Tag: BSY

  • ಕೆಲ ದಿನ ಮಾತ್ರ ಬಿಜೆಪಿಯವರಿಗೆ ಸಂತೋಷ: ಎಚ್‍ಡಿಕೆ

    ಕೆಲ ದಿನ ಮಾತ್ರ ಬಿಜೆಪಿಯವರಿಗೆ ಸಂತೋಷ: ಎಚ್‍ಡಿಕೆ

    ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದ್ದರೆ, ಬಿಜೆಪಿ ನಾಯಕರು ಕೆಲ ದಿನ ಸಂತೋಷದಿಂದ ಇರಲು ಸಾಧ್ಯ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಕುರಿತು ಯಾವುದೇ ಪ್ರತಿಭಟನೆ ಮಾಡಲು ನಾವು ಸಿದ್ಧವಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ. ಬಿಜೆಪಿಗೆ ನೀಡಿರುವ ಅವಕಾಶವನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಲು ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

    ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಯಾವುದೇ ಕುದುರೆ ವ್ಯಾಪಾರಕ್ಕೆ ಮುಂದಾಗದೇ ಮೌಲ್ಯಯುತ ಹಾದಿಯಲ್ಲಿ ಅಧಿಕಾರ ಪಡೆಯಲಿ. ನಮ್ಮ ಮುಂದಿನ ನಿರ್ಧಾರವನ್ನು ಶಾಸಕರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ. ಆದರೆ ರಾಜ್ಯ ಜನತೆ ನಾಳೆ ಯಾವುದೇ ಪ್ರತಿಭಟನೆ ನಡೆಸಲು ಮುಂದಾಗಬಾರದು. ಶಾಂತಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

    ನಾವು ರಾಜ್ಯಪಾಲರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಆದರೆ ರಾಜ್ಯಪಾಲರು ಬಿಎಸ್‍ವೈ ಅವರಿಗೆ ಅಹ್ವಾನ ನೀಡಿದ್ದರೆ ಅದು ಬಿಜೆಪಿ ಅವರ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತದೆ. ಮೋದಿ ಅವರ ಸ್ವಚ್ಛ ರಾಜಕಾರಣ ನಡೆಸಲು ಮುಂದಾಗಿದ್ದರಾ ಎಂದು ಪ್ರಶ್ನಿಸಿದರು.

  • ಕಾಂಗ್ರೆಸ್ ಹೀನಾಯ ಸೋಲು ಕಂಡ್ರೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಯತ್ನ- ಬಿಎಸ್‍ವೈ

    ಕಾಂಗ್ರೆಸ್ ಹೀನಾಯ ಸೋಲು ಕಂಡ್ರೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಯತ್ನ- ಬಿಎಸ್‍ವೈ

    ಬೆಂಗಳೂರು: ತಮ್ಮ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ದಯನೀಯ ಸೋಲನ್ನು ಅನುಭವಿಸಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಕಡೆಗೆ ಜನ ಓಗೊಟ್ಟಿದ್ದಾರೆ. ರಾಜ್ಯದ ಮತದಾರ ಬದಲಾವಣೆಗೆ ತನ್ನ ಜನಾದೇಶವನ್ನು ನೀಡಿದ್ದಾರೆ ಅಂತ ಹೇಳಿದ್ರು.

    ಕಾಂಗ್ರೆಸ್ ಕುತಂತ್ರಗಳನ್ನು ಮಾಡುತ್ತಿದೆ. ಇವುಗಳನ್ನು ತೀವ್ರವಾಗಿ ನಾವು ಖಂಡಿಸುತ್ತೇವೆ. ರಾಷ್ಟ್ರೀಯ ನಾಯಕರುಗಳ ಜೊತೆ ಸಮಾಲೋಚನೆಯನ್ನು ಮಾಡಿ ನಮ್ಮ ಮುಂದಿನ ನಿಲುವು ಏನಿರಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ. ಹಗಲು-ರಾತ್ರಿ ಎನ್ನದೇ ದುಡಿದ ಲಕ್ಷಾಂತರ ಜನ ನಮ್ಮ ಕಾರ್ಯಕರ್ತ ಹಾಗೂ ರಾಜ್ಯದ ಮತದಾರರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ರು.

    ಕಾಂಗ್ರೆಸ್ ವಿರೋಧ ಅಲೆಯಿಂದಾಗಿ ಜೆಡಿಎಸ್ ಗಣನೀಯ ಪ್ರಮಾಣದಲ್ಲಿ ತನ್ನ ಸ್ಥಾನಗಳನ್ನು ಗಳಿಸಿದೆ. ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ರಾಜ್ಯದ ಆರೂವರೆ ಕೋಟಿ ಜನ ಬಿಜೆಪಿಗೆ ಕೊಟ್ಟಿರುವಂತಹ ಬೆಂಬಲಕ್ಕಾಗಿ ತಲೆಬಾಗಿ ವಂದಿಸುತ್ತೇನೆ ಅಂದ್ರು.

    ಕಾಂಗ್ರೆಸ್ ದಯನೀಯ ಸೋಲನ್ನುಭವಿಸದ ಮೇಲೆಯೂ, ತಿಸ್ಕಾರಗೊಂಡ ಬಳಿಕವೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯೋದನ್ನು ಪ್ರಯತ್ನ ಮಾಡಿರುವುದನ್ನು ಬಿಎಸ್‍ವೈ ಮತ್ತೊಮ್ಮೆ ಖಂಡಿಸಿದ್ರು.

  • ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿದ್ರು ಸಿಎಂ- ಬಿಎಸ್‍ವೈ ರೋಡ್, ದೇವೇಗೌಡ ಸರ್ಕಲ್ ಅಂತ ಲೇವಡಿ

    ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿದ್ರು ಸಿಎಂ- ಬಿಎಸ್‍ವೈ ರೋಡ್, ದೇವೇಗೌಡ ಸರ್ಕಲ್ ಅಂತ ಲೇವಡಿ

    ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಏಟು-ತಿರುಗೇಟು ತೀವ್ರಗೊಂಡಿದ್ದು, ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿ ಸಿಎಂ ಲೇವಡಿ ಮಾಡಿದ್ದಾರೆ.

    ಕರ್ನಾಟಕ ಅಸೆಂಬ್ಲಿಗೆ ಮಾರ್ಗ ಯಾವುದು ಅಂತ ಮೋದಿ ಕೇಳ್ತಾರೆ. ನೇರವಾಗಿ ಬಿಎಸ್‍ವೈ ರೋಡ್‍ನಲ್ಲಿ ಹೋಗಿ. ವರುಣಾದಲ್ಲಿ ಯಡಿಯೂರಪ್ಪರನ್ನು ಮಾರ್ಗ ಮಧ್ಯೆ ಇಳಿಸಿ. ದೇವೇಗೌಡ ಸರ್ಕಲ್‍ನಲ್ಲಿ ಬಲಕ್ಕೆ ತಿರುಗಿ. ಮತ್ತೆ ಯೂ ಟರ್ನ್ ಮಾಡಿ ದೇವೇಗೌಡರನ್ನು ಅಲ್ಲೇ ಇಳಿಸಿ. ಕಾರ್ಯಪ್ಪ ಸರ್ಕಲ್‍ನಲ್ಲಿ ರೆಸ್ಟ್ ತಗೊಳ್ಳಿ, ಅಲ್ಲಲ್ಲ ತಿಮ್ಮಯ್ಯ ಸರ್ಕಲ್‍ನಲ್ಲಿ. ಅಲ್ಲಿ ಮತ್ತೆ ಯೂ ಟರ್ನ್ ಮಾಡಿ ಅಂತ ಚಾಣಾಕ್ಯ ಅಮಿತ್ ಶಾ ಮೋದಿಗೆ ಹೇಳ್ತಾರೆ. ಇದನ್ನೂ ಓದಿ: ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಅದಕ್ಕೆ ಮೋದಿ ಕರ್ನಾಟಕದಲ್ಲಿ ಇಷ್ಟೊಂದು ಗೊಂದಲನಾ ಅಂತ ಚಾಣಾಕ್ಯಗೆ ಮರುಪ್ರಶ್ನೆ ಹಾಕ್ತಾರೆ. ಮೋದಿ-ಶಾ ನಡುವಿನ ಸಂವಾದ ಅನ್ನೋ ರೀತಿಯಲ್ಲಿ ಮೋದಿ ಭಾಷಣಕ್ಕೆ ತಿರುಗೇಟು ನೀಡಿದ್ದಾರೆ. ಇತ್ತ ದೇವೇಗೌಡರು ಒಳ್ಳೆಯ ನಾಯಕ ಅಂತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೊಗಳಿದ್ದಾರೆ. ಇದನ್ನೂ ಓದಿ: ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್

  • ಜೈಲಿಗೆ ಕಳಿಸೋಕೆ ಬಿಎಸ್‍ವೈ ಏನು ಜಡ್ಜ್, ಇನ್ಸ್ ಪೆಕ್ಟರ್ ಹಾ : ಡಿಕೆಶಿ ಕಿಡಿ

    ಜೈಲಿಗೆ ಕಳಿಸೋಕೆ ಬಿಎಸ್‍ವೈ ಏನು ಜಡ್ಜ್, ಇನ್ಸ್ ಪೆಕ್ಟರ್ ಹಾ : ಡಿಕೆಶಿ ಕಿಡಿ

    ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲು ಯಡಿಯೂರಪ್ಪ ಅವರು ಜಡ್ಜ್ ಅಥವಾ ಪೊಲೀಸ್ ಇನ್ಸ್ ಪೆಕ್ಟರ್ ಹಾ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

    ಇಂದು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾಮಹದೇವಪ್ರಸಾದ್ ಅವರ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು, ಬಿಎಸ್‍ವೈ ಸಿಎಂ ಆದರೆ 24 ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

    ಸಿದ್ದರಾಮಯ್ಯ ಅವರನ್ನು 24 ಗಂಟೆಗೆ ಜೈಲಿಗೆ ಕಳುಹಿಸಲು ಸಿದ್ದರಾಮಯ್ಯ ಅವರ ಕೆಳಗೆ ಹಾಕಿದ ತಕ್ಷಣ ಒಡೆಯಲು ಮಡಿಕೆ ನಾ? ಯಡಿಯೂರಪ್ಪ ಅವರು ತಮ್ಮ ಆಡಳಿತ ಅವಧಿಯನ್ನು ಒಮ್ಮೆ ನೋಡಿಕೊಳ್ಳಬೇಕು ಎಂದು ಕಿಡಿಕಾರಿದರು.

    ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸಮೀಕ್ಷೆ ಪ್ರಕಾರ 132 ಸೀಟ್ ಗೆಲ್ಲುತ್ತೆವೆ. ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಸರ್ಕಾರ ಹಾಗೂ ಪಕ್ಷ ಇಲ್ಲಿಗೆ ಬಂದಿತ್ತು. ಆಗ ಉತ್ತಮ ಪ್ರತಿಕ್ರಿಯೆ ಇತ್ತು, ಈಗ ಅದಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ಇದೆ. ಈ ಬಾರಿಯೂ ಇಲ್ಲಿ ಗೀತಾಮಹದೇವಪ್ರಸಾದ್ ಅವರು ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಮೈಸೂರು: ವರುಣಾ ಕ್ಷೇತ್ರದ ಟಿಕೆಟ್ ಮಿಸ್ ಹಿನ್ನೆಲೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ.

    ಮಂಗಳವಾರ ರಾತ್ರಿಯೇ ಮೈಸೂರಿನಿಂದ ಹೊರಟಿದ್ದು, ವಾಪಸ್ ಬರುವುದಾಗಿ ಹೇಳಿ ವಿಜಯೇಂದ್ರ ಬೆಂಗಳೂರಿನತ್ತ ಪ್ರವಾಸ ಕೈಗೊಂಡಿದ್ದಾರೆ. ಮೈಸೂರಿನಲ್ಲಿದ್ದರೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಿನ್ನೆ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ ಅವರು, ನಾನು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಏ.22 ರಂದು ಕಡೆ ದಿನ ಪ್ರಚಾರ ಮಾಡಿದ್ದರು. ಏ.22ರ ಪ್ರಚಾರದಲ್ಲಿ ತೋಟದ ಬಸವರಾಜು ಅವರು ವಿಜಯೇಂದ್ರ ಜೊತೆಯಲ್ಲೆ ಇದ್ದರು. ಇದನ್ನೂ ಓದಿ: ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    ತೋಟದ ಬಸವರಾಜು ಅವರು ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿ.ಫಾರಂ ಸಲ್ಲಿಸದೆ ಕೇವಲ ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಏ.22 ರಂದು ವಿಜಯೇಂದ್ರ ಪರವಾಗಿಯೇ ಮತಯಾಚನೆ ಮಾಡಿದ್ದರು. ಆದ್ರೆ ಏ.23ರಂದು ವಿಜಯೇಂದ್ರಗೆ ಟಿಕೆಟ್ ಮಿಸ್ ಆಯಿತು. ಏ.24ರಂದು ತೋಟದ ಬಸವರಾಜರೇ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿ ಬಿ.ಫಾರಂ ಸಲ್ಲಿಕೆ ಮಾಡಲಾಯಿತು. ಹೀಗಾಗಿ ಕಡೆ ದಿನವೂ ಬಸವರಾಜು ವಿಜಯೇಂದ್ರ ಜೊತೆಯಲ್ಲೆ ಇದ್ದರು. ಇದನ್ನೂ ಓದಿ: ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಒಟ್ಟಿನಲ್ಲಿ ಇದೀಗ ಜೊತೆಯಲ್ಲಿದ್ದುಕೊಂಡೇ ತೋಟದ ಬಸವರಾಜು ಅವರು ವಿಜಯೇಂದ್ರ ವಿರುದ್ಧ ಕತ್ತಿ ಮಸೆದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೇ ವಿಜಯೇಂದ್ರ ಟಿಕೆಟ್ ಮಿಸ್ ವಿಚಾರ ಕೂಡ ತೀವ್ರ ಕುತೂಹಲ ಮೂಡಿಸಿದ್ದು, ವಿಜಯೇಂದ್ರ ಮತ್ತೆ ವಾಪಸ್ ಮೈಸೂರಿಗೆ ಆಗಮಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

  • ಅಧಿಕಾರ ಇಲ್ಲದಾಗ ಅಲ್ಲೋಗಿ ಹರಿತೀನಿ ಅಂತಿದ್ದಾರೆ- ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

    ಅಧಿಕಾರ ಇಲ್ಲದಾಗ ಅಲ್ಲೋಗಿ ಹರಿತೀನಿ ಅಂತಿದ್ದಾರೆ- ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

    ಚಿತ್ರದುರ್ಗ: ಅಧಿಕಾರ ಇದ್ದಾಗ ಬಿಜೆಪಿಯವರು ಸಾಧನೆ ಮಾಡಲಿಲ್ಲ. ಅಧಿಕಾರ ಇದ್ದಾಗ ಶ್ರೀರಾಮುಲು ಏನು ಮಾಡಲಿಲ್ಲ, ಶಾಸಕ ಎನ್.ವೈ.ಗೋಪಾಲಕೃಷ್ಣ ಏನು ಮಾಡಲಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯೊಗೀಶ್ ಬಾಬು ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ಡಿಕೆಶಿ ಗುಡುಗಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಶ್ರೀರಾಮುಲು ಅವರಿಗೆ ಏನು ಮಾಡಲು ಆಗಲಿಲ್ಲ ಎಂದು ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಶಾಸಕ ಎನ್.ವೈ.ಗೋಪಾಲಕೃಷ್ಣ ಕೂಡ ಅಧಿಕಾರ ಸಿಕ್ಕಾಗ ಏನು ಮಾಡಲಿಲ್ಲ. ಇನ್ನು ಅಧಿಕಾರ ಇಲ್ಲದ ವೇಳೆ ಅಲ್ಲೋಗಿ ಹರಿತೀನಿ, ಹರಿತೀನಿ ಅಂತಿದ್ದಾರೆ. `ಕೊಟ್ಟ ಕುದುರೆಯನೇರಲು ಅರಿಯದವರು ಮತ್ತೊಂದು ಕುದುರೆಯನ್ನೇರಲು ಬಯಸುವವನು ವೀರನೂ ಅಲ್ಲ, ಶೂರನು ಅಲ್ಲ’ ಎನ್ನುವ ವಚನವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಂತೆ ಬಿಎಸ್‍ವೈ ಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ ಅಂತ ವ್ಯಂಗ್ಯವಾಡಿದ್ರು.

  • ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ಮೈಸೂರು: ರಾಘವೇಂದ್ರ ಯಾರ ಮಗ? ಒಂದು ಬಾರಿ ಸಂಸದ ಆಗಿಲ್ವಾ. ಆತ ಯಡಿಯೂರಪ್ಪನ ಮಗನಾ ಅಥವಾ ಅವರ ಅಮ್ಮನ ಮಗನಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವಂಶ ಪಾರಂಪರ್ಯ ರಾಜಕೀಯ ಮಾಡಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗೆ ಟಾಂಗ್ ನೀಡಿದ್ರು. ವರುಣಾದ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತಾಡೋಕೆ ನಾನು ಬಿಜೆಪಿ ವಕ್ತಾರ ಅಲ್ಲ. ವರುಣಾದಲ್ಲಿ ಯಾವ ಬಿಜೆಪಿ ಅಭ್ಯರ್ಥಿಯನ್ನೂ ನಿಲ್ಲಿಸಿದ್ರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಡಿಯೂರಪ್ಪ ವೀಕ್ ಆಗಿಲ್ಲ. ಯಡಿಯೂರಪ್ಪ ಯಾವಾಗಲೂ ವೀಕ್. ಕಳಂಕಿತ ವ್ಯಕ್ತಿಯಾಗಿರೋ ಅವರಿಗೆ ಸಾರ್ವಜನಿಕ ಮೌಲ್ಯಗಳಿಲ್ಲ. ಹೀಗಾಗಿ ಯಾವಾಗಲೂ ವೀಕ್ ಆಗಿಯೇ ಇದ್ದಾರೆ ಅಂತ ಅವರು ಲೇವಡಿ ಮಾಡಿದ್ರು. ಇದನ್ನೂ ಓದಿ: ಯಡಿಯೂರಪ್ಪನವರೇ ದಯವಿಟ್ಟು ನನಗೆ ಮೋಸ ಮಾಡ್ಬೇಡಿ, ನಿಮ್ಮ ಕಾಲಿಗೆ ಬೇಕಾದರೂ ಬೀಳ್ತೇನೆ- ಬಿಜೆಪಿ ಅಭ್ಯರ್ಥಿ ಮನವಿ

    ಚಾಮುಂಡೇಶ್ವರಿ ತಿರಸ್ಕರಿಸಿದ್ದಾಳೆ, ಬನಶಂಕರಿಯೂ ತಿರಸ್ಕರಿಸುತ್ತಾಳೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಶ್ರೀರಾಮುಲು ಯಾರ್ ರೀ? ಅವರಿಗೆ ನನ್ನ ರಾಜಕೀಯ ಇತಿಹಾಸ ಗೊತ್ತಿಲ್ಲ. ಶ್ರೀರಾಮುಲು ಶಾಸಕನಾಗಿದ್ದೇ 2004ರಲ್ಲಿ. ನಾನು 1983ರಲ್ಲೇ ಚಾಮುಂಡೇಶ್ವರಿಯಲ್ಲಿ ಶಾಸಕನಾಗಿದ್ದೆ. ನನ್ನ ಬಗ್ಗೆ ಅವರೇನು ಮಾತನಾಡುತ್ತಾರೆ. ನಾನು ಸಮೀಕ್ಷೆಗಳನ್ನು ನಂಬಲ್ಲ. ಆದ್ರೆ ಜನ ಸಮೀಕ್ಷೆಯಲ್ಲಿ ನಾನು ಮುಖ್ಯಮಂತ್ರಿಯಾಗಲಿ ಅನ್ನೋದೇ ಜಾಸ್ತಿ ಅಂದ್ರು. ಇದನ್ನೂ ಓದಿ: ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ನಾನು ಇಂದು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ ನಾಮಪತ್ರ ಸಲ್ಲಿಸುತ್ತೇನೆ. ಅಂಬರೀಶ್ ನಾಮಪತ್ರ ಸಲ್ಲಿಸೋದು ಹೈಕಮಾಂಡ್ ಗೆ ಬಿಟ್ಟಿದ್ದು. ಅದು ನಂಗೆ ಗೊತ್ತಿಲ್ಲ ಅಂತ ಅವರು ಹೇಳಿದ್ರು.

  • ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ಮೈಸೂರು: ವರುಣಾ ಕ್ಷೇತ್ರ ಟಿಕೆಟ್ ಹಂಚಿಕೆ ಬಿಜೆಪಿ ನಾಯಕರಲ್ಲಿ ಗೊಂದಲವನ್ನು ಉಂಟು ಮಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದ್ದಾರೆ.

    ನಗರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಅನಿವಾರ್ಯ ಸುದ್ದಿಗೋಷ್ಠಿಯಾಗಿದ್ದು ಮೈಸೂರು ಹಾಗೂ ಚಾಮರಾಜನಗರದ 15 ಮಂದಿ ಬಿಜೆಪಿ ಮುಖಂಡರ ಭವಿಷ್ಯಕ್ಕೆ ಕುತ್ತು ಬಂದಿದೆ. ನಾನು ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

    ನಾವು ಈಗಾಗಲೇ ಜಾವಡೇಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ. ರಾಜ್ಯಾಧ್ಯಕ್ಷ ಬಿಎಸ್‍ವೈ ಅವರನ್ನು ಒತ್ತಾಯಿಸಿದ್ದೇವೆ. ಅವರು ಕಾರ್ಯಕರ್ತರ ಮನವಿಗೆ ಮಣಿಯಲೇ ಬೇಕು. ವಿಜಯೇಂದ್ರ ತಂದೆಯಾಗಿ ಟಿಕೆಟ್ ನೀಡದೇ ಇದ್ದರೂ ಕ್ಷೇತ್ರದ ಕಾರ್ಯಕರ್ತರ ಒತ್ತಾಯಕ್ಕೆ ನೀಡಬೇಕು. ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ರಾಮ್ ದಾಸ್ ಅವರ ಬಳಿಯೂ ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮಾಡಿರುವ ಪ್ರಭಾವದಿಂದ ಸಿದ್ದರಾಮಯ್ಯ ಅವರ ಮಗ ಸೋಲುವುದು ನಿಶ್ಚಿತ. ಸಿಎಂ ಅವರು ಸಹ ಸೋಲುವುದು ಖಚಿತ. ಕ್ಷೇತ್ರದಲ್ಲಿನ ಎಲ್ಲಾ ನಾಯಕರು, ಟಿಕೆಟ್ ಆಕಾಂಕ್ಷಿಗಳು ಸಹ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ನಾಳೆ ಬೆಳಗ್ಗೆಯವರೆಗೂ ಸಮಯವಿದೆ ಎಲ್ಲವೂ ಸೂಕ್ತವಾಗಿ ನಡೆಯಲಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

     

     

  • ಮುಂದುವರಿದ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಮೈಸೂರಲ್ಲಿ ಮತ್ತೊಮ್ಮೆ ಲಾಠಿ ಚಾರ್ಜ್

    ಮುಂದುವರಿದ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಮೈಸೂರಲ್ಲಿ ಮತ್ತೊಮ್ಮೆ ಲಾಠಿ ಚಾರ್ಜ್

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡಿದ್ದ ಬಿಜೆಪಿ ನಾಯಕರಿಗೆ ವರುಣಾ ಕ್ಷೇತ್ರದ ಮಾತ್ರ ತಲೆನೋವಾಗಿ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

    ವರಣಾ ಕ್ಷೇತ್ರದ ಹಲವು ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ನಗರದ ಪ್ರೆಸಿಡೆಂಟ್ ಹೋಟೆಲ್ ಮುಂದೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಎಸ್ ಯಡಿಯೂರಪ್ಪ ಅವರು ಸದ್ಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಕಾರಣ ಪ್ರತಿಭಟನೆ ಬಿಸಿ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ನಡುವೆ ಬಿಎಸ್‍ವೈ ರನ್ನು ಭೇಟಿ ಮಾಡಲು ಬಂದ ಮಾಜಿ ಸಚಿವ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಮ್ ದಾಸ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಹೋಟೆಲ್ ಪ್ರವೇಶ ಮಾಡದಂತೆ ತಡೆದ ಘಟನೆಯೂ ನಡೆಯಿತು. ಇದನ್ನೂ ಓದಿ: ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ಹೋಟೆಲ್ ನಲ್ಲಿ ಮಾಜಿ ಡಿಸಿಎಂ ಆರ್ ಆಶೋಕ್, ಸಂಸದ ಪ್ರತಾಪ್ ಸಿಂಹ, ರೇವಣಾ ಸಿದ್ದಯ್ಯ ಸೇರಿದಂತೆ ಹಲವು ನಾಯಕರು ಬಿಎಸ್‍ವೈ ಅವರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

  • ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

    ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

    ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಬಿಎಸ್‍ವೈ ಹೇಳಿಕೆಯನ್ನು ಬಳಸಿ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಸಿಎಂ ಸಿದ್ದರಾಮಯ್ಯನವರನ್ನು ಕಾಲೆಳೆದಿದ್ದಾರೆ.

    ಒಬ್ಬ ನಾಯಕ ತಮ್ಮ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಬ್ಬರು ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಅದರಲ್ಲಿ ಒಂದು ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನ ನಡೆಸಿದ್ದಾರೆ. ಬಿಎಸ್‍ವೈ ಬಿಜೆಪಿ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ನಡುವೆ ಇರೋ ವ್ಯತ್ಯಾಸ ಇದೇ ಎಂದು ಮುರಳೀಧರ್ ರಾವ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

    ಕರ್ನಾಟಕ ಕಾಂಗ್ರೆಸ್ ನಲ್ಲಿ ತಂದೆಗೆ ಎರಡು ಕ್ಷೇತ್ರದ ಟಿಕೆಟ್, ಮಗನಿಗೆ ಒಂದು ಟಿಕೆಟ್ ಪಡೆದ ಇತಿಹಾಸವಿಲ್ಲ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿ ಟಿಕೆಟ್ ಪಡೆಯುವಲ್ಲಿ ಮತ್ತು ಮಗ ಯತೀಂದ್ರ ಅವರಿಗೆ ವರುಣಾದ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.