ ನಾಯಕ ಸ್ಥಾನದಿಂದ ಈಶ್ವರಪ್ಪರನ್ನ ಕೆಳಗಿಳಿಸೋ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಎಂಎಲ್‍ಸಿಗಳ ಬೇಡಿಕೆಯನ್ನ ಗಮನಿಸಿ ನಿರ್ಧಾರ ಪ್ರಕಟಿಸುತ್ತೇವೆ. ನಾನು ಬದಲಾಗಿಲ್ಲ, ಮಾತು ಬದಲಾಗಿಲ್ಲ. ಈಶ್ವರಪ್ಪ ಬಹಿರಂಗ ಸಭೆ ನಡೆಸಿ ಪಕ್ಷ ವಿರೋಧಿ ಧೋರಣೆ ತಾಳಿದ್ದಾರೆ. ದೆಹಲಿಗೆ ಹೋಗ್ತಿದ್ದೀನಿ ರಾಮಲಾಲ್, ಅಮಿತ್ ಷಾ ಅವರನ್ನ ಭೇಟಿ ಮಾಡ್ತೀನಿ ಅಂದ್ರು.

  • ಬೇರೆ ಪಕ್ಷಗಳ ತಂತ್ರಗಾರಿಕೆಗೆ ತಲೆಕೆಡಿಸಿಕೊಳ್ಳಲ್ಲ: ಬಿಎಸ್‍ವೈ

    ಬೇರೆ ಪಕ್ಷಗಳ ತಂತ್ರಗಾರಿಕೆಗೆ ತಲೆಕೆಡಿಸಿಕೊಳ್ಳಲ್ಲ: ಬಿಎಸ್‍ವೈ

    ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿಷನ್ 150 ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ. ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬೇರೆ ಪಕ್ಷಗಳ ತಂತ್ರಗಾರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಇಂದು ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಿಎಸ್‍ವೈ, ಮುಂಬರುವ ದಿನಗಳಲ್ಲಿ ಅನ್ಯ ಪಕ್ಷಗಳ ಮತ್ತಷ್ಟು ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ನಂಬಿ ಬರುವವರಿಗೆ ಸ್ವಾಗತವಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಜೊತೆ ಚರ್ಚಿಸಿದ ಬಳಿಕವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗುವುದು ಅಂತಾ ಸ್ಪಷ್ಟಪಡಿಸಿದ್ರು.

    ಇದೇ ವೇಳೆ ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಸರ್ಕಾರಿ ಅಧಿಕಾರಿಗಳೇ ಹಣ ಹಂಚಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆಗೆ ಆಗ್ರಹಿಸಲಾಗುವುದು. ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳೇ ಮತದಾರರಿಗೆ ಹಣ ಹಂಚಿರುವ ಬಗ್ಗೆ ಕೆಲ ದಾಖಲೆಗಳು ಲಭ್ಯವಾಗಿವೆ. ಮತ್ತಷ್ಟು ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ ಅಂದ್ರು.

  • ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ: ಬಿಎಸ್‍ವೈ

    ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ: ಬಿಎಸ್‍ವೈ

    ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ನಾವು ಎಂದೂ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿ ನಾವು ಇದನ್ನ ಸವಾಲಾಗಿ ಸ್ವೀಕಾರ ಮಾಡಿದ್ವಿ. ಆದರೆ ಯಾವುದೇ ಕಾರಣಕ್ಕೂ ಸೋಲಿನ ಬಗ್ಗೆ ಬೇಸರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಫಲಿತಾಂಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸೋಲಿನ ಬಗ್ಗೆ ನಮಗೆ ಬೇಸರ ಇಲ್ಲ. ನಮ್ಮ 150 ಸ್ಥಾನವನ್ನು ಗೆಲ್ಲುವ ಗುರಿಯನ್ನು ನಿಶ್ಚಿತವಾಗಿ ಮಾಡೇ ಮಾಡ್ತೀವಿ. ಇನ್ನು ಮುಂದೆ ಯಾವುದೇ ಹಿನ್ನಡೆಯಾಗುವುದಿಲ್ಲ. ಉಪ ಚುನಾವಣೆಯಲ್ಲಿ ಗೆದ್ದ ತಕ್ಷಣ ರಾಜ್ಯದ ಜನ ಕಾಂಗ್ರೆಸ್ ಪರ ಇದ್ದಾರೆ ಅಂತೇನಲ್ಲ. ಈ ಚುನಾವಣೆ 2018ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ ಎಂದು ತಿಳಿಸಿದರು.

    ಉಪಚುನಾವಣೆ ಗೆಲುವಿನ ಕಾರಣಕ್ಕಾಗಿ ಹಗುರ ಮಾತುಗಳಿಂದ ಕಾಂಗ್ರೆಸ್ಸಿನವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ರೀತಿ ಮಾಡುವುದರಿಂದ ಅವರ ಮೇಲಿದ್ದ ಗೌರವ ಇನ್ನು ಕಡಿಮೆಯಾಗುತ್ತಾ ಹೋಗುತ್ತದೆ ಎಂದರು.

    ಈ ಎರಡೂ ಕ್ಷೇತ್ರಗಳಲ್ಲಿ ನಾವು ಎಂದೂ ಗೆಲುವು ಸಾಧಿಸಿಲ್ಲ. 22, 24 ದಿನ ಅಲ್ಲಿ ಪ್ರಚಾರ ಮಾಡಿದ್ವಿ. ಅಂತೆಯೇ ನಮಗೆ ಅಲ್ಲಿ ಜನಬೆಂಬಲವೂ ದೊರೆತಿತ್ತು. ಆದ್ರೆ ಸಚಿವರೆಲ್ಲರು ಅಲ್ಲಿಗೆ ಬಂದು ಕೊನೆಯ ಹಂತದಲ್ಲಿ ನಡೆಸಿದ ಕಾರ್ಯಚರಣೆ ಏನು ಅನ್ನೋದು ಜನರಿಗೆ ಗೊತ್ತಿದೆ ಎಂದು ಹೇಳಿದರು.

    ಜನಪರ ತೀರ್ಪಿಗೆ ತಲೆಬಾಗುತ್ತೇನೆ. ಮತದಾರರ ತೀರ್ಪನ್ನ ಸ್ವಾಗತಿಸುತ್ತೇನೆ. ಮತದಾರರ ಭಾವನೆಗಳನ್ನ ಗೌರವಿಸಬೇಕು. ಇದು ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯಲ್ಲ. ನಮ್ಮ 150 ಗುರಿಗೆ ಈ ಫಲಿತಾಂಶದಿಂದ ಹಿನ್ನೆಡೆಯಾಗಿಲ್ಲ ಎಂದು ಬಿಎಸ್‍ವೈ ಹೇಳಿದರು.

    ಬಿಎಸ್‍ವೈ ನಿವಾಸಕ್ಕೆ ನಾಯಕರ ದೌಡು: ಎರಡೂ ಕ್ಷೇತ್ರಗಳಲ್ಲಿ ಬಜೆಪಿಗೆ ಹಿನ್ನಡೆಯಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಶಾಸಕರಾದ ಆರ್.ಅಶೋಕ್, ಬಿವೈ ರಾಘವೇಂದ್ರ, ಸುರೇಶ್ ಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವರ ಆಗಮಿಸಿ ಮಾತುಕತೆ ನಡೆಸಿದ್ದಾರೆ.

  • ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ನಗದು ಹಣ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಗುಂಡ್ಲುಪೇಟೆಯ ಅಣ್ಣೂರು ಕೇರಿ ಬಳಿಯ ವಡ್ಡರ ಹೊಸಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಿರ್ದೇಶನದಂತೆ ಗ್ರಾಮಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಎಲ್ಲರೆದುರೇ ಎರಡು ಸಾವಿರ ರೂ. ಮುಖಬೆಲೆಯ 50 ನೋಟುಗಳನ್ನು ಮೃತ ರೈತನ ಕುಟುಂಬದವರಿಗೆ ನೀಡಿದ್ರು. ಆದ್ರೆ ಹಣ ನೀಡುವಾಗ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ರು ಎನ್ನಲಾಗಿದೆ.

    ಇದೀಗ ಬಿಎಸ್ ಯಡಿಯೂರಪ್ಪ ಹಣ ನೀಡುತ್ತಿರುವ ವಿಡಿಯೋ ತುಣುಕು ವಾಟ್ಸಪ್ ನಲ್ಲಿ ಹರದಾಡಿ ವೈರಲ್ ಆಗಿದೆ. ಒಂದು ಲಕ್ಷ ರೂಪಾಯಿ ಪಕ್ಷದಿಂದ ನೆರವು ನೀಡಿದ್ದೇವೆ ಎಂದು ಸ್ವತಃ ಯಡಿಯೂರಪ್ಪನವರೇ ಮಾಧ್ಯಮದವರಿಗೆ ಹೇಳಿದ್ದಾರೆ. ಇದು ಒಂದು ಸಮುದಾಯದವನ್ನು ಓಲೈಕೆ ಮಾಡುವ ತಂತ್ರ ಎನ್ನಲಾಗ್ತಿದೆ.

    https://www.youtube.com/watch?v=3eATukzwo_g

  • ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    – ದೇಶದ ಉದ್ದಗಲಕ್ಕೂ ಬಿಜೆಪಿ ಗಾಳಿ ಬೀಸುತ್ತಿದೆ

    ಬೆಂಗಳೂರು: ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಜನ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗೆಲುವು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯೋ ಉಪಚುನಾವಣೆಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಂತಾಗಿದೆ. ಮುಂದೆ ಬಿಜೆಪಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ನಡೆಸೋದಕ್ಕೆ ಇದು ನಾಂದಿಯಾಗಿದೆ ಅಂತಾ ಹೇಳಿದ್ರು.

    ಇಡೀ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅದೇ ಉತ್ಸಾಹ ಇರುವಂತಹ ಈ ಸಂದರ್ಭದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು. ಡೈರಿ ಹಗರಣವನ್ನು ಸಿಬಿಐಗೆ ವಹಿಸಿದ್ರೆ ಎಲ್ಲರ ಬಣ್ಣ ಬಯಲಾಗಲಿದೆ. ಗೋಮಾಳಗಳ ಜಮೀನನ್ನು ಕಬಳಿಸಿರುವ ಬಗ್ಗೆ ಅನೇಕ ದಾಖಲೆಗಳು ನಮ್ಮಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲಿ ನಡೆದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ. ಒಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿಗೂ ಹೆಚ್ಚು ಹಣ ಸಾಲ ಮಾಡಿರುವುದೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ. ಇವೆಲ್ಲವನ್ನೂ ಕೂಡ ಬಯಲು ಮಾಡ್ತೇವೆ. ನಾಳೆ ಈ ಎರಡೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ನಮ್ಮ ಹೋರಾಟವಿರುತ್ತದೆ ಅಂತಾ ಅಂದ್ರು.

    ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಎರಡೂ ರಾಜ್ಯಗಳಲ್ಲಿ ಹಗರಣಗಳನ್ನು ಬಟ್ಟ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಯಶಸ್ಸು ಕಂಡಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಗರಣಗಳ ಸುರಿಮಾಲೆಯೆ ಸುತ್ತಿಕೊಂಡಿರುವುದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಹೀಗಾಗಿ ಹೈಕಮಾಂಡ್ ಇವರೆಲ್ಲರನ್ನ ತುರ್ತಾಗೆ ದೆಹಲಿಗೆ ಬರಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ ಎಂಬುವುದು ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿದೆ. ಬಹುಶಃ ಉತ್ತರಪ್ರದೇಶದಲ್ಲಿ ಯಾವ ರೀತಿ ಫಲಿತಾಂಶ ಬಂತೋ, ಅದೇ ರೀತಿ ಕರ್ನಾಟಕದಲ್ಲೂ ಗೆಲುವು ಸಾಧಿಸಲಿದ್ದೇವೆ. ಇದಕ್ಕೆ ಜನರ ಆಶೀರ್ವಾದ, ದೈವ ಬಲ, ಜನಬಲವಿದೆ. ಹಾಗೆಯೇ ನಾವು ಮಾಡಿರುವ ಸಾಧನೆಯಿದೆ ಅಂತಾ ಹೇಳಿದ್ದಾರೆ.

    ಸಿಎಂ ವಿರುದ್ಧ ಚಾಟಿ: ಎಲ್ಲ ವರ್ಗದ ಜನರ ಬೆಂಬಲದೊಂದಿಗೆ ನಾವು ಇಂದು ಚುನಾವಣೆಯಲ್ಲಿ ಗೆದಿದ್ದೇವೆ. ಹಾಗಾದ್ರೆ ಅಲ್ಪ ಸಂಖ್ಯಾತ ಮುಸ್ಲಿಂ ಮಂದಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕೊಟ್ಟಿದ್ದೀರಲ್ವಾ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಜಾತಿ ಎಂಬ ವಿಷ ಬೀಜ ಬಿತ್ತು ರಾಜಕಾರಣ ಮಾಡಿರೋದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಅಂತಾ ಸಿಎಂ ವಿರುದ್ಧ ಬಿಎಸ್‍ವೈ ಚಾಟಿ ಬೀಸಿದ್ರು.

    ಉತ್ತರಪ್ರದೇಶದಲ್ಲಿ ಜನರ ಭಾವನೆಯ ಜೊತೆ ಬಿಜೆಪಿ ಆಟ ಆಡಿದೆ. ಹಿಂದೂಗಳ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಗಳಿಸಿದೆ. ಕರ್ನಾಟಕದಲ್ಲಿ ಇದೇ ರೀತಿ ಆಗಲು ಸಾಧ್ಯವೇ ಇಲ್ಲ. ಅವರು ಗೆದ್ದೇ ಗೆಲ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

    ಇದನ್ನೂ ಓದಿ: ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

  • ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    – ಕುಮಾರ್ ಬಂಗಾರಪ್ಪ ಬಿಜೆಪಿ ಸೇರೋದು ಕನ್ಫರ್ಮ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಬೆಳಗ್ಗೆಯಿಂದಲೇ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ.

    ಸಚಿವರಾದ ಸುರೇಶ್ ಕುಮಾರ್, ವಿ.ಸೋಮಣ್ಣ, ಸಂಸದ ಭಗವಂತ ಖೂಬಾ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಶುಭಕೋರಿದ್ರು. ಇದೇ ವೇಳೆ ಬಿಎಸ್‍ವೈ ನಿವಾಸದ ಎದುರು ನೂಕುನುಗ್ಗಲು ಉಂಟಾಗಿದ್ದು, ನಿವಾಸದ ಹಾಲ್‍ನ ಗಾಜು ಪುಡಿ ಪುಡಿಯಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು. ಅದಕ್ಕಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋ ಸಂಕಲ್ಪ ಮಾಡಿದ್ದೇನೆ. ಬರಗಾಲ ಹಿನ್ನೆಲೆಯಲ್ಲಿ ಅದ್ಧೂರಿ ಬರ್ತ್‍ಡೇ ಆಚರಣೆ ಬೇಡ ಎಂದಿದ್ದೇನೆ. ಜೊತೆಗೆ ಇಂದು ತುಮಕೂರಿನ ಬೆಳ್ಳಾವಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಡ್ತೀನಿ ಅಂತಾ ಹೇಳಿದ್ರು. ಬಳಿಕ ಯಡಿಯೂರಪ್ಪ ಶ್ರೀಗಳ ಆಶೀರ್ವಾದ ಪಡೆಯಲು ಸಿದ್ದಗಂಗಾ ಮಠಕ್ಕೆ ತೆರಳಿದ್ರು.

     

    ಕುಮಾರ್ ಬಂಗಾರಪ್ಪ ಬಿಜೆಪಿಗೆ: ಬರ್ತ್‍ಡೇ ದಿನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈಗೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ಬಿಎಸ್‍ವೈ ಭೇಟಿಯಾಗಿ ಹುಟ್ಟುಹಬ್ಬದ ಶುಭಕೋರಿದ ಕುಮಾರ್ ಬಂಗಾರಪ್ಪ, ನಾವು ಬಿಎಸ್‍ವೈ ಜೊತೆಗಿದ್ದು ಶೀಘ್ರವೇ ಸುದ್ದಿಗೋಷ್ಠಿ ಕರೆದು ಅಧಿಕೃತವಾಗಿ ಪ್ರಕಟಿಸುತ್ತೇವೆ ಅಂತ ಹೇಳಿದ್ರು.

     

  • ಉಕ್ಕಿನ ಸೇತುವೆಗಾಗಿ 65 ಕೋಟಿ ರೂ. ಕಪ್ಪ – ಸಿಎಂ ವಿರುದ್ಧ ಬಿಎಸ್‍ವೈ ಹೊಸ ಬಾಂಬ್

    – ಬಿಜೆಪಿಯವ್ರೂ ಕೊಟ್ಟಿದ್ರು ಎಂದ ಹೆಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೈಕಮಾಂಡ್‍ಗೆ 1 ಸಾವಿರ ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ವಿವಾದಿತ ಉಕ್ಕಿನ ಸೇತುವೆಗಾಗಿ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಉಕ್ಕಿನ ಸೇತುವೆ ಕಾಮಗಾರಿಯ ಆರಂಭಿಕ ಲೆಕ್ಕಾಚಾರ 1,350 ಕೋಟಿ ರೂಪಾಯಿ. ಆದ್ರೆ ನಂತರ 2,400 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಇದಕ್ಕಾಗಿ ಸಿಎಂ ಮತ್ತವರ ಶಿಷ್ಯರಿಗೆ 150 ಕೋಟಿ ರೂಪಾಯಿ ಕಮಿಷನ್ ಕೊಡುವುದಾಗಿ ಮಧ್ಯವರ್ತಿಗಳು ಮಾತುಕೊಟ್ಟಿದ್ದರು. ಅದರಲ್ಲಿ ಸಿಎಂಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬೆಂಗಳೂರಲ್ಲಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಎಸ್‍ವೈ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಕೋರ್ಟ್‍ನಲ್ಲಿ ದಾಖಲೆ ಕೇಳ್ತಾರೆಯೇ ಹೊರತು ಆಣೆ-ಪ್ರಮಾಣವನಲ್ಲ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಿಕ್ಕಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಬರೆದಿರುವ ಪತ್ರಕ್ಕೆ ತನಿಖೆ ಇನ್ನೂ ನಡೆಯುತ್ತಿದೆ ಅನ್ನೋ ಉತ್ತರವಷ್ಟೇ ಸಿಕ್ಕಿದೆ ಅಂತಾ ಸಿದ್ದರಾಮಯ್ಯ ಮೈಸೂರಲ್ಲಿ ತಿರುಗೇಟು ನೀಡಿದ್ದಾರೆ.

    ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಿಎಂ ಹೆಚ್‍ಡಿಕೆ ಬಿಜೆಪಿ ವಿರುದ್ಧವೇ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪ ಮಾಡಿದ್ದಾರೆ. ಹೈಕಮಾಂಡಿಗೆ ಕಪ್ಪ ಕೊಡುವುದು ಬಿಜೆಪಿ ಸರಕಾರ ಇದ್ದಾಗಲೂ ನಡೆಯುತ್ತಿತ್ತು. ಯಾವುದೋ ಯೋಜನೆ ಹೆಸರಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಚೆಕ್ ಮೂಲಕ ದೆಹಲಿಯಲ್ಲಿರುವ ನಾಯಕರಿಗೆ ಹಣ ಪಾವತಿಯಾಗ್ತಿತ್ತು ಅಂತಾ ಮಂಗಳೂರಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.